ಉಕ್ರೇನ್ ದೇಶದ ಮೇಲೆ ರಷ್ಯಾ ಮಿಲಿಟರಿ ದಾಳಿ ಆರಂಭಿಸಿ ಫೆಬ್ರವರಿ 24ಕ್ಕೆ ಒಂದು ವರ್ಷ ಆಗಲಿದೆ. ಈ ಒಂದು ವರ್ಷದಲ್ಲಿ ಉಕ್ರೇನ್‌ಗೆ ಆಗಿರುವ ಹಾನಿ ಅಷ್ಟಿಷ್ಟಲ್ಲ. ದೇಶದ ಮೂಲಭೂತ ಸೌಲಭ್ಯಗಳು, ಇಂಧನ ಉತ್ಪಾದನೆ ಮತ್ತು ಪೂರೈಕೆ ಸ್ಥಾವರಗಳು ನಾಶವಾಗಿವೆ. ಸಾವಿರಾರು ಉಕ್ರೇನ್ ಯೋಧರು ಸತ್ತಿದ್ದಾರೆ. ಲಕ್ಷಾಂತರ ಜನರು ವಲಸೆ ಹೋಗಿದ್ದಾರೆ. ಇಡೀ ದೇಶದ ಜನರ ಜೀವನ ಅಸ್ತವ್ಯಸ್ತವಾಗಿದೆ. ಆದರೂ ರಷ್ಯಾದ ಮಿಲಿಟರಿಗೆ ಉಕ್ರೇನ್ ಜನರ ಹೋರಾಟದ ಕಿಚ್ಚನ್ನು ನಾಶ ಮಾಡಲು ಸಾಧ್ಯವಾಗಿಲ್ಲ.
ಉಕ್ರೇನ್ ಸೇನೆ ನೇರವಾಗಿ ರಷ್ಯಾದ ಪ್ರಮುಖ ನಗರಗಳ ಮೇಲೆ ಇನ್ನೂ ಮಿಲಿಟರಿ ದಾಳಿ ನಡೆಸಿಲ್ಲ. ಉಕ್ರೇನ್ ಬಳಿ ದೂರಗಾಮಿ ಕ್ಷಿಪಣಿಗಳು ಇಲ್ಲ. ಇದ್ದಿದ್ದರೆ ಬಹುಶಃ ಈ ವೇಳೆಗೆ ರಷ್ಯಾದ ಮುಖ್ಯ ನಗರಗಳ ಮೇಲೂ ಬಾಂಬ್ ದಾಳಿ ನಡೆದಿರುತ್ತಿತ್ತು. ಆದ್ದರಿಂದ ರಷ್ಯಾಕ್ಕೆ ಯುದ್ಧ ವಿನಾಶದ ಅನುಭವ ಆಗಿಲ್ಲ. ಆದರೆ ಅತಿಕ್ರಮಣದ ಸಂದರ್ಭದಲ್ಲಿ ಉಕ್ರೇನ್ ನಡೆಸಿದ ಪ್ರತಿ ದಾಳಿಯಲ್ಲಿ ರಷ್ಯಾದ ಸುಮಾರು 2 ಲಕ್ಷ ಯೋಧರು ಸತ್ತಿದ್ದಾರೆಂದು ವಿದೇಶೀ ಮೂಲಗಳು ಹೇಳುತ್ತಿವೆ.
ಕಳೆದ ವರ್ಷ ದಾಳಿ ಆರಂಭಿಸಿದಾಗ ಕೆಲವೇ ದಿನಗಳಲ್ಲಿ ಉಕ್ರೇನ್ ಶರಣಾಗುವುದೆಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಂಬಿದ್ದರು. ಆದರೆ ಒಂದು ವರ್ಷವಾಗುತ್ತ್ತಾ ಬಂದರೂ ಉಕ್ರೇನ್ ಶರಣಾಗಿಲ್ಲ. ಪ್ರತಿ ದಿನ, ಪ್ರತಿ ಕ್ಷಣ ರಷ್ಯಾ ಆಕ್ರಮಣಕ್ಕೆ ಉಕ್ರೇನ್ ಪ್ರತಿರೋಧ ಒಡ್ಡುತ್ತ ಬಂದಿದೆ. ಪುಟಿನ್‌ಗೆ ಆರಂಭದಲ್ಲಿದ್ದಂಥ ವಿಶ್ವಾಸ ಈಗ ಇದ್ದಂತೆ ಕಾಣುತ್ತಿಲ್ಲ. ಆದರೆ ಸರ್ವಾಧಿಕಾರಿಗಳು ಬೇಗನೆ ಬದಲಾಗುವುದಿಲ್ಲ. ರಷ್ಯಾ ವಿರುದ್ಧ ಯುದ್ಧ ಮಾಡುತ್ತಿರುವ ಉಕ್ರೇನ್‌ಗೆ ಅಮೆರಿಕ ಸೇರಿದಂತೆ ಪಶ್ಚಿಮ ದೇಶಗಳು ಮತ್ತು ಯೂರೋಪಿನ ಪ್ರಮುಖ ದೇಶಗಳು ಕ್ರಮೇಣ ಬಹಿರಂಗವಾಗಿಯೇ ಬೆಂಬಲ ವ್ಯಕ್ತಮಾಡುತ್ತಿವೆ. ಅತ್ಯಾಧುನಿಕ ಯುದ್ಧಾಸ್ತ್ರಗಳನ್ನು ಕೊಡುತ್ತಿವೆ. ಟ್ಯಾಂಕರ್‌ಗಳಿಂದ ಹಿಡಿದು ಯುದ್ಧ ವಿಮಾನಗಳವರೆಗೆ ಯುದ್ಧಾಸ್ತ್ರಗಳು ಉಕ್ರೇನ್ ತಲುಪುತ್ತಿವೆ. (ಯಾವ ದೇಶವೂ ದೂರಗಾಮಿ ಕ್ಷಿಪಣಿಗಳನ್ನು ನೀಡುತ್ತಿಲ್ಲ. ಕೊಟ್ಟರೆ ಯುದ್ಧ ತೀವ್ರ ಸ್ವರೂಪ ಪಡೆಯುತ್ತದೆ ಎನ್ನುವ ಅಭಿಪ್ರಾಯ ಇದೆ.) ಉಕ್ರೇನ್ ಯೋಧರಿಗೆ ಅಗತ್ಯ ತರಬೇತಿಯನ್ನೂ ನೀಡಲಾಗುತ್ತಿದೆ.
ಉಕ್ರೇನ್ ಅಧ್ಯಕ್ಷ ವ್ಲಾಡಿಮೇರ್ ಝಲನ್ಸ್ಕ್ಕಿ ಅಮೆರಿಕ ಸೇರಿದಂತೆ ವಿಶ್ವದ ಹಲವು ಶಕ್ತಿರಾಷ್ಟ್ರಗಳಿಗೆ ಭೇಟಿ ನೀಡಿ ಯುದ್ಧಾಸ್ತ್ರಗಳನ್ನು ಎಷ್ಟು ಬೇಗ ಪೂರೈಸಿದರೆ ಅಷ್ಟು ಬೇಗ ರಷ್ಯಾವನ್ನು ಸೋಲಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಖುದ್ದು ಭೇಟಿ ನೀಡಲಾಗದ ದೇಶಗಳ ನಾಯಕರ ಜೊತೆ ವಿಡಿಯೋ ಸಂಭಾಷಣೆ ನಡೆಸಿ ಬೆಂಬಲ ಕೋರಿದ್ದಾರೆ. ಅವರ ಪ್ರಯತ್ನ ಸಾಕಷ್ಟು ಯಶಸ್ಸು ಕಂಡಿದೆ. ರಷ್ಯಾದ ದಾಳಿಗೆ ಉಕ್ರೇನ್ ಕೆಲವೇ ದಿನಗಳಲ್ಲಿ ಕುಸಿಯುತ್ತದೆ ಎಂದು ತಿಳಿದಿದ್ದ ದೇಶಗಳು ಈಗ ತಮ್ಮ ನಿಲುವುಗಳನ್ನು ಬದಲಾಯಿಸಿಕೊಂಡಿವೆ. ರಷ್ಯಾವನ್ನು ಮುಗಿಸಲು ಉಕ್ರೇನ್ ಸರಿಯಾದ ದೇಶ ಎಂಬ ಭಾವನೆ ವ್ಯಕ್ತಪಡಿಸುತ್ತಿವೆ.
