ವೈಯಕ್ತಿಕ ವಿಚಾರ ಕೆದಕುತ್ತಿರುವ ಟ್ರಂಪ್
ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಯಾಗಿರುವ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಆಡಳಿತಾ ರೂಢ ಡೆಮಾಕ್ರಟಿಕ್ ಪಕ್ಷದ ಸ್ಪಽಯಾಗಲಿರುವ ಕಮಲಾದೇವಿ ಹ್ಯಾರಿಸ್ ವಿರುದ್ಧ ವೈಯಕ್ತಿಕ ದಾಳಿಗೆ ಇಳಿದಿದ್ದಾರೆ. ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅಧ್ಯಕ್ಷೀಯ ಚುನಾವಣಾ ಸ್ಪರ್ಧೆಯಿಂದ ಹಿಂದೆ ಸರಿದು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಪಕ್ಷದ ಅಭ್ಯರ್ಥಿಯಾಗಲಿದ್ದಾರೆ ಎಂದು ಪ್ರಕಟಿಸಿದ ಗಳಿಗೆಯಿಂದ ಟ್ರಂಪ್ ಹತಾಶರಂತೆ ನಡೆದುಕೊಳ್ಳತೊಡಗಿದ್ದಾರೆ.
ಬೈಡನ್ ಸ್ಪರ್ಧೆಯಲ್ಲಿದ್ದಾಗ ಜಯ ತಮ್ಮದೇ ಎಂಬ ಧೈರ್ಯದಿಂದ ಪ್ರಚಾರಕ್ಕಿಳಿದಿದ್ದ ಟ್ರಂಪ್ ಅವರು ಕಮಲಾ ಹ್ಯಾರಿಸ್ ಸ್ಪರ್ಧೆಗೆ ಇಳಿದ ನಂತರ ಅವರ ಹುಟ್ಟು, ನಂಬಿರುವ ಸಿದ್ಧಾಂತ ಹುಡುಕಲು ಆರಂಭಿಸಿದಂತೆ ಕಾಣುತ್ತದೆ. ಅವರಷ್ಟೇ ಅಲ್ಲ ರಿಪಬ್ಲಿಕನ್ ಪಕ್ಷದ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಜೆ. ಡಿ. ವ್ಯಾನ್ಸ್ ಕೂಡ ಕಮಲಾ ಹ್ಯಾರಿಸ್ ಅವರ ವೈಯಕ್ತಿಕ ವಿಚಾರಗಳನ್ನು ಕೆಣಕುತ್ತಿದ್ದಾರೆ. ಸ್ವಂತ ಮಕ್ಕಳಿಲ್ಲದವರು ಮತ್ತು ಆ ಅನುಭವ ಇಲ್ಲದವರು ಇತ್ತೀಚಿನ ದಿನಗಳಲ್ಲಿ ಅಮೆರಿಕದಲ್ಲಿ ಉನ್ನತ ಸ್ಥಾನಗಳನ್ನೇರುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ, ಕಮಲಾ ಹ್ಯಾರಿಸ್‌ಗೂ ಸ್ವಂತ ಮಕ್ಕಳಿಲ್ಲ. ಅವರು ಸಾಕಿರುವುದು ಪತಿ ಡಗ್ಲಸ್ ಎಮ್‌ಹಫ್ ಅವರ ಮೊದಲ ಪತ್ನಿಯ ಮಕ್ಕಳು, ಅವರಿಗೇನು ತಿಳಿಯುತ್ತದೆ ಕುಟುಂಬ ಸಂಸ್ಕೃತಿ ಎಂದು ಮೊದಲು ದಾಳಿ ಮಾಡಿದವರು ಟ್ರಂಪ್ ಅವರ ಉಪಾಧ್ಯಕ್ಷ ಅಭ್ಯರ್ಥಿಯಾಗಿರುವ ಜೆ. ಡಿ. ವ್ಯಾನ್ಸ್ ಅವರು. ಆ ನಂತರ ಇದೀಗ ಟ್ರಂಪ್ ಅವರು ಕಮಲಾ ಹ್ಯಾರಿಸ್ ಅವರ ಜನಾಂಗ ಯಾವುದು? ಅವರು ಕಪ್ಪು ಜನಾಂಗದವರು ಎಂದು ಗುರುತಿಸಿಕೊಳ್ಳಲು ಹೇಗೆ ಸಾಧ್ಯ? ಎಂಬ ಪ್ರಶ್ನೆಯನ್ನು ಎತ್ತಿದ್ದಾರೆ. ಕಪ್ಪು ಜನಾಂಗಕ್ಕೆ ಸೇರಿದ ಮಹಿಳಾ ಪತ್ರಕರ್ತೆಯರ ಸಂಘದ ಸಂದರ್ಶನ ಕಾರ್ಯಕ್ರಮದಲ್ಲಿ ಅವರು ಈ ಪ್ರಶ್ನೆ ಎತ್ತಿದ್ದಾರೆ. ನನಗೆ ತಿಳಿದಂತೆ ಅವರು ಭಾರತೀಯರು, ಭಾರತ ಸಂಸ್ಕೃತಿಯನ್ನು ಅನುಸರಿಸುತ್ತ ಬಂದವರು (ಪರೋಕ್ಷವಾಗಿ ಹಿಂದೂ ಸಂಪ್ರದಾಯ ಪಾಲಿಸುವವರು ಎಂದು ಸೂಚಿಸುವುದು ಅವರ ಉದ್ದೇಶ). ಈಗ ಅವರು ತಾವು ಕಪ್ಪು ಜನಾಂಗದವರೆಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಇದು ಹೇಗೆ ಸಾಧ್ಯ? ಎಂದು ಅವರು ಆಶ್ಚರ್ಯ ವ್ಯಕ್ತಮಾಡಿದ್ದಾರೆ.
ಕಮಲಾ ಅವರ ತಾಯಿ ಭಾರತದ ತಮಿಳುನಾಡು ಮೂಲದವರು. ಅಮೆರಿಕಕ್ಕೆ ವಲಸೆ ಬಂದು ಕ್ಯಾನ್ಸರ್ ಸಂಶೋಧನೆಯಲ್ಲಿ ತೊಡಗಿದ್ದ ವಿಜ್ಞಾನಿ. ತಂದೆ ಡೊನಾಲ್ಡ್ ಹ್ಯಾರಿಸ್ ಜಮೈಕಾದಿಂದ ವಲಸೆ ಬಂದು ಸ್ಟಾಂಫರ್ಡ್ ವಿಶ್ವ ವಿದ್ಯಾಲಯದಲ್ಲಿ ಕೆಮಿಸ್ಟ್ರಿ ಪ್ರೊಫೆಸರ್ ಆಗಿದ್ದವರು ಎಂಬುದು ವಾಸ್ತವ ವಿಚಾರ. ಕಮಲಾ ಅವರನ್ನು ಅವರ ತಾಯಿ ಭಾರತೀಯ ಸಂಸ್ಕೃತಿ ಹಿನ್ನೆಲೆ ಯಲ್ಲಿ ಬೆಳೆಸುತ್ತಾರೆ. ಆದರೆ ಅವರ ಒಡನಾಟ ಮತ್ತು ಹೋರಾಟ ಇದ್ದದ್ದು ಕಪ್ಪು ಜನರ ಮಧ್ಯೆಯೇ. ಇಡ್ಲಿ, ದೋಸೆಯನ್ನು ಅವರು ಇಷ್ಟಪಟ್ಟು ತಿನ್ನುತ್ತಾರೆ ಎನ್ನುವುದನ್ನು ಬಿಟ್ಟರೆ ಅವರೆಂದೂ ಭಾರತೀಯತೆಯನ್ನು ವಿಜೃಂಭಿಸಿದ್ದಿಲ್ಲ. ಕಮಲಾ ಅವರು ಹಿಂದೆಯೇ ಬ್ಲಾಕ್ ಬ್ಯಾಪ್ಟಿಸ್ಟ್ ಚರ್ಚ್‌ಗೆ (ಪ್ರೊಟೆಸ್ಟಂಟ್ ಕ್ರ್ರಿಶ್ಚಿಯನ್) ಸೇರುತ್ತಾರೆ. ಈ ವಿಚಾರ ಟ್ರಂಪ್ ಅವರಿಗೆ ತಿಳಿಯದಿರುವುದೇನಲ್ಲ. ಆದರೂ ಚುನಾವಣೆಯಲ್ಲಿ ಅವರ ಬಗ್ಗೆ ಜನರಲ್ಲಿ ಸಂಶಯ ಹುಟ್ಟಿಸಲು ಕಮಲಾ ಮೊದಲಿನಿಂದಲೂ ಭಾರತೀಯ ಸಂಸ್ಕೃತಿಯನ್ನು ಅನುಸರಿಸುತ್ತಿದ್ದಾರೆ ಎಂಬ ವಾದವನ್ನು ಜನರ ಮುಂದಿಟ್ಟಿದ್ದಾರೆ.
