ಎಡಿಟೋರಿಯಲ್

ಕೆನಡಾ, ಪನಾಮಾ, ಗ್ರೀನ್‌ಲ್ಯಾಂಡ್ ಮೇಲೆ ಟ್ರಂಪ್ ಕಣ್ಣು

ಭಾರತಕ್ಕೆ ದೊಡ್ಡ ತಲೆನೋವಾಗಿದ್ದ ಕೆನಡಾದ ಪ್ರಧಾನಿ ಜಸ್ಟಿನ್ ಟ್ರೂಡೋ ರಾಜೀನಾಮೆ ನೀಡಿದ್ದಾರೆ. ಆಡಳಿತಾರೂಢ ಲಿಬರಲ್ ಪಕ್ಷ ಹೊಸ ನಾಯಕನನ್ನು ಆಯ್ಕೆ ಮಾಡುವವರೆಗೆ ಅವರು ಪ್ರಧಾನಿಯಾಗಿ ಮುಂದುವರಿಯಲಿದ್ದಾರೆ. ಟ್ರೂಡೋ ರಾಜೀನಾಮೆಯೊಂದಿಗೆ ಭಾರತಕ್ಕೆ ಸಮಸ್ಯೆಯಾಗಿದ್ದ ಖಾಲಿಸ್ತಾನ್ ಬೆಂಬಲದ ಸಿಖ್ಖರ ಉಪಟಳ ಅಂತ್ಯವಾಗಬಹುದಾದ ಸಾಧ್ಯತೆ ಇಲ್ಲ.

ಕೆನಡಾದಲ್ಲಿ ಖಾಲಿಸ್ತಾನ ಬೆಂಬಲಿಗರು ರಾಜಕೀಯವಾಗಿಯೂ ಪ್ರಬಲರಾಗಿರುವುದರಿಂದ ಯಾರೇ ಅಽಕಾರಕ್ಕೆ ಬರಲಿ ಸಮಸ್ಯೆ ಹಿಂದಿನಂತೆಯೇ ಇರಲಿದೆ. ಲಿಬರಲ್ ಪಕ್ಷಕ್ಕೆ ಬಹುಮತ ಇಲ್ಲದ್ದರಿಂದ ಟ್ರೂಡೋ ಖಾಲಿಸ್ತಾನ ಬೆಂಬಲಿಗರ ನ್ಯೂ ಡೆಮಾಕ್ರಟಿಕ್ ಪಾರ್ಟಿಯ ಬೆಂಬಲ ಪಡೆದು ಸರ್ಕಾರ ರಚಿಸಿದ್ದರು. ಹೀಗಾಗಿ ಅವರು ಖಾಲಿಸ್ತಾನ ಬೆಂಬಲಿಗರ ಪರ ಇರುವುದು ಅನಿವಾರ್ಯವಾಗಿತ್ತು. ಅಂಥ ಬೆಂಬಲದಿಂದಾಗಿ ಖಾಲಿಸ್ತಾನ್ ಬೆಂಬಲಿಗರು ಭಾರತ ವಿರೋಧಿ, ನಿರ್ದಿಷ್ಟವಾಗಿ ಹಿಂದೂಗಳು ಮತ್ತು ದೇವಾಲಯಗಳ ಮೇಲೆ ದಾಳಿ ನಡೆಸಿದ್ದರು. ಹೀಗೆ ದಾಳಿಗಳು ಕಣ್ಣೆದುರು ನಡೆದರೂ ಟ್ರೂಡೋ ಕ್ರಮ ತೆಗೆದುಕೊಳ್ಳದೆ ಭಾರತಕ್ಕೆ ಸಮಸ್ಯೆ ತಂದೊಡ್ಡಿದ್ದರು. ಈ ಮಧ್ಯೆ ಖಾಲಿಸ್ತಾನ್ ಬೆಂಬಲಿಗ ನಾಯಕ ಹರದೀಪ್ ಸಿಂಗ್ ನಿಜ್ಜರ್ ಹತ್ಯೆಯಾಯಿತು. ಈ ಹತ್ಯೆಯ ಹಿಂದೆ ಭಾರತದ ಏಜೆಂಟರಿ ದ್ದಾರೆ ಎಂದು ಆರೋಪಿಸಲು ಟ್ರೂಡೋ ಹಿಂಜರಿಯಲಿಲ್ಲ. ಇದರಿಂದಾಗಿ ಭಾರತ ಮತ್ತು ಕೆನಡಾದ ನಡುವಿನ ಬಾಂಧವ್ಯ ಹಾಳಾಗುವ ಹಂತ ತಲುಪಿತ್ತು.

