ಸಂಪಾದಕೀಯ

ಈ ಮಣ್ಣಿನ ಕೂಸು ಯೋಗಕ್ಕೆ ವಿದೇಶಗಳಲ್ಲೂ ಬಂಧುತ್ವ

ಭಾರತವು ತನ್ನ ಸಂಸ್ಕೃತಿ, ಸಂಪ್ರದಾಯ ಹಾಗೂ ವಿವಿಧತೆಯಲ್ಲಿ ಏಕತೆಯ ವೈಶಿಷ್ಟ್ಯದಿಂದ ಜಗತ್ತಿನ ಆಕರ್ಷಣೆಯ ದೇಶಗಳಲ್ಲಿ ಒಂದಾಗಿ ಹಲವು ಕೊಡುಗೆಗಳನ್ನು ಜಗತ್ತಿಗೆ ನೀಡಿದೆ. ಅದರಲ್ಲಿ ವಿಶೇಷವಾದದ್ದು ಎಂದರೆ ಯೋಗ.

ಯೋಗವು ಮನುಷ್ಯನ ಮಾನಸಿಕ, ದೈಹಿಕ ಆರೋಗ್ಯ ಕಾಪಾಡುವ ಮದ್ದಾಗಿದೆ. ಇದೀಗ ಯೋಗ ಭಾರತ ಮಾತ್ರವಲ್ಲ ಪಾಶ್ಚಿಮಾತ್ಯ ದೇಶಗಳಲ್ಲಿ ಕೂಡ ಹೆಚ್ಚು ಆಕರ್ಷಣೆ ಹೊಂದಿದೆ. ಅದೂ ಎಷ್ಟರ ಮಟ್ಟಿಗೆ ಎಂದರೆ ಭಾರತಕ್ಕಿಂತ ಹೆಚ್ಚು ವಿದೇಶಗಳಲ್ಲಿಯೇ ಯೋಗ ಪ್ರಸಿದ್ಧಿ ಪಡೆದಿದೆ.

ಯೋಗವು ಇಂದು ಜಗತ್ತಿನ ಎಲ್ಲೆಡೆ ಪಸರಿಸಿದೆ. ವಿಶ್ವ ಸಂಸ್ಥೆಯು ೨೦೧೪ರಲ್ಲಿ ಪ್ರತಿವರ್ಷ ಜೂ.೨೧‘ಅಂತಾ ರಾಷ್ಟ್ರೀಯ ಯೋಗ ದಿನ’ ಎಂಬುದಾಗಿ ಘೋಷಣೆ ಮಾಡಿದೆ. ಜೀವನ- ಅಧ್ಯಾತ್ಮದ ಬಗ್ಗೆ ತತ್ವಶಾಸ್ತ್ರದಲ್ಲಿ ಪ್ರಸ್ತಾಪವಾಗುವ ಯೋಗದ ಐದು ಪ್ರಮುಖ ಶಾಖೆಗಳು- ರಾಜಯೋಗ, ಕರ್ಮಯೋಗ, ಜ್ಞಾನಯೋಗ, ಭಕ್ತಿಯೋಗ ಮತ್ತು ಹಠಯೋಗ. ಇವುಗಳಲ್ಲಿ ಪ್ರತಿಯೊಂದು ತನ್ನದೇ ಅರ್ಥ ಮತ್ತು ಆಸನಗಳನ್ನು ಒಳಗೊಂಡಿವೆ. ಕೆಲ ಆಸನಗಳು ರೋಗಗಳಿಗೆ ಚಿಕಿತ್ಸಾ ವಿಧಾನಗಳೂ ಆಗಿವೆ.

