ದೆಹಲಿ ಕಣ್ಣೋಟ, ಶಿವಾಜಿ ಗಣೇಶನ್
ಲೋಕಸಭೆ ಚುನಾವಣೆ ಸೇರಿದಂತೆ ಹಲವು ಚುನಾವಣೆಗಳು ಈ ವರ್ಷ ನಡೆದವು. 2024ರ ಕೊನೆಯ ಚುನಾವಣೆಗಳು ಈಗ ನಮ್ಮೆದುರಿಗಿವೆ. ಹರಿಯಾಣ, ಜಮ್ಮು ಕಾಶ್ಮೀರ ಚುನಾವಣೆಗಳು ಈಗ ಮುಗಿದಿದ್ದು, ಈಗ ಮಹಾರಾಷ್ಟ್ರ ಮತ್ತು ಜಾರ್ಖಂಡ್ ರಾಜ್ಯಗಳು ವಿಧಾನಸಭಾ ಚುನಾವಣೆಗಳಿಗೆ ಸಜ್ಜಾಗಿವೆ.
ಈ ಎರಡೂ ರಾಜ್ಯಗಳ ವಿಧಾನಸಭೆ ಚುನಾವಣೆ 2024ರ ಕೊನೆಯ ಚುನಾವಣೆ ಆಗಲಿದೆ.
ರಾಹುಲ್ ಗಾಂಧಿ ರಾಜೀನಾಮೆಯಿಂದ ತೆರವಾದ ಕೇರಳದ ವಯನಾಡು ಮತ್ತು ವಸಂತರಾವ್’ ಬಲವಂತರಾವ್ ಚವ್ಹಾಣ್ ಅವರ ನಿಧನದಿಂದ ತರವಾಗಿರುವ ಮಹಾರಾಷ್ಟ್ರದ ನಾಂದೇಡ್ ಲೋಕಸಭೆ ಕ್ಷೇತ್ರಗಳಿಗೆ ಉಪಚುನಾವಣೆ ಸೇರಿದಂತೆ ಹದಿನೈದು ರಾಜ್ಯಗಳ 48 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ.
ಉತ್ತರಪ್ರದೇಶ ಬಿಟ್ಟರೆ ದೊಡ್ಡ ರಾಜ್ಯವಾದ ಮಹಾರಾಷ್ಟ್ರದ 288 ಸ್ಥಾನಗಳಿಗೆ ನಡೆಯುವ ಈ ಚುನಾವಣೆಯ ವಿಶೇಷ ಎಂದರೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ನಡೆದರೆ, ಸ್ಥಳೀಯವಾಗಿ ಪ್ರಭಾವಿಯಾಗಿರುವ ಶಿವಸೇನೆಯ ಎರಡೂ ಬಣಗಳು ಮತ್ತು ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ (ಎನ್ ಸಿಪಿ) ಬಣಗಳು ಪೈಪೋಟಿಗೆ ಇಳಿದರೆ ಬಿಜೆಪಿ ನೇತೃತ್ವದ ‘ಮಹಾಯುಕ್ತಿ’ ಮತ್ತು ಕಾಂಗ್ರೆಸ್ ನೇತೃತ್ವದ ‘ಮಹಾ ಅಘಾಡಿ’ ಮೈತ್ರಿಕೂಟಗಳ ನಡುವೆ ಮಹಾ ಸಮರವೇ ನಡೆಯಲಿದೆ. ಆದರೆ ಮತದಾರರಿಗೆ ಎರಡೂ ಮೈತ್ರಿಕೂಟಗಳು ತನ್ನ ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂಬುದನ್ನು ಬಹಿರಂಗಪಡಿಸುವಷ್ಟು ಹೊಂದಾಣಿಕೆ ಸಾಧ್ಯವಿಲ್ಲದೆ ಎಲ್ಲವೂ ರಹಸ್ಯವಾಗಿ ಉಳಿದಿರುವುದು ಗೊಂದಲ ಮೂಡಿಸಿದ. ಹೀಗಾಗಿ ಯಾವ ಪಕ್ಷ ಹೆಚ್ಚು ಸ್ಥಾನಗಳನ್ನು ಪಡೆಯಲಿದೆ ಎನ್ನುವುದು ಬಹುಶಃ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬುದರ ತೀರ್ಮಾನವಾಗಲಿದೆ.