ಉಕ್ರೇನ್ ಬೆಂಬಲಿಸಿದ ಜರ್ಮನಿ ಮತ್ತು ಯೂರೋಪಿನ ಇತರ ದೇಶಗಳಿಗೆ ಪೂರೈಸಲಾಗುತ್ತಿದ್ದ ತೈಲ ಮತ್ತು ಅನಿಲದ ಪ್ರಮಾಣವನ್ನು ರಷ್ಯಾ ತಗ್ಗಿಸಿ ದೊಡ್ಡ ಬಿಕ್ಕಟ್ಟನ್ನೇ ಸೃಷ್ಟಿಸಿತು. ಚಳಿಗಾಲ ಬರುತ್ತಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಯೂರೋಪ್‌ಗೆ ಆಘಾತಕಾರಿಯಾಗಿತ್ತು. ನಾರ್ವೆ, ಚೀನಾ, ಅಮೆರಿಕ ಮುಂತಾದ ದೇಶಗಳಿಂದ ಹಠಾತ್ತನೆ ತೈಲ ಮತ್ತು ಅನಿಲ ಪಡೆಯುವ ಸ್ಥಿತಿ ಬಂತು. ಅದೃಷ್ಟವಶಾತ್ ಚಳಿಗಾಲ ಭೀಕರ ಎನ್ನುವಷ್ಟು ಪ್ರಮಾಣದಲ್ಲಿ ಬರಲಿಲ್ಲ. ಹೀಗಾಗಿ ನಿರೀಕ್ಷಿತ ಪ್ರಮಾಣದಲ್ಲಿ ಇಂಧನ ಬಿಕ್ಕಟ್ಟು ಯೂರೋಪಿನಲ್ಲಿ ಉಂಟಾಗಲಿಲ್ಲ. ರಷ್ಯಾದ ತೈಲ, ಅನಿಲ ಇಲ್ಲದೆ ಪರ್ಯಾಯ ಮೂಲಗಳ ಮೂಲಕ ಪರಿಸ್ಥಿತಿ ನಿಭಾಯಿಸುವ ವಿಶ್ವಾಸ ಯೂರೋಪ್ ದೇಶಗಳಲ್ಲಿ ಈಗ ಮೂಡಿದೆ. ಹೀಗಾಗಿ ಉಕ್ರೇನ್ ಪರವಾದ ನಿಲುವು ಈಗ ಯೂರೋಪಿನಲ್ಲಿ ಗಟ್ಟಿಗೊಂಡಿದೆ.
ಜರ್ಮನಿಯ ಮ್ಯೂನಿಕ್ ನಗರದಲ್ಲಿ ಇದೀಗ ತಾನೆ ನಡೆದ ಅಂತಾರಾಷ್ಟ್ರೀಯ ಭದ್ರತಾ ಸಮ್ಮೇಳನದಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ನೋಡಿದರೆ ಉಕ್ರೇನ್ ದೇಶ ರಷ್ಯಾವನ್ನು ಮಣಿಸಬಲ್ಲದು ಎಂದೆನ್ನಿಸದೆ ಇರದು. ಐವತ್ತಕ್ಕೂ ಹೆಚ್ಚು ದೇಶಗಳ ನಾಯಕರು ಭಾಗವಹಿಸಿರುವ ಈ ಸಮ್ಮೇಳನ ಮೂಲಭೂತವಾಗಿ ಶಾಂತಿ ಸ್ಥಾಪನೆಯತ್ತ ಯೋಚಿಸಬೇಕಿತ್ತು. ಆದರೆ ಈಗ ಎಲ್ಲರೂ ಒಂದಾಗಿ ಉಕ್ರೇನ್‌ಗೆ ಅಗತ್ಯ ಯುದ್ಧಾಸ್ತ್ರಗಳನ್ನು ಕೊಡಬೇಕು ಎಂಬ ಒತ್ತಾಯ ನ್ಯಾಟೋ ರಾಷ್ಟ್ರಗಳಿಂದಲೇ ಬಂದಿದೆ. ಅವರ ಪ್ರಕಾರ ಉಕ್ರೇನ್ ಸೋತರೆ ಅದನ್ನು ಬೆಂಬಲಿಸಿದ ಎಲ್ಲ ದೇಶಗಳೂ ಭದ್ರತೆಯ ಭೀತಿ ಎದುರಿಸಬೇಕಾಗುತ್ತದೆ. ಜಗತ್ತು ಯಾವುದೇ ಬೆದರಿಕೆಯಿಲ್ಲದೆ ಇರಬೇಕಾದರೆ ರಷ್ಯಾ ಸೋಲಬೇಕು ಎಂಬ ಒತ್ತಾಯ ಕೇಳಿಬಂದಿದೆ. ಈ ಬದಲಾವಣೆ ನೋಡಿದರೆ ಯುದ್ಧ ನಿಲ್ಲುವ ಯಾವುದೇ ಸೂಚನೆಗಳು ಅಥವಾ ಕದನ ವಿರಾಮದ ಯಾವುದೇ ಪ್ರಯತ್ನಗಳು ನಡೆಯುವ ಸಾಧ್ಯತೆಯೇ ಇಲ್ಲವಾಗಿದೆ. ಆದರೆ ಕೆಲವು ದೇಶಗಳು ಈ ರೀತಿಯ ಆಲೋಚನೆಯನ್ನು ಒಪ್ಪುವುದಿಲ್ಲ. ಅಮೆರಿಕ ನೇತೃತ್ವದ ಪಾಶ್ಚಾತ್ಯ ದೇಶಗಳು ಮತ್ತು ಯೂರೋಪಿನ ಬಲಿಷ್ಠ ದೇಶಗಳು ಒಂದಾಗಿ ಉಕ್ರೇನ್ ಬಲಪಡಿಸಿ ಯುದ್ಧದಲ್ಲಿ ರಷ್ಯಾಕ್ಕೆ ಹಿನ್ನಡೆಯಾದ ಪಕ್ಷದಲ್ಲಿ ಆಗಬಹುದಾದ ಒಂದು ದೊಡ್ಡ ಅಪಾಯವನ್ನು ಕಲ್ಪಿಸಿಕೊಳ್ಳಲಾಗಿದೆ. ರಷ್ಯಾ ಸೋಲನ್ನು ಒಪ್ಪಿಕೊಳ್ಳದೆ ಪರಮಾಣು ಅಸ್ತ್ರಗಳನ್ನು ಬಳಸುವ ಸಾಧ್ಯತೆಯನ್ನು ತಳ್ಳಿಹಾಕಲಾಗದು ಎಂಬುದೇ ಕೆಲವು ನಾಯಕರ ಆತಂಕ. ಅಂಥ ಸ್ಥಿತಿ ಬರದಂತೆ ಎಚ್ಚರಿಕೆ ವಹಿಸಬೇಕಾದದ್ದು ತುಂಬಾ ಅಗತ್ಯ ಎಂಬ ಸಲಹೆಗಳೂ ಬಂದಿವೆ. ಯುದ್ಧ ಮುಂದುವರಿಯುವಂತೆ ಮಾಡಿ ರಷ್ಯಾ ಆರ್ಥಿಕವಾಗಿ ದಿವಾಳಿಯಾಗುವಂತೆ ಮಾಡಬೇಕು ಎಂಬ ಸಲಹೆಯೂ ಬಂದಿದೆ. ಆದರೂ ಸಂಧಾನದ ಬಾಗಿಲು ಮುಚ್ಚಬಾರದೆಂಬ, ಈ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆ ಇಡಬೇಕೆಂದು ಸಮ್ಮೇಳನ ಒಮ್ಮತದ ಅಭಿಪ್ರಾಯ ವ್ಯಕ್ತಮಾಡಿದೆ.
ಟರ್ಕಿ ಅಧ್ಯಕ್ಷ ಎರ್ಡೋಗನ್ ಸಂಧಾನ ಪ್ರಯತ್ನ ನಡೆಸಿದ್ದರು. ಈಗ ಅದನ್ನು ಮುಂದುವರಿಸುವ ಸ್ಥಿತಿಯಲ್ಲಿ ಅವರು ಇಲ್ಲ. ದೇಶದಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕಂಪ ಪರಿಹಾರ ಕಾರ್ಯದ ಕಡೆಗೆ ಅವರ ಗಮನ ಹೋಗುವುದು ಅನಿವಾರ್ಯವಾಗಿದೆ. ಅಮೆರಿಕದ ಅಧ್ಯಕ್ಷ ಜೋ ಬಿಡನ್ ರಹಸ್ಯವಾಗಿ ಸಲಹೆಯೊಂದನ್ನು ಪುಟಿನ್‌ಗೆ ನೀಡಿದರೆನ್ನಲಾಗಿದೆ. ಆದರೆ ಪುಟಿನ್ ಅದಕ್ಕೆ ಒಪ್ಪಲಿಲ್ಲವೆಂದೂ ಹೇಳಲಾಗಿದೆ. ಆಕ್ರಮಿತ ಪ್ರದೇಶವನ್ನು ಬಿಟ್ಟುಕೊಡಲು ಪುಟಿನ್ ಸಿದ್ಧವಿಲ್ಲ, ಹಾಗೆಯೇ ಆಕ್ರಮಿತ ಪ್ರದೇಶವನ್ನು ಮರುಪಡೆಯದೆ ರಾಜಿಮಾಡಿಕೊಳ್ಳಲು ಝಲನ್ಸ್ಕಿ ಸಿದ್ಧವಿಲ್ಲ. ಹೀಗಾಗಿ ಯುದ್ಧ ಮುಂದುವರಿದಿದೆ.
