ಸೈಬರ್ ಕ್ರೈಮ್ ಎಂಬ ಶಬ್ದ ಇತ್ತೀಚಿನ ದಿನಗಳಲ್ಲಿ ಬಹಳ ಸದ್ದು ಮಾಡುತ್ತಿದೆ. ಸೈಬರ್ ಕೈಮ್ ಪಿಡುಗಿನಿಂದಾಗಿ ಎಷ್ಟೋ ಮಂದಿ ತಾವು ಜೀವನಪೂರ್ತಿ ಕಷ್ಟಪಟ್ಟು ಸಂಪಾದಿಸಿದ ಹಣ ಕಳೆದುಕೊಳ್ಳುತ್ತಾರೆ. ಕ್ಷಣ ಮಾತ್ರದಲ್ಲಿ ಮೋಸಗಾರರು ಆ ಹಣವನ್ನು ಕಸಿಯುತ್ತಿರುವುದು ಆತಂಕಪಡಬೇಕಾದ ವಿಷಯ.
ಮುಖ್ಯವಾಗಿ ಈ ಸೈಬರ್ ಕ್ರಿಮಿನಲ್ ಗಳು ಮನುಷ್ಯನ ಎರಡು ಭಾವನೆಗಳನ್ನು ಉಪಯೋಗಿಸಿಕೊಂಡು ಮೋಸ ಮಾಡುತ್ತಾರೆ. ಅವುಗಳಲ್ಲಿ ಮತ್ತೊಂದು ಅತಿಯಾದ ಆಸೆ. ಕೆಲವು ತಿಂಗಳುಗಳ ಹಿಂದೆ ನನ್ನ ಆತ್ಮೀಯರೊಬ್ಬರು ನನಗೆ ಗಾಬರಿಯಿಂದ ಕರೆ ಮಾಡಿ ‘ನಾನು ದೊಡ್ಡ ಸಮಸ್ಯೆಯೊಂದರಲ್ಲಿ ಸಿಲುಕಿದ್ದೇನೆ. ಸಹಾಯ ಮಾಡಿ ಅಂದರು. ನಾನು ಏನೆಂದು ವಿಚಾರಿಸಿದಾಗ ಅವರು, ‘ಮುಂಬೈನಿಂದ ಪೊಲೀಸರು ಫೋನ್ ಮಾಡಿದ್ದರು. ನನ್ನ ಮೇಲೆ ಯಾವುದೋ ಕ್ರಿಮಿನಲ್ ಕೇಸ್ ದಾಖಲಾಗಿದೆಯಂತೆ, ಆದ್ದರಿಂದ ನನ್ನ ಖಾತೆಯಲ್ಲಿರುವ ಹಣವನ್ನೆಲ್ಲ ಅವರು ಹೇಳುತ್ತಿರುವ ಬ್ಯಾಂಕ್ ಅಕೌಂಟ್‌ಗೆ ಹಾಕಬೇಕೆಂದು ಒಂದು ಬ್ಯಾಂಕ್ ಅಕೌಂಟ್ ನಂಬರ್ ಕಳುಹಿಸಿದ್ದಾರೆ. ಏನು ಮಾಡಬೇಕೆಂದು ತೋಚುತ್ತಿಲ್ಲ’ ಎಂದು ಹೇಳಿದರು.
ನಾನು “ಅದು ಫ್ರಾಡ್ ಕಾಲ್. ಅದಕ್ಕೆ ನೀವು ಯಾವುದೇ ಉತ್ತರ ಕೊಡಬೇಡಿ. ಯಾವುದೇ ಮಾಹಿತಿ ಕೇಳಿದರೂ ಹೇಳಬೇಡಿ’ ಎಂದೆ. ಮತ್ತೆ ಮಧ್ಯಾಹ್ನ ಅವರೇ ನನಗೆ ಕರೆ ಮಾಡಿ ‘ನೀವು ಬೇಗ ಹಣ ಟ್ರಾನ್ಸ್ಫರ್ ಮಾಡದಿದ್ದರೆ ನಿಮ್ಮನ್ನು ಅರೆಸ್ಟ್ ಮಾಡಬೇಕಾಗುತ್ತದೆ’ ಎಂದು ಮುಂಬೈ ಪೊಲೀಸರು ಮತ್ತೆ ಕರೆ ಮಾಡಿದ್ದರು ಎಂದು ವಿಷಯ ತಿಳಿಸಿದರು. ಅದಲ್ಲದೆ ನನ್ನ ಲೊಕೇಶನ್ ಹಾಗೂ ಕೆವೈಸಿ ಡೀಟೇಲ್ಸ್ ಕೂಡ ಕೇಳುತ್ತಿದ್ದಾರೆ ಏನು ಮಾಡುವುದು ಎಂದರು. ನಾನು ಕೂಡಲೇ ಆ ನಂಬರ್ ಬ್ಲಾಕ್ ಮಾಡಿ ಅಂತ ತಿಳಿ ಹೇಳಿದೆ. ಅವರು ಅರೆಮನಸ್ಸಿನಿಂದಲೇ ಅದಕ್ಕೆ ಒಪ್ಪಿಕೊಂಡರು.
