ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಕನ್ನಡದ ಉಪಭಾಷೆಯಾದ ಬ್ಯಾರಿ ಭಾಷೆ ಹೆಚ್ಚು ಪ್ರಚಲಿತದಲ್ಲಿದೆ. ಬ್ಯಾರಿ ಎನ್ನುವುದು ಸಮುದಾಯ ಸೂಚಕ ಪದವಾಗಿದೆ. ಬ್ಯಾರಿ ಭಾಷೆಯಲ್ಲಿ ಸಾಹಿತ್ಯ ರಚನೆಗೆ ಕನ್ನಡ ಅಕ್ಷರಗಳೇ ಆಧಾರಸ್ತಂಭ. ಏಕೆಂದರೆ ಬ್ಯಾರಿಗೆ ಸ್ವಂತ ಲಿಪಿ ಇಲ್ಲ. ಕವಿ ಅಬ್ದುಲ್ ರಹಿಮ್ ಕುತ್ತೆತ್ತೂರು ಅವರು ಕನ್ನಡ ಲಿಪಿಯನ್ನು ಬಳಸಿಕೊಂಡು ಬ್ಯಾರಿ ಭಾಷೆಯಲ್ಲಿ ‘ಜೀಯ ಸಲೆ’ ಎಂಬ ಕವನ ಸಂಕಲನ ರಚಿಸಿದ್ದಾರೆ. ಈ ಕೃತಿಯಲ್ಲಿರುವ ‘ಇಪ್ಪಿಪ್ಪ ನಂಡೊರಾಯ’ ಕವಿತೆಯನ್ನು, ಸ್ವತಃ ಅವರೇ ಕನ್ನಡಕ್ಕೆ ‘ಈಗೀಗ ನನ್ನೂರು’ ಎಂಬುದಾಗಿ ಅನುವಾದಿಸಿದ್ದಾರೆ. ಅದನ್ನು ಉಭಯ ಭಾಷೆಗಳಲ್ಲಿಯೂ ಪ್ರಕಟಿಸಲಾಗಿದೆ.
ಇಪ್ಪಿಪ್ಪ ನಂಡೊರಾಯ
ಇಪ್ಪ ನಂಡೊ ರಾಯತ್ ಪೋಯೆಂಗ್-
ಪಂಡತ್ತೊ ಚಂದೊಂ ಇಲ್ಲೆ, ಅಂಡತ್ತೋ ಎಂದುಂ ಇಲ್ಲೆ
ಪಚ್ಚೆ ಪಯಚಿ ನಿಂಡೊ ಮರಂಜ ಇಲ್ಲಿ
ಪನೊರಞ ಚಿರಿಕುಡೊ ತೈಜಿ ಇಲ್ಲೆ
ಅಡ್ ಕಂಗ್ ಇಲ್ಲೆ, ಪಾಡೊ ಪಕ್ಕಿ ಇಲ್ಲೆ ಓಡಿಕಲಿಕುರೂ ನವಿಲ್ ಕಾಂಡೇ ಇಲ್ಲಿ ಮಾಸ್ ಪರಮಾಡೊ ಮರತೊ ಸಾಲೇ ಇಲ್ಲೆ ತೇಜ್ ತೆಕ್ಕಿಡೊ ಮರತೊ ಚಂದ ಇಲ್ಲೆ ಚಬುಕು, ಕೆಕ್ಕೆಡೊ ಮರಂಜ ಮಾಣಿ ಪ್ರೋತ್ ನೇರಲೆ, ಪೇರಲೆಡೊ ಪೇರೇ ಮರನ್ ಪೊತ್ ನಾ ಕಲ್ಲೊ ಕಂಡು, ನಾಕು ಲ್ಲೊ ಪೊಲೇಜ ನಂಡೊ ಪಿರ್ಸತ್ತೊ ಗೋಲಿಡೊ ಮರ ನಂಡೊ ಬೆರಪಾಟೊ ತಾಲಿಡೊ ಮರ ನಾ ದೆಚ್ಚಿ ಕಿನಾವು ಕೆಟ್ಟಿಯೊ ಪಾದೆಕಲ್ಲ ನಜ ಉಂಜಾಲ್ ಕೆಟ್ಟ ಕಲ್ಲೊ ಮಾಜೆಡೊ ಗೆಲ್ ಅಸ ನ್ಯಾರ ಮೆರವನಿಗೆ ಪೋಂಡೊ ನಂಡೊ ಪಿರ್ಸತ್ತೊ ಪಕಿಡೊ ಸಾಲ್ ಸಾಲ್
