ಸಂಪಾದಕೀಯ

‘ತಂಗಳಾನ್’ಗೆ ‘ಕೆಜಿಎಫ್’ ಹಿನ್ನೆಲೆಯ ಕಥೆ, ಪ್ರೇಕ್ಷಕರನ್ನು ತಲುಪಲು ‘ಕಾಂತಾರ ಸ್ಫೂರ್ತಿ

– ವೈಡ್ ಆಂಗಲ್, 
ಬಾ.ನಾ.ಸುಬ್ರಹ್ಮಣ್ಯ

ನಟರು ಕೇಳುವ ಭಾರೀ ಸಂಭಾವನೆ ಮತ್ತು ಚಿತ್ರೀಕರಣ ದಿನಗಳಲ್ಲಿ ಅವರ ಬೇಡಿಕೆಗಳು ಎಲ್ಲ ಭಾಷಾ ಚಿತ್ರರಂಗಗಳಲ್ಲೂ ಚಿತ್ರ ನಿರ್ಮಾಪಕರನ್ನು ಕಂಗೆಡಿಸಿದ್ದಂತೂ ಹೌದು. ಚಿತ್ರಮಂದಿರಗಳು ಗಮನ ನೀಡುವ ಬದಲು, ಒಟಿಟಿ, ಇತರ ಡಿಜಿಟಲ್ ಹಕ್ಕುಗಳು, ಟಿವಿ ಪ್ರಸಾರಕ್ಕೆ ಸಿಗುವ ರಾಯಧನ ಇವೇ ಮೊದಲಾದವುಗಳು ಬಹುತೇಕ ನಿರ್ಮಾಪಕರ ಗಮನ; ಇಲ್ಲವೇ ಹಾಗೆ ಯೋಚಿಸುವಂತೆ ಮಾಡುವ ವಾತಾವರಣ.

ಕಳೆದ ವಾರ ತಮಿಳು ಚಿತ್ರೋದ್ಯಮದಲ್ಲಾಗುತ್ತಿರುವ ಬೆಳವಣಿಗೆಗಳ ಕುರಿತಂತೆ ಹೇಳಲಾಗಿತ್ತು. ತಮಿಳು ಚಿತ್ರ ನಿರ್ಮಾಪಕರ ಮಂಡಳಿ ನವೆಂಬರ್ ಒಂದರಿಂದ ಚಿತ್ರೀಕರಣವನ್ನು ಸ್ಥಗಿತಗೊಳಿಸುವ ನಿರ್ಧಾರ ಮಾಡಿದೆ. ಇದಕ್ಕೆ ಕಲಾವಿದರ ಸಂಘ ತಕರಾರೆತ್ತಿದೆ. ಚಿತ್ರೀಕರಣ ಸ್ಥಗಿತವಾದರೆ, ಇಲ್ಲಿ ಕೆಲಸ ಮಾಡುವ ಸಾವಿರಾರು ಮಂದಿ ಕಾರ್ಮಿಕರಿಗೆ, ತಂತ್ರಜ್ಞರಿಗೆ ತೊಂದರೆಯಾ ಗುತ್ತದೆ. ಇಂತಹ ನಿರ್ಧಾರ ತೆಗೆದುಕೊಳ್ಳುವ ಮೊದಲು ಇತರ ಸಂಘಟನೆಗಳ ಜೊತೆ ಚರ್ಚಿಸಬೇಕಾಗಿತ್ತು ಎನ್ನುವುದು ಅಲ್ಲಿನ ಕಲಾವಿದರ ಸಂಘದ ಆಕ್ಷೇಪ.