ಅದಾದ ನಂತರ ಮತ್ತೆ ಮಾರನೇ ದಿನ ಬೆಳಿಗ್ಗೆ ಗಾಬರಿಗೊಂಡ ಅವರು ನಮ್ಮ ಮನೆಗೆ ಬಂದರು. ನಾನು ಏನೆಂದು ಕೇಳುವ ಮೊದಲೇ ಅವರು ಒಂದೇ ಉಸಿರಿನಲ್ಲಿ ಅವರ ಮೊಬೈಲಿಗೆ ಬೇರೊಬ್ಬ ವ್ಯಕ್ತಿ ಫೋನ್ ಮಾಡಿ ನಾನು ಮುಂಬೈ ಡಿವಿಷನ್‌ನ ಪಬ್ಲಿಕ್ ಪ್ರಾಸಿಕ್ಯೂಟರ್, ನಿಮ್ಮ ಮೇಲೆ ಗಂಭೀರವಾದ ಆರೋಪಗಳಿವೆ, ಹಾಗಾಗಿ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಇರುವ ಹಣವನ್ನೆಲ್ಲ ನಾವು ಹೇಳಿದ ಅಕೌಂಟಿಗೆ ಹಾಕಿ. ತನಿಖೆ ಪೂರ್ಣಗೊಂಡ ನಂತರ ಬಿಡುಗಡೆ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ ಎಂದರು. ಇದು ವಂಚಕರ ಜಾಲ ಎಂದು ಗೊತ್ತಾಯ್ತು. ಹಾಗಾಗಿ ಆ ನಂಬರಿಗೆ ಯಾವುದೇ ಕಾಲ್ ಆಗಲಿ, ಮೆಸೇಜ್ ಆಗಲಿ ಮಾಡಬಾರದೆಂದು ತಿಳಿಸಿದೆ. ಮಾರನೆಯ ದಿನ ಮತ್ತೆ ಫೋನ್ ಮಾಡಿ, ಅವರು ಕಾಲ್ ಮಾಡಿ ನಿಮ್ಮ ಮನೆಗೆ ಬಂದು ನಿಮ್ಮನ್ನು ಅರೆಸ್ಟ್ ಮಾಡುತ್ತೇವೆ ಎಂದೆಲ್ಲ ಹೆದರಿಸುತ್ತಿದ್ದಾರೆ, ನಿಮ್ಮ ಕುಟುಂಬದವರನ್ನೂ ಅರೆಸ್ಟ್ ಮಾಡ್ತೀವಿ ಎಂದು ಧಮ್ಮಿ ಹಾಕುತ್ತಿದ್ದಾರೆ. ಏನು ಮಾಡುವುದು?’ ಎಂದು ಭಯಭೀತರಾಗಿ ಕೇಳಿದರು. ಅವರಿಗೆ ಸ್ಪಷ್ಟವಾಗಿ ಹೇಳಿದೆ ‘ಇದು ಫೇಕ್ ಕಾಲ್. ನಿಮಗೆ ಹೆದರಿಸಿ ಹಣ ಹೊಡೆಯುವ ಹುನ್ನಾರ. ದಯವಿಟ್ಟು ಯಾವುದೇ ಮಾಹಿತಿಯನ್ನು ಕೊಡ ಬೇಡಿ ಆ ನಂಬರ್‌ಗಳಿಂದ ಫೋನ್ ಬಂದರೆ ಬ್ಲಾಕ್ ಮಾಡಿ ಬಿಡಿ’ ಎಂದೆ ಅಷ್ಟು ಹೇಳಿದರೂ ಅವರಿಗೆ ಇನ್ನು ಸ್ವಲ್ಪ ಅಳುಕು ಇತ್ತು. ನಿಮಗೆ ಏನೂ ಆಗುವುದಿಲ್ಲ. ಹೆದರುವ ಅವಶ್ಯಕತೆ ಇಲ್ಲ ಎಂದು ಹೇಳಿ ಸುಮ್ಮನಾಗಿಸಿದ್ದೆ.
