1982ರಲ್ಲಿ ವಿನೋಬಾ ಭಾವೆಯವರ ಕರೆಗೆ ಓಗೊಟ್ಟು ‘ದೇವೋನಾರ್ ಗೋರಕ್ಷಾ ಸತ್ಯಾಗ್ರಹ ಸಚಾಲಕ್ ಸಮಿತಿ’ ಅಹಿಂಸಾತ್ಮಕ ಪ್ರತಿಭಟನೆ ಪ್ರಾರಂಭಿಸಿತ್ತು!
೧೯೮೨ರ ಜನವರಿ ೧೧ರಿಂದಲೂ ದೇವೋನಾರ್ ಕಸಾಯಿಖಾನೆ ಎದುರು ಜಾನುವಾರುಗಳನ್ನು ತುಂಬಿಕೋಂಡ ಟ್ರಕ್ಕ್ ಬರುವುದು, ಜನರ ಗುಂಪು ಅದರೆದುರು ಪ್ರತಿಭಟಿಸುವುದು, ಪೋಲಿಸ್ ಅವರನ್ನು ಬಂಧಿಸುವುದು, ಬಿಡುಗಡೆ ಮಾಡುವುದು ನಡೆಯುತ್ತಿತ್ತು. ಒಂದು ದಿನವೂ ಆ ಪ್ರತಿಭಟನೆ ತಪ್ಪಿರಲಿಲ್ಲ. ೧೯೯೩ರ ಕೋಮುಗಲಭೆಯಲ್ಲಾಗಲೀ, ನಂತರದ ಬಾಂಬ್ ಸ್ಫೋಟದ ದಿನಗಳಲ್ಲಾಗಲೀ, ೨೦೦೫ರ ಭೀಕರ ನೆರೆಹಾವಳಿಯ ಸಮಯದಲ್ಲಾಗಲೀ ಯಾವತ್ತೂ ಆ ಪ್ರತಿಭಟನೆ ನಡೆಯದ ದಿನವಿಲ್ಲ. ಆ ಪ್ರತಿಭಟನೆಯ ಉದ್ದೇಶಕ್ಕಾಗಿಯೇ ಕಸಾಯಿಖಾನೆಯ ಎದುರು ಒಂದು ಗುಡಿಸಲು ಹಾಕಲಾಗಿತ್ತು. ರಾತ್ರಿ ಅಥವಾ ಹಗಲು ಹೊತ್ತು ಅದರಲ್ಲಿನ ಬೆಂಚುಗಳ ಮೇಲೆ ಕೆಲವು ಗಾಂಧೀವಾದಿಗಳು ಕುಳಿತ್ತಿರುತ್ತಿದ್ದರು.
‘ದೇವೋನಾರ್ ಅಬಟ್ಟೋರ್’ ಮುಂಬೈಯ ಅತ್ಯಂತ ದೊಡ್ಡ ಕಸಾಯಿಖಾನೆ. ಪ್ರತಿದಿನ ಇಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜಾನುವಾರುಗಳು ಬಂದು ಮಾಂಸದ ತುಂಡುಗಳಾಗಿ ಬೀಳುತ್ತವೆ. ೨೦೧೫ ರ ಮಾರ್ಚ್ ತನಕ ಪ್ರತಿದಿನ ಈ ಕಸಾಯಿಖಾನೆಯ ಎದುರು ಒಂದು ವಿಶೇಷ ವಿದ್ಯಮಾನ ನಡೆಯುತ್ತಿತ್ತು. ಪ್ರತಿಬಾರಿ ಜಾನುವಾರುಗಳನ್ನು ತುಂಬಿಕೊಂಡ ಟ್ರಕ್ಕೊಂದು ಕಸಾಯಿಖಾನೆಯ ಗೇಟಿನೆದುರು ಬಂದು ನಿಲ್ಲುತ್ತಿದ್ದಂತೆ, ಸರಳವಾದ ಬಟ್ಟೆ ಧರಿಸಿದ ಹೆಂಗಸರು, ಗಂಡಸರ ಒಂದು ಗುಂಪು ಬಂದು ಟ್ರಕ್ಕಿನಲ್ಲಿರುವ ಆಕಳುಗಳಿಗೆ ಪೂಜೆ ಮಾಡಿ, ಗೋ ಹತ್ಯೆ ವಿರುದ್ಧ ಘೋಷಣೆ ಕೂಗಿ, ಸಂಸ್ಕೃತದಲ್ಲಿ ಪ್ರಾರ್ಥನೆ ಹೇಳಿ ಪ್ರತಿಭಟಿಸುತ್ತಾರೆ.