ಅತ್ತ ರಷ್ಯಾದ ಅಧ್ಯಕ್ಷ ಪುಟಿನ್ ತಾಳ್ಮೆ ಕಳೆದುಕೊಂಡಂತೆ ಕಾಣುತ್ತಿದ್ದಾರೆ. ಮತ್ತೆ ಮತ್ತೆ ಉಕ್ರೇನ್ ಯುದ್ಧದ ಸೇನಾ ದಂಡನಾಯಕರನ್ನು ಬದಲಾಯಿಸುತ್ತಿದ್ದಾರೆ. ರಷ್ಯಾದ ಅಸ್ತಿತ್ವಕ್ಕೇ ಬೆದರಿಕೆ ಬಂದಿರುವುದರಿಂದ ಉಕ್ರೇನನ್ನು ಸರಿ ದಾರಿಗೆ ತರುವುದು ಅನಿವಾರ್ಯ ಎಂಬ ವಾದವನ್ನು ಪುಟಿನ್ ಜನರ ಮುಂದಿಡುತ್ತಿದ್ದಾರೆ. ಉಕ್ರೇನಿಗೆ ಯುದ್ಧಾಸ್ತ್ರಗಳನ್ನು ಪೂರೈಸುವ ಮೂಲಕ ಅಮೆರಿಕ ಮತ್ತಿತರ ಯೂರೋಪಿನ ದೇಶಗಳು ಯುದ್ಧದಲ್ಲಿ ನೇರವಾಗಿ ಭಾಗವಹಿಸಿದಂತಾಗಿದೆ ಎಂದು ಪುಟಿನ್ ಹೇಳುತ್ತಿದ್ದಾರೆ. ರಷ್ಯಾದ ವಿರುದ್ಧ ನಿಂತಿರುವ ದೇಶಗಳ ಬಲ ಅಡಗಿಸಲು ಪುಟಿನ್ ಹೆಜ್ಜೆ ಇಟ್ಟಿದ್ದಾರೆ. ಅಮೆರಿಕ ವಿರೋಧಿ ದೇಶಗಳಾದ ಇರಾನ್ ಮತ್ತು ಚೀನಾ ಜೊತೆ ಉತ್ತಮ ಬಾಂಧವ್ಯ ಹೊಂದಲು ಪ್ರಯತ್ನಿಸಲಾಗುತ್ತಿದೆ. ಒಂದು ರೀತಿಯಲ್ಲಿ ಅಮೆರಿಕ ನೇತೃತ್ವದ ಕೂಟಕ್ಕೆ ಪರ್ಯಾಯವಾಗಿ ಒಂದು ಕೂಟ ಕಟ್ಟುವ ಪ್ರಯತ್ನ ಇದೆಂದು ಊಹಿಸಲಾಗಿದೆ. ಈ ಕೂಟಕ್ಕೆ ಅಮೆರಿಕ ವಿರೋಧಿ ದೇಶಗಳಾದ ನಾರ್ತ್ ಕೊರಿಯಾ, ನಿಕಾರಗುವಾ, ಕಾಂಬೋಡಿಯಾ, ವೆನುಜುವೆಲಾವನ್ನು ಸೇರಿಸಿಕೊಳ್ಳುವ ಪ್ರಯತ್ನವೂ ಆರಂಭವಾಗಬಹುದಾದ ಸಾಧ್ಯತೆ ಇದೆ. ಉಕ್ರೇನ್ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಭಾರತವು ರಷ್ಯಾದ ಜೊತೆಗೆ ತನ್ನ ಎಂದಿನ ಬಾಂಧವ್ಯವನ್ನು ಮುಂದುವರಿಸಿದ್ದು ಅಮೆರಿಕ ನೇತೃತ್ವದ ಗುಂಪಿಗೆ ಅಂದರೆ ರಷ್ಯಾ ವಿರೋಧಿ ಮಿಲಿಟರಿ ಗುಂಪಿಗೆ ಸೇರಿಲ್ಲ. ಭಾರತಕ್ಕೆ ಇದು ಬಹು ಇಕ್ಕಟ್ಟಿನ ಸ್ಥಿತಿ. ಎಚ್ಚರಿಕೆಯಿಂದ ಪರಿಸ್ಥಿತಿಯನ್ನು ನಿಭಾಯಿ ಸಬೇಕಾಗುತ್ತದೆ.
ಈಗ ಒಂದು ರೀತಿಯಲ್ಲಿ ೨ನೆಯ ಮಹಾಯುದ್ಧದ ನಂತರ ನಿರ್ಮಾಣವಾದ ಶೀತಲ ಯುದ್ಧದ ಕಾಲ ಮರು ಕಳಿಸುವ ಸೂಚನೆಗಳು ಕಾಣುತ್ತಿವೆ. ಅಂಥ ದಿನಗಳು ಮತ್ತೆ ಬರದಂತೆ ನೋಡಿಕೊಳ್ಳುವುದು ರಷ್ಯಾ ಅಂತೆಯೇ ಅಮೆ ರಿಕ ಮತ್ತು ಯುರೋಪಿನ ಬಲಿಷ್ಠ ದೇಶಗಳ ಜವಾಬ್ದಾರಿ.ಉಕ್ರೇನ್ ದೇಶದ ಮೇಲೆ ರಷ್ಯಾ ಮಿಲಿಟರಿ ದಾಳಿ ಆರಂಭಿಸಿ ಫೆಬ್ರವರಿ 24ಕ್ಕೆ ಒಂದು ವರ್ಷ ಆಗಲಿದೆ. ಈ ಒಂದು ವರ್ಷದಲ್ಲಿ ಉಕ್ರೇನ್‌ಗೆ ಆಗಿರುವ ಹಾನಿ ಅಷ್ಟಿಷ್ಟಲ್ಲ. ದೇಶದ ಮೂಲಭೂತ ಸೌಲಭ್ಯಗಳು, ಇಂಧನ ಉತ್ಪಾದನೆ ಮತ್ತು ಪೂರೈಕೆ ಸ್ಥಾವರಗಳು ನಾಶವಾಗಿವೆ. ಸಾವಿರಾರು ಉಕ್ರೇನ್ ಯೋಧರು ಸತ್ತಿದ್ದಾರೆ. ಲಕ್ಷಾಂತರ ಜನರು ವಲಸೆ ಹೋಗಿದ್ದಾರೆ. ಇಡೀ ದೇಶದ ಜನರ ಜೀವನ ಅಸ್ತವ್ಯಸ್ತವಾಗಿದೆ. ಆದರೂ ರಷ್ಯಾದ ಮಿಲಿಟರಿಗೆ ಉಕ್ರೇನ್ ಜನರ ಹೋರಾಟದ ಕಿಚ್ಚನ್ನು ನಾಶ ಮಾಡಲು ಸಾಧ್ಯವಾಗಿಲ್ಲ.
ಉಕ್ರೇನ್ ಸೇನೆ ನೇರವಾಗಿ ರಷ್ಯಾದ ಪ್ರಮುಖ ನಗರಗಳ ಮೇಲೆ ಇನ್ನೂ ಮಿಲಿಟರಿ ದಾಳಿ ನಡೆಸಿಲ್ಲ. ಉಕ್ರೇನ್ ಬಳಿ ದೂರಗಾಮಿ ಕ್ಷಿಪಣಿಗಳು ಇಲ್ಲ. ಇದ್ದಿದ್ದರೆ ಬಹುಶಃ ಈ ವೇಳೆಗೆ ರಷ್ಯಾದ ಮುಖ್ಯ ನಗರಗಳ ಮೇಲೂ ಬಾಂಬ್ ದಾಳಿ ನಡೆದಿರುತ್ತಿತ್ತು. ಆದ್ದರಿಂದ ರಷ್ಯಾಕ್ಕೆ ಯುದ್ಧ ವಿನಾಶದ ಅನುಭವ ಆಗಿಲ್ಲ. ಆದರೆ ಅತಿಕ್ರಮಣದ ಸಂದರ್ಭದಲ್ಲಿ ಉಕ್ರೇನ್ ನಡೆಸಿದ ಪ್ರತಿ ದಾಳಿಯಲ್ಲಿ ರಷ್ಯಾದ ಸುಮಾರು 2 ಲಕ್ಷ ಯೋಧರು ಸತ್ತಿದ್ದಾರೆಂದು ವಿದೇಶೀ ಮೂಲಗಳು ಹೇಳುತ್ತಿವೆ.