ಮಹಾರಾಷ್ಟ್ರದಲ್ಲಿ ‘ಮಹಾಯುತಿ” ಮತ್ತು “ಮಹಾ ಅಘಾಡಿ” ಮೈತ್ರಿಕೂಟಗಳ ನಡುವೆ ಅಭ್ಯರ್ಥಿಯ ಆಯ್ಕೆಯ ಮಾತುಕತೆಗಳು ನಿರಂತರವಾಗಿ ನಡೆಯುತ್ತಿವೆ. ಎರಡೂ ಕಡೆಯಲ್ಲಿ ಇದುವರೆಗೆ ನಡೆದಿರುವ ಮಾತುಕತೆಗಳಲ್ಲಿ ಶೇ.80ರಷ್ಟು ಸೀಟು ಹಂಚಿಕೆ ಮುಕ್ತಾಯಗೊಂಡಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಎರಡು ವರ್ಷಗಳ ಹಿಂದೆ ಬಿಜೆಪಿಯು ನಡೆಸಿದ ರಾಜಕೀಯ ರಣತಂತ್ರದಿಂದ ಶಿವಸೇನೆಯನ್ನು ಒಡೆದು ಬಂದ ಏಕ್‌ನಾಥ್ ಶಿಂಧಯು 40 ಶಾಸಕರ ಬಲದೊಂದಿಗೆ ಬಿಜೆಪಿಯ 103 ಶಾಸಕರು ಮತ್ತು ಅಜಿತ್ ಪವಾರ್‌ರವರ 43 ಶಾಸಕರ ಬಣ ಒಂದು ಕಡೆ ಇದ್ದರೆ, ಮುಖ್ಯಮಂತ್ರಿ ಸ್ಥಾನವನ್ನು ಕಳೆದುಕೊಂಡ ಉದ್ಧವ್ ಠಾಕ್ರೆ, ಶರದ್ ಪವಾರ್ ನೇತೃತ್ವದ ಮಹಾ ಅಘಾಡಿ ಮೈತ್ರಿಕೂಟ ಮತ್ತೊಂದು ಕಡೆ ಚುನಾವಣೆ ಕಣಕ್ಕೆ ಇಳಿದಿವೆ.
ಟಿಕೆಟ್ ಹಂಚಿಕೆಯು ಎರಡೂ ಬಣಗಳಿಗೆ ತಲೆಬಿಸಿ ಮಾಡಿದ ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿರುವ ಮಾಹಿತಿಯಂತೆ ಬಿಜೆಪಿಯು 150 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದು, 60 ಅಥವಾ 90 ಕ್ಷೇತ್ರಗಳನ್ನು ಶಿಂಧೆಯವರಿಗೆ ಬಿಟ್ಟುಕೊಡಬಹುದು. ಉಳಿದ ಕ್ಷೇತ್ರಗಳನ್ನು ಅಜಿತ್ ನವಾ ಬಣಕ್ಕೆ ನೀಡಬಹುದು. ಈ ಕ್ಷೇತ್ರಗಳಿಗೆ ಟಿಕೆಟ್ ಹಂಚಿಕೆಯಲ್ಲಿ ಆರ್‌ಎಸ್‌ಎನ್‌ನ ನಾಯಕರೂ ಭಾಗಿಯಾಗಿರುವುದು ವಿಶೇಷ. 2019ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯು ಆಗಿನ ಐಕ್ಯ ಶಿವಸೇನ ಜೊತ ಮೈತ್ರಿ ಮಾಡಿಕೊಂಡಿತ್ತಾದರೂ 164 ಸ್ಥಾನಗಳಿಗೆ ಸ್ಪರ್ಧಿಸಿ 105 ಸ್ಥಾನಗಳನ್ನು ಪಡೆದುಕೊಂಡಿತ್ತು. ಉದ್ಧವ್ ಠಾಕ್ರೆ ಬಣ 126 ಸ್ಥಾನಗಳಿಗೆ ಸ್ಪರ್ಧಿಸಿ 56 ಸ್ಥಾನಗಳನ್ನು ಗಳಿಸಿತ್ತು. ಆದರೂ ಕಾಂಗ್ರೆಸ್ ಮತ್ತು ಶರದ್ ಪವಾರ್ ಬಣಗಳನ್ನು ಅಧಿಕಾರದಿಂದ ದೂರವಿಡಬೇಕೆನ್ನುವ ಏಕೈಕ ಕಾರಣಕ್ಕೆ ಬಿಜೆಪಿ ಶಿವಸೇನೆ ಬಣಗಳಿಗೇ ರಾಜ್ಯದ ಅಧಿಕಾರದ ಚುಕ್ಕಾಣಿ ನೀಡಿ ತೆರೆಮರೆಯಲ್ಲಿ ತನ್ನ ಪ್ರಾಬಲ್ಯವನ್ನು ಉಳಿಸಿಕೊಂಡು ಬಂದಿದೆ.