ಟ್ರೂಡೋಗೆ ನೀಡಿದ್ದ ಬೆಂಬಲವನ್ನು ಖಾಲಿಸ್ತಾನ್ ಬೆಂಬಲಿಗರ ರಾಜಕೀಯ ಪಕ್ಷ ನ್ಯೂ ಡೆಮಾಕ್ರಟಿಕ್ ಪಾರ್ಟಿ ಹಿಂತೆಗೆದುಕೊಂಡಿತ್ತು. ಇದರಿಂದ ಟ್ರೂಡೋ ಬಹುಮತ ಕಳೆದುಕೊಂಡಿದ್ದರು. ಆದರೆ ಟ್ರೂಡೋ ರಾಜೀನಾಮೆಗೆ ಅದೊಂದೇ ಕಾರಣ ಅಲ್ಲ. ಅದೂ ಒಂದು ಕಾರಣ ಎನ್ನುವುದರಲ್ಲಿ ಅನುಮಾನವಿಲ್ಲ. ಅವರ ರಾಜೀನಾಮೆಗೆ ಮುಖ್ಯ ಕಾರಣ ದೇಶದ ಆರ್ಥಿಕ ಸ್ಥಿತಿ ಹದಗೆಟ್ಟಿದ್ದಾಗಿದೆ. ಹಣದುಬ್ಬರ ಮಿತಿಮೀರಿತ್ತು. ಆರೋಗ್ಯ ಸೌಲಭ್ಯ ಕುಸಿದಿತ್ತು. ಜನರಿಗೆ ವಾಸಿಸಲು ಮನೆಗಳ ಅಭಾವ ದೊಡ್ಡ ಸಮಸ್ಯೆಯಾಗಿತ್ತು. ವಲಸೆ ಬರುವವರಿಗೆ ಮನೆಗಳೇ ಸಿಗುತ್ತಿರಲಿಲ್ಲ. ಜೊತೆಗೆ ಉದ್ಯೋಗಗಳೂ ಸಿಗದೆ ಜನರು ಪರದಾಡುವಂತಾಗಿತ್ತು. ದೇಶ ಒಂದು ರೀತಿಯಲ್ಲಿ ಬಿಕ್ಕಟ್ಟನ್ನು ಎದುರಿಸುತ್ತಿತ್ತು. ದೇಶದ ಆರ್ಥಿಕ ಸ್ಥಿತಿಯನ್ನು ನಿಭಾಯಿಸಲು ಟ್ರೂಡೋ ವಿಫಲರಾಗಿದ್ದರು. ಇದೇ ವರ್ಷ ಅಕ್ಟೋಬರ್‌ನಲ್ಲಿ ನಡೆಯಲಿರುವ ಪಾರ್ಲಿಮೆಂಟ್ ಚುನಾವಣೆಗಳಲ್ಲಿ ಆಡಳಿತ ಲಿಬರಲ್ ಪಕ್ಷ ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆಗಳು ಇಲ್ಲ ಎಂದು ಜನಾಭಿಪ್ರಾಯ ಸಮೀಕ್ಷೆಗಳು ಬಹಿರಂಗ ಮಾಡಿದ್ದವು. ವಿರೋಽ ಕನ್ಸರ್‌ವೇಟಿವ್ ಪಕ್ಷ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಸಿದ್ಧತೆ ನಡೆಸಿತ್ತು. ಪಾರ್ಲಿಮೆಂಟಿನಲ್ಲಿ ಸೋಲು ಖಚಿತವಾಗಿತ್ತು. ಒಂಬತ್ತು ವರ್ಷ ಪ್ರಧಾನಿಯಾಗಿದ್ದ ಟ್ರೂಡೋ ಅವರಿಗೆ ರಾಜೀನಾಮೆ ನೀಡದೆ ಬೇರೆ ದಾರಿ ಇರಲಿಲ್ಲ. ಇದೀಗ ಆಡಳಿತ ಲಿಬರಲ್ ಪಕ್ಷ ಹೊಸ ಪ್ರಧಾನಿಯನ್ನು ನೇಮಿಸಲು ಸಿದ್ಧತೆ ನಡೆಸಿದೆ. ಮಾರ್ಚ್ ತಿಂಗಳಲ್ಲಿ ಹೊಸ ನಾಯಕನ ಆಯ್ಕೆ ನಡೆಯಲಿದೆ ಎಂದು ಪ್ರಕಟಿಸಲಾಗಿದೆ. ಪಾರ್ಲಿಮೆಂಟ್ ಚುನಾವಣೆಗೆ ಕೆಲವೇ ತಿಂಗಳಿರುವಾಗ ಇಂಥ ಸರ್ಕಸ್‌ನಿಂದ ಆಡಳಿತ ಪಕ್ಷಕ್ಕೆ ಅನುಕೂಲ ಆಗುವ ಸಾಧ್ಯತೆ ಇಲ್ಲ. ವಿರೋಧಿ ಕನ್ಸರ್‌ವೇಟಿವ್ ಪಕ್ಷ ಅಽಕಾರಕ್ಕೆ ಬರುವುದು ಖಚಿತ. ಆ ಪಕ್ಷ ಅಽಕಾರಕ್ಕೆ ಬಂದ ಪಕ್ಷದಲ್ಲಿ ಖಾಲಿಸ್ತಾನ್ ಬೆಂಬಲಿಗರ ಭಾರತ ವಿರೋಽ ಚಟುವಟಿಕೆಗಳು ನಿಲ್ಲಬಹುದಾದ ಸಾಧ್ಯತೆಯೇನೂ ಇಲ್ಲ. ಸರ್ಕಾರ ಮನಸ್ಸು ಮಾಡಿದರೆ ಖಾಲಿಸ್ತಾನ್ ಬೆಂಬಲಿಗರ ಭಾರತ ವಿರೋಧಿ ಚಟುವಟಿಕೆಗಳನ್ನು ನಿಯಂತ್ರಿಸಬಹುದು. ಆದರೆ ಎಂಥ ಸರ್ಕಾರ, ಯಾರ ನಾಯಕತ್ವದಲ್ಲಿ ಅಽಕಾರಕ್ಕೆ ಬರುತ್ತದೆ ಎನ್ನುವುದನ್ನು ಅವಲಂಬಿಸಿದೆ.

