ಸಂಪಾದಕೀಯ

ಅಪರಾಧ ಕೃತ್ಯ ತಡೆಗಟ್ಟಲಿ; ಸಾಂಸ್ಕೃತಿಕ ನಗರಿಯಲ್ಲಿ ನೆಮ್ಮದಿ ನೆಲೆಸಲಿ

ಸಾಂಸ್ಕೃತಿಕ ನಗರಿ, ನೆಮ್ಮದಿಯ ತಾಣ ಎಂದೆಲ್ಲಾ ಕರೆಸಿಕೊಳ್ಳುವ ಮೈಸೂರಿನಲ್ಲಿ ಇತ್ತೀಚೆಗೆ ಒಂದರ ಹಿಂದೆ ಒಂದರಂತೆ ಕೊಲೆ, ಅತ್ಯಾಚಾರ ಪ್ರಕರಣಗಳು ನಡೆದಿವೆ. ಇದರಿಂದಾಗಿ ಮೈಸೂರಿಗೆ ಕಳಂಕ ಅಂಟಿಕೊಳ್ಳಬಹುದು. ಹಾಗಾಗಿ ಪೊಲೀಸರು ಅಪರಾಧ ಕೃತ್ಯ ತಡೆಗಟ್ಟಲುಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕಾದ ಅನಿವಾರ್ಯತೆ ಇದೆ ಮತ್ತು ಪೊಲೀಸ್ ಇಲಾಖೆ ಮೇಲೆ ಜನರು ಇಟ್ಟಿರುವ ವಿಶ್ವಾಸವನ್ನು ಉಳಿಸಿ ಕೊಳ್ಳಬೇಕಾಗಿದೆ.

ಹಾಗೆಯೇ ರಾಜ್ಯ ಸರ್ಕಾರವೂ ಕಾನೂನು ಸುವ್ಯವಸ್ಥೆ ಮತ್ತು ಅಪರಾಧ ಕೃತ್ಯಗಳನ್ನುತಡೆಗಟ್ಟಲು ಪೊಲೀಸ್ ಇಲಾಖೆಗೆ ಚುರುಕು ಮುಟ್ಟಿಸಬೇಕಿದೆ. ಹಲವು ವರ್ಷಗಳಿಂದ ಮೈಸೂರು ಶಾಂತಿಪ್ರಿಯರ ಮತ್ತು ಪ್ರವಾಸಿಗರ ಸ್ವರ್ಗ ಎಂಬ ಹೆಸರನ್ನು ಉಳಿಸಿಕೊಂಡು ಬಂದಿದೆ. ಆದರೆ ಆಗಿಂದಾಗ್ಗೆ ನಡೆಯುವ ಸಮಾಜಘಾತುಕ ಚಟು ವಟಿಕೆಗಳಿಂದಾಗಿ ಕಳಂಕ ಅಂಟಿಕೊಳ್ಳು ವಂತಾಗಿದೆ. ಐದಾರು ವರ್ಷಗಳ ಹಿಂದೆ ಪಡು ವಾರಹಳ್ಳಿಯಲ್ಲಿ ರೌಡಿಶೀಟರ್ ದೇವು ಕೊಲೆ, ಆರ್‌ಎಸ್‌ಎಸ್ ಕಾರ್ಯಕರ್ತ ರಾಜು ಕೊಲೆಯಾಯಿತು. ಇದಾದ ನಂತರದ ದಿನಗಳಲ್ಲಿ ಅಪರಾಧ ಕೃತ್ಯಗಳಿಗೆ ಕಡಿವಾಣ ಬಿದ್ದದ್ದರಿಂದ ಮೈಸೂರು ಕೊಂಚ ನೆಮ್ಮದಿ ಕಂಡುಕೊಂಡಿತ್ತು.

ನಂತರ ಹೊರವಲಯದ ರಿಂಗ್ ರಸ್ತೆಯಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಇಡೀ ದೇಶವನ್ನು ಬೆಚ್ಚಿ ಬೀಳಿಸಿತ್ತು. ಹೊರಗಿನ ವಿದ್ಯಾರ್ಥಿಗಳಿಗೆ ಮೈಸೂರು ಸುರಕ್ಷಿತ ಪ್ರದೇಶವಲ್ಲ ಎನ್ನುವ ಭಾವನೆ ಮೂಡಿಸಿತ್ತು. ಆದರೆ, ಪೊಲೀಸರು ಆರೋಪಿಗಳನ್ನು ಪತ್ತೆ ಮಾಡಿದ್ದರಿಂದಾಗಿ ಜನನಿಟ್ಟುಸಿರು ಬಿಟ್ಟಿದ್ದರು.

