ಚನ್ನಪಟ್ಟಣ, ಸಂಡೂರು ಮತ್ತು ಶಿಗ್ಗಾಂವಿ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಜಯಗಳಿಸಿದೆ. ಮೇಲ್ನೋಟಕ್ಕೆ ಇದು ಆಡಳಿತ ಪಕ್ಷದ ಗೆಲುವು ಎಂದು ಸರಾಗವಾಗಿ ಹೇಳಬಹುದು. ಆದರೆ, ಉಪ ಚುನಾವಣೆ ಘೋಷಣೆಯಾದಾಗ ಶುರುವಾದ ಪ್ರಮುಖ ರಾಜಕೀಯ ಪಕ್ಷಗಳ ಮೇಲಾಟ, ಪರಸ್ಪರ ಕೆಸರೆರಚಾಟವನ್ನು ಗಮನಿಸಿದರೆ, ಆಡಳಿತ ಪಕ್ಷದ ಸಹಜ ಗೆಲುವು ಎಂಬುದನ್ನು ಅಷ್ಟು ಸುಲಭವಾಗಿ ಹೇಳುವುದು ಸಾಧ್ಯವಿಲ್ಲ. ಆದರೂ ಮೂರು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಪರವಾಗಿ ಮತ ಚಲಾವಣೆಯಾಗಿರುವ ಪರಿ ಅಚ್ಚರಿ ಮೂಡಿಸುತ್ತದೆ.
ಇದು ಬಹುಶಃ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್ ಪಕ್ಷಕ್ಕೇ ಅನಿರೀಕ್ಷಿತ. ಏಕೆಂದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬಿಟ್ಟೂಬಿಡದೇ ಬೆನ್ನು ಹತ್ತಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಪ್ರಕರಣವನ್ನು ವಿಪಕ್ಷಗಳು ಎಳೆದಾಡಿ, ಈ ಚುನಾವಣೆಯ ಫಲಿತಾಂಶದ ನಂತರ ಸರ್ಕಾರ ಪತನವಾಗುತ್ತದೆ ಎಂಬಂತೆ ಬಿಂಬಿಸಿದ್ದವು. ಅಲ್ಲದೆ, ಚುನಾವಣೆ ನಡುವೆಯೇ ಸಿದ್ದರಾಮಯ್ಯ ಲೋಕಾಯುಕ್ತ ವಿಚಾರಣೆಯನ್ನೂ ಎದುರಿಸಿದ್ದರು. ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ, ವಕ್ಫ್ ಮಂಡಳಿ ಭೂ ವಿವಾದ, ಮದ್ಯ ಮಾರಾಟಗಾರರ ಸಂಘದ 700 ಕೋಟಿ ರೂ. ಲಂಚ ಆರೋಪ ಇತ್ಯಾದಿ ಪ್ರಕರಣಗಳು ಕಾಂಗ್ರೆಸ್ ವಿರೋಧಿಗಳಿಗೆ ಆಪ್ತವಾಗಿದ್ದವು. ಇದಕ್ಕೆ ಪುಟ ಕೊಡುವಂತೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ನೆರೆಯ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಆಗಮಿಸಿದಾಗ, ಸಿದ್ದರಾಮಯ್ಯ ಅವರ ವಿರುದ್ಧ ಮುಡಾ ಹಗರಣವನ್ನು ಪ್ರಸ್ತಾಪ ಮಾಡಿದ್ದರು.
ಇನ್ನು ಚನ್ನಪಟ್ಟಣದಲ್ಲಿ ಜಾತ್ಯತೀತ ಜನತಾದಳದ ಅಭ್ಯರ್ಥಿಯಾಗಿದ್ದ, ತಮ್ಮ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಅವರ ಪರವಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಪ್ರಚಾರ ನಡೆಸಿದರು. ಸ್ವತಃ ಕೇಂದ್ರ ಸಚಿವರೂ ಆಗಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಪುತ್ರನ ಪರವಾಗಿ ‘ಮಾಡು ಇಲ್ಲವೇ ಮಡಿ’ ಎಂಬಂತೆ ಕೆಲಸ ಮಾಡಿದ್ದರು.
