2025ರ ವರ್ಷಾಂತ್ಯದಲ್ಲಿ ಸಾಂಸ್ಕೃತಿಕ ನಗರಿ ಮೈಸೂರು ಘೋರ ದುರಂತಕ್ಕೆ ಸಾಕ್ಷಿಯಾದದ್ದು ಅತ್ಯಂತ ವಿಷಾದಕರ ಮತ್ತು ಆತಂಕಕಾರಿ ಸಂಗತಿ. ಹೊಟ್ಟೆ ಪಾಡಿಗಾಗಿ ಬಲೂನ್ ಮಾರಾಟಕ್ಕಾಗಿ ಉತ್ತರ ಪ್ರದೇಶದಿಂದ ಬಂದಿದ್ದ ಸಲೀಂ, ಬಲೂನ್‌ಗೆ ಬಿಸಿ ಗಾಳಿ ತುಂಬುವಾಗ ಹೀಲಿಯಂ ಗ್ಯಾಸ್ ಸಿಲಿಂಡರ್ ಸ್ಛೋಟ ಗೊಂಡು ಮೃತಪಟ್ಟಿದ್ದಲ್ಲದೆ, ಅಂಬಾ ವಿಲಾಸ ಅರಮನೆಯ ಆವರಣದಲ್ಲಿ ಏರ್ಪಡಿಸಿದ್ದ ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಬಂದಿದ್ದ ಇಬ್ಬರು ಮಹಿಳೆಯರೂ ಅಸು ನೀಗಿರುವುದು ಕರುಣಾಜನಕ ಘಟನೆ.
ಘಟನೆ ನಡೆದಾಗ ಮೊದಲು ಜನರಲ್ಲಿ ಭಯೋತ್ಪಾದನೆಯ ಆತಂಕ ಮೂಡಿಸಿತ್ತು. ಮೃತ ಬಲೂನ್ ಮಾರಾಟಗಾರನ ಹೆಸರು ಅಲ್ಪಸಂಖ್ಯಾತ ಸಮುದಾಯವನ್ನು ಬಿಂಬಿಸಿದ್ದು ಅದಕ್ಕೆ ಕಾರಣ. ಆದರೆ, ಪೊಲೀಸರ ಪ್ರಾಥಮಿಕ ತನಿಖೆಯಿಂದ ಆತ ಸಾಧಾರಣ ಬಲೂನ್ ಮಾರಾಟಗಾರ ಎಂಬುದು ಸಾಬೀತಾಯಿತು. ಇದು ಬಹಳ ಗಂಭೀರವಾಗಿ ಪರಿಗಣಿಸಬೇಕಾದ ವಿಚಾರ. ಇನ್ನು ಸಿಲಿಂಡರ್ ಸ್ಛೋಟದಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಇಬ್ಬರು ಮಹಿಳೆಯರು ಪ್ರಾಣ ತೆತ್ತಿದ್ದಾರೆ. ಮಕ್ಕಳು ಬಲೂನ್ ಹಿಡಿದು ಆಟ ಆಡುವಾಗ, ಅದು ಇದ್ದಕ್ಕಿದ್ದಂತೆ ಫಟ್ ಅಂತ ಒಡೆದು ಹೋದರೆ ಜನರು ಸಹಜವಾಗಿ ಸ್ವೀಕರಿಸುತ್ತಾರೆ. ಆದರೆ, ಆ ಬಲೂನ್‌ಗೆ ಗಾಳಿ ತುಂಬುವ ಕೆಲಸ ಎಂತಹ ಅಪಾಯಕಾರಿ ಎಂಬುದು ಈ ದುರಂತದಿಂದ ಸಾಮಾನ್ಯ ಜನರಿಗೂ ಅರ್ಥವಾಗಿದೆ. ಬಹುಶಃ ಆ ಬಲೂನ್ ಮಾರಾಟಗಾರರಿಗೂ ಈ ವೃತ್ತಿ ಮಾರಣಾಂತಿಕ ಎಂಬುದರ ಅರಿವು ಇರಲಿಲ್ಲ.