ಕಮಲಾ ಅವರು ಅಧ್ಯಕ್ಷ ಅಭ್ಯರ್ಥಿಯಾಗುವ ಸಾಧ್ಯತೆ ಬಹಿರಂಗ ವಾಗುತ್ತಿದ್ದಂತೆಯೇ ಅಮೆರಿಕದ ಕಪ್ಪು ಜನಾಂಗದ ಸಂಘಟನೆಗಳು ಅವರಿಗೆ ಬೆಂಬಲ ಸೂಚಿಸಿದ್ದು, ಅವರ ಪರವಾಗಿ ಕೆಲಸ ಮಾಡಲು ಸಹಸ್ರಾರು ಕಪ್ಪು ಜನರು ಮುಂದೆ ಬಂದಿರುವುದು ಟ್ರಂಪ್ ಅವರು ಜನಾಂಗ ಪ್ರಶ್ನೆ ಎತ್ತಲು ಮೂಲ ಕಾರಣ. ಕಮಲಾ ಭಾರತೀಯರು, ಕಪ್ಪು ಜನಾಂಗವನ್ನು ಅವರು ಪ್ರತಿನಿಽಸಲಾರರು ಎಂಬ ಸಂಶಯದ ಹುಳುವನ್ನು ಕಪ್ಪುಜನರ ತಲೆಯಲ್ಲಿ ಬಿಡುವುದಷ್ಟೆ ಟ್ರಂಪ್ ಅವರ ಉದ್ದೇಶ. ಆ ಮೂಲಕ ಅಮೆರಿಕದ ಕಪ್ಪು ಜನರು ಒಗ್ಗಟ್ಟಾಗಿ ಕಮಲಾ ಅವರಿಗೆ ಮತ ನೀಡುವುದನ್ನು ತಪ್ಪಿಸುವುದು ಅವರ ಗುರಿ. ಕಮಲಾ ಅವರು ಎಡಪಂಥೀಯರು, ತೀವ್ರ ಉದಾರವಾದಿಗಳು. ಅವರು ಅಧ್ಯಕ್ಷರಾದರೆ ಅಮೆರಿಕ ನಾಶವಾಗುತ್ತದೆ ಎನ್ನುವುದು ಟ್ರಂಪ್ ಅವರ ಆರೋಪ. ಆದರೆ ಈ ಯಾವುದೇ ಆರೋಪಗಳಿಂದ ಜನಾಭಿಪ್ರಾಯ ಬದಲಾದಂತೆ ಕಾಣುತ್ತಿಲ್ಲ. ಸ್ವತಃ ವಕೀಲರು, ಮಾಜಿ ಸೆನೆಟರ್ ಆದ ಕಮಲಾ ಅವರು ಯಹೂದಿ ಜನಾಂಗಕ್ಕೆ ಸೇರಿದ ಡಗ್ಲಸ್ ಎಮ್‌ಹಪ್ ಎಂಬ ವಕೀಲರನ್ನು ಮದುವೆಯಾಗಿದ್ದಾರೆ. ಯಹೂದಿಯಾಗಿ ಅವರು ಕಮಲಾ ಅವರಿಗೆ ಬೆಂಬಲವಾಗಿ ನಿಂತಿರುವುದು ಅಮೆರಿಕದ ಪ್ರಬಲ ಯಹೂದಿ ಸಮುದಾಯದ ಬೆಂಬಲವನ್ನು ಸ್ವಲ್ಪವಾದರೂ ಗಳಿಸಬಹುದೆಂದು ನಿರೀಕ್ಷಿಸಲಾಗಿದೆ.
