ಎಡಿಟೋರಿಯಲ್

ಆದಿವಾಸಿಗಳಿಗೆ ಒಳ ಮೀಸಲಾತಿ ಅತ್ಯಗತ್ಯ

ಡಾ.ಎಸ್.ಶ್ರೀಕಾಂತ್, ಡೀಡ್ ಸಂಸ್ಥೆ, ಹುಣಸೂರು.

ಒಳಮೀಸಲಾತಿ ಕುರಿತು ಆಗಿಂದಾಗ್ಗೆ ಚರ್ಚೆಗಳು ನಡೆಯುತ್ತಿವೆ. ಮೀಸಲಾತಿಯ ಫಲ ಉಣ್ಣುತ್ತಿರುವವರು ಒಳಮೀಸಲಾತಿ ಬೇಡ ಎಂತಲೂ, ಮೀಸಲಾತಿಯನ್ನು ಬಳಸಿಕೊಳ್ಳಲಾಗದೆ ಹತಾಶೆಯಾಗಿರುವವರು ಒಳಮೀಸಲಾತಿ ಬೇಕೆಂತಲೂ ವಾದಿಸುತ್ತಲೇ ಇದ್ದಾರೆ. ಆದರೆ ಸಾಮಾಜಿಕ ನ್ಯಾಯದಡಿ ಹಾಗೂ ಸಂವಿಧಾನಬದ್ದ ಹಕ್ಕುಗಳನ್ನು ದಕ್ಕಿಸಿಕೊಳ್ಳುವಾಗ ಸರ್ವರಿಗೂ ಅವಕಾಶ ಅನಿವಾರ್ಯ.

ಮೀಸಲಾತಿ ಕುರಿತಂತೆ ಪ್ರೊ.ಸಿ.ಪಾರ್ವತಮ್ಮ ನವರು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಹಾಗೂ ಅವರ ಪುಸ್ತಕ ‘ಮೀಸಲಾತಿ- ಒಂದು ಗಗನಕುಸುಮ’ ಇದರಲ್ಲಿ ಬಹಳ ಸವಿಸ್ತಾರವಾಗಿ ವಿವರಿಸುತ್ತಾ ಬಲಾಢ್ಯರು ಮೀಸಲಾತಿಯನ್ನು ಬಳಸಿ ಮತ್ತಷ್ಟು ಬಲಾಢ್ಯರಾಗಿದ್ದಾರೆ ಎಂಬ ಸತ್ಯವನ್ನು ಹೊರಹಾಕಿದ್ದಾರೆ. ಅಲ್ಲದೆ ಸೌಲಭ್ಯ ಪಡೆದವರೇ ಪುನಃ ಪುನಃ ಪಡೆದು ಆ ವರ್ಗಗಳಲ್ಲಿಯೇ ಕೆನೆಪದರವಾಗಿ ರೂಪುಗೊಂಡು ತಮ್ಮ ಪಂಗಡದವರಿಗೆ ತಾವೇ ವಂಚಿಸುತ್ತಿದ್ದಾರೆ ಎಂದಿದ್ದಾರೆ. ಅಲ್ಲದೆ ಪ್ರೊ. ಶಿವಣ್ಣರವರು ತಾಂತ್ರಿಕ ಹಾಗೂ ಉನ್ನತ ಶಿಕ್ಷಣದಲ್ಲಿ ಎಸ್‌ಸಿ, ಎಸ್‌ಟಿ ಮೀಸಲಾತಿಯು ಹೇಗೆ ಬಳಕೆಯಾಗಿದೆ ಎಂಬುದರ ಮೇಲೆ ತಮ್ಮ ಅಧ್ಯಯನ ದಲ್ಲಿ ಬೆಳಕು ಚೆಲ್ಲಿದ್ದಾರೆ. ನೂರೊಂದು ಸಮುದಾಯಗಳಿರುವ ಪರಿಶಿಷ್ಟ ಜಾತಿ ಯಲ್ಲಿ ಕೇವಲ ನಾಲ್ಕು ಬಲಿಷ್ಠ ಸಮುದಾಯಗಳು ಮಾತ್ರ ಉನ್ನತ ಶಿಕ್ಷಣದ ಮೀಸ ಲಾತಿ ಪ್ರಯೋಜನ ಪಡೆದಿದ್ದಾರೆ ಎಂದು ಮನೋಜ್ಞವಾಗಿ ವಿವರಿಸಿದ್ದಾರೆ. ಅಲ್ಲದೆ ಪರಿಶಿಷ್ಟ ಪಂಗಡದ 51 ಸಮುದಾಯಗಳ ಪೈಕಿ ಕೇವಲ ೨ ಸಮುದಾಯದವರು ಮಾತ್ರ ಉನ್ನತ ಶಿಕ್ಷಣದ ಮೀಸಲಾತಿಯ ಅನುಕೂಲ ಪಡೆದಿದ್ದಾರೆ ಎಂಬುದು ಮೀಸಲಾತಿಯು ಹೇಗೆ ಬಳಸಲ್ಪಡುತ್ತಿದೆ ಎಂಬುದರ ಮೇಲೆ ಬೆಳಕು ಚೆಲ್ಲುತ್ತದೆ. ಒಳ ಮೀಸಲಾತಿ ವಿವಾದಕ್ಕೆ ತಾರ್ಕಿಕ ಅಂತ್ಯ ಎಂಬಂತೆ ಹೈ ಕೋರ್ಟ್ ಆದೇಶ ಮತ್ತು ಪ್ರೊ. ಮುಜಾ-ರ್ ಅಸ್ಸಾದಿ ಅವರ ವರದಿಯು ಪರಿಶಿಷ್ಟ ಪಂಗಡದಲ್ಲಿ ಆದಿವಾಸಿಗಳಿಗೆ ಒಳ ಮೀಸಲಾತಿ ಅಗತ್ಯವಾಗಿ ಕೊಡಬೇಕು ಎಂದು ಹೇಳಿದೆ.

