ಎಡಿಟೋರಿಯಲ್

ದುಬೈಯಲ್ಲಿ ಸುದೀಪ್‌ರ ‘ವಿಕ್ರಾಂತ್ ರಾಣ’ ಪ್ರೀಮಿಯರ್

ಮುಂದಿನ ವಾರ ಕನ್ನಡ ಚಿತ್ರರಂಗದ ಮತ್ತೊಂದು ಬಹು ನಿರೀಕ್ಷಿತ ಚಿತ್ರ ‘ವಿಕ್ರಾಂತ್ ರಾಣ’ ತೆರೆಗೆ ಬರುತ್ತಿದೆ. ನಿರೂಪ್ ಭಂಡಾರಿ ನಿರ್ದೇಶನ, ಸುದೀಪ್ ಮುಖ್ಯ ಭೂಮಿಕೆಯ ಈ ಚಿತ್ರವನ್ನು ಶಾಲಿನಿ ಮಂಜುನಾಥ್ ಮತ್ತು ಜಾಕ್ ಮಂಜು ನಿರ್ಮಿಸಿದ್ದಾರೆ. ಪ್ರಪಂಚದಾದ್ಯಂತ ಬಹುತೇಕ ದೇಶಗಳಲ್ಲಿ ಏಕಕಾಲಕ್ಕೆ ತೆರೆಕಾಣಲಿರುವ ಈ ಚಿತ್ರ ೩ಡಿಯಲ್ಲಿ ತಯಾರಾಗಿರುವುದು ವಿಶೇಷ.

ಸಾಮಾನ್ಯವಾಗಿ ಅದ್ದೂರಿ ಚಿತ್ರಗಳ ನಿರ್ಮಾಣಕ್ಕಿಂತಲೂ ಅವುಗಳ ಬಿಡುಗಡೆಯ ವೇಳೆ ಮಾಡುವ ಪ್ರಚಾರಕ್ಕೆ ಸಾಕಷ್ಟು ವ್ಯಯಿಸಬೇಕಾಗುತ್ತದೆ. ಎಲ್ಲ ಮಾಧ್ಯಮಗಳಲ್ಲಿ ಜಾಹೀರಾತು, ಪ್ರಚಾರಗಳಿಗೆ ಈಗ ಪ್ರಚಾರ ವೆಚ್ಚ ಲಕ್ಷಗಳಿಂದ ಕೋಟಿಗೇರಿದೆ. ಸುದ್ದಿ ಮತ್ತು ಮನರಂಜನಾ ವಾಹಿನಿಗಳು, ಮುದ್ರಣ ಮಾಧ್ಯಮಗಳು, ಸಿನಿಮಾಕೇಂದ್ರಿತ ಸಾಮಾಜಿಕ ಜಾಲತಾಣಗಳು, ಭಿತ್ತಿಪತ್ರಗಳು, ಈಗ ಎಲ್ಲೆಂದರಲ್ಲಿ, ಹೇಗೆಂದರಲ್ಲಿ ಹುಟ್ಟಿಕೊಳ್ಳುತ್ತಿರುವ ಯುಟ್ಯೂಬ್ ವಾಹಿನಿಗಳು, ಜನಪ್ರಿಯ ಮಂದಿ ನಡೆಸುತ್ತಿರುವ ವಾಹಿನಿಗಳು, ಕೃತಕವಾಗಿ ಜನಪ್ರಿಯತೆ ಸೃಷ್ಟಿಸುವ ತಾಣಗಳೇ ಮೊದಲಾದವುಗಳಿಗೆ ನೀಡುವ ಮೊತ್ತದ ಮೇಲೆ ಆ ಚಿತ್ರದ ಪ್ರಚಾರ ನಿಂತಿರುತ್ತದೆ.