ಕೆನಡಾ ಈಗ ಖಾಲಿಸ್ತಾನ್ ಬೆಂಬಲಿಗರ ಉಪಟಳಕ್ಕಿಂತ ದೊಡ್ಡ ಸಮಸ್ಯೆ ಅಂದರೆ ಅದರ ಅಸ್ತಿತ್ವವೇ ಅಲುಗಾಡುವಂಥ ಸಮಸ್ಯೆಗೆ ಸಿಕ್ಕಿಹಾಕಿಕೊಂಡಂತೆ ಕಾಣುತ್ತಿದೆ. ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಅಽಕಾರ ಸ್ವೀಕರಿಸಲು(ಜನವರಿ ೨೦) ಇನ್ನು ಕೆಲವೇ ದಿನಗಳು ಬಾಕಿ ಇವೆ. ಹಿಂದೊಮ್ಮೆ ಟ್ರಂಪ್ ಅವರನ್ನು ಟ್ರೂಡೋ ಭೇಟಿ ಮಾಡಿದಾಗ ಅವರು ಕೆನಡಾದ ಅಸ್ತಿತ್ವದ ಪ್ರಶ್ನೆಯನ್ನು ಎತ್ತಿ ತಮಾಷೆ ಮಾಡಿದ್ದರು. ಟ್ರೂಡೋ ಅವರನ್ನು ಅಮೆರಿಕದ ೫೧ನೇ ರಾಜ್ಯದ ಗೌರ್ನರ್ ಎಂದು ಕರೆದಿದ್ದರು. ಇದೊಂದು ತಮಾಷೆಯ ಮಾತೆಂದು ತಿಳಿಯಲಾಗಿತ್ತು. ಆದರೆ ಟ್ರಂಪ್ ಅವರು ಆ ಮಾತನ್ನು ನಿಜ ಮಾಡುವ ದಿಕ್ಕಿನಲ್ಲಿ ವಾದ ಮಾಡುತ್ತಿರುವುದು ಕೆನಡಾ ನಾಯಕರಲ್ಲಿ ಗಾಬರಿ ಹುಟ್ಟಿಸಿದೆ. ಕೆನಡಾಕ್ಕೆ ಸ್ವತಂತ್ರ ಅಸ್ತಿತ್ವವೇ ಇಲ್ಲ. “ಅಮೆರಿಕ ನೀಡುವ ಉದಾರ ಬೆಂಬಲದಿಂದಾಗಿ ಕೆನಡಾ ಸರ್ಕಾರ ನಡೆಯುತ್ತಿದೆ. ಅಮೆರಿಕವು ಕೆನಡಾಕ್ಕೆ ವಿವಿಧ ರೀತಿಯಲ್ಲಿ ಪ್ರತಿವರ್ಷ ಸುಮಾರು ೨೦೦ ಬಿಲಿಯನ್ ಡಾಲರ್ ನೀಡುತ್ತಿದೆ. ಕೆನಡಾವು ರಫ್ತು ಮಾಡುವ ವಸ್ತುಗಳು ಅಮೆರಿಕದಲ್ಲಿಯೇ ಲಭ್ಯವಿವೆ. ಕೆನಡಾ ಆರ್ಥಿಕ ವ್ಯವಸ್ಥೆ ಸರಿದೂಗಿಸಲು ಅಮೆರಿಕ ಏಕೆ ಬೆಂಬಲ ನೀಡಬೇಕು” ಎಂದು ಟ್ರಂಪ್ ಪ್ರಶ್ನಿಸಿದ್ದಾರೆ.