ಮೈತ್ರಿ ಹುರಿಯಾಳಾಗಿ ನಿಖಿಲ್ ನಿಕ್ಕಿಯಾದ ತಕ್ಷಣ ಬಿಜೆಪಿ ಪಾಳಯದಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದ ಸಿ.ಪಿ.ಯೋಗೇಶ್ವರ್, ಕಾಂಗ್ರೆಸ್, ಪಾಳೆಯಕ್ಕೆ ಜಿಗಿದು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಕಾಂಗ್ರೆಸ್‌ನ ಎಲ್ಲರೂ ಇವರನ್ನು ಒಮ್ಮತದ ಅಭ್ಯರ್ಥಿಯಾಗಿ ಸ್ವೀಕರಿಸಿದರು. ಆದರೂ ಇಲ್ಲಿ ಜಿದ್ದಾಜಿದ್ದಿಯಿಂದ ಕಣ ರಂಗೇರಿತ್ತು, ವಸತಿ ಸಚಿವ ಬಜಮೀರ್ ಅಹಮದ್ ಖಾನ್ ಅವರು ಕುಮಾರಸ್ವಾಮಿ ಅವರನ್ನು ಅವಹೇಳನ ಮಾಡಿದ್ದರಿಂದ ಯೋಗೇಶ್ವರ್‌ಗೆ ಹಿನ್ನಡೆಯಾಗಬಹುದು ಎಂಬ ಮಾತುಗಳು ದಟ್ಟವಾಗಿದ್ದವು. ಆದರೆ ಫಲಿತಾಂಶದಲ್ಲಿ ಎಲ್ಲವೂ ಉಲ್ಟಾ ಆಗಿದೆ.
ಲೋಕಸಭೆ ಚುನಾವಣೆಯಲ್ಲಿ ಅಷ್ಟೊಂದು ಪ್ರಯೋಜನಕಾರಿಯಾಗದ ಗ್ಯಾರಂಟಿ ಯೋಜನೆಗಳು ಈ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ತಂದುಕೊಡುವಲ್ಲಿ ಯಶಸ್ವಿಯಾಗಿವೆ ಅನಿಸುತ್ತದೆ. ಇದಲ್ಲದೆ, ಡಿ.ಕೆ.ಸುರೇಶ್ ಅವರು ಲೋಕಸಭಾ ಚುನಾವಣೆಯಲ್ಲಿ ಅನುಭವಿಸಿದ್ದ ಸೋಲಿಗೆ ಪ್ರತಿಯಾಗಿ ಅವರ ಅಣ್ಣ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಜೊತೆಗೂಡಿ ವಿಪಕ್ಷಗಳಿಗೆ ಎದುರೇಟು ನೀಡಲು ಅಪಾರ ಶ್ರಮ ಹಾಕಿದ್ದರು. ಜಾತಿ ಓಲೈಕೆ, ಹಣ ಹರಿದಾಡುವಿಕೆ ಸಾಕಷ್ಟು ನಡೆದಿದೆ ಎನ್ನಲಾಗಿದ್ದರೂ, ಕಾಂಗ್ರೆಸ್‌ಗೆ ಸಿಕ್ಕಿರುವ ಗೆಲುವು ಅಷ್ಟರಿಂದಲೇ ಅಲ್ಲ. ಬಿಜೆಪಿಯಲ್ಲಿ ಆಂತರಿಕ ಕಚ್ಚಾಟ, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ವಿರುದ್ಧವೇ ಪಕ್ಷದೊಳಗೆ ಕಾಣಿಸಿಕೊಂಡಿರುವ ಅಸಮಾಧಾನದ ಹೊಗೆ ಕೂಡ ಕಾಂಗ್ರೆಸ್ ಜಯಭೇರಿಗೆ ಒಂದು ರೀತಿಯಲ್ಲಿ ಸಹಕಾರಿಯಾಯಿತು.