ಕಳೆದ ಆರು ತಿಂಗಳ ಹಿಂದೆ ಉದಯಗಿರಿ ಪೊಲೀಸ್ ಠಾಣೆಯ ಮೇಲೆ ಕಲ್ಲುತೂರಾಟ ಪ್ರಕರಣ ನಡೆದಾಗ ಜನರಿಗೆ ಪೊಲೀಸರನ್ನು ಕಂಡರೆ ಭಯ ಇಲ್ಲವೇನೋ ಎಂಬಂತಹ ವಾತಾವರಣ ನಿರ್ಮಾಣವಾಗಿತ್ತಾದರೂ ಪೊಲೀಸರು ಕೈಗೊಂಡ ಕಠಿಣ ಕ್ರಮಗಳಿಂದಾಗಿ ಕೆಲವರು ಜೈಲು ಸೇರಿದ್ದರು. ನಂತರ, ವರುಣ ಕೆರೆ ಸಮೀಪದ ಲಾಡ್ಜ್ ಬಳಿ ಕ್ಯಾತಮಾರನಹಳ್ಳಿಯ ರೌಡಿ ಶೀಟರ್ ಕಾರ್ತಿಕ್‌ನನ್ನು ಭೀಕರವಾಗಿ ಹತ್ಯೆ ಮಾಡಲಾಯಿತು. ಈ ಘಟನೆಯಿಂದ ಮೈಸೂರು ರೌಡಿಗಳ ಚಟುವಟಿಕೆ ಪ್ರದೇಶವಾಯಿತೆ ಎಂದು ಬೊಟ್ಟು ಮಾಡಿ ತೋರಿಸುವಂತಾಯಿತು.

ಇದನ್ನು ಓದಿ : ಮೈಸೂರು ದಸರಾಗೆ ಗೊಂಬೆ ಬಲೂನ್‌ ಮಾರಲು ಬಂದಿದ್ದ ಬಾಲಕಿ ಶವವಾಗಿ ಪತ್ತೆ

ಇದಕ್ಕೆ ಉದಾಹರಣೆ ಎಂಬಂತೆ ಕಳೆದ ವಾರ ವಸ್ತುಪ್ರದರ್ಶನ ಪ್ರಾಧಿಕಾರದ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದ ಮುಂಭಾಗವೇ ಕ್ಯಾತ ಮಾರನಹಳ್ಳಿಯ ಗಿಲ್ಕಿ ವೆಂಕಟೇಶ್‌ನನ್ನು ಹಾಡಹಗಲೇ ಬರ್ಬರವಾಗಿ ಹತ್ಯೆ ಮಾಡಲಾಯಿತು. ಈ ಘಟನೆ ಮೈಸೂರಿಗರನ್ನು ಆತಂಕಕ್ಕೆ ದೂಡಿದೆ. ಹಾಗಾಗಿ ಪೊಲೀಸರು ಪುಡಿ ರೌಡಿಗಳ ಹೆಡೆಮುರಿ ಕಟ್ಟಬೇಕಿದೆ. ಪೊಲೀಸ್ ಇಲಾಖೆ ಮನಸ್ಸು ಮಾಡಿದರೆ ರೌಡಿಗಳ ಉಪಟಳ ನಿಯಂತ್ರಣ ಮಾಡಬಹುದು. ಪೊಲೀಸರು ಈ ಪ್ರಕರಣಗಳನ್ನು ಗಂಭೀರವಾಗಿ ತೆಗೆದು ಕೊಂಡು ಗಸ್ತುಗಳನ್ನು ಹೆಚ್ಚಿಸಿದ್ದರೆ ದಸರಾ ಮಹೋತ್ಸವದಲ್ಲಿ ಹೊಟ್ಟೆಪಾಡಿಗಾಗಿ ಆಟಿಕೆ ವಸ್ತುಗಳನ್ನು ಮಾರಾಟ ಮಾಡಲು ಬಂದಿದ್ದ ಕುಟುಂಬದ ಮುಗ್ಧ ಬಾಲಕಿ ಸೈಕೋ ಪಾತಕಿಗೆ ಬಲಿಯಾಗುತ್ತಿರಲಿಲ್ಲವೇನೋ.

ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ ಮತ್ತು ಹತ್ಯೆ ಪ್ರಕರಣವು ಮೈಸೂರು ಅಷ್ಟೇನು ಸುರಕ್ಷಿತವಲ್ಲ ಎಂಬುದನ್ನು ತೋರಿಸುತ್ತಿದೆ. ಮೈಸೂರಿಗೆ ಬರುವವರಿಗೆ ರಕ್ಷಣೆ ಇಲ್ಲದೆ ಹೋದರೆ ದೊಡ್ಡ ಆಪತ್ತು ಎದುರಾಗುತ್ತದೆ ಎಂಬುದಕ್ಕೆ ಈ ಘಟನೆ ಜೀವಂತ ಸಾಕ್ಷಿಯಾಗಿದೆ. ದಸರಾ ಮಹೋತ್ಸವದ ದಿನಗಳಲ್ಲಿ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುವ ಕಾರಣ ಹೊಟ್ಟೆಪಾಡಿಗೆ ಆಟಿಕೆ ವಸ್ತುಗಳನ್ನು ಮಾರಾಟ ಮಾಡಲು ಉತ್ತರ ಕರ್ನಾಟಕ, ಪಶ್ಚಿಮ ಬಂಗಾಳ, ಬಿಹಾರ, ತಮಿಳು ನಾಡು ಮೊದಲಾದ ಕಡೆಗಳಿಂದ ಸಾವಿ ರಾರು ಜನ ಮೈಸೂರಿಗೆ ಬರುತ್ತಾರೆ.

ಬಂದವರೆಲ್ಲರೂ ಬಾಡಿಗೆ ಮನೆ ಮಾಡಿಕೊಂಡು ಇರುವಷ್ಟು ಶಕ್ತರಲ್ಲ. ಹಾಗಾಗಿ ದೊಡ್ಡಕೆರೆ ಮೈದಾನ, ಪುರಭವನ, ಕುಪ್ಪಣ್ಣ ಪಾರ್ಕ್, ಇಟ್ಟಿಗೆಗೂಡು, ಜೆ.ಕೆ.ಮೈದಾನ, ರೈಲ್ವೆ ನಿಲ್ದಾಣ, ಕೆ.ಆರ್.ಆಸ್ಪತ್ರೆಯ ಆಸುಪಾಸಿನಲ್ಲಿ ತಾತ್ಕಾಲಿಕ ಶೆಡ್‌ಗಳನ್ನು ಹಾಕಿಕೊಂಡು ವಾಸಿಸುತ್ತಾರೆ.

ಇದನ್ನು ಓದಿ: ಮೈಸೂರಲ್ಲಿ 24 ಗಂಟೆ ಅವಧಿಯಲ್ಲಿ ರೇಪ್‌ ಅಂಡ್‌ 2 ಮರ್ಡರ್‌ ; ಪೊಲೀಸ್‌ ಆಯುಕ್ತೆ ಸೀಮಾ ಲಾಟ್ಕರ್‌ ಹೇಳಿದ್ದೇನು.?

