ಎಡಿಟೋರಿಯಲ್

1952ರಲ್ಲಿ ಅಮೆರಿಕ ನಡೆಸಿತ್ತು ಮೊದಲ ಹೈಡ್ರೋಜನ್ ಬಾಂಬ್ ಪರೀಕ್ಷಾರ್ಥ ಪ್ರಯೋಗ

ಚಂದಿರನ ಮೇಲೆ ಅಣುಬಾಂಬ್ ಸ್ಪೋಟಿಸಲು ಅಮೆರಿಕ ಸಿದ್ಧಪಡಿಸಿದ್ದ ಯೋಜನೆ

-ಕಾರ್ತಿಕ್ ಕೃಷ್ಣ

೨೦೧೫ರಲ್ಲಿ ಎಲಾನ್ ಮಸ್ಕ್, ಮಂಗಳನ ಅಂಗಳದಲ್ಲಿ ಪರಮಾಣು ಬಾಂಬುಗಳನ್ನು ಸ್ಫೋಟಿಸಿ ಅಲ್ಲಿನ ಧ್ರುವಗಳಲ್ಲಿ ದಟ್ಟವಾಗಿರುವ ಮಂಜುಗಡ್ಡೆಯನ್ನು ಕರಗಿಸಿ ವಾತಾವರಣವನ್ನು ಮತ್ತೆ ಸೃಷ್ಟಿಸುವ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. mars nuking ಎಂದು ಕರೆಯಲ್ಪಡುವ ಈ ಪರಿಕಲ್ಪನೆಯ ವ್ಯತಿರಿಕ್ತ ಪರಿಣಾಮಗಳ ಬಗ್ಗೆ ಸಾಕಷ್ಟು ಚರ್ಚೆಗಳೂ ನಡೆದಿತ್ತು. ಮಸ್ಕ್ ಈ ಯೋಜನೆಯು ಮೂಲಕ ಮಂಗಳನ ಧ್ರುವಗಳ ಮೇಲೆ ಪರಮಾಣು ಬಾಂಬುಗಳನ್ನು ಸ್ಛೋಟಿಸಿ ಅದರ ಹೆಪ್ಪುಗಟ್ಟಿದ ಮಂಜುಗಡ್ಡೆಗಳನ್ನು ಆವಿಯಾಗಿಸಿ ಮಂಗಳದ ವಾತಾವರಣಕ್ಕೆ ಬೃಹತ್ ಪ್ರಮಾಣದ ನೀರಿನ ಆವಿ ಮತ್ತು ಇಂಗಾಲದ ಡೈ ಆಕ್ಸೈಡ್‌ನ್ನು ಬಿಡುಗಡೆ ಮಾಡುವ ಉದ್ದೇಶ ಹೊಂದಿದ್ದರು. ಇದರಿಂದ ಹಸಿರುಮನೆ ಪರಿಣಾಮ ಉಂಟಾಗಿ ಸ್ಛೋಟಗಳಿಂದ ಬಿಡುಗಡೆಯಾಗುವ ಅನಿಲಗಳಿಂದಾಗಿ ತಾಪಮಾನವು ಹೆಚ್ಚಾದಂತೆ ಮಂಗಳದ ಹಿಮಬಂಡೆಗಳು ಬಿಸಿಯಾಗಿ ಹೆಚ್ಚು ಇಪಿ ಅನ್ನು ಹೊರಹಾಕಿ, ಕೊನೆಗೆ ಮಂಗಳ ತನ್ನ ಶೀತಲ ಕೋಶದಿಂದ ಹೊರತರುವುದು ಮಸ್ಕ್ ಪ್ರಸ್ತಾಪಿಸಿದ mars nuking  ಉದ್ದೇಶ. ಮಸ್ಕ್‌ನ ಉದ್ದೇಶವೇನೋ ಒಳ್ಳೆಯದೇ ಇರಬಹುದು. ಆದರೆ ಬಾಹ್ಯಾಕಾಶದಲ್ಲಿ ಅಣುಬಾಂಬ್ ಸ್ಛೋಟಿಸುವ ೋಂಜನೆ ಹೊಸದೇನಲ್ಲ ಬಿಡಿ. ಅರೆ! ಇದ್ಯಾವಾಗ ಇಂತಹ ಹುಚ್ಚು ಯೋಜನೆ ತಯಾರಾಗಿತ್ತು ಎಂದು ಯೋಚಿಸುತ್ತಿದ್ದೀರಾ?
ನೀವು ಶೀತಲ ಸಮರದ ಬಗ್ಗೆ ಓದಿರಬಹುದು. ಶೀತಲ ಸಮರವು (೧೯೪೫೧೯೯೧) ಎರಡನೇ ವಿಶ್ವಯುದ್ಧದ ನಂತರ ಮುಖ್ಯವಾಗಿ ಯು. ಎಸ್.ಎಸ್.ಆರ್ ಮತ್ತು ಅದರ ಆಶ್ರಿತ ದೇಶಗಳು ಹಾಗೂ ಯುನೈಟೆಡ್ ಸ್ಟೇಟ್ಸ್‌ನ್ನು ಒಳಗೊಂಡಂತೆ ಪಾಶ್ಚಾತ್ಯ ವಿಶ್ವಶಕ್ತಿಗಳ ನಡುವೆಯಿದ್ದ ರಾಜಕೀಯ ಘರ್ಷಣೆ, ಮಿಲಿಟರಿ ಉದ್ವಿಗ್ನತೆ ಮತ್ತು ಆರ್ಥಿಕ ಪೈಪೋಟಿಗಳಿಗೆ ನೀಡಿದ ಹೆಸರಾಗಿದೆ. ಈ ಸಮರದಲ್ಲಿ ಪಾಲ್ಗೊಂಡ ಪ್ರಮುಖ ದೇಶಗಳ ಮಿಲಿಟರಿ ಶಕ್ತಿಗಳು ಎಂದೂ ಅಧಿಕೃತವಾಗಿ ನೇರ ಯುದ್ಧಕ್ಕಿಳಿಯದಿದ್ದರೂ, ಮಿಲಿಟರಿ ಮೈತ್ರಿಗಳು, ಆಯಕಟ್ಟಿನ ಜಾಗಗಳಲ್ಲಿ ಸಾಂಪ್ರದಾಯಿಕವಾಗಿ ಸೈನ್ಯವನ್ನು ಇರಿಸುವುದು, ಪರಮಾಣು ಅಸ್ತ್ರ ಪೈಪೋಟಿ, ಗೂಢಚರ್ಯೆ, ಹುಸಿ ಯುದ್ಧಗಳು, ಪ್ರಚಾರ ಕಾರ್ಯಗಳು ಮತ್ತು ಅಂತರಿಕ್ಷ ಪೈಪೋಟಿ ಮೊದಲಾದ ತಂತ್ರಜ್ಞಾನ ಸ್ಪರ್ಧೆಗಳ ಮೂಲಕ ಘರ್ಷಣೆಯಲ್ಲಿ ತೊಡಗಿದ್ದವು. ಈ ಸಮಯದಲ್ಲೇ ಚಂದ್ರನ ಮೇಲೆ ಪರಮಾಣು ಬಾಂಬುಗಳನ್ನು ಸ್ಛೋಟಿಸುವ ಯೋಜನೆ ಶುರುವಾಗಿದ್ದು.  project A 119  ಎಂದು ಕರೆಯಲ್ಪಡುತ್ತಿದ್ದ ಈ ಯೋಜನೆ ಅಮೆರಿಕದ ಅತೀ ರಹಸ್ಯ ಯೋಜನೆಯಾಗಿತ್ತು.
ಎರಡೂ ಜಾಗತಿಕ ಮಹಾಶಕ್ತಿಗಳು ತಮ್ಮ ಪರಮಾಣು ಶಕ್ತಿಯನ್ನು ಬಲಪಡಿಸಿಕೊಳ್ಳಲು ಇನ್ನಿಲ್ಲದ ಕಸರತ್ತನ್ನು ಮಾಡುತ್ತಿತ್ತು. 1945 ರಲ್ಲಿ ಇತಿಹಾಸದಲ್ಲೇ ಮೊದಲ ಪರಮಾಣು ಬಾಂಬ್‌ಗಳನ್ನು ಅಮೆರಿಕ ಸ್ಛೋಟಿಸಿ ಓಟದಲ್ಲಿ ಮುನ್ನಡೆ ಪಡೆಯಿತು. ಸೋವಿಯತ್ ಒಕ್ಕೂಟ ಸುಮ್ಮನಿರಬೇಕೇ? ಹೆಚ್ಚು ಸಮಯ ತೆಗೆದುಕೊಳ್ಳದೆ ಅವರು ತಮ್ಮ ಮೊದಲ ಪರಮಾಣು ಶಸ್ತ್ರಾಸ್ತ್ರವನ್ನು ೧೯೪೯ರಲ್ಲಿ ಪರೀಕ್ಷಿಸಿ ಸಮಬಲ ಸಾಧಿಸಿದರು. ೧೯೫೦ರ ದಶಕದ ಆರಂಭದ ವೇಳೆಗೆ ಪರಮಾಣು ತಂತ್ರಜ್ಞಾನವು ಸಾಕಷ್ಟು ಮುಂದುವರಿದು, ೧೯೫೨ರಲ್ಲಿ ಅಮೆರಿಕ ತನ್ನ ಮೊದಲ ಹೈಡ್ರೋಜನ್ ಬಾಂಬ್ ಅನ್ನು ಪರೀಕ್ಷಿಸಿ ಸೋವಿಯತ್ ಒಕ್ಕೂಟಕ್ಕೆ ಸವಾಲೊಡ್ಡಿತು. ಇದನ್ನು ‘ಥರ್ಮೋ ನ್ಯೂಕ್ಲಿಯರ್ ಬಾಂಬ್’ ಎಂದೂ ಕರೆಯುತ್ತಾರೆ. ಹಿಂದಿನ ಪರಮಾಣು ಬಾಂಬ್‌ಗಳಿಗೆ ಹೋಲಿಸಿದರೆ, ಈ ಹೈಡ್ರೋಜನ್ ಬಾಂಬ್‌ಗಳು ನೂರು ಪಟ್ಟು ಹೆಚ್ಚು ಶಕ್ತಿಶಾಲಿಯಾಗಿದ್ದವು. ಇದಕ್ಕೂ ಬೆದರದ ಸೋವಿಯತ್ ಒಕ್ಕೂಟ, ೧೯೫೫ರಲ್ಲಿ ತನ್ನ ಮೊದಲ ಥರ್ಮೋ ನ್ಯೂಕ್ಲಿಯರ್ ಬಾಂಬನ್ನು ಸ್ಛೋಟಿಸಿ ಅಮೆರಿಕಕ್ಕೆ ಮಾರುತ್ತರ ನೀಡಿತು.
ಈ ಸಂದರ್ಭದಲ್ಲಿ ಸೋವಿುಂತ್ ಒಕ್ಕೂಟ ಪರಮಾಣು ಕ್ಷೇತ್ರದ ಮೇಲಿನ ಕೆಲಸಗಳನ್ನು ಕೈಬಿಟ್ಟು ಹೊಸ ಆವಿಷ್ಕಾರಕ್ಕೆ ಕೈಹಾಕಿತು. ಅದರ ಫಲಿತಾಂಶವೇ ‘ಸ್ಪುಟ್ನಿಕ್’ ಉಪಗ್ರಹ! ಅದನ್ನು ಉಡಾಯಿಸಿದ ಸೋವಿಯತ್, ಅಂತರಿಕ್ಷ ಕ್ಷೇತ್ರಕ್ಕೆ ಲಗ್ಗೆಯಿಟ್ಟು ಶೀತಲ ಸಮರದಲ್ಲಿ ಮೇಲುಗೈ ಸಾಧಿಸಿತು.
