ಎಡಿಟೋರಿಯಲ್

ಹಸಿದವರ ಲೆಕ್ಕಾಚಾರಕ್ಕೆ ಮುನಿದವರ ತಿಣುಕಾಟ

ವರದಿ ಸೂಚಿಸಿರುವ ಸುಧಾರಣಾ ಕ್ರಮಗಳತ್ತ ಗಮನ ಹರಿಸದೇ ವರದಿಯೇ ಸರಿಯಿಲ್ಲ ಎನ್ನುವುದು ಅಪ್ರಬುದ್ಧತೆಯನ್ನಷ್ಟೇ ತೋರಿಸುತ್ತದೆ !

ರಾಜಾರಾಂ ತಲ್ಲೂರು

ಸದ್ಯ ದೇಶದಲ್ಲಿ ಸುಮಾರು 40% ಜನ ಬಡತನ ರೇಖೆಗಿಂತ ಕೆಳಗಿದ್ದಾರೆ. ಬಡವರು, ಕಡು ಬಡತನಕ್ಕಿಳಿದಿದ್ದಾರೆ. ಈ ಕಾರಣಕ್ಕಾಗಿಯೇ ಭಾರತ ಸರ್ಕಾರ ಕೋವಿಡ್ ಕಾಲದಲ್ಲಿ ಪರಿಹಾರ ಪ್ಯಾಕೇಜುಗಳನ್ನು ಪ್ರಕಟಿಸಿತ್ತು. ಹೀಗೆ ಬಡತನಕ್ಕೆ ನೂಕಿಸಿಕೊಂಡಾಗ, ಸಹಜವಾಗಿಯೇ ಹಸಿವಿನ ಹೆಚ್ಚಳ, ದೈನಂದಿನ ಪೋಷಕಾಂಶಗಳಲ್ಲಿ ಕೊರತೆ ಕಾಣಿಸಿಕೊಳ್ಳಲೇಬೇಕು. ಹೆಚ್ಚುತ್ತಿರುವ ಆತ್ಮಹತ್ಯೆಗಳು, ಸಾಮಾಜಿಕ- ಆರ್ಥಿಕ ಅಪರಾಧಗಳು, ನಿರುದ್ಯೋಗ… ಎಲ್ಲವೂ ಪರಿಸ್ಥಿತಿ ಹದಗೆಡುತ್ತಿರುವುದನ್ನೇ ಬೊಟ್ಟು ಮಾಡುತ್ತಿವೆ. ಸ್ವತಃ ಸರ್ಕಾರ ಮತ್ತು ಭಾರತದ ರಿಸರ್ವ್ ಬ್ಯಾಂಕ್ ದೇಶದ ಒಟ್ಟು ಆರ್ಥಿಕ- ಸಾಮಾಜಿಕ ಸ್ಥಿತಿಯನ್ನು ಡೋಲಾಯಮಾನವಾಗದಂತೆ ನಿಭಾಯಿಸಲು ಹೆಣಗಾಡುತ್ತಿರುವುದು ಪ್ರತಿದಿನ ಕಾಣಿಸುತ್ತಿದೆ.

ಜಾಗತಿಕ ಹಸಿವಿನ ಸೂಚ್ಯಂಕದ ವರದಿ ಬಿಡುಗಡೆ ಆಗಿದ್ದು, ಅದರಲ್ಲಿ ಭಾರತ ಒಟ್ಟು 121 ದೇಶಗಳಲ್ಲಿ 107ನೇ ಸ್ಥಾನದಲ್ಲಿದೆ. ದಕ್ಷಿಣ ಏಷ್ಯಾದಲ್ಲಿ ಭಾರತಕ್ಕಿಂತ ಕಳಪೆ ಸ್ಥಾನದಲ್ಲಿರುವ ದೇಶ ಅಫ್ಘಾನಿಸ್ತಾನ (109). ಉಳಿದಂತೆ, ಶ್ರೀಲಂಕಾ(64), ನೇಪಾಳ(81), ಬಾಂಗ್ಲಾದೇಶ(84) ಮತ್ತು ಪಾಕಿಸ್ತಾನ (99) ಕೂಡ ಭಾರತಕ್ಕಿಂತ ಮೇಲ್ದರ್ಜೆಯ ಸೂಚ್ಯಂಕ ಪಡೆದಿವೆ. ವಿಶ್ವಸಂಸ್ಥೆಯ ವಿವಿಧ ಅಂಗಸಂಸ್ಥೆಗಳು ಮತ್ತಿತರ ವಿಶ್ವಾಸಾರ್ಹ ಜಾಗತಿಕ ಸಂಸ್ಥೆಗಳ ವರದಿಗಳಿಂದ ಆರಿಸಿದ ಡೇಟಾಗಳನ್ನೇ ಇಟ್ಟುಕೊಂಡು ತಯಾರಿಸಿದ ಸೂಚ್ಯಂಕಪಟ್ಟಿ ಇದು.

