ಸಂಪಾದಕೀಯ

ಹಿರಿಯರೊಡನೆ ನಡೆದುಕೊಳ್ಳಬೇಕಾದ ಪರಿ

ನೀವು ನಿಮಗಿಂತ ಹಿರಿಯರೊಂದಿಗೆ ಬಾಂಧವ್ಯದಿಂದಿದ್ದೀರಾ? ನಿಮಗೂ ಮತ್ತು ನಿಮ್ಮ ಹಿರಿಯರಿಗೂ ತಲೆಮಾರುಗಳ ವ್ಯತ್ಯಾಸವಿದ್ದರೂ, ಅವರ ಜೀವನ ಶೈಲಿಗೂ ನಮ್ಮ ಜೀವನ ಶೈಲಿಗೂ ಸಾಕಷ್ಟು ಅಂತರಗಳಿದ್ದರೂ ಅವರನ್ನು ಗೌರವಿಸುವುದು, ಇಳಿವಯಸ್ಸಿನಲ್ಲಿ ಅವರೊಂದಿಗೆ ಸಂತೋಷದ ಕ್ಷಣಗಳನ್ನು ಹಂಚಿಕೊಳ್ಳುವುದು ನಮ್ಮ ಕರ್ತವ್ಯ ಎಂಬುದನ್ನು ನಾವು ಮರೆಯುವಂತಿಲ್ಲ.

ಇತ್ತೀಚಿನ ದಿನಗಳಲ್ಲಿ ನಾವು ಗಮನಿಸಿರಬಹುದು. ಮಕ್ಕಳಲ್ಲಿ ಹಿರಿಯರನ್ನು ಗೌರವಿಸ ಬೇಕು, ಕೃತಜ್ಞರಾಗಿರುವ ಮೌಲ್ಯಗಳೇ ಕಣ್ಮರೆಯಾಗುತ್ತಿವೆ. ರಸ್ತೆಯಲ್ಲಿ ಹೋಗುವ ಮಗುವೊಂದು ಹಿರಿಯರನ್ನು ಕಂಡಾಗ ‘ಏ ಮುದುಕ, ಏ ಮುದುಕಿ’ ಎಂದು ಕೂಗಿದ ಎಷ್ಟೋ ನಿದರ್ಶನಗಳಿವೆ. ಅವರನ್ನು ಏಕವಚನದಲ್ಲಿ ಮಾತನಾಡಿಸಿದ ಸಾಕಷ್ಟು ಉದಾಹರಣಗಳಿವೆ. ಅಷ್ಟೇ ಏಕೆ ಮನೆಯಲ್ಲಿಯೇ ಅಜ್ಜ ಅಜ್ಜಿಯನ್ನು ಗೌರವಿಸದ ಮಕ್ಕಳನ್ನು ನೋಡಿದ್ದೇವೆ. ಮಕ್ಕಳಿಗೆ ಮೊದಲಿಗೆ ಹಿರಿಯರಿಗೆ ಗೌರವ ಸೂಚಿಸುವುದನ್ನು ಕಲಿಸುವುದು ಬಹಳ ಮುಖ್ಯ. ಮನೆಯಲ್ಲಿಯೂ ನಾವು ಹಿರಿಯರಿಗೆ ಗೌರವ ಸೂಚಿಸುಲು ಬಹಳಷ್ಟು ವಿಷಯಗಳಿವೆ. ಅವುಗಳ ಅರಿತು ಹಿರಿಯರನ್ನು ಗೌರವಿಸುತ್ತಾ ಸಾಗಿದರೆ ನಮ್ಮ ಮಕ್ಕಳೂ ಅದೇ ಮಾರ್ಗದಲ್ಲಿ ಸಾಗುತ್ತಾರೆ. ಹಿರಿಯರನ್ನು ಗೌರವಿಸುವುದು ನಮ್ಮ ಸಂಸ್ಕೃತಿಯಲ್ಲವೇ?