ಇಂತಹ ಹಠಾತ್ ಆಘಾತದಿಂದ ಚೇತರಿಸಿಕೊಳ್ಳಲು ಅಮೆರಿಕಕ್ಕೆ ಸಾಕಷ್ಟು ಸಮಯವೇ ಹಿಡಿಯಿತು. ವೈರಿ ದೇಶ ಉಪಗ್ರಹ ಉಡಾಯಿಸಿತು ಎಂಬ ಕಾರಣಕ್ಕೆ ತಾನೂ ಒಂದು ಉಪಗ್ರಹ ಹಾರಿಸಿದರೆ ಕಣ್ಣಾಮುಚ್ಚಾಲೆ ಆಟದಂತೆ ಆಗುತ್ತದೆ ಎಂದು ಭಾವಿಸಿದ ಅಮೆರಿಕ ಈ ಬಾರಿ ಒಂದು ಮಾಸ್ಟರ್‌ಪ್ಲಾನ್ ತಯಾರು ಮಾಡಿತು. ಅದೇನು ಗೊತ್ತಾ? ಚಂದ್ರನ ಮೇಲೆ ಅಣುಬಾಂಬ್ ಉಡಾಯಿಸುವ ಹುಚ್ಚು ಯೋಜನೆ. ಅದಾಗಲೇ ಪರಮಾಣು ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದ ಅಮೆರಿಕ, ಅದನ್ನೇ ಅಂತರಿಕ್ಷಕ್ಕೆ ಒಯ್ದು, ಚಂದ್ರನ ಮೇಲೆ ಸ್ಫೋಟಿಸಿ ತಮ್ಮ ಕೀರ್ತಿ ಪತಾಕೆ ಹಾರಿಸಿ  SPACE WAR  ಗೆಲ್ಲುವ ಅಭಿಲಾಷೆ ಹೊಂದಿತ್ತು. ಇದನ್ನು ಸಾಕಾರಗೊಳಿಸಲು ಅಮೆರಿಕದ ವಾಯುಸೇನೆ ಶುರು ಮಾಡಿದ್ದ ಯೋನೆಯೇ  PROJECT A119  ಹೆಸರುಮಾತ್ರಕ್ಕೆ ನಾವು ಚಂದ್ರನ ಸಂಶೋಧನೆಗೆ ವಿಮಾನಗಳ ಅಧ್ಯಯನ ನಡೆಸಲು ಈ ಯೋಜನೆ ಶುರು ಮಾಡಿದ್ದೇವೆ ಎಂದು ಹೇಳಿಕೊಂಡಿದ್ದ ಅಮೆರಿಕದ ಅಸಲಿತ್ತು ತಿಳಿದದ್ದು 2000ರಲ್ಲಿ.
ಚಂದ್ರನ ಮೇಲೆ ಪರಮಾಣು ಬಾಂಬ್ ಸ್ಫೋಟಿಸಿದಾಗ, ಜನರ ಬರಿಗಣ್ಣಿಗೆ ಅದು ಗೋಚರವಾಗಬೇಕು ಎಂಬುದು ಯೋಜನೆಯ ಗುರಿಯಾಗಿತ್ತಂತೆ. ಚಂದ್ರನ ಕಪ್ಪು ಮತ್ತು ಬೆಳಕಿನ ಬದಿಗಳನ್ನು ಪ್ರತ್ಯೇಕಿಸುವ ’TERMINATOR’ನಲ್ಲಿ ಬಾಂಬ್ ಹಾಕುವುದೆಂದೂ ತೀರ್ಮಾನಿಸಲಾಗಿತ್ತು. ಆದರೆ ಅಮೆರಿಕಕ್ಕೆ ಅದೇನನಿಸಿತೋ! ಯೋಜನೆಯನ್ನು ಕೈಬಿಟ್ಟರು.
ಅಮೆರಿಕ ಥರ್ಮೋ ನ್ಯೂಕ್ಲಿಯರ್‌ ಆಯುಧಗಳಿಂದ ಚಂದ್ರನನ್ನು ಸ್ಛೋಟಿಸದೇ ಇರಲು ಎರಡು ಪ್ರಮುಖ ಕಾರಣಗಳಿವೆ. ಸ್ಛೋಟವು ಚಂದ್ರನ ಮೇಲ್ಮೈಯನ್ನು ಶಾಶ್ವತವಾಗಿ ಬದಲಾಯಿಸುವ ಬೃಹತ್ ಕುಳಿಯನ್ನು ನಿರ್ಮಿಸಬಲ್ಲದು ಎಂಬುದು ಒಂದು ಕಾರಣವಾದರೆ, ಆಸ್ಛೋಟನೆ ನಡೆದರೆ ಸಾರ್ವಜನಿಕ ವಲಯದಿಂದ ಭಾರೀ ವಿರೋಧ ಎದುರಿಸಬೇಕಾದೀತು ಎಂಬುದು ಎರಡನೇ ಕಾರಣ. ಆದರೆ ಚಂದ್ರನನ್ನು ಸ್ಛೋಟಿಸಬೇಕಿದ್ದ ಅಮೆರಿಕ, ೧೯೬೯ರಲ್ಲಿ ಎಲ್ಲರಿಗಿಂತ ಮೊದಲು ಮಾನವನನ್ನು ಚಂದಿರನ ಮೇಲೆ ಇಳಿಸಿ ಇತಿಹಾಸ ನಿರ್ಮಿಸಿತು ಎಂಬುದು ಮೆಚ್ಚಬೇಕಾದ ಸಂಗತಿ!