ಹಾಗೆ ನೋಡಿದರೆ ಬೈಡನ್ ಅವರು ಅಭ್ಯರ್ಥಿಯಾಗಿದ್ದಾಗ ಟ್ರಂಪ್ ಅವರು ಜನಾಭಿಪ್ರಾಯಗಳ ಸಮೀಕ್ಷೆಯಲ್ಲಿ ಮೇಲುಗೈ ಸಾಽಸಿದ್ದರು. ಕಮಲಾ ಅಭ್ಯರ್ಥಿಯಾಗಬಹುದಾದ ಸಾಧ್ಯತೆ ಕಂಡುಬಂದ ನಂತರ ಅಂತರ ಕಡಿಮೆಯಾಗಿದೆ. ೪೩-೪೯ ಇದ್ದದ್ದು ಕ್ರಮೇಣ ಕಮಲಾ ಮುಂದೆ ಹೆಜ್ಜೆ ಇಡುತ್ತಿರುವ ಸೂಚನೆಗಳಿವೆ. ಡೆಮಾಕ್ರಟಿಕ್ ಪಕ್ಷದ ರಾಷ್ಟ್ರೀಯ ಸಭೆ ಈಗಾಗಲೇ ನಡೆಯುತ್ತಿದ್ದು, ಅವರನ್ನು ಅಽಕೃತ ಅಭ್ಯರ್ಥಿಯನ್ನಾಗಿ ಘೋಷಿಸುವ ಸಾಧ್ಯತೆ ಇದೆ. ಅಧಿಕೃತ ಸ್ಪರ್ಧಿಯಾಗಲು ಬೇಕಿರುವಷ್ಟು ಪ್ರತಿನಿಽಗಳ ಬೆಂಬಲ ಈಗಾಗಲೇ ಅವರಿಗೆ ಸಿಕ್ಕಿದೆ. ಪಕ್ಷದ ಯಾರಾದರೂ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಬಯಸಿದರೆ ಅರ್ಜಿ ಸಲ್ಲಿಸಲು ಆಗಸ್ಟ್ ೫ರವರೆಗೆ ಸಮಯವಿದೆ. ಇದುವರೆಗೆ ಯಾರೂ ಕಮಲಾ ಹ್ಯಾರಿಸ್ ಅವರನ್ನು ಅಭ್ಯರ್ಥಿ ಮಾಡುವುದನ್ನು ಅಧಿಕೃತವಾಗಿ ವಿರೋಧಿಸಿಲ್ಲ.
ಚುನಾವಣೆಯಲ್ಲಿ ಸ್ಪರ್ಧಿಸಲು ಅಪಾರ ಹಣಬೇಕು. ಬೈಡನ್‌ಗೆ ಬರಬಹುದಾದ ನೆರವೆಲ್ಲವೂ ಅವರಿಗೆ ಕೊಟ್ಟರೂ ಟ್ರಂಪ್ ಅವರ ಸವಾಲನ್ನು ಎದುರಿಸುವುದು ಕಷ್ಟ ಎಂಬ ಅಭಿಪ್ರಾಯ ಮೊದಲು ಇತ್ತು. ಆದರೆ ಕಮಲಾ ಅವರು ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಎಂಬುದು ಬಹಿರಂಗವಾದ ಕೆಲವೇ ದಿನಗಳಲ್ಲಿ ಅವರಿಗೆ ಬಂದ ಹಣ ೨೦೦ ಮಿಲಿಯನ್ ಡಾಲರ್. ಅದರಲ್ಲಿ ಮೊದಲ ಬಾರಿಗೆ ದೇಣಿಗೆ ನೀಡಿದರೂ ಶೇ. ೬೦ರಷ್ಟು ಇದ್ದರು. ಇದನ್ನು ನೋಡಿದರೆ ಕಮಲಾ ಅವರು ಜನರಲ್ಲಿ ಹೊಸ ರೀತಿಯ ಸಂಚಲನ ಮೂಡಿಸಿದ್ದಾರೆ ಅನಿಸುತ್ತದೆ.