ತನ್ನನ್ನು ತಾನಿರುವ ಗಾತ್ರಕ್ಕಿಂತ ಭೂಮಗಾತ್ರದಲ್ಲಿ ಬಿಂಬಿಸಿಕೊಂಡು ತನ್ನ ಬೆಂಬಲಿಗರ ಕೆರೆತ ತಣಿಸುವುದನ್ನೇ ಉದ್ಯೋಗ ಮಾಡಿಕೊಂಡಿರುವ ಭಾರತ ಸರ್ಕಾರಕ್ಕೆ ಇದು ಇರುಸು ಮುರುಸು ಉಂಟು ಮಾಡಿದ್ದು, ಈ ವರದಿಗೆ ಮಹಿಳಾ ಮತ್ತು ಶಿಶು ಕಲ್ಯಾಣ ಇಲಾಖೆಯೇ ಆಕ್ಷೇಪ ವ್ಯಕ್ತಪಡಿಸಿದೆ. ಇದು ಭಾರತದ ಕುರಿತು ಜಾಗತಿಕವಾಗಿ ತಪ್ಪು ಅಭಿಪ್ರಾಯ ಮೂಡಿಸುವ ಪ್ರಯತ್ನಗಳ ಭಾಗ ಎಂದು ಅದು ಆಪಾದಿಸಿದೆ.

ಜಗತ್ತಿನಾದ್ಯಂತ ದೇಶಗಳಲ್ಲಿ ಒಂದು ದಿನಕ್ಕೆ ಒಂದು ಮಗುವಿಗೆ ಆಹಾರ ರೂಪದಲ್ಲಿ ಸಿಗಬೇಕಾದ ಪೋಷಕತತ್ವಗಳ ಕ್ಯಾಲರಿ ಪ್ರಮಾಣ (ಅಂಡರ್‌ನರಿಷ್ಮೆಂಟ್), ಮಗುವಿನ ಪ್ರಾಯಕ್ಕೆ ತಕ್ಕ ಎತ್ತರ ಬೆಳವಣಿಗೆಯ ಸಾಧನೆ (ಚೈಲ್ಡ್ ಸ್ಟಂಟಿಂಗ್), ಪ್ರಾಯಕ್ಕೆ ತಕ್ಕ ತೂಕದ ಸಾಧನೆ (ಚೈಲ್ಡ್‌ವೆಸ್ಟಿಂಗ್) ಹಾಗೂ ಐದು ವರ್ಷದ ಒಳಗಿನ ಮಕ್ಕಳ ಮರಣ ದರಗಳ (ಚೈಲ್ಡ್ ಮಾರ್ಟಾಲಿಟಿ) ಅಧಿಕೃತ ಅಂಕಿ ಸಂಖ್ಯೆಗಳನ್ನು ಆಧರಿಸಿ ತೆಗೆಯಲಾಗಿರುವ ಈ ಲೆಕ್ಕಾಚಾರ ಭಾರತಕ್ಕೆ ಎಷ್ಟು ಪ್ರಸ್ತುತವೋ, ಜಗತ್ತಿನ ಬೇರೆ ಬೇರೆ ದೇಶಗಳಿಗೂ ಅಷ್ಟೇ ಪ್ರಸ್ತುತ. ಹಾಗಾಗಿ, ಮಾನದಂಡಗಳಲ್ಲಿ ಏರುಪೇರುಗಳೇನಾದರೂ ಇದ್ದರೆ ಅದು ಕೇವಲ ಭಾರತಕ್ಕಷ್ಟೇ ಅನ್ವಯ ಆಗುವಂತಹದಲ್ಲ ಎಂಬ ಸರಳ ವಾಸ್ತವವನ್ನು ಸರ್ಕಾರ ತನ್ನ ಸಮರ್ಥನೆಯ ಭರಾಟೆಯಲ್ಲಿ ಮರೆತಂತಿದೆ.