ಚಂದ್ರನ ಮೇಲೆ ಪರಮಾಣು ಬಾಂಬ್ ಸ್ಫೋಟಿಸಿದಾಗ, ಜನರ ಬರಿಗಣ್ಣಿಗೆ ಅದು ಗೋಚರವಾಗಬೇಕು ಎಂಬುದು ಯೋಜನೆಯ ಗುರಿಯಾಗಿತ್ತಂತೆ. ‘ನೀವೇನು ಆಟಿಕೆಯಂತೆ ಉಪಗ್ರಹ ಕಳುಹಿಸುವುದು, ನಾವು ಚಂದ್ರನ ಮೇಲೆ ಬಾಂಬನ್ನೇ ಉದುರಿಸಿದ್ದೇವೆ, ನೀವೇ ಕಣ್ಣಾರೆ ನೋಡಿ’ ಎಂಬಂತೆ ಸಂದೇಶ ನೀಡುವ ಇರಾದೆ ಅಮೆರಿಕದ್ದು! ಇದನ್ನು ಸಾಧಿಸಲು ಅದೆಂತ ಆಸ್ಛೋಟನೆಯಅಗತ್ಯವಿದೆೆಯೆಂದು ನೀವೇ ಊಹಿಸಿಕೊಳ್ಳಿ.