ಮುಂದಿನ ವಾರ ತೆರೆಗೆ ಬರಲಿರುವ ತಮಿಳು ಚಿತ್ರ ‘ತಂಗಳಾನ್’ ಪ್ರಚಾರಾರ್ಥವಾಗಿ ಆ ಚಿತ್ರದ ನಿರ್ದೇಶಕ, ನಿರ್ಮಾಪಕ ಪ.ರಂಜಿತ್, ನಟ ಏಕಮ್, ನಟಿ ಮಾಳವಿಕಾ ಮೋಹನನ್, ಹಾಲಿವುಡ್ ನಟ ಡೇನಿಯಲ್ ಮುಂತಾದವರು ಮಾಧ್ಯಮದ ಮುಂದೆ ಬಂದಿದ್ದರು. ಕನ್ನಡದ ಎರಡು ಚಿತ್ರಗಳು ಈ ಚಿತ್ರಕ್ಕೆ ಎರಡು ರೀತಿಯಲ್ಲಿ ಸ್ಫೂರ್ತಿ ನೀಡಿರುವುದು ಗಮನಾರ್ಹ. ಇಲ್ಲಿನ ಕಥೆಗಳನ್ನು ಬೆಳ್ಳಿತೆರೆಗೆ ತರುವುದರಲ್ಲಿ ತಮಿಳು ಚಿತ್ರರಂಗ ಮುಂದೆ. ಕ್ಯಾಪ್ಟನ್ ಗೋಪಿನಾಥ್ ಜೀವನ ಕಥೆ ‘ಸೂರ‌ ಪೋಟ್ಟು’ ಆಗಿ ತೆರೆಗೆ ಬಂದಿತ್ತು.

ನಿರ್ದೇಶಕರ ಪ್ರಕಾರ ‘ತಂಗಳಾನ್ ‘ಕೋಲಾರ ಚಿನ್ನದ ಗಣಿಯ ಹಿನ್ನೆಲೆಯ ಕಥೆ. ಬ್ರಿಟಿಷರ ಆಳ್ವಿಕೆಯ ದಿನಗಳಲ್ಲಿ ನಡೆದ ಪ್ರಸಂಗಗಳು, ಅದರ ಹಿನ್ನೆಲೆ, ಅಲ್ಲಿನ ನಂಬಿಕೆ, ಆಚರಣೆಗಳು, ಜಾನಪದ ಹಿನ್ನೆಲೆ ಎಲ್ಲವೂ ಈ ಚಿತ್ರದಲ್ಲಿವೆ. ಕೆಜಿಎಫ್ ಹಿನ್ನೆಲೆಯ ಕಥೆಯ ಈ ಚಿತ್ರಕ್ಕೆ ರಂಜಿತ್, ಕನ್ನಡದ ಕೆಜಿಎಫ್ ಬರುವುದಕ್ಕೆ ಮೊದಲೇ ಸಿದ್ಧತೆ ನಡೆಸಿದ್ದರಂತೆ ಕನ್ನಡದಲ್ಲಿ ಕೆಜಿಎಫ್ ಚಿತ್ರ ತಯಾರಾಗುವ ಸುದ್ದಿ ತಿಳಿದ ನಂತರ ಆ ಚಿತ್ರ ತೆರೆಕಾಣುವವರೆಗೆ ಕಾದು, ಅದಕ್ಕೂ ತಮ್ಮ ಚಿತ್ರದ ಕಥೆಗೂ ಯಾವುದೇ ಸಂಬಂಧ ಇಲ್ಲ ಎನ್ನುವುದನ್ನು ಮನಗಂಡು, ‘ತಂಗಳಾನ್’ ಯೋಜನೆ ಮುಂದುವರಿಸಿದರು. ಅದರ ಸಹನಿರ್ಮಾಪಕರೂ ಆಗಿರುವ ನಿರ್ದೇಶಕ ರಂಜಿತ್‌ಗೆ ಚಿತ್ರದ ಶೀರ್ಷಿಕಾ ಪಾತ್ರಧಾರಿ ವಿಕ್ರಂ ಒತ್ತಾಸೆಯಾಗಿ ನಿಂತರು.