ಎಲ್.ಜಿ.ಹಾವನೂರು ವರದಿ ಬಂದ ನಂತರ ಬುಡಕಟ್ಟು ಪಟ್ಟಿಯಲ್ಲಿದ್ದ ಬೆಟ್ಟಕುರುಬ ಸಮುದಾಯವನ್ನು ತೆಗೆದು ಕಾಡುಕುರುಬ ಎಂದು ಸೇರಿಸುವ ಹುನ್ನಾರ ನಡೆಯಿತು. ಸೌಲಭ್ಯ ವಂಚಿತರಾದ ಬೆಟ್ಟಕುರುಬರು ತಾವಲ್ಲದ ಬುಡಕಟ್ಟಿನ ಹೆಸರನ್ನು ಹೇಳಿಕೊಂಡು ಕಾಡುಕುರುಬ ಎಂಬ ಹೆಸರಿನಲ್ಲಿ ಮೀಸಲಾತಿಯ ಸೌಕರ್ಯವನ್ನು ಪಡೆಯುವ ಅನಿವಾರ್ಯತೆ ಸೃಷ್ಟಿಯಾಯಿತು. ಅಽಕಾರಿಗಳನ್ನು ಪ್ರಶ್ನಿಸಿದರೆ ಬೆಟ್ಟಕುರುಬ ಎಂದು ಹೇಳಿಕೊಂಡರೆ ನಿಮಗೆ ಎಸ್‌ಟಿ ಸೌಲಭ್ಯ ಸಿಗುವುದಿಲ್ಲ. ಸೌಲಭ್ಯ ಬೇಕೆಂದರೆ ಕಾಡುಕುರುಬ ಎಂದೇ ಹೇಳಿಕೊಳ್ಳಬೇಕು ಎಂದು ಹೇಳತೊಡಗಿದರು. ವಾಸ್ತವವಾಗಿ ಗಮನಿಸಿದಾಗ ಕರ್ನಾಟಕದಲ್ಲಿ ಕಾಡುಕುರುಬ ಎಂಬ ಬುಡಕಟ್ಟಾಗಲಿ ಅಥವಾ ಜಾತಿಯಾಗಲಿ ಇಲ್ಲ. ಕೃಷಿ ಮಾಡುವವರನ್ನು ರೈತರು ಎಂದು ಹೇಗೆ ಕರೆಯುತ್ತಾರೋ, ಹಾಗೆಯೇ ಕಾಡಿನಲ್ಲಿ ವಾಸಮಾಡುವ ವಿವಿಧ ಬುಡಕಟ್ಟುಗಳನ್ನು ಕಾಡುಕುರುಬ ಎಂದು ಬಳಸಿರುವ ಸಾಮಾನ್ಯ ಪದ. ಇದು ಜಾತಿಯೂ ಅಲ್ಲ, ಬುಡಕಟ್ಟೂ ಅಲ್ಲ. ಇಂತಹದೊಂದು ಪದ ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ ಹೇಗೆ ನುಸುಳಿತು!