ಯೋಗ ಮತ್ತು ಆಯುರ್ವೇದ ಸಮಗ್ರ ಜೀವನ ವಿಧಾನಗಳಾಗಿವೆ. ಯೋಗ ಮನೋದರ್ಶನ ಶಾಸ್ತ್ರವಾಗಿ ಹರಿಷ್ಟ ವರ್ಗಗಳ ನಿಯಂತ್ರಣ ಆಧ್ಯಾತ್ಮಿಕತೆಯ ಜೊತೆಗೆ ಚಿಕಿತ್ಸೆಗೆ ಪೂರಕವಾಗಿವೆ. ಹೀಗಾಗಿ ದೇಹ ಮತ್ತು ಮನಸ್ಸಿನ ಆರೋಗ್ಯ ಕಾಪಾಡುವ ಕಾರಣದಿಂದ ಯೋಗದ ಜನಪ್ರಿಯತೆ ಗಡಿಗಳನ್ನು ಮೀರಿ ದಾಟುತ್ತಿದೆ.

ಭಾರತದ ಪತಂಜಲಿ ಮಹರ್ಷಿ ಯೋಗದ ಮೂಲಪುರುಷ. ರಾಮಾಯಣ, ಮಹಾಭಾರತ, ಭಗವದ್ಗೀತೆ, ವೇದಗಳ ಕಾಲದಲ್ಲಿಯೂ ಯೋಗ ಇತ್ತು ಎಂಬ ಪ್ರತೀತಿ ಇದೆ. ಧರ್ಮಗ್ರಂಥಗಳ ಕಾಲಕ್ಕೆ ಬಂದಿರುವುದರಿಂದ ಯೋಗ ಮಹತ್ವ ಪಡೆದಿದೆ. ಭಾರತದಲ್ಲಿ ಯೋಗದ ಹಬ್ ಸೆಂಟರ್ ಮೈಸೂರು ಎಂದು ಗುರುತಿಸಿಕೊಂಡಿದೆ. ಮೈಸೂರು ಯೋಗದ ರಾಜಧಾನಿಯಾಗಿದ್ದು, ಟಿ.ಬಿ.ಕೃಷ್ಣಮಾಚಾರ್ಯ, ಬಿಕೆಎಸ್ ಅಯ್ಯಂಗಾರ್, ನಾಗರಾಜ ಜೋಯಿಸ್, ಪಟ್ಟಾಭಿ ಜೋಯಿಸ್ ಅದನ್ನು ಬೆಳೆಸಿದವರಾಗಿದ್ದಾರೆ. ಸಂಸ್ಕೃತ  ಪಾಠಶಾಲೆಯಲ್ಲಿ ೨೦೦ ವರ್ಷಗಳಿಂದಲೇ ಯೋಗ ಆರಂಭವಾಯಿತು.

ಸರ್ಕಾರಿ ಯೋಗ ಮತ್ತು ಪ್ರಾಕೃತಿಕ ಕಾಲೇಜು ಇತ್ತು. ಆಯುರ್ವೇದ ಕಾಲೇಜಿನಲ್ಲಿ ಯೋಗಾಭ್ಯಾಸವಿದೆ. ಪ್ರಸ್ತುತ ಎಲ್ಲ ಕಾಲೇಜುಗಳಲ್ಲಿ ಯೋಗ ಶಿಕ್ಷಣವನ್ನು ಅಳವಡಿಸಲಾಗಿದೆ.

ಚಿಕಿತ್ಸಾ ಸ್ವರೂಪ: ಯೋಗ ಪ್ರಾರಂಭದಲ್ಲಿ ಮನೋ ದರ್ಶನಕ್ಕೆ ಸಿಮೀತವಾಗಿತ್ತು. ಆಯುರ್ವೇದ ಚಿಕಿತ್ಸೆಯ ನಂತರ ಯೋಗವನ್ನು ಚಿಕಿತ್ಸಾ ವಿಧಾನವಾಗಿ ಬಳಸಿಕೊಳ್ಳಲಾಗುತ್ತಿತ್ತು. ಮಾನಸಿಕ ರೋಗದ ಜೊತೆಗೆ ಇಂದು ಜನತೆಯನ್ನು ಬಾಧಿಸುತ್ತಿರುವ ಅನೇಕ ರೋಗಗಳಿಗೆ ಯೋಗ ಚಿಕಿತ್ಸೆ ಪರಿಣಾಮಕಾರಿಯಾಗಿದೆ.

