ಎಡಿಟೋರಿಯಲ್

ಸರ್ಕಾರ ರೈತಪರ ಯೋಜನೆ ರೂಪಿಸಬೇಕು


ಎಸ್.ಸಿ.ಮಧುಚಂದನ್

ರಾಜ್ಯ ಸಂಘಟನಾ ಕಾರ್ಯದರ್ಶಿ, ಕರ್ನಾಟಕ ರಾಜ್ಯ ರೈತ ಸಂಘ.

ರೈತರು ಎಂದರೆ ಯಾವಾಗಲೂ ಬೆಳೆಗಳನ್ನು ಬೆಳೆಯುವವರು ಸಂಕಷ್ಟ ಎದುರಿಸಿ ಜೀವನ ನಡೆಸುವವರು ಎನ್ನುವಂತಾಗಿದೆ. ಇಂದಿನ ಸರ್ಕಾರಗಳು ರೈತರ ನಷ್ಟದಲ್ಲಿ ತಾವು ಲಾಭವನ್ನು ಕಾಣುವ ಪ್ರಯತ್ನದಲ್ಲಿವೆಯೇ ಹೊರತು, ಬಂದ ಲಾಭದಲ್ಲಿ ರೈತರಿಗೂ ಸಮಪಾಲು ನೀಡಿ ಅವರನ್ನು ಮೇಲೆತ್ತಬೇಕು ಎಂಬ ಉದ್ದೇಶ ಯಾವ ಸರ್ಕಾರಕ್ಕೂ ಇಲ್ಲವೆನಿಸುತ್ತದೆ.

ಹಾಲಿನ ದರ ಮತ್ತು ಕಬ್ಬಿನ ಬೆಲೆ ಏರಿಕೆ ಮಾಡುವಂತೆ ಒತ್ತಾಯಿಸಿ ಮಂಡ್ಯದಲ್ಲಿ ಕಳೆದ ೫೪ ದಿನಗಳಿಂದ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ. ಬೇಡಿಕೆ ಇಷ್ಟೇ, ಟನ್ ಕಬ್ಬಿಗೆ ೪,೫೦೦ ರೂ. ಬೆಲೆ ನಿಗದಿ ಮಾಡಬೇಕು ಹಾಗೂ ಲೀಟರ್ ಹಾಲಿನ ದರ ೪೦ ರೂ. ಮಾಡಬೇಕು ಎಂಬುದು. ಈ ಬೇಡಿಕೆಯನ್ನು ಈಡೇರಿಸಲಾಗದ ಸರ್ಕಾರ ಬುಧವಾರ ತನ್ನ ಅಽಕಾರವನ್ನು ಚಲಾಯಿಸಿ ಶಾಂತಿಯುತ ಪ್ರತಿಭಟನೆಯನ್ನು ತೀವ್ರ ಸ್ವರೂಪಕ್ಕೆ ತಿರುಗುವಂತೆ ಮಾಡಿದೆ. ಇದು ರೈತರ ರಕ್ತ ಹೀರುವ ಕೆಲಸವಲ್ಲದೇ ಮತ್ತೇನು?

