ಎಡಿಟೋರಿಯಲ್

ವಿ4 : ವಿತ್ತ ; ವಿಜ್ಞಾನ ; ವಿಶೇಷ ; ವಿಹಾರ

ವಿತ್ತ: ಹಿಗ್ಗುತ್ತಿರುವ ವಿತ್ತೀಯ ಕೊರತೆ

ಪ್ರಸಕ್ತ ವರ್ಷದ ಮೊದಲ ತ್ರೈಮಾಸಿಕದಲ್ಲಿ (ಏಪ್ರಿಲ್- ಜೂನ್) ವಿತ್ತೀಯ ಕೊರತೆಯು ಬಜೆಟ್ ಅಂದಾಜಿನ ಶೇ.೨೧.೨ಕ್ಕೆ ಏರಿದೆ. ಕಳೆದ ಸಾಲಿನಲ್ಲಿ ಇದೇ ಅವಧಿಯಲ್ಲಿ ವಿತ್ತೀಯ ಕೊರತೆಯು ಶೇ.೧೮.೨ರಷ್ಟಿತ್ತು. ಆರ್ಥಿಕ ಪರಿಭಾಷೆಯಲ್ಲಿ ಹೇಳುವುದಾದರೆ, ವಿತ್ತೀಯ ಕೊರತೆ – ಆದಾಯ ಮತ್ತು ಎರವಲು ಪಡೆಯುವ ವೆಚ್ಚದ ನಡುವಿನ ಅಂತರ. ಇದು ಜೂನ್ ಅಂತ್ಯದ ವೇಳೆಗೆ ೩.೫೨ ಲಕ್ಷ ಕೋಟಿ ರೂ.ಗಳಷ್ಟಿತ್ತು ಎಂದು ಲೆಕ್ಕಗಳ ಮಹಾನಿಯಂತ್ರಕರು (ಸಿಜಿಎ) ತಿಳಿಸಿದ್ದಾರೆ. ಮೊದಲ ತ್ರೈಮಾಸಿಕದ ಅಂತ್ಯದಲ್ಲಿ ತೆರಿಗೆ ಆದಾಯವು ೫.೦೬ ಲಕ್ಷ ಕೋಟಿ ರೂಪಾಯಿಗಳಷ್ಟಿದ್ದು, ಕಳೆದ ವರ್ಷ ಇದೇ ತ್ರೈಮಾಸಿಕಕ್ಕಿಂತ ೨೨% ಹೆಚ್ಚಾಗಿದೆ. ಆರ್‌ಬಿಐ ಕೇಂದ್ರಕ್ಕೆ ವರ್ಗಾಯಿಸಿದ ಮೊತ್ತವು ಕಳೆದ ಸಾಲಿಗಿಂತ ಶೇ.೬೯.೪ ಕಡಿಮೆಯಾದ ಕಾರಣ ತೆರಿಗೆಯೇತರ ಆದಾಯವು ೫೧.೨% ರಷ್ಟು ತಗ್ಗಿದೆ. ವಿತ್ತೀಯ ಕೊರತೆಯು ದೇಶದ ಆರ್ಥಿಕತೆಯ ಆರೋಗ್ಯದ ಮಾನದಂಡ. ವಿತ್ತೀಯ ಕೊರತೆ ಹೆಚ್ಚಾದಂತೆಲ್ಲ ಆರ್ಥಿಕತೆ ದುರ್ಬಲವಾಗುತ್ತದೆ. ಆದಾಯ ಕುಗ್ಗಿ, ಖರ್ಚು ಹಿಗ್ಗಿದಾಗ ವಿತ್ತೀಯ ಕೊರತೆಯೂ ಹಿಗ್ಗುತ್ತದೆ!


ವಿಜ್ಞಾನ: ಗ್ರಹಗಳಲ್ಲಿ ಸಾರಸಮೃದ್ಧ ಮಣ್ಣು!