ಆದರೆ ಮಹಾ ಅಘಾಡಿ ಬಣದಲ್ಲಿ ಟಿಕೆಟ್ ಹಂಚಿಕೆ ಮಹಾಯುತಿ ಮೈತ್ರಿಕೂಟಕ್ಕಿಂತ ಹೆಚ್ಚು ತಲೆನೋವಾಗಿದೆ. ಕಳೆದಲೋಕಸಭೆಚುನಾವಣೆಯಲ್ಲಿ ಒಟ್ಟು 48 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 13 ಸ್ಥಾನಗಳನ್ನು, ಉದ್ಧವ್ ಠಾಕ್ರೆ ಶಿವಸೇನೆ 9 ಮತ್ತು ಶರದ್ ಪವಾರ್’ ಎನ್‌ಸಿಪಿಯು 8 ಸ್ಥಾನಗಳನ್ನು ಗಳಿಸಿತಾದರೂ, ವಿಧಾನಸಭೆ ಚುನಾವಣೆಯ ಟಿಕೆಟ್ ಹಂಚಿಕೆಯಲ್ಲಿ ಹೊಂದಾಣಿಕೆ ಕಂಡು ಬರುತ್ತಿಲ್ಲ. ಕಾಂಗ್ರೆಸ್ ಜೊತೆಗಿನ ಟಿಕೆಟ್ ಹಂಚಿಕೆ ವಿಷಯದಲ್ಲಿ ತಾನು ರಾಜ್ಯ
ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಳೆ ಜೊತೆ ಮಾತುಕತೆ ನಡೆಸುವುದಿಲ್ಲ ಎಂದು ಉದ್ಧವ್ ಠಾಕ್ರೆ ಹೇಳಿರುವುದು ಮೈತ್ರಿಕೂಟಕ್ಕೆ ಮತ್ತಷ್ಟು ತಲೆನೋವು ತಂದಿಟ್ಟಿದೆ. ಕಾಂಗ್ರೆಸ್ ಹೈಕಮಾಂಡ್ ರಾಜ್ಯ ಕಾಂಗ್ರೆಸ್ ಅಧ್ಯಕ್ಷರನ್ನೂ ಬಿಟ್ಟುಕೊಡಲು ಆಗದ ಇತ್ತ ಉದ್ಧವ್ ಠಾಕ್ರೆಯ ಸ್ನೇಹವನ್ನೂ ಕಳೆದುಕೊಳ್ಳಲು ಆಗದ ಇಕ್ಕಟ್ಟಿಗೆ ಸಿಲುಕಿಕೊಂಡಿದೆ. ಮಹಾಆಘಾಡಿ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ತನ್ನನ್ನು ಘೋಷಿಸಬೇಕೆಂಬ ಬೇಡಿಕೆಯನ್ನೂ ಉದ್ಧವ್ ಠಾಕ್ರೆ ಕಾಂಗ್ರೆಸ್ ಹಾಗೂ ಪವಾರ್ ಅವರ ಮುಂದಿಟ್ಟಿರುವುದು ಮೈತ್ರಿಕೂಟದಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದನ್ನು ಬಹಿರಂಗಗೊಳಿಸಿದೆ.
