ಎಡಿಟೋರಿಯಲ್

ವಾರೆ ನೋಟ : ಕೊಟ್ರನ ಡಿಪ್ಲೊಮಸಿ

ಬಹಳ ದಿನಗಳ ನಂತರ ಕಾಫೀ ಕುಡಿಯೋ ಟೈಮಿಗೆ ಕೊಟ್ರ ಬಂದ. ‘ನಮುಸ್ಕಾರ ಸಾ ಏನ್ ವಿಸೇಸ? ಚನ್ನಾಗಿದ್ದೀರಾ?’ ಅಂದ.

ನಾನೇನ್ ಬಿಡಪ್ಪಾ ಚನ್ನಾಗೇ ಇದ್ದೀನಿ.. ಬೆಲೆ ಏರಿಕೆ ಅಂತಾ ಸ್ವಲ್ಪ ಟೈಟ್ ಆಗಿದೆ. ಇವತ್ತುಂದಿನಾ ನಿಂಗೆ ಕಾಫಿ ಕೊಡಾನಾ ಅಂದ್ರೆ ಹಾಲಿನ ರೇಟೂ ಏರಿ ಬಿಟ್ಟಿದೆ ಷುಗರ್ ಮೊದಲೇ ಏರಿತ್ತು. ಕಾಫಿ ಪುಡೀನೂ ಏರಿದೆ.. ಇಷ್ಟೇ ನೋಡಪಾ ನಮ್ ವಿಶೇಷಾ..ಟ ಅಂದೆ.

ಕೊಟ್ರನ ಮುಖ ಕಪ್ಪಿಟ್ಟಿತು. ಮುಖ ಕಪ್ಪಿಟ್ಟಿದ್ದು ನನ್ನ ಕಷ್ಟ ಕೇಳಿ ಅಲ್ಲಾ.. ಕಾಫೀ ಸಿಗ್ತಾ ಇಲ್ವಲ್ಲಾ ಅಂತಾ.
ಆದರೂ ಸುಧಾರಿಸಿಕೊಂಡ ಕೊಟ್ರ ‘ಏನ್ ಸಾ ನೀವು? ಇಡೀ ದೇಶಾನೆ ಮ್ಯಾಕ್ರೊ ಎಕಾನಮಿ ಬಗ್ಗೆ ಚಿಂತಿಸ್ತಾ ಇದ್ರೆ ನೀವು ಮೈಕ್ರೊ ಎಕಾನಮಿ ಬಗ್ಗೆ ಚಿಂತಿಸ್ತಾ ಇದ್ದೀರಿ… ಸಣ್ಣ ಪುಟ್ಟ ಬೆಲೆ ಏರಿಕೆ ಎಲ್ಲಾ ಬುಡಿ ಸಾ.. ಇನ್‌ಫ್ಲೇಷನ್ ಕಂಟ್ರೋಲ್‌ಗೆ ಬರ್ತಾ ಇದೆ, ಕನ್ಸಪ್ಶನ್ ಜಾಸ್ತಿ ಆಗ್ತ ಇದೆ. ಎಕಾನಮಿ ಫಾಸ್ಟಾಗಿ ರಿಕವರಿ ಆಗ್ತಾ ಇದೆ.. ಸಾ..’ ಅಂದ.

ಇಪ್ಪತ್ವರ್ಷದಿಂದ ಎಕನಾಮಿಕ್ಸ್ ಕಲಿಸ್ತಾ ಇರೋನು ನಾನು.. ಈ ಬಡ್ಡಿ ಮಗಾ ನನ್ ಕ್ಲಾಸಲ್ಲೇ ನಾಲ್ಕು ಸಲ ಡುಮ್ಕಿ ಹೊಡೆದಿದ್ದಾನೆ.. ಈಗ ನಂಗೆನೇ ಮೈಕ್ರೋ, ಮ್ಯಾಕ್ರೊ ಎಕನಾಮಿಕ್ಸ್ ಅಂತೆಲ್ಲಾ ಹೇಳ್ತಾ ಕಿಂಡಲ್ ಮಾಡ್ತಾ ಇದ್ದಾನೆ ಅಂತಾ ಕೋಪ ಬಂತು. ಕಾಫಿ ಕೊಡದೇ ಹೊದ್ರೆ ಇನ್ನು ಏನೇನೋ ಹೇಳಿಬಿಡ್ತಾನೋ ಅಂತಾ ಭಯ ಆಗಿ, ‘ಕೊಟ್ರ ಬಂದಿದ್ದಾನೆ ಕಣೆ…’ ಎಂದು ಜೋರಾಗಿ ಕೂಗಿ ಹೇಳಿದೆ. ಮಡದಿ ತಕ್ಷಣ ಕಾಫಿ ಕಪ್ಪು ಹಿಡಿದು ಹೊರಬಂದಳು.. ‘ಏನೋ ಕೊಟ್ರಾ ಚನ್ನಾಗಿದ್ದೀಯೇನೋ? ಶಾನೆದಿನಾ ಆಯ್ತು ಈ ಕಡೆ ಬರಲೇ ಇಲ್ಲಾ’ ಅಂತಾ ಪ್ರೀತಿಯಿಂದ ಕೇಳಿದಳು.
ಕೊಟ್ರ ಕಾಫೀ ಹೀರುತ್ತಾ ‘ಸಮಾವೇಸ ಅದೂ ಇದೂ ಅಂತಾ ಇತ್ತು ಅದಿಕ್ಕೆ ಬರಕ್ಕಾಗ್ಲಿಲ್ಲ ’ಅಂದ. ಮಡದಿ ನಗುತ್ತಾ ಒಳಹೋದಳು.


