ಎಡಿಟೋರಿಯಲ್

ವಾರೆ ನೋಟ : ರೆಂಟು- ಕರೆಂಟಿನ ಪೇಸಿಎಂ- ಪೇಟಿಎಂ ಏಟು- ಎದುರೇಟು

ಕರೆಂಟು ಖುಷಿಯಿಂದ ಯದ್ವಾತದ್ವಾ ಕುಣಿಯತೊಡಗಿತ್ತು. ಕರೆಂಟಿನ ಕುಣಿತ ನೋಡಿ ಶಾಕ್ ಆದ ರೆಂಟು ಸೈಲೆಂಟಾಗಿಯೇ ನೋಡ್ತಾ ಇತ್ತು. ಕುಣಿತಾ ಕುಣಿತಾ ಸುಸ್ತಾದ ಕರೆಂಟು ಕುಸಿದು ಬಿತ್ತು.

ಕರೆಂಟಿನ ಬಳಿ ಹೋದ ರೆಂಟು, ‘ಏನಪಾ ಸಿಂಗಲ್ ಫೇಸ್ ಆಗಿಬಿಟ್ಟೆನೋ? ಪಟ್ಟಂತಾ ಬಿದ್ದು ಬಿಟ್ಟೆಯಲ್ಲಾ? ಪೆಟ್ಟಾಯ್ತಾ?’ ಅಂತಾ ಕೇಳಿತು.
‘ಲೇ, ರೆಂಟು, ನೀನು ಸೈಲೆಂಟು, ನಾನು ಡೈನಾಮೆಂಟು, ನಂಗೂ ನಿಂಗೂ ಆಗಿಬರೊಲ್ಲ .. ಹೋಗು ರಾಜಾ ಹೋಗು ಆಟ ಆಡ್ಕೋ ಹೋಗು..’ ಅಂತಾ ಕಿಂಡಲ್ ಮಾಡಿತು.
‘ಲೇ ಕರೆಂಟು ಇವತ್ತುಂದಿನಾ ನಿನ್ನ ರೇಟು ಏರಿದೆ ಅಂತ ಆಕಾಶ ಏರೋಕೆ ಹೋಗಬೇಡ, ನೀನ್ ಎಂತಾ ದುಷ್ಟ ಅಂದ್ರೆ, ಆಕಾಶದಲ್ಲಿ ಹೋಗೋ ಏರೋಪ್ಲೇನಿಗೆ ತಗುಲಿದ್ರೆ, ನೀನ್ ಸಾಯಲ್ಲ, ಏರೋಪ್ಲೇನಲ್ಲಿ ಇರೊರೆಲ್ಲ ಸಾಯ್ತಾರೆ… ನಿನ್ ಸಾವಾಸ ಯಾರಿಗೆ ಬೇಕಾಗಿದೆ?’ ಅಂತ ಟಾಂಗ್ ಕೊಟ್ಟಿತು.
‘ಲೇ ರೆಂಟು, ನಿಂದು ವರ್ಷಕ್ಕೊಂದಿನಾ ಹಬ್ಬ ಕಣಮ್ಮಾ… ಅದು ಬರೀ ಫೈವೇ ಪರ್ಸೆಂಟು.. ನಮ್ದೀಗ ಹಂಗೆಲ್ಲ ಇಲ್ಲಮ್ಮಾ.. ನಮ್ ರೇಟು ಯಾವಾಗ ಬೇಕಾದ್ರೂ ಏರಬಹುದು.. ನಾವು ಕಾಲಿಟ್ಟಿದ್ದೇ ದಾರಿ.. ಏರ್ಸಿದ್ದೇ ರೇಟು ತಿಳ್ಕಾ..’ ಅಂತಾ ಕರೆಂಟು ಆವಾಜು ಹಾಕಿತು.
