ಸಂಪಾದಕೀಯ

ಅಪ್ರಾಪ್ತರಿಂದ ವಾಹನ ಚಾಲನೆ; ನಿಯಂತ್ರಿಸುವಲ್ಲಿ ಪೋಷಕರ ಜವಾಬ್ದಾರಿಯೇ ಹೆಚ್ಚು

ಮಕ್ಕಳ ಜೀವನ ಉತ್ತಮವಾಗಿರಬೇಕು ಎಂಬ ಮಹತ್ವಾಕಾಂಕ್ಷೆ ಎಲ್ಲ ಹೆತ್ತವರಿಗೂ ಸಹಜವಾಗಿರುತ್ತದೆ. ಶಿಕ್ಷಣ, ಕ್ರೀಡೆ, ಉದ್ಯೋಗ… ಹೀಗೆ ಯಾವುದೇ ಕ್ಷೇತ್ರವಾದರೂ ಮಕ್ಕಳು ಯಶಸ್ವಿಯಾಗಿ ಮುಂದುವರಿಯಬೇಕುಎಂಬುದಾಗಿ ತಂದೆ-ತಾಯಿ ಅಥವಾ ಪೋಷಕರು ಬಯಸುವುದರಲ್ಲಿ ತಪ್ಪೇನು ಇಲ್ಲ. ಆ ನಿಟ್ಟಿನಲ್ಲಿ ಮಕ್ಕಳ ಮೇಲೆ ಅವರು ಸಾಕಷ್ಟು ನಿಗಾವಹಿಸುವುದು ಅಗತ್ಯ.

ಅಲ್ಲದೆ, ಕೆಲ ವಿಚಾರಗಳಲ್ಲಿ ಮಕ್ಕಳ ಬಗ್ಗೆ ಹೆಮ್ಮೆಪಡುವ ಭರದಲ್ಲಿ ಅದು ವ್ಯತಿರಿಕ್ತ ಪರಿಣಾಮ ಬೀರುವ ಬಗ್ಗೆ ಗಮನ ಹರಿಸುವುದಿಲ್ಲ. ಇದಕ್ಕೆ ಒಂದು ಉದಾಹರಣೆ ಎಂದರೆ ಅಪ್ರಾಪ್ತ ಮಕ್ಕಳಿಗೆ ದ್ವಿಚಕ್ರ ಅಥವಾ ನಾಲ್ಕು ಚಕ್ರ ವಾಹನಗಳ ಚಾಲನೆಗೆ ಅವಕಾಶ ಮಾಡಿಕೊಡುವುದು. ಚಾಮರಾಜನಗರದಲ್ಲಿ ನಾಲ್ವರು ಶಾಲಾ ಬಾಲಕರು ಒಂದೇ ದ್ವಿಚಕ್ರ ವಾಹನ ದಲ್ಲಿ ತೆರಳುತ್ತಿದ್ದಾಗ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ, ಮೂವರು ಅಸು ನೀಗಿದ್ದಾರೆ. ಈ ಬಾಲಕರ ಪೋಷಕರು ಮತ್ತು ಅವರ ಮನೆಯ ಪರಿಸ್ಥಿತಿ ಹೇಗಿರಬಹುದು? ಆ ಮಕ್ಕಳೇ ಮುಂದೆ ಬದುಕಿಗೆ ಆಧಾರವಾಗುತ್ತಾರೆ ಎಂಬ ಆಶಯ ಹೊಂದಿದ್ದ ಕುಟುಂಬಗಳಿಗೆ ಇಂತಹ ಆಘಾತಗಳನ್ನು ತಡೆದುಕೊಳ್ಳುವ ಮಾನಸಿಕ ಬಲ ಇರುತ್ತದೆಯೇ? ಶಾಲೆಗೆ ಹೋಗುವ ಮಕ್ಕಳಿಗೆ ಸೈಕಲ್‌ಗಳನ್ನು ಕೊಡುವುದಕ್ಕೇ ಹೆದರುವಂತಹ ಸ್ಥಿತಿ ಇದೆ.