ಇಂದು ವಿಶ್ವದಾದ್ಯಂತ ಸಕ್ಕರೆಯನ್ನು ತಿನ್ನಬೇಡಿ ಎನ್ನುತ್ತಿದ್ದಾರೆ. ಆದರೆ ನಮ್ಮಲ್ಲಿ ಮಾತ್ರ ಸಕ್ಕರೆಯನ್ನು ಅಗತ್ಯ ವಸ್ತು ಕಾಯ್ದೆಯಡಿ ತಂದು ಇಟ್ಟಿದ್ದಾರೆ. ಆದರೆ ಇಲ್ಲಿ ಸಕ್ಕರೆ ಅಗತ್ಯವೇ? ಎಂಬ ಪ್ರಶ್ನೆ ಇದೆ. ಅಗತ್ಯ ವಸ್ತು ಕಾಯ್ದೆಯಡಿಯಲ್ಲಿದೆ ಎಂದ ಮಾತ್ರಕ್ಕೆ ಸರ್ಕಾರ ತನಗೆ ಬೇಕಾದ ರೀತಿ, ಅದರಲ್ಲಿಯೂ ಕಾರ್ಖಾನೆಗಳ ಮಾಲೀಕರಿಗೆ ಅನುಕೂಲವಾಗುವ ಬೆಲೆ ನಿಗದಿ ಮಾಡಿದರೆ ಇದನ್ನು ರೈತರ ಪರವಾಗಿದೆ ಎನ್ನಬಹುದೇ? ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಶೇ.೮೦ರಷ್ಟು ಸಕ್ಕರೆ ಕಾರ್ಖಾನೆಗಳ ಮಾಲೀಕತ್ವ ಸರ್ಕಾರದ್ದೇ ಆಗಿದೆ. ಸರ್ಕಾರದ ಶಾಸಕರು ಮತ್ತು ಮಂತ್ರಿಗಳೇ ಈ ಸಕ್ಕರೆ ಕಾರ್ಖಾನೆಗಳ ಮಾಲೀಕರಾಗಿದ್ದು, ಅವರಿಗೆ ಸಕ್ಕರೆಗೆ ಯಾವ ಬೆಲೆ ನಿಗದಿಯಾಗಿರುತ್ತದೆಯೋ ಅದರ ಆಧಾರದ ಮೇಲೆ ಕಬ್ಬಿನ ಬೆಲೆ ನಿಗದಿ ಮಾಡುತ್ತಿದ್ದಾರೆ. ಏಕೆ ಕಬ್ಬಿನ ಮೂಲಕ ಆಲ್ಕೋಹಾಲ್ ಸೇರಿದಂತೆ ಇತರೆ ಪದಾರ್ಥಗಳ ತಯಾರಿಕೆಯಾಗುವುದಿಲ್ಲವೇ? ಅದರ ಆದಾಯ ಏನಾಯಿತು? ಮಂಡ್ಯದ ಉಸ್ತುವಾರಿ ಸಚಿವರು ವಾರ್ಷಿಕ ಅಬಕಾರಿ ಆದಾಯವು ೩೦ ಸಾವಿರ ಕೋಟಿ ರೂ.ಗಳಷ್ಟಿದೆ ಎಂದು ಬೊಬ್ಬೆ ಹೊಡೆಯು ತ್ತಿದ್ದಾರೆ. ಅಷ್ಟೂ ಆದಾಯಕ್ಕೆ ಕಬ್ಬು ಬೆಳೆಗಾರರೇ ಪ್ರಮುಖ ಕಾರಣ. ಸರ್ಕಾರ ಒಂದು ಟನ್ ಕಬ್ಬಿನಿಂದ 32-33 ಸಾವಿರ ರೂ. ಆದಾಯವನ್ನು ಗಳಿಸುತ್ತಿದೆ. ಕಬ್ಬು ಸಕ್ಕರೆಗೆ ಮಾತ್ರ ಸೀಮಿತವಾಗದೆ, ಸಕ್ಕರೆ ಹೊರತಾಗಿ ಬೇರೆ ಬೇರೆ ಪದಾರ್ಥಗಳು ತಯಾರಾಗಿ ಸರ್ಕಾರಕ್ಕೆ ಲಾಭದಾಯಕವಾಗಿದೆ. ನಮ್ಮ ಭಾಗದಲ್ಲಿ ಅಂದಾಜು ೧ ಎಕರೆಗೆ 50 ಟನ್ ಬೆಳೆದರೆ ಅದರ ಆದಾಯ ೩೨-೩೩ಲಕ್ಷ ರೂ.ಗಳಷ್ಟಿದೆ. ಅದೇ ಉತ್ತರ ಕರ್ನಾಟಕದ ಭಾಗದಲ್ಲಿ ಸರಾಸರಿ ಎಕರೆಗೆ 80 ಟನ್ ಬೆಳೆದು ಅದರಿಂದ ೪೫-೫೦ ಲಕ್ಷ ರೂ. ಆದಾಯ ಸರ್ಕಾರಕ್ಕೆ ಬರುತ್ತಿದೆ. ಹೀಗಿರುವಾಗ ರೈತರಿಗೆ ಉತ್ತಮ ಬೆಲೆ ನೀಡಲು ಸರ್ಕಾರಕ್ಕೆ ಏನು ಸಮಸ್ಯೆ?