‘ಗೊತ್ತು ಬಿಡಲೇ, ನಿನ್ ಯಾವಸೀಮೆ ದೊಣ್ಣೆನಾಯ್ಕ ಅಂತಾ . ಬೇಸಿಕಲ್ಲಿ ನೀನು ಡಿಸ್ಕ್ರಿಮಿನೇಷನ್ ಫೆಲೋ, ನಿಂಗೆ ಒಂದು ರೇಟು ಅಂತಾ ಇಲ್ಲಾ, ಒಂದು ನಿಯತ್ತು ಅಂತಾ ಇಲ್ಲಾ… ೫೦ ಯೂನಿಟ್ಟೊರಿಗೆ ಒಂದು ರೇಟು, ೨೦೦ ಯೂನಿಟ್ಟೋರಿಗೆ ಒಂದು ರೇಟು.. ಅದ್ಯಾವ ಸೀಮೆಯೋನೋ ನೀನು?’ ರೆಂಟು ಮರುಆವಾಜು ಹಾಕಿತು.
ಸೈಲೆಂಟಾಗಿದ್ದ ರೆಂಟು ವಾಯ್ಲೆಂಟ್ ಆಗ್ತಾ ಇರೋದು ನೋಡಿ ಶಾಕ್ ಆದ ಕರೆಂಟಿಗೆ, ಏನು ಹೇಳಬೇಕೆಂದು ಗೊತ್ತಾಗದೇ ತಬ್ಬಿಬ್ಬಾಯ್ತು. ಫ್ಯೂಸೇ ಹೋದಂತಾಗಿ ಮಾತೇ ಬರಲಿಲ್ಲ.
ಕರೆಂಟಿನ ಸ್ಥಿತಿ ನೋಡಿ ಕೊಂಚ ಕೂಲಾದ ರೆಂಟು, ‘ನೋಡಮ್ಮ ಕರೆಂಟು, ಇವತ್ತುಂದಿನಾ ನೀನ್ ಮಾಡ್ತಾ ಇರೋದು ಸರಿಯಲ್ಲ. ವರ್ಷಕ್ಕೆ ಅದೆಷ್ಟು ಬಾರಿ ನಿನ್ ರೇಟುನ್ನಾ ನೀನೇ ಏರುಸ್ಕೊತಿಯೋ? ಪಾಪ ಜನಾ ರೇಷನ್ನಿಗೆ ದುಡ್ಡು ಸುರಿತಾರೋ? ಕರೆಂಟು ಬಿಲ್ಲಿಗೆ ದುಡ್ಡು ಸುರೀತಾರೋ? ಎಲ್ಲಾ ಕಡೆ ನೀನ್ ತಳಿಗಳೇ ಇವೆ. ಹಾಲು, ಪೆಟ್ರೋಲ್ಲು, ಡೀಸೆಲ್ಲು, ಅಕ್ಕಿ, ರಾಗಿ, ಎಣ್ಣೆ, ಎಲ್ಲಾ ರೇಟು ನಿನ್ ಥರಾನೇ ಬೇಕಾಬಿಟ್ಟಿ ಏರ್ತಾ ಇದಾವೆ.. ಪಾಪ ಆ ಉಪ್ಪಿಗೆ ಮಾತ್ರ ಒಂಚೂರು ಮಾನವೀಯತೆ ಇದೆ. ಕಳೆದ ವರ್ಷ ಏರಿದ್ದು, ಇನ್ನೂ ಹಾಗೆ ಇದೆ. ಆ ಉಪ್ಪಿನ ನಿಯತ್ತು ನಿಂಗೆ, ನಿನ್ ಥರದವರಿಗೆ ಇಲ್ಲಾ ಬಿಡು. ನನ್ನಂತವರಲ್ಲಿ ಮಾತ್ರ ಇರೋದು… ಅದುಕ್ಕೆ ಇವತ್ತುಂದಿನಾ ಜನಾ ಉಪ್ಪಿನ ಬಗ್ಗೆ ಗೌರವ ಇಟ್ಕೊಂಡಿದ್ದಾರೆ’ ಅಂತಾ ರೆಂಟು ಹೇಳಿತು.
