ಪದ್ಮಾ ಶ್ರೀರಾಮ್
ಶಿವರಾಮ ಕಾಡನಕುಪ್ಪೆ ಸಂಸ್ಮರಣ ಗ್ರಂಥ ಬಿಡುಗಡೆ ಸಮಾರಂಭ ನವೆಂಬರ್ ೨೭ ರಂದು ಬೆಳಿಗ್ಗೆ ೧೦.೩೦ಕ್ಕೆ ವಿಜಯನಗರ ೧ನೇ ಹಂತದಲ್ಲಿರುವ ಕನ್ನಡ ಸಾಹಿತ್ಯ ಭವನದಲ್ಲಿ ಏರ್ಪಾಡಾಗಿದೆ. ಹಿರಿಯಪತ್ರಕರ್ತ ಜಿ.ಪಿ. ಬಸವರಾಜು ಗ್ರಂಥ ಲೋಕಾರ್ಪಣೆ ಮಾಡಲಿದ್ದಾರೆ. ಮಡ್ಡೀಕೆರೆ ಗೋಪಾಲ್, ಪ್ರೊ. ಜಿ.ಚಂದ್ರಶೇರ್ಖ, ಡಾ.ಕೆ.ಕಾಳಚನ್ನೇಗೌಡ ನುಡಿನಮನ ಸಲ್ಲಿಸಲಿದ್ದಾರೆ. ಪ. ಮಲ್ಲೇಶ್ ಅಧ್ಯಕ್ಷತೆ ಸಮಾರಂಭದ ವಹಿಸಲಿದ್ದಾರೆ. ಡಾ.ರಾಗೌ ಪ್ರಧಾನ ಸಂಪಾದಕತ್ವದಲ್ಲಿ ಡಾ.ಬೋರೇಗೌಡ ಚಿಕ್ಕಮರಳಿ, ಡಾ.ಮ. ರಾಮಕೃಷ್ಣ ಅವರು ಶಿವರಾಮ ಕಾಡನಕುಪ್ಪೆ ಸಂಸ್ಮರಣ ಗ್ರಂಥವನ್ನು ಸಂಪಾದಿಸಿದ್ದಾರೆ.
ಸಹಜವಾಗಿಯೇ ಅತ್ಯುತ್ತಮ ವಿದ್ಯಾರ್ಥಿಯಾಗಿ ಒಳ್ಳೆಯ ವಿದ್ಯಾಭ್ಯಾಸವನ್ನು ಪಡೆದು ಮಹಾರಾಜ ಕಾಲೇಜು, ಹೀಗೆ ಕೆಲವು ಕಾಲೇಜುಗಳಲ್ಲಿ ಉಪಾಧ್ಯಾಯರಾಗಿ ಸೇವೆ ಸಲ್ಲಿಸಿ ಅಂತಿಮವಾಗಿ ವಿದ್ಯಾವರ್ಧಕ ಕಾಲೇಜಿನಲ್ಲಿ ನೆಲೆಯೂರಿದರು.
ತಮ್ಮ ವಿದ್ಯಾರ್ಥಿದೆಸೆಯಿಂದಲೇ ಸಮಾಜವಾದಿ ಆಂದೋಲನಗಳಲ್ಲಿ ಭಾಗವಹಿಸಿ ಜಾತಿ ವ್ಯವಸ್ಥೆ, ಇಂಗ್ಲೀಷ್ ಹೇರಿಕೆ ಇತ್ಯಾದಿಗಳ ಬಗ್ಗೆ ಬದಲಾವಣೆಯನ್ನು ಬಯಸುವ ಎಲ್ಲರಂತೆ ಶಿವರಾಮು ಸಹ ಎಲ್ಲ ಆಂದೋಲನಗಳಲ್ಲಿ ಭಾಗವಹಿಸಿದ್ದರು.
ನುಡಿದಂತೆ ನಡೆಯಬೇಕು, ಬರೆದಂತೆ ಬದುಕಬೇಕು ಎನ್ನುವ ಆಶಯದಂತೆ ತಮ್ಮ ವೃತ್ತಿಜೀವನದಲ್ಲಿ ಸತತವಾಗಿ ಆ ಆಶಯವನ್ನು ಪಾಲಿಸಲು ಹೋರಾಡುತ್ತಲೇ ಬಂದಿದ್ದಾರೆ.
