ಎಡಿಟೋರಿಯಲ್

ವಾರೆ ನೋಟ : ಬೈಜೂ – ಮಸ್ಕ್ ಮಸ್ತ್ ಮಸ್ತ್ ಮಾತುಕತೆ!

ಸ್ಯಾನ್ ಪ್ರಾನ್ಸಿಸ್ಕೊದಲ್ಲಿರುವ ಟ್ವಿಟ್ಟರ್ ಹೆಡ್ ಆಫೀಸಿನಲ್ಲಿ ಕೂತು ಎಲಾನ್ ಮಸ್ಕ್ ಬ್ಲಾಕ್ ಕಾಫಿ ಹೀರುತ್ತಿದ್ದರು. ಅಷ್ಟು ದೊಡ್ಡ ಆಫೀಸಿನಲ್ಲಿ ಜನರೇ ಇಲ್ಲದೇ ಬಿಕೋ ಎನ್ನುತ್ತಿತ್ತು. ಅವರ ಚೆಂಬರಿಗೆ ಸಾಧಾರಣ ಮೈಕಟ್ಟಿನ ಭಾರತೀಯರ ಬಣ್ಣದ ಸಾಧಾರಣ ಎತ್ತರದ ವ್ಯಕ್ತಿ ಒಳಬಂದು ಹಾಯ್ ಎಂದರು.