ಇದೇ ಸರ್ಕಾರ ಮತ್ತದರ ತುತ್ತೂರಿ ಮಾಧ್ಯಮಗಳು, ಪ್ರತೀ ೨-೩ ತಿಂಗಳುಗಳಿಗೊಮ್ಮೆ, ಮಾರ್ನಿಂಗ್ ಕನ್‌ಸಲ್ಟ್ ಎಂಬ ಹೆಸರಿನ ಮಬ್ಬು ಹಿನ್ನೆಲೆಯ ಸಂಸ್ಥೆಯೊಂದು 130 ಕೋಟಿ ಜನಸಂಖ್ಯೆ ಇರುವ ಈ ದೇಶದ ಪ್ರಧಾನ ಮಂತ್ರಿಗಳ ಬಗ್ಗೆ ಕೇವಲ 5000 ಜನರಲ್ಲಿ ಕೇಳಿ ನಿರ್ಧರಿಸಲಾಗಿರುವ ಜನಪ್ರಿಯತೆ ಹಿಗ್ಗುತ್ತಿರುವುದನ್ನು ತಪ್ಪದೇ ಪ್ರಚಾರ ಮಾಡಿಕೊಳ್ಳುತ್ತವೆ. ಈ ಸಮೀಕ್ಷೆಗೆ ಹೋಲಿಸಿದರೆ, ಎಏಐ ಬಹಳ ಹೆಚ್ಚು ವಿಶ್ವಾಸಾರ್ಹ.

ಕೋವಿಡೋತ್ತರ ಸ್ಥಿತಿ

ಈ ಎಏಐ ಸಮೀಕ್ಷೆಯನ್ನು ಹೊರಗಿಟ್ಟು ನೋಡಿದರೂ, ಪರಿಸ್ಥಿತಿಯೇನೂ ಬಹಳ ಬದಲಾಗುವುದಿಲ್ಲ. ಭಾರತದ ಆರ್ಥಿಕ ಸ್ಥಿತಿ ಚೆನ್ನಾಗಿಲ್ಲ ಎಂದು ಈಗೀಗ ಬಹಿರಂಗವಾಗಿಯೇ ಒಪ್ಪಿಕೊಳ್ಳುವ ಭಾರತ ಸರ್ಕಾರ, ನಮ್ಮಲ್ಲಿ ಮಾತ್ರವಲ್ಲ, ಜಗತ್ತಿನಾದ್ಯಂತ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಬೇರೆ ದೇಶಗಳಿಗೆ ಹೋಲಿಸಿದರೆ ನಾವು ಒಳ್ಳೆಯ ಸ್ಥಿತಿಯಲ್ಲಿದ್ದೇವೆ ಎಂದು ಸಮಜಾಯಿಷಿ ಕೊಡತೊಡಗಿದೆ. ನೋಟು ರದ್ಧತಿ ಮತ್ತು ಆ ಬಳಿಕ ಕೋವಿಡ್ ನಿರ್ವಹಣೆಯಲ್ಲಿನ ಗೊಂದಲಗಳ ಹೊಡೆತದಿಂದಾಗಿ 15-20 ಕೋಟಿ ಮಂದಿ ಭಾರತೀಯರು ಹೊಸದಾಗಿ ಬಡತನದ ರೇಖೆಗಿಂತ ಕೆಳಗಿಳಿದಿದ್ದಾರೆ ಎಂಬುದನ್ನು ಹೆಚ್ಚಿನ ಅರ್ಥಶಾಸ್ತ್ರಜ್ಞರು ಒಪ್ಪುತ್ತಾರೆ.