ವಿಕ್ರಂ ಅವರು ಈ ಪಾತ್ರಕ್ಕಾಗಿ ಆರು ತಿಂಗಳ ತಯಾರಿ ನಡೆಸಿದರಂತೆ. ‘ಚಿತ್ರಕ್ಕಾಗಿ ತುಂಬಾ ತೂಕ ಕಳೆದುಕೊಂಡೆ. ದೈಹಿಕವಾಗಿ ಬದಲಾಗುವುದಕ್ಕಿಂತ ಮಾನಸಿಕವಾಗಿ ಬದಲಾಗುವುದು ಬಹಳ ಕಷ್ಟವಾಗಿತ್ತು. ಪ್ರತಿ ದಿನ ನಾಲೈದು ಗಂಟೆಗಳ ಕಾಲ ಮೇಕಪ್ ಹಾಕಿಕೊಳ್ಳಬೇಕಿತ್ತು. ಈ ಚಿತ್ರ ‘ಕೆಜಿಎಫ್’ಗಿಂತ ಬಹಳ ವಿಭಿನ್ನವಾದ ಚಿತ್ರ. ಬರೀ ಜಾನ‌ ಅಷ್ಟೇ ಅಲ್ಲ, ಒಟ್ಟಾರೆ ಕಲ್ಪನೆಯೇ ಬೇರೆ. ಇಲ್ಲಿ ಜಾತಿಪದ್ಧತಿ, ಅಸ್ಪೃಶ್ಯತೆ, ದಬ್ಬಾಳಿಕೆ ಎಲ್ಲದರ ಬಗ್ಗೆಯೂ ಹೇಳಲಾಗಿದೆ. ಚಿತ್ರದ ಪ್ರಮುಖ ವಿಷಯವೆಂದರೆ ಅದು ಹುಡುಕಾಟ. ಇಲ್ಲಿ ನನ್ನ ಪಾತ್ರ ಒಂದು ಹುಡುಕಾಟ ನಡೆಸಿದರೆ, ಮಾಳವಿಕಾ ಪಾತ್ರ ಇನ್ನೊಂದರ ಹುಡುಕಾಟದಲ್ಲಿ ಇರುತ್ತದೆ. ಇವೆಲ್ಲವನ್ನೂ ಚಿನ್ನದ ಹುಡುಕಾಟದ ನೆಪದಲ್ಲಿ ಹೇಳಲಾಗುತ್ತದೆ. ಹಾಗಾಗಿ, ಇದು ಯಾವುದೋ ಒಂದು ಭಾಗ, ಭಾಷೆ ಅಥವಾ ಪ್ರಾಂತ್ಯಕ್ಕೆ ಮಾತ್ರ ಸೀಮಿತವಲ್ಲ. ಇದೊಂದು ಯೂನಿವರ್ಸಲ್ ಆದ ಚಿತ್ರ. ಈ ಚಿತ್ರದಲ್ಲಿ ನಟಿಸುವುದು ಎಷ್ಟು ಭಯವಾಗಿತ್ತೋ, ಅಷ್ಟೇ ಖುಷಿಯ ವಿಷಯವೂ ಆಗಿತ್ತು. ಈ ಚಿತ್ರದ ನೂರು ಭಾಗಗಳು ಬಂದರೂ ನಾನು ನಟಿಸುವುದಕ್ಕೆ ತಯಾರು ಎನ್ನುತ್ತಾರೆ ಅವರು. ಚಿತ್ರದಕಥೆ ಕೆಜಿಎಫ್ ಹಿನ್ನೆಲೆಯದಾದರೆ, ಇಂತಹದೊಂದು ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಮಾಡುವುದಕ್ಕೆ ರಿಶಬ್ ಶೆಟ್ಟಿ ನಿರ್ದೇಶಿಸಿ, ‘ಕಾಂತಾರ’ ದೊಡ್ಡ ಸ್ಫೂರ್ತಿ ಎನ್ನುತ್ತಾರೆ ವಿಕ್ರಂ, ‘ನಾವು ಈ ಚಿತ್ರದ ಚಿತ್ರೀಕರಣ ಮಾಡುವಾಗ ‘ಕಾಂತಾರ’ ಬಿಡುಗಡೆಯಾಯಿತು. ಈ ಚಿತ್ರವನ್ನು ನಾವು ಹೊರಜಗತ್ತಿಗೆ ಹೇಗೆ ತೆಗೆದುಕೊಂಡು ಹೋಗಬೇಕು ಎಂದು ಯೋಚಿಸುತ್ತಿದ್ದಾಗ, ‘ಕಾಂತಾರ’ ದಾರಿ ತೋರಿಸಿತು. ಮಂಗಳೂರಿನ ಕಥೆಯೊಂದು ಜಾಗತಿಕ ಮಟ್ಟದಲ್ಲಿ ದೊಡ್ಡ ಯಶಸ್ವಿಯಾಗಿದ್ದು ನಮ್ಮೆಲ್ಲರಿಗೂ ಸ್ಫೂರ್ತಿಯಾಯಿತು. ಕಂಟೆಂಟ್ ಇದ್ದರೆ ಜಗತ್ತಿನ ಯಾವ ಮೂಲೆಗೆ ಬೇಕಾದರೂ ತೆಗೆದುಕೊಂಡು ಹೋಗಬಹುದು ಎಂದು ಆ ಚಿತ್ರ ತೋರಿಸಿತು’ ಇದು ಅವರ ಮಾತು.

