ಎಡಿಟೋರಿಯಲ್

ವನ್ಯಜೀವಿ ಸಂಘರ್ಷ ತಪ್ಪಿಸಲು ಏನು ಮಾಡಬೇಕು ?

ನಮ್ಮ ರಾಜ್ಯದ ಬಹುತೇಕ ಕಡೆಗಳಲ್ಲಿ ನಿತ್ಯವೂ ಕಾಡಾನೆ ಹಾವಳಿ , ಚಿರತೆ ಕಾಟ ಇತ್ಯಾದಿ ಸುದ್ದಿಗಳನ್ನು ನಾವು ನೋಡುತ್ತಲೇ ಇದ್ದೇವೆ. ತಿ.ನರಸೀಪುರ ತಾಲ್ಲೂಕಿನಲ್ಲಿ ತಿಂಗಳ ಅಂತರದಲ್ಲಿ ಇಬ್ಬರು ವಿದ್ಯಾರ್ಥಿಗಳು ಚಿರತೆ ದಾಳಿಯಿಂದ ಸಾವನ್ನಪ್ಪಿರುವುದು ಗಂಭೀರತೆಯನ್ನು ಹೆಚ್ಚಿಸಿದೆ. ಈ ಸಂಘರ್ಷ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಲು ಮುಖ್ಯ ಕಾರಣ ಕಾಡಿನ ನಾಶ ದಿಂದ ಉಂಟಾಗಿರುವ ಮೇಲಿನ ಕೊರತೆ ಜತೆಗೇ ಕಾಡು ಪ್ರಾಣಿಗಳ ಸಂಖ್ಯೆಯಲ್ಲಿನ ಹೆಚ್ಚಳ.
ಆದರೆ ಎಷ್ಟು ಕಾಡುಗಳು ಒತ್ತುವರಿಯಾಗಿವೆ? ಎಷ್ಟು ಕಾಡುಗಳಲ್ಲಿ ಪ್ರಾಣಿಗಳಿಗೆ ಕುಡಿಯಲು ನೀರು, ಮೇಯಲು ಹುಲ್ಲುಗಾವಲು, ತಿನ್ನಲು ಗೆಡ್ಡೆ ಗೆಣಸು, ಬೇಟೆ ಪ್ರಾಣಿಗಳಿಗೆ ತಿನ್ನಲು ಸಾಕಷ್ಟು ಜಿಂಕೆ, ಕಡವೆ ಇತ್ಯಾದಿ ಪ್ರಾಣ ಗಳಿವೆ?ಈ ಬಗ್ಗೆ ಸಮರ್ಪಕ ಸಮೀಕ್ಷೆಯಾಗುವ ಅಗತ್ಯವಿದೆ. ಇಲ್ಲದೇ ಹೋದರೆ ಮುಂದಿನ ದಿನಗಳಲ್ಲಿ ನಗರ ಪ್ರದೇಶಗಳಲ್ಲಿ ನಿರಂತರ ಕಾಡುಪ್ರಾಣಿಗಳ ಮುಖಾಮುಖಿ ಗಂಭೀರತೆಯನ್ನು ಎದುರಿಸಬೇಕಾಗುತ್ತದೆ. ನಾಗರಹೊಳೆ, ಬಂಡಿಪುರ ಅರಣ್ಯದಲ್ಲಿ ಪ್ರಮುಖವಾಗಿ ಹುಲಿ,ಚಿರತೆ, ಆನೆಯ ಸಂಖ್ಯೆಗಳು ಅಂದಾಜು ಎಷ್ಟಿವೆ? ವಾರ್ಷಿಕವಾಗಿ ಸರಾಸರಿ ಇವುಗಳ ಸಂತತಿ ಎಷ್ಟು ಹೆಚ್ಚಾಗುತ್ತಿವೆ? ಕಾಡಿನಲ್ಲಿ ಇವುಗಳಿಗೆ ನಿಜಕ್ಕೂ ಆಹಾರ ಲಭ್ಯತೆ ಇವೆಯೇ? ಅರಣ್ಯದಂಚಿನ ಗ್ರಾಮಗಳಿಗೆ ಆನೆ,ಹುಲಿ,ಚಿರತೆ, ಕಾಟಿ,ಜಿಂಕೆ,ಕಡವೆ,ಕರಡಿ,ಕಾಡುಹಂದಿ, ಮೃಗಗಳು ಇತ್ಯಾದಿ ವನ್ಯಮ್ರಗಗಳು ನಿರಂತರ ವಲಸೆ ಬರಲು ಕಾರಣವೇನು? ಇವುಗಳ ಸಮರ್ಪಕ ಅಧ್ಯಯನ, ಸಂಪೂರ್ಣ ನಿಯಂತ್ರಣ ಇತ್ಯಾದಿ ಸಿದ್ಧತೆಗಳಿಗೆ ಅರಣ್ಯ ಇಲಾಖೆಗೆ ಸಾವಿರಾರು ಕೋಟಿ ರೂಪಾಯಿ ಅನುದಾನದ ಅಗತ್ಯವಿದೆ ಎಂದು ಹೇಳಲಾಗುತ್ತಿದೆಯಾದರೂ ಸರ್ಕಾರ ಇದೀಗ ಕಣ್ಣೊರೆಸುವ ತಂತ್ರವಾಗಿ ಬಿಡುಗಡೆ ಮಾಡುತ್ತಿರುವ ರೂ.೫ ಕೋಟಿ, ರೂ.೧೦ ಕೋಟಿ ಅನುದಾನ ಏನೇನೂ ಸಾಲದು.

