ಎಡಿಟೋರಿಯಲ್

ಎಲ್ಲೋ ಏನನ್ನೋ ಮರೆಮಾಚಲಾಗುತ್ತಿದೆ

ಅಜಿತ್ ರಾನಡೆ

   ಕೋವಿಡ್ ನಡುವೆಯೂ ದಕ್ಷಿಣ ಏಷ್ಯಾದ ನೆರೆ ರಾಷ್ಟ್ರಗಳು ಜನಗಣತಿ ನಡೆಸಿವೆಆದರೆ ನಮ್ಮಲ್ಲಿ ನಡೆಯದಿರುವುದು ಕಳವಳಕಾರಿಯಾಗಿದೆ.

ಭಾರತದಲ್ಲಿ ಪ್ರತಿ ಹತ್ತು ವರ್ಷಕ್ಕೊಮ್ಮೆ ಜನಗಣತಿ ನಡೆಸುವ ಪರಂಪರೆಯನ್ನು ನೂರು ವರ್ಷಗಳಿಂದಲೂ ಅನುಸರಿಸಿಕೊಂಡು ಬರಲಾಗಿದೆಕೇವಲ ಅಭಿವೃದ್ಧಿ ದೇಶಗಳ ಪೈಕಿಯಷ್ಟೇ ಅಲ್ಲದೆ ಜಗತ್ತಿನ ಇತರ ದೇಶಗಳ ಪೈಕಿ ಈ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿರುವುದು ಭಾರತದ ಹಿರಿಮೆಗಣತಿಯಲ್ಲಿ ಸಂಗ್ರಹಿಸಲಾಗುವ ದತ್ತಾಂಶವು ಬಹುಮಟ್ಟಿಗೆ ವಿಶ್ವಾಸಾರ್ಹವಾಗಿರುವುದೇ ಅಲ್ಲದೆ ಇಡೀ ಚಟುವಟಿಕೆಯನ್ನು ಬದ್ಧತೆಯೊಂದಿಗೆಶ್ರದ್ಧೆಯಿಂದ ನಡೆಸಲಾಗುತ್ತದೆ.

ಭಾರತದ ಜನಗಣತಿಯ ದತ್ತಾಂಶಗಳನ್ನು ಬಳಸಿಕೊಂಡು ನಡೆಸಿರುವ ಹಲವು ಸಂಶೋಧನೆಗಳಿಗೆ ಡಾಕ್ಟರೇಟ್ ಲಭಿಸಿದ್ದುಚಾರಿತ್ರಿಕ ಆಡಳಿತ ನೀತಿಗಳ ಬಗ್ಗೆ (ಪ್ರಮಾದಗಳು ಮತ್ತು ಯಶಸ್ಸುಗಳನ್ನೂ ಸೇರಿದಂತೆಸಾಕಷ್ಟು ಒಳನೋಟಗಳನ್ನು ಒದಗಿಸಿವೆಜನಗಣತಿಯ ದತ್ತಾಂಶಗಳು ಹಲವಾರು ಕ್ಷೇತ್ರಗಳಲ್ಲಿ ಉಪಯುಕ್ತವಾಗಿರುವುದೇ ಅಲ್ಲದೆದೇಶದ ಆರ್ಥಿಕ ಚರಿತ್ರೆಯ ಬಗ್ಗೆ ವಿಶ್ವಾಸಾರ್ಹ ಮಾಹಿತಿಯನ್ನೂ ಒದಗಿಸುತ್ತಾ ಬಂದಿವೆಈ ದಶ ವಾರ್ಷಿಕ ಜನಗಣತಿಯು ಜನಸಂಖ್ಯಾ ಹೆಚ್ಚಳವನ್ನಷ್ಟೇ ಅಲ್ಲದೆಕುಟುಂಬ ಘಟಕಗಳುಕುಟುಂಬ ಸದಸ್ಯರ ಬಗ್ಗೆಯೂ ದಾಖಲಿಸುವುದೇ ಅಲ್ಲದೆವಯಸ್ಸುಫಲವತ್ತತೆಸಾಕ್ಷರತೆ ಮತ್ತು ವಲಸೆಯ ಪ್ರಮಾಣಗಳನ್ನು ಕಣಕಣವೂ ಸಂಗ್ರಹಿಸುತ್ತದೆ.

