ಎಡಿಟೋರಿಯಲ್

ದಶಕದಿಂದ ಬಡಜನರ ಅಭಿವೃದ್ಧಿ ಕಾಣಲೇ ಇಲ್ಲ


ಎಚ್.ಎಸ್.ಶಂಕರ ಹೊನ್ನೇಗೌಡನಹಳ್ಳಿ

ದಶಕದಿಂದ ದೇಶದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆಯೋ, ಇಲ್ಲವೋ? ಎಂಬ ಪ್ರಶ್ನೆ ಸಹಜವಾಗಿ ಮೂಡಲು ಆರಂಭಿಸಿದೆ. ಕಾರಣ ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಕೇವಲ ಯೋಜನೆಗಳ ಹೆಸರು ಬದಲಾವಣೆ, ನಗರಗಳ ಹೆಸರು ಬದಲಾವಣೆ, ಬ್ಯಾಂಕುಗಳ ವಿಲೀನದ ಕಾರ್ಯಗಳೇ ಭರದಿಂದ ಸಾಗುತ್ತಿವೆಯೇ ವಿನಾ, ಬಡವರ್ಗಗಳ ಅಭಿವೃದ್ಧಿಗೆ, ಮೂಲಭೂತ ಸೌಕರ್ಯಗಳ ಪೂರೈಕೆಗೆ, ಪೂರಕವಾದ ಯೋಜನೆಗಳು ಜಾರಿಯಾಗಲೇ ಇಲ್ಲ.

ಈ ಹಿಂದಿನ ಸರ್ಕಾರಗಳು ಜನರ ಹಿತಕ್ಕಾಗಿ ಜಾರಿಗೊಳಿಸಿದ ಯೋಜನೆಗಳಿಗೆ ಕೇವಲ ಹೆಸರು ಬದಲಾಯಿಸಿದ ಮಾತ್ರಕ್ಕೆ ಈ ಸರ್ಕಾರಕ್ಕೆ ಅದರ ಕ್ರೆಡಿಟ್ ಸಲ್ಲುವುದಿಲ್ಲ. ಈ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಇಂದಿರಾ ಆವಾಸ್ ಯೋಜನೆಯು ಪಿಎಂ ಗ್ರಾಮೀಣ ಆವಾಸ್ ಯೋಜನೆಯಾಗಿದೆ. ಸಮಗ್ರ ಬೆಳೆ ವಿಮಾ ಯೋಜನೆಯು ಪಿಎಂ ಫಸಲ್ ಬಿಮಾ ಯೋಜನೆಯಾಗಿ, ಜೆಎನ್‌ಎನ್‌ಯುಆರ್ ಎಂ- ಅಮೃತ್, ಆಮ್ ಆದ್ಮಿ ಬಿಮ ಯೋಜನೆಯು ಪಿಎಂ ಸುರಕ್ಷಾ ಭೀಮಾ ಯೋಜನೆಯಾಗಿ, ರಾಷ್ಟ್ರೀಯ ಇ-ಗವರ್ನರ್ಸ್ ಯೋಜನೆಯನ್ನು ಡಿಜಿಟಲ್ ಇಂಡಿಯಾ ಆಗಿ ಪರಿವರ್ತಿಸಲಾಗಿದೆ. ಹೀಗೆ ಅನೇಕ ಯೋಜನೆಗಳಿಗೆ ಹೆಸರು ಬದಲಾಯಿಸಲಾಗಿದೆ.

ಈ ಹೆಸರು ಬದಲಾವಣೆ ಯೋಜನೆಗಳಿಗೆ ಮಾತ್ರ ಸೀಮಿತವಾಗಿರದೆ, ದೇಶದ ಪ್ರಮುಖ ನಗರಗಳಿಗೂ ವ್ಯಾಪಿಸಿದೆ. ಅಲಹಾಬಾದ್‌ಅನ್ನು ಪ್ರಯಾಗ್ ರಾಜ್ ಎಂತಲೂ, ಅಮಿನನ್ನು ಅಭಿಮನ್ಯುಪುರ ಎಂದು ನಗರಗಳ ಹೆಸರುಗಳನ್ನೂ ಬದಲಾಯಿಸಲಾಗಿದೆ. ಇದರೊಂದಿಗೆ ದೇಶದ ಸಾಕಷ್ಟು ಬ್ಯಾಂಕ್‌ಗಳನ್ನೂ ಕೂಡ ಇತರೆ ಬ್ಯಾಂಕುಗಳೊಡನೆ ವಿಲೀನ ಮಾಡಿದೆ. ಅದರಿಂದ ಯಾವುದೇ ದೊಡ್ಡ ಬದಲಾವಣೆ ಏನೂ ಕಾಣುತ್ತಿಲ್ಲ.