ಕಾವೇರಿ ಜಲಾನಯನ ಪ್ರದೇಶ ಸಂಪದ್ಭರಿತವಾಗಿರಲು ಕಾಡು ಹಾಗೂ ವನ್ಯಜೀವಿಗಳು, ನೀಲಗಿರಿ ಜೀವ ವೈವಿಧ್ಯ ತಾಣಗಳ ಸಂರಕ್ಷಣೆ ಎಲ್ಲರ ಹೊಣೆಯಾಗಿದೆ. ಅಂದಾಜಿನ ಪ್ರಕಾರ ಕರ್ನಾಟಕದಲ್ಲಿ ರಾಷ್ಟ್ರೀಯ ಉದ್ಯಾನ ಮತ್ತು ವನ್ಯಜೀವಿ ತಾಣಗಳು ಸುಮಾರು ೬೨೦೦ ಚ.ಕಿ.ಮೀ.ಅರಣ್ಯ ಪ್ರದೇಶವನ್ನು ಹೊಂದಿದೆ.ಕೇರಳ ಸುಮಾರು ೨,೫೦೦ ಚ.ಕೀ.ಮಿ. ಹಾಗೂ ತಮಿಳುನಾಡು ಸುಮಾರು ೪೦೦೦ ಚ.ಕಿ.ಮೀ. ಅರಣ್ಯ ಪ್ರದೇಶಗಳನ್ನು ಹೊಂದಿದ್ದು ಆನೆ ಕಾರಿಡಾರ್ ಎಂದು ಗುರುತಿಸಲ್ಪಟ್ಟ ಈ ಭಾಗ ಅಂದಾಜು ೧೨೭೦೦ ಚ.ಕಿ.ಮೀ.ಹೊಂದಿದೆ. ಹೆಚ್ಚಾಗಿ ಕಾಡಾನೆಗಳು, ಇತ್ಯಾದಿ ವನ್ಯ ಪ್ರಾಣಿಗಳು ಈ ಮೂರು ರಾಜ್ಯದ ಅರಣ್ಯದ ನಡುವೆ ಅಧಿಕವಾಗಿ ಆಹಾರವನ್ನು ಅರಸಿ ಓಡಾಟ ನಡೆಸುತ್ತಿದ್ದವು. ಇದೀಗ ಅಂತಹ ಅರಣ್ಯ ಪ್ರದೇಶದಲ್ಲಿ ಆನೆ ಕಾರಿಡಾರ್ ಮಾನವನ ಹಸ್ತಕ್ಷೇಪದಿಂದಾಗಿ, ಕೃಷಿ ಕ್ಷೇತ್ರ ವಿಸ್ತರಣೆಯಿಂದಾಗಿ ಸಂಕೀರ್ಣವಾಗುತ್ತಿದೆ. ಕಾಡುಪ್ರಾಣಿ ಗಳ ಆಹಾರ ಸಂರಕ್ಷಿಸಿಸುವ ನಿಟ್ಟಿನಲ್ಲಿ ಹಾಗೂ ಕಾಡಿನ ಬೆಂಕಿಯಾಗದಂತೆ ನೋಡಿಕೊಳ್ಳುವದು ಇತ್ಯಾದಿ ಉಪಕ್ರಮಗಳ ಬಗ್ಗೆ ಸರ್ಕಾರ ಚಿಂತಿಸುವುದು ಕಂಡು ಬರುತ್ತಿಲ್ಲ.