ಕಳೆದ ವರ್ಷ ದಾಳಿ ಆರಂಭಿಸಿದಾಗ ಕೆಲವೇ ದಿನಗಳಲ್ಲಿ ಉಕ್ರೇನ್ ಶರಣಾಗುವುದೆಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಂಬಿದ್ದರು. ಆದರೆ ಒಂದು ವರ್ಷವಾಗುತ್ತ್ತಾ ಬಂದರೂ ಉಕ್ರೇನ್ ಶರಣಾಗಿಲ್ಲ. ಪ್ರತಿ ದಿನ, ಪ್ರತಿ ಕ್ಷಣ ರಷ್ಯಾ ಆಕ್ರಮಣಕ್ಕೆ ಉಕ್ರೇನ್ ಪ್ರತಿರೋಧ ಒಡ್ಡುತ್ತ ಬಂದಿದೆ. ಪುಟಿನ್‌ಗೆ ಆರಂಭದಲ್ಲಿದ್ದಂಥ ವಿಶ್ವಾಸ ಈಗ ಇದ್ದಂತೆ ಕಾಣುತ್ತಿಲ್ಲ. ಆದರೆ ಸರ್ವಾಧಿಕಾರಿಗಳು ಬೇಗನೆ ಬದಲಾಗುವುದಿಲ್ಲ. ರಷ್ಯಾ ವಿರುದ್ಧ ಯುದ್ಧ ಮಾಡುತ್ತಿರುವ ಉಕ್ರೇನ್‌ಗೆ ಅಮೆರಿಕ ಸೇರಿದಂತೆ ಪಶ್ಚಿಮ ದೇಶಗಳು ಮತ್ತು ಯೂರೋಪಿನ ಪ್ರಮುಖ ದೇಶಗಳು ಕ್ರಮೇಣ ಬಹಿರಂಗವಾಗಿಯೇ ಬೆಂಬಲ ವ್ಯಕ್ತಮಾಡುತ್ತಿವೆ. ಅತ್ಯಾಧುನಿಕ ಯುದ್ಧಾಸ್ತ್ರಗಳನ್ನು ಕೊಡುತ್ತಿವೆ. ಟ್ಯಾಂಕರ್‌ಗಳಿಂದ ಹಿಡಿದು ಯುದ್ಧ ವಿಮಾನಗಳವರೆಗೆ ಯುದ್ಧಾಸ್ತ್ರಗಳು ಉಕ್ರೇನ್ ತಲುಪುತ್ತಿವೆ. (ಯಾವ ದೇಶವೂ ದೂರಗಾಮಿ ಕ್ಷಿಪಣಿಗಳನ್ನು ನೀಡುತ್ತಿಲ್ಲ. ಕೊಟ್ಟರೆ ಯುದ್ಧ ತೀವ್ರ ಸ್ವರೂಪ ಪಡೆಯುತ್ತದೆ ಎನ್ನುವ ಅಭಿಪ್ರಾಯ ಇದೆ.) ಉಕ್ರೇನ್ ಯೋಧರಿಗೆ ಅಗತ್ಯ ತರಬೇತಿಯನ್ನೂ ನೀಡಲಾಗುತ್ತಿದೆ.
ಉಕ್ರೇನ್ ಅಧ್ಯಕ್ಷ ವ್ಲಾಡಿಮೇರ್ ಝಲನ್ಸ್ಕ್ಕಿ ಅಮೆರಿಕ ಸೇರಿದಂತೆ ವಿಶ್ವದ ಹಲವು ಶಕ್ತಿರಾಷ್ಟ್ರಗಳಿಗೆ ಭೇಟಿ ನೀಡಿ ಯುದ್ಧಾಸ್ತ್ರಗಳನ್ನು ಎಷ್ಟು ಬೇಗ ಪೂರೈಸಿದರೆ ಅಷ್ಟು ಬೇಗ ರಷ್ಯಾವನ್ನು ಸೋಲಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಖುದ್ದು ಭೇಟಿ ನೀಡಲಾಗದ ದೇಶಗಳ ನಾಯಕರ ಜೊತೆ ವಿಡಿಯೋ ಸಂಭಾಷಣೆ ನಡೆಸಿ ಬೆಂಬಲ ಕೋರಿದ್ದಾರೆ. ಅವರ ಪ್ರಯತ್ನ ಸಾಕಷ್ಟು ಯಶಸ್ಸು ಕಂಡಿದೆ. ರಷ್ಯಾದ ದಾಳಿಗೆ ಉಕ್ರೇನ್ ಕೆಲವೇ ದಿನಗಳಲ್ಲಿ ಕುಸಿಯುತ್ತದೆ ಎಂದು ತಿಳಿದಿದ್ದ ದೇಶಗಳು ಈಗ ತಮ್ಮ ನಿಲುವುಗಳನ್ನು ಬದಲಾಯಿಸಿಕೊಂಡಿವೆ. ರಷ್ಯಾವನ್ನು ಮುಗಿಸಲು ಉಕ್ರೇನ್ ಸರಿಯಾದ ದೇಶ ಎಂಬ ಭಾವನೆ ವ್ಯಕ್ತಪಡಿಸುತ್ತಿವೆ.
ಉಕ್ರೇನ್ ಬೆಂಬಲಿಸಿದ ಜರ್ಮನಿ ಮತ್ತು ಯೂರೋಪಿನ ಇತರ ದೇಶಗಳಿಗೆ ಪೂರೈಸಲಾಗುತ್ತಿದ್ದ ತೈಲ ಮತ್ತು ಅನಿಲದ ಪ್ರಮಾಣವನ್ನು ರಷ್ಯಾ ತಗ್ಗಿಸಿ ದೊಡ್ಡ ಬಿಕ್ಕಟ್ಟನ್ನೇ ಸೃಷ್ಟಿಸಿತು. ಚಳಿಗಾಲ ಬರುತ್ತಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಯೂರೋಪ್‌ಗೆ ಆಘಾತಕಾರಿಯಾಗಿತ್ತು. ನಾರ್ವೆ, ಚೀನಾ, ಅಮೆರಿಕ ಮುಂತಾದ ದೇಶಗಳಿಂದ ಹಠಾತ್ತನೆ ತೈಲ ಮತ್ತು ಅನಿಲ ಪಡೆಯುವ ಸ್ಥಿತಿ ಬಂತು. ಅದೃಷ್ಟವಶಾತ್ ಚಳಿಗಾಲ ಭೀಕರ ಎನ್ನುವಷ್ಟು ಪ್ರಮಾಣದಲ್ಲಿ ಬರಲಿಲ್ಲ. ಹೀಗಾಗಿ ನಿರೀಕ್ಷಿತ ಪ್ರಮಾಣದಲ್ಲಿ ಇಂಧನ ಬಿಕ್ಕಟ್ಟು ಯೂರೋಪಿನಲ್ಲಿ ಉಂಟಾಗಲಿಲ್ಲ. ರಷ್ಯಾದ ತೈಲ, ಅನಿಲ ಇಲ್ಲದೆ ಪರ್ಯಾಯ ಮೂಲಗಳ ಮೂಲಕ ಪರಿಸ್ಥಿತಿ ನಿಭಾಯಿಸುವ ವಿಶ್ವಾಸ ಯೂರೋಪ್ ದೇಶಗಳಲ್ಲಿ ಈಗ ಮೂಡಿದೆ. ಹೀಗಾಗಿ ಉಕ್ರೇನ್ ಪರವಾದ ನಿಲುವು ಈಗ ಯೂರೋಪಿನಲ್ಲಿ ಗಟ್ಟಿಗೊಂಡಿದೆ.