ಸಾರಿ ಜಂಟಲ್ ಮನ್, ಕೆಲಸ ಖಾಲಿ ಇಲ್ಲ. ಕೆಲಸದಲ್ಲಿ ಇದ್ದವರನ್ನೆಲ್ಲಾ ಕಿತ್ತಾಕಿ ಇಡೀ ಆಫೀಸನ್ನೇ ಖಾಲಿ ಮಾಡಿದೀನಿ.. ಬೆಟರ್ ಲಕ್ ನೆಕ್ಸ್ಟ್ ಕಂಪೆನಿ… ಬೇಕಾದ್ರೆ ಒಂದು ಕಪ್ಪು ಬ್ಲಾಕ್ ಕಾಫಿ ಕೊಡ್ತೀನಿ… ಬರಿಸ್ತಾ… ಎಂದರು.
ಓಕೆ ಕಾಫಿ ಕೊಡಿ ಕುಡಿಯುತ್ತೇನೆ ಎಂದು ಹೇಳಿದ ವ್ಯಕ್ತಿ ಎಲಾನ್ ಮಸ್ಕ್ ಎದುರಿನ ಕುರ್ಚಿಯಲ್ಲಿ ಕೂತರು. ಎಲಾನ್ ಮಸ್ಕ್ ತಾವೇ ಎದ್ದು ಫ್ಲಾಸ್ಕಿನಲ್ಲಿದ್ದ ಬಿಸಿ ಬಿಸಿ ಹೊಗೆಯಾಡುತ್ತಿದ್ದ ಬ್ಲಾಕ್ ಕಾಫಿಯನ್ನು ಮಗ್ಗಿಗೆ ಸುರಿದು ಕೊಟ್ಟರು. ಸಕ್ಕರೆ ಬೇಕೆ ಎಂದರು.
ಕಾಫೀನಾ ಸಕ್ಕರೆ ಇಲ್ಲದೇ ಕುಡಿಯೋದ್ರಲ್ಲೇ ಸಖತ್ ಮಜಾ ಇದೆ ಅಂದ ವ್ಯಕ್ತಿ ನಿಧಾನವಾಗಿ ಕಾಫಿ ಗುಟುಕರಿಸಿದರು.
ಎಲಾನ್ ಮಸ್ಕ್, ಜಂಟಲ್ ಮನ್ ಯಾವ ಕೆಲಸ ಕೇಳಿಕೊಂಡು ಬಂದಿದ್ದೀರಿ? ಹಿಂದೆ ಯಾವ ಕಂಪನಿಯಲ್ಲಿ ಕೆಲಸ ಮಾಡಿದ್ದೀರಿ ಎಂದು ಕೇಳಿದರು.
ಬೈದ ವೇ ಮಿಸ್ಟರ್ ಮಸ್ಕ್.. ನಾನು ಬೈಜು… ಕೆಲಸ ಕೇಳಿಕೊಂಡು ಬಂದಿಲ್ಲ ಐಡಿಯಾ ಕೇಳಿಕೊಂಡು ಬಂದಿದ್ದೀನಿ ಅಂದರು.
ಯೂ ಮೀನ್ ಬೈಜು ರವೀಂದ್ರನ್… ಎಂದು ಮಸ್ಕ್ ಅಚ್ಚರಿಯಿಂದ ಕೇಳಿದರು.
ಹೌದು ನಾನೇ ಬೈಜು ರವೀಂದ್ರನ್… ನೀವು ಮಲ್ಟಿಟೆಕ್ಕಿ ನಾನು ಎಜು ಟೆಕ್ಕಿ ಎಂದು ಕೈ ಕುಲುಕಿದರು.
ನೀವೇ ದೊಡ್ಡ ಐಡಿಯಾ ವೀರರು… ನಿಮಗ್ಯಾಕೆ ಬೇರೆಯವರಿಂದ ಐಡಿಯಾ? ಎಂದು ಮಸ್ಕ್ ಕೇಳಿದರು.
ನಾನು ನಿಮ್ ಥರಾನೆ ಹೊಸ ಹೊಸ ಕಂಪನಿ ಕೊಂಡುಕೊಂಡಿದ್ದೀನಿ… ನನ್ ಕಂಪನಿ ಈಗ 20 ಬಿಲಿಯನ್ ಡಾಲರ್ ವರ್ಥ್ ಇದೆ… ಆದ್ರೂ ಯಾಕೋ ಕಂಪನಿ ಲಾಸಲ್ಲೇ ನಡೀತಿದೆ… ಕ್ವಾರ್ಟರಿಂದ ಕ್ವಾರ್ಟರಿಗೆ ಲಾಸ್ ಏರುತ್ತಲೇ ಇದೆ.. ಕ್ವಾರ್ಟರ್ಲಿ ಫೈನನ್ಷಿಯಲ್ ರಿಸಸ್ಟ್ ಡಿಕ್ಲೇರ್ ಮಾಡೋದು ಅಂದರೆ ಹೆರಿಗೆ ನೋವು ಅನುಭವಿಸಿದಂತಾಗುತ್ತಿದೆ ಎಂದು ಸಂಕಟ ಹೇಳಿಕೊಂಡರು ಬೈಜು.
ಸೀ ಮಿಸ್ಟರ್ ಬೈಜು… ಮೊದಲು ಕಾಸ್ಟ್ ಕಟ್ಟಿಂಗ್ ಮಾಡಿ. ಕಾಸ್ಟ್ ಕಟಿಂಗ್ ಮಾಡಲು ಸ್ಟಾಫ್ ಸ್ಟ್ರೆಂಥ್ ಕಟಿಂಗ್ ಮಾಡಿ… ಮೊದಲು ನಿಮ್ಮ ಸಿಇಒ, ಸಿಎಫ್ಒ ಕಿತ್ತಾಕಿ ಅದ್ರಿಂದಾನೇ ನಿಮಗೆ ಟೆನ್ ಮಿಲಿಯನ್ ಡಾಲರ್ ಉಳಿಯುತ್ತೆ… ಅಂದರು ಮಸ್ಕ್.
ನೋ ನೋ ಮಸ್ಕ್ ಹಾಗೆಲ್ಲ ಮಾಡೋಕಾಗೋದಿಲ್ಲ. ನಾನೇ ಸಿಇಒ.. ನನ್ನ ಕೋಫೌಂಡರೆ ಸಿಎಫ್ಒ… ಅಂತಾ ಹೇಳಿ ಬೈಜು ನಕ್ಕರು.
ಓಹ್ಹ್ ನೀವೇ ಸಿಇಒನಾ ಸರಿ ಬಿಡಿ .. ಸ್ಟಾಫ್ ಸ್ಟ್ರೆಂಥ್ ಕಡಿಮೆ ಮಾಡಿ.. ನನ್ನ ಪ್ರಕಾರ, ಎಜುಟೆಕ್ಕಿಗೆ ಮ್ಯಾನ್ ಪವರೇ ಬೇಕಿಲ್ಲ… ಎಲ್ಲಾ ಆಟೋಮೆಷನ್ ಇಲ್ಲವೇ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಬಳಸಿದ್ರೆ ಸಾಕು… ಅಷ್ಟಕ್ಕೂ ಟೀಚರ್ ಪಾಠ ಕೇಳೋ ಆಸಕ್ತಿ ಇದ್ರೆ ಮಕ್ಕಳು ನೆರೆ ಹೊರೆ ಟೀಚರ್ ಹತ್ರಾನೇ ಹೊಗ್ತಾರೆ ನಿಮ್ ಹತ್ರಾ ಯಾಕೆ ಬರ್ತಾರೆ ಹೇಳಿ… ಇದುವರೆಗೆ ಆಗಿರೋ ಪಾಠನೆಲ್ಲ ಎಡಿಟ್ ಮಾಡಿ ರೆಫ್ರೆಷ್ ಮಾಡಿ ಹಾಕಿ… ಎಂದು ಮಸ್ಕ್ ಹೇಳಿದರು.