ಹಿರಿಯರನ್ನು ಆಗಾಗ್ಗೆ ಭೇಟಿ ಮಾಡುವುದು:

ನೀವು ನಿಮ್ಮ ಹಿರಿಯರನ್ನು ನಿಮ್ಮ ಹಳ್ಳಿಯ ಮನೆಗಳಲ್ಲಿ ಬಿಟ್ಟು ನಗರ ಹಾಗೂ ಇನ್ನಿತರ ಪ್ರದೇಶಗಳಲ್ಲಿ ವಾಸಿಸುತ್ತಿದ್ದರೆ. ಅನಿರೀಕ್ಷಿತ ಭೇಟಿಗಳನ್ನು ನೀಡುವುದು ಅಥವಾ ಪ್ರತಿ ವಾರಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ಅದೇ ಸಮಯಕ್ಕೆ ಭೇಟಿ ನೀಡಿ ಅವರನ್ನು ಮಾತನಾಡಿಸಿ ಅವರ ಆರೋಗ್ಯ ವಿಚಾರಸಬೇಕು. ಇದೂ ಕೂಡ ಹಿರಿಯರನ್ನು ಗೌರವಿಸಿದಂತೆಯೇ. ನಿಮ್ಮ ಆಗಮನದ ನಿರೀಕ್ಷೆಯಲ್ಲಿರುವ ಹಿರಿಯರ ನಿರೀಕ್ಷೆಯನ್ನು ಸುಳ್ಳು ಮಾಡದೆ ನೀವು ಭೇಟಿ ನೀಡಿದ್ದೇ ಆದಲ್ಲಿ ಅದು ಅವರಿಗೆ ತೃಪ್ತಿ ನೀಡುತ್ತದೆ. ಅವರ ಭಾವನೆಯನ್ನೂ ಗೌರವಿಸಿ ದಂತಾಗುತ್ತದೆ. ಈ ಭೇಟಿಯ ವೇಳೆ ಕೊನೆಯ ಭೇಟಿಯಲ್ಲಿ ಮಾತನಾಡಿದ ವಿಷಯಗಳ ಮೆಲುಕು ಹಾಕಿದರಂತೂ ಹಿರಿಯರಿಗೆ ಅದಕ್ಕಿಂತ ಸಂತೋಷ ಮತ್ತೊಂದಿಲ್ಲ.

ಹಿರಿಯರ ಸಲಹೆ ಕೇಳಿ ಪಾಲಿಸುವುದು:

ಹಿರಿಯರ ಅನುಭವದ ಮುಂದೆ ಕಿರಿಯರ ಜ್ಞಾನ ಶೂನ್ಯ ಎಂಬ ಮಾತೊಂದಿದೆ. ಸಾಮಾನ್ಯವಾಗಿ ಹಿರಿಯರಿಗೆ ಕಿರಿಯರು ನಮ್ಮ ಮಾತುಗಳನ್ನು ಕೇಳಬೇಕು ಎಂಬ ಸಣ್ಣ ಸ್ವಾರ್ಥವಿರುವುದಂತೂ ನಿಜ. ಹಾಗಂತ ಅವರೇನೂ ಕೆಟ್ಟದ್ದನ್ನು ಹೇಳುವುದಿಲ್ಲ. ಒಳ್ಳೆಯ ಸಲಹೆಗಳನ್ನೇ ನೀಡುತ್ತಾರೆ. ಆದ್ದರಿಂದ ಹಿರಿಯರೊಂದಿಗೆ ಸಂವಹನ ನಡೆಸುವಾಗ ಅವರ ಸಲಹೆಗಳನ್ನು ಕೇಳುವುದು, ಪ್ರಶ್ನೆಗಳನ್ನು ಕೇಳಿ ಅವರಿಂದ ಉತ್ತರಗಳನ್ನು ನಿರೀಕ್ಷಿಸುವುದು. ಅವರು ಹೇಳಿದ ಕೆಲಸಗಳನ್ನು ಮಾಡಿಕೊಂಡುವುದು. ಹೀಗೆ ಮಾಡುವುದರಿಂದ ನಾವು ಹಿರಿಯರ ಮಾತುಗಳನ್ನು ಹಾಗೂ ಅವರ ಅನುಭವಗಳನ್ನು ಗೌರವಿಸಿದಂತಾಗುತ್ತದೆ.