ಜಾತಿ ಕಟ್ಟಳೆಗಳನ್ನು ನಿರ್ಮೂಲನ ಮಾಡುವ ದಿಶೆಯಲ್ಲಿ ಅನೇಕ ಅಂತರ್ಜಾತೀಯ ಮದುವೆಗಳನ್ನು ಪ್ರೋತ್ಸಾಹಿಸಿ, ಕೆಲವು ಸಂಘಟಣೆಗಳ ಮೂಲಕ ಇದಕ್ಕಾಗಿ ಹೋರಾಡಿದ್ದಲ್ಲದೆ ಸ್ವತಃ ತಾವೂ ಅಂತರ್ಜಾತೀಯ ಮದುವೆ ಆದರು.
ಇದೇ ರೀತಿಯ ‘ಲಿಬರಲ್’ ವಾತಾವರಣವನ್ನು ತಮ್ಮ ಮಕ್ಕಳಿಗೂ ಕಲ್ಪಿಸಿದರು.
ಶ್ರೀ ಶಿವರಾಮು ಅವರು ಎಂತಹ ಕಷ್ಟ ಪರಿಸ್ಥಿತಿಯಲ್ಲೂ ಧೃತಿಗೆಡದೆ ಗಟ್ಟಿತನವನ್ನು ಪ್ರದರ್ಶಿಸಿದರು. ಇದಕ್ಕೆ ಇವರನ್ನು ಕಾಡಿದ ಕಾಯಿಲೆಗಳು, ಅಪಘಾತಗಳೇ ಕಾರಣ. ಸತತವಾಗಿ ಶಿವರಾಮು ಅವರನ್ನು ಕಾಡಿದ ಅನಾರೋಗ್ಯವನ್ನು ಧೈರ್ಯದಿಂದ ಎದುರಿಸಿ, ಆ ಸಂಕಷ್ಟಗಳನ್ನೆಲ್ಲಾ ಮಿತ್ರರಿಗೆ ವಿವರಿಸಿ ತಮ್ಮ ನೋವನ್ನು ಕಡಿಮೆ ಮಾಡಿಕೊಂಡರು.
ರೋಗ ರಟ್ಟಾಗಬೇಕೆಂಬ ಗಾದೆಯಂತೆ ತಮ್ಮ ಯಾವ ಬಾಧೆಗಳನ್ನೂ ಮುಚ್ಚಿಡದೆ ವೈದ್ಯರು, ಮಿತ್ರರ ಜೊತೆಯಲ್ಲಿ ಚರ್ಚಿಸಿ ಸದಾ ಯಾರಾದರೊಬ್ಬ ಧನ್ವಂತರಿಗೆ ಛಾಲೆಂಜಾಗಿ ಪರಿಣಮಿಸುತ್ತಿದ್ದರು.
ಈ ಎಲ್ಲ ಕೋಟಲೆಗಳ ನಡುವೆ ತಮ್ಮ ಬರಹಗಳನ್ನೇನೂ ಕಡೆಗಣಿಸಿರಲಿಲ್ಲ. ಕತೆ, ಕಾದಂಬರಿ, ಕವನ, ವಿಮರ್ಶೆ ಈ ಪ್ರಾಕಾರಗಳಲ್ಲಿ ಸಮರ್ಥವಾಗಿಯೇ ತಮ್ಮನ್ನು ತೊಡಗಿಸಿಕೊಂಡರು. ವಿಮರ್ಶಕರಾಗಿಯೂ ಕನ್ನಡ ಸಾಹಿತ್ಯದಲ್ಲಿ ಗಮನಾರ್ಹ ಕೆಲಸಗಳನ್ನು ಮಾಡಿದ್ದಾರೆ. ಶಿವರಾಮು ಅವರು ಅನೇಕ ವರ್ಷಗಳು ಕುಕ್ಕರಹಳ್ಳಿಯಲ್ಲಿ ದಲಿತರೊಡನೆ ಜೀವಿಸಿದ ಜೀವನಾನುಭವವನ್ನು ಕುಕ್ಕರಹಳ್ಳಿ ಎಂಬ ಕೃತಿಯಲ್ಲಿ ತುಂಬಾ ಮನೋಜ್ಞವಾಗಿ ದಾಖಲಿಸಿದ್ದಾರೆ. ಎಲ್ಲ ಸಾಹಿತ್ಯಪ್ರಿಯರು ಓದಲೇಬೇಕಾದ ಈ ಕೃತಿ, ನನ್ನ ಅಚ್ಚುಮೆಚ್ಚು.