ನಾಗರಹೊಳೆ, ಬಂಡಿಪುರ ಇತರೆ, ಕೇರಳ, ತಮಿಳುನಾಡು ಆನೆ ಕಾರಿಡಾರ್‌ಗಳು ಮುಕ್ತವಾಗಿದ್ದಾಗ ಈಗಿನಷ್ಟು ಕಾಡಾನೆ ಉಪಟಳ ಕೊಡಗಿನಲ್ಲಿ ಇರಲಿಲ್ಲ. ಇಲ್ಲಿನ ಆನೆಗಳು ಬೆಂಗಳೂರಿನ ಬನ್ನೇರುಘಟ್ಟ ದವರೆಗೂ ಸಂಚರಿಸುತ್ತಿದ್ದವು. ಮಂಡ್ಯ ಜಿಲ್ಲೆಯಲ್ಲಿ ಕಬ್ಬು ಕೃಷಿ, ಭತ್ತದ ಕೃಷಿ ಇತ್ಯಾದಿ ಉಪಕ್ರಷಿ ಅಧಿಕಗೊಂಡಾಗ ಅಲ್ಲಿನ ಅರಣ್ಯ ಪ್ರದೇಶದೊಂದಿಗೆ ಕಾಡಾನೆಗಳ ಕಾರಿಡಾರ್ ಬಂದ್ ಆಯಿತು. ಶ್ರೀರಂಗಪಟ್ಟಣ, ಮಂಡ್ಯ, ಮದ್ದೂರು, ರಾಮನಗರದ ಕಾಡುಗಳು ಏನಾಗಿವೆ? ಕೆಲವು ಬೆಟ್ಟಗುಡ್ಡಗಳು ಪರಿವರ್ತಿತ ಸೆಟ್‌ಗಳಾಗಿವೆ. ಅನಧಿಕೃತ ಫಾರ್ಮ್ ಆಗಿ ಪರಿವರ್ತನೆಯಾಗಿದೆ.ಇನ್ನು ಕೆಲವು ಕಲ್ಲು ಬೆಟ್ಟಗಳು ಕಲ್ಲುಗಣಿಗಾರಿಕೆಯ ತಾಣವಾಗಿ ಅಕ್ರಮಗಳೇ ಅಧಿಕವಾಗಿದ್ದು, ವನ್ಯಪ್ರಾಣ ಗಳ ಆವಾಸ ಸ್ಥಾನಗಳು ಮಾಯವಾಗಿವೆ. ಇತ್ತ ಪುಷ್ಪಗಿರಿ, ಬೃಹ್ಮಗಿರಿ, ತಲಕಾವೇರಿ, ನಾಗರಹೊಳೆ, ಬಂಡಿಪುರದಲ್ಲಿ ಆನೆ ಮತ್ತು ಹುಲಿಯ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು ಅರಣ್ಯಪ್ರದೇಶ ಒತ್ತುವರಿದಾರರಿಂದ, ಮಾನವನ ಹಸ್ತಕ್ಷೇಪಕ್ಕೆ ಸಿಲುಕಿರುವ ಹಿನ್ನೆಲೆ ಕಿರಿದಾಗುತ್ತಿದೆ.

ಭವಿಷ್ಯದಲ್ಲಿ ವನ್ಯಪ್ರಾಣಿ ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಉನ್ನತ ಮಟ್ಟದಲ್ಲಿ ಚರ್ಚಿಸಿ ನಿರ್ಧಾರ ಕೈಗೊಂಡಲ್ಲಿ ವನ್ಯಪ್ರಾಣಿ -ಮಾನವ ಸಂಘರ್ಷವನ್ನು ನಿಯಂತ್ರಿಸಲು ಸಾಧ್ಯವಿದೆ. ಉತ್ತಮ ಕಾರ್ಯಯೋಜನೆ ರೂಪಿಸಿದ್ದೇ ಆದಲ್ಲಿ, ಮುಂದಿನ ೫೦ ವರ್ಷ ನಾವು ನೆಮ್ಮದಿಯಿಂದ ಬಾಳಬಹುದು.

