ಎಡಿಟೋರಿಯಲ್

ಇಂದಿನ ಭಾರತ ಅಂಬೇಡ್ಕರ್ ತ್ಯಾಗ ಅರಿಯಬೇಕು

ಬಾಬಾಸಾಹೇಬರ ಮಾರ್ಗದ ಎಳೆ ಹಿಡಿದ ಯುವಪೀಳಿಗೆ ಹೆಜೆ ಇಡಲಿ

-ಮಲ್ಕುಂಡಿ ಮಹದೇವಸ್ವಾಮಿ

೧೯೫೬, ಡಿಸೆಂಬರ್ ೬ರಂದು ಸಂವಿಧಾನ ಶಿಲ್ಪಿ, ಎಲ್ಲ ವರ್ಗಗಳ ನೊಂದವರ ಧ್ವನಿಯಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರು ಪರಿನಿರ್ಮಾಣ (ನಿಧನ) ಹೊಂದಿದ ದಿನ. ಅದರ ಮಾರನೆ ದಿನ ಅಂದರೆ ಡಿ.೭ರಂದು ಅಸಾಮಾನ್ಯ ಸಾಧಕನ ಪಾರ್ಥಿವ ಶರೀರದ ಮುಂದೆ ಅಸಾಧ್ಯವಾದ ಘಟನೆಯೊಂದು ನಡೆಯಿತು. ಡಾ.ಬಿ.ಆರ್.ಅಂಬೇಡ್ಕರ್ ಅವರ ನೇತೃತ್ವದಲ್ಲಿ ಬಾಂಬೆಯಲ್ಲಿ ಬರುವ ಡಿಸೆಂಬರ್ ೧೬ ರಂದು ೧೦ಲಕ್ಷ ಜನರು ಬೌದ್ಧ ಧಮ್ಮ ಸ್ವೀಕರಿಸುವ ಎಲ್ಲಾ ಸಿದ್ಧತೆಗಳು ನಡೆದಿದ್ದವು. ಆದರೆ ಅಚಾನಕ್ ಬಾಬಾಸಾಹೇಬರು ಈ ಘಟನೆಗೆ ಹತ್ತು ದಿನದ ಮುಂಚೆ ತೀರಿಕೊಂಡಿದ್ದು, ಅವರ ಆಪ್ತ ಬಿ.ಕೆ.ಗಾಯಕ್ವಾಡ್ ಅವರನ್ನು ಇನ್ನಿಲ್ಲದ ಶೋಕಕ್ಕೆ ತಳ್ಳಿತ್ತು. ಆದರೆ ಗಾಯಕ್ವಾಡರು ಬಾಬಾ ಸಾಹೇಬರ ಈ ಇಂಗಿತವನ್ನು ನೆರೆದಿದ್ದ ಆ ಜನಸಾಗರದ ಮುಂದೆ ಇಟ್ಟು, ನೀವು ಬಾಬಾ ಸಾಹೇಬರ ಈ ಅತೀವ ಆಸೆಯನ್ನು ಈಡೇರಿಸ ಬಲ್ಲಿರಾ? ಎಂದಾಗ, ಆ ಮಾನವಸಾಗರವು ದುಃಖಿತ ಹರ್ಷೋದ್ಗಾರದೊಂದಿಗೆ ಸಮ್ಮತಿಯನ್ನು ಸೂಚಿಸಿತು. ಇಂತಹ ಅಪರೂಪದ ಘಟನೆ ಭಾರತೀಯ ಧಾರ್ಮಿಕ ಇತಿಹಾಸದಲ್ಲಿಯೇ ಎಂದೆಂದೂ ಅಳಿಸಲಾಗದ ಸ್ಮತಿ ಸ್ಮರಣೀಯ.

೧೯೫೬ ಅ.೧೪ರಲ್ಲಿ ನಡೆದ ೧೦ಲಕ್ಷ ಜನರ ಧಮ್ಮ ಪರಿವರ್ತನೆಯನ್ನು ಬಿಟ್ಟರೆ, ಈ ಘಟನೆಯು ಭಾರತದ ಚರಿತ್ರೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಬುದ್ದ ಧಮ್ಮ ಸ್ವೀಕರಿಸಿದಂತಹ ಘಟನೆಯಾಗಿದೆ. ಅದು ಯಾವ ಸಿದ್ಧತೆಯೂ ಇಲ್ಲದೆ. ಸ್ಮಶಾನದ ಒಳಗೆ ನಡೆದ ಈ ಚಾರಿತ್ರಿಕ ಕ್ಷಣ ಅಪೂರ್ವವಾದದ್ದು.