ಮಿಸ್ಟರ್ ಮಸ್ಕ್… ಈ ಕೆಲಸಾನಾ ಕಳೆದ ಒಂದು ವರ್ಷದಿಂದಲೇ ಮಾಡ್ತಾ ಇದ್ದೀನಿ.. ನಾನು ಸ್ಟಾಫ್ ಸ್ಟ್ರೆಂಥ್ ರೆಡ್ಯೂಸ್ ಮಾಡಿದ್ದೀನಿ… ಮೊನ್ನ್ ಮೊನ್ನೆ 2500 ಜನಾನಾ ಮನೆಗೆ ಕಳುಹಿಸಿದ್ದೀನಿ… ಎಂದು ಬೈಜು ದೇಶಾವರಿ ನಗೆ ಚೆಲ್ಲಿದರು.
ಓಹ್ಹ್ ನೀವು ನನಗಿಂತ ಬುದ್ದಿವಂತರಪ್ಪಾ… ಸ್ಟಾಫ್ ಕಟ್ ಮಾಡಿದ ಮೇಲೆ ಚಿಂತೆ ಯಾಕೆ? ಸ್ಟಾಫ್ ಸ್ಯಾಲರಿಯಲ್ಲಿ ಉಳಿಸಿದ್ದೆಲ್ಲವೂ ಗಳಿಸಿದಂತೆಯೇ ಅಲ್ಲವೇ? ಮಿಸ್ಟರ್ ಬೈಜು…?
ಅಕ್ಚುಯಲೀ ನನ್ನ ಕ್ಯಾಶ್ ರಿಸರ್ವ್ ಎಲ್ಲಾ ಖಾಲಿ ಆಗ್ತಾ ಇದೆ. ಹೊಸದಾಗಿ ಇನ್ವೆಸ್ಟ್ ಮೆಂಟ್ ಬೇಕಿದೆ… ಅದಕ್ಕೆ ನೀವೇನಾದ್ರೂ ಇನ್ವೆಸ್ಟ್ ಮಾಡ್ತೀರಾ? ಮಿಸ್ಟರ್ ಮಸ್ಕ್? ಎಂದು ಬೈಜು ಕೇಳಿದರು.
ವಾಹ್ಹ್ ಗುಡ್ ಪ್ರಪೋಸಲ್ ಮಿಸ್ಟರ್ ಬೈಜು.. ಆದ್ರೆ ನನ್ನದು ಒಂದು ಕಂಡಿಷನ್ನಿದೆ ಅದಕ್ಕೆ ಒಪ್ತೀರಾ? ಎಂದು ಮಸ್ಕ್ ಗಹಗಹಿಸಿ ನಕ್ಕರು.
ನಿಮ್ಮ ಕಂಡಿಷನ್ ಏನು ಅಂತಾ ಹೇಳಿ ಮಿಸ್ಟರ್ ಮಸ್ಕ್.. ನನಗೀಗ ಹೊಸ ಇನ್ವೆಸ್ಟ್ ಮೆಂಟ್ ಬೇಕೇ ಬೇಕು.. ಲಿಯನೆಲ್ ಮೆಸ್ಸಿಗೆ ದೊಡ್ಡ ಮೊತ್ತದ ಪೇಮೆಂಟ್ ಮಾಡೋದಿದೆ.. ಎಂದು ಬೈಜು ಉಳಿದಿದ್ದ ಕಾಫಿ ಗುಟುಕರಿಸಿದರು.
ನೋಡಿ ಮಿಸ್ಟರ್ ಬೈಜು ನಂಗೆ ಯಾವುದೇ ಕಂಪೆನೀಲಿ ಇನ್ವೆಸ್ಟ್ ಮೆಂಟ್ ಮಾಡೋದ್ರಲ್ಲಿ ಹೆಚ್ಚಿನ ಆಸಕ್ತಿ ಇಲ್ಲ. ನನ್ನ ಆಸಕ್ತಿ ಏನಿದ್ರೂ ಕಂಪೆನಿ ಖರೀದಿಸೋದ್ರಲ್ಲಿದೆ. ನೀವು ಯೆಸ್ ಅಂದರೆ ನಿಮ್ಮ ಕಂಪೆನೀನಾ ಖರೀದಿ ಮಾಡ್ತೀನಿ… ರೇಟು ಎಷ್ಟು ಹೇಳಿ? ಎಂದರು ಮಸ್ಕ್.
ಬೈಜುಗೆ ಆಶ್ಚರ್ಯ ಮತ್ತು ಭಯಾ ಎರಡೂ ಆಯ್ತು.
ಏನಪಾ ಈ ಮನ್ಷಾ ಇನ್ವೆಸ್ಟ್ ಮಾಡು ಅಂದ್ರೆ ಪರ್ಚೆಸ್ ಮಾಡ್ತೀನಿ ಅಂತಾ ಇದಾನೆ…ಇವನಿಗೆ ಕಂಪೆನಿ ಮಾರಿದ್ರೆ ಮುಗೀತು… ಟ್ವಿಟ್ಟರ್ ಸಿಇಒ ಕಿತ್ತಾಕಿದಂತೆ ನನ್ನನ್ನು ಕಿತ್ತಾಕಿಬಿಡಬಹುದು ಅಂತಾ ಬೈಜು ಮನದಲ್ಲೇ ಅಂದುಕೊಂಡರು.
ಎಲಾನ್ ಮಸ್ಕ್ ಕಣ್ ಮುಚ್ಚಿ ತೆರೆಯುವುದರಲ್ಲಿ ಬೈಜು ಕಾಣೆಯಾಗಿದ್ದರು!
‘ಅಷ್ಟಾವಕ್ರಾ

andolanait

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

2 hours ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

3 hours ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

4 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

4 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

5 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

6 hours ago