ಯೋಗದ ಚಿಕಿತ್ಸಾ ವಿಧಾನಗಳನ್ನು ಕುರಿತು ಲಂಡನ್, ಜರ್ಮನಿ ಸೇರಿದಂತೆ ಅನೇಕ ದೇಶಗಳಲ್ಲಿ ಸಂಶೋಧನೆಗಳನ್ನು ನಡೆದವು. ಆಧುನಿಕ ವೈದ್ಯಕೀಯ ಪದ್ಧತಿಯು ಯೋಗದಿಂದ ಉಂಟಾಗುವ ಪ್ರಯೋಜನಗಳನ್ನು ಆವಿಷ್ಕಾರ ಮಾಡಿತು. ಧ್ಯಾನದಿಂದ ದೇಹದಲ್ಲಿನ ಬದಲಾವಣೆಗಳನ್ನು ಗುರುತಿಸಿದರು.

ಪಾಶ್ಚಿಮಾತ್ಯರಿಗೆ ಸ್ವಾತಿಕ ಆಹಾರ ತಿನಿಸಿದ ಯೋಗ ಪ್ರಪಂಚದ ೧೬೦ ದೇಶಗಳಲ್ಲಿ ಇಂದು ಯೋಗಾಭ್ಯಾಸ ನಡೆಸುತ್ತಿದ್ದಾರೆ. ಯೋಗದಿಂದ ಪಾಶ್ಚಿ ಮಾತ್ಯದ ಬಹಳಷ್ಟು ಮಂದಿ ಸಸ್ಯಾಹಾರಿಗಳಾಗಿದ್ದಾರೆ. ಬಾಬಾ ರಾಮದೇವ್ ಅವರು ನೀಡಿದ ಕ್ರಾಂತಿಯ ಸ್ವರೂಪದಿಂದ ಯೋಗವು ಜನಪ್ರಿಯವಾಗಿದೆ ಎನ್ನಬಹುದು.

ರವಿಶಂಕರ್ ಗುರೂಜಿ ಸೇರಿದಂತೆ ಸಾಕಷ್ಟು ಮಂದಿ ವಿದೇಶಗಳಲ್ಲಿ ಯೋಗದ ಮಹತ್ವ ಹರಡಿದರು. ಯೋಗದಿಂದ ಮನುಷ್ಯನ ವ್ಯಕ್ತಿತ್ವ ರೂಪಿಸಿ ಸಾಂಸ್ಕ ತಿಕ ಮತ್ತು ಸಾತ್ವಿಕ ಬದುಕು ಕಲ್ಪಿಸುವುದು ಸಾಧ್ಯ. ಧರ್ಮಗಳನ್ನು ಮೀರಿದ್ದು ಯೋಗ ಎಂದು ಸಮರ್ಥಿಸಿಕೊಂಡಿದ್ದಾರೆ.

ಯೋಗವನ್ನು ಆವಿಷ್ಕರಿಸಿದ ಮುನಿಗಳು, ಕಾಡಿನಲ್ಲಿದ್ದು ಸಾಧನೆ ಮಾಡಿದವರು. ಮೃಗಗಳ ದಿನಚರಿಯನ್ನು ವೀಕ್ಷಿಸುತ್ತ ಅವರು ಹಲವು ಯೋಗಾಸನಗಳನ್ನು ರೂಪಿಸಿದ್ದಾರೆ. ಹಾಗಾಗಿಯೇ ಹೆಚ್ಚಿನ ಯೋಗಾಸನಗಳು ಪ್ರಾಣಿಗಳ ನಾನಾ ಭಂಗಿಗಳನ್ನು ಹೋಲುತ್ತವೆ. ಉದಾಹರಣೆಗೆ ಸರ್ಪ ಹೆಡೆ ಎತ್ತಿದಂತೆ ಕಾಣುವ ಭುಜಂಗಾಸನ, ಚಿಟ್ಟೆಯಂತೆ ಕಾಲುಗಳನ್ನು ಕಂಪಿಸುವ ತಿಥಿಲಿ ಆಸನ, ಶಲಭಾಸನ, ವ್ಯಾಘ್ರಾಸನ, ಸಿಂಹಾಸನ, ಕುಕ್ಕಟಾಸನ, ಮರ್ಕಟಾಸನ ಇತ್ಯಾದಿ ಎಂಬುದಾಗಿ ಯೋಗದ ದೈಹಿಕ- ಮಾನಸಿಕ ಲಾಭಗಳನ್ನು ಡಾ.ಗುರುಬಸವರಾಜು ವಿವರಿಸುತ್ತಾರೆ.

ಧ್ಯಾನದ ಪ್ರತಿಯೊಂದು ಹಂತದಲ್ಲೂ ಅದರ ಉಪಯೋಗ ಅನುಭವಿಸಬಹುದು. ಯೋಗಿಗಳ ಪ್ರಕಾರ ನಮ್ಮ ಶರೀರವು ಪಂಚಕೋಶಗಳಿಂದ ಮಾಡಲ್ಪಟ್ಟಿದೆ. ಅನ್ನಮಯ (ಕಾಯ), ಪ್ರಾಣಮಯ (ಚೈತನ್ಯ), ಮನೋಮಯ (ಮನಸ್ಸು ಮತ್ತು ಭಾವನೆ), ವಿಜ್ಞಾನಮಯ (ವಿವೇಕ ಮತ್ತು ಮಾನಸಿಕ ಸ್ಥಿತಿ) ಮತ್ತು ಆನಂದಮಯ (ಉಲ್ಲಾಸ, ಜಾಗೃತಾವಸ್ಥೆ). ಶಾರೀರಿಕ ಯೋಗಾಸನಗಳನ್ನು ಅಭ್ಯಾಸ ಮಾಡುವ ಮೂಲಕ ಅನ್ನಮಯ ಕೋಶದ ಸ್ನಾಯುಗಳನ್ನು ವಿಶ್ರಾಂತ ಸ್ಥಿತಿಗೆ ಕರೆದೊಯ್ಯಬಹುದು. ಮಾನಸಿಕ ಒತ್ತಡ ನಿವಾರಣೆಗೆ ಧ್ಯಾನ ಸಂಜೀವಿನಿ.

ಶಾರೀರಿಕ ಸೆಡವು ಒತ್ತಡದ ಸ್ಥಿತಿಯಿಂದಾಗಿ ಉಂಟಾಗುವ ಸಮಸ್ಯೆ. ಪ್ರಾಣಮಯ ಕೋಶದಲ್ಲಿ ಒತ್ತಡದ ಕಾರಣ ಸ್ನಾಯು ಹಾಗೂ ಮಾಂಸಖಂಡಗಳು ಗಡುಸಾಗುತ್ತವೆ. ಅವುಗಳೊಳಗಿನ ರಕ್ತದ ಹರಿವು ಹೆಚ್ಚಾಗುತ್ತದೆ. ಅದರ ನೇರ ಪರಿಣಾಮ ಆರೋಗ್ಯದ ಮೇಲಾಗುತ್ತದೆ. ಈ ಅಂಶವನ್ನು ನಮ್ಮ ಯೋಗಿಗಳು ಸಾವಿರಾರು ವರ್ಷಗಳ ಹಿಂದೆಯೇ ಕಂಡುಕೊಂಡಿದ್ದು, ಇತ್ತೀಚೆಗೆ ಮನೋರೋಗ ತಜ್ಞರು ದೃಢ ಪಡಿಸಿದ್ದಾರೆ. ಧ್ಯಾನದಿಂದ ಸೈಕೋ ಥೆರಪಿ(ಮಾನಸಿಕ ಚಿಕಿತ್ಸೆ) ಸುಲಭವಾಗುತ್ತದೆ ಎನ್ನುತ್ತಾರೆ ಮತ್ತೊಬ್ಬ ಯೋಗ ಗುರು ಡಾ.ಚಂದ್ರಶೇಖರ್ ಅವರು.