ಗಗನಯಾತ್ರಿಗಳು ಮೊಂದೊಂದು ದಿನ ಕ್ಷುದ್ರಗ್ರಹದ ಮಣ್ಣಿನಲ್ಲಿ ಬೆಳೆದ ತರಕಾರಿಗಳಲ್ಲಿ ಸಲಾಡ್ ತಯಾರಿಸಿ ಸೇವಿಸಬಹುದು. ರೊಮೈನ್ ಲೆಟಿಸ್, ಮೆಣಸಿನಕಾಯಿ ಮತ್ತು ಕೆಂಪು ಮೂಲಂಗಿ ಸಸ್ಯಗಳು ಕ್ಷುದ್ರಗ್ರಹ ಮಣ್ಣಿನ ಮಿಶ್ರಣಗಳಲ್ಲಿ ಬೆಳೆದಿವೆ ಎಂದು ಪ್ಲಾನೆಟರಿ ಸೈನ್ಸ್ ಜರ್ನಲ್ ಇತ್ತೀಚಿನ ಸಂಚಿಕೆ ವರದಿ ಮಾಡಿದೆ. ವಿಜ್ಞಾನಿಗಳು ಹಿಂದೆ ಚಂದ್ರನ ಧೂಳಿನಲ್ಲಿ ಬೆಳೆಗಳನ್ನು ಬೆಳೆದಿದ್ದಾರೆ. ಆದರೆ ಹೊಸ ಅಧ್ಯಯನವು ಕಾರ್ಬೊನೇಸಿಯಸ್ ಕಾಂಡ್ರೈಟ್ ಉಲ್ಕೆಗಳು, ಬಾಷ್ಪಶೀಲ ಮೂಲಗಳಲ್ಲಿ ಸಮೃದ್ಧವಾಗಿದೆ ಎಂದು ಗ್ರ್ಯಾಂಡ್ ಫೋರ್ಕ್ಸ್‌ನಲ್ಲಿರುವ ಉತ್ತರ ಡಕೋಟಾ ವಿಶ್ವವಿದ್ಯಾಲಯದ ಖಗೋಳಶಾಸ್ತ್ರಜ್ಞ ಶೆರಿ ಫೈಬರ- ಬೇಯರ್ ಹೇಳುತ್ತಾರೆ. ಈ ಉಲ್ಕೆಗಳು ಮತ್ತು ಅವುಗಳ ಮೂಲವಾದ ಕ್ಷುದ್ರಗ್ರಹಗಳು ಸಾರಜನಕ, ಪೊಟ್ಯಾಸಿಯಮ್ ಮತ್ತು ರಂಜಕದೊಂದಿಗೆ ಸಮೃದ್ಧವಾಗಿವೆ. ಇವು ಕೃಷಿಯ ಪ್ರಮುಖ ಪೋಷಕಾಂಶಗಳು! ಮುಂದೊಂದು ದಿನ ಕ್ಷುದ್ರಗ್ರಹಗಳನ್ನು ಪುಡಿ ಮಾಡಿ ಬಾಹ್ಯಾಕಾಶ ಗಣಿಗಾರಿಕೆ ಮಾಡಬಹುದು. ಬಾಹ್ಯಾಕಾಶದಲ್ಲಿ ಸಮೃದ್ಧವಾಗಿರುವ ಕೃಷಿ ಪೋಷಕಾಂಶಗಳನ್ನು ಭೂಮಿಗೆ ರವಾನಿಸಿಕೊಳ್ಳಬಹುದು!


ವಿಶೇಷ: ಸ್ಕೇಟಿಂಗ್ ನಲ್ಲಿ ಪುಟ್ಟಬಾಲೆ ವಿಶ್ವದಾಖಲೆ!