ತಮಗೆ ಜಾಹೀರಾತು ನೀಡದ ಚಿತ್ರಗಳ ಪ್ರಚಾರವನ್ನೇ ಮಾಡದ ವಾಹಿನಿಗಳಿವೆ. ಸಾಂಪ್ರದಾಯಕ ಪ್ರಚಾರದ ಆಚೆ ಭಿನ್ನವಾಗಿ ಯೋಚನೆ ಮಾಡುವ ಚಿತ್ರ ನಿರ್ಮಾಪಕರೂ ಇರುತ್ತಾರೆ. ಹೊಂಬಾಳೆ ಸಂಸ್ಥೆ ನಿರ್ಮಿಸಿ, ಬೇರೆಬೇರೆ ಭಾಷೆಗಳಿಗೆ ಡಬ್ ಮಾಡಿ ಬಿಡುಗಡೆ ಮಾಡಿದ ‘ಕೆಜಿಎಫ್ ಚಾಪ್ಟರ್ ೨’ ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ಬರೆಯಿತು. ದೇಶದ ಇತರ ಯಾವ ಭಾಷೆಗಳ ಚಿತ್ರಗಳೂ ಇಷ್ಟೊಂದು ಗಲ್ಲಾಪೆಟ್ಟಿಗೆ ಗಳಿಕೆ ಮಾಡಲಿಲ್ಲ ಎನ್ನಲಾಗುತ್ತಿದ. ಅದಕ್ಕೆ ಚಿತ್ರದ ನಿರ್ಮಾಣದಂತೆಯೇ, ಅದರ ಪ್ರಚಾರವನ್ನು ಸಾಕಷ್ಟು ಕಾಲಾವಕಾಶ ನೀಡಿ, ವ್ಯವಸ್ಥಿತವಾಗಿ ಮಾಡಿದ್ದೂ ಪೂರಕವಾಯಿತು ಎನ್ನುವುದರಲ್ಲಿ ಎರಡು ಮಾತಿಲ್ಲ.

ಇದೀಗ ‘ವಿಕ್ರಾಂತ್ ರಾಣ’ ಸರದಿ. ಮೊದಲು ಚಿತ್ರಕ್ಕೆ ‘ಫ್ಯಾಂಟಂ’ ಎಂದು ಹೆಸರಿಡಲಾಗಿತ್ತು. ನಂತರ ಜಗತ್ತಿನ ಅತಿ ಎತ್ತರದ ಕಟ್ಟಡ, ದುಬೈಯ ಬುರ್ಜ್ ಖಲೀಫಾದ ಮೇಲೆ, ಕನ್ನಡ ಬಾವುಟ ಹಾರಿಸಿ, ಚಿತ್ರದ ಹೆಸರನ್ನು ‘ವಿಕ್ರಾಂತ್ ರಾಣ’ ಎಂದು ಪ್ರಕಟಿಸಲಾಯಿತು. ಸುದೀಪ್ ವೃತ್ತಿಜೀವನದ ರಜತೋತ್ಸವ ವರ್ಷ ಪೂರೈಸಿದ ಸಂದರ್ಭದ ಅವಿಸ್ಮರಣೀಯ ಕಾರ್ಯಕ್ರಮವೂ ಅದಾಯಿತೆನ್ನಿ.

ನಾಡದು, ಮೇ ೨೭ರಂದು ‘ವಿಕ್ರಾಂತ್ ರಾಣ’ ಚಿತ್ರದ ಪ್ರೀಮಿಯರ್ ದುಬೈಯಲ್ಲಿ ನಡೆಯಲಿದೆ. ಪ್ರಪಂಚದಲ್ಲಿಯೇ ಮೊದಲ ಬಾರಿಗೆ ಈ ಪ್ರೀಮಿಯರ್ ಮೂಲಕ, ಮೂಲಕ ಎನ್‌ಎಫ್‌ಟಿ (ನಾನ್ ಫಾಂಜಿಬಲ್ ಟೋಕನ್) ಮನರಂಜನೋದ್ಯಮ ಕ್ಷೇತ್ರಕ್ಕೆ ಕಾಲಿಡುತ್ತಿದೆ. ಸಿಲ್ವರ್, ಗೋಲ್ಡ್, ಪ್ಲಾಟಿನಮ್ ಮತ್ತು ಡೈಮಂಡ್ ಈ ನಾಲ್ಕು ವಿಧದ ಸದಸ್ಯತ್ವ ಲಭ್ಯವಿದ್ದು, ಸಿನಿಮಾ ವೀಕ್ಷಣೆಯ ಜೊತೆಗೆ ಸುದೀಪ್ ಜತೆ ಮಾತನಾಡುವ, ಭಾವಚಿತ್ರ ತೆಗೆಸಿಕೊಳ್ಳುವುದೇ ಮೊದಲಾದ ಅವಕಾಶಗಳಿವೆ.