ಕೆನಡಾದಿಂದ ಬರುವ ವಸ್ತುಗಳ ಮೇಲೆ ಶೇ. ೨೫ರಷ್ಟು ತೆರಿಗೆ ವಿಧಿಸುವ ಆಲೋಚನೆ ತಮಗಿದೆ ಎಂದೂ ಟ್ರಂಪ್ ಹೇಳಿದ್ದಾರೆ. ಕೆನಡಾ ಮತ್ತು ಅಮೆರಿಕದ ಗಡಿ ಹೆಸರಿಗೆ ಮಾತ್ರ ಇದೆ. ಗಡಿ ಮುಕ್ತವಾಗಿದ್ದು ಅದರಿಂದ ವಲಸೆ ದೊಡ್ಡ ಸಮಸ್ಯೆಯಾಗಿದೆ. ಅದನ್ನು ತಡೆಯಲು ವಿಲೀನ ಅನಿವಾರ್ಯ ಎನ್ನುತ್ತಾರೆ ಟ್ರಂಪ್. ಕೆನಡಾದ ರಕ್ಷಣೆಯ ಜವಾಬ್ದಾರಿಯನ್ನು ಅಮೆರಿಕ ಹೊತ್ತಿದೆ. ಇದಕ್ಕೆ ಸಾಕಷ್ಟು ವೆಚ್ಚವಾಗಲಿದೆ. ಅದರಿಂದ ಕೆನಡಾ ಜನರಿಗೆ ಅಂತೆಯೇ ಅಮೆರಿಕಕ್ಕೆ ಅನುಕೂಲವಾಗುತ್ತದೆ ಎಂದು ಟ್ರಂಪ್ ವಾದಿಸುತ್ತಿದ್ದಾರೆ. ಮಿಲಿಟರಿ ಬಲ ಬಳಸಿ ಕೆನಡಾವನ್ನು ಅತಿಕ್ರಮಿಸುವ ಯೋಚನೆ ಟ್ರಂಪ್ ಅವರಿಗೆ ಇಲ್ಲ. ಆರ್ಥಿಕ ಕಟ್ಟುಪಾಡುಗಳನ್ನು ಹಾಕಲು ಅವರು ಯೋಚಿಸುತ್ತಿದ್ದಾರೆ. ಹಾಗೆ ಮಾಡಿದರೆ ಕೆನಡಾ ಅದಾಗಿಯೇ ಅಮೆರಿಕದ ಭಾಗವಾಗಲು ಸಿದ್ಧವಾಗುತ್ತದೆ ಎನ್ನುವುದು ಟ್ರಂಪ್ ಲೆಕ್ಕಾಚಾರ. ಟ್ರಂಪ್ ಅವರ ಈ ಆಲೋಚನೆ ಕೆನಡಾ ರಾಜಕೀಯ ನಾಯಕರನ್ನು ಕೆರಳಿಸಿದೆ. ಕೆನಡಾ ಸ್ವತಂತ್ರ ದೇಶವಾಗಿ ಉಳಿಯಲಿದೆ ಎಂದು ಅವರು ಘೋಷಿಸಿದ್ದಾರೆ. ಟ್ರಂಪ್ ಅವರು ಚುನಾವಣೆಯಲ್ಲಿ ಜಯಗಳಿಸಿದ ನಂತರದಲ್ಲಿ ತರಬಹುದಾದ ಬದಲಾವಣೆಗಳ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಇದರಲ್ಲಿ ವಲಸೆ ನೀತಿಯಲ್ಲಿ ಬದಲಾವಣೆ ಮುಖ್ಯವಾದುದು. ಅಕ್ರಮ ವಲಸಿಗರನ್ನು ದೇಶದಿಂದ ಹೊರಹಾಕುವ ಅವರ ಹೇಳಿಕೆ ಸಹಜವಾಗಿಯೇ ವಲಸಿಗರಲ್ಲಿ ಕೋಲಾಹಲ ಎಬ್ಬಿಸಿದೆ. ಪ್ಯಾಲೆಸ್ಟೇನ್ ಜನರ ಗಾಜಾ ಪ್ರದೇಶದ ಮೇಲೆ ಇಸ್ರೇಲ್ ಮಿಲಿಟರಿ ದಾಳಿ ಮತ್ತು ಉಕ್ರೇನ್ ಮೇಲಿನ ರಷ್ಯಾ ಅತಿಕ್ರಮಣವನ್ನು ನಿಲ್ಲಿಸುವುದಾಗಿ ಅವರು ಚುನಾವಣೆ ಪ್ರಚಾರ ಕಾಲದಲ್ಲಿಯೇ ಘೋಷಿಸಿದ್ದಾರೆ.

