ಕಾವೇರಿ ನದಿ ಒಡಲಿನ ನಾಡು, ಮಂಡ್ಯ ನಗರವು ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಜ್ಜಾಗುತ್ತಿದೆ. ಇದು ಮಂಡ್ಯದಲ್ಲಿ ನಡೆಯಲಿರುವ ೩ನೇ ಸಾಹಿತ್ಯ ಸಮ್ಮೇಳನ ಎಂಬುದು ಗಮನಾರ್ಹ. ೮೭ನೇ ಸಮ್ಮೇಳನಕ್ಕೆ ಸಿದ್ಧತೆ ಸುಸೂತ್ರವಾಗಿ ನಡೆಯುತ್ತಿರುವುದರ ನಡುವೆಯೇ ಮಾಂಸಾಹಾರದ ಪ್ರಸ್ತಾಪ ಬಹು ಚರ್ಚೆಗೆ ಗ್ರಾಸವಾಗಿದೆ.
ಸಾಹಿತ್ಯ ಸಮ್ಮೇಳನಗಳಲ್ಲಿ ಹಿರಿಯ ಸಾಹಿತಿಗಳು, ಕವಿಗಳು ಪಾಲ್ಗೊಳ್ಳುತ್ತಾರೆ. ಅವರನ್ನು ಹತ್ತಿರದಿಂದ ನೋಡುವುದು, ಅವರ ಸಾಹಿತ್ಯಕ ಸಾಧನೆ, ವಿಶೇಷಗಳನ್ನು ಮನಸ್ಸಿಗೆ ತುಂಬಿಕೊಳ್ಳುವುದು, ಅದರಲ್ಲಿ ಪಾಲ್ಗೊಳ್ಳುವ ಯುವ ಕವಿಗಳು, ಉದಯೋನ್ಮುಖ ಸಾಹಿತಿಗಳ ಆಶಯವಾಗಿರುತ್ತದೆ. ಕನ್ನಡ ಸಾಹಿತ್ಯ ಲೋಕಕ್ಕೆ ಅನುಪಮ ಕೊಡುಗೆ ನೀಡಿರುವ ಲೇಖಕರ ಪುಸ್ತಕಗಳು, ಕಾದಂಬರಿಗಳು, ಕಾವ್ಯ ಸಂಕಲನಗಳನ್ನು ಖರೀದಿಸುವುದಕ್ಕೆ ಇಂತಹ ಸಮ್ಮೇಳನಗಳಲ್ಲಿ ಆದ್ಯತೆ ಇರುತ್ತದೆ. ಇವುಗಳ ನಂತರದ ಆದ್ಯತೆ ಭೋಜನದ್ದಾಗಿರುತ್ತದೆ. ಆದರೆ, ಈ ಬಾರಿ ಸಮ್ಮೇಳನದಲ್ಲಿ ಈ ಊಟದ ವಿಷಯವೇ ವಿವಾದದ ಸ್ವರೂಪಕ್ಕೆ ತಿರುಗಿರುವುದು ವಿಪರ್ಯಾಸ.
ಇಲ್ಲಿಯವರೆಗೆ ರಾಜ್ಯಾದ್ಯಂತ ನಡೆದಿರುವ ೮೬ ಸಮ್ಮೇಳನಗಳಲ್ಲಿ ಯಾವುದೇ ಕಾರಣಕ್ಕೂ ಪ್ರಸ್ತಾಪವಾಗದ ಅಥವಾ ನಿಷೇಧ ಎನ್ನದ ಮಾಂಸಾಹಾರದ ಬಗ್ಗೆ ವಿವಾದ ಸೃಷ್ಟಿಯಾಗಿದೆ. ಸಾಹಿತ್ಯ ಸಮ್ಮೇಳನದಲ್ಲಿ ತಿಂಡಿತಿನಿಸುಗಳ ಮಾರಾಟ ಮಳಿಗೆಗಳಲ್ಲಿ ಮಾಂಸಾಹಾರ, ಮದ್ಯ ಮತ್ತು ತಂಬಾಕು ಮಾರಾಟವನ್ನು ನಿಷೇಽಸಲಾಗಿದೆ ಎಂಬುದನ್ನು ಇತರ ಸೂಚನೆಗಳೊಂದಿಗೆ ಸೇರಿಸಲಾಗಿದೆ. ಇದಕ್ಕೆ ಮಾಂಸಾಹಾರಿಗಳಿಂದ ವಿರೋಧ ವ್ಯಕ್ತವಾದಾಗ, ಕನ್ನಡ ಸಾಹಿತ್ಯ ಪರಿಷತ್ ಕೇಂದ್ರ ಸಮಿತಿಯ ಅಧ್ಯಕ್ಷ ಡಾ.ಮಹೇಶ್ ಜೋಶಿ ಅವರು ಮಾಂಸಾಹಾರವು ಮದ್ಯ ಮತ್ತು ತಂಬಾಕುವಿಗೆ ಸಮ ಎನ್ನುವಂತೆ ಮಾತನಾಡಿದ್ದು, ರಾದ್ಧಾಂತಕ್ಕೆ ಕಾರಣವಾಗಿದೆ. ಜೋಶಿ ಅವರು ಪ್ರಜ್ಞಾಪೂರ್ವಕವಾಗಿ ಅಥವಾ ಅಪ್ರಜ್ಞಾಪೂರ್ವಕವಾಗಿ ಮಾತನಾಡಿದರೋ ಎಂಬುದು ಇಲ್ಲಿ ನಗಣ್ಯ.
