ಸೆನ್ಸೆಕ್ಸ್ ಮೇಲೆ ಕೊರೊನಾ ಕರಿಛಾಯೆ
ಜಾಗತಿಕ ಮಟ್ಟದಲ್ಲಿ ಮತ್ತೆ ಸದ್ದು ಮಾಡುತ್ತಿರುವ ಕೊರೊನಾ ಸುದ್ದಿ ಸೆನ್ಸೆಕ್ಸ್ ಮೇಲೆ ಪರಿಣಾಮ ಉಂಟುಮಾಡಿದೆ. ಕೋವಿಡ್‌ನ ಹೊಸ ರೂಪಾಂತರಿಯ ಭೀತಿಯಿಂದಾಗಿ ಸೆನ್ಸೆಕ್ಸ್ ೧,೦೦೦ ಅಂಕಗಳಷ್ಟು ಕುಸಿತ ಕಂಡಿದೆ. ಕೋವಿಡ್-೧೯ ಪರಿಣಾಮದಿಂದ ಹೂಡಿಕೆದಾರರಲ್ಲಿ ಭೀತಿ ಮೂಡಿದ್ದು, ಸತತ ೪ನೇ ನೇರ ಸೆಷನ್‌ನಲ್ಲಿ ಹಾಗೂ ಮೂರು ತಿಂಗಳ ಅವಧಿಯಲ್ಲಿ ದಿನವೊಂದರಲ್ಲೇ ಅಧಿಕ ಕುಸಿತ ದಾಖಲಾಗಿದೆ. ೫೯,೮೪.೨೯ ಅಂಕಗಳೊಂದಿಗೆ ಸೆನ್ಸೆಕ್ಸ್ ಸೆಷನ್ ಮುಕ್ತಾಯಗೊಂಡಿದ್ದು ೯೮೦.೯೩ ಅಂಕಗಳಷ್ಟು ಅಥವಾ ಶೇ.೧.೬೧ ರಷ್ಟು ಇಳಿಕೆ ದಾಖಲಾಗಿದೆ ನಿಫ್ಟಿ ೧೭,೮೦೬.೮೦ ಅಂಕಗಳೊಂದಿಗೆ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿಯ ೫೦ ಸ್ಟಾಕ್‌ಗಳ ಪೈಕಿ ಅದಾನಿ ಪೋರ್ಟ್, ಅದಾನಿ ಎಂಟರ್ ಪ್ರ್ತ್ಯೈಸಸ್, ಹಿಂಡಾಲ್ಕೊ, ಟಾಟಾ ಸ್ಟೀಲ್, ಟಾಟಾ ಮೋಟಾರ‍್ಸ್ ಸೆನ್ಸೆಕ್ಸ್‌ನಲ್ಲಿ ಇಳಿಕೆ ಕಂಡ ೫ ಪ್ರಮುಖ ನಷ್ಟದಾರ ಸಂಸ್ಥೆಗಳಾಗಿದ್ದರೆ, ಸಿಪ್ಲಾ, ಡಿವೀಸ್ ಲ್ಯಾಬ್ಸ್, ಟೈಟಾನ್‌ಗಳು ಗಳಿಕೆ ಕಂಡಿವೆ.
ಯುವ ವಿಜ್ಞಾನಿಗಳಿಗೆ ರಾಷ್ಟ್ರಮಟ್ಟದ ಪ್ರಶಂಸೆ
ನೂತನವಾಗಿ ಆವಿಷ್ಕರಿಸಲ್ಪಟ್ಟ ಔಷಧಿಗಳನ್ನು ಪರೀಕ್ಷೆ ಮಾಡಲು ಪ್ರಾಣಿಗಳ ಮೇಲೆ ಪ್ರಯೋಗ ಮಾಡಲಾಗುತ್ತಿತ್ತು. ಈ ವೇಳೆ ಅವುಗಳಿಗೆ ಉಂಟಾಗುತ್ತಿದ್ದ ಹಾನಿಯಾಗುವ ಅಪಾಯಗಳನ್ನು ತಪ್ಪಿಸುವ ಸಲುವಾಗಿ ಕೇರಳದ ಕಣ್ಣೂರು ಮೂಲದ ಶರಣ್ಯ, ಕೋಲಾರದ ಅರ್ಪಿತಾ ರೆಡ್ಡಿ, ಹೈದರಬಾದಿನ ಸಂಜನಾ ಎಂಬ ಮೂವರು ಯುವ ವಿಜ್ಞಾನಿಗಳು ಟೈಪ್ ೨ ಡಯಾಬಿಟಿಸ್ ಔಷಧಿ ಪ್ರಯೋಗಗಳಿಗಾಗಿ ೩ಡಿ ಬಯೋಪ್ರಿಂಟಿಂಗ್ ವಿಧಾನವನ್ನು ಬಳಸಿಕೊಂಡು ಮಾನವನ ಅಂಗಾಂಶವನ್ನು ಸಿದ್ಧಪಡಿಸಿದ್ದಾರೆ.