ಪಚ್ಚೆ ಪೊದಿಪುಲ್ ಕಾಂಡೊ ಕಂಡತ್ತೊ ಸಾಲ್ ಸಾಲ್ ಬೂಲೊಗಾಯೊ ನಂಡೊ ಸಾಲೆ
ನಂಡೊ ನಾಲೆಗ್ ಜೀಯ ತನ್ನೊ ಪಿರ್ಸತ್ತೊ ಸಾಲೆ ನಕ್ಸ್ ಎಪ್ಪತ್ತುಗುಂ ಮರಕೊಗಾವಾಲೆ
ಇಷ್ಟೆಲ್ಲಾ ಅದ್- ಕಲ್‌ಞ ಅಲ್‌ಞ ಮಾಣಿ ಪೋಟೊ ಕತೆ ನಂಡೊ ಕಲ್ಲು ಕತ್ತುರೊ ನಂಡೊದೇ ಯತೆ
ಇಪ್ಪ ನಂಡೊ ರಾಯತ್ತೆ… ಕಾಂಕ್ರೀಟ್ ಕಾಡ್ ಸುಯ್ಡ್ ಬುಡ್ಡು ಪಚ್ಚೆ ಕಂಡತ್ತೊ ನೆಂಣಿ ಕೀರಿ ಉಂಡಾಕ್ಕೋ ಮಾರ್ಗಜ ದೂಲು ಬುಡ್ಡು.
ಕಂಡಣ ಎಲ್ಲ ಅಗಂಜಿ, ಪೊಯವುದೆಲ್ಲ ಮಾರ್ಗಜ ಬದಲಾಯೊ ಆಲ್, ದೂರಾಯೊ ಮನಸ್ಸ೦ಜ ಕಲ್ ನಾಲ್‌ಡೊ ಅಲ್
ಅಬ್ದುಲ್ ರಹಿಮಾನ್-ಕುತ್ತೆತ್ತೂರು
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ (ಕನ್ನಡ ಪಿನ್ನೆ ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ)
ಜಲ್ಸ್ ಒಲ್‌ಇಸ್ಕೊ ಸಾಕ್ಷಿಜ
ತುಡಿಕುಡೊ ಕಲ್ಬುಲ್ ಅದೆಂದ್ರೆಮಾ ಅರ್ತ ನೊರ ಮೌನ ಮನಸ್ ಎಂದೊಮಾ ಕಲ್ ಇಂಡೊ ನಿರಾಸೆಡೊ ತಾನ ಐತಂಗುಂ –
ನಾಗರಿಕತೆಡೊ ಓಡಲ್ ಸಾಗಿಯೋಂಟೇ ಉಂಡು ಈ ಹಲ್ಲಿಡೊ ಚಂದ ಮಾಂಟೇ ಉಂಡು ಪಿರ್ಸತ್ತೊ ಬಂದ ಮುರ್ ಇಂಟೇ ಉಂಡು ತಿರ್‌ಞ ಮರ್ ಪೋಯೊ ನಿಸರ್ಗತ್ತೊ ಮೇಲೆ ಪುದಿಯೊ ದುನಿಯಾವೊನ್ನು ಎಂಚೋಂಟುಂಡು ಈ ಎಲ್ಲಾ ನೊಂಬಲ್ಲೆ ತಂಡುಲ್‌ಗ ಮೌನತ್ ಒಂಚಿ ಬೆಚ್ಚಿ ಮುಲುಕುಡೊ ನಂಡೊರಾಯ ಇಲ್ಲೊಂ ನಕ್ಸ್ ಪಿರ್ಸತ್ತೊ ಕಡಲ್ ಕಿರ್ಫತ್ತೊ ಮಡಿಲ್