ಯಾವುದೇ ಕಾರಣಕ್ಕೂ ಅಂತಹ ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಯ ಬಾಯಲ್ಲಿ ಅಂತಹ ಮಾತು ಹೊರಬೀಳಬಾರದಿತ್ತು. ಸಸ್ಯಾಹಾರಿಗಳು ಕೇವಲ ಸಸ್ಯಾಹಾರವನ್ನೇ ಸೇವಿಸುತ್ತಾರೆ. ಮಾಂಸಾಹಾರಿಗಳಾದರೆ ಎರಡನ್ನೂ ಉಪಯೋಗಿಸುತ್ತಾರೆ. ಹಾಗಾಗಿ ಸಮ್ಮೇಳನದಲ್ಲಿ ಮಾಂಸಾಹಾರ ಇಲ್ಲದಿದ್ದರೂ ಏನೂ ತಪ್ಪಿಲ್ಲ ಎಂಬ ಭಾವನೆ ಯಾರಿಗಾದರೂ ಇದ್ದರೆ, ಅದು ಸಮಂಜಸವಲ್ಲ. ಈ ನಿಲುವು ಆಹಾರ ಸಂಸ್ಕೃತಿಯ ಮೇಲಿನ ದಾಳಿಯಾಗುತ್ತದೆ. ಸಂವಿಧಾನವೇ ಧರ್ಮ, ಸಂಸ್ಕೃತಿ, ಆಹಾರ ಪ್ರಜೆಗಳ ಇಚ್ಛೆಗನುಸಾರ ಇರಬೇಕು ಎನ್ನುತ್ತದೆ. ಪ್ರಸ್ತುತ ಸಾಹಿತ್ಯ ಕ್ಷೇತ್ರದಲ್ಲಿ ಮಾಂಸಾಹಾರಿ ಸಾಹಿತಿಗಳು, ಕವಿಗಳು, ಲೇಖಕರ ಸಂಖ್ಯೆ ಅಧಿಕವಾಗಿದ್ದಂತಿದೆ. ಆದರೆ, ಇಲ್ಲಿಯವರೆಗೆ ಯಾವುದೇ ಸಮ್ಮೇಳನದಲ್ಲಿ ಆಹಾರದ ವಿಚಾರದಲ್ಲಿ ಯಾರೂ ಅಪಸ್ವರ ಎತ್ತಿರಲಿಲ್ಲ. ಈ ಬಾರಿ ಇದೆಂತಹ ವಿವಾದ ಸೃಷ್ಟಿಯಾಗಿದೆ?
ಮಾಂಸಾಹಾರ ನಿಷೇಧ ಎಂಬ ಮಾತಿನಿಂದ ರೊಚ್ಚಿಗೆದ್ದ ಮಂಡ್ಯದ ಬಹಳಷ್ಟು ಜನತೆ, ಬಾಡೂಟದ ಬಳಗ ಕಟ್ಟಿ ಸಮ್ಮೇಳನದಲ್ಲಿ ಮಾಂಸದಡುಗೆ ಮಾಡಿಸಬೇಕು ಎಂದು ಪಟ್ಟು ಹಿಡಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಅದಕ್ಕೆ ಪರಿಷತ್ ಅಧ್ಯಕ್ಷರ ಮಾತು ಕಾರಣ ಅಲ್ಲವೇ? ಏತನ್ಮಧ್ಯೆ, ಸಮ್ಮೇಳನದಲ್ಲಿ ಮಾಂಸಾಹಾರ ನಿಷೇಧಿಸುವುದು ಸರಿ ಎಂಬುದನ್ನು ಕೆಲವರು ಸಮರ್ಥಿಸಿಕೊಂಡಿದ್ದಾರೆ.