ಏತನ್ಮಧ್ಯೆ ದಶಕದಿಂದೀಚೆಗೆ ಜನಸಾಮಾನ್ಯರ ಬದುಕು ತೀರಾ ಸಂಕಷ್ಟಕ್ಕೀಡಾಗಿದೆ. ಕೇವಲ ಹೆಸರು ಬದಲಾವಣೆಯ ಹಾದಿ ಹಿಡಿದಿರುವ ಸರ್ಕಾರವು ಜನಸಾಮಾನ್ಯರು ಪ್ರತಿನಿತ್ಯ ಬಳಸುವ ಅಗತ್ಯ ವಸ್ತುಗಳ ಬೆಲೆಗಳನ್ನು ಏರಿಕೆ ಮಾಡಿದೆ. ಆದರೆ ತಾವು ಬಡವರ ಪರ ಆಡಳಿತ ನೀಡುತ್ತಿದ್ದೇವೆ ಎಂದು ಬಿಂಬಿಸುತ್ತಿದ್ದು, ಸಾಮಾನ್ಯ ಜನರು ದುಡಿದ ದಿನಕೂಲಿಯ ಮೊತ್ತಕ್ಕಿಂತ ಅವರ ದಿನದ ಜೀವನ ನಿರ್ವಹಣೆಯ ವೆಚ್ಚವೇ ಅಧಿಕವಾಗುವಂತೆ ಮಾಡಿದೆ.

ಇಂದು ಪ್ರತಿನಿತ್ಯ ಜನರಿಗೆ ಅತ್ಯಗತ್ಯವಾಗಿರುವ ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್‌ಗಳು, ಆಹಾರ ಪದಾರ್ಥಗಳು ಬೆಲೆ ಗಗನಕ್ಕೇರುತ್ತಿದೆ. ಇದು ಜನಸಾಮಾನ್ಯರ ಜೀವನ ಬೀದಿಗೆ ಬರುವಂತೆ ಮಾಡುತ್ತಿದ್ದು, ಇವುಗಳನ್ನು ನಿಯಂತ್ರಿಸಬೇಕಾದ ಸರ್ಕಾರ ಇಂದು ಧರ್ಮಗಳ ನಡುವೆ ಭಿನ್ನಾಭಿಪ್ರಾಯವನ್ನು ಸೃಷ್ಟಿಸುವ ಜೊತೆಗೆ ಅನಗತ್ಯವಾದ ಹೆಸರು ಬದಲಾವಣೆಯ ಕಾರ್ಯದಲ್ಲಿ ತೊಡಗಿಕೊಂಡಿದೆ.