ಸದ್ಯಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡೆ ಮೇಲೆ ಬೆಟ್ಟಕುರುಬರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಸಮುದಾಯವು ದಶಕ ಗಳ ಹೋರಾಟ ನಡೆಸಿದ್ದರಿಂದ ಈಗ ನ್ಯಾಯ ದೊರಕಿದೆ. ಲೋಕಸಭೆಯಲ್ಲಿ ಬೆಟ್ಟ ಕುರುಬ ಬುಡಕಟ್ಟನ್ನು ಪುನಃ ಎಸ್‌ಟಿ ಪಟ್ಟಿಗೆ ಸೇರಿಸಲು ಸರ್ಕಾರ ತೀರ್ಮಾನ ತೆಗೆದುಕೊಂಡಿದೆ. ಕಾಡುಕುರುಬ ಎಂಬ ಪದವನ್ನು ಎಸ್‌ಟಿ ಪಟ್ಟಿಯಿಂದ ಕೈಬಿಡಲು ಬುಡಕಟ್ಟುಗಳು ಒತ್ತಾಯಿಸಿದರೂ ಕೂಡ ಎಸ್‌ಟಿ ಪಟ್ಟಿಯಿಂದ ಕೈಬಿಟ್ಟಿಲ್ಲ. ಇದು ಯಾರ ದುರ್ಬಳಕೆಗಾಗಿ ಎಂಬುದು ಆದಿವಾಸಿಗಳ ಪ್ರಶ್ನೆ.

ಕರ್ನಾಟಕ ಉಚ್ಚ ನ್ಯಾಯಾಲಯದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ತೀರ್ಪು ಮತ್ತು ನ್ಯಾಯಾಲಯ ಸಮಿತಿ ವರದಿಯ ಶಿಫಾರಸುಗಳನ್ವಯ ಅನ್ಯಾಯಕ್ಕೆ ಒಳಗಾಗಿರುವ ೩೪೧೮ ಕುಟುಂಬಗಳಿಗೆ ಪುನರ್ವಸತಿ ಹಾಗೂ ಪರಿಶಿಷ್ಟ ಪಂಗಡದಲ್ಲಿ ಆದಿವಾಸಿಗಳಿಗೆ ಒಳಮೀಸಲಾತಿ ನೀಡಬೇಕು ಎಂದು 18, 19 ಹಾಗೂ 20ನೇ ಶಿಫಾರಸಿನಲ್ಲಿ ಆದೇಶಿಸಲಾಗಿದೆ. ಇದನ್ನು ಕೋರ್ಟ್‌ನಲ್ಲಿ ಸರ್ಕಾರ ಒಪ್ಪಿಕೊಂಡಿದೆ. ಇದನ್ನು ಸರ್ಕಾರ ಜಾರಿಗೊಳಿಸಬೇಕೆ ವಿನಾ ವಿಳಂಬ ಮಾಡಬಾರದು.

ಪುನರ್ವಸತಿ ಮತ್ತು ಒಳಮೀಸಲಾತಿಗೆ ಸಂಬಂಽಸಿದಂತೆ ನಾಗರಹೊಳೆ ಮತ್ತು ಬಂಡಿಪುರ ರಾಷ್ಟ್ರೀಯ ಉದ್ಯಾನವನಗಳಿಂದ ಹೊರ ಹಾಕಲ್ಪಟ್ಟಿರು ವವರು ಹಾಗೂ ಅರಣ್ಯ ಆದಿವಾಸಿ ಬುಡಕಟ್ಟು ಸಮುದಾಯಗಳಿಗೆ ಸಮಗ್ರ ಅಭಿವೃದ್ಧಿ ಯೋಜನೆ ಕಾರ್ಯಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ. ಹೈಕೋರ್ಟ್ ಆದೇಶ ಮತ್ತು ಸಮಿತಿಯ ಶಿಫಾರಸುಗಳನ್ನು ಸರ್ಕಾರದ ಗಮನಕ್ಕೆ ತಂದು ಪುನಃ ಪುನಃ ಒತ್ತಾಯಿಸಲಾಗುತ್ತಿದೆ.