ಸಂಡೂರು ಕಾಂಗ್ರೆಸ್ ಕ್ಷೇತ್ರವೇ ಆಗಿದ್ದು, ಅಲ್ಲಿ ಸಂಸದ ತುಕಾರಾಂ ಪತ್ನಿ ಅನ್ನಪೂರ್ಣ ಬಿಜೆಪಿ ಅಭ್ಯರ್ಥಿ ವಿರುದ್ಧ ಗೆಲುವು ದಾಖಲಿಸಿದ್ದಾರೆ. ಬಹುತೇಕ ಇದು ನಿರೀಕ್ಷಿತವೇ ಆಗಿತ್ತು. ಆದರೆ, ಶಿಗ್ಗಾಂವಿಯಲ್ಲಿ ಮಾಜಿ ಮುಖ್ಯಮಂತ್ರಿ, ಹಾಲಿ ಸಂಸದ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್ ಬೊಮ್ಮಾಯಿ ಅವರ ಸೋಲು, ಬಿಜೆಪಿಗೆ ಆಘಾತವನ್ನುಂಟು ಮಾಡಿದೆ. ಇದನ್ನು ಜೀರ್ಣಿಸಿಕೊಳ್ಳುವುದು ಅವರಿಗೆ ಕಷ್ಟ ಈ ‘ತ್ರಿ ವಿಜಯ’ ಕಾಂಗ್ರೆಸ್ ಪಕ್ಷಕ್ಕೆ ನೈತಿಕ ಶಕ್ತಿ ತುಂಬಿದೆ. ಹಗರಣಗಳ ಹೊರತಾಗಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ಥಾನವನ್ನು ಅಬಾಧಿತಗೊಳಿಸಿದೆ. ಮುಖ್ಯಮಂತ್ರಿ ಅಥವಾ ನಾಯಕತ್ವ ಬದಲಾವಣೆಯ ಧ್ವನಿ ಕ್ಷೀಣಗೊಳ್ಳುವುದು ನಿಚ್ಚಳವಾಗಿದೆ. ಹಾಗೆಯೇ ಬಿಜೆಪಿಯೊಳಗೆ ಎಲ್ಲವೂ ಸರಿ ಇಲ್ಲ ಎಂಬುದನ್ನು ಈ ಉಪಚುನಾವಣೆಯ ಫಲಿತಾಂಶ ಖಚಿತಪಡಿಸಿದೆ. ಬಿಜೆಪಿಯಲ್ಲಿ ಬಿ.ಎಸ್.ಯಡಿಯೂರಪ್ಪ, ಆರ್.ಆಶೋಕ್ ಅವರಂತಹ ನಾಯಕರಿದ್ದರೂ ಕನಿಷ್ಠ ತಮ್ಮ ಪಕ್ಷ ಗೆದ್ದಿದ್ದ ಒಂದು ಸ್ಥಾನವನ್ನು ಉಪ ಚುನಾವಣೆಯಲ್ಲಿ ಉಳಿಸಿಕೊಳ್ಳಲು ಸಾಧ್ಯವಾಗದಿರುವುದು ಬಿಜೆಪಿಯ ಮುಂದಾಳುಗಳ ಆತ್ಮಾವಲೋಕನದ ಅಗತ್ಯವನ್ನು ಹೇಳುತ್ತದೆ.
ಸಂಡೂರು ಕಾಂಗ್ರೆಸ್ ಕ್ಷೇತ್ರವೇ ಆಗಿದ್ದು, ಅಲ್ಲಿ ಸಂಸದ ತುಕಾರಾಂ ಪತ್ನಿ ಅನ್ನಪೂರ್ಣ ಬಿಜೆಪಿ ಅಭ್ಯರ್ಥಿ ವಿರುದ್ಧ ಗೆಲುವು ದಾಖಲಿಸಿದ್ದಾರೆ. ಬಹುತೇಕ ಇದು ನಿರೀಕ್ಷಿತವೇ ಆಗಿತ್ತು. ಆದರೆ, ಶಿಗ್ಗಾಂವಿಯಲ್ಲಿ ಮಾಜಿ ಮುಖ್ಯಮಂತ್ರಿ
ಹಾಲಿ ಸಂಸದ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್ ಬೊಮ್ಮಾಯಿ ಅವರ ಸೋಲು ಬಿಜೆಪಿಗೆ ಆಘಾತವನ್ನುಂಟು ಮಾಡಿದೆ. ಇದನ್ನು ಜೀರ್ಣಿಸಿಕೊಳ್ಳುವುದು. ಅವರಿಗೆ ಕಷ್ಟ.
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…