ಮತ್ತೊಂದು ಕಡೆ ಬಾಂದ್ರಾ ವಿಧಾನಸಭೆಯಿಂದ ಹಾಲಿ ಕಾಂಗ್ರೆಸ್ ಶಾಸಕ ಇದ್ದರೂ, ಸೀಟು ಹಂಚಿಕೆ ಅಂತಿಮಗೊಳ್ಳದಿದ್ದರೂ ಉದ್ಧವ್ ಠಾಕ್ರೆ ಆ ಕ್ಷೇತ್ರಕ್ಕೆ ತನ್ನ ಅಭ್ಯರ್ಥಿಯನ್ನು ಘೋಷಿಸಿಬಿಟ್ಟಿದ್ದಾರೆ. ಇಂತಹ ಕೆಲವು ಸಮಸ್ಯೆಗಳು ಇದ್ದರೂ ಅವುಗಳನ್ನು ಕಾಂಗ್ರೆಸ್ ಪಕ್ಷವು ಸುಸೂತ್ರವಾಗಿ ಬಗೆಹರಿಸಿ ಒಗ್ಗಟ್ಟಿನಿಂದ ಚುನಾವಣೆ ಎದುರಿಸುವ ವಿಶ್ವಾಸ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ಅವರದ್ದು. ಆದರೆ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿಯ ನೇತೃತ್ವವಿರುವ ಮಹಾಯುತಿ ಮೈತ್ರಿಕೂಟದಲ್ಲಿಯೂ ಟಿಕೆಟ್ ಹಂಚಿಕೆಯ ಸಮಸ್ಯೆ ತಲೆದೋರಿದ್ದರೂ, ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಪಾತ್ರದಿಂದ ಸಮಸ್ಯೆಗಳು ಸುಲಭವಾಗಿ ಬಗೆಹರಿಯುವ ದಿಕ್ಕಿನಲ್ಲಿ ಸೀಟು ಹಂಚಿಕೆ ಪ್ರಕ್ರಿಯೆ ನಡೆದಿರುವುದು ತಾನೇ ಅಧಿಕಾರಕ್ಕೆ ಬರುತ್ತೇವೆ ಎನ್ನುವ ವಿಶ್ವಾಸ ಮೈತ್ರಿ ಕೂಟದಲ್ಲಿ ಮೂಡಿದೆ.
ಈ ಮೈತ್ರಿಕೂಟಗಳ ಜೊತೆಗೆ ಐದರ್ಭ ಭಾಗದಲ್ಲಿ ತನ್ನದೇ ಅದ ಪ್ರಭಾವ ಹೊಂದಿರುವ ಪ್ರಕಾಶ್ ಅಂಬೇಡ್ಕರ್ ಮಹಾರಾಷ್ಟ್ರ, ವಿಕಾಸ್ ಅಘಾಡಿ ಮತ್ತು ರಾಜ್ ಠಾಕ್ರೆ ನೇತೃತ್ವದ ಶಿವಸೇನೆ ಗುಂಪುಗಳ ಪಾತ್ರವನ್ನೂ ಕಡೆಗಣಿಸಲಾಗದು. ಈ ಎಲ್ಲದರ ನಡುವೆ ಆಧಿಕಾರ ನಡೆಸುತ್ತಿರುವ ಮಹಾಯುಗಿ ಸರ್ಕಾರವು ಮತದಾರರ ಪಟ್ಟಿಯನ್ನು ಪರಿಷ್ಠರಿಸುವಾಗ ಪ್ರತಿ ವಿಧಾನಸಭೆ ಕ್ಷೇತ್ರಗಳಲ್ಲಿ ತನ್ನ ಪರವಿಲ್ಲ ಎನ್ನುವ ಸುಮಾರು ಆರು ಸಾವಿರದಿಂದ ಹತ್ತು ಸಾವಿರ ಮತದಾರರ ಹೆಸರುಗಳನ್ನು