ಜನಗಣತಿಯು ಆರ್ಥಿಕ ಸ್ಥಿತಿಯ ಸೂಚಿಯನ್ನು ನಿರ್ಧರಿ ಸಲು ನೆರವಾಗುವ ಉದ್ಯೋಗ ಮತ್ತು ಆದಾಯದ ವಿವರಗ ಳನ್ನೂ ಒದಗಿಸುತ್ತದೆಈ ವಿವರಗಳನ್ನು ರಾಷ್ಟ್ರೀಯ ಸಾಂಖ್ಯಿಕ ಸಂಸ್ಥೆ (ಎನ್‌ಎಸ್‌ಒಸಂಗ್ರಹಿಸುವುದಾದರೂ ಜನಗಣತಿ ಯಲ್ಲೂ ದಾಖಲಾಗುತ್ತದೆಜನಗಣತಿಯನ್ನು ಕೇಂದ್ರ ಗೃಹ ಸಚಿವಾಲಯದ ಸುಪರ್ದಿಯಲ್ಲಿರುವ ಭಾರತೀಯ ರಿಜಿಸ್ಟ್ರಾರ್ ಜನರಲ್ ಮುಂದಾಳತ್ವದಲ್ಲಿ ನಡೆಸಲಾಗುತ್ತದೆಎನ್‌ಎಸ್‌ಎಸ್‌ಒ ಸಮೀಕ್ಷೆಯು ಕೇಂದ್ರ ಸಾಂಖ್ಯಿಕ ಹಾಗೂ ಕಾರ್ಯಕ್ರಮ ಯೋಜನೆಯ ಸಚಿವಾಲಯದ (MSOPIಸುಪರ್ದಿಯಲ್ಲಿ ನಡೆಯುತ್ತದೆ.

2021ರ ಜನಗಣತಿಯನ್ನು 2 ಹಂತಗಳಲ್ಲಿ ನಡೆಸಬೇಕಿತ್ತುಮೊದಲ ಹಂತದಲ್ಲಿ ವಾಸದ ಮನೆಗಳುಗೃಹಗಳ ಸಂಖ್ಯೆಗಳನ್ನು ಸಂಗ್ರಹಿಸಲಾಗುತ್ತದೆ. 2 ನೇ ಹಂತದಲ್ಲಿ ಜನಸಂಖ್ಯೆಯನ್ನು ಸಂಗ್ರಹಿಸಲಾಗುತ್ತದೆ. 2019ರ ಮಾರ್ಚ್ ನಲ್ಲಿ ಕೇಂದ್ರ ಸರ್ಕಾರವು ತನ್ನ ಗೆಜೆಟ್ ಮೂಲಕ ಹತ್ತು ವರ್ಷಕ್ಕೊಮ್ಮೆ ನಡೆಸುವ ಜನಗಣತಿಯ ಅಧಿಸೂಚನೆಯನ್ನು ಹೊರಡಿಸಿತ್ತುಜನಗಣತಿಯ ಕಾರ್ಯಾಚರಣೆ ಆರಂಭವಾ ಗುವ ಮುನ್ನ ಪಟ್ಟಣಗ್ರಾಮಜಿಲ್ಲೆ ಮತ್ತು ಜನಗಣತಿಯ ಪಟ್ಟಣಗಳ ವ್ಯಾಪ್ತಿ ಮಿತಿಗಳನ್ನು ನಿರ್ಧರಿಸಿ ನಿರ್ಬಂಧ ಹೇರಬೇಕಾಗುತ್ತದೆಜನಗಣತಿಯ ಮೊದಲ ಹಂತವನ್ನು ೨೦೨೦ರ ಏಪ್ರಿಲ್‌ನಿಂದ ಸೆಪ್ಟೆಂಬರ್ ಅವಧಿಯಲ್ಲಿ ಕೈಗೊಳ್ಳಬೇಕಿತ್ತುಆನಂತರ  ನೇ ಹಂತವನ್ನು ಆರಂಭಿಸಬೇಕಿತ್ತುಹಾಗಾಗಿದ್ದಲ್ಲಿ ೨೦೨೧ರ ಏಪ್ರಿಲ್ ವೇಳೆಗೆ ಪ್ರಾಥಮಿಕ ಅಂಕಿ– ಸಂಖ್ಯೆಗಳನ್ನು ಬಿಡುಗಡೆ ಮಾಡಬಹುದಿತ್ತು.