ಎನ್‌ಎಫ್‌ಟಿಯ ಬ್ಲಾಕ್‌ಚೈನ್‌ನ ಅಂಗವಾಗಿರುವ ಬ್ಲಾಕ್ ಟಿಕೆಟ್ಸ್ ಮೂಲಕ ಇದು ನಡೆಯಲಿದೆ. ಪ್ರಿಯಾ ಸುದೀಪ್ ಮತ್ತು ಸುದೀಪ್ ಅವರು ತಮ್ಮದೇ ಆದ ಕಾಫಿ ಅಂಡ್ ಬನ್ ಲಿ. ಸಂಸ್ಥೆಯನ್ನು ನೊಂದಾಯಿಸಿಕೊಂಡು ಆ ಮೂಲಕ ಹಲವು ಯೋಜನೆ ಕೈಗೆತ್ತಿಕೊಳ್ಳುವವರಿದ್ದರು. ಈ ವೇಳೆಗೆ ಎನ್‌ಎಫ್‌ಟಿ ಸಂಬಂಧಪಟ್ಟಂತೆ ಅನಿವಾಸಿ ಕನ್ನಡಿಗ ಜಾಕೀರ ಹುಸೇನ್ ಮತ್ತವರ ತಂಡ ಇವರನ್ನು ಸಂಪರ್ಕಿಸಿ, ಅದರ ಸಾಧ್ಯತೆಗಳನ್ನು ವಿವರಿಸಿದ್ದಾರೆ. ಸಾಕಷ್ಟು ಜಿಜ್ಞಾಸೆ, ಚರ್ಚೆಗಳ ನಂತರ ಕಿಚ್ಚನ ಜಗತ್ತನು ್ನ ‘ಕಿಚ್ಚವರ್ಸ್’ (ಜ್ಚಿಜ್ಚಛ್ಟಿಛಿ.ಜಿಟ) ಸೃಷ್ಟಿಲಾಗಿದೆ. ಮೊನ್ನೆ ಅದರ ಲೋಕಾರ್ಪಣೆಯಾಗಿದ್ದು, ನಾಡದು ೨೪ರಂದು ಅಲ್ಲಿ ಕಿಚ್ಚನ ಲೋಕವನ್ನು ಆಸಕ್ತರು ಪ್ರವೇಶಿಸಬಹುದು. ಅಲ್ಲಿ ಅವರು ಕಿಚ್ಚನ ಜೊತೆ ಮಾತನಾಡಬಹುದು, ಅವರ ಜೊತೆ ಸಮಯ ಕಳೆಯಬಹುದು ಹೀಗೆ ತಮ್ಮ ನೆಚ್ಚಿನ ನಟನೊಂದಿಗೆ ಕಾಲ ಕಳೆಯಲು ಕಿಚ್ಚ ವರ್ಸ್ ಅವಕಾಶ ಮಾಡಲಿದ್ದು, ಕಿಚ್ಚನ ಅಭಿಮಾನಿಗಳಿಗೆ ಇದು ತುಂಬಾನೇ ಖುಷಿ ಕೊಡಲಿದೆ.