ಟ್ರಂಪ್ ಅವರು ಅಧಿಕಾರಕ್ಕೆ ಬರುವ ದಿನಗಳು ಹತ್ತಿರ ಬರುತ್ತಿರುವಂತೆಯೇ ಅವರ ಮುನ್ನೋಟ ಭಿನ್ನ ಸ್ವರೂಪ ಪಡೆಯುತ್ತಿದೆ. ಇದೀಗ ಟ್ರಂಪ್ ಅವರು ಪನಾಮಾ ದೇಶವನ್ನು ಮಿಲಿಟರಿ ಅತಿಕ್ರಮಣದ ಮೂಲಕ ವಶಪಡಿಸಿಕೊಳ್ಳುವ ಬಗ್ಗೆ ಮಾತನಾಡಿದ್ದಾರೆ. ಅಷ್ಟೇ ಅಲ್ಲ ಡೆನ್ಮಾರ್ಕ್ ಭಾಗವಾಗಿರುವ ವಿಶ್ವದ ಅತಿ ದೊಡ್ಡ ಗ್ರೀನ್ ಲ್ಯಾಂಡ್ ದ್ವೀಪವನ್ನು ಕೊಂಡುಕೊಳ್ಳುವ ಇಚ್ಛೆ ವ್ಯಕ್ತ ಮಾಡಿದ್ದಾರೆ. ಅಮೆರಿಕ ಭೂವಲಯವನ್ನು ವಿಸ್ತರಿಸುವ ಈ ಮಾತುಗಳು ಅವರು ವಿಸ್ತರಣಾವಾದಿ ಎಂದು ವರ್ಣಿಸಲು ಅವಕಾಶ ನೀಡಿವೆ. ಇದರಿಂದಾಗಿ ಅತಿಕ್ರಮಣ ವಿಚಾರದಲ್ಲಿ ಇಸ್ರೇಲ್, ರಷ್ಯಾ ಮತ್ತು ಚೀನಾ ಸಾಲಿಗೆ ಅಮೆರಿಕವೂ ಸೇರಿದಂತಾಗುತ್ತದೆ.