ಆಧುನಿಕ ಜೀವನಶೈಲಿ ಮತ್ತು ವೃತ್ತಿ ಬದುಕಿನ ಒತ್ತಡಗಳಿಂದಾಗಿ ಅನೇಕ ಬಗೆಯ ಆರೋಗ್ಯ ಸಮಸ್ಯೆಗಳು ಸೃಷ್ಟಿಯಾಗುತ್ತಿವೆ. ಅಧಿಕ ರಕ್ತದ ಒತ್ತಡ, ಮಧುಮೇಹ, ಹೃದಯದ ಸಮಸ್ಯೆಗಳು, ಕ್ಯಾನ್ಸರ್, ಬೊಜ್ಜು ಮುಂತಾದ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ವೈಜ್ಞಾನಿಕವಾದ, ಗುರುಮುಖೇನ ಕಲಿತ ಯೋಗಾಭ್ಯಾಸ ಇವುಗಳೆಲ್ಲಕ್ಕೂ ರಾಮಬಾಣ ಆಗಬಲ್ಲದು. ಇದು ಅನೇಕ ಪಾಶ್ಚಾತ್ಯ ವಿಶ್ವವಿದ್ಯಾಲಯಗಳ ಸಂಶೋಧನೆಗಳಿಂದಲೂ ದೃಢಪಟ್ಟಿದೆ.

ಲಕ್ಷಾಂತರ ಮಕ್ಕಳಲ್ಲಿ ಮಧುಮೇಹ ಸೇರಿದಂತೆ ವಂಶವಾಹಿಗಳಿಂದ ಕೆಲವು ಗಂಭೀರ ಸಮಸ್ಯೆಗಳು ಬರುತ್ತಿವೆ. ಯೋಗವನ್ನು ಸರಿಯಾಗಿ ಕಲಿಸಿಕೊಡುವ ಮೂಲಕ ಅದರ ತೀವ್ರತೆಯನ್ನು ಕಡಿಮೆ ಮಾಡಬಹುದು. ಮುಖ್ಯವಾಗಿ ಬೆನ್ನುನೋವು, ಮಣಿಕಟ್ಟಿನ ನೋವು, ಶ್ವಾಸಕೋಶದ ಸಮಸ್ಯೆ, ನಿದ್ರಾಹೀನತೆ, ಶೀತಬಾಧೆ, ಮಂಡಿನೋವು ಮತ್ತು ತೀವ್ರವಾದ ತಲೆನೋವಿನ ಸಮಸ್ಯೆಗಳಿಂದ ಬಳಲುತ್ತಿರುವವರು.

ತಜ್ಞರ ಪ್ರಕಾರ ಯೋಗಾಸನಗಳ ಪ್ರಯೋಜನಗಳು ?:

* ಬೆನ್ನುನೋವು: ಭುಜಂಗಾಸನವನ್ನು ಮಾಡುವುದರಿಂದ ಇದಕ್ಕೆ ಪರಿಹಾರವನ್ನು ಪಡೆಯಬಹುದು. ಮುಖ ಅಡಿಯಾಗಿ ಮಲಗಿ ಹೊಕ್ಕಳಿನಿಂದ ಮೇಲಕ್ಕೆ ದೇಹವನ್ನು ಸರ್ಪದ ಹೆಡೆಯಂತೆ ಎತ್ತುವುದು.

* ಮೂತ್ರಜನಕಾಂಗದ ಉರಿಯೂತ:  ಶೀರ್ಷಾಸನದಿಂದ ಮೂತ್ರಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳು ದೂರವಾಗುತ್ತವೆ. ಆಸನಗಳ ರಾಜ ಎಂದೇ ಇದನ್ನು ಕರೆಯಲಾಗುತ್ತಿದ್ದು, ಹೃದಯ- ಶ್ವಾಸಕೋಶಗಳ ಸಮಸ್ಯೆಗಳಿಗೂ ಇದರಿಂದ ಪರಿಹಾರವಿದೆ.