೩ಡಿ ಬಯೋಪ್ರಿಂಟಿಂಗ್ ಮೂಲಕ ಮಾನವ ಸ್ನಾಯು ಅಂಗಾಂಶವನ್ನು ಮರುಸೃಷ್ಟಿಸಿ ಜೀವಕೋಶಗಳನ್ನು ಮೂರು ವಿಧದ ಪರದಗಳೊಂದಿಗೆ ಸಂಪರ್ಕ ಹೊಂದಿಸಿದ್ದಾರೆ. ಈ ಕೃತಕ ಅಂಗಾಂಶದ ಮೇಲೆ ವಿವಿಧ ಔಷಧಿಗಳನ್ನು ಹಾಕಿ ಪರೀಕ್ಷಿಸಿದಾಗ ಅದು ಮಾನವ ಸ್ನಾಯುಗಳಂತೆ ಕಾರ್ಯನಿರ್ವಹಿಸುತ್ತವೆ ಎಂಬುದು ಕಂಡುಬಂದಿದ್ದು, ಈ ಆವಿಷ್ಕಾರಕ್ಕೆ ‘ಸೊಸೈಟಿ ಫಾರ್ ಆಲ್ಟರ್ನೇಟಿವ್ಸ್ ಟು ಅನಿಮಲ್ ಎಕ್ಸ್‌ಪೆರಿಮೆಂಟ್ಸ್ ’ ವಾರ್ಷಿಕ ಪ್ರಥಮ ಬಹುಮಾನ ನೀಡಿದೆ.
ಜೀವ ಉಳಿಸಿದ ಆಪಲ್ ಐಫೋನ್ ೧೪ಸರಣಿ
ಹೊಸದಾಗಿ ಬಿಡುಗಡೆಯಾಗಿರುವ ಆಪಲ್ ಐಫೋನ್ ೧೪ರ ಸರಣಿಯ ಮೊಬೈಲ್‌ನಲ್ಲಿ ಹೊಸದಾಗಿ ಫೀಚರ್‌ವೊಂದು ಸೇರಿದ್ದು, ಇದು ಅಪಘಾತವಾದಂತಹ ಸಂದರ್ಭಲ್ಲಿ ಅಥವಾ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ನಮ್ಮ ಆಪ್ತರಿಗೆ ಮತ್ತು ತುರ್ತು ಸೇವೆಗಳಿಗೆ ನೆಟ್‌ವರ್ಕ್ ಇಲ್ಲದಿದ್ದರೂ ಉಪಗ್ರಹಗಳ ಸಹಾಯದೊಂದಿಗೆ ಮಾಹಿತಿ ನೀಡುವ ಫೀಚರ್ ಆಗಿದ್ದು ಅದನ್ನು ಕ್ರ್ಯಾಶ್ ಡಿಟೆಕ್ಷನ್ ಫೀಚರ್ ಎಂದು ಪರಿಚಯಿಸಲಾಗಿದೆ. ಈ ಫೀಚರ್‌ನ ಸಹಾಯದಿಂದ ಇತ್ತೀಚೆಗೆ ಅಮೆರಿಕದಲ್ಲಿ ಜೋಡಿಯೊಂದು ಕಾರು ಅಪಘಾತಕ್ಕೀಡಾಗಿ ೩೦೦ ಅಡಿ ಆಳದ ಕಣಿವೆಗೆ ಸಿಲುಕಿಕೊಂಡಿದ್ದರು. ಈ ವೇಳೆ ಈ ಐಫೋನ್ ೧೪ರ ಕ್ರ್ಯಾಶ್ ಡಿಟೆಕ್ಷನ್ ಫೀಚರ್ ಮೂಲಕ ಪತ್ತೆಹಚ್ಚಿ ಅವರನ್ನು ಮೇಲೆತ್ತಿ ಬದುಕುಳಿಸಲಾಯಿತು.
