35-45 ವರ್ಷಗಳೂ ಆಗಿರುವುದಿಲ್ಲ. ಫಿಟ್ & ಫೈನ್ ಆಗಿದ್ದವರು ಅಕಾಲ ಮರಣಕ್ಕೀಡಾದರೆ ದಿಗಿಲಾಗುತ್ತದೆ. ಆರೋಗ್ಯವನ್ನು ವೃದ್ಧಿಮಾಡಿಕೊಳ್ಳುವ ಯತ್ನದಲ್ಲೇ ಅವರು ಸಾವು ತಂದುಕೊಂಡರೆಂದರೆ? ಪುನೀತರಿಂದ ಸ್ಪಂದನವರೆಗೆ ಎಷ್ಟೊಂದು ಅಮೂಲ್ಯ ಜೀವಗಳು ಫಕ್ಕನೆ ಕಣ್ಮರೆಯಾಗಿಬಿಟ್ಟವು?
ದಿನ ಬೆಳಗಾದರೆ ಕಾಣಿಸುವ ಜಾಹೀರಾತಿನ ಹಾವಳಿ ಒಂದೆರಡಲ್ಲ. ನೋನಿಯಂತೆ, ಜೀನಿಯಂತೆ, ಜೆನ್‌ಸೆಂಗ್ ಅಂತೆ. ನಾನಾ ಬಗೆಯ ಸ್ಲಿಮ್ಮಿಂಗ್ ಅಂಡ್ ಟ್ರಿಮ್ಮಿಂಗ್ ಉತ್ಪನ್ನಗಳಂತೆ. ಇವುಗಳ ಔಷಧೀಯ ಗುಣ ಅತ್ತ ಇರಲಿ. ತಂದೊಡ್ಡುವ ಮಾರಕ ಪರಿಣಾಮಗಳನ್ನು ಯಾರು ವೈಜ್ಞಾನಿಕವಾಗಿ ಪರೀಕ್ಷಿಸಿ ಸುರಕ್ಷಿತ ಎಂದು ಹೇಳಿದ್ದಾರೆ?
ತಮ್ಮ ಪ್ರಾಡಕ್ಟ್‌ಗೆ ಸಂಜೀವಿನಿ ಗುಣ ಬರಲೆಂದು ಸ್ಟೀರಾಯ್ಡ್ ಮುಂತಾದವುಗಳನ್ನು ಯದ್ವಾ ತದ್ವಾ ಬೆರೆಸುವ ನೀಚರೂ ಕಡಿಮೆಯಿಲ್ಲ. ತೀವ್ರ ಡಯಾಬಿಟೀಸ್‌ನಿಂದ ಬಳಲುವವರೂ ತಮ್ಮ ಔಷಧಗಳೊಂದಿಗೆ ಧಾರಾಳವಾಗಿ ಸಿಹಿ ತಿನ್ನಬಹುದಂತೆ! ಯಾವುದೇ ಪಥ್ಯವಿಲ್ಲವಂತೆ. ಇಂತಹ ಬೋಗಸ್ ಪ್ರಚಾರಗಳಿಗೆ ಇತಿಮಿತಿಯಿಲ್ಲ.
ಆಲೋಪತಿಯಲ್ಲಿ ಹತ್ತ್ತು ಹನ್ನೆರಡು ವರ್ಷಗಳು ಒದ್ದಾಡಿ ಪಿಎಚ್.ಡಿ. ಮಾಡಿದ ವೈದ್ಯರೂ ಈ Quackಗಳ ಮುಂದೆ ಗಪ್ ಚುಪ್! ಈಗ ಎಲ್ಲೆಲ್ಲೂ ನಕಲಿಗಳದ್ದೇ ಸಾಮ್ರಾಜ್ಯ ನಡೆಯುತ್ತಿದೆ. ಯಾರ ಆರೋಗ್ಯ ಏನಾದರೆ ತನಗೇನು? ಯಾರನ್ನು ನಂಬಬೇಕು ಬಿಡಬೇಕು ಎಂಬುದೇ ಗೊತ್ತಾಗದ ಅಯೋಮಯ ಸ್ಥಿತಿ.