ಈ ವೇಳಾ ಪಟ್ಟಿಯನ್ನು ಕೋವಿಡ್ ಸಾಂಕ್ರಾಮಿಕವು ಭಂಗಗೊಳಿಸಿತ್ತುಆರಂಭದಲ್ಲಿ ಗಡಿಗಳನ್ನು ನಿಗದಿಪಡಿಸುವ ಪ್ರಕ್ರಿಯೆಯನ್ನು 2020ರ ಅಂತ್ಯದವರೆಗೆ ವಿಸ್ತರಿಸಲಾಯಿತುಪುನಃ ಇದನ್ನು 2021ರ ಅಂತ್ಯದವರೆಗೆ ವಿಸ್ತರಿಸಲಾಯಿತುಆಗಿನಿಂದಲೂ 2 ಬಾರಿ ಮುಂದೂಡಲಾಗಿದ್ದುಇತ್ತೀಚೆಗೆ ಹೊರಡಿಸಲಾದ ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾದ ಅಽಸೂಚನೆಯಲ್ಲಿ(ಇದು ಗೃಹಸಚಿವಾಲಯದ ಸುಪರ್ದಿಯಲ್ಲಿರುತ್ತದೆಗಡಿಗಳನ್ನು ನಿರ್ಧರಿಸುವ ಪ್ರಕ್ರಿಯೆಯನ್ನು ಜೂನ್ ೨೦೨೩ರವರೆಗೂ ವಿಸ್ತರಿಸಲಾಗಿದೆ ಎಂದು ಹೇಳಲಾಗಿದೆಈ ಪ್ರಕ್ರಿಯೆಯನ್ನು ಕರಾರುವಾಕ್ಕಾಗಿ ನಡೆಸಲು ಕನಿಷ್ಠ 10-11 ತಿಂಗಳು ಕಾಲಾವಕಾಶ ಬೇಕಾಗುತ್ತದೆ ಎನ್ನುವ ಅಂಶವನ್ನು ಪರಿಗಣಿಸಿದರೆಈ ಪ್ರಕ್ರಿಯೆಯು ೨೦೨೪ರ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ನಡೆಯಬಹುದಾದ ಸಂಭಾವ್ಯ ಲೋಕಸಭಾ ಚುನಾವಣೆಗಳಿಂದ ಮತ್ತೊಮ್ಮೆ ಬಾಧಿತವಾಗುತ್ತದೆ.

ಅಂದರೆ 2021ರ ಜನಗಣತಿಯನ್ನುಕೋವಿಡ್ ಸಾಂಕ್ರಾಮಿಕ ಮತ್ತು ಲಸಿಕಾ ಕಾರ್ಯಾಚರಣೆಯ ನೆಪದಲ್ಲಿ 4 ವರ್ಷಗಳ ಕಾಲ ಮುಂದೂಡಿದಂತಾಗುತ್ತದೆಜುಲೈ 2023ರಿಂದ ಮಾರ್ಚ್ 2024ರ ನಡುವೆಅಪಕ್ವವಾದರೂ ಅಲ್ಪಕಾಲಿಕವಾದ ಮಾದರಿಯನ್ನು ಅನುಸರಿಸಿ ಜನಗಣತಿ ಪ್ರಕ್ರಿಯೆಯನ್ನು ಕೈಗೊಳ್ಳಬಹುದಾಗಿದೆಆದರೆ ಹೀಗಾಗುವ ಸಂಭವ ಕಂಡುಬರುತ್ತಿಲ್ಲ.