ನಟನೊಬ್ಬನ ಶಿಸ್ತು, ವಿನಯವಂತಿಕೆ, ತಿಳಿವಳಿಕೆ ಎಲ್ಲವೂ ಅವರ ಮಾತುಗಳಲ್ಲಿದ್ದವು. ಅವರಿಗೆ ಎಲ್ಲ ರೀತಿಯ ಚಿತ್ರಗಳೂ ಇಷ್ಟ ನಮ್ಮಲ್ಲಿನ ಕೆಲವರಂತೆ ಮುಖ್ಯವಾಹಿನಿಯಲ್ಲಿ ಜನಪ್ರಿಯರಾಗುತ್ತಲೇ, ನೈಜ ಚಿತ್ರಗಳಿಗೆ ಬೆನ್ನು ಮಾಡುವ ಪ್ರವೃತ್ತಿ ಅಲ್ಲಿರಲಿಲ್ಲ. ‘ನನ್ನ ಜೀವನದಲ್ಲಿ ಪಿತಾಮಗನ್’ ನಂಥ ಪಾತ್ರ ಮಾಡಬಹುದು ಎಂದು ನಾನು ನಿರೀಕ್ಷಿಸಿರಲಿಲ್ಲ. ಆದರೆ, ನಾನು ಆ ತರಹದ ಪಾತ್ರ ಮಾಡಬಹುದು ಎಂದು ನಿರ್ದೇಶಕ ಬಾಲ ಕಲ್ಪಿಸಿಕೊಂಡು ನನ್ನಿಂದ ಆ ಪಾತ್ರ ಮಾಡಿಸಿದರು. ನಿರ್ದೇಶಕರು ಮತ್ತು ಬರಹಗಾರರು ನನ್ನನ್ನು ಬೇರೆಬೇರೆ ರೀತಿ ಕಲ್ಪಿಸಿಕೊಳ್ಳುವವರೆಗೂ ನಟನಾಗಿ ನಾನು ಹಲವು ಪ್ರಯೋಗಗಳನ್ನು ಮಾಡುತ್ತಲೇ ಇರುತ್ತೇನೆ. ಒಬ್ಬ ನಟನಾಗಿ ಎಲ್ಲ ತರಹದ ಪಾತ್ರಗಳನ್ನೂ ಮಾಡುವುದಕ್ಕೆ ಇಷ್ಟ ಇದೊಂದು ರಿಯಲಿಸ್ಟಿಕ್ ಚಿತ್ರವಾದರೂ, ಕಮರ್ಷಿಯಲ್ ಅಂಶಗಳು ಸಾಕಷ್ಟು ಇವೆ’ ಎನ್ನುವ ವಿಕ್ರಂ, ‘ಕಾಂತಾರ’ ಚಿತ್ರವನ್ನು ಇತರ ಪ್ರದೇಶಗಳಲ್ಲಿ ಸಬ್‌ ಟೈಟಲ್‌ಗಳ ಮೂಲಕವೇ ನೋಡಿದರು, ನಂತರ ಅದು ಡಬ್ ಆಯಿತು ಎನುವುದನ್ನು ಪ್ರಸ್ತಾಪಿಸುವ ಮೂಲಕ, ಚಿತ್ರಗಳನ್ನು ಡಬ್ ಮಾಡದೆಯೂ ಜನರಿಗೆ ತಲುಪಿಸಬಹುದು ಎನ್ನುವುದನ್ನು ಪರೋಕ್ಷವಾಗಿ ಹೇಳಿದರು.