ಅಲ್ಲಲೇ ಕೊಟ್ರ.. ಸಿ೨೦ ಸುಮ್ಮಿತ್‌ನಲ್ಲಿ ಏನೋ ಎಡವಟ್ ಮಾಡಿದ್ದೀಯಾ ಅಂತಾ ಕಾಲೇಜಲೆಲ್ಲಾ ಗುಲ್ಲಾಗಿದೆ ಗೊತ್ತಾ’ ಅಂತಾ ಕೇಳಿದೆ.

‘ಸಾ.. ಯಾವೋ ಯಡವಟ್‌ಗಳು ಗುಲ್ಲು ಮಾಡಿರಬೇಕು ಸಾ.. ಅದುಕ್ಕೆಲ್ಲಾ ತಲೆ ಕಡಿಸ್ಕೋಬೇಡಿ’ ಅಂದ.


ಲೇ ಕೊಟ್ರ ಗುಲ್ಲಾಗಿರೋದು ಯಾವ ವಿಷ್ಯ ಅಂತಾ ಗೊತ್ತೇನೋ? ನಿನ್ನ ಗ್ಯಾಂಗಿನ ಹುಡುಗ್ರಜತೆ ಹೊಡೆದಾಡಿದ್ರಲ್ಲಾ.. ಆ ಹುಡುಗ್ರ ಗ್ಯಾಂಗ್ ಲೀಡರ್ ಷಿಂಗ್ಲಿಕಪ್ಪನ ಜತೆ ನೀನು ಹ್ಯಾಂಡ್ ಷೇಕ್ ಮಾಡಿದ್ದಲ್ಲದೇ ಹಗ್ ಮಾಡೋಕು ಹೋಗಿದ್ಯಂತೆ? ಹೌದೆನ್ಲಾ?’ ಅಂತ ನಾನು ಕೇಳಿದೆ.

‘ಸಾ.. ಆ ವಿಷ್ಯಾನಾ ಅಷ್ಟು ದೊಡ್ಡದು ಮಾಡೋದು ಏನಿದೆ ಸಾ? ಕಾಲೇಜ್-೨೦ ಸುಮ್ಮಿತ್‌ನಲ್ಲಿ ನಂಗೆ ಸರಿಯಾಟಿಯಾಗಿ ನಿಲ್ಲಬಲ್ಲ ಪರ್ಸನ್ ಅಂದ್ರೆ ಷಿಂಗ್ಲಿಕಪ್ಪಾ ಒಬ್ಬನೇ ಇದ್ದುದ್ದು ಅದುಕ್ಕೆ ಷೇಕ್ ಹ್ಯಾಂಡ್ ಮಾಡಿದ್ದು.. ನಾನು ಷೇಕ್ ಹ್ಯಾಂಡ್ ಮಾಡದೇ ಇದ್ದಿದ್ರೆ ಮಿಡಿಯಾ ಅಟೆನ್ಷನ್ ನನ್ ಕಡೆ ಬರ್ತಾನೇ ಇರ್ಲಿಲ್ಲ .. ಒಳ್ಳೆ ಫೋಟೋ ಆಪಾರ್ಚುನಿಟಿ ಮಿಸ್ಸಾಗಿ ಬಿಟ್ಟಿರೋದು ಸಾ..’ ಅಂದ.

