ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಕ್ಸ್) ವು ಉನ್ನತ ಶ್ರೇಣಿಗೇರಿದೆ. ಗ್ರಾಹಕರಿಗೆ ಉತ್ತಮ ಸೇವೆ, ವಿದ್ಯುತ್ ಉಳಿತಾಯ, ಫೀಡ ನಿರ್ವಹಣೆ… ಹೀಗೆ ಹಲವು ಬಗೆಯಲ್ಲಿ ಸೆಸ್ಟ್ ಉತ್ತಮ ಕಾರ್ಯನಿರ್ವಹಣೆ ಮಾಡಿದೆ. ಹಾಗಾಗಿ ಪವರ್ ಫೈನಾನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಪಿಎಫ್‌ಐ), ‘ಬಿ’ ಶ್ರೇಣಿಯಲ್ಲಿದ್ದ ಸೆಸ್ಕ್‌ಗೆ ‘ಎ’ ಶ್ರೇಣಿ ನೀಡಿದೆ. ಈ ಮೂಲಕ ಸೆಸ್ಟ್ ಎಸ್ಕಾಂ ಅಡಿಯಲ್ಲಿರುವ ರಾಜ್ಯದ ಎಲ್ಲ ವಿದ್ಯುತ್ ಸರಬ ರಾಜು ನಿಗಮಗಳ ಪೈಕಿ ಮೊದಲನೇ ಸ್ಥಾನ ಪಡೆದಿದೆ.
ಬೇಸಿಗೆ ಕಾಲ ಆರಂಭವಾಗುತ್ತಿ ರುವ ಹೊತ್ತಿನಲ್ಲೇ ಸೆಸ್‌ಗೆ ಮೊದಲ ಶ್ರೇಯಾಂಕದ ಗೌರವ ಲಭಿಸಿರು ವುದು ಕಾಕತಾಳೀಯ, ಏಕೆಂದರೆ ಬೇಸಿಗೆ ಕಾಲ ಎಂದರೆ ವಿದ್ಯುತ್ ಪೂರೈಕೆಯು ಸವಾಲಿನಿಂದ ಕೂಡಿರುತ್ತದೆ. ಮಳೆ ಇರದ ಕಾರಣ ವಿದ್ಯುತ್ ಉತ್ಪಾದನೆಯಲ್ಲಿ ವ್ಯತ್ಯಾಸವಾಗುತ್ತದೆ. ಇದೇ ಅವಧಿಯಲ್ಲಿ ಸಾಮಾನ್ಯವಾಗಿ ಎಲ್ಲ ಬಗೆಯ ಶೈಕ್ಷಣಿಕ ಪರೀಕ್ಷೆಗಳೂ ನಡೆಯುತ್ತವೆ. ಉದಾಹರಣೆಗೆ ದ್ವಿತೀಯ ಪಿಯುಸಿ, ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಗಳನ್ನು ಮಾರ್ಚ್ – ಏಪ್ರಿಲ್ ತಿಂಗಳಿನಲ್ಲೇ ನಡೆಸಲಾಗುತ್ತದೆ. ಪ್ರತಿವರ್ಷ ಪರೀಕ್ಷೆ ಬರೆಯುವ ಮಕ್ಕಳಿಗೆ ವಿದ್ಯುತ್ ಕಣ್ಣಾಮುಚ್ಚಾಲೆಯ ಸಂಕಷ್ಟ ಇದ್ದೇ ಇರುತ್ತದೆ. ರಾಜ್ಯ ಸರ್ಕಾರ ಮತ್ತು ಸೆಸ್ಕ್ ಅಧಿಕಾರಿಗಳು ಲೋಡ್ ಶೆಡ್ಡಿಂಗ್ ಇರುವುದಿಲ್ಲ ಎಂದರೂ, ಅದು ಮಾತಾಗಿಯೇ ಉಳಿಯುತ್ತಿದೆ.