ಅಪರೂಪದ ಶಿವಲಿಂಗ
ನಂಜನಗೂಡು ಪಟ್ಟಣಕ್ಕೆ ಹೊಂದಿಕೊಂಡಂತೆಯೇ ಇರುವ ಮಲ್ಲನಮೂಲೆ ಮಠದ ಬಳಿ ಪಂಚಲಿಂಗಗಳ ೫ ಐತಿಹಾಸಿಕ ದೇವಾಲಯಗಳಿದ್ದು, ಸರಿಯಾದ ನಿರ್ವಹಣೆಯಿಲ್ಲದೆ ಸೊರಗಿವೆ. ನಂಜನಗೂಡು ಭಾಗದಲ್ಲಿ ಚೋಳರು ಹಾಗೂ ಗಂಗರ ಕಾಲದ ಸಾಕಷ್ಟು ದೇವಾಲಯಗಳು ಕಂಡುಬಂದಿರುವ ಕಾರಣ, ಇದು ಕೂಡ ಚೋಳರ ಕಾಲದ್ದೇ ಇರಬಹುದು ಎಂದು ಶಂಕಿಸಲಾಗಿದೆ. ಈ ೫ ದೇವಾಲಯಗಳೂ ಅಕ್ಕಪಕ್ಕದಲ್ಲೇ ಇದ್ದು, ಇವುಗಳ ಪೈಕಿ ಒಂದು ದೇವಾಲಯದಲ್ಲಿ ಶಿವನ ತಲೆಯ ಮೇಲೆ ನಂದಿಯ ವಿಗ್ರಹವಿರುವ ಅಪರೂಪದ ಶಿವಲಿಂಗವೊಂದಿದೆ.
ಇಲ್ಲಿ ಹಬ್ಬ ಹಾಗೂ ವಿಶೇಷ ದಿನಗಳಲ್ಲಿ ಮಾತ್ರ ಪೂಜೆ ಸಲ್ಲಿಸಲಾಗುತ್ತಿದ್ದು, ದೇವಸ್ಥಾನ ಅಭಿವೃದ್ಧಿಯಾದಲ್ಲಿ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಿಸಬಹುದಾಗಿದೆ. ಅಲ್ಲದೆ ಇದು ಹೆದ್ದಾರಿಯ ಪಕ್ಕದಲ್ಲೇ ಇರುವುದರಿಂದ ಈ ದೇವಾಯವು ಜೀರ್ಣೋದ್ಧಾರಗೊಂಡು ಪ್ರಚಾರ ಸಿಕ್ಕರೆ ಹೆಚ್ಚಿನ ಜನರನ್ನು ಆಕರ್ಷಿಸುವ ಪ್ರವಾಸಿ ತಾಣವಾಗುತ್ತದೆ.
ವಾಷಿಂಗ್ಟನ್ : ಹೊರ್ಮುಜ್ ಜಲಸಂಧಿಯನ್ನು ಸಂಚಾರಕ್ಕೆ ಮುಕ್ತಗೊಳಿಸದಿದ್ದರೆ ಇರಾನ್‌ನ ವಿದ್ಯುತ್ ಸ್ಥಾವರಗಳು ಮತ್ತು ಸೇತುವೆಗಳ ಮೇಲೆ ದಾಳಿ ನಡೆಸುವುದಾಗಿ ಅಮೆರಿಕದ…
ಬೆಂಗಳೂರು : ಕೊಡಗು ಜಿಲ್ಲೆಯ ತಡಿಯಾಂಡಮೋಳ್ ಶಿಖರಕ್ಕೆ ಕೇರಳದಿಂದ ಚಾರಣಕ್ಕಾಗಿ ಬಂದು ಏಪ್ರಿಲ್ 2 ರಂದು ನಾಪತ್ತೆಯಾಗಿದ್ದ ಜಿ.ಎಸ್. ಶರಣ್ಯ…
ಮೈಸೂರು : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಸಚಿವರಾಗಿ ಕೆಎಎಸ್ ಅಧಿಕಾರಿ ಎಸ್.ಕುಸುಮಾಕುಮಾರಿ ಅವರನ್ನು ಸರ್ಕಾರ ನೇಮಕ ಮಾಡಿದೆ. ಈವರೆಗೆ…
ಮೈಸೂರು : ಭಾರತೀಯ ಹವಾಮಾನ ಇಲಾಖೆಯು ಕರಾವಳಿ ಕರ್ನಾಟಕ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಿಗೆ ಏ.9ರವರೆಗೆ ಯಲ್ಲೋ…
ದಾವಣಗೆರೆ : ಕಾಂತರಾಜು ವರದಿ ಈಗ ನಿಮ್ಮ ಬಳಿಯೇ ಇದೆ. ಜಯಪ್ರಕಾಶ ಹೆಗಡೆ ಅವರ ವರದಿಯು ಸ್ವೀಕರಿಸಿದ್ದೀರಿ. ಎರಡು ವರದಿಗಳನ್ನು…
ದಾವಣಗೆರೆ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಮತ್ತು ಕುರ್ಚಿ ಉಳಿಸಿಕೊಳ್ಳಲು ತಮ್ಮನ್ನು ಬೆಳೆಸಿದ್ದ ಅಹಿಂದ ವರ್ಗವನ್ನೇ…