‘ಏನೋಪಾ.. ನಿನ್ನ ಗ್ಯಾಂಗಿನ ಹುಡುಗ್ರುಗೆ ಹೊಡೆದ ಗ್ಯಾಂಗಿನ ಲೀಡರ್‌ಗೆ ನೀನ್ ಷೇಕ್‌ಹ್ಯಾಂಡ್ ಮಾಡಿದ್ದ ವಿಷಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ಲಾಗಿ ಎಲ್ಲರೂ ಷೇಕ್ ಆಗಿರೋದಂತೂ ನಿಜಾ ಕಣಪ್ಪಾ..’ ಅಂದೆ.

‘ಷೇಕ್ ಆಗಿರೋದು ನಾನು ಹ್ಯಾಂಡ್‌ಷೇಕ್ ಮಾಡಿದ್ದಕ್ಕೆ ಅಲ್ಲಾ ಸಾ.. ನಾನು ಹ್ಯಾಂಡ್ ಷೇಕ್ ಮಾಡಿದ ಫೋಟೋ ವಿಡಿಯೋ ಯಾವ್ ಲೆವೆಲ್ಲಿಗೆ ಹೋಗಿದ್ದಾವೆ.. ಎಷ್ಟು ಪಬ್ಲಿಸಿಟಿ ಸಿಕ್ಕಿದೆ ಅಂದರೆ… ನಮ್ ವಿರೋಧಿಗಳೆಲ್ಲಾ ಷೇಕ್ ಆಗ್ಬುಟ್ಟೌರೆ.. ಸಾ..’ ಅಂದ.

‘ಅಲ್ಲಲೇ ನಿಮ್ಮುಡುಗ್ರ ಮೇಲೆ ಅಟ್ಯಾಕ್ ಮಾಡಿದ ಗ್ಯಾಂಗಿನ ಲೀಡರ್‌ನ ನೀನು ಅಟ್ಯಾಕ್ ಮಾಡೋದು ಬ್ಯಾಡ ಅಟ್ ಲೀಸ್ಟ್ ಡಿಟ್ಯಾಚ್ ಮಾಡಬಹುದಿತ್ತಲ್ವಾ? ನೀನು ಷೇಕ್ ಹ್ಯಾಂಡ್ ಮಾಡಿದ್ರಿಂದ ನಿನ್ ಗ್ಯಾಂಗಿನ ಹುಡುಗ್ರ ಮೊರಾಲಿಟಿ ಲೋ ಆಗಲ್ವಾ? ಅಂದೆ.

‘ಎಂತಾದೂ ಲೋ ಆಗಲ್ಲ ಸಾ… ಇವೆಲ್ಲ ಸುಮ್ಮನೆ ಕೆಲಸ ಇಲ್ಲದ ಜನ ಮಾಡೋ ಕಿತಾಪತಿಗಳು… ಗುಲ್ಲುಗಳು.. ನೋಡಿ ಸಾ ಇವತ್ತುಂದಿನಾ ಎದುರಿಗೆ ಸಿಕ್ಕಾಗ ನಮುಸ್ಕಾರ ಅಂದುಬಿಟ್ರೆ, ಷೇಕ್ ಹ್ಯಾಂಡ್ ಮಾಡಿಬಿಟ್ರೆ, ಒಂದು ವಾರ್ಮ್ ಹಗ್ ಕೊಟ್ರೆ ನಾವು ಕಳೆದುಕೊಳ್ಳೋದು ಏನೂ ಇರೊಲ್ಲ ಸಾ… ಲವ್ ಅಂಡ್ ಲೆಟ್ ಲವ್ ಪಾಲಿಸಿನಾ ಪಾಲಿಸಬೇಕು ಸಾ..’ ಅಂದ.

ಕೊಟ್ರ ಬಡ್ಡಿಮಗಾ ನಾನು ಅಂದುಕೊಂಡಷ್ಟು ದಡ್ಡ ಅಲ್ಲಾ.. ನಾನು ಅಂದುಕೊಂಡಿದ್ದಕ್ಕಿಂತಲೂ ಹೆಚ್ಚು ಬುದ್ದಿವಂತ ಇದ್ದಾನೆ ಅನಿಸ್ತು.. ‘ಅಲ್ಲಲೇ ಕೊಟ್ರಾ ಇಷ್ಟೆಲ್ಲಾ ಒಳ್ಳೆ ಸಂಗತಿಗಳು ನಿಂಗೆ ಹೆಂಗೆ ಗೊತ್ತಾಯ್ತೋ? ಅಂತ ಕೇಳಿದೆ.