ಜರ್ಮನಿಯ ಮ್ಯೂನಿಕ್ ನಗರದಲ್ಲಿ ಇದೀಗ ತಾನೆ ನಡೆದ ಅಂತಾರಾಷ್ಟ್ರೀಯ ಭದ್ರತಾ ಸಮ್ಮೇಳನದಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ನೋಡಿದರೆ ಉಕ್ರೇನ್ ದೇಶ ರಷ್ಯಾವನ್ನು ಮಣಿಸಬಲ್ಲದು ಎಂದೆನ್ನಿಸದೆ ಇರದು. ಐವತ್ತಕ್ಕೂ ಹೆಚ್ಚು ದೇಶಗಳ ನಾಯಕರು ಭಾಗವಹಿಸಿರುವ ಈ ಸಮ್ಮೇಳನ ಮೂಲಭೂತವಾಗಿ ಶಾಂತಿ ಸ್ಥಾಪನೆಯತ್ತ ಯೋಚಿಸಬೇಕಿತ್ತು. ಆದರೆ ಈಗ ಎಲ್ಲರೂ ಒಂದಾಗಿ ಉಕ್ರೇನ್‌ಗೆ ಅಗತ್ಯ ಯುದ್ಧಾಸ್ತ್ರಗಳನ್ನು ಕೊಡಬೇಕು ಎಂಬ ಒತ್ತಾಯ ನ್ಯಾಟೋ ರಾಷ್ಟ್ರಗಳಿಂದಲೇ ಬಂದಿದೆ. ಅವರ ಪ್ರಕಾರ ಉಕ್ರೇನ್ ಸೋತರೆ ಅದನ್ನು ಬೆಂಬಲಿಸಿದ ಎಲ್ಲ ದೇಶಗಳೂ ಭದ್ರತೆಯ ಭೀತಿ ಎದುರಿಸಬೇಕಾಗುತ್ತದೆ. ಜಗತ್ತು ಯಾವುದೇ ಬೆದರಿಕೆಯಿಲ್ಲದೆ ಇರಬೇಕಾದರೆ ರಷ್ಯಾ ಸೋಲಬೇಕು ಎಂಬ ಒತ್ತಾಯ ಕೇಳಿಬಂದಿದೆ. ಈ ಬದಲಾವಣೆ ನೋಡಿದರೆ ಯುದ್ಧ ನಿಲ್ಲುವ ಯಾವುದೇ ಸೂಚನೆಗಳು ಅಥವಾ ಕದನ ವಿರಾಮದ ಯಾವುದೇ ಪ್ರಯತ್ನಗಳು ನಡೆಯುವ ಸಾಧ್ಯತೆಯೇ ಇಲ್ಲವಾಗಿದೆ. ಆದರೆ ಕೆಲವು ದೇಶಗಳು ಈ ರೀತಿಯ ಆಲೋಚನೆಯನ್ನು ಒಪ್ಪುವುದಿಲ್ಲ. ಅಮೆರಿಕ ನೇತೃತ್ವದ ಪಾಶ್ಚಾತ್ಯ ದೇಶಗಳು ಮತ್ತು ಯೂರೋಪಿನ ಬಲಿಷ್ಠ ದೇಶಗಳು ಒಂದಾಗಿ ಉಕ್ರೇನ್ ಬಲಪಡಿಸಿ ಯುದ್ಧದಲ್ಲಿ ರಷ್ಯಾಕ್ಕೆ ಹಿನ್ನಡೆಯಾದ ಪಕ್ಷದಲ್ಲಿ ಆಗಬಹುದಾದ ಒಂದು ದೊಡ್ಡ ಅಪಾಯವನ್ನು ಕಲ್ಪಿಸಿಕೊಳ್ಳಲಾಗಿದೆ. ರಷ್ಯಾ ಸೋಲನ್ನು ಒಪ್ಪಿಕೊಳ್ಳದೆ ಪರಮಾಣು ಅಸ್ತ್ರಗಳನ್ನು ಬಳಸುವ ಸಾಧ್ಯತೆಯನ್ನು ತಳ್ಳಿಹಾಕಲಾಗದು ಎಂಬುದೇ ಕೆಲವು ನಾಯಕರ ಆತಂಕ. ಅಂಥ ಸ್ಥಿತಿ ಬರದಂತೆ ಎಚ್ಚರಿಕೆ ವಹಿಸಬೇಕಾದದ್ದು ತುಂಬಾ ಅಗತ್ಯ ಎಂಬ ಸಲಹೆಗಳೂ ಬಂದಿವೆ. ಯುದ್ಧ ಮುಂದುವರಿಯುವಂತೆ ಮಾಡಿ ರಷ್ಯಾ ಆರ್ಥಿಕವಾಗಿ ದಿವಾಳಿಯಾಗುವಂತೆ ಮಾಡಬೇಕು ಎಂಬ ಸಲಹೆಯೂ ಬಂದಿದೆ. ಆದರೂ ಸಂಧಾನದ ಬಾಗಿಲು ಮುಚ್ಚಬಾರದೆಂಬ, ಈ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆ ಇಡಬೇಕೆಂದು ಸಮ್ಮೇಳನ ಒಮ್ಮತದ ಅಭಿಪ್ರಾಯ ವ್ಯಕ್ತಮಾಡಿದೆ.
ಟರ್ಕಿ ಅಧ್ಯಕ್ಷ ಎರ್ಡೋಗನ್ ಸಂಧಾನ ಪ್ರಯತ್ನ ನಡೆಸಿದ್ದರು. ಈಗ ಅದನ್ನು ಮುಂದುವರಿಸುವ ಸ್ಥಿತಿಯಲ್ಲಿ ಅವರು ಇಲ್ಲ. ದೇಶದಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕಂಪ ಪರಿಹಾರ ಕಾರ್ಯದ ಕಡೆಗೆ ಅವರ ಗಮನ ಹೋಗುವುದು ಅನಿವಾರ್ಯವಾಗಿದೆ. ಅಮೆರಿಕದ ಅಧ್ಯಕ್ಷ ಜೋ ಬಿಡನ್ ರಹಸ್ಯವಾಗಿ ಸಲಹೆಯೊಂದನ್ನು ಪುಟಿನ್‌ಗೆ ನೀಡಿದರೆನ್ನಲಾಗಿದೆ. ಆದರೆ ಪುಟಿನ್ ಅದಕ್ಕೆ ಒಪ್ಪಲಿಲ್ಲವೆಂದೂ ಹೇಳಲಾಗಿದೆ. ಆಕ್ರಮಿತ ಪ್ರದೇಶವನ್ನು ಬಿಟ್ಟುಕೊಡಲು ಪುಟಿನ್ ಸಿದ್ಧವಿಲ್ಲ, ಹಾಗೆಯೇ ಆಕ್ರಮಿತ ಪ್ರದೇಶವನ್ನು ಮರುಪಡೆಯದೆ ರಾಜಿಮಾಡಿಕೊಳ್ಳಲು ಝಲನ್ಸ್ಕಿ ಸಿದ್ಧವಿಲ್ಲ. ಹೀಗಾಗಿ ಯುದ್ಧ ಮುಂದುವರಿದಿದೆ.
ಅತ್ತ ರಷ್ಯಾದ ಅಧ್ಯಕ್ಷ ಪುಟಿನ್ ತಾಳ್ಮೆ ಕಳೆದುಕೊಂಡಂತೆ ಕಾಣುತ್ತಿದ್ದಾರೆ. ಮತ್ತೆ ಮತ್ತೆ ಉಕ್ರೇನ್ ಯುದ್ಧದ ಸೇನಾ ದಂಡನಾಯಕರನ್ನು ಬದಲಾಯಿಸುತ್ತಿದ್ದಾರೆ. ರಷ್ಯಾದ ಅಸ್ತಿತ್ವಕ್ಕೇ ಬೆದರಿಕೆ ಬಂದಿರುವುದರಿಂದ ಉಕ್ರೇನನ್ನು ಸರಿ ದಾರಿಗೆ ತರುವುದು ಅನಿವಾರ್ಯ ಎಂಬ ವಾದವನ್ನು ಪುಟಿನ್ ಜನರ ಮುಂದಿಡುತ್ತಿದ್ದಾರೆ. ಉಕ್ರೇನಿಗೆ ಯುದ್ಧಾಸ್ತ್ರಗಳನ್ನು ಪೂರೈಸುವ ಮೂಲಕ ಅಮೆರಿಕ ಮತ್ತಿತರ ಯೂರೋಪಿನ ದೇಶಗಳು ಯುದ್ಧದಲ್ಲಿ ನೇರವಾಗಿ ಭಾಗವಹಿಸಿದಂತಾಗಿದೆ ಎಂದು ಪುಟಿನ್ ಹೇಳುತ್ತಿದ್ದಾರೆ. ರಷ್ಯಾದ ವಿರುದ್ಧ ನಿಂತಿರುವ ದೇಶಗಳ ಬಲ ಅಡಗಿಸಲು ಪುಟಿನ್ ಹೆಜ್ಜೆ ಇಟ್ಟಿದ್ದಾರೆ. ಅಮೆರಿಕ ವಿರೋಧಿ ದೇಶಗಳಾದ ಇರಾನ್ ಮತ್ತು ಚೀನಾ ಜೊತೆ ಉತ್ತಮ ಬಾಂಧವ್ಯ ಹೊಂದಲು ಪ್ರಯತ್ನಿಸಲಾಗುತ್ತಿದೆ. ಒಂದು ರೀತಿಯಲ್ಲಿ ಅಮೆರಿಕ ನೇತೃತ್ವದ ಕೂಟಕ್ಕೆ ಪರ್ಯಾಯವಾಗಿ ಒಂದು ಕೂಟ ಕಟ್ಟುವ ಪ್ರಯತ್ನ ಇದೆಂದು ಊಹಿಸಲಾಗಿದೆ. ಈ ಕೂಟಕ್ಕೆ ಅಮೆರಿಕ ವಿರೋಽ ದೇಶಗಳಾದ ನಾರ್ತ್ ಕೊರಿಯಾ, ನಿಕಾರಗುವಾ, ಕಾಂಬೋಡಿಯಾ, ವೆನುಜುವೆಲಾವನ್ನು ಸೇರಿಸಿಕೊಳ್ಳುವ ಪ್ರಯತ್ನವೂ ಆರಂಭವಾಗಬಹುದಾದ ಸಾಧ್ಯತೆ ಇದೆ. ಉಕ್ರೇನ್ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಭಾರತವು ರಷ್ಯಾದ ಜೊತೆಗೆ ತನ್ನ ಎಂದಿನ ಬಾಂಧವ್ಯವನ್ನು ಮುಂದುವರಿಸಿದ್ದು ಅಮೆರಿಕ ನೇತೃತ್ವದ ಗುಂಪಿಗೆ ಅಂದರೆ ರಷ್ಯಾ ವಿರೋಽ ಮಿಲಿಟರಿ ಗುಂಪಿಗೆ ಸೇರಿಲ್ಲ. ಭಾರತಕ್ಕೆ ಇದು ಬಹು ಇಕ್ಕಟ್ಟಿನ ಸ್ಥಿತಿ. ಎಚ್ಚರಿಕೆಯಿಂದ ಪರಿಸ್ಥಿತಿಯನ್ನು ನಿಭಾಯಿ ಸಬೇಕಾಗುತ್ತದೆ.