ಕನ್ನಡ ಚಿತ್ರಗಳನ್ನು ಜನ ನೋಡುತ್ತಿಲ್ಲ, ಒಟಿಟಿ ಮತ್ತು ಇತರ ಡಿಜಿಟಲ್ ಮಾರುಕಟ್ಟೆಯಲ್ಲೂ ಕನ್ನಡ ಚಿತ್ರಗಳಿಗೆ ಬೇಡಿಕೆ ಇಲ್ಲ ಎನ್ನುವ ಮಾತು ಎಲ್ಲೆಡೆ ಕೇಳಿಬರುತ್ತಿದೆಯಷ್ಟೇ. ಭಾಗಶಃ ಇದಕ್ಕೆ ಪರಭಾಷಾ ಚಿತ್ರಗಳು ಕನ್ನಡದಲ್ಲಿ ಡಬ್ ಆಗುತ್ತಿರುವುದೂ ಕಾರಣ ಎನ್ನುತ್ತಾರೆ ಚಿತ್ರೋದ್ಯಮದ ಹಿರಿಯರು. ಕನ್ನಡದಲ್ಲಿ ಡಬ್ ಆಗಿ ಬಿಡುಗಡೆ ಆಗುವ ಚಿತ್ರಗಳನ್ನು ಚಿತ್ರಮಂದಿರಗಳಲ್ಲಿ ಹೋಗಿ ನೋಡುವವರ ಸಂಖ್ಯೆ ಕಡಿಮೆ ಇರಬಹುದು; ಆದರೆ ಒಟಿಟಿ ತಾಣ ಮತ್ತಿತರೆಡೆಗಳ ವ್ಯವಹಾರದ ವೇಳೆ, ಎಲ್ಲ ಭಾಷೆಗಳ ಡಬ್ಬಿಂಗ್ ಹಕ್ಕನ್ನೂ ಅವು ಪಡೆದಿರುತ್ತವೆ. ಶಾರೂಕ್ ಖಾನ್, ರಜನಿಕಾಂತ್, ಮಮ್ಮುಟ್ಟಿ, ಮೋಹನಲಾಲ್ ಸೇರಿದಂತೆ ದೇಶದ ವಿವಿಧ ಭಾಷೆಗಳ ಜನಪ್ರಿಯ ನಟರು ಅಭಿನಯಿಸಿದ ಚಿತ್ರಗಳ ಕನ್ನಡ ಡಬ್ ಆದ ಅವತರಣಿಕೆಗಳನ್ನು ಮನೆಯಲ್ಲೇ ಕುಳಿತು ನೋಡಲು ಸಾಧ್ಯ.

ಒಟಿಟಿ ತಾಣಗಳಿಗೋ ಕೋಟಿಗಟ್ಟಲೆ ರೂ. ಸುರಿಯದೆ, ಕೆಲವೇ ಲಕ್ಷಗಳ ರೂ.ಗಳಲ್ಲಿ ಕನ್ನಡ ಚಿತ್ರಗಳು ಲಭ್ಯ. ಹಾಗಾಗಿಯೇ ಅವುಗಳಿಗೆ ಕನ್ನಡ ಚಿತ್ರಗಳು, ವೆಬ್ ಸರಣಿಗಳು ಬೇಕಾಗಿಲ್ಲ. ಇತ್ತೀಚೆಗೆ ತಂಡವೊಂದು ವೆಬ್ ಸರಣಿ ನಿರ್ಮಿಸಿ ಹೆಸರಾಂತ ಒಟಿಟಿ ಸಂಸ್ಥೆಯ ಮೂಲಕ ಪ್ರಸಾರಕ್ಕೆ ಕೋರಲು ಹೋಗಿತ್ತು. ಸರಣಿಯನ್ನು ನೋಡಿದ ಅಲ್ಲಿನ ಮುಖ್ಯಸ್ಥರು, ‘ಇದನ್ನು ತೆಲುಗಿನಲ್ಲಿ ಡಬ್ ಮಾಡಿ ತನ್ನಿ, ಮುಂದಿನ ಭಾಗಗಳನ್ನು ತೆಲುಗಿನಲ್ಲಿಯೇ ಚಿತ್ರೀಕರಿಸಿ ಕೊಡಿ’ ಎಂದರಂತೆ!