ಇದಿಷ್ಟು ಸಾಲದಂತೆ ಅಡುಗೆ ಅನಿಲಕ್ಕೆ ನೀಡುತ್ತಿದ್ದ ಸಬ್ಸಿಡಿ ಹಣವನ್ನು ಈಗಿನ ಸರ್ಕಾರ ಸ್ಥಗಿತಗೊಳಿಸಿದೆ. ಇದರೊಂದಿಗೆ 1 ರಿಂದ 8ನೇ ತರಗತಿವರೆಗಿನ ಪ.ಜಾತಿ, ಪ.ಪಂಗಡಗಳ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ರದ್ದುಗೊಳಿಸಿದೆ. 2015ರಲ್ಲಿ ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತ 93ನೇ ಸ್ಥಾನದಲ್ಲಿತ್ತು. ಆದರೆ 2022ರ ಸೂಚ್ಯಂಕದಲ್ಲಿ 107ನೇ ಸ್ಥಾನದಲ್ಲಿದೆ. ಇದು ಭಾರತದ ಅಭಿವೃದ್ಧಿಯೇ? ಎಂಬುದು ಜನರ ಪ್ರಶ್ನೆಯಾಗಿದೆ. ಪ್ರಸ್ತುತ ಸರ್ಕಾರವು ಅಽಕಾರಕ್ಕೆ ಬಂದಾಗಿನಿಂದಲೂ ಸ್ವಿಸ್ ಬ್ಯಾಂಕ್‌ನಿಂದ ಹಣ ಬರಲೇ ಇಲ್ಲ, ಉದ್ಯಮಿಗಳಿಗೆ ನೀಡಿದ ಸಾವಿರಾರು ಕೋಟಿ ರೂ. ಸಾಲದ ಹಣ ಸಂದಾಯವಾಗಿಲ್ಲ, ನೋಟು ಅಮಾನ್ಯೀಕರಣ ನಿರೀಕ್ಷೆಯ ಯಶಸ್ಸು ಕಾಣಲಿಲ್ಲ, ಭಾರತದ ಸಾಲದ ಹೊರೆ ಇಳಿಯಲಿಲ್ಲ, ಬ್ಯಾಂಕುಗಳ ವಿಲೀನ ಪ್ರಯೋಜನವಾಗಲಿಲ್ಲ, ಜನಧನ್ ಖಾತೆಯ ಸಫಲತೆಯೂ ಕಾಣಲಿಲ್ಲ, ಇವುಗಳನ್ನೆಲ್ಲ ಸರಿದೂಗಿಸಬೇಕಿದ್ದ ಸರ್ಕಾರ ತನ್ನ ವೈಫಲ್ಯವನ್ನು ಮರೆಮಾಚಲು ಧರ್ಮಗಳ ನಡುವೆ ಭಿನ್ನಾಭಿಪ್ರಾಯ, ಗಡಿವಿವಾದಗಳನ್ನು ಸೃಷ್ಟಿಸಲು ಆರಂಭಿಸಿದೆ.

ಕುಸಿಯುತ್ತಿರುವ ದೇಶದ ಆರ್ಥಿಕತೆ, ಹೆಚ್ಚಾಗುತ್ತಿರುವ ಕೋಮುವಾದ, ಅತ್ಯಾಚಾರದಂತಹ ಪ್ರಕರಣಗಳು ಮತ್ತು ಅತಿಯಾದ ಬೆಲೆ ಏರಿಕೆಗಳಿಂದ ಜನಸಾಮಾನ್ಯರು ತತ್ತರಿಸುತ್ತಿದ್ದಾರೆ. ಆದರೆ, ಧರ್ಮದ ವಿಚಾರದ ಕಲಹ, ಹತ್ಯೆಗಳು, ಮಸೀದಿ-ದೇವಾಲಯಗಳ ಧ್ವಂಸ, ಟಿಪ್ಪುವಿನ ಹೆಸರಿನ ಕಲಹದ ಹೊರತಾಗಿ ಅಭಿವೃದ್ಧಿ, ಬಡತನ-ಹಸಿವು ನಿರ್ಮೂಲನೆಗೆ ಕ್ರಮ, ಜಾಗತಿಕ ಮಟ್ಟದಲ್ಲಿ ದೇಶದ ಪ್ರಗತಿಯ ಬಗ್ಗೆ ಯೋಜನೆಗಳು ಸಿದ್ಧವಾಗಲೇ ಇಲ್ಲ.

‘ಮತ ಎಂಬುದು ಎರಡು ಅಲಗಿನ ಖಡ್ಗವಿದ್ದಂತೆ, ಅದನ್ನು ಬೀಸಿದರೆ ಅಸಾಮಾಜಿಕ ಅಸಮಾನತೆ ತೊಲಗುತ್ತದೆ. ಮತೊಂದು ಕಡೆ ಬೀಸಿದರೆ ಆರ್ಥಿಕ ಅಸಮಾನತೆ ಸಂಹಾರವಾಗುತ್ತದೆ’ ಎಂಬ ಡಾ.ಬಿ.ಆರ್.ಅಂಬೇಡ್ಕರ್ ಅವರ ಮಾತನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಚುನಾವಣೆಯಲ್ಲಿ ಯೋಗ್ಯ ವ್ಯಕ್ತಿಯನ್ನು ಆಯ್ಕೆ ಮಾಡಬೇಕು. ಅದರಿಂದ ಬಡತನ ನಿರ್ಮೂಲನೆ ಸಾಧ್ಯವಾಗುತ್ತದೆ.