ತೆಗೆದುಹಾಕಿದೆ ಎಂದು ಕಾಂಗ್ರೆಸ್ ನಾಯಕರು ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಜಾರ್ಖಂಡ್ ಪರಿಸ್ಥಿತಿ: ಜಾರ್ಖಂಡ್ ವಿಧಾನಸಭೆಯ 81 ಸ್ಥಾನಗಳಿಗೆ ನವೆಂಬರ್ 13 ಮತ್ತು 20ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದಲ್ಲಿ ಈಗಾಗಲೇ ಸೀಟು ಹಂಚಿಕೆ ಮುಗಿದಿದೆ. ಬಿಜೆಪಿಯು 68 ಸ್ಥಾನಗಳಿಗೆ ಸ್ಪರ್ಧಿಸುತ್ತಿದ್ದು ಇನ್ನು 13 ಸೀಟುಗಳ ಪೈಕಿ ಅಖಿಲ ಜಾರ್ಖಂಡ್ ವಿದ್ಯಾರ್ಥಿ ಸಂಘಕ್ಕೆ 10. ಜನಾತದಳ(ಯು)ಕ್ಕೆ 2 ಮತ್ತು ಚಿರಾಗ್ ಪಾಸ್ವಾನ್ ನೇತೃತ್ವದ ಎಲ್‌ಜೆಪಿಗೆ ಒಂದು ಸ್ಥಾನವನ್ನು ನೀಡಲಾಗಿದೆ. ಚಾರ್ಖಂಡ್ ಚುನಾವಣೆಯ ಉಸ್ತುವಾರಿ ಹೊತ್ತಿರುವ ಅಸ್ಸಾಂ ಮುಖ್ಯಮಂತ್ರಿ ಹೇಮಂತ್ ಬಿಸ್ವಾಸ್ ಸೀಟು ಹಂಚಿಕೆಯನ್ನು ಸುಸೂತ್ರವಾಗಿ ನಿರ್ವಹಿಸಿದ್ದಾರೆ. ಮುಖ್ಯಮಂತ್ರಿ ಹೇಮಂತ್ ಸೊರೇನ್ ನೇತೃತ್ವದ ಜಾರ್ಖಂಡ್ ಮುಕ್ತಿ ಮೋರ್ಚಾ ಮತ್ತು ಕಾಂಗ್ರೆಸ್ ನಡುವೆ ಸೀಟು ಹಂಚಿಕೆ ಮಾತುಕತಡ ಅಖೈರುಗೊಂಡಿದೆ. ರಾಜ್ಯ ವಿಧಾನಸಭೆಯ ಒಟ್ಟು 81 ಸ್ಥಾನಗಳ ಪೈಕಿ ಜೆಎಂಎಂ ಮತ್ತು ಕಾಂಗ್ರೆಸ್ 70 ಸ್ಥಾನಗಳಲ್ಲಿ ಹೊಂದಾಣಿಕೆಗೆ ಬಂದಿವೆ. ಜೆಎಂಎಂಗೆ 48 ಮತ್ತು ಕಾಂಗ್ರೆಸ್ 22 ಸ್ಥಾನಗಳಿಗೆ ಒಪ್ಪಿಕೊಂಡಿರುವ ಮಾಹಿತಿ ಇದೆ. ಇನ್ನು ಉಳಿದ 11 ಸ್ಥಾನಗಳನ್ನು ಆಜೆಡಿ ಮತ್ತು ಸಿಐ (ಎಂ.ಎಲ್)ಗೆ ಬಿಟ್ಟುಕೊಡಲು ನಿರ್ಧರಿಸಲಾಗಿದ್ದು, ಆರ್ ಜೆಡಿ ಹೆಚ್ಚು ಸ್ಥಾನಗಳಿಗೆ ಪಟ್ಟು ಹಿಡಿದಿರುವುದರಿಂದ ಪಟ್ಟಿಯನ್ನು ಅಂತಿಮ ಗೊಳಿಸುವಲ್ಲಿ ವಿಳಂಬವಾಗಿದೆ ಎಂದು ಇಂಡಿಯಾ ಮೈತ್ರಿಕೂಟ ಹೇಳಿದೆ.