ಇದನ್ನು ಓದಿ: ಕ್ರೀಡಾಲೋಕದ ಸಿಹಿ-ಕಹಿ ಮೆಲುಕು
ಹೀಲಿಯಂ ಗ್ಯಾಸ್ ಸಿಲಿಂಡರ್‌ಗಳು ಈ ಅಲೆಮಾರಿ ಬಲೂನ್ ಮಾರಾಟಗಾರರಿಗೆ ಹೇಗೆ ಲಭ್ಯವಾಗುತ್ತವೆ ಎಂಬುದು ಬಹಿ ರಂಗಗೊಳ್ಳಬೇಕಿದೆ. ಇಂತಹ ಸಿಲಿಂಡರ್ ಇಟ್ಟುಕೊಳ್ಳುವುದು ಕಾನೂನು ಬಾಹಿ ರವೇ? ಅಥವಾ ಅದಕ್ಕೆ ಪರವಾನಗಿ ಇರಬೇಕೆ ಎಂಬ ಪ್ರಶ್ನೆಗಳಿಗೆ ಸಂಬಂಧ ಪಟ್ಟವರು ಉತ್ತರ ನೀಡಬೇಕಾಗಿದೆ. ಸಲೀಂ ಅಂತಹ ಬಲೂನ್ ಮಾರಾಟಗಾರರು ಇಡೀ ದೇಶದಲ್ಲಿ ಎಲ್ಲೆಲ್ಲಿ ಜಾತ್ರೆಗಳು, ಉತ್ಸವಗಳು, ದೊಡ್ಡ ಮಟ್ಟದ ಹಬ್ಬಗಳ ಆಚರಿಸಲ್ಪಡುತ್ತವೆಯೋ ಅಲ್ಲಿಗೆ ಹಾಜರಾಗುತ್ತಾರೆ.
ಬಲೂನ್‌ಗಳ ಮೂಲಕ ತುತ್ತಿನ ಚೀಲ ತುಂಬಿಸಿ ಕೊಳ್ಳುತ್ತಾರೆ. ಅವರ ಊರುಗಳಿಗೆ ೬ ತಿಂಗಳಿಗೋ ಅಥವಾ ವರ್ಷಕ್ಕೋ ಒಮ್ಮೆ ಹೋಗುತ್ತಾರೆ. ಹೀಲಿಯಂ ಸಿಲಿಂಡರ್‌ಅನ್ನು ಸಲೀಂ ಹೈದರಾಬಾದ್‌ನಿಂದ ಕರ್ನಾಟಕಕ್ಕೆ ತಂದಿದ್ದ ಎನ್ನಲಾಗಿದೆ. ಅವರಿಗೆ ಕ್ರಿಸ್ಮಸ್ ಆಚರಣೆ ಮತ್ತು ವರ್ಷಾಂತ್ಯದಲ್ಲಿ ಮೈಸೂರಿಗೆ ಪ್ರವಾಸಿಗರ ದಂಡು ಆಗಮಿಸುವ ಬಗ್ಗೆ ತಿಳಿದು ವ್ಯಾಪಾರ ಚೆನ್ನಾಗಿ ಆಗುವ ಆಸೆಯಿಂದ ಸಲೀಂ ಮೈಸೂರಿಗೆ ಬಂದಿದ್ದಾರೆ.
ಆದರೆ ಇಲ್ಲಿ ಬಲೂನ್ ಮಾರಾಟ ಮಾಡುವಾಗ ಅವರ ಜೀವನವೇ ಕೊನೆ ಗೊಂಡಿದೆ. ಮೈಸೂರಿಗೆ ಪ್ರತಿವರ್ಷ ದಸರಾ ಮಹೋತ್ಸವಕ್ಕೆ ಬಲೂನ್ ಮಾರಾಟಗಾರರು ದೊಡ್ಡ ಸಂಖ್ಯೆಯಲ್ಲಿ ಆಗಮಿ ಸುತ್ತಾರೆ. ದಸರಾ ಆಚರಣೆಯ ೧೦ ದಿನಗಳು ಮಾತ್ರವಲ್ಲದೆ, ಅದರ ನಂತರವೂ ತಿಂಗಳುಗಟ್ಟಲೇ ಮೈಸೂರಿ ನಲ್ಲೇ ತಾತ್ಕಾಲಿಕವಾಗಿ ತಳವೂರುತ್ತಾರೆ. ಇವರು ಮಾತ್ರವಲ್ಲದೆ ವಿವಿಧ ಬಗೆಯ ಆಟಿಕೆಗಳ ಮಾರಾಟಗಾರರು ಕೂಡ ದಸರಾ ವೇಳೆ ಮೈಸೂರಿಗೆ ಲಗ್ಗೆ ಇಡುತ್ತಾರೆ.
