ಓದುಗರ ಪತ್ರ
ಮೈಸೂರಿನ ಜೆ. ಕೆ. ಮೈದಾನದ ಎಂಎಂಸಿ ಅಲುಮ್ನಿ ಸಭಾಂಗಣದಲ್ಲಿ ಸ್ವರಾಂಜಲಿ ಸಂಸ್ಥೆಯ ವತಿಯಿಂದ ‘ಸಮತೆ ಮಮತೆ’ ಎಂಬ ಘೋಷ ವಾಕ್ಯದಡಿ ಆಯೋಜಿಸಿದ್ದ ಹಳೆಯ ಕನ್ನಡ ಮತ್ತು ಹಿಂದಿ ಚಿತ್ರಗೀತೆಗಳ ರಸಮಂಜರಿ ಕಾರ್ಯಕ್ರಮದಲ್ಲಿ ಮನರಂಜನೆಯ ಕಾರ್ಯಕ್ರಮಕ್ಕಿಂತ ವೇದಿಕೆ ಕಾರ್ಯಕ್ರಮಕ್ಕೆ ಹೆಚ್ಚು ಒತ್ತು ನೀಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬ ಅತಿಥಿಯೂ ೩೦ ನಿಮಿಷಗಳಿಗಿಂತಲೂ ಹೆಚ್ಚು ಕಾಲ ಭಾಷಣ ಮಾಡಿದ್ದರಿಂದ ರಸಮಂಜರಿ ಕಾರ್ಯಕ್ರಮ ವಿಳಂಬವಾಗಿ ಶುರುವಾಯಿತು. ಈ ಕಾರ್ಯಕ್ರಮಕ್ಕೆ ಪ್ರೇಕ್ಷಕರು ಹಳೆಯ ಹಾಡುಗಳನ್ನು ಆಸ್ವಾದಿಸಲು ಬಂದಿದ್ದರು. ಆದರೆ ಮುಖ್ಯ ಕಾರ್ಯಕ್ರಮಕ್ಕಿಂತ ವೇದಿಕೆ ಕಾರ್ಯಕ್ರಮವೇ ಹೆಚ್ಚು ಸಮಯ ನಡೆದಿದ್ದರಿಂದ ಪ್ರೇಕ್ಷಕರು ಬೇಸರಗೊಂಡರು.
ಸಂಜೆ ೫. ೩೦ಕ್ಕೆ ಆರಂಭವಾಗಬೇಕಿದ್ದ ರಸಮಂಜರಿ ವೇದಿಕೆ ಕಾರ್ಯಕ್ರಮದಿಂದಾಗಿ ಸಂಜೆ ೭. ೦೦ ಗಂಟೆಗೆ ಪ್ರಾರಂಭವಾಯಿತು. ಅಷ್ಟರಲ್ಲಾಗಲೇ ಚಿತ್ರಗೀತೆಗಳನ್ನು ಆಲಿಸಲು ಬಂದಿದ್ದ ಪ್ರೇಕ್ಷಕರ ಪೈಕಿ ಬಹುಪಾಲು ಮಂದಿ ಮನೆಗಳಿಗೆ ತೆರಳಿದ್ದರು.
ಮುಂದಾದರೂ ಕಾರ್ಯಕ್ರಮ ಆಯೋಜಕರು ಸಮಯದ ಪರಿವೆಯೊಂದಿಗೆ, ಪ್ರೇಕ್ಷಕರ ಮನಸ್ಥಿತಿಯನ್ನೂ ಅರ್ಥ ಮಾಡಿಕೊಂಡು ವೇದಿಕೆ ಕಾರ್ಯಕ್ರಮಗಳಿಗೆ ಕಡಿಮೆ ಸಮಯವನ್ನು ಮೀಸಲಿಟ್ಟು, ಕಾರ್ಯಕ್ರಮ ಆಯೋಜಿಸಲಿ.
-ಜಿ. ಪಿ. ಹರೀಶ್, ವಿ. ವಿ. ಮೊಹಲ್ಲ, ಮೈಸೂರು.
ಮೈಸೂರು : ಸ್ವಚ್ಛ ನಗರಿ ಮೈಸೂರಿನ ರಮಣೀಯ ಸ್ಥಳವಾದ ಕುಕ್ಕರಹಳ್ಳಿ ಕೆರೆಯ ಸ್ವಚ್ಛತೆಗಾಗಿ, ಸ್ವಚ್ಛ ಸರ್ವೇಕ್ಷಣ ಅಭಿಯಾನದ ಭಾಗವಾಗಿ ಮೈಸೂರು…
ಬೆಂಗಳೂರು : ಸಿದ್ದರಾಮಯ್ಯ ಲೀಸ್ ಬೇಸ್ಡ್ ಮುಖ್ಯಮಂತ್ರಿ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ. ಸಿದ್ದರಾಮಯ್ಯ ಅವರು ಅಧಿಕಾರವಧಿಯಲ್ಲಿ…
ಬೆಂಗಳೂರು : ವಿದ್ಯಾರ್ಥಿ ಜೀವನದ ಅತಿ ಮಹತ್ವದ ಘಟ್ಟ ಎಂದೇ ಪರಿಗಣಿಸಲಾದ ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ…
ಮೈಸೂರು : ಸ್ಪಾಮ್ ಕರೆಗಳ ಮೂಲಕ ಡಿಜಿಟಲ್ ಅರೆಸ್ಟ್ ಹಾಗೂ ಡಿಜಿಟಲ್ ವಂಚನೆ ಮಾಡುತ್ತಿರುವ ಪ್ರಕರಣಗಳ ಹಿನ್ನೆಲೆಯಲ್ಲಿ ಫೋನಿನ ಕಾಲಿಂಗ್…
ಹನೂರು : ಮಲೆ ಮಹದೇಶ್ವರ ವನ್ಯಜೀವಿಧಾಮದ ಹನೂರು ವಲಯ ವ್ಯಾಪ್ತಿಯ ಪಚ್ಚೆ ದೊಡ್ಡಿ ಗ್ರಾಮದ ಸಮೀಪ ಹುಲಿ ಕೊಂದು ಮೂರು…
ಮಳವಳ್ಳಿ : ಪ್ಲಾಸ್ಟಿಕ್ ಗೋದಾಮಿಗೆ ಆಕಸ್ಮಿಕ ಬೆಂಕಿ ಬಿದ್ದು ಲಕ್ಷಾಂತರ ಮೌಲ್ಯದ ಹಳೆ ಪ್ಲಾಸ್ಟಿಕ್ ಭಸ್ಮವಾಗಿರುವ ಘಟನೆ ಶುಕ್ರವಾರ ತಡರಾತ್ರಿ…