ಕನ್ನಡವೆಂದರೆ ಅದೇಕೆ ಅಷ್ಟು ಅವಜ್ಞೆ ಎನ್ನುವುದು ಇನ್ನೂ ಅರ್ಥವಾಗದ ವಿಷಯ. ಇಲ್ಲಿನ ಸಂಘಟನೆಗಳೋ ಇಂತಹ ವಿಷಯಗಳ ಕುರಿತಂತೆ ಮಾತೂ ಆಡುತ್ತಿಲ್ಲ. ಡಬ್ಬಿಂಗ್‌ನಿಂದಾಗಿ, ಚಲನಚಿತ್ರಗಳಿಗೆ ಒಟಿಟಿ, ಟಿವಿ ಪ್ರಸಾರದ ಹಕ್ಕುಗಳಿಗೆ ಎರವಾಗುವುದು ಒಂದೆಡೆಯಾದರೆ, ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಸರಣಿಗಳಲ್ಲಿ ಈಗ ಡಬ್ಬಿಂಗ್ ಸರಣಿಗಳದು ಏರುಮುಖ. ವಾಹಿನಿಗಳಲ್ಲಿ ಡಬ್ಬಿಂಗ್ ಸರಣಿಗಳು, ಡಬ್ಬಿಂಗ್ ಚಿತ್ರಗಳು ಸಾಕಷ್ಟು ಸಂಖ್ಯೆಯಲ್ಲಿ ಪ್ರಸಾರ ಆಗುತ್ತಿವೆ. ಅವುಗಳಿಗೆ ಕೆಲಸ ಮಾಡಲು ತುದಿಗಾಲ ಮೇಲೆ ನಿಂತ ಮಂದಿಯೂ ಸಾಕಷ್ಟಿದ್ದಾರೆ.

ಹೆಸರಾಂತ ನಿರ್ದೇಶಕರು, ಗೀತರಚನೆಕಾರರು, ಸಂಭಾಷಣೆ ಬರೆಯುವವರು, ಕಂಠದಾನ ಕಲಾವಿದರು ಮುಂತಾದವರಿಗೆ ಡಬ್ಬಿಂಗ್ ಚಿತ್ರಗಳಿಗೆ ಕೆಲಸ ಮಾಡುವುದು ಹೊಸ ಆದಾಯದ ಮೂಲ. ಹಾಗಂತ ಎಲ್ಲರೂ ಅದನ್ನು ಒಪ್ಪಿಕೊಳ್ಳುತ್ತಿಲ್ಲ. ಹಿರಿಯ ನಿರ್ದೇಶಕ, ನಟ, ನಿರ್ಮಾಪಕ ಎಸ್.ನಾರಾಯಣ್ ಅವರಿಗೂ ಈ ಕೆಲಸ ಮಾಡಿಕೊಡಲು ಕೇಳಿದ್ದರಂತೆ. ಹಿಂದಿನಿಂದಲೂ ಡಬ್ಬಿಂಗ್ ವಿರೋಧಿ ಅವರು ‘ಡಬ್ಬಿಂಗ್ ಅವಕಾಶಗಳು ಬರುತ್ತಿವೆ. ನಾನು ಮಾಡುವುದಿಲ್ಲ. ನನ್ನ ಅನ್ನದ ತಟ್ಟೆಗೆ ಮಣ್ಣು ಹಾಕಿದವರ ಕೆಲಸ ಹೇಗೆ ಮಾಡಲಿ?’ ಎನ್ನುವುದು ಅವರ ಪ್ರಶ್ನೆ.