ಈಗ ಒಂದು ರೀತಿಯಲ್ಲಿ 2ನೆಯ ಮಹಾಯುದ್ಧದ ನಂತರ ನಿರ್ಮಾಣವಾದ ಶೀತಲ ಯುದ್ಧದ ಕಾಲ ಮರು ಕಳಿಸುವ ಸೂಚನೆಗಳು ಕಾಣುತ್ತಿವೆ. ಅಂಥ ದಿನಗಳು ಮತ್ತೆ ಬರದಂತೆ ನೋಡಿಕೊಳ್ಳುವುದು ರಷ್ಯಾ ಅಂತೆಯೇ ಅಮೆ ರಿಕ ಮತ್ತು ಯುರೋಪಿನ ಬಲಿಷ್ಠ ದೇಶಗಳ ಜವಾಬ್ದಾರಿ.ಉಕ್ರೇನ್ ದೇಶದ ಮೇಲೆ ರಷ್ಯಾ ಮಿಲಿಟರಿ ದಾಳಿ ಆರಂಭಿಸಿ ಫೆಬ್ರವರಿ 24ಕ್ಕೆ ಒಂದು ವರ್ಷ ಆಗಲಿದೆ. ಈ ಒಂದು ವರ್ಷದಲ್ಲಿ ಉಕ್ರೇನ್‌ಗೆ ಆಗಿರುವ ಹಾನಿ ಅಷ್ಟಿಷ್ಟಲ್ಲ. ದೇಶದ ಮೂಲಭೂತ ಸೌಲಭ್ಯಗಳು, ಇಂಧನ ಉತ್ಪಾದನೆ ಮತ್ತು ಪೂರೈಕೆ ಸ್ಥಾವರಗಳು ನಾಶವಾಗಿವೆ. ಸಾವಿರಾರು ಉಕ್ರೇನ್ ಯೋಧರು ಸತ್ತಿದ್ದಾರೆ. ಲಕ್ಷಾಂತರ ಜನರು ವಲಸೆ ಹೋಗಿದ್ದಾರೆ. ಇಡೀ ದೇಶದ ಜನರ ಜೀವನ ಅಸ್ತವ್ಯಸ್ತವಾಗಿದೆ. ಆದರೂ ರಷ್ಯಾದ ಮಿಲಿಟರಿಗೆ ಉಕ್ರೇನ್ ಜನರ ಹೋರಾಟದ ಕಿಚ್ಚನ್ನು ನಾಶ ಮಾಡಲು ಸಾಧ್ಯವಾಗಿಲ್ಲ.
ಉಕ್ರೇನ್ ಸೇನೆ ನೇರವಾಗಿ ರಷ್ಯಾದ ಪ್ರಮುಖ ನಗರಗಳ ಮೇಲೆ ಇನ್ನೂ ಮಿಲಿಟರಿ ದಾಳಿ ನಡೆಸಿಲ್ಲ. ಉಕ್ರೇನ್ ಬಳಿ ದೂರಗಾಮಿ ಕ್ಷಿಪಣಿಗಳು ಇಲ್ಲ. ಇದ್ದಿದ್ದರೆ ಬಹುಶಃ ಈ ವೇಳೆಗೆ ರಷ್ಯಾದ ಮುಖ್ಯ ನಗರಗಳ ಮೇಲೂ ಬಾಂಬ್ ದಾಳಿ ನಡೆದಿರುತ್ತಿತ್ತು. ಆದ್ದರಿಂದ ರಷ್ಯಾಕ್ಕೆ ಯುದ್ಧ ವಿನಾಶದ ಅನುಭವ ಆಗಿಲ್ಲ. ಆದರೆ ಅತಿಕ್ರಮಣದ ಸಂದರ್ಭದಲ್ಲಿ ಉಕ್ರೇನ್ ನಡೆಸಿದ ಪ್ರತಿ ದಾಳಿಯಲ್ಲಿ ರಷ್ಯಾದ ಸುಮಾರು 2 ಲಕ್ಷ ಯೋಧರು ಸತ್ತಿದ್ದಾರೆಂದು ವಿದೇಶೀ ಮೂಲಗಳು ಹೇಳುತ್ತಿವೆ.
ಕಳೆದ ವರ್ಷ ದಾಳಿ ಆರಂಭಿಸಿದಾಗ ಕೆಲವೇ ದಿನಗಳಲ್ಲಿ ಉಕ್ರೇನ್ ಶರಣಾಗುವುದೆಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಂಬಿದ್ದರು. ಆದರೆ ಒಂದು ವರ್ಷವಾಗುತ್ತ್ತಾ ಬಂದರೂ ಉಕ್ರೇನ್ ಶರಣಾಗಿಲ್ಲ. ಪ್ರತಿ ದಿನ, ಪ್ರತಿ ಕ್ಷಣ ರಷ್ಯಾ ಆಕ್ರಮಣಕ್ಕೆ ಉಕ್ರೇನ್ ಪ್ರತಿರೋಧ ಒಡ್ಡುತ್ತ ಬಂದಿದೆ. ಪುಟಿನ್‌ಗೆ ಆರಂಭದಲ್ಲಿದ್ದಂಥ ವಿಶ್ವಾಸ ಈಗ ಇದ್ದಂತೆ ಕಾಣುತ್ತಿಲ್ಲ. ಆದರೆ ಸರ್ವಾಧಿಕಾರಿಗಳು ಬೇಗನೆ ಬದಲಾಗುವುದಿಲ್ಲ. ರಷ್ಯಾ ವಿರುದ್ಧ ಯುದ್ಧ ಮಾಡುತ್ತಿರುವ ಉಕ್ರೇನ್‌ಗೆ ಅಮೆರಿಕ ಸೇರಿದಂತೆ ಪಶ್ಚಿಮ ದೇಶಗಳು ಮತ್ತು ಯೂರೋಪಿನ ಪ್ರಮುಖ ದೇಶಗಳು ಕ್ರಮೇಣ ಬಹಿರಂಗವಾಗಿಯೇ ಬೆಂಬಲ ವ್ಯಕ್ತಮಾಡುತ್ತಿವೆ. ಅತ್ಯಾಧುನಿಕ ಯುದ್ಧಾಸ್ತ್ರಗಳನ್ನು ಕೊಡುತ್ತಿವೆ. ಟ್ಯಾಂಕರ್‌ಗಳಿಂದ ಹಿಡಿದು ಯುದ್ಧ ವಿಮಾನಗಳವರೆಗೆ ಯುದ್ಧಾಸ್ತ್ರಗಳು ಉಕ್ರೇನ್ ತಲುಪುತ್ತಿವೆ. (ಯಾವ ದೇಶವೂ ದೂರಗಾಮಿ ಕ್ಷಿಪಣಿಗಳನ್ನು ನೀಡುತ್ತಿಲ್ಲ. ಕೊಟ್ಟರೆ ಯುದ್ಧ ತೀವ್ರ ಸ್ವರೂಪ ಪಡೆಯುತ್ತದೆ ಎನ್ನುವ ಅಭಿಪ್ರಾಯ ಇದೆ.) ಉಕ್ರೇನ್ ಯೋಧರಿಗೆ ಅಗತ್ಯ ತರಬೇತಿಯನ್ನೂ ನೀಡಲಾಗುತ್ತಿದೆ.