ಕೆಆರ್‌ಎಸ್ ಸೇರಿದಂತೆ ಹಲವು ಅಣೆಕಟ್ಟೆಗಳಲ್ಲಿ ಬೇಸಿಗೆಯಲ್ಲೂ ನೀರಿನ ಸಂಗ್ರಹ ಉತ್ತಮವಾಗಿದೆ. ವಿದ್ಯುತ್ ಶುಲ್ಕ ಸಂಗ್ರಹಣೆಯಲ್ಲಿ ಸೆಸ್ಕ್ ಅತ್ಯಂತ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆ. ದಿನದಂದು ಗ್ರಾಹಕರ ಪ್ರತಿ ತಿಂಗಳು ನಿಗದಿತ ಈ ಬಾರಿ ಸೆಸ್ಟ್ ಉನ್ನತ ಶ್ರೇಣಿಗೆ ಏರಿರುವುದರಿಂದ ಲೋಡ್ ಶೆಡ್ಡಿಂಗ್ ತಪ್ಪಿಸುವ ಸವಾಲನ್ನು ಸಮರ್ಥವಾಗಿ ನಿಭಾಯಿಸುವ ಸಾಧ್ಯತೆ ಇದೆ. ಅದಕ್ಕೆ ಪೂರಕವಾಗಿ ಈ ವರ್ಷ ಉತ್ತಮ ಮಳೆಯಾಗಿದೆ. ಕೆಆರ್‌ಎಸ್ ಸೇರಿದಂತೆ ಹಲವು ಅಣೆಕಟ್ಟೆಗಳಲ್ಲಿ ಬೇಸಿಗೆಯಲ್ಲೂ ನೀರಿನ ಸಂಗ್ರಹ ಉತ್ತಮವಾಗಿದೆ. ವಿದ್ಯುತ್ ಶುಲ್ಕ ಸಂಗ್ರಹಣೆಯಲ್ಲಿ ಸೆಸ್ಕ್ ಅತ್ಯಂತ ಸಮರ್ಪಕವಾಗಿ ಕಾರ್ಯನಿರ್ವಹಿಸು ತಿದೆ. ಪ್ರತಿ ತಿಂಗಳು ನಿಗದಿತ ದಿನದಂದು ಗ್ರಾಹಕರ ಮನೆಯ ಬಾಗಿಲಿಗೆ ವಿದ್ಯುತ್ ಬಿಲ್ ತಲುಪುತ್ತಿದೆ. ಅಲ್ಲದೆ, ಬಿಲ್ ಪಾವತಿಯೂ ಸಲೀಸಾಗಿದೆ. ಹಿಂದಿನಂತೆ ಗ್ರಾಹಕರು ಗಂಟೆಗಟ್ಟಲೇ ಕಾದು ನಿಂತು ಬಿಲ್ ಪಾವತಿಸುವ ಸಮಸ್ಯೆ ಇಲ್ಲ. ಬಿಲ್ ಪಾವತಿಯೂ ಕಂಪ್ಯೂಟರೀಕರಣವಾಗಿದೆ. ಟ್ರಾನ್ಸ್ ಫಾರ್ಮ‌್ರಗಳನ್ನು ತುರ್ತಾಗಿ ಬದಲಿಸಲು 63 ಕಿಲೋ ವ್ಯಾಟ್, 100 ಕಿಲೋ ವ್ಯಾಟ್ ಮತ್ತು 250 ಕಿಲೋ ವ್ಯಾಟ್ ಟ್ರಾನ್ಸ್ ಫಾರ್ಮ‌್ರಗಳ ಬ್ಯಾಂಕ್ ಕೂಡ ಇರುವುದು ಗಮನಾರ್ಹ. ಏಕೆಂದರೆ ಒಂದು ಟ್ರಾನ್ಸ್ ಫಾರ್ಮರ್ ಕೆಟ್ಟು ಹೋದರೆ, ಅದನ್ನು ಬದಲಿಸಲು ತಿಂಗಳುಗಟ್ಟಲೇ ಕಾಯುವಂತಹ ಸ್ಥಿತಿ ಇತ್ತು. ಈಗ ಎಲ್ಲೋ ಒಂದು ಕಡೆ ಟ್ರಾನ್ಸ್‌ಫಾರ್ಮರ್ ದಿಢೀರ್ ಶಾರ್ಟ್ ಸರ್ಕ್ಯೂಟ್‌ನಿಂದ ಕೆಟ್ಟು ಹೋದರೆ, ಮೈಸೂರಿನಂತಹ ನಗರಗಳಲ್ಲಿ ಅರ್ಧ, ಮುಕ್ಕಾಲು ಗಂಟೆಯೊಳಗೆಸೆಸ್ ಸಿಬ್ಬಂದಿಸ್ಥಳಕ್ಕೆಹಾಜರಾಗುತ್ತಾರೆ. ಆದಷ್ಟು ತ್ವರಿತಗತಿಯಲ್ಲಿ ದುರಸ್ತಿ ಮಾಡುತ್ತಾರೆ. ಅಗತ್ಯವಾದರೆ ಟ್ರಾನ್ಸ್‌ಫಾರ್ಮ‌್ರನ್ನು ಬದಲಿಸುತ್ತಾರೆ.