ಇದಾದ ನಂತರ ಈ ಕಡೆಯಿಂದ ಏನೂ ರೆಸ್ಪಾನ್ಸ್ ಸಿಗದಿದ್ದಾಗ ಅವರು ಫೋನ್ ಯಾರಿಗಾದರೂ ಈ ರೀತಿಯ ಕರೆಗಳು ಬಂದಾಗ ಅಥವಾ ಅನುಮಾನಾಸದವಾದ ಮಾಡುವುದನ್ನು ನಿಲ್ಲಿಸಿದರು. ಇದಾದ ಕೆಲವು ದಿನಗಳ ನಂತರ ಆ ನನ್ನ ಸ್ನೇಹಿತರು ಮೆಸೇಜುಗಳು ಬಂದಾಗ ನಿಮ್ಮ ಯಾವುದೇ ಮಾಹಿತಿಯನ್ನೂ ನೀಡದೆ ಕೂಡಲೇ ನನಗೆ ಫೋನ್ ಮಾಡಿ ‘ಪೇಪರ್ ನೋಡಿದ್ರಾ?’ ಅಂತ ಕೇಳಿದರು. ನಾನು ಸೈಬರ್ ಪೊಲೀಸರನ್ನು ಅಥವಾ ವಕೀಲರನ್ನು ಸಂಪರ್ಕ ಮಾಡಿದರೆ ಮುಂದಾಗುವ ಏನೆಂದು ಕೇಳಿದಾಗ, ತಮ್ಮದೇ ರೀತಿಯಲ್ಲಿ ಸೈಬರ್ ವಂಚಕರು ಒಬ್ಬವ್ಯಕ್ತಿಗೆ ಕೇಸ್ ಕೆಟ್ಟ ಪರಿಣಾಮಗಳಿಂದ ತಪ್ಪಿಸಿಕೊಳ್ಳಬಹುದು. ಇಲ್ಲದಿದ್ದರೆ ಬೆವರು ಸುರಿಸಿ ಇರುವುದಾಗಿ ಭಯ ಹುಟ್ಟಿಸಿ ಹಲವಾರು ಲಕ್ಷ ರೂಪಾಯಿಗಳನ್ನು ಕಸಿದು ಮೋಸ ಮಾಡಿರುವ ವಿಷಯ ತಿಳಿಸಿದರು. ಅವರಿಗೆ ಸಹಾಯ ಮಾಡಿದಕ್ಕಾಗಿ ನನಗೆ ಧನ್ಯವಾದ ಹೇಳಿದರು.
ಹಿಂದೊಮ್ಮೆ ನಮ್ಮ ಸ್ನೇಹಿತರೊಬ್ಬರಿಗೆ ಒಂದು ಇ-ಮೇಲ್ ಬಂದು, ಅವರ ಹೆಸರಿಗೆ ಅಪಾರವಾದ ಹಣ ಲಾಟರಿಯಲ್ಲಿ ಬಂದಿದೆ ಎಂದು, ಅದನ್ನು ನಿಮ್ಮ ಅಕೌಂಟಿಗೆ ತರಿಸಿಕೊಳ್ಳಲು ಹಣ ನೀಡಬೇಕೆಂದು ಕೆಲ ಸೈಬರ್ ಕ್ರಿಮಿಗಳು ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದೂ ನಡೆದಿದೆ. ಕೆಲವು ವಂಚಕರು ಫೇಸ್‌ಬುಕ್ ನಕಲಿ ಖಾತೆಗಳನ್ನು ತೆರೆದು ಬ್ಲಾಕ್ ಮೇಲ್ ಮಾಡಿ ಹಣ ಕೀಳುವುದೂ ಈ ನಡುವೆ ಹೆಚ್ಚಾಗಿದೆ. ಇವಷ್ಟೇ ಅಲ್ಲದೆ ಇನ್ನು ಹತ್ತು ಹಲವು ರೀತಿಯ ಸೈಬರ್ ಕೈಂಗಳು ಪ್ರತಿನಿತ್ಯ ನಡೆಯುತ್ತಿರುತ್ತವೆ.
ಈ ರೀತಿ ಸೈಬರ್ ಕೈಂಗಳು ಹೆಚ್ಚಾಗುತ್ತಿರುವ ಕಾರಣ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಯಾರೂ ನಿಮಗೆ ಪುಕ್ಕಟೆಯಾಗಿ ಹಣ ಕೊಡುವುದಿಲ್ಲ. ವಿನಾಕಾರಣ ನಿಮ್ಮ ಮೇಲೆ ಕೇಸುಗಳನ್ನು ಹಾಕಲು ಆಗುವುದಿಲ್ಲ. ಯಾರಿಗಾದರೂ ಈ ರೀತಿಯ ಕರೆಗಳು ಬಂದಾಗ ಅಥವಾ ಅನುಮಾನವಾದ ಮೆಸೇಜುಗಳ ಬಂದಾಗ ನಿಮ್ಮ ಯಾವುದೇ ಮಾಹಿತಿಯನ್ನು ನೀಡದೆ ಕೊಡಲೇ ಸೈಬರ್ ಪೊಲೀಸರನ್ನು ಅಥವಾ ವಕೀಲರನ್ನು ಸಂಪರ್ಕ ಮಾಡಿದರೆ ಮುಂದಾಗುವ ಕೆಟ್ಟ ಪರಿಣಾಮಗಳಿಂದ ತಪ್ಪಿಸಿಕೊಳ್ಳಬಹುದು. ಇಲ್ಲದಿದ್ದರೆ ಬೆವರು ಸುರಿಸಿ ಸಂಪಾದಿಸಿದ ನಿಮ್ಮ ಹಣ ವಂಚಕರ ಜೇಬು ಸೇರುವುದು ಖಚಿತ.