ಡಾ.ಬಿ.ಆರ್.ಅಂಬೇಡ್ಕರ್ ರವರು ತಾವು ಬದುಕಿದ್ದ ಕೊನೆಯ ಕ್ಷಣದವರೆಗೂ ಬಹುದೊಡ್ಡ ಸಂಕಲ್ಪಗಳೊಂದಿಗೆ ಬದುಕಿದ್ದರು.
ಆದರೆ ಅವರ ಸಂಕಲ್ಪಗಳು ಇಂದಿನ ತಲೆವಾರಿನಲ್ಲಿ ಮರೆಯಾಗುತ್ತಾ ಅವರ ವೈಭವೀಕರಣ, ಅತಿರೇಕದ ಅಭಿಮಾನ, ಆಚರಣೆಗಳೊಳಗೆ ಕಳೆದು ಹೊಗುತ್ತಿವೆ. ಮುಸ್ಲಿಂ ಮನೆಯಲ್ಲೊಂದು ‘ಕುರಾನ್’, ಕ್ರಿಶ್ಚಿುಂನ್ನರಿಗೆ ‘ಬೈಬಲ್’, ಇದ್ದ ಹಾಗೆಯೇ ಪ್ರತಿ ಶೋಷಿತರ ಮನೆಯಲ್ಲಿ ‘ಬುದ್ಧ ಮತ್ತು ಆತನ ಧಮ್ಮ’ ಕೃತಿ ಇರಬೇಕೆಂಬ ಬಹುದೊಡ್ಡ ಆಶಯವನ್ನು ಅವರು ವ್ಯಕ್ತ ಪಡಿಸಿದ್ದರು. ಅಂತಹ ಸಂಕಲ್ಪಗಳನ್ನು ಮರೆತು ಇಂದಿನ ಪರಿನಿಬ್ಬಾಣ ದಿನಾಚರಣೆಗಳು, ಅವರ ಪುತ್ತಳಿಯ ಮುಂದೆ ದೀಪಗಳನ್ನು ಮಾತ್ರ ಸುಡುತ್ತಿವೆ. ೬೫ ವರ್ಷಗಳಿಂದ ಎಷ್ಟು ದೀಪಗಳನ್ನು ಸುಟ್ಟಿದ್ದೀರಿ ಆದರೆ ಈಗಾ ನಮ್ಮೊಳಗಿನ ಸ್ವಾರ್ಥ, ಅಸೂಯೆ, ವಿಘಟನೆಯನ್ನೊಮ್ಮೆ ಸುಟ್ಟುಬಿಟ್ಟರೆ ಒಳ್ಳೆ ಬದುಕನ್ನು ಕಾಣಬಹುದೇನೊ. ಮಹಾನಾಯಕ ಧಾರಾವಾಹಿಯನ್ನು ನೋಡುವುದರೊಟ್ಟಿಗೆ ಅವರ ‘ವೇಟಿಂಗ್ ಫಾರ್ ವೀಸಾ‘ ಕೃತಿಯನ್ನು ಒಮ್ಮೆ ಓದಿ ಬಿಟ್ಟರೆ ನಮಗೆ ಮತ್ತಷ್ಟು ನೈಜ ಅಂಬೇಡ್ಕರವರು ಕಾಣಬಹುದೇನೊ.