 

andolana

Recent Posts

ಗಾಂಧಿ ಅಭಿಯಾನ ಅರಿವಿನ ಯಾನ | ಸತ್ಯದ ಆರಾಧಕ ಮೌನವನ್ನು ಅವಲಂಬಿಸುವುದು ಅವಶ್ಯಕ

ನಾನು ಶಾಕಾಹಾರಿ ಮಂಡಲಿಯ ಕಾರ್ಯಕಾರಿ ಸಮಿತಿಯ ಸದಸ್ಯನಾಗಿ ಆರಿಸಲ್ಪಟ್ಟೆನು. ಆದರ ಪ್ರತಿ ಯೊಂದು ಸಭೆಗೂ ನಾನು ತಪ್ಪದೆ ಹಾಜರಾಗುತ್ತಿದ್ದೆ. ಆದರೆ…

6 hours ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಆಗಸ್ಟ್‌ 22 ಶನಿವಾರ  

6 hours ago

ಧಾವಂತ ಬದುಕಿಗೆ ಹೊಸ ಚೈತನ್ಯ ನೀಡುವ ಅರವಟ್ಟಿಗೆ

ಸಾಮಾಜಿಕ ಕಳವಳಿಯ ನೆಲೆಯಲ್ಲಿ ಮೂಡಿರುವ ಕಥಾ ಸಂಕಲನ ಹೆಚ್.ಎಸ್.ಸಿದ್ದಮಲ್ಲಿಕಾರ್ಜುನಸ್ವಾಮಿ, ಹುಂಡೀಪುರ ಸಾಹಿತಿ ಕೊತ್ತಲವಾಡಿ ಶಿವಕುಮಾರ್ ಅವರ ಹೊಸ ಕೃತಿ ‘ಅರವಟ್ಟಿಗೆ’…

8 hours ago

ಗಾಂಧಿ ಅಭಿಯಾನ ಅರಿವಿನ ಯಾನ | ಗಾಂಧೀಜಿ ಆತ್ಮಕತೆಯ ಶತಮಾನೋತ್ಸವಕ್ಕೆ ಆಂದೋಲನ ಕೈಜೋಡಿಸಿರುವುದು ಐತಿಹಾಸಿಕ

ಪ್ರೊ. ಜಿ. ಬಿ. ಶಿವರಾಜು, ಟ್ರಸ್ಟಿ, ಕಸ್ತೂರ ಬಾ ಗಾಂಧಿ ಆಶ್ರಮ ಗಾಂಧೀಜಿ ಆತ್ಮಕತೆ ‘ಸತ್ಯದೊಡನೆ ನನ್ನ ಅನ್ವೇಷಣೆ’ಗೆ ೧೦೦…

8 hours ago

ಸಾರ್ವಜನಿಕ ಸ್ಥಳದಲ್ಲಿ ಜಾತಿ ನಿಂದನೆಯಾದರೆ ಮಾತ್ರ ಎಸ್‌ಸಿ,ಎಸ್‌ಟಿ ಕಾಯ್ದೆ ಅನ್ವಯ ; ಸುಪ್ರೀಂ ಕೋರ್ಟ್‌

ಹೊಸದಿಲ್ಲಿ : ಸಾರ್ವಜನಿಕರ ಸಮ್ಮುಖದಲ್ಲಿ ಅಥವಾ ಸಾರ್ವಜನಿಕರ ವೀಕ್ಷಣೆಗೆ ಒಳಪಡುವ ಸ್ಥಳದಲ್ಲಿ ಜಾತಿ ನಿಂದನೆ ನಡೆದಿರುವುದು ಸಾಬೀತಾಗದಿದ್ದರೆ, ಅದನ್ನು ಪರಿಶಿಷ್ಟ…

22 hours ago

ಆರೋಪದಿಂದ ಮುಕ್ತನಾಗಿ ಹೊರಬರುತ್ತೇನೆ : ಸಚಿವ ನಾಗೇಂದ್ರ ವಿಶ್ವಾಸ

ಬೆಂಗಳೂರು : ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣದಲ್ಲಿ ದುರುಪಯೋಗವಾಗಿದೆ ಎಂದು ಹೇಳಲಾಗಿದ್ದ 187 ಕೋಟಿ ರೂಪಾಯಿ…

1 day ago