ಸಂಪಾದಕೀಯ

ಇಡಿ ಅಧಿಕಾರಿಗಳಿಂದ ಮುಡಾ ಹಗರಣ ಮುಕ್ತ ಅಭಿಯಾನ ನಡೆಯಲಿ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ಕಚೇರಿ ಮೇಲೆ ದಾಳಿ ಮಾಡಿದ ಜಾರಿ ನಿರ್ದೇಶನಾಲಯ (ಇಡಿ)ದ ಅಧಿಕಾರಿಗಳು ಎರಡು ದಿನಗಳ ಕಾಲ ಸತತವಾಗಿ ಕಡತಗಳನ್ನು ಪರಿಶೀಲಿಸಿದ್ದಾರೆ. ಮೈಸೂರು ತಾಲ್ಲೂಕು ಕಚೇರಿ ಮೇಲೆ ಕೂಡ ಅದೇ ಸಮಯದಲ್ಲಿ ಇಡಿ ದಾಳಿ ನಡೆದಿದೆ. ಮುಡಾದಿಂದ ಶೇ. 50:50 ಅನುಪಾತದಲ್ಲಿ ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಲಾಗಿದೆಎಂಬ ಆರೋಪದ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದರು. ಆದರೆ, ಮುಖ್ಯ ಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಪತ್ನಿ ಪಾರ್ವತಿ ಅವರನ್ನು ಆರೋಪಿಗಳು ಎನ್ನಲಾಗಿರುವ 14 ನಿವೇಶನಗಳ ಅಕ್ರಮ ಹಂಚಿಕೆ ಪ್ರಕರಣವೇ ಇಡಿ ಅಧಿಕಾರಿಗಳಿಗೆ ಪ್ರಮುಖವಾಗಿದೆ. ಹಾಗಾಗಿಯೇ ಅವರು ಪಾರ್ವತಿ ಅವರಿಂದ ಭೂಮಿ ಸ್ವಾಧೀನಪಡಿಸಿಕೊಂಡಿರುವುದು, ನಿವೇಶನಗಳನ್ನು ಹಂಚಿಕೆ ಮಾಡಿರುವುದು ಮತ್ತಿತರ ದಾಖಲೆಗಳ ಬಗ್ಗೆ ಮುಡಾ ಅಧಿಕಾರಿಗಳನ್ನು ಪ್ರಶ್ನೆ ಮಾಡಿದ್ದಾರೆ ಎಂಬುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.