ಅಂಬೇಡ್ಕರರಿಗೆ ಅದೆಷ್ಟು ಒತ್ತಡ ಬಂದರೂ ಕೂಡ ತಮ್ಮ ಬೋಂಗ್ರಫಿಯನ್ನು ಬರೆದುಕೊಳ್ಳಲಿಲ್ಲ. ಆದರೆ ಬರೆಯುವ ಇಂಗಿತವನ್ನು ವ್ಯಕ್ತ ಪಡಿಸಿದ್ದರು. ‘ಬುದ್ಧ ಮತ್ತು ಆತನ ಧಮ್ಮ’ ಹಾಗೂ ಇನ್ನಷ್ಟು ಗ್ರಂಥಗಳ ನಂತರದಲ್ಲಿ ಮಾತ್ರ ಎಂದಿದ್ದರು. ಆದರೆ ತಮ್ಮ ‘ವೇಟಿಂಗ್ ಫಾರ್ ವೀಸಾ’ ಎಂಬ ಕೃತಿಯಲ್ಲಿ ತಮ್ಮ ವೈಯಕ್ತಿಕ ಬದುಕಿನ ಒಂದಿಷ್ಟು ಘಟನೆಗಳನ್ನು ಬರೆದಿಟ್ಟಿದ್ದರು. ಈ ಪುಸ್ತಕವನ್ನು ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾಲಯ ತನ್ನ ವಿದ್ಯಾರ್ಥಿಗಳಿಗಾಗಿ ಪಠ್ಯಕ್ರಮವಾಗಿ ಸ್ವೀಕರಿಸಿತ್ತು. ಆಗಿನ್ನೂ ಭಾರತದ ಹಳ್ಳಿಗಳಲ್ಲಿ ಅಂಬೇಡ್ಕರ್ ನಾಮಫಲಕಗಳನ್ನು ಹಾಕಲೂ ಅವಕಾಶ ನೀಡದ ಕಾಲವದು.

ಡಿ.೬ರ ಆ ರಾತ್ರಿ ನಡೆದ ಘಟನೆಯ ಆಸುಪಾಸಿನಲ್ಲಿಯೇ ಅವರ ಪಾರ್ಥಿವ ಶರೀರವನ್ನು ಸಾರನಾಥಕ್ಕೆ ಕೊಂಡೊಯ್ಯಲು ಅವರ ಪತ್ನಿ ಸವಿತರವರು ಹಠ ಹಿಡಿದು ಕುಳಿತರು. ಆದರೆ ಅಭಿವಾನಿಗಳು ಮುಂಬೈಗೆ ಸಾಗಿಸಲು ಹಠ ಹಿಡಿದರು. ಆದರೆ ಮುಂಬೈಗೆ ಪಾರ್ಥಿವ ಶರೀರವನ್ನು ಸಾಗಿಸವ ಪ್ರಯಾಣದ ಹಣಕ್ಕಾಗಿ ಅಭಿವಾನಿಗಳು ತಮ್ಮ ಸ್ವಂತ ಕಾರನ್ನು ಮಾರಿದ್ದು, ಆನಂತರ ಜಗಜೀವನ್ ರಾಮ್ ರವರು ಇಂಡಿುಂನ್ ಏರ್‌ಲೈನ್ಸ್ ಮುಖಾಂತರ ಸಹಾಯ ಮಾಡಿದ್ದು, ಈಗ ಇತಿಹಾಸ. ಆದರೆ ಇಂತಹ ತ್ಯಾಗಪೂರ್ಣ ಬದುಕನ್ನು ಅವರು ಬದುಕಿದ್ದು ಯಾರ ಉಳಿವಿಗಾಗಿ ಎಂದೊಮ್ಮೆ ಇಂದಿನ ಭಾರತ ಯೋಚಿಸಬೇಕಾಗಿದೆ. ಇವರ ಬದುಕಿನ ತ್ಯಾಗದ ಇಂತಹ ಎಳೆ ಹಿಡಿದು ಇಂದಿನ ಯುವಪೀಳಿಗೆ ನಡೆಯಬೇಕಿದೆ.

ಇಂದು ಬೀದಿ ಬೀದಿಗಳಲ್ಲಿ ರಾರಾಜಿಸುವ ಬ್ಯಾನರ್‌ನಲ್ಲಿ ಮಹಾನಾಯಕರನ್ನು ನಾವು ಹುಡುಕಲಾರೆವು. ಹತ್ರಾಸ್‌ನಲ್ಲಿ ದೇಶದ ಕಣ್ಣೆದುರೆ ಸುಟ್ಟು ಹೋದ ಹೆಣ್ಣು ಮಗಳೊಬ್ಬಳ ಚಿತೆ ಕಿಚ್ಚಿನಲ್ಲಿ, ದಲಿತರ ಮಗು ಒಂದನ್ನು ದೇವಸ್ಥಾನದ ಹೊರಹಾಕಿದ ಅವವಾನದಲ್ಲಿ, ದಲಿತ ಹೆಣ್ಣುಮಗಳು ನೀರು ಕುಡಿದ ಕಾರಣಕ್ಕಾಗಿ ನೀರಿನ ತೊಂಬೆಯನ್ನು ಶುಚಿಗೊಳಿಸಿದ ಅವಮಾನದ ನೋವಿನೊಳಗೆ ಮಹಾನಾಯಕರು ನಮಗೆ ಕಾಣಲಿಲ್ಲವೆಂದರೆ ಅವರು ಮತ್ತೆಲ್ಲೂ ಕಾಣಲಾರರು.