ರಿಪಬ್ಲಿಕನ್ನರು ಸಂಪ್ರದಾಯವಾದಿಗಳು. ರಾಷ್ಟ್ರೀಯವಾದಿಗಳು. ಅವರ ನೀತಿಗಳು ಸಂಪೂರ್ಣವಾಗಿ ಬಲಪಂಥೀಯ ಮೌಲ್ಯಗಳನ್ನು ಪ್ರತಿನಿಽಸು ತ್ತಿದ್ದವು. ಅಮೆರಿಕದಲ್ಲಿ ಡೆಮಾಕ್ರಟಿಕ್ ಪಕ್ಷ ಅಂತೆಯೇ ರಿಪಬ್ಲಿಕನ್ ಪಕ್ಷದವರೂ ಇಸ್ರೇಲ್ ಪರ ಒಲವಿರುವವರು. ಅದರಲ್ಲಿಯೂ ರಿಪಬ್ಲಿಕನ್ ಪಕ್ಷ ಒಂದು ಕೈ ಹೆಚ್ಚು. ಇತ್ತೀಚೆಗೆ ಇಸ್ರೇಲ್‌ನ ಪ್ರಧಾನಿ ಬೆಂಜಮಿನ್ ನೆತಾನ್ಯಹು ಅಮೆರಿಕದ ಕಾಂಗ್ರೆಸ್‌ನಲ್ಲಿ ಭಾಷಣ ಮಾಡಿದರು. ಅವರ ಭಾಷಣಕ್ಕೆ ರಿಪಬ್ಲಿಕನ್ ಪಕ್ಷದ ಸದಸ್ಯರು ಹತ್ತಾರು ಬಾರಿ ಎದ್ದು ನಿಂತು, ಚಪ್ಪಾಳೆ ಹೊಡೆದರು. ಜಯಕಾರ ಕೂಗಿದರು. ನೆತಾನ್ಯಹು ಹೇಳಿದ ಸುಳ್ಳುಗಳಿಗೂ ಜಯಕಾರ ಹಾಕಿದ್ದನ್ನು ನೋಡಿದರೆ ಗಾಜಾದಲ್ಲಿ ಆಗುತ್ತಿರುವ ಹತ್ಯಾಕಾಂಡವನ್ನು ಅವರು ಸಮರ್ಥಿಸುತ್ತಿರುವಂತೆ ಕಾಣಿಸುತ್ತಿತ್ತು. ನೆತಾನ್ಯಹು ಅವರನ್ನು ಕಮಲಾ ಹ್ಯಾರಿಸ್ ಹೇಗೆ ತಹಬಂದಿಗೆ ತರುತ್ತಾರೆ ಎಂಬ ಬಗ್ಗೆ ಹಲವರಲ್ಲಿ ಅನುಮಾನವಿತ್ತು. ಆದರೆ ನೆತಾನ್ಯಹು ಅವರ ಜೊತೆ ಮಾತುಕತೆ ನಡೆದಾಗ ಅವರು ಹೇಳಿದ್ದನ್ನೆಲ್ಲಾ ಕೇಳಿಸಿಕೊಂಡು ಮೊದಲು ಯುದ್ಧ ನಿಲ್ಲಬೇಕು, ನಿಮ್ಮ ಮೇಲೆ ಕಣ್ಣಿಟ್ಟಿರುತ್ತೇನೆ ಎಂದು ಹೇಳಿರುವುದು ‘ಇವರು ಒಳ್ಳೆಯ ಆಡಳಿತಗಾರರಾಗುತ್ತಾರೆ’ ಎಂಬ ಅಭಿಪ್ರಾಯ ಜನರಲ್ಲಿ ಮೂಡಲು ಕಾರಣವಾಗಿದೆ.