30-40ರ ವಯಸ್ಸಿನಲ್ಲಿ ಎಂಥವರೂ ಕೊಂಚ ಊದುತ್ತಾರೆ. ಅದೊಂದು ಸಹಜ ದೈಹಿಕ ಬದಲಾವಣೆ. ತೀರ ಹದಗೆಡದಂತೆ ನೋಡಿಕೊಳ್ಳುವುದೂ ಮುಖ್ಯ.
ನೀವು ತೆಳ್ಳಗಾಗಬೇಕೇ? Slim and trim ಆಗಿರಬೇಕೇ?
ನಿಮ್ಮ ಮನೆಯ ಯಾವ ಕೌಟುಂಬಿಕ ಆಹಾರ ತಿಂದು ಚೆನ್ನಾಗಿ ಅರಗಿಸಿಕೊಳ್ಳುತ್ತಿದ್ದೀರೋ ಅದನ್ನು ಅರ್ಧಭಾಗಕ್ಕೆ ಇಳಿಸಿ.
ಕಡಿಮೆ ಆಹಾರ, ಉತ್ತಮ ವ್ಯಾಯಾಮ ಜೊತೆ ಜೊತೆಗೆ ಸಾಗಲಿ. ಈಜಿಛಿಠಿ diet and execise should go together. ನೀವು ಬಯಸುವ ಟ್ರಿಮ್ ಬಾಡಿ ನಿಮ್ಮದಾಗುತ್ತದೆ.
ಯಾವುದು ಅನೈಸರ್ಗಿಕವೋ, ಕೃತಕವೋ, ಜಡ್ಡು ಜಾಪತ್ರಿ ತರುತ್ತದೆಯೋ ಅದರ ಸಹವಾಸವೇ ಬೇಡ. ಸಿಹಿ ಮತ್ತು ಜಿಡ್ಡು ಕಡಿಮೆ ಇರುವ ಮಿತಾಹಾರ ಹಾಗೂ ನಿಯಮಿತ ವ್ಯಾಯಾಮ ನಮ್ಮನ್ನು ಪ್ರತಿದಿನವೂ sense of well being ನಲ್ಲಿ ಇಡಬಲ್ಲದು.
ಸಿರಿಧಾನ್ಯ, ಸಾವಯವ, ಕಟ್ಟುಪವಾಸ, ಆಯಿಲ್ ಪುಲ್ಲಿಂಗ್, ನೋನಿ, ಗೋನಿ ಇತ್ಯಾದಿಗಳೆಲ್ಲವೂ ಕೇಮಿಲ್ಲದ ಕೆಲಸಗಳು. ಅಂತಿಮವಾಗಿ ಅವು ಮಾಡುವ ಹಾನಿಯನ್ನು ಯಾರೂ ಬಲ್ಲವರಿಲ್ಲ. ಕಿಡ್ನಿ, ಹೃದಯ, ಥೈರಾಯ್ಡ್, ಲಿವರ್ ಹೀಗೆ ಯಾವ್ಯಾವುದು ಡ್ಯಾಮೇಜ್ ಆಗುತ್ತದೋ ಗೊತ್ತಿಲ್ಲ. ಬೊಗಳೆ ದಾಸಯ್ಯರ ಪ್ರಚಾರ ಕೇಳಿ, ನಮ್ಮ ಪೂರ್ವಿಕರಿಂದ ಬಳುವಳಿಯಾಗಿ ಬಂದ ದೈವಿಕ ದೇಹದ ಆರೋಗ್ಯ ಹಾಳು ಮಾಡಿಕೊಳ್ಳುವುದು ಬೇಡ.