ಅಲ್ಲೇ ಪಕ್ಕದಲ್ಲಿ ನಿಂತ ಪೊಲೀಸ್ ಕಾನ್ಸ್ಟೇಬಲ್ ಅವರನ್ನೆಲ್ಲ ಬಂಧಿಸಿ, ಸಮೀಪದ ಪೊಲೀಸ್ ಠಾಣೆಗೆ ಕರೆದೊಯ್ಯುತ್ತಾನೆ. ಠಾಣೆಯಲ್ಲಿ ಅವರನ್ನು ಗೌರವದಿಂದ ಕುರ್ಚಿಯಲ್ಲಿ ಕುಳ್ಳಿರಿಸಿ, ಸ್ಟೇಷನ್ ಡೈರಿಯಲ್ಲಿ ಅವರ ಹೆಸರುಗಳನ್ನು ಬರೆದು, ಅವರಲ್ಲಿ ಒಬ್ಬರನ್ನು ಬೆಳಿಗ್ಗೆಯಿಂದ ಸಂಜೆ ಆರು ಗಂಟೆಯ ತನಕ ಠಾಣೆಯಲ್ಲಿರುವಂತೆ ಕೇಳಿಕೊಂಡು ಉಳಿದವರನ್ನು ಬಿಡುಗಡೆ ಮಾಡುತ್ತಾನೆ. ಅಷ್ಟರಲ್ಲಿ ಆಕಳಗಳನ್ನು ತುಂಬಿಕೊಂಡು ಬಂದ ಟ್ರಕ್ಕ್ ಕಸಾಯಿಖಾನೆಯ ಒಳಗೆ ಹೋಗಿ. ಅದರಲ್ಲಿರುವ ಜಾನುವಾರುಗಳು ಮಾಂಸದ ರಾಶಿಯಾಗಿ ಬಿದ್ದಿರುತ್ತವೆ.
೧೯೮೨ರ ಜನವರಿ ೧೧ರಿಂದಲೂ ದೇವೋನಾರ್ ಕಸಾಯಿಖಾನೆ ಎದುರು ಜಾನುವಾರುಗಳನ್ನು ತುಂಬಿಕೋಂಡ ಟ್ರಕ್ಕ್ ಬರುವುದು, ಜನರ ಗುಂಪು ಅದರೆದುರು ಪ್ರತಿಭಟಿಸುವುದು, ಪೋಲಿಸ್ ಅವರನ್ನು ಬಂಧಿಸುವುದು, ಬಿಡುಗಡೆ ಮಾಡುವುದು ನಡೆಯುತ್ತಿತ್ತು. ಒಂದು ದಿನವೂ ಆ ಪ್ರತಿಭಟನೆ ತಪ್ಪಿರಲಿಲ್ಲ. ೧೯೯೩ರ ಕೋಮುಗಲಭೆಯಲ್ಲಾಗಲೀ, ನಂತರದ ಬಾಂಬ್ ಸ್ಫೋಟದ ದಿನಗಳಲ್ಲಾಗಲೀ, ೨೦೦೫ರ ಭೀಕರ ನೆರೆಹಾವಳಿಯ ಸಮಯದಲ್ಲಾಗಲೀ ಯಾವತ್ತೂ ಆ ಪ್ರತಿಭಟನೆ ನಡೆಯದ ದಿನವಿಲ್ಲ. ಆ ಪ್ರತಿಭಟನೆಯ ಉದ್ದೇಶಕ್ಕಾಗಿಯೇ ಕಸಾಯಿಖಾನೆಯ ಎದುರು ಒಂದು ಗುಡಿಸಲು ಹಾಕಲಾಗಿತ್ತು. ರಾತ್ರಿ ಅಥವಾ ಹಗಲು ಹೊತ್ತು ಅದರಲ್ಲಿನ ಬೆಂಚುಗಳ ಮೇಲೆ ಕೆಲವು ಗಾಂಧೀವಾದಿಗಳು ಕುಳಿತ್ತಿರುತ್ತಿದ್ದರು. ಅವರನ್ನು ಬಂಧಿಸಿ, ಬಿಡುಗಡೆ ಮಾಡುವ ಪೋಲಿಸ್ ಕಾನ್‌ಸ್ಟೇಬಲ್ ಕೂಡಾ ಅವರ ಜೊತೆಯಲ್ಲೇ ಕುಳಿತಿರುತ್ತಿದ್ದ!