ಹಿರಿಯರೊಂದಿಗೆ ಊಟ ಮಾಡುವುದು:
ಹಿರಿಯರೊಂದಿಗೆ ಆಹಾರ ಸೇವನೆ ಮಾಡುವುದು ಹಿರಿಯರಿಗೆ ಅತ್ಯಂತ ಸಂತೋಷ ನೀಡುತ್ತದೆ. ಮನೆಯ ಮೂರು ನಾಲ್ಕು ತಲೆಮಾರಿನವರು ಒಟ್ಟಿಗೆ ಊಟಕ್ಕೆ ಕುಳಿತುಕೊಂಡರೆ ಅಲ್ಲಿ ಹಿರಿಯರಿಗೆ ವಿಶೇಷ ಅವಕಾಶ ನೀಡಬೇಕು. ಮೊದಲು ಅವರ ಮಾತುಗಳನ್ನು ಆಲಿಸಬೇಕು. ಹಂಚಿಕೊಂಡು ಊಟ ಮಾಡಬೇಕು. ಇದೂ ಕೂಡ ಒಂದು ರೀತಿಯಲ್ಲಿ ಹಿರಿಯರನ್ನು ಗೌರವಿಸಿದಂತೆಯೇ ಸರಿ. ಮತ್ತು ಅವರೊಂದಿಗೆ ಬೆರೆತು ಬದುಕುವ ರೀತಿ ಊಟದ ಸಮಯದಲ್ಲಿ ಬಂಧವು ಗಟ್ಟಿಗೊಳ್ಳುವ ಜತೆಗೆ ಹಿರಿಯ ಜೀವಗಳೊಂದಿಗೆ ಸಮಯ ಕಳೆಯಲು ಇದೊಂದು ಸುವರ್ಣ ಅವಕಾಶವೆಂದೇ ನಾವು ಭಾವಿಸಬೇಕು.

ಈ ವಿಚಾರಗಳು ಸಣ್ಣ ಪುಟ್ಟವೆನಿಸಿದರೂ ಇವುಗಳು ಹಿರಿಯರನ್ನು ಹೆಚ್ಚು ತೃಪ್ತಿಪಡಿಸುತ್ತವೆ. ಇಂತಹ ಹತ್ತಾರು ಸಣ್ಣಪುಟ್ಟ ವಿಚಾರಗಳಿಂದ ನಾವು ಹಿರಿಯರನು ಗೌರವಿಸಬಹುದು. ಅವರ ಕೆಲಸಗಳಿಗೆ ಸಹಾಯ ಮಾಡುವುದಾಗಲಿ, ಅವರೊಂದಿಗೆ ವಾಕಿಂಗ್ ಹೋಗುವುದಾಗಲಿ, ಹಬ್ಬ, ಹುಟ್ಟು ಹಬ್ಬ ಅಥವಾ ಇನ್ನಿತ್ತರ ಸಂತೋಷದ ಕ್ಷಣಗಳನ್ನು ಅವರೊಂದಿಗೆ ಹಂಚಿಕೊಳ್ಳುವುದರಿಂದಲೂ ನಾವು ಅವರನ್ನು ಗೌರವಿಸಬಹುದು. ಹಿರಿಯರನ್ನು ಗೌರವಿಸುವ ಕಲೆಯನು ನಾವೂ ಕಲಿಯುವ ಜತೆಗೆ ಮಕ್ಕಳಿಗೆ ಕಲಿಸುವುದು ಅವಶ್ಯ.

ಹಿರಿಯರೊಂದಿಗೆ ಮಾತನಾಡಿ
ಹಿರಿಯರೊಂದಿಗೆ ಕುಳಿತು ಒಂದಿಷ್ಟು ಸಮಯ ಮಾತನಾಡುವುದೂ ಕೂಡ ಅವರಿಗೆ ಗೌರವ ಸೂಚಿಸಿದಂತೆಯೇ. ಮನೆಯಲ್ಲಿ ಹಿರಿಯರು ಇದ್ದಾರೆ ಎಂದರೆ ನಿತ್ಯ ಅವರನ್ನು ಮಾತನಾಡಿಸಿ ಅವರ ಬೇಕು ಬೇಡಗಳನ್ನು ವಿಚಾರಿಸುವುದು. ಅವರ ಅಗತ್ಯಗಳನ್ನು ಪೂರೈಸುವುದೂ ಅವರಿಗೆ ಗೌರವ ಸೂಚಿಸಿದಂತೆ. ಬೇರೆಡೆ ನೆಲೆಸಿರುವ ಮಗ, ಮಗಳು, ಮೊಮ್ಮಕ್ಕಳ ಜತೆ ಮಾತನಾಡುವ ಬಯಕೆ ಎಲ್ಲ ಹಿರಿಯ ಜೀವಗಳಿಗೂ ಇರುತ್ತದೆ. ಆದ್ದರಿಂದ ಎಷ್ಟೇ ಒತ್ತಡವಿದ್ದರೂ ನಿತ್ಯ ಒಂದತ್ತು ನಿಮಿಷ ಬಿಡುವು ಮಾಡಿಕೊಂಡು ಹಿರಿಯೊಂದಿಗೆ ಮಾತನಾಡುವುದು ಅವರಿಗೆ ನಾವು ನೀಡುವ ಗೌರವ.