 

 

andolanait

Recent Posts

ಮುಡಾ ಪ್ರಕರಣ: ಮುಡಾ ಕಚೇರಿಗಿಂತ ಸಚಿವ ಭೈರತಿ ಸುರೇಶ್‌ ಮನೆಯಲ್ಲೇ ಅಧಿಕ ಫೈಲ್‌: ಶ್ರೀವತ್ಸ

ಮೈಸೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಫೈಲ್‌ಗಳು ಮುಡಾ ಕಚೇರಿಯಲ್ಲಿರುವುದಕ್ಕಿಂತ ಸಚಿವ ಭೈರತಿ ಸುರೇಶ್‌ ಮನೆಯಲ್ಲೇ ಅಧಿಕವಾಗಿವೆ ಎಂದು ಶಾಸಕ ಟಿ.ಎಸ್‌.ಶ್ರೀವತ್ಸ…

2 mins ago

ಮುಡಾ ಕಚೇರಿ ಮೇಲೆ ಇಡಿ ದಾಳಿ: ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ

ಮಂಡ್ಯ: ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಸರ್ಕಾರಿ ಭೂಮಿಯನ್ನು ಲಪಾಟಾಯಿಸಿದ್ದಾರೆ, ಅದಕ್ಕೆ ಆ ನಿವೇಶನಗಳನ್ನು ವಾಪಾಸ್ಸು ಮಾಡಿದ್ದಾರೆ ಎಂದು ಕೇಂದ್ರ…

1 hour ago

ಮುಡಾ ಕಚೇರಿಯ ಮೇಲೆ ಇಡಿ ದಾಳಿ ದುರುದ್ದೇಶಪೂರ್ವಕ: ಮಾಜಿ ಸಂಸದ ಡಿ.ಕೆ.ಸುರೇಶ್‌

ಬೆಂಗಳೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಇಂದು (ಅಕ್ಟೋಬರ್‌.18) ಮೂರು ಕಡೆಗಳಲ್ಲಿ ದಾಳಿ ನಡೆಸಿದ್ದು, ಈ ದಾಳಿಯು ಸಂಪೂರ್ಣವಾಗಿ…

2 hours ago

ಮುಡಾ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು: ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ಮುಡಾ ಕೇಸ್‌ ಮುಚ್ಚಿ ಹಾಕುವಲ್ಲಿ ಸರ್ಕಾರಕ್ಕೆ ಲೋಕಾಯುಕ್ತ ಸಹಾಯ ಮಾಡುತ್ತದೆ ಎಂಬ ಶಂಕೆ ಇದೆ. ಹೀಗಾಗಿ ಮುಡಾ ಪ್ರಕರಣವನ್ನು…

2 hours ago

ಭವಾನಿ ರೇವಣ್ಣಗೆ ಬಿಗ್‌ ರಿಲೀಫ್:‌ ಹೈಕೋರ್ಟ್‌ ಆದೇಶ ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌

ಹೊಸದಿಲ್ಲಿ: ಆತ್ಯಾಚಾರ ಸಂತ್ರಸ್ತೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಭವಾನಿ ರೇವಣ್ಣಗೆ ಹೈಕೋರ್ಟ್‌ನಿಂದ ಜಾಮೀನು ಮಂಜೂರು ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಎಸ್‌ಐಟಿ…

2 hours ago

ಮುಡಾ ಪ್ರಕರಣ: ಮುಡಾ ಕಚೇರಿಯ ಮೇಲೆ ಇ.ಡಿ ದಾಳಿ

ಮೈಸೂರು: ಮುಡಾದಲ್ಲಿ ಹಗರಣ ನಡೆದಿದೆ ಎಂದು ಆರ್‌ಐಟಿ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಇ.ಡಿ.ಗೆ ದೂರು ನೀಡಿದ್ದರು. ಈ ದೂರಿನ ಆಧಾರದ…

3 hours ago