ಮಧ್ಯ ಮತ್ತು ದಕ್ಷಿಣ ಅಮೆರಿಕಕ್ಕೆ ಸಂಪರ್ಕ ಕಲ್ಪಿಸುವ ಭೂಸಂಽಯಲ್ಲಿರುವ ಪನಾಮಾ ದೇಶ ಅಲ್ಲಿ ನಿರ್ಮಿಸಿರುವ ಕಾಲುವೆಯಿಂದಾಗಿ ಜಗತ್ ಪ್ರಸಿದ್ದವಾಗಿದೆ. ಅಟ್ಲಾಂಟಿಕ್ ಮತ್ತು ಪೆಸಿಫಿಕ್ ಸಾಗರಗಳ ಮಧ್ಯೆ ಸರಕು ಸಾಗಾಣಿಕೆ ಹಡಗುಗಳು ಚಲಿಸಲು ಪನಾಮಾ ಕಾಲುವೆ ನಿರ್ಮಿಸಲಾಗಿದೆ. ಅಮೆರಿಕವೂ ಸೇರಿದಂತೆ ವಿಶ್ವದ ವಿವಿಧ ದೇಶಗಳ ನಡುವೆ ವ್ಯಾಪಾರ ವಹಿವಾಟಿಗೆ, ಸರಕು ಸಾಗಣೆಗೆ ಉಪಯೋಗವಾಗುತ್ತಿದೆ. ಹಣ, ಸಮಯ ಉಳಿತಾಯವಾಗುತ್ತಿದೆ. ಕೊಲಂಬಿಯಾ ದೇಶದ ಭಾಗವಾಗಿದ್ದ ಪನಾಮಾ ಪ್ರದೇಶ ಸ್ವತಂತ್ರ ದೇಶವಾಗಲು ಅಮೆರಿಕ ನೆರವಾಗಿತ್ತು. ಅಮೆರಿಕ ಅಲ್ಲಿ ಪನಾಮಾ ಕಾಲುವೆ ನಿರ್ಮಿಸಿತು. ಅದರ ನಿರ್ವಹಣೆಯನ್ನೂ ಬಹಳ ವರ್ಷ ಕಾಲ ಅಮೆರಿಕವೇ ಮಾಡುತ್ತಿತ್ತು. ೧೯೯೯ರಲ್ಲಿ ಕಾಲುವೆಯ ನಿರ್ವಹಣೆಯನ್ನು ಅಮೆರಿಕ ಪನಾಮಾಕ್ಕೆ ಬಿಟ್ಟುಕೊಟ್ಟಿತು. ಇತ್ತೀಚಿನ ವರ್ಷಗಳಲ್ಲಿ ಪನಾಮಾ ಕಾಲುವೆ ಕ್ರಮೇಣ ಚೀನಾ ಹಿಡಿತಕ್ಕೆ ಹೋಗುತ್ತಿದೆ ಎನ್ನುವುದು ಟ್ರಂಪ್ ಆರೋಪ. ಚೀನಾದ ಸೈನಿಕರು ಕಾಲುವೆ ನಿರ್ವಹಣೆಯ ಭಾಗವಾಗಿದ್ದಾರೆ ಎಂಬ ಟ್ರಂಪ್ ಅವರ ಆರೋಪವನ್ನು ಪನಾಮಾ ದೇಶ ನಿರಾಕರಿಸಿದೆ. ಆದರೂ ಟ್ರಂಪ್ ತಮ್ಮ ಅಭಿಪ್ರಾಯವನ್ನು ಬದಲಿಸಿಕೊಂಡಿಲ್ಲ. ಅಲ್ಲಿ ಚೀನಾ ಪ್ರವೇಶ ಅಮೆರಿಕದ ವ್ಯಾಪಾರ ವಹಿವಾಟು ಮತ್ತು ಭದ್ರತೆಗೆ ದೊಡ್ಡ ಬೆದರಿಕೆ ಒಡ್ಡಿದೆ ಎಂದು ಟ್ರಂಪ್ ವಾದಿಸುತ್ತಾರೆ. ಪನಾಮಾ ಕಾಲುವೆ ನಿರ್ವಹಣೆಯನ್ನು ಬಿಟ್ಟುಕೊಟ್ಟದ್ದೇ ತಪ್ಪು, ಅದನ್ನು ಮಿಲಿಟರಿ ಬಲದಿಂದಲಾದರೂ ಮತ್ತೆ ವಶಕ್ಕೆ ತೆಗೆದುಕೊಳ್ಳಬೇಕೆಂದು ತಾವು ಬಯಸುವುದಾಗಿ ಟ್ರಂಪ್ ಹೇಳುತ್ತಿದ್ದಾರೆ.