* ಥೈರಾಯ್ಡ್ ಸಮಸ್ಯೆ:  ಉಜ್ಜಾಯಿ ಪ್ರಾಣಾಯಾಮದಿಂದ ಇದನ್ನು ಪರಿಹರಿಸಿಕೊಳ್ಳಬಹುದು. ನಾಸಿಕ ಮುದ್ರೆಯಿಂದ ಎರಡೂ ಮೂಗಿನ ಹೊಳ್ಳೆಗಳನ್ನು ಹಿಡಿದು – ಬಿಟ್ಟು ಉಸಿರಾಡುವ ಈ ಕ್ರಿಯೆಯ ಮೂಲಕ, ನೂರಾರು ಮಂದಿಯ ಥೈರಾಯ್ಡ್ ಸಮಸ್ಯೆಯನ್ನು ಪರಿಹರಿಸಿಕೊಂಡಿದ್ದಾರೆ.

* ಮೈಗ್ರೇನ್:  ಚಂದ್ರಾನುಲೋಮ ಪ್ರಾಣಾಯಾಮದಿಂದ ಒತ್ತಲೆ ನೋವಿನಿಂದ ಪಾರಾಗಬಹುದು.

* ಅಜೀರ್ಣ:  ವಜ್ರಾಸನ ಉಪಯುಕ್ತ. ಕಾಲುಗಳನ್ನು ಹಿಂದಕ್ಕೆ ಮಡಚಿ ಅದರ ಮೇಲೆ ಕುಳಿತುಕೊಳ್ಳುವುದು.

* ಗ್ಯಾಸ್ಟ್ರಿಕ್ ಸಮಸ್ಯೆ: ಅಂಗಾತ ಮಲಗಿ, ಮೊಣಕಾಲುಗಳನ್ನು ಮಡಚಿ ಎರಡೂ ಕೈಗಳಲ್ಲಿ ಹಿಡಿದುಕೊಂಡು ಮುಖವನ್ನು ಮೊಣಕಾಲುಗಳಿಗೆ ತಾಕಿಸುವ ಪವನಮುಕ್ತಾಸನ.

* ಅಧಿಕ ರಕ್ತದೊತ್ತಡ: ಪ್ರಾಣಾಯಾಮದ ಕಪಾಲಭಾತಿ ವಿಧಾನವನ್ನು ದಿನನಿತ್ಯ ಮಾಡುವುದರಿಂದ ದೇಹ ತಂಪಾಗಿ, ಹೈ ಬಿಪಿ (ಅಧಿಕ ರಕ್ತದೊತ್ತಡ)ನಿಯಂತ್ರಣಕ್ಕೆ ಬರುತ್ತದೆ.

* ಬೊಜ್ಜು: ತೊಟ್ಟಿಲಾಸನ, ಉತ್ಥಾನಪಾದಾಸನ, ಹಾಲಾಸನ, ಪಶ್ಚಿಮೋತ್ತಾಸನ, ಹನುಮಾನಾಸನಗಳು ಅನಗತ್ಯ ಬೊಜ್ಜು ತಡೆಯಲು ರಾಮಬಾಣಗಳು.

* ಕ್ಯಾನ್ಸರ್: ಪ್ರತಿದಿನವೂ ನಾಡಿಶೋಧನ ಪ್ರಾಣಾಮಾಯ ಮಾಡುವುದರಿಂದ ಸ್ತನ ಕ್ಯಾನ್ಸರ್, ಬ್ರೈನ್ ಕ್ಯಾನ್ಸರ್, ಬ್ಲಡ್ ಕ್ಯಾನ್ಸರ್‌ಗಳನ್ನು ತಡೆಗಟ್ಟಬಹುದು.

* ಭುಜನೋವು:  ಕಂಪ್ಯೂಟರ್, ಲ್ಯಾಪ್‌ಟಾಪ್ ಬಳಸಿ ಉಂಟಾಗುವ ಭುಜನೋವನ್ನು ಗ್ರೀವ ಶ್ವಾಸದಿಂದ ಪರಿಹರಿಸಿಕೊಳ್ಳಬಹುದು.