ಇದರಲ್ಲಿ ರೈತರಿಗೆ ಇಡೀ ಆದಾಯವನ್ನು ಕೊಡಬೇಕಿಲ್ಲ. ಒಂದು ಟನ್ನಿಗೆ ಒಂದು ಸಾವಿರ ರೂ. ಹೆಚ್ಚಿಸಿದರೆ ಸಾಕು. ಇದರಿಂದ ರಾಜ್ಯದಲ್ಲಿ ವಾರ್ಷಿಕ ೬ ಸಾವಿರ ಕೋಟಿ ರೂ. ಹೆಚ್ಚಳವಾಗುತ್ತದೆ. ಇದರಿಂದ ಸರ್ಕಾರಕ್ಕೇನೂ ನಷ್ಟವಾಗುವುದಿಲ್ಲ. ಸದ್ಯ ಮಂಡ್ಯ ಭಾಗದಲ್ಲಿ ಇಳುವರಿಯೂ ಇಲ್ಲ, ಜೊತೆಗೆ ರಿಕವರಿಯೂ ಇಲ್ಲದಂತಾಗಿದೆ. ತಮಿಳುನಾಡಿನಲ್ಲಿ ರಿಕವರಿಯೂ ಶೇ.೯.೫ ರಷ್ಟಿದೆ. ಅದರ ಮೇಲೆ ಟನ್ ಕಬ್ಬಿಗೆ ೩,೨೦೦ ರೂ. ದರ ನಿಗದಿ ಮಾಡಿದ್ದಾರೆ. ಮಂಡ್ಯದಲ್ಲಿ ರಿಕವರಿ ಶೇ.೮.೫೬ ಇದೆ. ಈಗ ಇಲ್ಲಿ ೨,೭೮೦ರೂ. ಬೆಲೆ ನೀಡುತ್ತಿದ್ದಾರೆ. ಆದರೆ ಅದರಲ್ಲಿ ರೈತರು ಕಟಾವಿಗೆ ೧,೧೦೦ರೂ. ಗೊಬ್ಬರ ಸೇರಿದಂತೆ ನಿರ್ವಹಣೆ ವೆಚ್ಚವನ್ನೆಲ್ಲ ಕಳೆದರೆ ಇಂದು ಕಬ್ಬನ್ನು ರೈತರು ನಷ್ಟದಲ್ಲಿ ಬೆಳೆಯುತ್ತಿದ್ದಾರೆ ಎಂಬುದು ತಿಳಿಯುತ್ತದೆ.

ಅಷ್ಟಕ್ಕೂ ರೈತರಿಗೆ ಸರ್ಕಾರದಿಂದ ಯಾವ ಸೌಲಭ್ಯ ದೊರಕಿದೆ ಎಂದು ರೈತ ಸರ್ಕಾರಕ್ಕೆ ಆದಾಯ ಮಾಡಬೇಕು? ಒಂದು ಟನ್ ಕಬ್ಬಿಗೆ ಕೇವಲ ೪೦೦-೫೦೦ ರೂ. ಆದಾಯ ಪಡೆಯುವ ರೈತರು ತಮ್ಮ ಮಕ್ಕಳನ್ನು ಲಕ್ಷಾಂತರ ರೂ. ಖರ್ಚು ಮಾಡಿ ಓದಿಸಲು ಸಾಧ್ಯವೆ? ಇತ್ತ ಸರ್ಕಾರಿ ಶಾಲೆಗಳೂ ಸರಿಯಾಗಿಲ್ಲ. ಆರೋಗ್ಯ ಹದಗೆಟ್ಟರೆ ಸರ್ಕಾರಿ ಆಸ್ಪತ್ರೆಯೂ ಉತ್ತಮವಾಗಿಲ್ಲ. ಈಗಿರುವಾಗ ರೈತ ಹೇಗೆ ಕುಟುಂಬ ನಿರ್ವಹಣೆ ಮಾಡಬೇಕು? ಇನ್ನೂ ಹಾಲಿನ ವಿಚಾರಕ್ಕೆ ಬಂದರೆ ಅದು ಕೂಡ ಲೀ.ಗೆ ೩೬ ರೂ, ಇದೆ. ಆದರೆ ರೈತನಿಗ ಪ್ರೋತ್ಸಾಹಧನ ಸೇರಿ ಸಿಗುವುದು ೩೪ ರೂ, ಅದರಲ್ಲಿಯೂ ಪ್ರೋತ್ಸಾಹ ಧನ ೫ ರೂ. ೪-೫ ತಿಂಗಳಿಗೆ ಒಟ್ಟಾಗಿ ಬರುತ್ತದೆ. ಮನ್ ಮುಲ್‌ನಿಂದ ನವೆಂಬರ್ ೧ ರಂದು ಹಾಲಿನ ದರ ೧ ರೂ. ಏರಿಕೆ ಮಾಡಿ ಭಾರಿ ಪ್ರಚಾರ ಗಿಟ್ಟಿಸಿಕೊಂಡಿತ್ತು. ಆದರೆ ಪಶು ಆಹಾರಕ್ಕೆ ೧೨೫ ರೂ. ಹೆಚ್ಚಿಸಿ ಎಲ್ಲಿಯೂ ಪ್ರಕಟಿಸದೆ, ಕೇವಲ ಡೇರಿಗಳ ನಿರ್ವಾಹಕರಿಗೆ ಮಾಹಿತಿ ನೀಡಿದ್ದರು. ಇಂದು ರೈತರಿಗೆ ಸಾಕಷ್ಟು ಮೋಸ ನಡೆಯುತ್ತಿದೆ. ಯಾವ ಸರ್ಕಾರವೂ ಕೂಡ ರೈತಾಪಿಗಳು, ಕಾರ್ಮಿಕರು, ಬಡವರ ಪರವಿಲ್ಲ. ಸಮುದಾಯಗಳ ನಡುವೆ ಭಿನ್ನಾಭಿ ಪ್ರಾಯ ಸೃಷ್ಟಿಸಿ ಜನಪ್ರತಿನಿಧಿಗಳಾಗಿದ್ದಾರೆ. ಇವರು ಎಂದೂ ಶ್ರಮಿಕ ವರ್ಗದವರಂತೆ ದುಡಿಯಲಿಲ್ಲ. ಕೇವಲ ಮಸೀದಿ-ಮಂದಿರ-ಚರ್ಚೆ ಎನ್ನುತ್ತಾ ಜಗಳದ ನಡುವೆ ಸರ್ಕಾರ ನಡೆಸುತ್ತಿದ್ದಾರೆ. ಇವರಿಗೆ ರೈತರ ಕಷ್ಟ ಅರ್ಥವಾಗು ವುದಿಲ್ಲ. ಇನ್ನಾದರೂ ಅನ್ನದಾತರ ಅಳಲಿಗೆ ಆಡಳಿತಗಾರರು ಕಿವಿ ಮತ್ತು ಮನಸ್ಸು ತೆರೆಯಬೇಕು.