ಮಂಡ್ಯದಲ್ಲಿ ಈ ಹಿಂದೆ ನಡೆದ ಎರಡು ಸಮ್ಮೇಳನಗಳಲ್ಲಿ ಮಾಂಸಾಹಾರದ ಸೊಲ್ಲು ಇರಲಿಲ್ಲ. ಅಂದರೆ ಆಗಿನ ಪರಿಷತ್ ಅಧ್ಯಕ್ಷರಿಗೆ ಅದೆಲ್ಲ ದೊಡ್ಡದು ಅನಿಸಿರಲೇ ಇಲ್ಲ. ‘ಊಟ ತನ್ನಿಚ್ಛೆ; ನೋಟ ಪರರಿಚ್ಛೆ’ ಎಂಬ ನಾಣ್ಣುಡಿ ಅವರಿಗೆ ಚೆನ್ನಾಗಿ ಗೊತ್ತಿತ್ತು. ಅಲ್ಲದೆ, ಅಲ್ಲಿ ಜಾತಿ, ಧರ್ಮ, ಮತ, ಪಂಥಗಳನ್ನು ಮೀರಿದ ಸಾಹಿತ್ಯ ಸಮ್ಮಿಲನದ ಉತ್ಕಟೇಚ್ಛೆಯೇ ಪ್ರಧಾನವಾಗಿತ್ತು. ಕನ್ನಡ ಸಾಹಿತ್ಯ ಸಮ್ಮೇಳನ ಎಂದರೆ ಎಲ್ಲ ಕನ್ನಡಿಗರಿಗೆ ಹಬ್ಬ ಅಥವಾ ಜಾತ್ರೆ ಇದ್ದಂತೆ. ಹಳ್ಳಿಗಳಲ್ಲಿ ಎಲ್ಲ ಸಮುದಾಯಗಳೂ ಸೇರಿ ಹಬ್ಬ ಮಾಡುವ ಸಂಪ್ರದಾಯಗಳಿವೆ. ಆಗ ಮಾಂಸಾಹಾರಿಗಳು ಅವರಿಷ್ಟದಂತೆ ಊಟದ ವ್ಯವಸ್ಥೆ ಮಾಡಿಕೊಳ್ಳುತ್ತಾರೆ. ಅದಕ್ಕೆ ಯಾವುದೇ ಅಡ್ಡಿ ಇರುವುದಿಲ್ಲ. ಆದರೆ, ಸಮ್ಮೇಳನದಲ್ಲಿ ‘ಮಾಂಸಾಹಾರ ನಿಷೇಧ’ ಎಂಬ ಮಾತು ಕೇಳಿಬರದಿದ್ದರೆ, ಈಗಲೂ ಮಂಡ್ಯದ ಸಹೃದಯ ಜನರು ಅದಕ್ಕೆ ತಲೆಕೆಡಿಸಿಕೊಳ್ಳುತ್ತಿರಲಿಲ್ಲ.
ಜೋಶಿ ಅವರು ಸಮ್ಮೇಳನದ ಮೂರು ದಿನಗಳು ಕನ್ನಡಿಗರ ಮನೆಗಳ ಮೇಲೆ ಕನ್ನಡ ಧ್ವಜ ಹಾರಾಡಬೇಕು ಅಂತ ಬಯಸುತ್ತಿದ್ದಾರೆ. ಮಾಂಸಾಹಾರಿಗಳ ಮನೆಯ ಮೇಲೆ ಧ್ವಜ ಹಾರಿಸಬಾರದು ಎಂದು ಜೋಶಿ ಹೇಳಬಲ್ಲರೇ? ಯಾರನ್ನೋ ಮೆಚ್ಚಿಸುವುದಕ್ಕೆ ಅನುಚಿತ ಮಾತುಗಳನ್ನು ಆಡುವಾಗ, ಅದರ ಪರಿಣಾಮದ ಸಾಧಕ- ಬಾಧಕಗಳ ಬಗ್ಗೆಯೂ ಯೋಚಿಸಬೇಕು. ಜೋಶಿ ಅವರು ಹೇಳಿದ್ದಾರೆ ಎನ್ನಲಾದ ‘ಮಾಂಸಾಹಾರವು ಮದ್ಯ ಮತ್ತು ತಂಬಾಕಿಗೆ ಸಮ’ ಎಂಬ ಮಾತು ಸಂವಿಧಾನಬಾಹಿರವಾಗಿದೆ. ಇನ್ನು ಮುಂದೆಯಾದರೂ ಅವರು ತಮ್ಮ ಸ್ಥಾನದ ಜವಾಬ್ದಾರಿ ಅರಿತು ಮಾತುಗಳನ್ನು ತೂಗಿ ಆಡಬೇಕು. ಅಲ್ಲದೆ, ಮಾಂಸಾಹಾರದ ವಿವಾದವು ಸಕ್ಕರೆ ನಾಡಿನಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನಕ್ಕೆ ಕಪ್ಪುಚುಕ್ಕೆ ಆಗದಿರಲಿ. ಇದು ‘ಸರ್ವ ಜನಾಂಗದ ಶಾಂತಿಯ ತೋಟ’ ಆಗಬೇಕು ಎಂಬ ರಸಋಷಿ ಕುವೆಂಪು