ಈಗೀಗ ನನ್ನೂರು
ಈಗ ನನ್ನೂರಿಗೆ ಹೋದರೆ- ಹಿಂದಿನ ಅಂದವೂ ಇಲ್ಲ, ಅಂದಿನದ್ದೇನೂ
ಇಲ್ಲ
ಹಸಿರು ಹೊದ್ದ ಮರಗಳಿಲ್ಲ, ಹೂದುಂಬಿ ನಗುವ ಗಿಡಗಳಿಲ್ಲ
ತೂರಾಡುವ ಕಂಗುಗಳಿಲ್ಲ, ಹಾಡುವ ಹಕ್ಕಿಗಳಿಲ್ಲ
ಓಡಿ ನಲಿದಾಡುವ ಮಯೂರ ಕಾಣುವುದೇ ಇಲ್ಲ
ಮಾವು-ಗೇರು ಮರಗಳ ಸಾಲು ಇಲ್ಲ ತೆಂಗು ಸಾಗುವಾನಿ ಮರಗಳ ಚೆಲುವು
ಇಲ್ಲ…..
ಗಾಳಿ, ಹಲಸಿನ ಮರಗಳು ಅಳಿದು ಹೋದವು
ನೇರಳೆ ಪೇರಳೆಗಳ ಹೆಸರೇ ಮರೆತು ಹೋದವು
ನಾನಾಡಿದ ಗದ್ದೆಗಳು, ನಾ ಮಿಂದ ಹೊಳೆಗಳು
ನನ್ನ ಪ್ರೀತಿಯ ಆಲದ ಮರ, ನನ್ನ ಬೆದರಿಸಿದ ತಾಳೆ ಮರ
ನಾನು ಕುಳಿತು ಕನಸು ಕಟ್ಟಿದ ಬಂಡೆಗಲ್ಲು ನಾವು ಉಯ್ಯಾಲೆಯಾಡಿದ ಮಾವಿನ ಗೆಲ್ಲು
ಸಂಜೆಯ ಹೊತ್ತು ದಿಬ್ಬಣ ಹೊರಡುವ ನನ್ನ ಪ್ರೀತಿಯ ಬಾನಾಡಿಗಳ ಸಾಲು ಸಾಲು ಹಸಿರ ಹೊದಿಕೆಯಲಿ ಕಾಂಬ ಗದ್ದೆಗಳ
ಸಾಲು ಸಾಲು
ಧರಾಶಾಹಿಯಾಗುತ್ತಿರುವ ನನ್ನ ಶಾಲೆ ನನ್ನ ನಾಳೆಗಳಿಗೆ ಜೀವಕೊಟ್ಟ ಪ್ರೀತಿಯ
ಶಾಲೆ
ನನಗೆಂದೂ ಮರೆಯಲಾಗುವುದೇ ಇಲ್ಲ
ಈಗೆಲ್ಲ ಅದು ಕಳೆದು ಅಳೆದು ಮಾಸಿ ಹೋದ ಕಥೆ
ನನ್ನ ಹೃದಯ ಹಿಂಡುವ ನನ್ನದೇ ವ್ಯಥೆ. ಇಂದು ನನ್ನೂರಲ್ಲಿ- ಕಾಂಕ್ರೀಟು ಕಾಡುಗಳು ನಿಟ್ಟುಸಿರು ಬಿಡುತ್ತಿವೆ.
ಹಸಿರ ಹೊಲಗಳ ಎದೆ ಸೀಳಿ ನಿರ್ಮಿಸಿದ ರಸ್ತೆಗಳು ಧೂಳೆಬ್ಬಿಸುತ್ತಿವೆ.
ಕಂಡಲ್ಲೆಲ್ಲ ಮನೆಗಳು ದೂರಾದ ಮನೆಗಳು ಕಳೆದ ದಿನಗಳ ಅಳಿದ ವೈಭವದ ಕುರುಹುಗಳು!