ಇಷ್ಟರಲ್ಲಾಗಲೇ ಫ್ಯೂಸನ್ನು ಸರಿಮಾಡಿಕೊಂಡಿದ್ದ ಕರೆಂಟು ಮತ್ತೆ ಹಳೆಯ ಧಾಟಿಯಲ್ಲೇ, ‘ಲೇ ರೆಂಟು, ನೀನು ವರ್ಷಕ್ಕೊಮ್ಮೆ ಐದು ಪರ್ಸೆಂಟು ಏರ್ತಿಯಾ, ಆದ್ರೆ, ನೀನ್ ತಗೊಂಡಿರೋ ಅಡ್ವಾನ್ಸು, ಆ ಅಡ್ವಾನ್ಸಿಗೆ ಬರೋ ಇಂಟರೆಸ್ಟು ಇವುನ್ನೆಲ್ಲ ಮರೀತಿಯಾ..
ಪಾಪ ಜನ ಯಾಕಲೇ ೧೦ ತಿಂಗಳ ಅಡ್ವಾನ್ಸ್ ಕೊಡಬೇಕು? ಅಕ್ಚುಯಲಿ ಅನ್ಯಾಯ ಆಗ್ತಾ ಇರೋದೇ ನಿನ್ನಿಂದ, ಎರಡು ತಿಂಗಳ ಅಡ್ವಾನ್ಸ್ ಮಾತ್ರ ತಗೋಬೇಕು ಅಂತಾ ಕಾನೂನೇ ಇದೆ. ಅಂತಾದ್ರಲ್ಲಿ ಹತ್ ತಿಂಗ್ಳು ಅಡ್ವಾನ್ಸ್ ತಗೋಂಡು ಜನರ ಪ್ರಾಣ ಹಿಂಡ್ತಿಯಾ… ಮೇಲೆ ಮೇಲೆ ಭಾರಿ ಸಭ್ಯಸ್ಥನ ಥರಾ ಹೇಳ್ತೀಯಾ.. ಅದೂ ನಿನ್ನುನ್ನಾ ನೀನೇ ಉಪ್ಪಿಗೆ ಹೋಲಿಸಿಕೊಂಡು ನಿನ್ನ ಪಾಪಕಾರ್ಯಗಳನ್ನು ಪ್ರಾಯಶ್ಚಿತ ಇಲ್ಲದೇ ಶುದ್ಧ ಆಗೋಕೆ ನೋಡ್ತೀಯಾ?’ ಅಂತಾ ಕೆಣಕಿತು.
‘ಲೇ ಕರೆಂಟು, ಬೇರೆಯವರ ಪಾಪಕಾರ್ಯಗಳನ್ನ ದೊಡ್ಡದಾಗಿ ಮಾಡಿದರೆ ನಿನ್ನ ದೊಡ್ಡದಾದ ಪಾಪಕಾರ್ಯಗಳು ಚಿಕ್ಕದಾಗಿ ಬಿಡುತ್ತವೆ ಅಂದ್ಕೊಬೇಡಾ ನಿನ್ ಪಾಪಕಾರ್ಯಗಳನ್ನ ಇವತ್ತುಂದಿನಾ ಜನಾ ಬೀದಿ ಬೀದಿಲಿ ಬಯಲಿಗೆ ಎಳೀತಿದಾರೆ.. ಎಷ್ಟು ಅಂತಾ ಕರೆಂಟು ಬಿಲ್ಲು ಕಟ್ಟೋದು ಅಂತಾ ಕೇಳ್ತಾ ಇದ್ದಾರೆ… ನೀನು ಹಿಂಗೆ ದೌರ್ಜನ್ಯ ಮಾಡ್ತಾ ಇದ್ರೆ ಜನರ ಜತೆ ಸೇರಿ ಇ ಅಂತಾ ಕ್ಯೂಆರ್ ಕೋಡ್ ಪೋಸ್ಟರ್ ಹಾಕಿ ಬಿಡ್ತಿನಿ ಹುಷಾರ್…’ ಅಂತಾ ಬೆದರಿಕೆ ಹಾಕಿತು.
ಪೇಸಿಎಂ ಪದ ಕೇಳಿ ಶಾಕ್ ಹೊಡೆದಂತಾದ ಕರೆಂಟು, ‘ಲೇ ದೊಡ್ಡವರ ವಿಷಯವನ್ನಾ ನಮ್ಮ ನಡುವೆ ಎಳೆದು ತರಬೇಡಾ ಪ್ಲೀಸ್..’ ಎಂದು ಮೆಲುವಾಗಿ ಹೇಳಿತು.