ನಾನು ಬೇವಿನ ರಸ ಕುಡಿತೀನಿ; ದಿನಾ ಆಯಿಲ್ ಪುಲ್ಲಿಂಗ್ ಮಾಡ್ತೀನಿ, ಒಂದೊಂದು ಬಾದಾಮಿ ತಿಂತೀನಿ, ಬೆಳ್ಳುಳ್ಳಿ ಅಗಿತೀನಿ, ಈರುಳ್ಳಿ ಜಗಿತೀನಿ ಅಂತ ಬಾಯೆಲ್ಲಾ ಗಬ್ಬೆಬ್ಬಿಸಿಕೊಂಡು ಮಾತಾಡುವವರನ್ನು ದಿನವೂ ನೋಡುತ್ತಿದ್ದೇವೆ. ಇವೆಲ್ಲವೂ ಮೂರ್ ಮೂರ್ ದಿನದ ಆಟಗಳು. ಮುಂದುವರಿಸಿದ ಯಾರೊಬ್ಬರೂ ನನಗೆ ಸಿಕ್ಕಿಲ್ಲ.
ಸದಾ ವಾಸ್ತವದಲ್ಲಿರಿ. ಸಹಜವಾಗಿರಿ. ಸುಂದರವಾಗಿರಿ.
ಲೇಖಕ ಜೋಗಿ ಒಂದೆಡೆ ಬರೆದಿದ್ದರು; ಗುರುಗಳು ಮನೆಗೆ ಬಂದಿದ್ದರು. ಮನೆಯಲ್ಲಿ ಸಿರಿಧಾನ್ಯದ ಉಪ್ಪಿಟ್ಟು ಮಾಡಿದ್ದೆವು. ಎರಡನೇ ತುತ್ತು ಬಾಯಿಗಿಡುತ್ತಿದ್ದಂತೆ ಗುರುಗಳು
‘ಇದಾವ ಧಾನ್ಯ?’ ಎಂದು ಕೇಳಿದರು. ‘ಮಿಲ್ಲೆಟ್ಸ್’. ಇದು ‘ಸಾಮೆ’ ಅಂದೆ. ‘ಇದನ್ನೇಕೆ ತಿನ್ನುತ್ತಿದ್ದೀಯ?’
‘ಆರೋಗ್ಯಕ್ಕೆ ಒಳ್ಳೆಯದಂತೆ, ತೆಳ್ಳಗಾಗುತ್ತಾರಂತೆ, ರಕ್ತದೊತ್ತಡ ಕಡಿಮೆ ಆಗುತ್ತದಂತೆ’ ಅಂದೆ. ಗುರುಗಳು ನಕ್ಕರು. ‘ನಿಮ್ಮ ಮನೆಯ ಹಿರಿಯರ ಫೋಟೋ ಇದೆಯಾ?’ ಅಂತ ಕೇಳಿದರು. ನಮ್ಮ ಕುಟುಂಬದ ಹಿರಿಯರ ಫೋಟೋ ಕೊಟ್ಟೆ. ‘ಇದಕ್ಕೂ ಹಳೆಯ ತಲೆಮಾರಿನ ಫೋಟೋ ಇದ್ದರೆ ಕೊಡು’ ಅಂದರು. ನಮ್ಮಪ್ಪ, ದೊಡ್ಡಪ್ಪ, ಚಿಕ್ಕಪ್ಪಂದಿರ ಫೋಟೋ ಕೊಟ್ಟೆ. ಅದನ್ನೇ ದಿಟ್ಟಿಸುತ್ತಾ ಗುರುಗಳು ಹೇಳಿದರು, ‘ಇವರೆಲ್ಲ ತೆಳ್ಳಗೇ ಇದ್ದಾರಲ್ಲ! ಇವರು ಯಾವ ಸಾಮೆ ತಿನ್ನುತ್ತಿದ್ದರು?’