೧೯೭೧ರಲ್ಲಿ ಬಾಂದ್ರಾ ಮತ್ತು ಕುರ್ಲಾ ಎಂಬಲ್ಲಿನ ಕಸಾಯಿಖಾನೆಗಳನ್ನು ಮುಚ್ಚಿ ದೇವೋನಾರ್ ಕಸಾಯಿಖಾನೆಯನ್ನು ಪ್ರಾರಂಭಿಸಲಾಗಿತ್ತು. ದೇವೋನಾರ್ ಮುಸ್ಲಿಂ ಬಾಹುಳ್ಯದ ಪ್ರದೇಶ. ಗಾಂಧೀವಾದಿಗಳ ಆ ಪ್ರತಿಭಟನೆ ಪ್ರಾರಂಭವಾದಾಗ ಕಸಾಯಿಖಾನೆಯ ಸುತ್ತಲು ವಾಸವಿದ್ದ ಮುಸ್ಲಿಂ ಕಸಾಯಿಗಳು ತಮ್ಮ ಜೀವನೋಪಾಯಕ್ಕೆ ಕಲ್ಲು ಬೀಳುತ್ತದೆ ಎಂದು ಯೋಚಿಸಿ, ಆ ಗುಡಿಸಲನ್ನು ಸುಟ್ಟು ಹಾಕಿದ್ದರು.
ಆದರೆ, ದಿನಗಳೆದಂತೆ ಅವರ ಪ್ರತಿಭಟನೆ ಕೇವಲ ಸಾಂಕೇತಿಕವಾದುದು ಎಂದು ಅವರಿಗೆ ತಿಳಿಯುತ್ತಲೇ ಅವರೂ ಆ ಗಾಂಧೀವಾದಿಗಳೊಂದಿಗೆ ಸೌಹಾರ್ದತೆ ಬೆಳೆಸಿಕೊಂಡರು. ಪೊಲೀಸರು ಆ ಗಾಂಧೀವಾದಿಗಳಿಗಾಗಿ ಇಬ್ಬರು ಪೊಲೀಸ್ ಕಾನ್ ಸ್ಟೇಬಲ್‌ಗಳನ್ನು ಮೀಸಲಿಟ್ಟಿದ್ದರು. ಗಾಂಧಿವಾದಿಗಳು ಎಂದೂ ಹಿಂಸಾತ್ಮಕವಾಗಿ ವರ್ತಿಸಿಲ್ಲದ ಕಾರಣ ಪೊಲೀಸರೂ ಅವರೊಂದಿಗೆ ಬಹಳ ಗೌರವದಿಂದ ನಡೆದುಕೊಳ್ಳುತ್ತಿದ್ದರು.
೧೯೮೨ರ ಜನವರಿ ೧೧ ರಂದು ವಿನೋಬಾ ಭಾವೆಯವರ ಕರೆಗೆ ಓಗೊಟ್ಟು ‘ದೇವೋನಾರ್ ಗೋರಕ್ಷಾ ಸತ್ಯಾಗ್ರಹ ಸಚಾಲಕ್ ಸಮಿತಿ’ ಆ ಅಹಿಂಸಾತ್ಮಕ ಪ್ರತಿಭಟನೆಯನ್ನು ಪ್ರಾರಂಭಿಸಿತು. ಪ್ರಾರಂಭದ ವರ್ಷಗಳಲ್ಲಿ ಪ್ರತಿದಿನ ೩೦೦ಕ್ಕೂ ಹೆಚ್ಚು ಜನ ಗಾಂಧೀವಾದಿಗಳು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಪ್ರತಿಭಟಿಸುವ ಉದ್ದೇಶದಿಂದಲೇ ಮುಂಬೈಯಲ್ಲದೆ, ದೇಶದ ಬೇರೆ ಬೇರೆ ನಗರಗಳಿಂದಲೂ ಗಾಂಧೀವಾದಿಗಳು ಬರುತ್ತಿದ್ದರು.