ದೇಶದ ಸಂವಿಧಾನಾತ್ಮಕವಾದ ಕಾನೂನುಗಳನ್ನು ಉಲ್ಲಂಘಿಸಿದವರು ಯಾರೇ ಆಗಿದ್ದರೂ ಶಿಕ್ಷಿಸಬೇಕಾದದ್ದು ಸರ್ಕಾರದ ಕರ್ತವ್ಯ. ಸಾಮಾಜಿಕ ಕಾರ್ಯಕರ್ತರೊಬ್ಬರು ನೀಡಿದ ದೂರಿನ ಆಧಾರದಲ್ಲಿ ಇಡಿ ಅಧಿಕಾರಿಗಳು ಮುಡಾಗೆ ದಾಂಗುಡಿ ಇಟ್ಟಿದ್ದರು. ಹಿಂದಿನ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಮುಡಾ ಅವ್ಯವಹಾರ ಕುರಿತು ಬರೆದಿದ್ದ ಪತ್ರವನ್ನೂ ತಂದಿದ್ದರು ಎನ್ನಲಾಗಿದೆ. ಇಲ್ಲಿ ಪ್ರಮುಖ ಪ್ರಶ್ನೆಯೆಂದರೆ ಒಂದೇ ಒಂದು ಪ್ರಕರಣವನ್ನು ಮುಂದಿಟ್ಟುಕೊಂಡು ಇಡಿ ಅಧಿಕಾರಿಗಳು ಮುಡಾ ಮೇಲೆ ಮುಗಿಬಿದ್ದಿರುವುದೇಕೆ? ಅವರು ಪರಿಶೀಲನೆ ನಡೆಸಿದ ವೇಳೆಯಲ್ಲಿ ಅಧಿಕಾರಿಗಳಿಂದ ಉತ್ತರ ಪಡೆಯಲು ಬಯಸಿರುವ ಪ್ರಶ್ನೆಗಳು ಕೇವಲ ಪಾರ್ವತಿ ಅವರ ಪ್ರಕರಣವನ್ನು ಮಾತ್ರವೇ ಗುರಿ ಮಾಡಿದ್ದಂತೆ ಇವೆ. ಈ ಪ್ರಕರಣವನ್ನು ಆಮೂಲಾಗ್ರವಾಗಿ ತನಿಖೆ ನಡೆಸುವ ಇಡಿ ಅಧಿಕಾರಿಗಳ ಇರಾದೆ ಸ್ವಾಗತಾರ್ಹ. ಆದರೆ, ಒಂದೇ ಪ್ರಕರಣದ ಸಂಬಂಧ ತನಿಖೆ ನಡೆಸುತ್ತಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಮುಡಾದಲ್ಲಿ ಅಪರಿಮಿತ ಭ್ರಷ್ಟಾಚಾರ ನಡೆದಿದೆ ನೀಡಿರುವ ವ್ಯಕ್ತಿಯೇ ಎಂಬ ಆರೋಪಗಳು ಹಿಂದಿನಿಂದಲೂ ಕೇಳಿ ಮುಡಾದಲ್ಲಿ ಬರುತ್ತಿವೆ. ಈ ಹಿನ್ನೆಲೆಯಲ್ಲಿಯೇ ನಿರ್ಗಮಿತ ಮುಡಾ ಅಧ್ಯಕ್ಷರು ಕೂಡ ಆರೋಪ ಮಾಡಿದ್ದರು. ಆದರೆ, ಅದು ಅವರಿಗೇ ಮುಳುವಾಯಿತು. ಅಲ್ಲದೆ, ಸಿದ್ದರಾಮಯ್ಯ ಮತ್ತು ಅವರ ಪತ್ನಿ ಅವರನ್ನು ಸುತ್ತುವರಿಯಿತು. ಲೋಕಾಯುಕ್ತ ಪೊಲೀಸರು ತನಿಖೆ ನಡೆಸುತ್ತಿದ್ದರೂ, ಇಡಿ ಅಧಿಕಾರಿಗಳು ಮುಡಾದ ಮೇಲೆ ದಾಳಿ ನಡೆಸಿದ್ದು ಕುತೂಹಲಕಾರಿಯಾಗಿದೆ. ಅವರಿಗೆ ಲೋಕಾಯುಕ್ತ ಪೊಲೀಸರು ನಡೆಸುತ್ತಿರುವ ತನಿಖೆ ಬಗ್ಗೆ ನಂಬಿಕೆ ಇಲ್ಲ ಅನಿಸುತ್ತದೆ.

ವಾಸ್ತವವಾಗಿ ಮುಡಾದಲ್ಲಿ ನಡೆದಿವೆ ಎನ್ನಲಾದ ಎಲ್ಲ ಹಗರಣಗಳನ್ನೂ ಬಯಲು ಮಾಡುವ ನಿಟ್ಟಿನಲ್ಲಿ ಇಡಿ ತನಿಖೆ ಸಾಗಬೇಕು. ಪ್ರಸ್ತುತ ಅಂತಹ ಬೆಳವಣಿಗೆಗಳು ಕಾಣುತ್ತಿಲ್ಲ. ಸಿದ್ದರಾಮಯ್ಯ ಅವರ ವಿರುದ್ಧ ದೂರು ನೀಡಿರುವ ವ್ಯಕ್ತಿಯೇ ಮುಡಾದಲ್ಲಿ ನಡೆದಿರುವ ಎಲ್ಲ ಹಗರಣಗಳನ್ನೂ ತನಿಖೆ ಮಾಡಬೇಕು ಎಂದು ಹೇಳಿದ್ದಾರೆ. ಆದರೆ, ಸದ್ಯಕ್ಕೆ ಇಡಿ ನಡೆಯಲ್ಲಿ ಅಂತಹ ಯಾವುದೇ ಹೆಜ್ಜೆ ಕಾಣುತ್ತಿಲ್ಲ.