ರಾಜ್ಯ ಸರ್ಕಾರವು ಅಕ್ಟೋಬರ್ 7 ರಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸರ್ವಪಕ್ಷಗಳ ಸಭೆ ಕರೆದು ಪರಿಶಿಷ್ಟ ಪಂಗಡಕ್ಕಿದ್ದ ಶೇ.3 ಮೀಸಲಾತಿಯನ್ನು ಶೇ.7ಕ್ಕೆ ಹೆಚ್ಚಿಸಿರುವ ತೀರ್ಮಾನ ಸ್ವಾಗತಾರ್ಹ. ಈ ಹಿಂದೆ ಹಲವು ಬಾರಿ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿ ಪರಿಶಿಷ್ಟ ಪಂಗಡದ ವ್ಯಾಪ್ತಿಯಲ್ಲಿ ಬರುವ ಮೂಲನಿವಾಸಿ ಬುಡಕಟ್ಟುಗಳಿಗೆ ಹಾಗೂ ಅರಣ್ಯ ವಾಸದ ಹಿನ್ನೆಲೆಯುಳ್ಳ ಬುಡಕಟ್ಟುಗಳಿಗೆ ಒಳ ಮೀಸಲಾತಿಯನ್ನು ನಿಗದಿಪಡಿಸಬೇಕೆಂದು ಸಂಘಟನೆ ಗಳು ವಿನಂತಿಸಿದ್ದವು. ಅಕ್ಟೋಬರ್ ೭ ರಂದು ನಡೆದ ಸಭೆಯಲ್ಲಿ ಮೀಸಲಾತಿ ಹೆಚ್ಚಿ ಸುವ ತೀರ್ಮಾನ ಮಾಡಿದ್ದರೂ ಒಳ ಮೀಸಲಾತಿಯ ಕುರಿತು ಚರ್ಚೆ ಆಗಿಲ್ಲ.

ಸರ್ಕಾರಕ್ಕೆ ತಿಳಿದಿರುವಂತೆಯೆ ಪರಿಶಿಷ್ಟ ಪಂಗಡದ ಮೀಸಲಾತಿಯಲ್ಲಿ ಇರುವ ಎಲ್ಲ 15 ಎಂಎಲ್‌ಎ ಸ್ಥಾನಗಳೂ ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿರುವ ಒಂದೇ ಸಮುದಾಯಕ್ಕೆ ಲಭ್ಯವಾಗಿವೆ. ಮೀಸಲಿರಿಸುವ ಜಾಗಗಳೂ ಕೂಡ ಆದಿವಾಸಿಗಳು ವಾಸಿಸುವ ಸ್ಥಳಗಳಿಂದ ಎಚ್.ಡಿ.ಕೋಟೆಯನ್ನು ಹೊರತುಪಡಿಸಿ ಬಯಲು ಸೀಮೆ ಜಿಲ್ಲೆಗಳಿಗೆ ಸೇರಿವೆ. ಇದರಿಂದಾಗಿ ಮೂಲಬುಡಕಟ್ಟುಗಳಿಗೆ ವಿಧಾನಸಭೆಯಲ್ಲಿ ತಮ್ಮನ್ನು ಪ್ರತಿನಿಽಸಿಕೊಳ್ಳಲು ಅವಕಾಶವಿಲ್ಲ ಜೊತೆಗೆ ಸಂವಿಧಾನ ನೀಡಿರುವ ಅನುಸೂಚಿತ ಪ್ರದೇಶಗಳ ರಕ್ಷಾ ಕವಚವೂ ಇಲ್ಲ. ಒಳಮೀಸಲಾತಿ ಕುರಿತಂತೆ ಹೈಕೋರ್ಟ್ ಸಮಿತಿಯ ಅಸಾದಿ ವರದಿಯು ಪರಿಶಿಷ್ಟ ಪಂಗಡದಲ್ಲಿ ಒಳಮೀಸಲಾತಿ ಮಾಡಬೇಕೆಂದು ಶಿಫಾರಸು ಮಾಡಿದೆ. ಕೋರ್ಟ್ ಸಮಿತಿಯ ಈ ವರದಿಯನ್ನು ಸರ್ಕಾರವು ಒಪ್ಪಿಕೊಂಡಿದೆ ಇದನ್ನು ಜಾರಿಗೊಳಿಸುವುದು ಮಾತ್ರ ಬಾಕಿ ಉಳಿದಿದೆ.