ಕನ್ನಡ ಚಿತ್ರೋದ್ಯಮದಲ್ಲಿ ವಾಣಿಜ್ಯ ಮಂಡಳಿ, ಕಲಾವಿದರ ಸಂಘ, ನಿರ್ಮಾಪಕರ ಸಂಘಗಳು ಈಗ ಸ್ವಂತ ಕಟ್ಟಡ ಹೊಂದಿವೆ. ಅವು ಉದ್ಯಮದ ಕುರಿತಂತೆ ಏನಾದರೂ ಮಾಡಬಹುದಲ್ಲ ಎನ್ನುವುದು ಈ ಕ್ಷೇತ್ರದ ಆಸಕ್ತರ ಪ್ರಶ್ನೆ. ಅವರದು ಅದಕ್ಕೆ ಮಾರ್ಮಿಕ ಉತ್ತರ ಹೀಗಿದೆ: ‘ನಾವು ಉದ್ಯಮ ಕೆಡವಿದ್ದೇವೆ, ಕಟ್ಟಡ ಕಟ್ಟಿಕೊಂಡಿದ್ದೇವೆ. ರಾಜ್‌ಕುಮಾರ್‌ ಅವರ ಜೊತೆಗೇ ಎಲ್ಲವೂ ಹೋಯಿತು.

‘ತಂಗಳಾನ್’ ಎನ್ನುವುದು ಆ ಚಿತ್ರದಲ್ಲಿನ ಪಾತ್ರದ ಹೆಸರು, ಒಂದು ಸಮುದಾಯದ ಹೆಸರೂ ಹೌದು. ಹಾಗೆಯೇ ನೇತಾರ ಎನ್ನುವ ಅರ್ಥವೂ ಇದೆಯಂತೆ. ಕನ್ನಡ ಚಿತ್ರಸಮುದಾಯಕ್ಕೊಬ್ಬ ತಂಗಳಾನ್ ಬೇಕಲ್ಲ?

ಕನ್ನಡವೆಂದರೆ ಅದೇಕೆ ಅಷ್ಟು ಅವಜ್ಞೆ ಎನ್ನುವುದು ಇನ್ನೂ ಅರ್ಥವಾಗದ ವಿಷಯ. ಇಲ್ಲಿನ ಸಂಘಟನೆಗಳೋ ಇಂತಹ ವಿಷಯಗಳ ಕುರಿತಂತೆ ಮಾತೂ ಆಡುತ್ತಿಲ್ಲ. ಡಬ್ಬಿಂಗ್‌ನಿಂದಾಗಿ, ಚಲನಚಿತ್ರಗಳಿಗೆ ಒಟಿಟಿ, ಟಿವಿ
ಪ್ರಸಾರದ ಹಕ್ಕುಗಳಿಗೆ ಎರವಾಗುವುದು ಒಂದೆಡೆಯಾದರೆ, ಕಿರುತೆರೆಯಲ್ಲಿ ಪ್ರಸಾರ ವಾಗುತ್ತಿರುವ ಸರಣಿಗಳಲ್ಲಿ ಈಗ ಡಬ್ಬಿಂಗ್ ಸರಣಿಗಳದು ಏರುಮುಖ. ವಾಹಿನಿಗಳಲ್ಲಿ ಡಬ್ಬಿಂಗ್ ಸರಣಿಗಳು, ಡಬ್ಬಿಂಗ್ ಚಿತ್ರಗಳು ಸಾಕಷ್ಟು ಸಂಖ್ಯೆಯಲ್ಲಿ ಪ್ರಸಾರ ಆಗುತ್ತಿವೆ. ಅವುಗಳಿಗೆ ಕೆಲಸ ಮಾಡಲು ತುದಿಗಾಲ ಮೇಲೆ ನಿಂತ ಮಂದಿಯೂ ಸಾಕಷ್ಟಿದ್ದಾರೆ.