ಹೊಟ್ಟೆಪಾಡಿಗೆ ಬರುವ ಈ ಜನರಿಗೆ ತಾತ್ಕಾಲಿಕ ವಾಸ್ತವ್ಯ ಸ್ಥಳವನ್ನು ಕಲ್ಪಿಸಿ ಕೊಡಲು ಜನಪ್ರತಿನಿಧಿಗಳಾಗಲೀ ಅಥವಾ ಅಧಿಕಾರಿಗಳಾಗಲೀ ಯೋಚನೆಯನ್ನೇ ಮಾಡಿಲ್ಲ. ಒಂದು ವೇಳೆ ಅಽಕಾರಿಗಳು ಮನಸ್ಸು ಮಾಡಿದರೆ ಹೊಟ್ಟೆಪಾಡಿಗೆ ಬರುವ ಜನರಿಗೆ ಆಯಕಟ್ಟಿನ ಸ್ಥಳಗಳಲ್ಲಿ ತಾತ್ಕಾಲಿಕ ಟೆಂಟ್‌ಗಳನ್ನು ನಿರ್ಮಿಸಿಕೊಡ ಬಹುದಾಗಿತ್ತು. ಆದರೆ, ಅಧಿಕಾರಿಗಳ ಉದಾಸೀನ ಮನೋಭಾವ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ದಾರಿ ಮಾಡಿ ಕೊಟ್ಟಿದೆ. ದಸರಾ ಮುಗಿದು ಹದಿನೈದು ದಿನ ಕಳೆದರೂ ಮಧ್ಯರಾತ್ರಿಯವರೆಗೂ ಪ್ರವಾಸಿಗರು ಅಡ್ಡಾಡುತ್ತಿರುತ್ತಾರೆ. ಹೊಟ್ಟೆಪಾಡಿಗಾಗಿ ವ್ಯಾಪಾರ ಮಾಡುವ ಜನರು ಅರಮನೆ ಸುತ್ತಮುತ್ತಲ ಪ್ರದೇಶಗಳಲ್ಲಿ ಕಾಲ ಕಳೆಯುತ್ತಾರೆಂದು ಗೊತ್ತಿದ್ದರೂ ಗಮನ ಹರಿಸದೆ ಹೋದದ್ದು ಮುಗ್ಧ ಬಾಲಕಿಯ ದಾರುಣ ಸಾವಿಗೆ ಕಾರಣವಾಯಿತೇನೋ ಎನಿಸುತ್ತದೆ. ಪೊಲೀಸರಿಗೆ ಜವಾಬ್ದಾರಿ ಇಲ್ಲವೆಂದು ಹೇಳಲಾಗದು. ಆದರೆ, ದಸರಾ ಸಂದರ್ಭದಲ್ಲಿ ಗಸ್ತುಗಳನ್ನು ಹೆಚ್ಚಿಸುವುದರೊಂದಿಗೆ ಹೊರಗಿನವರಿಗೆ ಒಂದಿಷ್ಟು ರಕ್ಷಣೆ ಕೊಡಬೇಕು ಎಂಬುದನ್ನು ಮನಗಾಣಬೇಕಿತ್ತು ಎನ್ನುವ ಭಾವನೆ ಸಾರ್ವಜನಿಕರಲ್ಲಿದೆ. ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಎಚ್ಚೆತ್ತುಕೊಳ್ಳಬೇಕಾಗಿದೆ. ಹೊಟ್ಟೆಪಾಡಿಗಾಗಿ ಹೊರಗಿನಿಂದ ಬಂದು ವ್ಯಾಪಾರ ಮಾಡುವವರ ವಿವರವನ್ನು ಪಡೆದುಕೊಂಡು ಅವರಿಗೆ ರಕ್ಷಣೆ ನೀಡುವ ಕೆಲಸ ಮಾಡ ಬೇಕಾಗಿದೆ. ಅರಮನೆ ಸುತ್ತಲ ಪ್ರದೇಶಗಳಲ್ಲಿ ರಾತ್ರಿ ಗಸ್ತುವಾಹನ ಸಂಚರಿಸುವಂತೆ ಮಾಡಿ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದರೆ ಅಂತಹವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸುವ ಕೆಲಸ ಮಾಡಿದರೆ ಇಂತಹ ಕೃತ್ಯ ತಪ್ಪಿಸಬಹುದು

” ರಾಜ್ಯ ಸರ್ಕಾರ ಕೂಡ ಮೈಸೂರಿನಲ್ಲೇ ಆಗಲಿ, ರಾಜ್ಯದ ಯಾವುದೇ ಕಡೆಗಳಲ್ಲಿ ವ್ಯಾಪಾರಕ್ಕೆಂದು ಬಂದು ಅಲ್ಲಲ್ಲಿ ತಂಗುವ ಜನರ ಸುರಕ್ಷತೆಗೆ ನಿಯಮಗಳನ್ನು ರೂಪಿಸಲು ಮುಂದಾಗುವುದು ಒಳಿತು. ರಾಜ್ಯದ ನಾನಾ ಕಡೆಗಳಲ್ಲಿ ದೊಡ್ಡ ದೊಡ್ಡ ಜಾತ್ರೆಗಳು ನಡೆಯುವ ಕಾರಣ ಆಟಿಕೆ ವಸ್ತುಗಳನ್ನು ಮಾರಾಟ ಮಾಡುವ ಜನರ ಸುರಕ್ಷತೆಗಾಗಿ ಪೊಲೀಸ್ ಇಲಾಖೆ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕಿದೆ.”