ತುಡಿವ ಹೃದಯದಲ್ಲಿ ಅದೇನೋ ಅರ್ಥಗರ್ಭಿತ ಮೌನ ಮನಸ್ಸಿನೊಳಗೆ ಏನೋ ಕಳೆದುಹೋದ
ತಾಣ.
ಆದರೂ ನಾಗರಿಕತೆಯ ನಾಗಾಲೋಟ ಸಾಗುತ್ತಲೇ ಇದೆ
ಈ ಹಳ್ಳಿಯ ಸೊಬಗು ಮಾಗುತ್ತಲೇ ಇದೆ ಪ್ರೀತಿಯ ಬಂಧ ಮುರಿಯುತ್ತಲೇ ಇದೆ ತಿರುಗಿ ಉರುಳಿ ಹೋದ ನಿಸರ್ಗದ ಮೇಲೆ
ನವೀನ ಲೋಕವೊಂದು ಏಳುತ್ತಿದೆ! ಈ ಎಲ್ಲಾ ನೋವುಗಳನ್ನೂ ತನ್ನೊಳಗೆ ಮೌನವಾಗಿ
ಅಡಗಿಸಿ ಮುಲುಕುವ ನನ್ನೂರು ಈಗಲೂ ನನ್ನ ಪಾಲಿಗೆ ಪ್ರೀತಿಯ ಕಡಲು ಕರುಣೆಯ ಮಡಿಲು!
ಮಂಡ್ಯ : ಜಲ ಶಕ್ತಿ ಜನ ಭಾಗೀದಾರಿ, ಮಹಾತ್ಮ ಗಾಂಧಿ ನರೇಗಾ, ತೆರಿಗೆ ವಸೂಲಾತಿ ಸೇರಿದಂತೆ ಇತರೆ ಯೋಜನೆ ಮತ್ತು…
ಸೋಮವಾರಪೇಟೆ : ಮರದ ನಾಟಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವಾಹನವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಹೊಸಳ್ಳಿ ಗ್ರಾಮದಲ್ಲಿ ವಶಪಡಿಸಿಕೊಂಡಿದ್ದಾರೆ. ಹುದುಗೂರು…
ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೈಲಿನಲ್ಲಿ ಇದ್ರೂ ಗುರುವಾರ ಬಿಡುಗಡೆಯಾದ ಅವರ ಅಭಿನಯದ ಡೆವಿಲ್…
ಮಳವಳ್ಳಿ : ವಿದ್ಯುತ್ ಸ್ಪರ್ಶಿಸಿ ಕಾರ್ಮಿಕನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ತಾಲ್ಲೂಕಿನ ಕಲ್ಕುಣಿ ಗ್ರಾಮದ ಬಳಿ ನಡೆದಿದ್ದು, ಸೆಸ್ಕ್ ಅಧಿಕಾರಿಗಳ…
ಹೊಸದಿಲ್ಲಿ : ದೇಶದಾದ್ಯಂತ ನಡೆಸಲು ಉದ್ದೇಶಿಸಿರುವ ೨೦೨೭ರ ಜನಗಣತಿಗೆ ರೂ. ೧೧,೭೧೮ ಕೋಟಿ ಅನುದಾನ ನೀಡಲು ಕೇಂದ್ರ ಸಚಿವ ಸಂಪುಟವು…
ಮುಂಬೈ : ಇಂಡಿಗೊ ವಿಮಾನ ಕಾರ್ಯಾಚರಣೆ ವ್ಯತ್ಯಯ ಪ್ರಕರಣ ಸಂಬಂಧ ನಾಲ್ವರು ವಿಮಾನ ನಿರ್ವಹಣಾ ಇನ್ಸ್‌ಪೆಕ್ಟರ್‌ಗಳನ್ನು (ಎಫ್.ಒ.ಐ) ನಾಗರಿಕ ವಿಮಾನಯಾನ…