ಇದನ್ನು ಓದಿ: ತ್ರಿಪುರ ಸುಂದರಿ ಅಮ್ಮನವರ ಜಾತ್ರೆಗೆ ಸಕಲ ಸಿದ್ಧತೆ
ಅವರಿಗೆ ವಾಸ್ತವ್ಯಕ್ಕೆ ಸೂಕ್ತ ವ್ಯವಸ್ಥೆ ಇರುವುದಿಲ್ಲ. ಈಗಲೂ ಸಲೀಂ ಯಾವುದೋ ವಸತಿಗೃಹದಲ್ಲಿ ದಿನಕ್ಕೆ ೧೦೦ ರೂ.ಬಾಡಿಗೆ ತೆತ್ತು ವಾಸ್ತವ್ಯಕ್ಕೆ ಅವಕಾಶ ಮಾಡಿಕೊಂಡಿದ್ದರು ಎನ್ನಲಾಗಿದೆ. ಹಾಗಿದ್ದರೆ ಅಲ್ಲಿ ಮೂಲ ಸೌಕರ್ಯ ಎಷ್ಟರಮಟ್ಟಿಗೆ ಚೆನ್ನಾಗಿರಬಹುದು ಎಂಬುದನ್ನು ಊಹಿಸಬಹುದು. ರಾಜ್ಯ ಸರ್ಕಾರ, ಜನಪ್ರತಿನಿಧಿಗಳು ಈ ಬಗ್ಗೆ ಯೋಚಿಸಬೇಕು. ಆದರೆ, ಇಂತಹ ಆಟಿಕೆಗಳ ಮಾರಾಟಗಾರರು ದೇಶಾದ್ಯಂತ ಇರುತ್ತಾರೆ. ಇವರಿಗೆ ಯಾವುದೇ ರಾಜ್ಯದ ಗಡಿ ಸೀಮಿತ ಆಗಿರುವುದಿಲ್ಲ. ಹಾಗಾಗಿ ಇವರ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಿರುವುದು ಕೇಂದ್ರ ಸರ್ಕಾರ.
ಇಂತಹ ಜನರಿಗೆ ಸರಿಯಾಗಿ ಆಧಾರ್ ಕಾರ್ಡ್ ಕೂಡ ಇರುವುದಿಲ್ಲ. ಆದರೆ, ಹೀಲಿಯಂ ಗ್ಯಾಸ್ ಸಿಲಿಂಡರ್‌ಗಳು ಹೇಗೆ ದೊರೆಯುತ್ತವೆ? ಅಥವಾ ಅವರಿಗೆ ಅವು ಅನಿವಾರ್ಯವಾದರೆ ಒಂದು ಸೂತ್ರದಡಿ ಒದಗಿಸುವ ಕ್ರಮಗಳನ್ನು ಸರ್ಕಾರಗಳು ಕೈಗೊಳ್ಳಬೇಕು. ಆ ಜನರನ್ನು ಪರ್ಯಾಯ ಮಾರ್ಗದಲ್ಲಿ ಆರ್ಥಿಕವಾಗಿ ಸಬಲೀಕರಣಗೊಳಿಸಲು ಯೋಜನೆಗಳನ್ನು ರೂಪಿಸಿ, ಅವು ಸರಳ, ಸುಲಲಿತ ಮಾರ್ಗದಲ್ಲಿ ಅವರಿಗೆ ತಲುಪುವಂತೆ ಕ್ರಮವಹಿಸಬೇಕು. ಮೈಸೂರಿನಲ್ಲಿ ನಡೆದ ಪ್ರಕರಣದಲ್ಲಿ ಇಬ್ಬರು ಮಹಿಳೆಯರು ಪ್ರಾಣ ಕಳೆದುಕೊಂಡಿದ್ದಾರೆ. ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ಮತ್ತು ಎಲ್ಲ ಜನಪ್ರತಿನಿಧಿಗಳೂ ಗಂಭೀರ ಚಿಂತನೆ ಮಾಡುವುದು ಅತ್ಯಗತ್ಯ.