ರಾಜ್ಯ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಽಶರಾದ ಚ್.ಎನ್. ನಾಗಮೋಹನ್ ದಾಸ್ ಸಮಿತಿಯ ಮುಂದೆಯೂ ಕೂಡ ಹೈಕೋರ್ಟ್ ಆದೇಶ ಮತ್ತು ಸಮಿತಿಯ ವರದಿಯನ್ನು ಮಂಡಿಸಲಾಗಿತ್ತು. ನಾಗಮೋಹನ್ ದಾಸ್ ಸಮಿತಿಯು ತನ್ನ ವರದಿಯಲ್ಲಿ ಆದಿವಾಸಿ ಬುಡಕಟ್ಟುಗಳಿಗೆ ಒಳಮೀಸಲಾತಿ ಕಲ್ಪಿಸಲು ಶಿಫಾರಸು ಮಾಡುವಂತೆ ಮೈಸೂರಿನಲ್ಲಿ ಸಭೆ ನಡೆದಾಗ ವಿನಂತಿಸಿಕೊಂಡಿದ್ದರು.

ಒಳಮೀಸಲಾತಿ ಇದ್ದಿದ್ದರೆ ಮೂಲನಿವಾಸಿ ಬುಡಕಟ್ಟು ಪ್ರತಿನಿಽ, ಅರಣ್ಯವಾಸದ ಹಿನ್ನೆಲೆಯ ಬುಡಕಟ್ಟುಗಳ ಪ್ರತಿನಿಽ ವಿಧಾನಸಭೆ ಪ್ರವೇಶ ಪಡೆಯುವ ಅವಕಾಶ ಸಿಗುತ್ತಿತ್ತು. ಆದ್ದರಿಂದ ತಮ್ಮಲ್ಲಿ ವಿನಂತಿಸುವುದೇನೆಂದರೆ ಪರಿಶಿಷ್ಟ ಪಂಗಡಕ್ಕೆ ನೀಡಲು ಹೊರಟಿರುವ ಶೇ. ೭ ಭಾಗ ಮೀಸಲಾತಿಯಲ್ಲಿ ೪ ಭಾಗಗಳಾಗಿ ವಿಂಗಡಿಸಿ ಒಳ ಮೀಸಲಾತಿ ನೀಡಬೇಕು.

೧. ಮೂಲನಿವಾಸಿ ಬುಡಕಟ್ಟುಗಳು (ಪಿವಿಟಿಜಿ)

೨. ಅರಣ್ಯವಾಸದ ಹಿನ್ನೆಲೆಯುಳ್ಳ ಬುಡಕಟ್ಟುಗಳು.

೩. ಅಲೆಮಾರಿ ಹಾಗೂ ಅರೆ ಅಲೆಮಾರಿ ಬುಡಕಟ್ಟುಗಳು.

೪. ಹಿಂದುಳಿದ ಜಾತಿ ಸಮುದಾಯಗಳಿಂದ ಪರಿಶಿಷ್ಟ ಪಂಗಡಕ್ಕೆ ಇತ್ತೀಚೆಗೆ ಸೇರಲ್ಪಟ್ಟಿರುವ ಸಮುದಾಯಗಳು.

ಆದಿವಾಸಿಗಳು ಹೆಚ್ಚಾಗಿ ವಾಸಿಸುವ ತಾಲ್ಲೂಕುಗಳಲ್ಲಿ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಸ್ಥಾನಗಳನ್ನು ಮೀಸಲಿಡಬೇಕು ಮತ್ತು ರಾಜ್ಯದಲ್ಲಿ 5 ಎಂಎಲ್‌ಎ ಸ್ಥಾನಗಳನ್ನು ಮೀಸಲಿಡಬೇಕು ಹಾಗೂ ಎಂಎಲ್‌ಸಿ ಸ್ಥಾನ 2, ಎಂಪಿ ಸ್ಥಾನ 1 ಮೀಸಲಿಡಲು ಚಳಿಗಾಲದ ಅಽವೇಶನದಲ್ಲಿ ಚರ್ಚಿಸಿ ತೀರ್ಮಾನಿಸಿ ಮುಂದೆ ಬರುವ ಚುನಾವಣೆಗಳಲ್ಲಿ ಸ್ಪಽಸಲು ಆದಿವಾಸಿಗಳಿಗೆ ಅವಕಾಶ ಮಾಡಿಕೊಡಬೇಕು.