ಸೆಸ್ಕ್ ರಾಷ್ಟ್ರೀಯ ಮಟ್ಟದಲ್ಲಿ 16ನೇ ಶ್ರೇಯಾಂಕ ವನ್ನು ಗಳಿಸಿದೆ. ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದೆ. ಇದರಿಂದ ಸೆಸ್ಕ್‌ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಅನುದಾನ ಸರಾಗವಾಗಿ ದೊರೆಯುವುದಕ್ಕೆ ಅನುಕೂಲವಾಗಿದೆ. ಅಲ್ಲದೆ, ಬ್ಯಾಂಕ್‌ಗಳಿಂದ ಯಾವುದೇ ಅಡೆತಡೆ ಇಲ್ಲದೆ ಸಾಲವೂ ಲಭಿಸುತ್ತದೆ ಎನ್ನಲಾಗಿದೆ. ಬಹುಶಃ ಸೆಸ್ಟ್ ಜನಸ್ನೇಹಿಯಾಗಿ ಕಾರ್ಯ ನಿರ್ವಹಿಸಲು ಮಾರ್ಗವು ಮತ್ತಷ್ಟು ವಿಶಾಲವಾಗಿದೆ. ತನ್ನ ಕಾರ್ಯತತ್ಪರ ತೆಯನ್ನು ಪ್ರಾಮಾಣಿಕವಾಗಿ ಮುಂದುವರಿಸಿದರೆ ಸೆಸ್‌ನಿಂದ ಗ್ರಾಹಕರಿಗೆ ಅತ್ಯುತ್ತಮ ಸೇವೆ ದೊರೆಯಲಿದೆ.
ವಿದ್ಯುತ್ ನಷ್ಟ ತಡೆಗೂ ಕ್ರಮ ವಹಿಸಿರುವ ಸೆಸ್ಕ್, ಕಳೆದ ಬಾರಿ 10.3ರಷ್ಟಿದ್ದ ವಿದ್ಯುತ್ ನಷ್ಟದ ಪ್ರಮಾಣವನ್ನು ಈ ಬಾರಿ 9.03ಕ್ಕೆ ಇಳಿಸಿರುವುದು ಒಳ್ಳೆಯದು. ಆದರೆ, ಪಂಪ್ ಸೆಟ್ ಇರುವ ರೈತರ ಜಮೀನುಗಳಿಗೆ ನಿರಂತರ ವಿದ್ಯುತ್ ಪೂರೈಕೆಗೆ ಕ್ರಮವಹಿಸಲಾಗಿದೆ ಎಂದು ಸೆಸ್ ಅಧಿಕಾರಿಗಳು ಹೇಳಿದ್ದಾರೆ. ಅಪಾಯಕಾರಿಯಾದ 23,061 ಟ್ರಾನ್ ಫಾರ್ಮ‌್ರಗಳನ್ನು ಗುರುತಿಸಿ ಸರಿಪಡಿಸಲಾಗಿದೆ ಎಂದು ಅಧಿಕಾರಿಗಳು ಹೇಳಿಕೊಂಡಿದ್ದಾರೆ. ಪಿಎಂ ಕುಸುಮ್- ಸಿ ಯೋಜನೆಯಡಿ 500 ಮೆಗಾ ವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದನೆಗೆ ಯೋಜನೆ ರೂಪಿಸಿದ್ದು, 110 ವಿತರಣಾ ಕೇಂದ್ರಗಳನ್ನು ಸ್ಥಾಪಿಸಲು ಸೆಸ್ಕ್ ಮುಂದಾಗಿದೆ. ಅದಕ್ಕಾಗಿ ರಾಜ್ಯ 2,000 ಎಕರೆ ಪ್ರದೇಶ ಮಂಜೂರಾಗಿದೆ. ಪ್ರಧಾನ ಮಂತ್ರಿ ಸೌರಗೃಹ ಯೋಜನೆಯಡಿ 752 ಮನೆಗಳಿ ಗಾಗಿ ಸೋಲಾರ್ ಸ್ಥಾವರಗಳನ್ನು ಸ್ಥಾಪಿಸಲಾಗಿದೆ ಎಂಬುದು ಆಶಾದಾಯಕವಾಗಿದೆ.