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಕುಡಿಯುವ ನೀರಿಗೆ ಅಭಾವ

ನಂಜನಗೂಡು: ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಕಪಿಲಾ ನದಿ ಪಕ್ಕದಲ್ಲೇ ಇದ್ದರೂ ಜನತೆಗೆ ಕುಡಿಯುವ ನೀರಿನ ಅಭಾವ ಎದುರಾಗಿದೆ. ಹಳ್ಳಿಗಳಿಗೆ ನದಿ…

43 mins ago

ರಾಜ್ಯದಲ್ಲಿ ಇನ್ನೂ ಒಂದು ವಾರಗಳ ಕಾಲ ಭಾರೀ ಮಳೆ

ಬೆಂಗಳೂರು: ರಾಜ್ಯದಲ್ಲಿ ಇನ್ನೂ ಒಂದು ವಾರಗಳ ಕಾಲ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪೂರ್ವವ ಮಧ್ಯ…

60 mins ago

ಓದುಗರ ಪತ್ರ: ಸರಗಳ್ಳತನಕ್ಕೆ ಕಡಿವಾಣ ಹಾಕಿ

ಇತ್ತೀಚೆಗೆ ಮೈಸೂರಿನಲ್ಲಿ ಸರಗಳ್ಳತನ ಪ್ರಕರಣಗಳು ವರದಿಯಾಗುತ್ತಿದ್ದು, ಮಹಿಳೆಯರು ಒಂಟಿಯಾಗಿ ರಸ್ತೆಯಲ್ಲಿ ಓಡಾಡಲು ಹೆದರುವಂತಾಗಿದೆ. ಎರಡು ದಿನಗಳ ಹಿಂದಷ್ಟೇ ನಮ್ಮ ಸಂಬಂಧಿಕರೊಬ್ಬರು…

1 hour ago

ಓದುಗರ ಪತ್ರ: ಬಿಗ್‌ಬಾಸ್ ಕಾರ್ಯಕ್ರಮ ನಿಲ್ಲಲಿ

ಕನ್ನಡದ ಖಾಸಗಿ ಚಾನೆಲ್‌ವೊಂದರಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್ ಸೀಸನ್-11 ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದು, ಸ್ಪರ್ಧಿಗಳು ನಿತ್ಯ ಜಗಳವಾಡುತ್ತಿರುವುದರಿಂದ ಕಾರ್ಯಕ್ರಮ ವೀಕ್ಷಿಸುವವರಿಗೆ ಕಿರಿಕಿರಿಯಾಗುತ್ತಿದೆ. ವಿವಿಧ…

1 hour ago

ಓದುಗರ ಪತ್ರ: ಪೊಲೀಸರಿಗೆ ಧನ್ಯವಾದಗಳು

ನಾಡಹಬ್ಬ ದಸರಾ ಮಹೋತ್ಸವದಲ್ಲಿ ಈ ಬಾರಿ ಜನ ಸಾಗರವೇ ಹರಿದು ಬಂದಿತ್ತು. ದಸರಾ ಅಂಗವಾಗಿ ಆಯೋಜಿಸಿದ್ದ ಯುವ ಸಂಭ್ರಮ, ಯುವ…

1 hour ago

ಓದುಗರ ಪತ್ರ: ಮುಷ್ಕರ ಮುಂದುವರಿದಿದೆ

ಸರ್ಕಾರವೇ ನಮ್ಮ ದೇವರಾಗಿದೆ ಮೇಲಾಧಿಕಾರಿಗಳ ಮೇಲೆ ಗೌರವವಿದೆ ಜನರ ಸಮಸ್ಯೆಗಳ ಅರಿವಿದೆ ಅವರಿಗಾದ ಅಡಚಣೆಗೆ ವಿಷಾದವಿದೆ ನಮಗೂ ಬದುಕಿದೆ. ನಮ್ಮದೂ…

1 hour ago