ಉಕ್ರೇನ್ ಅಧ್ಯಕ್ಷ ವ್ಲಾಡಿಮೇರ್ ಝಲನ್ಸ್ಕ್ಕಿ ಅಮೆರಿಕ ಸೇರಿದಂತೆ ವಿಶ್ವದ ಹಲವು ಶಕ್ತಿರಾಷ್ಟ್ರಗಳಿಗೆ ಭೇಟಿ ನೀಡಿ ಯುದ್ಧಾಸ್ತ್ರಗಳನ್ನು ಎಷ್ಟು ಬೇಗ ಪೂರೈಸಿದರೆ ಅಷ್ಟು ಬೇಗ ರಷ್ಯಾವನ್ನು ಸೋಲಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಖುದ್ದು ಭೇಟಿ ನೀಡಲಾಗದ ದೇಶಗಳ ನಾಯಕರ ಜೊತೆ ವಿಡಿಯೋ ಸಂಭಾಷಣೆ ನಡೆಸಿ ಬೆಂಬಲ ಕೋರಿದ್ದಾರೆ. ಅವರ ಪ್ರಯತ್ನ ಸಾಕಷ್ಟು ಯಶಸ್ಸು ಕಂಡಿದೆ. ರಷ್ಯಾದ ದಾಳಿಗೆ ಉಕ್ರೇನ್ ಕೆಲವೇ ದಿನಗಳಲ್ಲಿ ಕುಸಿಯುತ್ತದೆ ಎಂದು ತಿಳಿದಿದ್ದ ದೇಶಗಳು ಈಗ ತಮ್ಮ ನಿಲುವುಗಳನ್ನು ಬದಲಾಯಿಸಿಕೊಂಡಿವೆ. ರಷ್ಯಾವನ್ನು ಮುಗಿಸಲು ಉಕ್ರೇನ್ ಸರಿಯಾದ ದೇಶ ಎಂಬ ಭಾವನೆ ವ್ಯಕ್ತಪಡಿಸುತ್ತಿವೆ.
ಉಕ್ರೇನ್ ಬೆಂಬಲಿಸಿದ ಜರ್ಮನಿ ಮತ್ತು ಯೂರೋಪಿನ ಇತರ ದೇಶಗಳಿಗೆ ಪೂರೈಸಲಾಗುತ್ತಿದ್ದ ತೈಲ ಮತ್ತು ಅನಿಲದ ಪ್ರಮಾಣವನ್ನು ರಷ್ಯಾ ತಗ್ಗಿಸಿ ದೊಡ್ಡ ಬಿಕ್ಕಟ್ಟನ್ನೇ ಸೃಷ್ಟಿಸಿತು. ಚಳಿಗಾಲ ಬರುತ್ತಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಯೂರೋಪ್‌ಗೆ ಆಘಾತಕಾರಿಯಾಗಿತ್ತು. ನಾರ್ವೆ, ಚೀನಾ, ಅಮೆರಿಕ ಮುಂತಾದ ದೇಶಗಳಿಂದ ಹಠಾತ್ತನೆ ತೈಲ ಮತ್ತು ಅನಿಲ ಪಡೆಯುವ ಸ್ಥಿತಿ ಬಂತು. ಅದೃಷ್ಟವಶಾತ್ ಚಳಿಗಾಲ ಭೀಕರ ಎನ್ನುವಷ್ಟು ಪ್ರಮಾಣದಲ್ಲಿ ಬರಲಿಲ್ಲ. ಹೀಗಾಗಿ ನಿರೀಕ್ಷಿತ ಪ್ರಮಾಣದಲ್ಲಿ ಇಂಧನ ಬಿಕ್ಕಟ್ಟು ಯೂರೋಪಿನಲ್ಲಿ ಉಂಟಾಗಲಿಲ್ಲ. ರಷ್ಯಾದ ತೈಲ, ಅನಿಲ ಇಲ್ಲದೆ ಪರ್ಯಾಯ ಮೂಲಗಳ ಮೂಲಕ ಪರಿಸ್ಥಿತಿ ನಿಭಾಯಿಸುವ ವಿಶ್ವಾಸ ಯೂರೋಪ್ ದೇಶಗಳಲ್ಲಿ ಈಗ ಮೂಡಿದೆ. ಹೀಗಾಗಿ ಉಕ್ರೇನ್ ಪರವಾದ ನಿಲುವು ಈಗ ಯೂರೋಪಿನಲ್ಲಿ ಗಟ್ಟಿಗೊಂಡಿದೆ.
ಜರ್ಮನಿಯ ಮ್ಯೂನಿಕ್ ನಗರದಲ್ಲಿ ಇದೀಗ ತಾನೆ ನಡೆದ ಅಂತಾರಾಷ್ಟ್ರೀಯ ಭದ್ರತಾ ಸಮ್ಮೇಳನದಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ನೋಡಿದರೆ ಉಕ್ರೇನ್ ದೇಶ ರಷ್ಯಾವನ್ನು ಮಣಿಸಬಲ್ಲದು ಎಂದೆನ್ನಿಸದೆ ಇರದು. ಐವತ್ತಕ್ಕೂ ಹೆಚ್ಚು ದೇಶಗಳ ನಾಯಕರು ಭಾಗವಹಿಸಿರುವ ಈ ಸಮ್ಮೇಳನ ಮೂಲಭೂತವಾಗಿ ಶಾಂತಿ ಸ್ಥಾಪನೆಯತ್ತ ಯೋಚಿಸಬೇಕಿತ್ತು. ಆದರೆ ಈಗ ಎಲ್ಲರೂ ಒಂದಾಗಿ ಉಕ್ರೇನ್‌ಗೆ ಅಗತ್ಯ ಯುದ್ಧಾಸ್ತ್ರಗಳನ್ನು ಕೊಡಬೇಕು ಎಂಬ ಒತ್ತಾಯ ನ್ಯಾಟೋ ರಾಷ್ಟ್ರಗಳಿಂದಲೇ ಬಂದಿದೆ. ಅವರ ಪ್ರಕಾರ ಉಕ್ರೇನ್ ಸೋತರೆ ಅದನ್ನು ಬೆಂಬಲಿಸಿದ ಎಲ್ಲ ದೇಶಗಳೂ ಭದ್ರತೆಯ ಭೀತಿ ಎದುರಿಸಬೇಕಾಗುತ್ತದೆ. ಜಗತ್ತು ಯಾವುದೇ ಬೆದರಿಕೆಯಿಲ್ಲದೆ ಇರಬೇಕಾದರೆ ರಷ್ಯಾ ಸೋಲಬೇಕು ಎಂಬ ಒತ್ತಾಯ ಕೇಳಿಬಂದಿದೆ. ಈ ಬದಲಾವಣೆ ನೋಡಿದರೆ ಯುದ್ಧ ನಿಲ್ಲುವ ಯಾವುದೇ ಸೂಚನೆಗಳು ಅಥವಾ ಕದನ ವಿರಾಮದ ಯಾವುದೇ ಪ್ರಯತ್ನಗಳು ನಡೆಯುವ ಸಾಧ್ಯತೆಯೇ ಇಲ್ಲವಾಗಿದೆ. ಆದರೆ ಕೆಲವು ದೇಶಗಳು ಈ ರೀತಿಯ ಆಲೋಚನೆಯನ್ನು ಒಪ್ಪುವುದಿಲ್ಲ. ಅಮೆರಿಕ ನೇತೃತ್ವದ ಪಾಶ್ಚಾತ್ಯ ದೇಶಗಳು ಮತ್ತು ಯೂರೋಪಿನ ಬಲಿಷ್ಠ ದೇಶಗಳು ಒಂದಾಗಿ ಉಕ್ರೇನ್ ಬಲಪಡಿಸಿ ಯುದ್ಧದಲ್ಲಿ ರಷ್ಯಾಕ್ಕೆ ಹಿನ್ನಡೆಯಾದ ಪಕ್ಷದಲ್ಲಿ ಆಗಬಹುದಾದ ಒಂದು ದೊಡ್ಡ ಅಪಾಯವನ್ನು ಕಲ್ಪಿಸಿಕೊಳ್ಳಲಾಗಿದೆ. ರಷ್ಯಾ ಸೋಲನ್ನು ಒಪ್ಪಿಕೊಳ್ಳದೆ ಪರಮಾಣು ಅಸ್ತ್ರಗಳನ್ನು ಬಳಸುವ ಸಾಧ್ಯತೆಯನ್ನು ತಳ್ಳಿಹಾಕಲಾಗದು ಎಂಬುದೇ ಕೆಲವು ನಾಯಕರ ಆತಂಕ. ಅಂಥ ಸ್ಥಿತಿ ಬರದಂತೆ ಎಚ್ಚರಿಕೆ ವಹಿಸಬೇಕಾದದ್ದು ತುಂಬಾ ಅಗತ್ಯ ಎಂಬ ಸಲಹೆಗಳೂ ಬಂದಿವೆ. ಯುದ್ಧ ಮುಂದುವರಿಯುವಂತೆ ಮಾಡಿ ರಷ್ಯಾ ಆರ್ಥಿಕವಾಗಿ ದಿವಾಳಿಯಾಗುವಂತೆ ಮಾಡಬೇಕು ಎಂಬ ಸಲಹೆಯೂ ಬಂದಿದೆ. ಆದರೂ ಸಂಧಾನದ ಬಾಗಿಲು ಮುಚ್ಚಬಾರದೆಂಬ, ಈ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆ ಇಡಬೇಕೆಂದು ಸಮ್ಮೇಳನ ಒಮ್ಮತದ ಅಭಿಪ್ರಾಯ ವ್ಯಕ್ತಮಾಡಿದೆ.