ಸರ್ಕಾರಿ ಮಟ್ಟದಲ್ಲಿ ಅನೇಕ ಅಕಾಡೆಮಿಗಳು, ಯೂನಿವರ್ಸಿಟಿ ಮಟ್ಟದಲ್ಲಿ ಅನೇಕ ಆಡಳಿತಾತ್ಮಕ ಮಂಡಳಿಗಳ ಸದಸ್ಯರಾಗಿ ಎಲ್ಲರೂ ಮೆಚ್ಚುವಂತಹ ನಿಷ್ಪಕ್ಷಪಾತ ಧೋರಣೆಯನ್ನು ಶಿವರಾಮು ಪ್ರದರ್ಶಿಸಿದ್ದಾರೆ. ಇವೆಲ್ಲಕ್ಕೂ ಕಿರೀಟ ಪ್ರಾಯವಾಗಿ ರಾಮನಗರದಲ್ಲಿ ನಡೆದ ಬೆಂಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದರು.
ಪ್ರಿಯ ಸ್ನೇಹಿತ ಶಿವರಾಮು ಕಾಡನಕುಪ್ಪೆಯವರ ನಿರ್ಗಮನದಿಂದ ನಮ್ಮ ಮನಸ್ಸಿನ ಒಂದು ಭಾಗವನ್ನು ಕಳೆದುಕೊಂಡಂತಾಗಿದೆ.
ಸದ್ದು ಮಾಡದ ಕನ್ನಡ ಶಾಲೆಗಳ ಉಳಿವಿನ ಯೋಜನೆ ವಿಷಯ • ಚಿರಂಜೀವಿ ಸಿ. ಹುಲ್ಲಹಳ್ಳಿ ಮಂಡ್ಯ: ಕನ್ನಡ ನಾಡು ನುಡಿಗೆ…
'ಪುನಶ್ಚತನವಾಗಬೇಕಾಗಿರುವ ಸಾಹಿತ್ಯ ಪ್ರಕಾರಗಳು' ಕುರಿತ ವಿಚಾರಗೋಷ್ಠಿಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ್ತಿ ಅಕೈ ಪದ್ಮಶಾಲಿ ಆಗ್ರಹ ಜಿ.ತಂಗಂ ಗೋಪಿನಾಥಂ ಮಂಡ್ಯ:…
ಜಾಗತಿಕ ನೆಲೆಯಲ್ಲಿ ಕನ್ನಡ ಕಟ್ಟುವ ಬಗೆ ಕುರಿತ ಗೋಷ್ಠಿಯಲ್ಲಿ ಅಮೆರಿಕ ಕನ್ನಡ ಕೂಟ (ಅಕ್ಕ)ದ ಅಧ್ಯಕ್ಷ ಅಮರ್‌ನಾಥ್‌ಗೌಡ ಹೇಮಂತ್ ಕುಮಾರ್…
`ಹೊಸ ತಲೆಮಾರಿನ ಸಾಹಿತ್ಯ' ಕುರಿತ ವಿಚಾರಗೋಷ್ಠಿಯಲ್ಲಿ ವಿಮರ್ಶಕ ವಿಕ್ರಂ ವಿಸಾಜಿ ಅಭಿಮತ • ಜಿ.ತಂಗಂ ಗೋಪಿನಾಥಂ ಮಂಡ್ಯ: ಹೊಸ ತಲೆಮಾರಿನ…
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…