andolanait

Recent Posts

ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಕುಡಿಯುವ ನೀರಿಗೆ ಅಭಾವ

ನಂಜನಗೂಡು: ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಕಪಿಲಾ ನದಿ ಪಕ್ಕದಲ್ಲೇ ಇದ್ದರೂ ಜನತೆಗೆ ಕುಡಿಯುವ ನೀರಿನ ಅಭಾವ ಎದುರಾಗಿದೆ. ಹಳ್ಳಿಗಳಿಗೆ ನದಿ…

43 mins ago

ರಾಜ್ಯದಲ್ಲಿ ಇನ್ನೂ ಒಂದು ವಾರಗಳ ಕಾಲ ಭಾರೀ ಮಳೆ

ಬೆಂಗಳೂರು: ರಾಜ್ಯದಲ್ಲಿ ಇನ್ನೂ ಒಂದು ವಾರಗಳ ಕಾಲ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪೂರ್ವವ ಮಧ್ಯ…

1 hour ago

ಓದುಗರ ಪತ್ರ: ಸರಗಳ್ಳತನಕ್ಕೆ ಕಡಿವಾಣ ಹಾಕಿ

ಇತ್ತೀಚೆಗೆ ಮೈಸೂರಿನಲ್ಲಿ ಸರಗಳ್ಳತನ ಪ್ರಕರಣಗಳು ವರದಿಯಾಗುತ್ತಿದ್ದು, ಮಹಿಳೆಯರು ಒಂಟಿಯಾಗಿ ರಸ್ತೆಯಲ್ಲಿ ಓಡಾಡಲು ಹೆದರುವಂತಾಗಿದೆ. ಎರಡು ದಿನಗಳ ಹಿಂದಷ್ಟೇ ನಮ್ಮ ಸಂಬಂಧಿಕರೊಬ್ಬರು…

1 hour ago

ಓದುಗರ ಪತ್ರ: ಬಿಗ್‌ಬಾಸ್ ಕಾರ್ಯಕ್ರಮ ನಿಲ್ಲಲಿ

ಕನ್ನಡದ ಖಾಸಗಿ ಚಾನೆಲ್‌ವೊಂದರಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್ ಸೀಸನ್-11 ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದು, ಸ್ಪರ್ಧಿಗಳು ನಿತ್ಯ ಜಗಳವಾಡುತ್ತಿರುವುದರಿಂದ ಕಾರ್ಯಕ್ರಮ ವೀಕ್ಷಿಸುವವರಿಗೆ ಕಿರಿಕಿರಿಯಾಗುತ್ತಿದೆ. ವಿವಿಧ…

1 hour ago

ಓದುಗರ ಪತ್ರ: ಪೊಲೀಸರಿಗೆ ಧನ್ಯವಾದಗಳು

ನಾಡಹಬ್ಬ ದಸರಾ ಮಹೋತ್ಸವದಲ್ಲಿ ಈ ಬಾರಿ ಜನ ಸಾಗರವೇ ಹರಿದು ಬಂದಿತ್ತು. ದಸರಾ ಅಂಗವಾಗಿ ಆಯೋಜಿಸಿದ್ದ ಯುವ ಸಂಭ್ರಮ, ಯುವ…

1 hour ago

ಓದುಗರ ಪತ್ರ: ಮುಷ್ಕರ ಮುಂದುವರಿದಿದೆ

ಸರ್ಕಾರವೇ ನಮ್ಮ ದೇವರಾಗಿದೆ ಮೇಲಾಧಿಕಾರಿಗಳ ಮೇಲೆ ಗೌರವವಿದೆ ಜನರ ಸಮಸ್ಯೆಗಳ ಅರಿವಿದೆ ಅವರಿಗಾದ ಅಡಚಣೆಗೆ ವಿಷಾದವಿದೆ ನಮಗೂ ಬದುಕಿದೆ. ನಮ್ಮದೂ…

1 hour ago