ನೋಡಪಾ ಕರೆಂಟು, ನಂಗೂ ಗೊತ್ತಿದೆ, ಇವತ್ತುಂದಿನಾ ದೊಡ್ಡದೊಡ್ಡವರ ಬಗ್ಗೆ ನಾವು ಮಾತನಾಡಬಾರದು ಅಂತ. ಅವರ ಬಗ್ಗೆ ಮಾತನಾಡಿದರೆ ಯಾವುದಾದ್ರೂ ಕೇಸು ಜಡಿದು ಜನಸಾಮಾನ್ಯರನ್ನಾ ಒಳುಕ್ಕೆ ಹಾಕುವಂತೆ ನಮ್ಮುನ್ನೂ ಒಳಕ್ಕೆ ಹಾಕುವ ಅಪಾಯ ಇದೆ. ಈ ಅಪಾಯಕ್ಕೆಲ್ಲ ಹೆದರಿ ಮಾತೇ ಆಡದೇ ಇರೋಕ್ಕೇ ಸಾಧ್ಯಾನೇ? ಇವತ್ತುಂದಿನಾ ದೇಶದಲ್ಲಿ ಏನಾಗ್ತಾ ಇದೆ ಅನ್ನೋ ವಿಷಯಾನಾ ನಿನ್ ಮುಂದೆ ಇಡ್ತಾ ಇದ್ದೀನಿ… ಅದುನ್ನಾ ನೀನು ದೊಡ್ಡವರ ಬಗ್ಗೆಯೇ ಹೇಳ್ತಾ ಇದ್ದೀನಿ ಅಂತಾ ಆರೋಪ ಮಾಡೋದು ಸರಿಯಲ್ಲ ಗೊತ್ತಾಯ್ತಾ? ಎಂದಿತು ರೆಂಟು.
ಮತ್ತೆ ಮಾತಿಗಿಳಿದ ರೆಂಟು ಹೇಳಿತು-
‘ಲೇ ಕರೆಂಟು, ಬರೀ ಪೇಸಿಎಂ ಅಂದಿದ್ದುಕ್ಕೆ ಹೆದ್ರುಬಿಟ್ಟಲ್ಲಾ.. ಅಷ್ಟಕ್ಕೂ ಪೇಸಿಎಂ ಅಂದ್ರೆ ಏನ್ ಗೊತ್ತೇನೋ, ಇ ಅಂದರೆ ಇ್ಠ್ಟ್ಟಛ್ಞಿಠಿ ಟ್ಞಛಿ ಅಂತಾ ಅರ್ಥ, ಗೊತ್ತಾಯ್ತಾ? ಅಂತಾ ನಕ್ಕಿತು ರೆಂಟು.ರೆಂಟಿನ ಮಾತು ಕೇಳಿ ಕರೆಂಟಿಗೂ ನಗು ಬಂತು.
‘ಲೇ ರೆಂಟು.. ನೀನು ಸೈಲೆಂಟಾಗಿದ್ರೆ ಸರಿ, ನನ್ ಥರ ವಾಯ್ಲೆಂಟ್ ಆದ್ರೆ ನಾನೂ ಠಿಞ ಪೋಸ್ಟರ್ ಹಾಕಿಬಿಡ್ತಿನಿ..’ ಅಂತ ಬೆದರಿಸಿತು.
ರೆಂಟಿಗೆ ಕರೆಂಟು ಹೊಡೆದಂತಾಯ್ತು. ‘ಲೇ ಕರೆಂಟು ಏನೋ ಅದು ಠಿಞ ಅಂದ್ರೆ?’ ಅಂತಾ ಕೇಳಿತು.
‘ಠಿಞ ಅಂದರೆ ಛ್ಞಿಟ್ಞಠಿಚ್ಞ್ಚಛಿ ಅಂತಾ ಗೊತ್ತಾಯ್ತಾ?’ ಎಂದು ಕರೆಂಟ್ ಗಹಗಹಿಸಿ ನಕ್ಕಿತು.
ರೆಂಟು ಕರೆಂಟು ಹೊಡೆದಂತೆ ಸೈಲೆಂಟಾಯಿತು!
-‘ಅಷ್ಟಾವಕ್ರಾ’