ಸ್ಕೇಟಿಂಗ್ ಮಾಡುವುದೇ ಕಷ್ಟ. ಇನ್ನು ನಿಂತ ಕಾರುಗಳಡಿ ಸ್ಟೇಟಿಂಗ್ ಮಾಡುವುದು ಮತ್ತಷ್ಟು ಕಷ್ಟವೇ! ಆದರೆ, ಪುಣೆಯ
ಏಳು ವರ್ಷದ ಬಾಲಕಿ ದೇಶನಾ ನಹರ್ ಸ್ಟೇಟಿಂಗ್ ಚತುರೆ. ಏಕಕಾಲದಲ್ಲಿ ೨೦ ಕಾರುಗಳ ಅಡಿಯಲ್ಲಿ ಅತಿ ವೇಗದಲ್ಲಿ ಸ್ಕೇಟಿಂಗ್ ಮಾಡಿ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ಗೆ ಸೇರಿದ್ದಾಳೆ. ಏಳು ವರ್ಷದ ಈ ಬಾಲೆ ಚೀನಾದ ೧೪ ವರ್ಷದ ಯುವ ಆಟಗಾರ್ತಿಯ ದಾಖಲೆ ಮುರಿದಿದ್ದಾಳೆ. ಇತ್ತೀಚೆಗೆ ಪುಣೆಯಲ್ಲಿ ನಡೆದ ವಿಶ್ವ ದಾಖಲೆಯ ಪ್ರದರ್ಶನದಲ್ಲಿ ದೇಶ್ನಾ ೨೦ ಕಾರುಗಳ ಕೆಳಗೆ ಸ್ಕೇಟ್ ಮಾಡಿ ೧೩:೭೪ ಸೆಕೆಂಡುಗಳಲ್ಲಿ ೧೯೩ ಅಡಿ ದೂರವನ್ನು ಕ್ರಮಿಸಿದಳು. ಇದಕ್ಕೂ ಮುನ್ನ ಚೀನಾದ ೧೪ ವರ್ಷದ ಬಾಲಕಿ ೨೦೧೫ರಲ್ಲಿ ಇದೇ ದೂರವನ್ನು ೧೪:೧೫ ಸೆಕೆಂಡುಗಳಲ್ಲಿ ಕ್ರಮಿಸಿದ್ದಳು. ಕಳೆದ ಎರಡು ವರ್ಷಗಳಿಂದ ದೇಶನಾ ಸ್ಕೇಟಿಂಗ್ ಕಲಿಯುತ್ತಿದ್ದಾಳೆ. ಕಳೆದ ಆರು ತಿಂಗಳಿನಿಂದ, ಲಿಂಬೋ ಸ್ಕೇಟಿಂಗ್‌ನಲ್ಲಿ ಈ ದಾಖಲೆಗಾಗಿ ತಯಾರಿ ನಡೆಸುತ್ತಿದ್ದಳು. ಎಲ್ಲಾ ಸಮಯದಲ್ಲಿ, ಅವರ ತರಬೇತುದಾರರು ಅವರಿಗೆ ಸಾಕಷ್ಟು ಪ್ರೋತ್ಸಾಹ ನೀಡಿದ್ದಾರೆಂದು ಪೋಷಕರು ಸಂಭ್ರಮದಿಂದ ಹೇಳಿಕೊಂಡಿದ್ದಾರೆ.


ವಿಹಾರ: ಹೊಸಬೂದನೂರಿನಲ್ಲಿ ವಾಸ್ತುಶಿಲ್ಪ ವೈಭವ

ಮಂಡ್ಯ ನಗರದಿಂದ ೬ ಕಿ.ಮೀ. ದೂರದಲ್ಲಿರುವ ಹೊಸಬೂದನೂರು ಗ್ರಾಮದಲ್ಲಿ ೧೩ನೇ ಶತಮಾನದ ಹೊಯ್ಸಳರ ದೊರೆ ೨ನೇ ವೀರಬಲ್ಲಾಳನ ಕಾಲದಲ್ಲಿ ನಿರ್ಮಾಣಗೊಂಡ ಪ್ರಾಚೀನ ಕಾಶಿ ವಿಶ್ವನಾಥ ಮತ್ತು ಅನಂತ ಪದ್ಮನಾಭ ದೇವಾಲಯಗಳಿವೆ. ಈ ೨ ದೇವಾಲಯಗಳು ಏಕಕೂಟಾಕೃತಿಯ ವಾಸ್ತುಶಿಲ್ಪವನ್ನು ಹೊಂದಿರುತ್ತವೆ. ಈ ದೇವಾಲಯಗಳು ರಾಜ್ಯ ಪುರಾತತ್ವ ಇಲಾಖೆಯಿಂದ ಸಂರಕ್ಷಿಸಲ್ಪಟ್ಟಿರುತ್ತವೆ. ಇಲ್ಲಿಯ ಅನಂತಪದ್ಮನಾಭ (ಶಾಸನೋಕ್ತ ಕೇಶವ) ದೇವಾಲಯವು ಸುಮಾರು ಮೂರು ಅಡಿ ಎತ್ತರದ ಜಗತಿಯ ಮೇಲೆ ಪೂರ್ವಾಭಿಮುಖವಾಗಿ ನಿಂತಿದ್ದು, ಗರ್ಭಗೃಹ, ಅಂತರಾಳ, ನವರಂಗ ಹಾಗೂ ಮುಖಮಂಟಪಗಳನ್ನು ಹೊಂದಿದೆ. ಶಿಥಿಲಾವಸ್ಥೆಯಲ್ಲಿದ್ದ ಈ ದೇವಾಲಯವನ್ನು ರಾಜ್ಯ ಪುರಾತತ್ವ ಇಲಾಖೆಯು ಸುಮಾರು ೧೪ ಲಕ್ಷ ರೂ. ವೆಚ್ಚದಲ್ಲಿ ದುರಸ್ತಿ ಮಾಡಿ ಸಂರಕ್ಷಿತ ಸ್ಮಾರಕವೆಂದು ಘೋಷಿಸಿದೆ. ಕಾಶಿವಿಶ್ವನಾಥಗುಡಿಯು ಇಲ್ಲಿಯ ಇನ್ನೊಂದು ಹೊಯ್ಸಳ ದೇವಾಲಯವಾಗಿದ್ದು, ಅನಂತಪದ್ಮನಾಭ ಗುಡಿಯ ವಿನ್ಯಾಸವನ್ನೇ ಹೊಂದಿದೆ. ಈ ದೇವಾಲಯದ ನವರಂಗದಲ್ಲಿ ಎರಡಕ್ಕೆ ಬದಲು ನಾಲ್ಕು ದೇವಕೋಷ್ಠಗಳಿದ್ದು, ನಡುವಣ ಛತ್ತು ವೈವಿಧ್ಯಮಯ ಕೆತ್ತನೆಯಿಂದಾಗಿ ಆಕರ್ಷಕವಾಗಿದೆ.