ಏಕೆಂದರೆ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಸಂಖ್ಯೆ ಬಹಳಷ್ಟು ಹೆಚ್ಚಾಗಿದೆ. ಪಾದಚಾರಿಗಳ ಮೇಲೆಯ ಬಸ್‌ಗಳು, ಕಾರುಗಳು ಹರಿದಿರುವಂತಹ ಪ್ರಸಂಗಗಳು ಅಲ್ಲಲ್ಲಿ ನಡೆಯುತ್ತಿರುವುದನ್ನು ಸಾಮಾನ್ಯವಾಗಿ ಎಲ್ಲರೂ ಗಮನಿಸಿರುತ್ತಾರೆ. ಪರಿಸ್ಥಿತಿ ಹೀಗಿರುವಾಗ ಮಕ್ಕಳ ಕೈಗೆ ದ್ವಿಚಕ್ರ ಮೋಟಾರು ವಾಹನಗಳನ್ನಾಗಲಿ, ಕಾರುಗಳನ್ನಾಗಲಿ ಕೊಡುವುದು ದುಸ್ಸಾಹಸವಾಗುತ್ತದೆ. ಕೆಲ ತಿಂಗಳುಗಳ ಹಿಂದೆ ಅಪ್ರಾಪ್ತ ವಯಸ್ಸಿನ ಮಗ ದ್ವಿಚಕ್ರ ವಾಹನ ಚಾಲನೆ ಮಾಡಿದ ತಪ್ಪಿಗೆ, ಪೋಷಕರಿಗೆ ನ್ಯಾಯಾಲಯದಲ್ಲಿ ೨೫,೦೦೦ ರೂ. ದಂಡ ವಿಧಿಸಲಾಗಿತ್ತು. ಇದಲ್ಲದೆ, ಮೈಸೂರಿನಲ್ಲಿ ಬಾಲಕನೊಬ್ಬ ಕಾರು ಚಾಲನೆ ಮಾಡಿ ವ್ಯಕ್ತಿಯೊಬ್ಬರ ಸಾವಿಗೆ ಕಾರಣವಾಗಿದ್ದ ಪ್ರಕರಣ ನಡೆದಿತ್ತು. ಆದರೆ, ಬಾಲಕರು ದ್ವಿಚಕ್ರ ವಾಹನ ಚಾಲನೆ ಮಾಡುವುದು ಮುಂದುವರಿದೇ ಇದೆ. ಸಂಚಾರ ವಿಭಾಗದ ಪೊಲೀಸರು ಕಟ್ಟುನಿಟ್ಟಾಗಿ ಕ್ರಮ ವಹಿಸಿದರೆ ಪ್ರತಿದಿನ ಇಂತಹ ಪ್ರಕರಣಗಳನ್ನು ದಾಖಲಿಸಬಹುದು. ಆದರೆ, ಅಪ್ರಾಪ್ತರು ವಾಹನ ಚಾಲನೆ ಮಾಡದಂತೆ ನಿಯಂತ್ರಣಕ್ಕೆ ಮಾರ್ಗೋ ಪಾಯಗಳೇನು ಎಂಬುದರ ಬಗ್ಗೆ ಚಿಂತನೆ ಅಗತ್ಯ.

ಮುಖ್ಯವಾಗಿ ಪೋಷಕರಿಗೆ ಮೋಟಾರು ವಾಹನ ಸಂಚಾರ ನಿಯಮಗಳ ಬಗ್ಗೆ ಕನಿಷ್ಠಅರಿವಿರಬೇಕು. ದ್ವಿಚಕ್ರ ವಾಹನ ಸೇರಿದಂತೆ ಯಾವುದೇ ವಾಹನ ಚಾಲನೆಗೆ ಕನಿಷ್ಠ ೧೮ ವರ್ಷಗಳು ಪೂರ್ಣಗೊಂಡಿರ ಬೇಕು. ಇದು ಪುರುಷರು ಹಾಗೂ ಮಹಿಳೆಯರಿಗೂ ಅನ್ವಯವಾಗುತ್ತದೆ. ಅಲ್ಲದೆ, ಚಾಲನಾ ಪರವಾನಗಿ (ಡಿಎಲ್)ಯನ್ನು ೧೮ ವರ್ಷಗಳು ಪೂರ್ಣಗೊಳಿಸಿದವರಿಗೆ ಮಾತ್ರವೇ ಕೊಡಲಾಗುತ್ತದೆ. ಅದು ಕೂಡ ಕನಿಷ್ಠ ಒಂದು ತಿಂಗಳು ಅವರು ಕಲಿಕಾ ಅವಽ ಎಲ್‌ಎಲ್‌ಆರ್ (ಕಲಿಕಾ ಪರವಾನಗಿ ನೋಂದಣಿ) ನ್ನು ಸಾರಿಗೆ ಇಲಾಖೆಯಿಂದ ಪಡೆಯಬೇಕು. ನಂತರ ಡಿಎಲ್ ಪಡೆಯಲು ಅರ್ಹತೆ ದೊರೆಯುತ್ತದೆ.