ಈ ರೀತಿ ಸೈಬರ್ ಕೈಂಗಳು ಹೆಚ್ಚಾಗುತ್ತಿರುವ ಕಾರಣ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಯಾರೂ ನಿಮಗೆ ಪುಕ್ಕಟೆಯಾಗಿ ಹಣ ಕೊಡುವುದಿಲ್ಲ. ವಿನಾಕಾರಣ ನಿಮ್ಮ ಮೇಲೆ ಕೇಸುಗಳನ್ನು ಹಾಕಲು ಆಗುವುದಿಲ್ಲ. ಯಾರಿಗಾದರೂ ಈ ರೀತಿಯ ಕರೆಗಳು ಬಂದಾಗ ಅಥವಾ ಅನುಮಾನಾಸ್ಪದವಾದ ಮೆಸೇಜುಗಳು ಬಂದಾಗ ನಿಮ್ಮ ಯಾವುದೇ ಮಾಹಿತಿಯನ್ನೂ ನೀಡದೆ ಕೂಡಲೇ ಸೈಬರ್ ಪೊಲೀಸರನ್ನು ಅಥವಾ ವಕೀಲರನ್ನು ಸಂಪರ್ಕ ಮಾಡಿದರೆ ಮುಂದಾಗುವ ಕೆಟ್ಟ ಪರಿಣಾಮಗಳಿಂದ ತಪ್ಪಿಸಿಕೊಳ್ಳಬಹುದು.
ಮೈಸೂರು: 9 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಕಾಮುಕನನ್ನು ಗ್ರಾಮಸ್ಥರು ಹಿಡಿದು ಥಳಿಸಿರುವ ಘಟನೆ ನಡೆದಿದೆ. ಮೈಸೂರು ಜಿಲ್ಲೆಯ…
ಕೇರಳದ ಕೋಯಿಕ್ಕೋಡಿನಲ್ಲಿ ಸುದ್ದಿಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‌ಐ) ಮಾಜಿ ಪ್ರಾದೇಶಿಕ ನಿರ್ದೇಶಕರಾದ ಕೆ.ಕೆ. ಮಹಮ್ಮದ್…
ಕಂದಾಯ ಇಲಾಖೆ ಡಿಜಿಟಲ್ ಇ-ಸ್ಟ್ಯಾಂಪ್ ವ್ಯವಸ್ಥೆ ಜಾರಿಗೆ ದಿಟ್ಟ ಹೆಜ್ಜೆ ಇಟ್ಟಿದೆ. ಇದು ನಾಗರಿಕ ಸ್ನೇಹಿಯೂ ಆಗಿದೆ. ಇಂದಿಗೂ ತಾಲ್ಲೂಕು…
ರಾಜ್ಯದಲ್ಲಿ ಇನ್ನು ಮುಂದೆ, ಜಾತಿ, ಧರ್ಮ ಭಾಷೆ, ಧಾರ್ಮಿಕ ಮತ್ತು ಜನಾಂಗೀಯ ನಿಂದನೆ, ಲೈಂಗಿಕ ದೃಷ್ಟಿಕೋನ ಮತ್ತು ಜನ್ಮ ಸ್ಥಳದ…
ಮಲ್ಕುಂಡಿ ಮಹದೇವಸ್ವಾಮಿ ವಿಕಲ್ಪಗಳ ಅಲೆಯ ಮೇಲೆ ಸದಾ ತೇಲಿ ಬರುವ ಸಂಕಲ್ಪ ಬಾಬಾ ಸಾಹೇಬರ ಪಾರ್ಥಿವ ಶರೀರ ಪ್ರಕೃತಿಯಲ್ಲಿ ಲೀನವಾಗುವ…
ಚಾಮರಾಜನಗರ: ಚಾ.ನಗರ-ನಂಜನಗೂಡು ಹೆದ್ದಾರಿಯಲ್ಲಿರುವ ಪಣ್ಯದಹುಂಡಿ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಸ್ವಾಧಿನಪಡಿಸಿಕೊಂಡಿರುವ ಭೂಮಿಯ ದರ ನಿಗದಿ ಕಗ್ಗಂಟಿನ ವಿಚಾರ ಅಂತಿಮ…