” ಮೈಸೂರಿಗೆ ಪ್ರತಿವರ್ಷ ದಸರಾ ಮಹೋತ್ಸವಕ್ಕೆ ಬಲೂನ್ ಮಾರಾಟಗಾರರು ದೊಡ್ಡ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ದಸರಾ ಆಚರಣೆಯ ೧೦ ದಿನಗಳು ಮಾತ್ರವಲ್ಲದೆ, ಅದರ ನಂತರವೂ ತಿಂಗಳುಗಟ್ಟಲೇ ಬಲೂನ್ ಮಾರಾಟಗಾರರು ಮೈಸೂರಿನಲ್ಲೇ ತಾತ್ಕಾಲಿಕವಾಗಿ ತಳವೂರುತ್ತಾರೆ.”
ಮಂಡ್ಯ : ಪೌತಿ ಖಾತಾ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಬೇಕು. ಮುಂದಿನ ಆರು ತಿಂಗಳುಗಳೊಳಗೆ ಪೌತಿ ಖಾತಾ ಆಂದೋಲನದಲ್ಲಿ ಯಾವುದೇ…
ಬೆಂಗಳೂರು : ಉದ್ಯೋಗ ಖಾತರಿಯನ್ನು ಇಲ್ಲವಾಗಿಸುವ ಮತ್ತು ಒಕ್ಕೂಟ ವ್ಯವಸ್ಥೆಯ ಆಶಯಗಳಿಗೆ ವ್ಯತಿರಿಕ್ತವಾಗಿರುವ ವಿಕಸಿತ ಭಾರತ ಉದ್ಯೋಗ ಖಾತರಿ ಮತ್ತು…
ಬೆಂಗಳೂರು : ಜಾರಿ ನಿರ್ದೇಶನಾಲಯ(ಇ.ಡಿ) ದಾಖಲಿಸಿದ್ದ ಕ್ರಿಮಿನಲ್ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ ಅವರಿಗೆ ಬಿಗ್ ರಿಲೀಫ್…
ಮೈಸೂರು : ಬೇರೆ ಜಿಲ್ಲೆಗಳಿಗೆ ಹೋಲಿಸಿಕೊಂಡರೆ ಮೈಸೂರಿನ ಪತ್ರಿಕೋದ್ಯಮ ಗುಣಮಟ್ಟದಿಂದ ಕೂಡಿದ್ದು, ಇಲ್ಲಿನ ಪತ್ರಕರ್ತರು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು…
ಮಂಡ್ಯ : ಕೇಂದ್ರ ಬೃಹತ್ ಉಕ್ಕು ಮತ್ತು ಕೈಗಾರಿಕಾ ಸಚಿವರಾದ ಎಚ್.ಡಿ. ಕುಮಾರಸ್ವಾಮಿ ಅವರು ಯಾವುದಾದರೂ ಕಂಪನಿಗಳಿಂದ ಕೈಗಾರಿಕೆ ಸ್ಥಾಪನೆಗೆ…
ಮೈಸೂರು : ಹೊಸ ವರ್ಷ ಜನವರಿ 1ರಂದು ಚಾಮುಂಡಿ ಬೆಟ್ಟಕ್ಕೆ ಹೆಚ್ವಿನ ಭಕ್ತಾಧಿಗಳು ಆಗಮಿಸುವ ನಿರೀಕ್ಷೆ ಇದ್ದು, ಅಗತ್ಯ ವ್ಯವಸ್ಥೆಗಳನ್ನು…