ಇದು 2019ರ ಹೊತ್ತಿಗೆ ದೇಶದಲ್ಲಿ ಬಡತನ ರೇಖೆಗಿಂತ ಕೆಳಗಿದ್ದ ಸುಮಾರು 23 ಕೋಟಿ ಜನಸಂಖ್ಯೆಗೆ ಹೆಚ್ಚುವರಿ ಸೇರ್ಪಡೆ. ಅಂದರೆ, ಸದ್ಯ ದೇಶದಲ್ಲಿ ಸುಮಾರು 40% ಜನ ಬಡತನ ರೇಖೆಗಿಂತ ಕೆಳಗಿದ್ದಾರೆ. ಬಡವರು, ಕಡು ಬಡತನಕ್ಕಿಳಿದಿದ್ದಾರೆ. ಈ ಕಾರಣಕ್ಕಾಗಿಯೇ ಭಾರತ ಸರ್ಕಾರ ಕೋವಿಡ್ ಕಾಲದಲ್ಲಿ ಪರಿಹಾರ ಪ್ಯಾಕೇಜುಗಳನ್ನು ಪ್ರಕಟಿಸಿತ್ತು. ಹೀಗೆ ಬಡತನಕ್ಕೆ ನೂಕಿಸಿಕೊಂಡಾಗ, ಸಹಜವಾಗಿಯೇ ಹಸಿವಿನ ಹೆಚ್ಚಳ, ದೈನಂದಿನ ಪೋಷಕಾಂಶಗಳಲ್ಲಿ ಕೊರತೆ ಕಾಣಿಸಿಕೊಳ್ಳಲೇಬೇಕು. ಹೆಚ್ಚುತ್ತಿರುವ ಆತ್ಮಹತ್ಯೆಗಳು, ಸಾಮಾಜಿಕ- ಆರ್ಥಿಕ ಅಪರಾಧಗಳು, ನಿರುದ್ಯೋಗ… ಎಲ್ಲವೂ ಪರಿಸ್ಥಿತಿ ಹದಗೆಡುತ್ತಿರುವುದನ್ನೇ ಬೊಟ್ಟು ಮಾಡುತ್ತಿವೆ. ಸ್ವತಃ ಸರ್ಕಾರ ಮತ್ತು ಭಾರತದ ರಿಸರ್ವ್ ಬ್ಯಾಂಕ್ ದೇಶದ ಒಟ್ಟು ಆರ್ಥಿಕ- ಸಾಮಾಜಿಕ ಸ್ಥಿತಿಯನ್ನು ಡೋಲಾಯಮಾನವಾಗದಂತೆ ನಿಭಾಯಿಸಲು ಹೆಣಗಾಡುತ್ತಿರುವುದು ಪ್ರತಿದಿನ ಕಾಣಿಸುತ್ತಿದೆ.

ಇಂತಹದೊಂದು ಸನ್ನಿವೇಶದಲ್ಲಿ, ಈ ವರದಿ ಸೂಚಿಸಿರುವ ಸುಧಾರಣಾ ಕ್ರಮಗಳತ್ತ ಗಮನ ಹರಿಸುವುದನ್ನು ಬಿಟ್ಟು ವರದಿಯೇ ಸರಿಯಿಲ್ಲ ಎಂದು ವಾದಕ್ಕಿಳಿಯುವುದು ಅಪ್ರಬುದ್ಧತೆಯನ್ನಷ್ಟೇ ತೋರಿಸುತ್ತದೆ. ವರದಿಯಲ್ಲಿ, ಜಗತ್ತಿನಾದ್ಯಂತ ಯುದ್ಧ, ಪರಿಸರ ಏರುಪೇರು, ಕೋವಿಡ್ ಹಾಗೂ ಆರ್ಥಿಕ ಸಂಕಟಗಳ ಮಿಶ್ರಣದಿಂದಾಗಿ ಉಂಟಾಗಿರುವ ಸಂಕಟಕ್ಕೆ ಪರಿಹಾರ ಮಾರ್ಗಗಳನ್ನೂ ಸೂಚಿಸಲಾಗಿದೆ.