‘ವಿಕ್ರಾಂತ್ ರಾಣ’ ಬಿಡುಗಡೆಯ ಸಂದರ್ಭದಲ್ಲೇ ಕಿಚ್ಚನ ಲೋಕವೂ ಸೃಷ್ಟಿಯಾಗಿರುವುದರಿಂದ ಅದರ ಪ್ರಚಾರಕ್ಕೂ ಇದು ಪೂರಕವಾಗಲಿದೆ.
ಕಿಚ್ಚ ವರ್ಸ್‌ನಲ್ಲಿ , ಅವರ ಸಂಗ್ರಹದಲ್ಲಿರುವ ವಸ್ತುಗಳನ್ನು ಡಿಜಿಟಲ್ ರೂಪದಲ್ಲಿ ಇಡಲಾಗುವುದು. ಆಸಕ್ತರು ಅದನ್ನು ಕೊಂಡುಕೊಂಡು ತಾವು ಅದರ ಮಾಲಿಕರಾಗಬಹುದು. ಮುಂದೆ ಅಧಿಕ ಬೆಲೆಗೆ ಮಾರಲೂ ಸಾಧ್ಯ. ಈ ಎಲ್ಲವೂ ಜಾಲತಾಣಗಳ ಮೂಲಕವೇ ನಡೆಯುತ್ತದೆ. ಎನ್‌ಎಫ್‌ಟಿಯ ಬ್ಲಾಕ್‌ಚೈನ್ ವೆಬ್‌೩ ಮೂಲಕ ಈ ದಾಖಲೆಗಳನ್ನು ಇಟ್ಟುಕೊಳ್ಳುವುದರಿಂದ ಅದನ್ನು ಹ್ಯಾಕ್ ಮಾಡುವುದೋ ಇನ್ನೊಂದೋ ಸಾಧ್ಯವಿಲ್ಲ ಎನ್ನುವುದು ಈಗಿನ ಅಭಿಪ್ರಾಯ. ಹಿಂದೆ ಸಂಗ್ರಹಾಲಯಗಳು ಇರುತ್ತಿದ್ದವು. ಈಗ ಈ ಸಂಗ್ರಹಾಲಯಗಳು ಡಿಜಿಟಲ್ ತಾಣಗಳಲ್ಲಿ ಇರುತ್ತವೆ!
ಕಿಚ್ಚ ವರ್ಸ್ ಪ್ರವೇಶಕ್ಕೆ ಎನ್‌ಎಫ್‌ಟಿ ಸದಸ್ಯತ್ವಕ್ಕೆ ಸ್ಪರ್ಧೆಯೊಂದನ್ನು ಏರ್ಪಡಿಸಲಾಗಿದೆ.

ಅದು ‘ವಿಕ್ರಾಂತ್ ರಾಣ’ ಚಿತ್ರದ ಚಿತ್ರ ಬಿಡಿಸುವ ಸ್ಪರ್ಧೆ. ಉತ್ತಮ ಚಿತ್ರ ಬಿಡಿಸಿದವರಿಗೆ ಸದಸ್ಯತ್ವನೀಡಲಾಗುತ್ತದೆಯಂತೆ. ನಾಡದು ೨೪ರಿಂದನಡೆಯಲಿದೆ ಎನ್‌ಎಫ್‌ಟಿಯ ಕಿಚ್ಚವರ್ಸ್‌ನಲ್ಲಿ ಸಂಗ್ರಹಯೋಗ್ಯ ವಸ್ತುಗಳನ್ನು ನೋಡಬಹುದು. ಆಸಕ್ತರು ಅದನ್ನು ಖರೀದಿಸಬಹುದು. ಅಲ್ಲೂ ಹಲವು ಕಾರ್ಯಕ್ರಮಗಳಿದ್ದು, ತಮ್ಮ ನೆಚ್ಚಿನ ನಟನೊಂದಿಗೆ ಆತ್ಮೀಯವಾಗಿ ಕಾಲ ಕಳೆಯಲು ಅವಕಾಶ ಮಾಡಿಕೊಡಲಿದೆ ಎನ್ನುತ್ತಿದೆ ತಂಡ.
ಕಾಫಿ ಅಂಡ್ ಬನ್ ಇನೋವೇಷನ್ಸ್ ಸಂಸ್ಥೆಯ ನಿರ್ದೇಶಕರಾಗಿ ಪ್ರಿಯಾ ಸುದೀಪ್ ಮತ್ತು ಸುದೀಪ್‌ಅವರಿದ್ದು, ಸಿಇಓ ಆಗಿ ಜಾಕೀರ ಹುಸೇನ್ ಇದ್ದಾರೆ. ಅದು ಆಹಾರೋದ್ಯಮ, ಮನರಂಜನೋದ್ಯಮ ಮತ್ತು ಸಮಾಜ ಸೇವೆಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳಲಿದೆ.