೧೮ ವರ್ಷ ತುಂಬಿದ ಎಷ್ಟೋ ಮಂದಿ ಡಿಎಲ್ ಇಲ್ಲದೆ ಬೈಕ್, ಕಾರುಗಳನ್ನು ಚಾಲನೆ ಮಾಡುತ್ತಿದ್ದಾರೆ. ಅದನ್ನು ಸಾಹಸ ಎಂಬಂತೆ ಭಾವಿಸಿರುತ್ತಾರೆ. ಅಕಸ್ಮಾತ್ ವಾಹನ ಅಪಘಾತಕ್ಕೀಡಾದಾಗ ಡಿಎಲ್ ಅಗತ್ಯತೆಯ ಅರಿವಾಗುತ್ತದೆ. ೧೮ ವರ್ಷಗಳು ಪೂರ್ಣಗೊಳ್ಳದ ಮಕ್ಕಳು, ಹಟ ಮಾಡುತ್ತಾರೆಂದೋ ಅಥವಾ ಅವರ ಮೇಲಿನ ಅತಿಯಾದ ಪ್ರೀತಿಯೊಂದಲೋ ವಾಹನಗಳ ಚಾಲನೆಗೆ ಅವಕಾಶ ಮಾಡಿಕೊಟ್ಟರೆ ಅದರ ಪರಿಣಾಮವನ್ನು ಪೋಷಕರು ಅನುಭವಿಸಬೇಕಾಗುತ್ತದೆ. ಅಪ್ರಾಪ್ತರು ವಾಹನ ಚಾಲನೆ ಮಾಡಿದರೆ ನಿಯಮಾನುಸಾರ ಪೋಷಕರಿಗೆ ಗರಿಷ್ಟ ೨೫,೦೦೦ ರೂ.ವರೆಗೆ ದಂಡ ವಿಧಿಸಬಹುದು. ಒಂದು ವೇಳೆ ಅಪ್ರಾಪ್ತ ವಯಸ್ಸಿನವರು ಚಾಲನೆ ಮಾಡುವ ವಾಹನ ಅಪಘಾತ ನಡೆಸಿ, ಎದುರಿನ ವ್ಯಕ್ತಿಯ ಪ್ರಾಣಹೋದರೆ, ಪೋಷಕರಿಗೆ ಜೈಲು ಶಿಕ್ಷೆ ವಿಧಿಸುವುದಕ್ಕೂ ನಿಯಮದಲ್ಲಿ ಅವಕಾಶ ಇದೆ.

ಸಾಕ್ಷರರು, ಸುಶಿಕ್ಷಿತರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ನಗರ ಪ್ರದೇಶಗಳಲ್ಲೂ ಇಂತಹ ಪ್ರಕರಣಗಳು ನಡೆಯುತ್ತಿವೆ. ಗ್ರಾಮೀಣ ಭಾಗದಲ್ಲಿ ಸಂಚಾರ ನಿಯಮದ ಅರಿವೇ ಇಲ್ಲದವರ ಸಂಖ್ಯೆಯೇ ಅಧಿಕ. ಹಾಗಾಗಿ ಅಂತಹ ಪ್ರದೇಶಗಳಲ್ಲಿ ಅಪ್ರಾಪ್ತರು ವಾಹನ ಚಾಲನೆ ಮಾಡುವ ಪ್ರಕರಣಗಳು ಹೆಚ್ಚಾಗಿವೆ. ಇಂತಹ ಪ್ರಕರಣಗಳಲ್ಲಿ ಪೊಲೀಸರಿಗಿಂತ ಪೋಷಕರೇ ಹೆಚ್ಚು ಜವಾಬ್ದಾರರಾಗುತ್ತಾರೆ. ಮಕ್ಕಳಿಗೆ ವಾಹನಗಳ ಚಾಲನೆಯ ಬಗ್ಗೆ ಸ್ಪಷ್ಟ ತಿಳಿವಳಿಕೆ ಮೂಡಿಸುವುದು ಅಗತ್ಯ. ಈ ಬಗ್ಗೆ ಪೋಷಕರು ಜಾಗೃತರಾದಷ್ಟೂ ಒಳ್ಳೆಯದು.