  • ಆಹಾರ ವ್ಯವಸ್ಥೆಯಲ್ಲಿ ಬದಲಾವಣೆಗಾಗಿ ಒಳಗೊಳ್ಳುವಿಕೆ ಮತ್ತು ಪಾರದರ್ಶಕತೆ ಹಾಗೂ ಉತ್ತರದಾಯಿತ್ವ ಬೆಳೆಸಿಕೊಳ್ಳುವುದು.
  • ನಾಗರಿಕರ ಒಳಗೊಳ್ಳುವಿಕೆ ಮತ್ತು ಸ್ಥಳೀಯ ಆವಶ್ಯಕತೆಗಳಿಗೆ ಆಧರಿಸಿದ ತೀರ್ಮಾನಗಳು ಸಾಧ್ಯವಾಗುವುದನ್ನು ಖಚಿತಪಡಿಸಿಕೊಳ್ಳುವುದು.
  • ಆಹಾರ ವ್ಯವಸ್ಥೆ ಬಾಹ್ಯ ಆಘಾತಗಳಿಂದ ಹದಗೆಡದಂತೆ ವ್ಯವಸ್ಥೆಯನ್ನು ಭದ್ರ ಪಡಿಸುವುದರ ಜೊತೆಗೆ, ಸಂಪನ್ಮೂಲಗಳನ್ನು ವೃದ್ಧಿಸಿ ಕೊಳ್ಳುವತ್ತ ಗಮನಹರಿಸುವುದು.

ಹಸಿವು – ಹಣದುಬ್ಬರದ ವಿಷವೃತ್ತಕ್ಕೆ ಕಾರಣವಾಗಿರುವ ಆರ್ಥಿಕ ಅಸಮತೋಲನದ ಸ್ಥಿತಿಯನ್ನು ಸುಧಾರಿಸುವ ನೀತ್ಯಾತ್ಮಕ ಕ್ರಮಗಳು ಆಚರಣೆಗೆ ಬಂದು, ಅದರ ಫಲಿತಾಂಶಗಳು ಕಾಣಿಸುವ ತನಕ ಭಾರತದಲ್ಲಿ ಹಸಿದು ಮಲಗುವ ಹೊಟ್ಟೆಗಳನ್ನು ತಣಿಸುವುದು ಕಷ್ಟವಿದೆ.

andolana

Recent Posts

59 ಸಾವಿರ ಶಿಕ್ಷಕರ ಹುದ್ದೆ ಖಾಲಿ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿ

ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…

5 hours ago

ಮೈಸೂರಿಗೆ ತೆರಳಲು ಅನುಮತಿ ಕೋರಿ ಕೋರ್ಟ್‌ ಮೋರಿ ಹೋದ ದರ್ಶನ್‌

ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್‌ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…

5 hours ago

ನಾನು ಅಶ್ಲೀಲ ಪದ ಬಳಸಿಲ್ಲ : ಪೊಲೀಸರ ಬಳಿ ಸಿ.ಟಿ ರವಿ ಹೇಳಿಕೆ

ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್‌ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿರುವ ಆರೋಪದ ಮೇಲೆ ಬಂಧಿತಾರಾಗಿರುವ ಬಿಜೆಪಿ ಎಂಎಲ್‌ಸಿ ಸಿ.ಟಿ…

6 hours ago

ವೈದ್ಯ ಮೇಲೆ ಹಲ್ಲೆ: ದೂರು ದಾಖಲು

ಮೈಸೂರು: ನಗರದ ಅಲ್‌ ಅನ್ಸಾರ್‌ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳು ಬುಧವಾರ  ತಡರಾತ್ರಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಡಾ.…

6 hours ago

ವಿಶೇಷ ಚೇತನ ಮಕ್ಕಳು ಸಮಾಜಕ್ಕೆ ಶಾಪವಲ್ಲ, ವರ; ದೀಪಕ್‌ ಅಭಿಮತ

' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…

7 hours ago

ಸಕ್ಕರೆ ನಗರಿ ಅಂದ ಹೆಚ್ಚಿಸಿದ ದೀಪಾಲಂಕಾರ

ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್‌ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…

8 hours ago