ಎನ್‌ಎಫ್‌ಟಿ -ಬ್ಲಾಕ್‌ಚೈನ್, ಕ್ರಿಪ್ಟೊಗಳ ಕುರಿತಂತೆ ಭಾರತದಲ್ಲಿ ಇನ್ನೂ ಜಿಜ್ಞಾಸೆ ನಡೆದಿದೆ. ಕ್ರಿಪ್ಟೊಕರೆನ್ಸಿಯನ್ನು ಮಾನ್ಯ ಮಾಡಲು ರಿಸರ್ವ್ ಬ್ಯಾಂಕ್ ಇನ್ನೂ ತಯಾರಿಲ್ಲ. ಅದಕ್ಕೆ ಮುಖ್ಯ ಕಾರಣ, ಎನ್‌ಎಫ್ಟಿಯ ವ್ಯವಹಾರಗಳು ಪರಸ್ಪರ ನಂಬಿಕೆಯ ಹೆಸರಿನಲ್ಲಿ, ಯಾವುದೇ ಮೂರನೇ ವ್ಯಕ್ತಿಗೆಅರಿವಿಲ್ಲದೆ ಆಗುತ್ತಿರುವುದು ಎನ್ನಲಾಗಿದೆ. ಕ್ರಿಪ್ಟೋಕರೆನ್ಸಿಗೂ, ತಮ್ಮ ವ್ಯವಹಾರಕ್ಕೂ ಸಂಬಂಧಇಲ್ಲ ಎನ್ನುತ್ತಾರೆ, ಎನ್‌ಎಫ್ಟಿಯ ಅಭಿನವ್. ಮುಂದಿನ ದಿನಗಳಲ್ಲಿ, ಎನ್‌ಎಫ್‌ಟಿಯ ಬ್ಲಾಕ್‌ಚೈನ್‌ನ ್ನ ಬ್ಲಾಕ್ ಟಿಕೆಟ್ ಮೂಲಕ ಸಿನಿಮಾ ಟಿಕೆಟ್ ಬುಕಿಂಗ್ ಮಾಡುವ ಯೋಚನೆ ನಡೆದಿದೆ. ತಾವು ಕೊಂಡ ಟಿಕೆಟನ್ನು ಜೋಪಾನವಾಗಿ, ನೆನಪಾಗಿ ಉಳಿಸಿಕೊಳ್ಳಲು ಇದು ನೆರವಾಗಲಿದೆಯಂತೆ. ಡಿಜಿಟಲ್ ಹೊರಳಿನೊಂದಿಗೆ ಮನರಂಜನೆಯ ಉದ್ಯಮ ಹೊಸ ಹೊಸ ಅನ್ವೇಷಣೆ, ಸಾಧ್ಯತೆಗಳಿಗೆ ತನ್ನನ್ನು ತೆರೆದುಕೊಳ್ಳುತ್ತಿದೆ. ಇದುಕೂಡಾ ಆ ನಿಟ್ಟಿನ ಹೆಜ್ಜೆ.