ಇದೇ ರೀತಿ ಟ್ರಂಪ್ ಅವರು ಡೆನ್ಮಾರ್ಕ್ ಉಸ್ತುವಾರಿಯಲ್ಲಿರುವ ಸ್ವಾಯತ್ತ ಆಡಳಿತದ ಗ್ರೀನ್‌ಲ್ಯಾಂಡ್ ದ್ವೀಪವನ್ನು ಕೊಂಡುಕೊಳ್ಳುವ ಇಚ್ಛೆ ವ್ಯಕ್ತ ಮಾಡಿದ್ದಾರೆ. ಗ್ರೀನ್ ಲ್ಯಾಂಡ್‌ನ ಶೇ. ೮೦ ಭಾಗ ಹಿಮ ಆವರಿಸಿದೆ. ವರ್ಷದಲ್ಲಿ ಸುಮಾರು ಎರಡು ತಿಂಗಳ ಕಾಲ ೨೪ ಗಂಟೆಗಳೂ ಸೂರ್ಯನ ಬೆಳಕು ಇರುತ್ತದೆ. ಅಮೆರಿಕದ ಭದ್ರತೆ ದೃಷ್ಟಿಯಿಂದ ಅಲ್ಲಿ ಮಿಲಿಟರಿ ನೆಲೆಯನ್ನು ಸ್ಥಾಪಿಸುವುದು ಸೂಕ್ತ. ಹಾಗೆಯೇ ವ್ಯಾಪಾರ ವಹಿವಾಟಿಗೆ ಯೂರೋಪ್ ಪ್ರವೇಶಿಸಲು ಗ್ರೀನ್‌ಲ್ಯಾಂಡ್ ಹತ್ತಿರದ ಮಾರ್ಗ ಎನ್ನುವುದು ಟ್ರಂಪ್ ಅಭಿಪ್ರಾಯ. ಈ ವಿಚಾರವನ್ನು ಟ್ರಂಪ್ ಅವರು ಹಿಂದೆ ಅಧ್ಯಕ್ಷರಾಗಿದ್ದಾಗಲೂ ಪ್ರಸ್ತಾಪಿಸಿದ್ದರು. ಆದರೆ ಆಗ ಗ್ರೀನ್‌ಲ್ಯಾಂಡ್ ಜೊತೆ ಮಾತುಕತೆ ನಡೆಸಲು ಸಾಧ್ಯವಾಗಿರಲಿಲ್ಲ. ಎರಡನೆಯ ಮಹಾಯುದ್ಧದ ಸಂದರ್ಭದಲ್ಲಿ ನಾಜಿ ಜರ್ಮನಿ ಡೆನ್ಮಾರ್ಕನ್ನು ವಶಪಡಿಸಿಕೊಂಡಾಗ ಅಮೆರಿಕ ಗ್ರೀನ್‌ಲ್ಯಾಂಡ್ ಪ್ರದೇಶವನ್ನು ಆಕ್ರಮಿಸಿಕೊಂಡು ಪರಮಾಣು ಅಸ್ತ್ರಗಳ ನೆಲೆ ಸ್ಥಾಪಿಸಿತ್ತು. ಯುದ್ಧ ಮುಗಿದ ನಂತರ ಈ ಪ್ರದೇಶ ಡೆನ್ಮಾರ್ಕ್ ಭಾಗವಾಯಿತು. ಡೆನ್ಮಾರ್ಕ್ ನ ಭಾಗವಾಗಿದ್ದರೂ ಗ್ರೀನ್‌ಲ್ಯಾಂಡ್ ಸ್ವಾಯತ್ತ ಆಡಳಿತ ಹೊಂದಿದೆ. ಸ್ವತಂತ್ರ ಪಾರ್ಲಿಮೆಂಟ್ ಇದೆ. ಗ್ರೀನ್‌ಲ್ಯಾಂಡ್‌ನ ಬಜೆಟ್‌ನ ಮೂರನೆಯ ಎರಡು ಭಾಗದ ಹಣವನ್ನು ಪ್ರತಿವರ್ಷ ಡೆನ್ಮಾರ್ಕ್ ನೆರವಾಗಿ ನೀಡುತ್ತದೆ. ಗ್ರೀನ್ ಲ್ಯಾಂಡ್ ಕೊಳ್ಳಲು ಅಮೆರಿಕ ೨೫ ಬಿಲಿಯನ್ ಡಾಲರ್ ಕೊಡಲು ಸಿದ್ಧವಿದೆ ಎಂದು ಟ್ರಂಪ್ ಹೇಳುತ್ತಾರೆ.

ಗ್ರೀನ್‌ಲ್ಯಾಂಡ್ ಮಾರಾಟಕ್ಕೆ ಇಲ್ಲ ಎಂದು ಪ್ರಧಾನಿ ಮ್ಯೂಟ್ ಬುರಪ್ ಎಗೆಡೆ ಘೋಷಿಸಿದ್ದಾರೆ. ಟ್ರಂಪ್ ಅವರ ಈ ಆಲೋಚನೆ ಡೆನ್ಮಾರ್ಕ್‌ನಲ್ಲಿ ಅಷ್ಟೇ ಅಲ್ಲ ಇಡೀ ಯೂರೋಪಿನಲ್ಲಿ ತಳವಳ ಉಂಟುಮಾಡಿದೆ. ಟ್ರಂಪ್ ಅವರು ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಕೆನಡಾ, ಪನಾಮಾ, ಗ್ರೀನ್‌ಲ್ಯಾಡ್ ವಿಚಾರಗಳು ಮುಂಚೂಣಿಗೆ ಬರಲಿರುವುದು ಖಚಿತ. ಟ್ರಂಪ್ ಕಾಲದಲ್ಲಿ ಅಮೆರಿಕ ಸರ್ವಾಽಕಾರದತ್ತ ಹೊರಳುವ ಸಾಧ್ಯತೆಗಳು ದಿಟ್ಟವಾಗಿ ಕಾಣಿಸುತ್ತಿ

 

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ತುರ್ತು ನಿರ್ಗಮನದ ಬಾಗಿಲು ಇಲ್ಲದಿದ್ದರೆ ಎಫ್‌ಸಿ ಇಲ್ಲ ; ಸಚಿವ ರಾಮಲಿಂಗಾ ರೆಡ್ಡಿ ಖಡಕ್ ಸೂಚನೆ