 

 

andolana

Recent Posts

ಆಧುನಿಕ ಕಾಲಕ್ಕೆ ತಕ್ಕಂತೆ ಮನ್ರೇಗಾ ಹೆಸರು ಬದಲಾವಣೆ : ಸಂಸದ ಯದುವೀರ್‌

ಮೈಸೂರು : ಆಧುನಿಕ ಕಾಲಕ್ಕೆ ತಕ್ಕಂತೆ ಮನ್ರೇಗಾ ಹೆಸರನ್ನು ಕೇಂದ್ರ ಸರ್ಕಾರ ಬದಲಾಯಿಸಿದೆ. ಆದರೆ, ಕಾಂಗ್ರೆಸ್ ಮಾಡುತ್ತಿರುವ ಆರೋಪಕ್ಕೆ ಯಾವ…

6 hours ago

ತಂತ್ರಜ್ಞಾನ ಅಳವಡಿಸಿಕೊಂಡು ಉತ್ತಮ ಇಳುವರಿ ಜೊತೆಗೆ ಹೆಚ್ಚಿನ ಆದಾಯ ಪಡೆಯರಿ : ರೈತರಿಗೆ ಸಿಎಂ ಕರೆ

ಬೆಳಗಾವಿ : ರಾಜ್ಯ ಸರ್ಕಾರ ರೈತ ಪರ ಸರಕಾರವಾಗಿದ್ದು, ಕಬ್ಬು ಬೆಳೆಯುವ ಪ್ರದೇಶದಲ್ಲಿ ಮಣ್ಣಿನ ಆರೋಗ್ಯ ಮತ್ತು ನೀರಿನ ಸಮಗ್ರ…

6 hours ago

ಟಿ-20 ವಿಶ್ವಕಪ್‌ಗೆ ಭಾರತ ತಂಡ ಪ್ರಕಟ :ಸೂರ್ಯಕುಮಾರ್ ಯಾದವ್ ನಾಯಕ

ಹೊಸದಿಲ್ಲಿ: ಮುಂಬರುವ ಐಸಿಸಿ ಟಿ-೨೦ ವಿಶ್ವಕಪ್‌ಗಾಗಿ ೧೫ ಸದಸ್ಯರ ಭಾರತ ತಂಡವನ್ನು ಪ್ರಕಟಿಸಲಾಗಿದೆ. ತಂಡವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಲಿದ್ದು, ಶುಭಮನ್…

6 hours ago

ಮೊಟ್ಟೆ ಕ್ಯಾನ್ಸರ್‌ ಕಾರಕವಲ್ಲ : ಕೇಂದ್ರ ವರದಿ

ಹೊಸದಿಲ್ಲಿ : ಮೊಟ್ಟೆ ಸೇವೆನೆಗೆ ಸುರಕ್ಷಿತವಾಗಿದ್ದು ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕವಾಗುವ ಯಾವುದೇ ಅಂಶ ಪತ್ತೆ ಆಗಿಲ್ಲ ಎಂದು ಕೇಂದ್ರ ಆಹಾರ…

6 hours ago

‘ಅಂತರ್ಜಲ ಹೆಚ್ಚಳಕ್ಕೆ ಆದ್ಯತೆ ನೀಡಿ’ : ಶಿವಶಂಕರ್ ಸೂಚನೆ

ಚಾಮರಾಜನಗರ : ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವಂತಹ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಕೈಗೊಳ್ಳುವಂತೆ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಜಲಶಕ್ತಿ ಮಂತ್ರಾಲಯದ…

7 hours ago

ಮೈಸೂರು | ನಾಳೆಯಿಂದ ಅರಮನೆ ಅಂಗಳದಲ್ಲಿ ಫಲಪುಷ್ಪ ಪ್ರದರ್ಶನ

ಮೈಸೂರು : ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಸಂಭ್ರಮಾಚರಣೆಗಾಗಿ ಪ್ರವಾಸಿಗರು, ಸ್ಥಳೀಯರಿಗೆ ಮನರಂಜನೆ ಒದಗಿಸಲು ಅರಮನೆ ಅಂಗಳದಲ್ಲಿ ಡಿ.೨೧ರಿಂದ ೩೧ರವರೆಗೆ…

7 hours ago