‘ಇವರಿಗಿಂತ ಹಿರಿಯರೂ ತೆಳ್ಳಗೇ ಇದ್ದಿರಬೇಕು. ಅವರೂ ಸಿರಿಧಾನ್ಯ ತಿನ್ನುತ್ತಿರಲಿಲ್ಲ ಅಲ್ಲವೇ?’
‘ಈ ಜಗತ್ತಿನಲ್ಲಿ ಕೇವಲ ಐದಾರು ವರ್ಷಗಳ ಹಿಂದೆ ಯಾರೂ ಸಿರಿಧಾನ್ಯ ತಿನ್ನುತ್ತಿರಲಿಲ್ಲ. ಅವೇನಿದ್ದರೂ ಬರಗಾಲದ ಅನಿವಾರ್ಯ ಆಹಾರಗಳು’
‘ಇಪ್ಪತ್ತು ವರ್ಷಗಳ ಹಿಂದೆ ಎಲ್ಲರೂ ತೆಳ್ಳಗೇ ಇದ್ದರು. ಆರೋಗ್ಯವಂತರಾಗಿಯೂ ಇದ್ದರು. ಅಲ್ಲವೇ?’ ಎಂದರು. ತಲೆಯಾಡಿಸಿದೆ.
ಗುರುಗಳು ನಗುತ್ತಾ ಹೇಳಿದರು ‘ಅಂದರೆ ನಿನ್ನ ಅತಿ ತೂಕದ ಸಮಸ್ಯೆಗೆ ಕಾರಣ ಅನ್ನ ಅಲ್ಲ. ನಿನ್ನ ಜೀವನ ವಿಧಾನ. ನಿಮ್ಮಪ್ಪ ದುಡೀತಿದ್ದರು. ನಿನ್ನ ತಾತ ನಡೀತಿದ್ದರು. ಓಡಾಡುತ್ತಿದ್ದರು. ಬೆವರುತ್ತಿದ್ದರು. ದೇಹವನ್ನು ದಂಡಿಸುತ್ತಿದ್ದರು. ಶ್ರಮ ಪಡುತ್ತಿದ್ದರು. ನಿಮ್ಮ ಮನೆಯಿಂದ ಮತ್ತೊಂದು ಮನೆಗೆ ಹೋಗುವುದಕ್ಕೆ ಬೈಕು ಹತ್ತುತ್ತಿರಲಿಲ್ಲ. ಯಾವತ್ತೂ ಇಡೀ ದಿನ ಕೂತುಕೊಂಡೇ ಕಾಲ ಕಳೆಯುತ್ತಿರಲಿಲ್ಲ. ತಲೆ ಬಗ್ಗಿಸಿ ಮೊಬೈಲ್ ನೋಡುತ್ತಾ ಬದುಕು ಸವೆಸುತ್ತಿರಲಿಲ್ಲ. ಚಿಪ್ಸ್ ತಿನ್ನುತ್ತಾ ಕ್ರಿಕೆಟ್ ನೋಡುತ್ತಿರಲಿಲ್ಲ. ಆಟ ಆಡುತ್ತಿದ್ದರು. ಮೂಟೆ ಹೊರುತ್ತಿದ್ದರು. ನೀರು ಸೇದುತ್ತಿದ್ದರು. ಹತ್ತು ಮನೆಯ ಕಷ್ಟ ಅಂದರೆ ಹೋಗಿ ಹೆಗಲು ಕೊಟ್ಟು ಬರುತ್ತಿದ್ದರು. ಹೌದಾ?’ ತಲೆಯಾಡಿಸಿದೆ.