ಸರ್ಕಾರದಿಂದ ಮನೆಯ ಬಾಗಿಲಿಗೆ ವಿದ್ಯುತ್ ಬಿಲ್ ತಲುಪುತ್ತಿದೆ. ಅಲ್ಲದೆ, ಬಿಲ್ ಪಾವತಿಯೂ ಸಲೀಸಾಗಿದೆ. ಹಿಂದಿನಂತೆ ಗ್ರಾಹಕರು ಗಂಟೆಗಟ್ಟಲೆ ಕಾದು ನಿಂತು ಬಿಲ್ ಪಾವತಿಸುವ ಸಮಸ್ಯೆ ಇಲ್ಲ. ಬಿಲ್ ಪಾವತಿಯೂ ಕಂಪ್ಯೂಟರೀಕರಣವಾಗಿದೆ. ಟ್ರಾನ್ಸ್‌ಫಾರ್ಮ‌್ರಗಳನ್ನು ತುರ್ತಾಗಿ ಬದಲಿಸಲು 63 ಕಿಲೋ ಕಿಲೋ
ಕಿಲೋ ವ್ಯಾಟ್, 100 ವ್ಯಾಟ್ ಮತ್ತು 250 ವ್ಯಾಟ್ ಟ್ರಾನ್ಸ್ ಫಾರ್ಮ‌್ರಗಳ ಬ್ಯಾಂಕ್ ಕೂಡ ಇರುವುದು ಗಮನಾರ್ಹ. ಏಕೆಂದರೆ ಒಂದು ಟ್ರಾನ್ಸ್‌ಫಾರ್ಮರ್ ಕೆಟ್ಟು ಹೋದರೆ, ಅದನ್ನು ಬದಲಿಸಲು ತಿಂಗಳುಗಟ್ಟಲೆ ಕಾಯುವಂತಹ ಸ್ಥಿತಿ ಇತ್ತು. ಈಗ ಎಲ್ಲೋ ಒಂದು ಕಡೆ ಟ್ರಾನ್ಸ್‌ಫಾರ್ಮರ್ ದಿಢೀರ್ ಶಾರ್ಟ್‌ಸರ್ಕ್ಯೂಟ್‌ನಿಂದ ಕೆಟ್ಟು ಹೋದರೆ, ಮೈಸೂರಿನಂತಹ ನಗರಗಳಲ್ಲಿ ಅರ್ಧ, ಮುಕ್ಕಾಲು ಗಂಟೆಯೊಳಗೆ ಸೆಸ್ ಸಿಬ್ಬಂದಿ ಸ್ಥಳಕ್ಕೆ ಹಾಜರಾಗುತ್ತಾರೆ. ಆದಷ್ಟು ತ್ವರಿತಗತಿಯಲ್ಲಿ ದುರಸ್ತಿ ಮಾಡುತ್ತಾರೆ. ಅಗತ್ಯವಾದರೆ ಟ್ರಾನ್ಸ್ ಫಾರ್ಮ‌್ರನ್ನು ಬದಲಿಸುತ್ತಾರೆ.
ನಂಜನಗೂಡು : ಜಾತೀಯತೆ ಎಂಬುದು ಸಂಪೂರ್ಣವಾಗಿ ತೊಲಗಬೇಕು. ಎಲ್ಲ ಸಮುದಾಯದವರು ನಮ್ಮವರೇ ಎಂದು ತಿಳಿದಾಗ ಮಾತ್ರ ಜಾತೀಯತೆ ದೂರವಾಗಲು ಸಾಧ್ಯ…
ಮೈಸೂರು : ನಿರಂತರ ರಂಗ ತಂಡದ ‘ನಿರಂತರ ರಂಗ ಉತ್ಸವ-2025-26’ರ ಐದು ದಿನಗಳ ರಂಗೋತ್ಸವದ ಕೊನೆಯ ದಿನ ‘ಕೊಡಲ್ಲ ಅಂದ್ರೆ…
ಬೆಂಗಳೂರು : ನಗರದ ಹೊರವಲಯದ ಆನೇಕಲ್‌ನಲ್ಲಿ ಭಾನುವಾರ ಭೀಕರ ಸರಣಿ ಅಪಘಾತವಾಗಿದೆ. ವೇಗವಾಗಿ ನುಗ್ಗಿ ಬಂದ ಬೃಹತ್ ಕಂಟೈನರ್ ಲಾರಿಯೊಂದು…
ಮಂಡ್ಯ : ಮೌಢ್ಯಗಳನ್ನು ಜನರು ತಿರಸ್ಕರಿಸಿ ಬಸವಾದಿ ಶರಣರು ತಿಳಿಸಿರುವುದನ್ನು ಪಾಲನೆ ಮಾಡಬೇಕು. ವಿದ್ಯಾವಂತರಲ್ಲಿ ಕಂದಾಚಾರ ಹಾಗೂ ಮೌಢ್ಯತೆ ಇರುವುದು…
ಮೈಸೂರು : ನಗರದ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಲಲಿತ ಕಲೆ ಮತ್ತು ಕರಕುಶಲ ಹಾಗೂ ಮಹಿಳಾ ಉದ್ದಿಮೆ ಉಪ…
ಬೆಂಗಳೂರು : ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಬಿಜೆಪಿ ಶಾಸಕ ಬೈರತಿ ಬಸವರಾಜು, ಕಳೆದೆರಡು…