ಇದರಿಂದ ಭಾರೀ ಪರಿಣಾಮಗಳುಂಟಾಗುತ್ತವೆಮೊದಲನೆಯದಾಗಿರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ (ಎನ್‌ಎಫ್‌ಎಸ್‌ಎಅನ್ವಯ ಈ ಕಾಯ್ದೆಯ ವ್ಯಾಪ್ತಿಗೆ ಗ್ರಾಮೀಣ ಭಾಗದ ಶೇ.75ರಷ್ಟು ಮತ್ತು ನಗರಗಳ ಶೇ.೫೦ರಷ್ಟು ಜನಸಂಖ್ಯೆಯನ್ನು ಕಡ್ಡಾಯವಾಗಿ ಒಳಪಡಿಸಬೇಕಿದೆಇತ್ತೀಚೆಗೆ ಕೇಂದ್ರ ಸರ್ಕಾರವು ಎನ್‌ಎಫ್‌ಎಸ್‌ಎ ಕಾಯ್ದೆಯಡಿ 81 ಕೋಟಿ ಜನರಿಗೆ ಉಚಿತ ಪಡಿತರ ನೀಡುವುದಾಗಿ ಘೋಷಿಸಿದೆಆದರೆ ಈ ಸಂಖ್ಯೆಗೆ ಆಧಾರವಾಗಿರುವುದು 2011ರ ಜನಗಣತಿ. 2022ರವರೆಗಿನ ಜನಸಂಖ್ಯಾ ಅಂದಾಜಿನ ಪ್ರಕಾರ ಈ ಸಂಖ್ಯೆ ಕನಿಷ್ಠ 10 ಕೋಟಿಯಷ್ಟಾದರೂ ಕಡಿಮೆ ಕಾಣುತ್ತದೆಇದು ಅಪಾರ ಸಂಖ್ಯೆಯ ಕುಟುಂಬಗಳಿಗೆವಿಶೇಷವಾಗಿ ಮಕ್ಕಳಲ್ಲಿಆಹಾರ ಭದ್ರತೆ ಮತ್ತು ಪೌಷ್ಟಿಕಾಂಶದ ಸ್ಥಿತ್ಯಂತರಗಳನ್ನು ನಿರ್ಧರಿಸುವಲ್ಲಿ ತೊಡಕುಂಟುಮಾಡುತ್ತದೆ.

2 ನೆಯದಾಗಿವಿವಿಧ ಸರ್ಕಾರಿ ಯೋಜನೆಗಳು ಬಾಽತವಾಗುತ್ತವೆಉದಾಹರಣೆಗೆ ರಾಷ್ಟ್ರೀಯ ಸಾಮಾಜಿಕ ನೆರವು ಯೋಜನೆ (National Social Assistance Programಯಡಿ ಹಿರಿಯ ನಾಗರಿಕರಿಗೆ ಪಿಂಚಣಿಯನ್ನು ನೀಡುವಲ್ಲಿನಿಖರ ಜನಗಣತಿಯ ಸಂಖ್ಯೆ ಲಭ್ಯವಿಲ್ಲದಿರುವುದರಿಂದಗುರಿ ಮುಟ್ಟುವುದು ಅಸಾಧ್ಯವಾಗುತ್ತದೆಈ ಯೋಜನೆಗಳಿಗೆ ಬಜೆಟ್ ಹಣವನ್ನು ಮೀಸಲಿಡಬೇಕಾದರೆಫಲಾನುಭವಿಗಳ ಸಂಖ್ಯೆಯ ನಿಖರ ಅಂದಾಜನ್ನು ನಿರ್ಧರಿಸಬೇಕಿರುತ್ತದೆ. 3 ನೆಯದಾಗಿ ಭಾರತದಲ್ಲಿ ವಲಸೆಗಾರರ ಸಂಖ್ಯೆಯ ಬಗ್ಗೆ ನಿಖರ ಮಾಹಿತಿಯ ಅವಶ್ಯಕತೆ ಇದೆಜನಗಣತಿಯಲ್ಲಿ ವಲಸೆಗಾರರು ಎಂದರೆ ತಾವು ಹುಟ್ಟಿದ ಊರಿನಿಂದ ಹೊರಗೆ ಬೇರೆ ಪ್ರದೇಶಗಳಲ್ಲಿ ದುಡಿಮೆ ಮಾಡುವವರೆಂದು ವ್ಯಾಖ್ಯಾನಿಸಲಾಗಿದೆಎಷ್ಟು ಜನ ವಲಸೆಗಾರರಿದ್ದಾರೆಅದರಲ್ಲಿ ಎಷ್ಟು ಜನ ಕಾಲಿಕ ವಲಸೆಗಾರರುದೀರ್ಘಕಾಲಿಕ ವಲಸೆಗಾರರಿದ್ದಾರೆಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ನಗರಗಳಲ್ಲಿದ್ದ ಲಕ್ಷಾಂತರ ವಲಸೆ ಕಾರ್ಮಿಕರು ಸ್ವಸ್ಥಾನಕ್ಕೆ ಸಾವಿರಾರು ಕಿಲೋಮೀಟರ್ ನಡೆದುಹೋಗಿರುವುದನ್ನು ಕಂಡಿದ್ದೇವೆವಲಸೆಗಾರರ ಚಿತ್ರಣವನ್ನು ನಿಖರವಾಗಿ ನೀಡಬೇಕೆಂದರೆ ಜನಗಣತಿಯ ಅಂಕಿಸಂಖ್ಯೆಗಳು ಅತ್ಯವಶ್ಯವಾಗಿರುತ್ತದೆ.