andolana

Recent Posts

ಮುಡಾ ಪ್ರಕರಣ: ಮುಡಾ ಕಚೇರಿಗಿಂತ ಸಚಿವ ಭೈರತಿ ಸುರೇಶ್‌ ಮನೆಯಲ್ಲೇ ಅಧಿಕ ಫೈಲ್‌: ಶ್ರೀವತ್ಸ

ಮೈಸೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಫೈಲ್‌ಗಳು ಮುಡಾ ಕಚೇರಿಯಲ್ಲಿರುವುದಕ್ಕಿಂತ ಸಚಿವ ಭೈರತಿ ಸುರೇಶ್‌ ಮನೆಯಲ್ಲೇ ಅಧಿಕವಾಗಿವೆ ಎಂದು ಶಾಸಕ ಟಿ.ಎಸ್‌.ಶ್ರೀವತ್ಸ…

10 mins ago

ಮುಡಾ ಕಚೇರಿ ಮೇಲೆ ಇಡಿ ದಾಳಿ: ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ

ಮಂಡ್ಯ: ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಸರ್ಕಾರಿ ಭೂಮಿಯನ್ನು ಲಪಾಟಾಯಿಸಿದ್ದಾರೆ, ಅದಕ್ಕೆ ಆ ನಿವೇಶನಗಳನ್ನು ವಾಪಾಸ್ಸು ಮಾಡಿದ್ದಾರೆ ಎಂದು ಕೇಂದ್ರ…

1 hour ago

ಮುಡಾ ಕಚೇರಿಯ ಮೇಲೆ ಇಡಿ ದಾಳಿ ದುರುದ್ದೇಶಪೂರ್ವಕ: ಮಾಜಿ ಸಂಸದ ಡಿ.ಕೆ.ಸುರೇಶ್‌

ಬೆಂಗಳೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಇಂದು (ಅಕ್ಟೋಬರ್‌.18) ಮೂರು ಕಡೆಗಳಲ್ಲಿ ದಾಳಿ ನಡೆಸಿದ್ದು, ಈ ದಾಳಿಯು ಸಂಪೂರ್ಣವಾಗಿ…

2 hours ago

ಮುಡಾ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು: ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ಮುಡಾ ಕೇಸ್‌ ಮುಚ್ಚಿ ಹಾಕುವಲ್ಲಿ ಸರ್ಕಾರಕ್ಕೆ ಲೋಕಾಯುಕ್ತ ಸಹಾಯ ಮಾಡುತ್ತದೆ ಎಂಬ ಶಂಕೆ ಇದೆ. ಹೀಗಾಗಿ ಮುಡಾ ಪ್ರಕರಣವನ್ನು…

2 hours ago

ಭವಾನಿ ರೇವಣ್ಣಗೆ ಬಿಗ್‌ ರಿಲೀಫ್:‌ ಹೈಕೋರ್ಟ್‌ ಆದೇಶ ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌

ಹೊಸದಿಲ್ಲಿ: ಆತ್ಯಾಚಾರ ಸಂತ್ರಸ್ತೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಭವಾನಿ ರೇವಣ್ಣಗೆ ಹೈಕೋರ್ಟ್‌ನಿಂದ ಜಾಮೀನು ಮಂಜೂರು ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಎಸ್‌ಐಟಿ…

2 hours ago

ಮುಡಾ ಪ್ರಕರಣ: ಮುಡಾ ಕಚೇರಿಯ ಮೇಲೆ ಇ.ಡಿ ದಾಳಿ

ಮೈಸೂರು: ಮುಡಾದಲ್ಲಿ ಹಗರಣ ನಡೆದಿದೆ ಎಂದು ಆರ್‌ಐಟಿ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಇ.ಡಿ.ಗೆ ದೂರು ನೀಡಿದ್ದರು. ಈ ದೂರಿನ ಆಧಾರದ…

3 hours ago