ಮಂಡ್ಯದಲ್ಲಿ ಈ ಹಿಂದೆ ನಡೆದ ಎರಡು ಸಮ್ಮೇಳನಗಳಲ್ಲಿ ಮಾಂಸಾಹಾರದ ಸೊಲ್ಲು ಇರಲಿಲ್ಲ. ಅಂದರೆ ಆಗಿನ ಪರಿಷತ್ ಅಧ್ಯಕ್ಷರಿಗೆ ಅದೆಲ್ಲ ದೊಡ್ಡದು ಅನಿಸಿರಲೇ ಇಲ್ಲ. ‘ಊಟ ತನ್ನಿಚ್ಛೆ; ನೋಟ ಪರರಿಚ್ಛೆ’ ಎಂಬ ನಾಣ್ಣುಡಿ ಅವರಿಗೆ ಚೆನ್ನಾಗಿ ಗೊತ್ತಿತ್ತು. ಅಲ್ಲದೆ, ಅಲ್ಲಿ ಜಾತಿ, ಧರ್ಮ, ಮತ, ಪಂಥಗಳನ್ನು ಮೀರಿದ ಸಾಹಿತ್ಯ ಸಮ್ಮಿಲನದ ಉತ್ಕಟೇಚ್ಛೆಯೇ ಪ್ರಧಾನವಾಗಿತ್ತು.
ಮೈಸೂರು: ಮೈಸೂರಿಗೆ ಆಗಮಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸ್ವಾಗತಿಸಿದರು.…
ಮೈಸೂರು: ಬೆಂಗಳೂರು ಡಿಜಿಸ್ಟ್ರೇಷನ್ ಹಳೆಯ ಬಸ್‌ಗಳು ಮೈಸೂರು ನಗರದಲ್ಲಿ ಸಂಚಾರ ಮಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಾರಿಗೆ ಇಲಾಖೆಯ ಪ್ರಾದೇಶಿಕ ಅಧಿಕಾರಿ ವಸಂತ್…
ಮೈಸೂರು: ಇಬ್ಬರು ಬೈಕ್ ಕಳ್ಳರನ್ನು ಬಂಧಿಸಿರುವ ಲಷ್ಕರ್ ಠಾಣೆ ಪೊಲೀಸರು, ಬಂಧಿತರಿಂದ 2.5 ಲಕ್ಷ ರೂ. ವೌಲ್ಯದ 3 ದ್ವಿಚಕ್ರ…
ಮೈಸೂರು: ಅಂತರಾಜ್ಯ ಮನೆಗಳ್ಳನನ್ನು ಕುವೆಂಪು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 2.6 ಲಕ್ಷ ರೂ. ವೌಲ್ಯದ 20 ಗ್ರಾಂ…
ಹನೂರು: ವಿದ್ಯುತ್ 66/11 ಕೆವಿ ಟವರ್ ದುರಸ್ತಿ, ವಿವಿಧ ಭಾಗದಲ್ಲಿ ವಿದ್ಯುತ್ ನಿಲುಗಡೆ ದುರಸ್ತಿಕಾರ್ಯ ಪ್ರಗತಿಯಲ್ಲಿರುವುದರಿಂದ ಹಲವು ಗ್ರಾಮಗಳಲ್ಲಿ ವಿದ್ಯುತ್…
ವಿರಾಜಪೇಟೆ: ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿರಾಜಪೇಟೆಯಲ್ಲಿ ನಡೆದಿದೆ. ವಿರಾಜಪೇಟೆ ಹೊರವಲಯದ ಅರಮೇರಿ ಬಳಿಯ ನಾಲ್ಕನೇ ರಸ್ತೆಯಲ್ಲಿ…