ಮುಡಾವನ್ನು ಸ್ವಚ್ಛಗೊಳಿಸುವ ಅಭಿಯಾನದ ರೀತಿಯಲ್ಲೇ ಇಡಿತನಿಖೆ ನಡೆಯಬೇಕು. ಒಂದೇ ಒಂದು ಪ್ರಕರಣವನ್ನು ಬಹು ಚರ್ಚೆಯಾಗುವಂತೆ ತನಿಖೆ ನಡೆಸುವ ಮೂಲಕ ಜನರ ಗಮನವನ್ನು ಅದರತ್ತಲೇ ಕೇಂದ್ರೀಕರಿಸುವಂತೆ ಮಾಡುವುದು ಸಮಾಜಕ್ಕೆ ಹಿತಕರವಲ್ಲ. ಮುಡಾದಪ್ರತಿಯೊಂದು ಹಗರಣವನ್ನೂತಾರ್ಕಿಕ ಅಂತ್ಯಕ್ಕೆಕೊಂಡೊಯ್ಯುವ ನಿಟ್ಟಿನಲ್ಲಿ ಇಡಿ ಹೆಜ್ಜೆಗಳಿದ್ದರೆ ಜನಸಾಮಾನ್ಯರಲ್ಲಿ ಕೂಡ ನಂಬಿಕೆ ಮೂಡುತ್ತದೆ. ಅಲ್ಲದೆ, ಮುಂದೆ ಯಾವುದೇ ಕಾರಣಕ್ಕೂ ಮುಡಾದಲ್ಲಿ ಹಗರಣಗಳು ನಡೆಯದಂತೆ ಎಚ್ಚರಿಕೆಯ ಘಂಟೆ ಬಾರಿಸಿದಂತೆ ಆಗುತ್ತದೆ. ಹಾಗಾದಾಗ ಸ್ವಂತ ಸೂರಿಗಾಗಿ ಪರಿತಪಿಸುತ್ತಿರುವ ಕಡುಬಡವರಿಗೂ ಮುಡಾದಿಂದ ನಿವೇಶನ ಅಥವಾ ಮನೆ ದೊರೆಯುವ ಕಾಲ ಬರಬಹುದು. ಅದೂ ಕೈಗೆಟುಕುವ ದರದಲ್ಲಿ. ಇದನ್ನು ಸಾಕಾರಗೊಳಿಸುವ ಮಹತ್ವದ ಜವಾಬ್ದಾರಿ ಇಡಿ ಮೇಲೆ ಇದೆ. ಹಾಗಾದಾಗ ಇಡಿ ಅಕ್ಷರಶಃ ಜನಸ್ನೇಹಿಯೂ ಆಗುತ್ತದೆ. ಲೋಕಾಯುಕ್ತ ಕೂಡ ಇದೇ ಹಾದಿಯಲ್ಲಿ ಮುನ್ನಡೆಯಬೇಕು. ಆಗ ಮಾತ್ರ ಪ್ರಜಾತಂತ್ರ ವ್ಯವಸ್ಥೆಗೆ ನೈಜ ಅರ್ಥ ದೊರೆಯುತ್ತದೆ.

ವಾಸ್ತವವಾಗಿ ಮುಡಾದಲ್ಲಿ ನಡೆದಿವೆ ಎನ್ನಲಾದ ಎಲ್ಲ ಹಗರಣಗಳನ್ನೂ ಬಯಲು ಮಾಡುವ ನಿಟ್ಟಿನಲ್ಲಿ ಇಡಿ ತನಿಖೆ ಸಾಗಬೇಕು. ಪ್ರಸ್ತುತ ಅಂತಹ ಬೆಳವಣಿಗೆಗಳು ಕಾಣುತ್ತಿಲ್ಲ. ಸಿದ್ದರಾಮಯ್ಯ ಅವರ ವಿರುದ್ಧ ದೂರು ನೀಡಿರುವ ವ್ಯಕ್ತಿಯೇ ಮುಡಾದಲ್ಲಿ ನಡೆದಿರುವ ಎಲ್ಲಾ ಹಗರಣಗಳನ್ನು ತನಿಖೆ ಮಾಡಬೇಕು ಎಂದು ಹೇಳಿದ್ದಾರೆ.