ಬೈಡನ್ ಕಾಲದಲ್ಲಿ ವಲಸೆ ವಿಪರೀತವಾಗಿತ್ತು. ಅದನ್ನು ತಾವು ತಪ್ಪಿಸುವು ದಾಗಿ ಹೇಳುತ್ತಿರುವ ಟ್ರಂಪ್ ಮೆಕ್ಸಿಕೋ ಗಡಿಯಲ್ಲಿ ತಡೆಗೋಡೆ ಕಟ್ಟುವುದಾಗಿ ಮತ್ತೆ ಘೋಷಿಸಿದ್ದಾರೆ. ಗರ್ಭಪಾತದ ಅಧಿಕಾರವನ್ನು ಆಯಾ ರಾಜ್ಯಗಳಿಗೆ ಕೊಡುವುದಾಗಿ ಮತ್ತೆ ಹೇಳುತ್ತಿದ್ದಾರೆ. ನ್ಯಾಟೊದಿಂದ ಹೊರಬರುವುದಾಗಿ ಹಿಂದೆಯೇ ಘೋಷಿಸಿರುವ ಟ್ರಂಪ್, ಉಕ್ರೇನ್ ಮತ್ತು ಗಾಜಾ ಯುದ್ಧ ನಿಲ್ಲಿಸುವುದಾಗಿ ಹೇಳುತ್ತಿದ್ದಾರೆ. ಆರೋಗ್ಯ, ಶಿಕ್ಷಣ ಕ್ಷೇತ್ರಗಳಲ್ಲಿ ಆಮೂಲಾಗ್ರ ಬದಲಾವಣೆ ತರುವುದಾಗಿ ಟ್ರಂಪ್ ಹೇಳುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಕಮಲಾ ಹ್ಯಾರಿಸ್ ಅವರು ಒಬಾಮಾ ಕಾಲದ ಹೆಲ್ತ್ ಸ್ಕೀಮನ್ನು ಮುಂದುವರಿಸುವುದಾಗಿ ಮತ್ತು ಗನ್ ಲೈಸೆನ್ಸ್ ನೀಡಿಕೆಯಲ್ಲಿ ನಿಯಂತ್ರಣ ತರುವುದಾಗಿ ಘೋಷಿಸಿದ್ದಾರೆ. ಡೆಮಾಕ್ರಟಿಕ್ ಪಕ್ಷದ ನೀತಿಗಳ ಮುಖಾಂತರ ದೇಶವನ್ನು ಮೇಲಕ್ಕೆತ್ತುವ ಯೋಜನೆ ತಮ್ಮದೆಂದು ಹೇಳಿದ್ದಾರೆ. ಅಽಕಾರಕ್ಕೆ ಬಂದರೆ ಅದೇ ದಿನ ಗರ್ಭಪಾತ ಕಾನೂನನ್ನು ಬದಲಾಯಿಸಿ ಅದರ ಹಕ್ಕನ್ನು ಮಹಿಳೆಯರಿಗೇ ನೀಡುವುದಾಗಿ ಘೋಷಿಸಿದ್ದಾರೆ. ಸತ್ಯ, ನ್ಯಾಯ, ಮತ್ತು ಹಿಂಸೆ ಮುಕ್ತ ಸಮಾಜ ನಿರ್ಮಿಸುವ ಕನಸು ತಮ್ಮದೆಂದು ಅವರು ಹೇಳುತ್ತಾ ಬಂದಿರುವುದು ಎಷ್ಟರ ಮಟ್ಟಿಗೆ ಅಮೆರಿಕದ ಜನರನ್ನು ಮತಗಟ್ಟೆಗಳತ್ತ ಸೆಳೆಯುತ್ತದೆ ಎನ್ನುವುದನ್ನು ಕಾದು ನೋಡಬೇಕು. ಅಮೆರಿಕ ಎಷ್ಟೇ ಮುಂದುವರಿದ ದೇಶವಾದರೂ ಬಿಳಿಯರಲ್ಲಿ ವರ್ಣಪೂರ್ವಗ್ರಹ ಇದೆ. ಅಮೆರಿಕದಲ್ಲಿ ವಲಸೆ ದೊಡ್ಡ ಸಮಸ್ಯೆ. ದೇಶದಲ್ಲಿ ವಲಸಿಗರು ಮುಂದೆ ಬಂದಿರುವುದನ್ನು ಬಿಳಿಯರು ಮತ್ತು ಸಂಪ್ರದಾಯವಾದಿಗಳು ಸಹಿಸುತ್ತಿಲ್ಲ. ರಿಪಬ್ಲಿಕನ್ ಪಕ್ಷದ ದೊಡ್ಡ ಪ್ರಮಾಣದ ಬೆಂಬಲಿಗರು ಇವರೇ ಆಗಿದ್ದಾರೆ. ಕಮಲಾ ಹ್ಯಾರಿಸ್ ಅವರಿಗೆ ಇವರ ಬೆಂಬಲ ಸಿಗುವ ಸಾಧ್ಯತೆ ಇಲ್ಲ. ಆದರೆ ಇತರರೆಲ್ಲಾ ಒಗ್ಗಟ್ಟಾದರೆ ಮಾತ್ರ ಕಮಲಾ ಹ್ಯಾರಿಸ್ ಗೆಲ್ಲಲು ಸಾಧ್ಯ. ಬರಾಕ್ ಒಬಾಮಾ, ಜೋ ಬೈಡನ್ ಅವರು ಅಧ್ಯಕ್ಷರಾಗಿ ಆಯ್ಕೆಯಾದುದು ಇಂಥ ಒಗ್ಗಟ್ಟಿನಿಂದ. ಕಮಲಾ ಹ್ಯಾರಿಸ್ ಅವರ ಪರವಾಗಿ ಇಂಥ ಒಗ್ಗಟ್ಟು ಕಾಣುವುದೇ ಎನ್ನುವುದನ್ನು ಚುನಾವಣೆ ಫಲಿತಾಂಶವೇ ಬಹಿರಂಗಮಾಡಬಲ್ಲುದು.
ಮೈಸೂರು : ಆಧುನಿಕ ಕಾಲಕ್ಕೆ ತಕ್ಕಂತೆ ಮನ್ರೇಗಾ ಹೆಸರನ್ನು ಕೇಂದ್ರ ಸರ್ಕಾರ ಬದಲಾಯಿಸಿದೆ. ಆದರೆ, ಕಾಂಗ್ರೆಸ್ ಮಾಡುತ್ತಿರುವ ಆರೋಪಕ್ಕೆ ಯಾವ…
ಬೆಳಗಾವಿ : ರಾಜ್ಯ ಸರ್ಕಾರ ರೈತ ಪರ ಸರಕಾರವಾಗಿದ್ದು, ಕಬ್ಬು ಬೆಳೆಯುವ ಪ್ರದೇಶದಲ್ಲಿ ಮಣ್ಣಿನ ಆರೋಗ್ಯ ಮತ್ತು ನೀರಿನ ಸಮಗ್ರ…
ಹೊಸದಿಲ್ಲಿ: ಮುಂಬರುವ ಐಸಿಸಿ ಟಿ-೨೦ ವಿಶ್ವಕಪ್‌ಗಾಗಿ ೧೫ ಸದಸ್ಯರ ಭಾರತ ತಂಡವನ್ನು ಪ್ರಕಟಿಸಲಾಗಿದೆ. ತಂಡವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಲಿದ್ದು, ಶುಭಮನ್…
ಹೊಸದಿಲ್ಲಿ : ಮೊಟ್ಟೆ ಸೇವೆನೆಗೆ ಸುರಕ್ಷಿತವಾಗಿದ್ದು ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕವಾಗುವ ಯಾವುದೇ ಅಂಶ ಪತ್ತೆ ಆಗಿಲ್ಲ ಎಂದು ಕೇಂದ್ರ ಆಹಾರ…
ಚಾಮರಾಜನಗರ : ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವಂತಹ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಕೈಗೊಳ್ಳುವಂತೆ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಜಲಶಕ್ತಿ ಮಂತ್ರಾಲಯದ…
ಮೈಸೂರು : ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಸಂಭ್ರಮಾಚರಣೆಗಾಗಿ ಪ್ರವಾಸಿಗರು, ಸ್ಥಳೀಯರಿಗೆ ಮನರಂಜನೆ ಒದಗಿಸಲು ಅರಮನೆ ಅಂಗಳದಲ್ಲಿ ಡಿ.೨೧ರಿಂದ ೩೧ರವರೆಗೆ…