ಸಾ ನಾನೀಗ ವಿಶ್ವಗುರುಗಳನ್ನು ಪಾಲೋ ಮಾಡ್ತಾ ಇದ್ದೀನಿ. ಎಲ್ಲಾ ಅವರ ಪ್ರೇರಣೆ, ಪ್ರೇರೇಪಣೆ..! ’ಅಂದ.

‘ಯಾರೋ ಅದು ನಿನ್ನ ವಿಶ್ವಗುರು?’ ಎಂದು ತಿರುಗಿ ನೋಡೋವಷ್ಟರಲ್ಲಿ ಕೊಟ್ರ ಗೇಟು ದಾಟಿ ಹೋಗಿದ್ದ!

 

-‘ಅಷ್ಟಾವಕ್ರಾ’

andolanait

Recent Posts

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಆಗಸ್ಟ್‌ 21 ಶುಕ್ರವಾರ

2 hours ago

911 ಅಕ್ರಮ ವಿದೇಶಿ ನುಸುಳುಕೋರರು ಪತ್ತೆ : ಗೃಹ ಸಚಿವ ಖರ್ಗೆ

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಸಂಖ್ಯೆ ಹೆಚ್ಚುತ್ತಿದ್ದು, ನಗರದಲ್ಲಿ 911 ಅಕ್ರಮ ವಿದೇಶ ನುಸುಳುಕೋರರು ಇರೋದಾಗಿ ಖುದ್ದು…

14 hours ago

ಕಾವೇರಿ ವನ್ಯಧಾಮದಲ್ಲಿ 8 ಕಳ್ಳಬೇಟೆ ಶಿಬಿರ ಧ್ವಂಸ : ಎಫ್‌ಐಆರ್ ದಾಖಲು, ತನಿಖೆ ಚುರುಕು

ಹನೂರು : ಕಾವೇರಿ ವನ್ಯಜೀವಿ ವಿಭಾಗದ ಹನೂರು ವಲಯ ವ್ಯಾಪ್ತಿಯಲ್ಲಿ ಆಗಸ್ಟ್ 15ರಿಂದ 19ರವರೆಗೆ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ. ಇಲಾಖಾ…

15 hours ago

1984 ಸಿಖ್‌ ವಿರೋಧಿ ದಂಗೆ ಪ್ರಕರಣ; ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಸಜ್ಜನ್‌ ಕುಮಾರ್‌ ನಿಧನ

ಹೊಸದಿಲ್ಲಿ : ಸಾವಿರಾರು ಜನರ ಸಾವಿಗೆ ಕಾರಣವಾದ 1984ರ ಸಿಖ್ ವಿರೋಧಿ ಗಲಭೆಯ ಸಂದರ್ಭದಲ್ಲಿ ಐವರು ವ್ಯಕ್ತಿಗಳ ಹತ್ಯೆ ಪ್ರಕರಣದಲ್ಲಿ…

17 hours ago

ನಾರಾಯಣಸ್ವಾಮಿಗೆ ಕಮಾಂಡೆಂಟ್‌ ಬೆಳ್ಳಿ ಪದಕ

ಮೈಸೂರು: ನಗರದ ಸಂತ ಮರಿಯಾ ದಿ ಮಥಿಯಾಸ್ ಶಾಲೆಯ ಶಿಕ್ಷಕ ನಾರಾಯಣಸ್ವಾಮಿ ಅವರು ಮೈಸೂರು ೩ ಕರ್ನಾಟಕ ರಾಷ್ಟ್ರೀಯ ಕೆಡೆಟ್…

17 hours ago

ಹನೂರು ಎನ್‌ಕೌಂಟರ್‌ ಬೆನ್ನಲ್ಲೇ ಕಳ್ಳಬೇಟೆ ಕಡಿವಾಣಕ್ಕೆ ಸರ್ಕಾರದ ಚಿಂತನೆ

ಬೆಂಗಳೂರು: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿ ನಡೆದ ಎನ್‌ಕೌಂಟರ್‌ ಪ್ರಕರಣದ ಬೆನ್ನಲ್ಲೇ ಆ ಭಾಗದಲ್ಲಿ ನಡೆಯುತ್ತಿರುವ ಕಳ್ಳಬೇಟೆ ಪ್ರಕರಣಗಳನ್ನು ರಾಜ್ಯ…

21 hours ago