andolanait

Recent Posts

ಕಾರ್ಕಹಳ್ಳಿ ಬಸವೇಶ್ವರ ಜಾತ್ರೆ: ಇಂದು ಕೊಂಡೋತ್ಸವ

ಅಣ್ಣೂರು ಸತೀಶ್ ನಾಳೆ ಸಂಜೆ ವಿಜೃಂಭಣೆಯ ರಥೋತ್ಸವ,ಅನ್ನಸಂತರ್ಪಣೆ  ಭಾರತೀನಗರ: ಕಾರ್ಕಹಳ್ಳಿ ಶ್ರೀ ಬಸವೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಮಾ.೩ರ…

2 hours ago

‘ಮಕ್ಕಳ ವ್ಯಕ್ತಿತ್ವ ವಿಕಸನಕ್ಕಾಗಿ ಶಾಲೆಗಳಲ್ಲಿ ರಂಗಶಿಕ್ಷಣ ನೀಡಿ’

ಗಿರೀಶ್ ಹುಣಸೂರು ಕೆಪಿಎಸ್, ಪಿಎಂಶ್ರೀ ಶಾಲೆಗಳಲ್ಲಿ ರಂಗಶಿಕ್ಷಕರ ನೇಮಕಕ್ಕೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಶಿಫಾರಸು ಮೈಸೂರು: ಇಂದಿನ ಮಕ್ಕಳಲ್ಲಿ…

2 hours ago

1000 ಕೋಟಿ ರೂ. ಸಂಪನ್ಮೂಲ ಕ್ರೋಢೀಕರಣಕ್ಕೆ ಎಂಡಿಎ ಪ್ಲಾನ್!

ಕೆ.ಬಿ.ರಮೇಶನಾಯಕ ಮೈಸೂರು: ಹಲವು ಅವ್ಯವಹಾರಗಳಿಂದಾಗಿ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆಗೆ ಗುರಿ ಯಾಗಿದ್ದ ಹಿಂದಿನ ಮುಡಾ, ಎಂಡಿಎ ಆಗಿ ಪರಿವರ್ತನೆಯಾದ…

2 hours ago

ಮಾನವತೆಯ ಸಂದೇಶ ಸಾರಿದ ಯತೀಂದ್ರ

ಡಾ.ಎಸ್‌. ಕೃಷ್ಣಪ್ಪ ಕಿತ್ತೂರು  ಇಂದು ಕೈವಾರ ತಾತಯ್ಯ ಅವರ ಜಯಂತಿ ‘ಉತ್ತಮ ಕುಲವೆಂದು ಹೇಳುವ ಮಾತು ಯುಕ್ತವಲ್ಲಣ್ಣ’... ೧೮ನೇ ಶತಮಾ…

2 hours ago

ಪ್ರಮುಖ ತಂತ್ರಜ್ಞಾನ ಸ್ಟಾರ್ಟ್ ಅಪ್‌ಗಳ ಹೋರಾಟ

ವಿಶ್ವಪ್ರಸಾದ್ ಆಳ್ವ ಒಂದೆರಡು ವರ್ಷಗಳ ಹಿಂದೆ ದೇಶದ ಹಣಕಾಸು ಸಚಿವರು ಮೂಲ ತಂತ್ರಜ್ಞಾನ ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿ (ಆರ್…

2 hours ago

ಇರಾನ್ ಸಂಘರ್ಷದ ಪೂರ್ವಾಪರ

ಪ್ರೊ.ಪ್ರೇಮ ಶೇಖರ ಒಂದೂವರೆ ತಿಂಗಳಿನಿಂದ ಜಗತ್ತು ಆತಂಕದಿಂದ ಎದುರು ನೋಡುತ್ತಿದ್ದಂತಹ ಯುದ್ಧ ಪಶ್ಚಿಮ ಏಷ್ಯಾದಲ್ಲಿ ಪ್ರಾರಂಭವಾಗಿದೆ. ಜನವರಿ ಮೊದಲ ಭಾಗದಲ್ಲಿ…

2 hours ago