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ಅರಮನೆ ಮುಂಭಾಗ ಹೀಲಿಯಂ ಸಿಲಿಂಡರ್ ಸ್ಪೋಟ : ಓರ್ವ ಸಾವು, ನಾಲ್ವರು ಗಂಭೀರ

ಮೈಸೂರು : ಪ್ರವಾಸಿಗರ ದಂಡೇ ನೆರೆಯುತ್ತಿದ್ದ ಸ್ಥಳದಲ್ಲೇ ಹೀಲಿಯಂ ಬಲೂನ್‌ಗಾಗಿ ಬಳಸುತ್ತಿದ್ದ ಗ್ಯಾಸ್‌ ಸಿಲಿಂಡರ್‌ ಸ್ಫೋಟಗೊಂಡು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿ,…

4 hours ago

ರಸ್ತೆಯಲ್ಲಿ ರಾಗಿ ಒಕ್ಕಣೆ | ಮುಗುಚಿ ಬಿದ್ದ ಕಾರು ; ಓರ್ವ ಸಾವು

ಕೆ.ಆರ್.ಪೇಟೆ : ರಸ್ತೆಯಲ್ಲಿ ರಾಗಿ ಒಕ್ಕಣೆ ಮಾಡುತ್ತಿದ್ದ ಸಂದರ್ಭದಲ್ಲಿ ರಾಗಿಯ ಮೇಲೆ ಕಾರು ಚಲಿಸಿದಾಗ ಕಾರು ಮಗುಚಿ ಬಿದ್ದ ಪರಿಣಾಮ…

6 hours ago

ಕಾರು ಮುಖಾಮುಖಿ ಡಿಕ್ಕಿ : ಮೂವರಿಗೆ ಗಾಯ

ಮೈಸೂರು : ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ವಿಜಯನಗರದ ಕೊಡವ…

6 hours ago

ಮೈಸೂರು | ಜಿಲ್ಲೆಯಾದ್ಯಂತ ಕ್ರಿಸ್‌ಮಸ್‌ ಸಂಭ್ರಮಾಚರಣೆ

ಮೈಸೂರು : ಮೈಸೂರು ಜಿಲ್ಲೆಯಾದ್ಯಂತ ಕ್ರೈಸ್ತ ಭಾಂದವರು ಕ್ರಿಸ್‌ಮಸ್‌ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಿದರು. ಕ್ರಿಸ್‌ಮಸ್ ಹಿನ್ನೆಲೆಯಲ್ಲಿ ನಗರದ ಐತಿಹಾಸಿಕ…

6 hours ago

ಕೆ.ಆರ್.ಪೇಟೆ | ವೇತನದಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವಾಸ ಕಲ್ಪಿಸಿದ ಶಿಕ್ಷಕ

ಕೆ.ಆರ್.ಪೇಟೆ : ತಾಲ್ಲೂಕಿನ ತೆಂಡೇಕೆರೆ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಿ.ಎಸ್.ರಾಜು ಅವರು ತಮ್ಮ ಒಂದು ತಿಂಗಳ ವೇತನದಲ್ಲಿ…

7 hours ago

ತುರ್ತು ನಿರ್ಗಮನದ ಬಾಗಿಲು ಇಲ್ಲದಿದ್ದರೆ ಎಫ್‌ಸಿ ಇಲ್ಲ ; ಸಚಿವ ರಾಮಲಿಂಗಾ ರೆಡ್ಡಿ ಖಡಕ್ ಸೂಚನೆ

ಬೆಂಗಳೂರು : ಸಾರ್ವಜನಿಕ ಸಾರಿಗೆಗಾಗಿ ಬಳಸುವ ವಾಹನಗಳಿಗೆ ತುರ್ತು ನಿರ್ಗಮನದ ಬಾಗಿಲುಗಳು ಇಲ್ಲದೆ ಇದ್ದರೆ ಭೌತಿಕ ಕ್ಷಮತೆಯ ದೃಢೀಕರಣ ಪತ್ರ…

7 hours ago