andolanait

Recent Posts

ಕನ್ನಡಿಗರಿಗೆ ಉದ್ಯೋಗ ನೀಡದ ಸಾಹಿತ್ಯ ಸಮ್ಮೇಳನ: ವಾಟಲ್‌ ನಾಗರಾಜ್‌ ಆಕ್ರೋಶ

ಮೈಸೂರು: ಸಕ್ಕರೆ ನಾಡು ಮಂಡ್ಯದಲ್ಲಿ ಇಂದಿನಿಂದ (ಡಿ.20) 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಶುರುವಾಗಿದೆ. ಆದರೆ ಈ ಸಮ್ಮೇಳನವನ್ನು ಯಾವ…

9 hours ago

ಹಾಸ್ಯ ಸಾಹಿತ್ಯ ಆಧುನಿಕ ಬದುಕಿಗೆ ಔಷಧಿ: ಪ್ರೊ.ಕರಿಯಪ್ಪ

ಮಂಡ್ಯ: ಹಾಸ್ಯ ಸಾಹಿತ್ಯ ಆಧುನಿಕ ಬದುಕಿನಗೆ ಔಷಧಿಯಾಗಿದೆ ಎಂದು ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು. 87ಅಖಿಲ ಭಾರತ ಕನ್ನಡ ಸಾಹಿತ್ಯ…

9 hours ago

ಸಿ & ಡಿ ಲ್ಯಾಂಡ್ ಸಮಸ್ಯೆ ಪರಿಹಾರಕ್ಕೆ ಉನ್ನತ ಮಟ್ಟದ ಸಮಿತಿ: ಯು.ಟಿ. ಖಾದರ್

ಮಡಿಕೇರಿ: ಸಿ ಮತ್ತು ಡಿ ಭೂಮಿಗೆ ಸಂಬಂಧಿಸಿದಂತೆ ಕಂದಾಯ ಸಚಿವರು ಉನ್ನತ ಮಟ್ಟದ ಸಮಿತಿ ರಚನೆಗೆ ಮುಂದಾಗಿದ್ದು, ಸಮಸ್ಯೆ ಪರಿಹಾರವಾಗಲಿ…

9 hours ago

ಸಿ.ಟಿ ರವಿ ಕೊಲೆಗೆ ಪೊಲೀಸರ ಸಂಚು: ಅಶೋಕ್‌ ಆರೋಪ

ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಕ್ಷೇಪಾರ್ಹ ಪದ ಬಳಸಿದ್ದಾರೆ ಎಂಬ ಆರೋಪದ ಮೇಲೆ ಎಂಎಲ್‌ಸಿ ಸಿ.ಟಿ.ರವಿಯವರನ್ನು ಪೊಲೀಸರೇ ಕೊಲೆ…

10 hours ago

ವಿರಾಜಪೇಟೆ | ಬಿಟ್ಟಂಗಾಲದಲ್ಲಿ ಚಿರತೆ ಬೆಕ್ಕು ಸಾವು

ವಿರಾಜಪೇಟೆ: ಗೋಣಿಕೊಪ್ಪ-ಕೇರಳ ಹೆದ್ದಾರಿಯ ಬಿಟ್ಟಂಗಾಲ ಆಟೋ ನಿಲ್ದಾಣದ ಬಳಿ ಚಿರತೆ ಬೆಕ್ಕೊಂದು ಅಪಘಾತಕೀಡಾಗಿ ಸಾವನಪ್ಪಿದ ಘಟನೆ ಶುಕ್ರವಾರ ರಾತ್ರಿ 9…

10 hours ago

ಮೈಸೂರಿನ ಫಾರ್ಮ್‌ಹೌಸ್‌ನಲ್ಲಿ ನಟ ದರ್ಶನ್‌ ವಾಸ್ತವ್ಯ

ಮೈಸೂರು: ನಟ ದರ್ಶನ್‌ ಅವರು ಮೈಸೂರಿನ ತಿ.ನರಸೀಪುರ ಮುಖ್ಯರಸ್ತೆಯಲ್ಲಿರುವ ಕೆಂಪಯ್ಯನಹುಂಡಿ ಬಳಿಯ ತಮ್ಮ ಫಾರ್ಮ್‌ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಶುಕ್ರವಾರ ಇಲ್ಲಿಗ…

10 hours ago