4 ನೆಯದಾಗಿಸರ್ಕಾರದ ವಿವಿಧ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ನಿರ್ಧಾರಣೆ ಮಾಡುವಲ್ಲಿ ಸಮಸ್ಯೆಗಳು ಎದುರಾಗುತ್ತವೆಪ್ರಧಾನ ಮಂತ್ರಿ ಆವಾಸ್ ಯೋಜನೆಯ ಸ್ಥಿತಿ ಏನಾಗಿದೆಸ್ವಚ್ಛ ಭಾರತ ಯೋಜನೆಯಡಿ ನಿರ್ಮಿಸಿದ ಶೌಚಾಲಯಗಳಲ್ಲಿ ಎಷ್ಟು ಬಳಕೆಯಾಗುತ್ತಿವೆಮನೆಗಳಿಗೆ ನಲ್ಲಿನೀರಿನ ಸಂಪರ್ಕವನ್ನು ಒದಗಿಸುವ ಯೋಜನೆಯ ವಸ್ತುಸ್ಥಿತಿ ಏನಿದೆಜನಗಣತಿಯಲ್ಲಿ ಲಭ್ಯವಾಗುವ ಸೂಕ್ಷ್ಮ ಅಂಕಿ ಅಂಶಗಳ ವಿಶ್ಲೇಷಣೆಯ ಮೂಲಕ ಇಂತಹ ಸಾವಿರಾರು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬಹುದುಜನಗಣತಿಯ ಮಾಹಿತಿಯು ನಿಖರವಾಗಿರುವುದರಿಂದ ಮತ್ತು ಅಽಕೃತವಾಗಿ ರುವುದರಿಂದ ಸರ್ಕಾರದ ಉತ್ತರದಾಯಿತ್ವವನ್ನು ಅಳೆಯಲು ಇವು ಸಹಾಯಕವಾಗುತ್ತವೆ.

ಈ ದೃಷ್ಟಿಯಿಂದಲೇ ಭಾರತದ ಸಂಖ್ಯಾಶಾಸ್ತ್ರದ ಪದ್ಧತಿಯನ್ನು ಪುನರ್ ಪರಿಷ್ಕರಣೆಗೊಳಪಡಿಸಲು ಶಿಫಾರಸು ಮಾಡಿದ್ದ ೨೦೦೧ರ ರಂಗರಾಜನ್ ಆಯೋಗದ ವರದಿಯು ಮುಖ್ಯವಾಗುತ್ತದೆಈ ಆಯೋಗದ ವರದಿಯಲ್ಲಿಅಂಕಿಅಂಶಗಳ ಶಾಶ್ವತ ಆಯೋಗವನ್ನು ರಚಿಸುವಂತೆ ಶಿಫಾರಸು ಮಾಡಲಾಗಿದ್ದುಈ ಆಯೋಗವು ಅಧಿಕಾರಯುತ ಕೇಂದ್ರ ಸಂಸ್ಥೆಯ ರೂಪದಲ್ಲಿಸರ್ಕಾರಕ್ಕೆ ಅಲ್ಲದಿದ್ದರೂಸಂಸತ್ತಿಗೆ ಉತ್ತರದಾಯಿಯಾಗಿರಬೇಕು ಎಂದು ಶಿಫಾರಸು ಮಾಡಲಾಗಿದೆಆದರೆ ಈ ಹೆಜ್ಜೆ ಅಪೂರ್ಣವಾಗಿಯೇ ಉಳಿದಿದೆಅಧಿಕಾರಯುಕ್ತ ರಾಷ್ಟ್ರೀಯ ಸಂಖ್ಯಾಶಾಸ್ತ್ರ ಆಯೋಗವು ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ ಸಂಸ್ಥೆಯ ಸಹಯೋಗದಲ್ಲಿ ಕಾರ್ಯನಿರ್ವಹಿಸುತ್ತದೆರಿಜಿಸ್ಟ್ರಾರ್ ಜನರಲ್ ಸಂಸ್ಥೆಯು ಕೇಂದ್ರ ಗೃಹ ಸಚಿವಾಲಯದ ಸುಪರ್ದಿಯಲ್ಲಿ ಕಾರ್ಯನಿರ್ವಹಿಸುತ್ತದೆ.