‘ಅಂದರೆ ನೀನು ಬದಲಾಯಿಸಬೇಕಾದದ್ದು ನಿನ್ನ ಆಹಾರವನ್ನಲ್ಲ, ಜೀವನ ಶೈಲಿಯನ್ನು. ನಾನು ಪಂಜಾಬಿನುದ್ದಗಲ ಓಡಾಡಿದ್ದೇನೆ. ಅಲ್ಲಿ ನೂರು ನೂರೈವತ್ತು ಕೆಜಿ ತೂಗುವ ಸಾಕಷ್ಟು ಮಂದಿ ಇದ್ದಾರೆ. ಅವರು ಗೋದಿ ತಿನ್ನುವವರು. ಆದರೂ ಬೊಜ್ಜು ಬೆಳೆಸಿಕೊಂಡಿದ್ದಾರೆ. ಅಂದರೆ ಬೊಜ್ಜು ಇಳಿಸುವುದಕ್ಕೆ ಗೋದಿ ತಿಂದು ಪ್ರಯೋಜನ ಇಲ್ಲ. ಸಣ್ಣಗಾಗುವುದಕ್ಕೆ ಸಿರಿಧಾನ್ಯ ತಿಂದು ಉಪಯೋಗವಿಲ್ಲ. ಸಿರಿಧಾನ್ಯವನ್ನು ಒಂದು ಗಂಟೆ ನೀರಲ್ಲಿ ನೆನೆಸಿಟ್ಟು ನೋಡು. ಅದು ನೆನೆಯುವುದಿಲ್ಲ. ನೀರನ್ನು ಹೀರುವುದಿಲ್ಲ. ಒಂದು ಪಾವು ಅಕ್ಕಿ ಅನ್ನ ಆಗಬೇಕಿದ್ದರೆ ಎರಡೂವರೆ ಪಾವು ನೀರು ಬೇಕು. ಸಿರಿಧಾನ್ಯ ಅದರ ಅರ್ಧದಷ್ಟು ನೀರಲ್ಲಿ ಬೇಯುತ್ತದೆ. ನೀರು ಹೀರಿಕೊಳ್ಳದ ಧಾನ್ಯ ಒಳ್ಳೆಯದಲ್ಲ. ಒಂದು ವರ್ಷ ಸಿರಿಧಾನ್ಯವನ್ನೇ ತಿಂದು ನೋಡು. ಥೈರಾಯ್ಡ್ ಗ್ರಂಥಿ ಇನ್ನಿಲ್ಲದಂತೆ ಏನೇನನ್ನೋ ಸ್ರವಿಸಲು ಶುರುಮಾಡುತ್ತದೆ. ದೇಹ ರೋಗದ ಗೂಡಾಗುತ್ತದೆ’.
‘ಹೋಗಲಿ, ಸಿರಿಧಾನ್ಯ ನೀರಿಲ್ಲದ ಪ್ರದೇಶದಲ್ಲೂ ಬೆಳೆಯಬಲ್ಲ, ಅತಿ ಕಡಿಮೆ ಖರ್ಚಲ್ಲಿ ಬೆಳೆಯುವಂಥ ಧಾನ್ಯ. ಅದಕ್ಕೆ ಅಕ್ಕಿಯ ಮೂರು ಪಟ್ಟು ಬೆಲೆ ಯಾಕಿದೆ ಹಾಗಿದ್ದರೆ?’ ‘ಅಕ್ಕಿಯೊಳಗನ್ನವನು ಮೊದಲು ಕಂಡ ಜ್ಞಾನಿ, ಸಿರಿಧಾನ್ಯವನ್ನೇಕೆ ನಮ್ಮ major staple food ಅಂತ ನಿರ್ಧರಿಸಲಿಲ್ಲ? ಏಕೆಂದರೆ ಅದು ಆರೋಗ್ಯವಂತ ಆಹಾರ ಅಲ್ಲವೇ ಅಲ್ಲ. ಅದನ್ನು ಈಗ ಮಾರ್ಕೆಟಿಂಗ್ ಸಂಸ್ಥೆಗಳೂ ವೈದ್ಯರೂ ಸೇರಿ Promote ಮಾಡುತ್ತಿದ್ದಾರೆ. ನಾವು ನಮ್ಮ ಸುತ್ತಮುತ್ತ ಏನು ಬೆಳೆಯುತ್ತೇವೋ ಅದೇ ನಮಗೆ ಶ್ರೇಷ್ಠವಾದ ಆಹಾರ’
‘ಆಹಾರ ಪದ್ಧತಿ ಬದಲಾಯಿಸಬೇಡ, ಜೀವನ ಶೈಲಿ ಬದಲಾಯಿಸು. ಎಲ್ಲವೂ ಬದಲಾಗುತ್ತದೆ’
‘ಕುಂತಲ್ಲೇ ಕೂತು, ಕೈ ಕಾಲುಗಳನ್ನು ಮೈಯನ್ನು ಹೇಗೆ ಬಳಸಬೇಕೋ ಹಾಗೆ ಬಳಸದೇ, ಆ ಕೊರತೆ ನೀಗಿಕೊಳ್ಳಲು ಸಿರಿಧಾನ್ಯ ತಿನ್ನುತ್ತೇನೆ ಅನ್ನೋದು ಪರಮ ದಡ್ಡತನ’ ಅಂದರು.