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ಇಂಡಿಗೋ ವಿಮಾನ ಹಾರಾಟದಲ್ಲಿ ವ್ಯತ್ಯಯ ಬೆನ್ನಲ್ಲೇ ಪೈಲಟ್‌ಗಳ ರಜಾ ನಿಯಮ ಸಡಿಲಿಸಿದ ಡಿಜಿಸಿಎ

ನವದೆಹಲಿ: ದೇಶಾದ್ಯಂತ ಇಂಡಿಗೋ ವಿಮಾನದ ಹಾರಾಟದಲ್ಲಿ ಭಾರೀ ವ್ಯತ್ಯಯ ಉಂಟಾದ ಬೆನ್ನಲ್ಲೇ ಕೇಂದ್ರ ನಾಗರಿಕ ವಿಮಾನಯಾನ ನಿರ್ದೇಶನಾಲಯ ಪೈಲಟ್‌ಗಳ ರಜಾ…

38 mins ago

ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ: ಸತೀಶ್‌ ಜಾರಕಿಹೊಳಿ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ…

2 hours ago

ಶಾಲಾ ಪಠ್ಯದಲ್ಲಿ ಭಗವದ್ಗೀತೆ ಬೋಧನೆ: ಕೇಂದ್ರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ಗೆ ಎಚ್‌ಡಿಕೆ ಪತ್ರ

ನವದೆಹಲಿ: ಕಾಲಾತೀತ, ಮೌಲ್ಯಾಧರಿತ ಆದರ್ಶಗಳನ್ನು ಒಳಗೊಂಡಿರುವ ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು…

3 hours ago

ಸೋಲು, ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ: ತಹಶೀಲ್ದಾರ್‌ ಶಿವಕುಮಾರ್‌ ಕಾಸ್ನೂರು

ನಂಜನಗೂಡು: ಸೋಲು, ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ತಹಶೀಲ್ದಾರ್‌ ಶಿವಕುಮಾರ್‌ ಕಾಸ್ನೂರು ಹೇಳಿದರು. ನಂಜನಗೂಡು ನಗರದ ಕಾಲೇಜೊಂದರಲ್ಲಿ ಆಯೋಜಿಸಿದ್ದ…

3 hours ago

ಮಂಡ್ಯ ಭಾಗದ ರೈತರ ಅಭಿವೃದ್ಧಿಗೆ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯದ ಸ್ಥಾಪನೆ: ಎನ್ ಚಲುವರಾಯಸ್ವಾಮಿ

ಮಂಡ್ಯ: ಮಂಡ್ಯ, ಮೈಸೂರು, ಕೊಡಗು, ಚಾಮರಾಜನಗರ ಭಾಗದ ರೈತರನ್ನು ಆರ್ಥಿಕವಾಗಿ ಅಭಿವೃದ್ಧಿ ಮಾಡಲು ಮಂಡ್ಯದ ವಿ.ಸಿಫಾರಂನಲ್ಲಿ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾನಿಲಯವನ್ನು…

3 hours ago

ಬಿಜೆಪಿ ಶಾಶ್ವತವಾಗಿ ವಿಪಕ್ಷದಲ್ಲಿರುತ್ತದೆ ಎಂದ ಸಚಿವ ಎಂ.ಬಿ.ಪಾಟೀಲ್‌

ಬೆಂಗಳೂರು: ಆರ್‌.ಅಶೋಕ್‌ ಅವರನ್ನು ವಿಪಕ್ಷ ನಾಯಕನ ಸ್ಥಾನದಿಂದ ಇಳಿಸದೇ ಹೋದರೆ ಬಿಜೆಪಿ ಶಾಶ್ವತವಾಗಿ ವಿಪಕ್ಷದಲ್ಲಿ ಇರುತ್ತದೆ ಎಂದು ಸಚಿವ ಎಂ.ಬಿ.ಪಾಟೀಲ್‌…

3 hours ago