ವಿಶ್ವಾಸಾರ್ಹಅಧಿಕೃತ ದತ್ತಾಂಶಗಳು ಸಾರ್ವಜನಿಕ ಒಳಿತಿಗೆ ಉಪಯುಕ್ತ.ಸಾರ್ವಜನಿಕ ಮತ್ತು ಖಾಸಗಿ ವಲಯದ ಅನೇಕ ಯೋಜನೆಗಳಿಗೆ ಮತ್ತು ಆರ್ಥಿಕ ಚಟುವಟಿಕೆಗಳಿಗೆಜನಸಂಖ್ಯೆಜಿಡಿಪಿಬಳಕೆಯ ಪ್ರಮಾಣವಲಸೆಗಾರರ ಚಲನೆಆದಾಯ ಮತ್ತು ಸಂಪತ್ತಿನ ವಿತರಣೆ ಇವೆಲ್ಲದಕ್ಕೂಈ ದತ್ತಾಂಶಗಳೇ ಆಧಾರವಾಗಿರುತ್ತವೆ.

ಕೆಲವು ವರ್ಷಗಳ ಹಿಂದೆ ರಾಷ್ಟ್ರೀಯ ಸಂಖ್ಯಾಶಾಸ್ತ್ರ ಆಯೋಗದ ಅಧಿಕಾರ ವ್ಯಾಪ್ತಿಯಲ್ಲಿ ನಡೆಸಲಾಗಿದ್ದ ಗ್ರಾಹಕ ವೆಚ್ಚವನ್ನು ಆಧರಿಸಿದ ಸಮೀಕ್ಷೆಯೊಂದನ್ನು ಬಹಿರಂಗಪಡಿಸದೆ ಮುಚ್ಚಿಡಲಾಗಿದೆಇದನ್ನು ಪ್ರತಿಭಟಿಸಿ ಮತ್ತಿತರ ಕಾರಣಗಳಿಗಾಗಿ ಆಯೋಗದ ಎಲ್ಲ ಸದಸ್ಯರೂ ರಾಜೀನಾಮೆ ನೀಡಿದ್ದರುಈಗ ಈ ಸಂಸ್ಥೆಯ ಪುನಾರಚನೆ ಮಾಡಲಾಗಿದೆಆದರೂ ಆತಂಕ ಪಡಲು ಕಾರಣಗಳಿವೆಜನಗಣತಿಯಾಗಲೀಅರ್ಥವ್ಯವಸ್ಥೆಯಾಗಲೀಸಾರ್ವಜನಿಕ ದತ್ತಾಂಶದ ವಿಶ್ವಾಸಾರ್ಹತೆ ಮತ್ತು ಉತ್ತರದಾಯಿತ್ವಕ್ಕೆ ಮೂಲ ಆಧಾರ ಇರುವುದು ಈ ದತ್ತಾಂಶ ಸಂಗ್ರಹಣೆ ಮಾಡುವ ಸಂಸ್ಥೆಗಳ ಮೇಲೆ ಸಾರ್ವಜನಿಕರಿಗೆ ಇರುವ ನಂಬಿಕೆ ಮತ್ತು ವಿಶ್ವಾಸ.

(ಲೇಖಕರುಅಜಿತ್ ರಾನಡೆಪ್ರಸಿದ್ಧ ಅರ್ಥಶಾಸ್ತ್ರಜ್ಞರುಮೂಲಸಿಂಡಿಕೇಟ್– ದ ಬಿಲಿಯನ್ ಪ್ರೆಸ್)

ಅನುವಾದನಾ.ದಿವಾಕರ     

andolanait

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

2 hours ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

3 hours ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

4 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

4 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

5 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

6 hours ago