” ಮುಖ್ಯವಾಗಿ ಪೋಷಕರಿಗೆ ಮೋಟಾರು ವಾಹನ ಸಂಚಾರನಿಯಮಗಳ ಬಗ್ಗೆ ಕನಿಷ್ಠ ಅರಿವಿರ ಬೇಕು. ದ್ವಿಚಕ್ರ ವಾಹನ ಸೇರಿದಂತೆ ಯಾವುದೇ ವಾಹನ ಚಾಲನೆಗೆ ಕನಿಷ್ಠ ೧೮ ವರ್ಷಗಳು ಪೂರ್ಣ ಗೊಂಡಿರಬೇಕು. ಇದು ಪುರುಷರು ಹಾಗೂ ಮಹಿಳೆಯರಿಗೂ ಅನ್ವಯವಾಗುತ್ತದೆ”

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ರಾಜ್ಯಪಾಲರು ಮಾಡಿದ 3 ವಾಕ್ಯಗಳ ಭಾಷಣದ ಅಂಶಗಳಿವು.!

ಬೆಂಗಳೂರು: ರಾಜ್ಯಪಾಲರು ಹಾಗೂ ಕಾಂಗ್ರೆಸ್‌ ಸರ್ಕಾರದ ನಡುವಿನ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿದೆ. ಕರ್ನಾಟಕ ವಿಧಾನಸಭೆಯ ವಿಶೇಷ ಅಧಿವೇಶನದ ಮೊದಲ…

13 mins ago

ದಾವಣಗೆರೆ| ಕಿರು ಮೃಗಾಲಯದಲ್ಲಿ ನಾಲ್ಕು ಜಿಂಕೆಗಳ ಸಾವಿಗೆ ಕಾರಣ ಬಹಿರಂಗ

ದಾವಣಗೆರೆ: ಜಿಲ್ಲೆಯ ಆನಗೋಡಿನ ಇಂದಿರಾ ಪ್ರಿಯದರ್ಶಿನಿ ಕಿರು ಮೃಗಾಲಯದಲ್ಲಿ ನಾಲ್ಕು ಚುಕ್ಕೆ ಜಿಂಕೆಗಳ ಸಾವಿಗೆ ಕಾರಣ ಬಹಿರಂಗವಾಗಿದೆ. ನಾಲ್ಕು ಚುಕ್ಕೆ…

24 mins ago

ವಾಲ್ಮೀಕಿ ಹಗರಣ: ಮಾಜಿ ಸಚಿವ ಬಿ.ನಾಗೇಂದ್ರಗೆ ಮತ್ತೆ ಸಂಕಷ್ಟ

ಬೆಂಗಳೂರು: ವಾಲ್ಮೀಕಿ ಹಗರಣದಲ್ಲಿ ಮಾಜಿ ಸಚಿವ ಬಿ.ನಾಗೇಂದ್ರಗೆ ಮತ್ತೆ ಸಂಕಷ್ಟ ಎದುರಾಗಿದ್ದು, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನೀಡಿದ್ದ ಜಾಮೀನು ರದ್ದು…

1 hour ago

ರಾಜ್ಯಪಾಲರ ನಡೆ ಖಂಡಿಸಿ ಪ್ರತಿಭಟನೆ ಮಾಡುತ್ತೇವೆ: ಸಿಎಂ ಸಿದ್ದರಾಮಯ್ಯ ಆಕ್ರೋಶ

ಬೆಂಗಳೂರು: ರಾಜ್ಯಪಾಲರು ಭಾಷಣ ಓದದೇ ಸಂವಿಧಾನ ಉಲ್ಲಂಘಿಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ವಿಧಾನಸೌಧದಲ್ಲಿ ಮಾತನಾಡಿದ…

2 hours ago

ಭಾಷಣ ಓದದೇ ತೆರಳಿದ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌: ಕಾಂಗ್ರೆಸ್‌ ನಾಯಕರಿಂದ ಹೈಡ್ರಾಮಾ

ಬೆಂಗಳೂರು: ವಿಧಾನಸೌಧದಲ್ಲಿ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಬೇಕಿದ್ದ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ಕೇವಲ ಎರಡನೇ ಮಾತಿನಲ್ಲಿ…

2 hours ago

ಮುಡಾ ಹಗರಣ: ಸಿಎಂ ಸಿದ್ದರಾಮಯ್ಯಗೆ ಇಂದು ಬಿಗ್ ಡೇ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಹಗರಣದಲ್ಲಿ ಲೋಕಾಯುಕ್ತ ನೀಡಿರುವ ಕ್ಲೀನ್‌ಚಿಟ್‌ ಕುರಿತು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇಂದು ಮಹತ್ವದ…

3 hours ago