andolana

Recent Posts

ಮೋಟಾರ್ ವಾಹನ ಸೆಸ್ ಕೈಬಿಟ್ಟ ಮೈಸೂರು ಮಹಾನಗರ ಪಾಲಿಕೆ

ಮೈಸೂರು : ಮೈಸೂರು ಮಹಾನಗರಪಾಲಿಕೆ 2026-27ನೇ ಹಣಕಾಸು ವರ್ಷಕ್ಕೆ ಜಾರಿಗೊಳಿಸಲು ಘೋಷಿಸಿದ್ದ ಮೋಟಾರ್ ವಾಹನ ಸೆಸ್ ಅನ್ನು ರದ್ದುಗೊಳಿಸಿದೆ. ಇತ್ತೀಚಿಗೆ…

12 hours ago

ದಿಢೀರ್‌ ಕುಸಿದುಬಿದ್ದ ಲೋಕಾಯುಕ್ತ ನಿ.ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ, ಆಸ್ಪತ್ರೆಗೆ ದಾಖಲು

ಬೆಂಗಳೂರು : ಕರ್ನಾಟಕದ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್‌ ಹೆಗ್ಡೆ ಅವರ ಆರೋಗ್ಯದಲ್ಲಿ ಏರುಪೇರೆ ಉಂಟಾಗಿ ಕುಸಿದು ಬಿದ್ದಿದ್ದು, ಆಸ್ಪತ್ರೆಗೆ…

12 hours ago

ರೋಹಿಣಿ ಸಿಂಧೂರಿ ವಿರುದ್ಧ ತನಿಖೆ : ಮಾಜಿ ಸಚಿವ ಸಾ.ರಾ.ಮಹೇಶ್‌ ಹೇಳಿದಿಷ್ಟು?

ಮೈಸೂರು : ಬಟ್ಟೆ ಬ್ಯಾಗ್ ಖರೀದಿಯಲ್ಲಿ ಆಗಿರುವ ಅವ್ಯವಹಾರದ ಬಗ್ಗೆ ತನಿಖೆ ನಡೆಸಲು ಹೈಕೋರ್ಟ್ ಅನುಮತಿ ನೀಡಿರುವ ಕುರಿತು ಪ್ರತಿಕ್ರಿಯಿಸಿದ…

13 hours ago

ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ಧೋನಿ ಲಭ್ಯ?

ಬೆಂಗಳೂರು : ಮಹೇಂದ್ರ ಸಿಂಗ್ ಧೋನಿ ಅವರು ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳಲ್ಲಿ ಹೊಸ ಆಶಾಕಿರಣ ಮೂಡಿಸಿದ್ದಾರೆ. ಸ್ನಾಯು ಸೆಳೆತದಿಂದ…

14 hours ago

24 ಗಂಟೆಗಳಲ್ಲಿ ಅಮೆರಿಕದ ಎರಡು F-35 ಜೆಟ್‌ಗಳನ್ನು ಹೊಡೆದುರುಳಿಸಿದ್ದೇವೆ : ಇರಾನ್

ಟೆಹ್ರಾನ್ : ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಕಳೆದ 24 ಗಂಟೆಗಳಲ್ಲಿ ಅಮೆರಿಕದ ಎರಡು F-35 ಸ್ಟೆಲ್ತ್…

15 hours ago

ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು : ಮುಖ್ಯಮಂತ್ರಿ ಟೀಕೆ

ಬಾಗಲಕೋಟೆ : ಸೋಮಣ್ಣ ಬಿಜೆಪಿಯಲ್ಲಿ ಕೆಲಸವಿಲ್ಲದಿರುವ ಮಂತ್ರಿ. ಅವರಿಗೆ ಯಾವ ಕಡತವೂ ಹೋಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದರು.…

15 hours ago