ಅವರ ವಾಸ್ತವ್ಯಕ್ಕಾಗಿ ಘಾಟ್ಕೋಪರ್ ಎಂಬಲ್ಲಿನ ಸರ್ವೋದಯ ಆಸ್ಪತ್ರೆಯ ಆವರಣದಲ್ಲಿ ಸಾಧಾರಣ ರೀತಿಯ ವಸತಿಯನ್ನು ಮಾಡಲಾಗಿತ್ತು. ಹಿಂದೂಗಳು ಮಾತ್ರವಲ್ಲದೆ, ‘ದೇವೋನಾರ್ ಗೋರಕ್ಷಾ ಸತ್ಯಾಗ್ರಹ ಸಚಾಲಕ್ ಸಮಿತಿ’ಗೆ ಸೇರಿದ ಮುಸ್ಲಿಮರು, ಯಹೂದಿಗಳೂ ಆ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದರು.
ನಂತರದ ವರ್ಷಗಳಲ್ಲಿ ಆ ಪ್ರತಿಭಟನೆಯಲ್ಲಿ ಭಾಗವಹಿಸುವ ಗಾಂಧೀವಾದಿಗಳ ಸಂಖ್ಯೆ ಕಡಿಮೆಯಾಗುತ್ತ ಬಂದು, ಬೆರಳೆಣಿಕೆಗೆ ಇಳಿಯಿತು.
ಅದರ ಜೊತೆಗೆ, ದೇವೋನಾರ್ ಕಸಾಯಿಖಾನೆಗೆ ಬರುವ ಆಕಳುಗಳ ಸಂಖ್ಯೆಯೂ ಇಳಿಯುತ್ತ ಬಂತು. ಮೊದಮೊದಲು ಪ್ರತಿದಿನ ೩೦೦೦೦ ಕ್ಕೂ ಹೆಚ್ಚು ಜಾನುವಾರುಗಳು ಬರುತ್ತಿದ್ದದು ನಂತರದ ವರ್ಷಗಳಲ್ಲಿ ಕೆಲವು ನೂರುಗಳಿಗೆ ಇಳಿಯಿತು. ಇದಕ್ಕೆ ಕಾರಣ ಗಾಂಧೀವಾದಿಗಳ ಪ್ರತಿಭಟನೆ ಅಲ್ಲ. ಬದಲಿಗೆ, ಜಾನುವಾರುಗಳ ಬೆಲೆ ದುಬಾರಿಯಾದುದು, ರೈತರು ಉಳಿಮೆಗೆ ಎತ್ತುಗಳನ್ನು ಬಳಸುವುದು ಕಡಿಮೆ ಮಾಡಿದುದು ಹಾಗೂ ಸರ್ಕಾರ ೧೫ ವರ್ಷಕ್ಕಿಂತ ಕಡಿಮೆ ಪ್ರಾಯದ ಎತ್ತುಗಳ ಹತ್ಯೆಯನ್ನು ನಿಷೇಧಿಸಿರುವುದು.
ಮುಂದೆ, ೨೦೧೫ರಲ್ಲಿ ಮಹಾರಾಷ್ಟ್ರ ಸರ್ಕಾರ ಸಂಪೂರ್ಣವಾಗಿ ಗೋ ಹತ್ಯೆಯನ್ನು ನಿಷೇಧಿಸಿದಾಗ ಗಾಂಧೀವಾದಿಗಳ ಆ ಸತ್ಯಾಗ್ರಹವೂ ನಿಂತು ಹೋಯಿತು. ೨೦೧೫ರ ಮಾರ್ಚ್ ೩ರ ಮಧ್ಯರಾತ್ರಿ ಅಣ್ಣಾ ಸಾಹೇಬ್ ಜಾದವ್, ಪನ್ನು ಲಾಲ್ ಸಹಾಯ್, ಸುನಿಲ ಜಾದವ್, ಬಲದೇವರಾಜ್ ಇಲ್ವಾಧಿ ಮತ್ತು ಅಮೃತ್ ಲಾಲ್ ಎಂಬ ಐವರು ಗಾಂಧೀವಾದಿಗಳು ಕೊನೇಯ ಪ್ರತಿಭಟನೆಯನ್ನು ನಡೆಸುವ ಮೂಲಕ ೩೩ ವರ್ಷಗಳ ಕಾಲ ನಡೆದ ಭಾರತದ ಅತ್ಯಂತ ದೀರ್ಘಾವಧಿಯ ಅಹಿಂಸಾತ್ಮಕ ಚಳವಳಿ ಕೊನೆಗೊಂಡಿತು.
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…