* ಮಲಬದ್ಧತೆ: ಪಶ್ಚಿಮೋತ್ತಾಸನದಿಂದ ಮಲಬದ್ಧತೆ ನಿವಾರಣೆ ಯಾಗುತ್ತದೆ. ಸೊಂಟದ ಸ್ನಾಯುಗಳಿಗೆ ಬಲ ದೊರೆಯುತ್ತದೆ.

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ಸೆಲ್ಫಿ ವಿಡಿಯೋ ಮಾಡಿ ಆಟೋ ಚಾಲಕ ಆತ್ನಹತ್ಯೆಗೆ ಯತ್ನ

ನಂಜನಗೂಡು: 5 ಸಾವಿರ ರೂ ಸಾಲ ಪಾವತಿಗಾಗಿ ಮಾನಸಿಕವಾಗಿ ಕಿರುಕುಳ ನೀಡಿದ ವ್ಯಕ್ತಿ ಮನೆ ಮುಂದೆ ಸೆಲ್ಫಿ ವಿಡಿಯೋ ಮಾಡಿ…

4 hours ago

ಮಂಡ್ಯದಲ್ಲಿ ಭೀಕರ ಅಪಘಾತ: ಮೂವರು ಸ್ಥಳದಲ್ಲೇ ಸಾವು

ಮಂಡ್ಯ: ಡಿವೈಡರ್‌ಗೆ ಡಿಕ್ಕಿ ಹೊಡೆದ ಕಾರು ಪಲ್ಟಿಯಾಗಿ ಬಿದ್ದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿರುವ ಧಾರುಣ ಘಟನೆ ಮಂಡ್ಯದಲ್ಲಿ ನಡೆದಿದೆ.…

5 hours ago

ರಾಜ್ಯದಲ್ಲಿ ಮೂರು ದಿನ ದಟ್ಟ ಮಂಜು ಕವಿದ ವಾತಾವರಣ: ತೀವ್ರ ಚಳಿ ಮುನ್ಸೂಚನೆ

ಬೆಂಗಳೂರು: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಬೆಳಗಿನ ಜಾವ ದಟ್ಟವಾದ ಮಂಜು ಕವಿದ ವಾತಾವರಣ ಇರಲಿದೆ.…

6 hours ago

ಯೂರಿಯಾ ಗೊಬ್ಬರ ತಿಂದು 11 ಮೇಕೆಗಳು ಸಾವು

ಕೊಳ್ಳೇಗಾಲ: ಮೇಯಲು ಬಿಟ್ಟಿದ್ದ ಮೇಕೆಗಳು ಯೂರಿಯಾ ಗೊಬ್ಬರ ತಿಂದು ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಜಾಗೇರಿ ಹಳೆ…

6 hours ago

ಚಾಮರಾಜನಗರ| ಹುಚ್ಚುನಾಯಿ ದಾಳಿಯಿಂದ 7 ಮಂದಿಗೆ ಗಾಯ

ಚಾಮರಾಜನಗರ: ಪಾದಾಚಾರಿಗಳ ಮೇಲೆ ಏಕಾಏಕಿ ಹುಚ್ಚುನಾಯಿ ದಾಳಿ ನಡೆಸಿದ ಪರಿಣಾಮ 7 ಮಂದಿ ಗಾಯಗೊಂಡಿರುವ ಘಟನೆ ಯಳಂದೂರು ಪಟ್ಟಣದಲ್ಲಿ ನಡೆದಿದೆ.…

6 hours ago

ದುಬಾರಿ ಗಿಫ್ಟ್‌ ತೆಗೆದುಕೊಳ್ಳುವುದು ತಪ್ಪಾಗುತ್ತದೆ: ಸಂಸದ ಯದುವೀರ್‌ ಒಡೆಯರ್‌

ಮಡಿಕೇರಿ: ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ತಮ್ಮ ವಸ್ತುಗಳು ಏನೇ ಇದ್ದರೂ ಅಫಿಡವಿಟ್‌ನಲ್ಲಿ ತೋರಿಸಿದ್ದರೆ ಯಾವುದೇ ಸಮಸ್ಯೆ ಆಗಲ್ಲ. ಈ ಹಿಂದೆ…

7 hours ago