ಬೆಂಗಳೂರು : ಸಾರ್ವಜನಿಕ ಸಾರಿಗೆಗಾಗಿ ಬಳಸುವ ವಾಹನಗಳಿಗೆ ತುರ್ತು ನಿರ್ಗಮನದ ಬಾಗಿಲುಗಳು ಇಲ್ಲದೆ ಇದ್ದರೆ ಭೌತಿಕ ಕ್ಷಮತೆಯ ದೃಢೀಕರಣ ಪತ್ರ…

5 mins ago

ರಾಜ್ಯದಲ್ಲಿ ತೀವ್ರ ಚಳಿ, ದಟ್ಟ ಮಂಜು : ವಾಹನ ಸವಾರರಿಗೆ ಮುನ್ನೆಚ್ಚರಿಕೆ

ಬೆಂಗಳೂರು : ರಾಜ್ಯದಲ್ಲಿ ತೀವ್ರ ಚಳಿ, ಶೀತಗಾಳಿಯ ಜೊತೆಗೆ ಬೆಳಗಿನ ವೇಳೆ ಕೆಲವೆಡೆ ದಟ್ಟವಾದ ಮಂಜು ಆವರಿಸುತ್ತಿದೆ. ಬೆಳಗಿನ ವೇಳೆಯಲ್ಲಿ…

15 mins ago

ಅರಣ್ಯ ಇಲಾಖೆ ಖಾಯಂ ಅಧಿಕಾರಿ, ಸಿಬ್ಬಂದಿಗೆ ಸಿಹಿ ಸುದ್ದಿ : ೧ ಕೋಟಿ ರೂ.ಅಪಘಾತ ವಿಮೆ

ಬೆಂಗಳೂರು : ಅರಣ್ಯ ಇಲಾಖೆಯ ಖಾಯಂ ಅಧಿಕಾರಿ, ಸಿಬ್ಬಂದಿಗೆ ೧ ಕೋಟಿ ರೂ. ಅಪಘಾತ (ಮರಣ)ವಿಮೆ ಹಾಗೂ ಹೊರಗುತ್ತಿಗೆ ಸಿಬ್ಬಂದಿಗೆ…

20 mins ago

ದಿಲ್ಲಿಯಲ್ಲಿ ಅಟಲ್‌ ಕ್ಯಾಂಟಿನ್‌ ಆರಂಭ : ಕರ್ನಾಟಕದ ಇಂದಿರಾ ಕ್ಯಾಂಟಿನ್ ಮಾದರಿಯಲ್ಲಿ 5 ರೂ.ಗೆ ಊಟ

ಹೊಸದಿಲ್ಲಿ : ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ೧೦೧ನೇ ಜಯಂತಿ ಹಿನ್ನೆಲೆಯಲ್ಲಿ ದಿಲ್ಲಿ ಸರ್ಕಾರ ಗುರುವಾರ ರಾಜಧಾನಿಯಲ್ಲಿ…

29 mins ago

ರೈತರ ನೆರವಿಗೆ ಕ್ರೆಡಲ್‌ನಿಂದ `ಪಿಎಂ ಕುಸುಮ್‌ ಬಿ’ ಸಹಾಯವಾಣಿ ಕೇಂದ್ರ ಸ್ಥಾಪನೆ

ಬೆಂಗಳೂರು : ಮಾಹಿತಿ ಕೊರತೆ ಅಥವಾ ತಾಂತ್ರಿಕ ತೊಂದರೆಗಳಿಂದಾಗಿ ಅರ್ಹ ರೈತರು ಕುಸುಮ್-ಬಿ ಯೋಜನೆಯಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಕರ್ನಾಟಕ ನವೀಕರಿಸಬಹುದಾದ…

38 mins ago

ಮೈಸೂರು | ಮನುಸ್ಮೃತಿ ಸುಟ್ಟು ಸಮಾನತೆ ಜ್ಯೋತಿ ಬೆಳಗಿಸಿದ ದಸಂಸ

ಮೈಸೂರು : ಡಾ.ಬಿ.ಆರ್.ಅಂಬೇಡ್ಕರ್ ಅವರು ಮನುಸ್ಮೃತಿಯನ್ನು ದಹಿಸಿದ ದಿನದ ಅಂಗವಾಗಿ ದಲಿತ ಸಂಘರ್ಷ ಸಮಿತಿ ವತಿಯಿಂದ ಮನುಸ್ಮೃತಿಯನ್ನು ಸುಡುವ ಮೂಲಕ…

46 mins ago