ಆವತ್ತೇ ರಾತ್ರಿ ಬಿಸಿಬಿಸಿ ಅನ್ನಕ್ಕೆ ಘಮಘಮಿಸುವ ಸಾರು, ಒಂದು ಮಿಳ್ಳೆ ತುಪ್ಪ ಹಾಕಿಕೊಂಡು ಹೊಟ್ಟೆ ತುಂಬ ತಿಂದೆ.
ಸಿರಿಧಾನ್ಯಕ್ಕೆ ಹುಚ್ಚಿಗೆ ಬಲಿಯಾಗುತ್ತಿದ್ದವನನ್ನು ಗುರುಗಳು ಬಂದು ಕಾಪಾಡಿದರು.
‘ಹೌದು, ಬದಲಾಯಿಸಬೇಕಾದದ್ದು ಜೀವನಶೈಲಿಯನ್ನು, ಆಹಾರ ಪದ್ಧತಿಯನ್ನಲ್ಲ’
ನನ್ನೋರ್ವ ಪೊಲೀಸ್ ಗುರುಗಳು ತಲೆಗೆ ತಿಕ್ಕಿದ್ದ ಮಾತು; ‘ಪ್ರತಿದಿನವೂ ಕನಿಷ್ಠ ಮೂರು ಚಮಚೆ ಬೆವರು ಬಸಿ. ಯೂನಿಫಾರಂನಲ್ಲಿ ಎಂದೂ ಡೊಳ್ಳೊಟ್ಟೆ ಬೆಳೆಸಿಕೊಳ್ಳ ಬೇಡ’ ಬೆಳಗಿನ ಐದಕ್ಕೆ ಎದ್ದಿರಬೇಕು. ರಾತ್ರಿ ಹತ್ತಕ್ಕೆ ಬಿದ್ದಿರಬೇಕು. ಕನಿಷ್ಠ ನಲವತ್ತು ನಿಮಿಷದ ವಾಕ್ ಮಾಡು. ಕಡಿಮೆ ತೂಕದ ಡಂಬೆಲ್ಸ್. ಹೆಚ್ಚು Repetitions ಇರಲಿ. ರಾತ್ರಿ ಗಸ್ತನ್ನು ನಡೆದುಕೊಂಡೇ ಮಾಡು. ಜೀಪು ಹಿಂದಿನಿಂದ ಹಿಂಬಾಲಿಸಲಿ!