andolanait

Recent Posts

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

1 hour ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

2 hours ago

ಮುಡಾ: ಇಡಿ ದಾಳಿಗೆ ರಾಜಕೀಯ ಕಾರಣವಲ್ಲ; ಅಶೋಕ್

ಜಾರಿ ನಿರ್ದೇಶನಾಲಯದ ದಾಳಿಗೆ ರಾಜಕೀಯ ಕಾರಣವಲ್ಲ, 3-4 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ ಎಂದು ಹೇಳಿದ್ದೇ ಕಾಂಗ್ರೆಸ್‌ನವರು: ಪ್ರತಿಪಕ್ಷ…

2 hours ago

BJP ಟಿಕೆಟ್‌ ವಂಚನೆ: ಆರೋಪ ತಳ್ಳಿ ಹಾಕಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ನವದೆಹಲಿ: ನನಗೆ ಸಹೋದರಿಯೇ ಇಲ್ಲ ಮತ್ತು ಗೋಪಾಲ್ ಜೋಶಿ ಮೇಲಿನ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಸಚಿವ…

2 hours ago

ಮಂಡ್ಯ ಟೂ ಇಂಡಿಯಾ: ಬೃಹತ್‌ ಉದ್ಯೋಗ ಮೇಳಕ್ಕೆ ಮೊದಲ ದಿನ ಅಭೂತಪೂರ್ವ ಸ್ಪಂದನೆ

ಮಂಡ್ಯ ಟೂ ಇಂಡಿಯಾ; ಸಕ್ಕರೆ ನಾಡಿನಲ್ಲಿ 2 ದಿನಗಳ ಬೃಹತ್ ಉದ್ಯೋಗ ಮೇಳ 150ಕ್ಕೂ ಹೆಚ್ಚು ಕಂಪನಿಗಳ ಭಾಗಿ, ಸಾವಿರಾರು…

3 hours ago

ಮುಡಾ ಮೇಲೆ ಇಡಿ ದಾಳಿ: ಸಿಬಿಐ ತನಿಖೆ ನಡೆಸುವರೆಗೂ ಹೋರಾಟ ಮುಂದುವರಿಕೆ: ಸ್ನೇಹಮಯಿ ಕೃಷ್ಣ

ಮೈಸೂರು: ಮುಡಾ ಮೇಲಿನ ಇಡಿ ಕಾರ್ಯಾಚರಣೆ ಕೇವಲ ಸಿಎಂ ಸಿದ್ದರಾಮಯ್ಯ ಅವರ ಕುಟುಂಬದವರ ಪ್ರಕರಣವಲ್ಲ. ಸಂಪೂರ್ಣ ಮುಡಾ ಅಕ್ರಮದ ಬಗ್ಗೆ…

3 hours ago