ಟರ್ಕಿ ಅಧ್ಯಕ್ಷ ಎರ್ಡೋಗನ್ ಸಂಧಾನ ಪ್ರಯತ್ನ ನಡೆಸಿದ್ದರು. ಈಗ ಅದನ್ನು ಮುಂದುವರಿಸುವ ಸ್ಥಿತಿಯಲ್ಲಿ ಅವರು ಇಲ್ಲ. ದೇಶದಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕಂಪ ಪರಿಹಾರ ಕಾರ್ಯದ ಕಡೆಗೆ ಅವರ ಗಮನ ಹೋಗುವುದು ಅನಿವಾರ್ಯವಾಗಿದೆ. ಅಮೆರಿಕದ ಅಧ್ಯಕ್ಷ ಜೋ ಬಿಡನ್ ರಹಸ್ಯವಾಗಿ ಸಲಹೆಯೊಂದನ್ನು ಪುಟಿನ್‌ಗೆ ನೀಡಿದರೆನ್ನಲಾಗಿದೆ. ಆದರೆ ಪುಟಿನ್ ಅದಕ್ಕೆ ಒಪ್ಪಲಿಲ್ಲವೆಂದೂ ಹೇಳಲಾಗಿದೆ. ಆಕ್ರಮಿತ ಪ್ರದೇಶವನ್ನು ಬಿಟ್ಟುಕೊಡಲು ಪುಟಿನ್ ಸಿದ್ಧವಿಲ್ಲ, ಹಾಗೆಯೇ ಆಕ್ರಮಿತ ಪ್ರದೇಶವನ್ನು ಮರುಪಡೆಯದೆ ರಾಜಿಮಾಡಿಕೊಳ್ಳಲು ಝಲನ್ಸ್ಕಿ ಸಿದ್ಧವಿಲ್ಲ. ಹೀಗಾಗಿ ಯುದ್ಧ ಮುಂದುವರಿದಿದೆ.
ಅತ್ತ ರಷ್ಯಾದ ಅಧ್ಯಕ್ಷ ಪುಟಿನ್ ತಾಳ್ಮೆ ಕಳೆದುಕೊಂಡಂತೆ ಕಾಣುತ್ತಿದ್ದಾರೆ. ಮತ್ತೆ ಮತ್ತೆ ಉಕ್ರೇನ್ ಯುದ್ಧದ ಸೇನಾ ದಂಡನಾಯಕರನ್ನು ಬದಲಾಯಿಸುತ್ತಿದ್ದಾರೆ. ರಷ್ಯಾದ ಅಸ್ತಿತ್ವಕ್ಕೇ ಬೆದರಿಕೆ ಬಂದಿರುವುದರಿಂದ ಉಕ್ರೇನನ್ನು ಸರಿ ದಾರಿಗೆ ತರುವುದು ಅನಿವಾರ್ಯ ಎಂಬ ವಾದವನ್ನು ಪುಟಿನ್ ಜನರ ಮುಂದಿಡುತ್ತಿದ್ದಾರೆ. ಉಕ್ರೇನಿಗೆ ಯುದ್ಧಾಸ್ತ್ರಗಳನ್ನು ಪೂರೈಸುವ ಮೂಲಕ ಅಮೆರಿಕ ಮತ್ತಿತರ ಯೂರೋಪಿನ ದೇಶಗಳು ಯುದ್ಧದಲ್ಲಿ ನೇರವಾಗಿ ಭಾಗವಹಿಸಿದಂತಾಗಿದೆ ಎಂದು ಪುಟಿನ್ ಹೇಳುತ್ತಿದ್ದಾರೆ. ರಷ್ಯಾದ ವಿರುದ್ಧ ನಿಂತಿರುವ ದೇಶಗಳ ಬಲ ಅಡಗಿಸಲು ಪುಟಿನ್ ಹೆಜ್ಜೆ ಇಟ್ಟಿದ್ದಾರೆ. ಅಮೆರಿಕ ವಿರೋಧಿ ದೇಶಗಳಾದ ಇರಾನ್ ಮತ್ತು ಚೀನಾ ಜೊತೆ ಉತ್ತಮ ಬಾಂಧವ್ಯ ಹೊಂದಲು ಪ್ರಯತ್ನಿಸಲಾಗುತ್ತಿದೆ. ಒಂದು ರೀತಿಯಲ್ಲಿ ಅಮೆರಿಕ ನೇತೃತ್ವದ ಕೂಟಕ್ಕೆ ಪರ್ಯಾಯವಾಗಿ ಒಂದು ಕೂಟ ಕಟ್ಟುವ ಪ್ರಯತ್ನ ಇದೆಂದು ಊಹಿಸಲಾಗಿದೆ. ಈ ಕೂಟಕ್ಕೆ ಅಮೆರಿಕ ವಿರೋಧಿ ದೇಶಗಳಾದ ನಾರ್ತ್ ಕೊರಿಯಾ, ನಿಕಾರಗುವಾ, ಕಾಂಬೋಡಿಯಾ, ವೆನುಜುವೆಲಾವನ್ನು ಸೇರಿಸಿಕೊಳ್ಳುವ ಪ್ರಯತ್ನವೂ ಆರಂಭವಾಗಬಹುದಾದ ಸಾಧ್ಯತೆ ಇದೆ. ಉಕ್ರೇನ್ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಭಾರತವು ರಷ್ಯಾದ ಜೊತೆಗೆ ತನ್ನ ಎಂದಿನ ಬಾಂಧವ್ಯವನ್ನು ಮುಂದುವರಿಸಿದ್ದು ಅಮೆರಿಕ ನೇತೃತ್ವದ ಗುಂಪಿಗೆ ಅಂದರೆ ರಷ್ಯಾ ವಿರೋಧಿ ಮಿಲಿಟರಿ ಗುಂಪಿಗೆ ಸೇರಿಲ್ಲ. ಭಾರತಕ್ಕೆ ಇದು ಬಹು ಇಕ್ಕಟ್ಟಿನ ಸ್ಥಿತಿ. ಎಚ್ಚರಿಕೆಯಿಂದ ಪರಿಸ್ಥಿತಿಯನ್ನು ನಿಭಾಯಿ ಸಬೇಕಾಗುತ್ತದೆ.
ಈಗ ಒಂದು ರೀತಿಯಲ್ಲಿ ೨ನೆಯ ಮಹಾಯುದ್ಧದ ನಂತರ ನಿರ್ಮಾಣವಾದ ಶೀತಲ ಯುದ್ಧದ ಕಾಲ ಮರು ಕಳಿಸುವ ಸೂಚನೆಗಳು ಕಾಣುತ್ತಿವೆ. ಅಂಥ ದಿನಗಳು ಮತ್ತೆ ಬರದಂತೆ ನೋಡಿಕೊಳ್ಳುವುದು ರಷ್ಯಾ ಅಂತೆಯೇ ಅಮೆ ರಿಕ ಮತ್ತು ಯುರೋಪಿನ ಬಲಿಷ್ಠ ದೇಶಗಳ ಜವಾಬ್ದಾರಿ.
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…