ಪ್ರತಿ ಎರಡು ಮೂರು ಗಂಟೆಗಳಿಗೊಮ್ಮೆ ಕುರ್ಚಿಯಿಂದ ಎದ್ದು ಕೈಕಾಲು ಆಡಿಸುತ್ತಾ ಹತ್ತು ನಿಮಿಷದ ಚಿಕ್ಕ steching ವ್ಯಾಯಾಮ ಮಾಡು. ಹೊಟ್ಟೆ ಚೆನ್ನಾಗಿ ಹಸಿಯುತ್ತೆ. ತಿಂದದ್ದನ್ನು ಹಾಗೇ ಕಳಿಸುತ್ತೆ. incoming ougoing ಸರಿಯಾಗಿದ್ರೆ ಎಲ್ಲವೂ ನೆಟ್ಟಗಿರುತ್ತೆ.
ನಿಮ್ಮ ಮನೆ ಆಹಾರದಲ್ಲಿ ಮೊದಲಿಂದ ಯಾವುದು ರೂಢಿಯಲ್ಲಿದೆಯೋ, ಹಿತವೋ, ದೇಹಕ್ಕೆ ಒಗ್ಗುತ್ತೋ ಅದನ್ನು ತಿನ್ನಪ್ಪಾ ಸಾಕು. ಎಲ್ಲರೂ ಹೇಳುವ oಡಿಛಿಛಿಠಿ,sweet,meet,fat ಕೊಂಚ ದೂರದಲ್ಲಿರಲಿ. ಹದದಲ್ಲಿರಲಿ. ಕೂರುವುದು, ನಿಲ್ಲುವುದು, ನಡೆಯುವುದು ಎಲ್ಲದರಲ್ಲೂ ಪೊಲೀಸ್ ಶಿಸ್ತು ಇರಲಿ. ಸೊಂಟ ಬಿದ್ದವನಂತೆ ಎಂದೂ ಶ್ಯಾಬಿಯಾಗಿ ಇರಬೇಡ. ಹಲ್ಲುಜ್ಜುವುದನ್ನು ಮರೆತರೂ ಶೇವ್ ಮಾಡೋದನ್ನು ಮರೀಬೇಡ. ಎಂದೂ ಹ್ಯಾಪಮೋರೆ ಹಾಕಬೇಡ. ಮಫ್ತಿಯಲ್ಲಿದ್ದರೂ ಸರಿ. ನಿನ್ನನ್ನು ಯಾರೇ ನೋಡಲಿ. ನೀನೊಬ್ಬ ಶಿಸ್ತಿನ ಸಿಪಾಯಿಯಂತೆ ಕಾಣಬೇಕು. ಲಡಾಸು ಬಾಡಿಯ ಸೊಗಸುಗಾರ dandi ಆಗಬೇಡ! ಆಳು ನೋಡಿದ್ರೆ ಅಬ್ಬಬ್ಬಾ ಬಾಡಿ ನೋಡಿದ್ರೆ ಬಡ್ಕೋಬೇಕು! ಹಾಗಿರಕೂಡದು!
be away from three ws-wine,women,wealth ಕುಡಿತ, ಜೂಜಾಟ, ಸ್ಮೋಕಿಂಗ್, ಪಾನ್ ಜಗಿಯೋದು ಕುತೂಹಲಕ್ಕೂ ಕೂಡದು. ಹೊರಗಡೆ ತಿನ್ನೋದನ್ನು avoid ಮಾಡು ಸಾಕು. ನಿನ್ನ ಆರೋಗ್ಯ ನಿನ್ನ ಕೈಲಿರುತ್ತೆ. ನಿನ್ನ ದೇಹವನ್ನು ಎಷ್ಟು ದಂಡಿಸುತ್ತೀಯೋ? ಅಷ್ಟೂ ಅದು ಆರೋಗ್ಯದಿಂದ ನಳನಳಿಸುತ್ತದೆ!
ಕೃಪೆ: ವಾಟ್ಸಪ್‌ನಿಂದ ಒಂಚೂರು. ಉಳಿದದ್ದು ನನಗೆ ನಾನೇ ಸ್ವಂತಕ್ಕೆ ಹೇಳಿಕೊಂಡದ್ದು.
ನಿಮಗಲ್ಲ!
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…