 

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ಬೆಂಗಳೂರಿನಲ್ಲಿ ಹೊತ್ತಿ ಉರಿದ ಮತ್ತೊಂದು ಖಾಸಗಿ ಬಸ್‌

ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ಇಂದು ಬೆಳ್ಳಂಬೆಳಿಗ್ಗೆ ಭೀಕರ ಅಗ್ನಿ ಅವಘಡವೊಂದು ಸಂಭವಿಸಿದೆ. ಚಂದ್ರಾ ಲೇಔಟ್‌ನ ಬಿಎಂಟಿಸಿ ಡಿಪೋ ಬಳಿ ಇಂದು…

21 seconds ago

ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಮೂರು ಮರಿಗಳಿಗೆ ಜನ್ಮ ನೀಡಿದ ಗಾಮಿನಿ ಚೀತಾ

ಮಧ್ಯಪ್ರದೇಶ: ಇಲ್ಲಿನ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಗಾಮಿನಿ ಚೀತಾ ಮೂರು ಮರಿಗಳಿಗೆ ಜನ್ಮ ನೀಡಿದೆ. ಕೇಂದ್ರ ಪರಿಸರ ಸಚಿವ ಭೂಪೇಂದರ್‌…

15 mins ago

ಗ್ರಾಮದೇವತೆ ಹಬ್ಬದಲ್ಲಿ ಅವಘಡ: ಬಂಡಿ ಓಡಿಸುವಾಗ ಕೆಳಗೆ ಬಿದ್ದು ಯುವಕ ಸಾವು

ಮೈಸೂರು: ಗ್ರಾಮದೇವತೆ ಹಬ್ಬದಲ್ಲಿ ಬಂಡಿ ಓಡಿಸುವಾಗ ಕೆಳಗೆ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆಯ ತಲಕಾಡು ಗ್ರಾಮದಲ್ಲಿ ನಡೆದಿದೆ.…

1 hour ago

ಹುಣಸೂರು| ಅಕ್ರಮ ರಸಗೊಬ್ಬರ ದಾಸ್ತಾನು ಗೋದಾಮಿನ ಮೇಲೆ ದಾಳಿ: 1296 ಮೂಟೆ ಯೂರಿಯಾ ವಶ

ಹುಣಸೂರು: ತಾಲ್ಲೂಕಿನ ಸಾಲುಮರದ ತಿಮ್ಮಕ್ಕ ಉದ್ಯಾನವನ ಪಕ್ಕದ ಕಲ್‌ಬೆಟ್ಟದ ಬಳಿ ಗೋಡೌನ್ ಒಂದರಲ್ಲಿ ೧೮ ಲಕ್ಷ ರೂ. ಮೌಲ್ಯದ ೧,೨೯೬…

1 hour ago

ಓದುಗರ ಪತ್ರ: ಫ್ಲೆಕ್ಸ್ ಹಾವಳಿಗೆ ಕಡಿವಾಣ ಹಾಕಿ

ಮೈಸೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಫ್ಲೆಕ್ಸ್ ಹಾವಳಿ ಮಿತಿ ಮೀರಿದ್ದು, ರಸ್ತೆ ಬದಿಯಲ್ಲಿ ಹಾಕಿರುವ ಬೃಹದಾಕಾರದ ಫ್ಲೆಕ್ಸ್‌ಗಳಿಂದಾಗಿ ಪ್ರತಿನಿತ್ಯ ರಸ್ತೆಯಲ್ಲಿ ಸಂಚರಿಸುವ…

4 hours ago

ಓದುಗರ ಪತ್ರ: ಪಾರದರ್ಶಕ ಆಡಳಿತಾತ್ಮಕ ವ್ಯವಸ್ಥೆ ಜಾರಿಯಾಗಲಿ

ಉತ್ತರ ಪ್ರದೇಶ ಸರ್ಕಾರವು ಆ ರಾಜ್ಯದ ಎಲ್ಲಾ ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರಿಗೆ ‘ಮಾನವ ಸಂಪದ್ ಪೋರ್ಟಲ್’ ಎಂಬ ಅಧಿಕೃತ…

4 hours ago