ಇನ್ನು ಹದಿನೈದು ರಾಜ್ಯಗಳಲ್ಲಿ ನಡೆಯುವ 48 ವಿಧಾನಸಭೆಯ ಉಪಚುನಾವಣೆಯಲ್ಲಿ ಕರ್ನಾಟಕದ ಚನ್ನಪಟ್ಟಣ ಕ್ಷೇತ್ರ ಬಿಟ್ಟರೆ ಬಿಜೆಪಿ ಮತ್ತು ಕಾಂಗ್ರೆಸ್ಸಿಗೆ ಅಷ್ಟಾಗಿ ಸಮಸ್ಯೆ ತಲೆದೋರಿಲ್ಲ. ಪಶ್ಚಿಮ ಬಂಗಾಳದಲ್ಲಿ ಆರು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಕಳೆದ ಆಗಸ್ಟ್ ನಲ್ಲಿ ಕೊಲ್ಕತ್ತಾದ ಆ .ಜಿ.ಕರ್ ಆಸ್ಪತ್ರೆಯಲ್ಲಿ ನಡೆದ ತರಬೇಶಿ ವೈದ್ಯೆಯೊಬ್ಬರ ಅತ್ಯಾಚಾರ ಮತ್ತು ಹತ್ಯೆಯ ಪ್ರಕರಣದಿಂದ ಇಡೀ ರಾಜ್ಯದಲ್ಲಿ ತೃಣಮೂಲ ಕಾಂಗ್ರೆಸ್ ಆಡಳಿತದ ವಿರುದ್ಧ ಜನಾಭಿಪ್ರಾಯ ಮೂಡಿರುವುದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಈ ಚುನಾವಣೆ ಒಂದು ಸವಾಲಾಗಿದೆ. ಆರು ಕ್ಷೇತ್ರಗಳಿಗೆ ನಡೆಯುವ ವಿಧಾನಸಭೆಯ ಉಪಚುನಾವಣೆಯು ಮಮತಾ ಬ್ಯಾನರ್ಜಿ ಅವರ ಸರ್ಕಾರದ ಬಗೆಗೆ ಜನರು ನೀಡುವ ತೀರ್ಪು ಎಂದೇ ರಾಜಕೀಯ ವಲಯದಲ್ಲಿ ಹೆಚ್ಚಾಗಿ ಕೇಳಿ ಬರುತ್ತಿರುವ ಮಾತುಗಳು.
ಈ ಮಧ್ಯೆ ಕೇರಳದಲ್ಲಿ ಇಂಡಿಯಾ ಮೈತ್ರಿಕೂಟದ ನಡುವೆಯೇ ಹೋರಾಟ ಶುರುವಾಗಿದೆ. ಕೇರಳದಲ್ಲಿ ಆಡಳಿತ ನಡೆಸುತ್ತಿರುವ ಎಡ ರಂಗ ಮತ್ತು ವಿರೋಧಿಸ್ಥಾನದಲ್ಲಿರುವ ಕಾಂಗ್ರೆಸ್ ಇಂಡಿಯಾ” ಮೈತ್ರಿಕೂಟದ ಭಾಗಿಗಳು ಲೋಕಸಭೆಯ ಚುನಾವಣೆಯಲ್ಲಿ ನಡೆದ ಈ ದ್ವಂದ್ವ ಮತ್ತೆ ಮುಂದುವರಿದಿದೆ. ವಯನಾಡು ಲೋಕಸಭೆ ಕ್ಷೇತ್ರಕ್ಕೆ ನಿರೀಕ್ಷೆಯಂತೆ ಕಾಂಗ್ರೆಸ್ ಪಕ್ಷವು ಪ್ರಿಯಾಂಕಾ ಗಾಂಧಿ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಎಡರಂಗವು ಸಿಪಿಐ ನ ಸತ್ಯನ್ ಮೋಕರಿ ಅವರನ್ನು ಕಣಕ್ಕಿಳಿಸುತ್ತಿದೆ. ಈ ಹಿಂದೆ ರಾಹುಲ್ ಗಾಂಧಿ ವಿರುದ್ಧ ಸಿಪಿಐ ನ ರಾಷ್ಟ್ರೀಯ ಕಾರ್ಯದರ್ಶಿ ಡಿ.ರಾಜಾ ತಮ್ಮ ಪತ್ನಿ ಅನಿ ರಾಜಾ ಅವರನ್ನು ಕಣಕ್ಕಿಳಿಸಿದ್ದರು. ಆಗ ರಾಹುಲ್ ಗಾಂಧಿ ತನ್ನ ವಿರೋಧ ಅಭ್ಯರ್ಥಿ ಅನಿ ರಾಜಾ ಅವರನ್ನು ಮೂರೂವರೆ ಲಕ್ಷ ಮತಗಳ ಅಂತರದಲ್ಲಿ ಸೋಲಿಸಿದ್ದರು. “ಇಂಡಿಯಾ” ಮೈತ್ರಿಕೂಟದಲ್ಲಿನ ಈ ವಿರೋಧಾಭ್ಯಾಸ ಮತ್ತೆ ಮುಂದುವರಿದಿದೆ.
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…