ಓದುಗರ ಪತ್ರ
ಬೇಸಿಗೆಕಾಲ ಆರಂಭಗೊಳ್ಳುತ್ತಿದ್ದು, ದಿನೇದಿನೇ ತಾಪಮಾನ ಏರಿಕೆ ಯಾಗುತ್ತಿದೆ. ಅದರಲ್ಲಿಯೂ ಮಧ್ಯಾಹ್ನ ೧೨ ಗಂಟೆಯಾಗುತ್ತಿದ್ದಂತೆ ಉಷ್ಣಾಂಶ ೩೦ ಡಿಗ್ರಿ ದಾಟುತ್ತಿದ್ದು, ಉರಿಯುವ ಬಿಸಿಲಿನಲ್ಲಿ ರಸ್ತೆಗಿಳಿಯು ವುದೇ ಕಷ್ಟವಾಗಿದೆ.
ಮೈಸೂರಿನ ಕೆಲವು ವೃತ್ತಗಳಲ್ಲಿ ಸಿಗ್ನಲ್ ಲೈಟ್‌ಗಳು ಬೆಳಿಗ್ಗೆಯಿಂದ ರಾತ್ರಿ ಯವರೆಗೂ ಕಾರ್ಯನಿರ್ವಹಿಸುತ್ತಿದ್ದು, ಮಧ್ಯಾಹ್ನದ ವೇಳೆ ವಾಹನ ದಟ್ಟಣೆ ಇಲ್ಲದಿದ್ದರೂ ಜನರು ಬಿಸಿಲಿನಲ್ಲೇ ನಿಲ್ಲುವಂತಾಗಿದೆ. ಸಾಮಾನ್ಯ ವಾಗಿ ಮೈಸೂರಿನಲ್ಲಿ ಬೆಳಿಗ್ಗೆ ೬ರಿಂದ ೧೧ ಗಂಟೆಯವರೆಗೆ ಹಾಗೂ ಸಂಜೆ ೪ರಿಂದ ೯ ಗಂಟೆಯವರೆಗೆ ವಾಹನದಟ್ಟಣೆ ಹೆಚ್ಚಾಗಿರುತ್ತದೆ. ಈ ಸಂದರ್ಭ ದಲ್ಲಿ ಸಿಗ್ನಲ್ ಲೈಟ್‌ಗಳು ಅತ್ಯವಶ್ಯ. ಆದರೆ ಕೆಲ ಭಾಗಗಳಲ್ಲಿ ವಾಹನ ದಟ್ಟಣೆ ಇಲ್ಲದಿದ್ದರೂ ಸಿಗ್ನಲ್ ಲೈಟ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಸುಡುವ ಬಿಸಿಲಿನಲ್ಲಿ ವಾಹನ ಸವಾರರು ರಸ್ತೆಯಲ್ಲಿ ನಿಲ್ಲುವಂತಾಗಿದೆ. ಇದರಿಂದಾಗಿ ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು ವಾಹನ ಗಳಲ್ಲಿ ಸಂಚರಿಸುವಾಗ, ಬಿಸಿಲಿನ ತಾಪಕ್ಕೆ ಅಸ್ವಸ್ಥಗೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಸಂಚಾರ ಪೊಲೀಸರು ಈ ಬಗ್ಗೆ ಗಮನಹರಿಸಿ ವಾಹನ ದಟ್ಟಣೆ ಕಡಿಮೆ ಇರುವ ಆದಿಚುಂಚನಗಿರಿ ರಸ್ತೆಯ ಅಗರ್‌ವಾಲ್ ಕಣ್ಣಿನ ಆಸ್ಪತ್ರೆ ವೃತ್ತ, ಕುವೆಂಪು ನಗರದ ಕಾಂಪ್ಲೆಕ್ಸ್ ವೃತ್ತ ಸೇರಿದಂತೆ ಇತರೆ ಸರ್ಕಲ್‌ಗಳಲ್ಲಿ ಮಧ್ಯಾಹ್ನದ ವೇಳೆ ಸಿಗ್ನಲ್ ಫ್ರೀ ಮಾಡುವುದು ಒಳಿತು. -ಬೂಕನಕೆರೆ ವಿಜೇಂದ್ರ, ಕುವೆಂಪುನಗರ, ಮೈಸೂರು
ಮಕ್ಕಳನ್ನು ಒಂದನೇ ತರಗತಿಗೆ ಪ್ರಸಕ್ತ ಸಾಲಿಗೆ ದಾಖಲಿಸುವ ವಯೋಮಿತಿಯನ್ನು ಆರು ವರ್ಷಗಳಿಗೆ ನಿಗದಿಗೊಳಿಸಿ ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.…
ಮೈಸೂರಿನಲ್ಲಿ ಸಮಾಜಘಾತುಕ ಶಕ್ತಿಗಳ ದುಷ್ಕೃತ್ಯ ಮತ್ತು ಡ್ರಗ್ಸ್ ಜಾಲ ಪ್ರಕರಣಗಳ ಪತ್ತೆಗೆ ಡ್ರೋನ್ ಕಾರ್ಯಾಚರಣೆ ನಡೆಸಲು ಮೈಸೂರು ನಗರ ಪೊಲೀಸರು…
ಗುಣಮಟ್ಟದ ಕನ್ನಡ ಮತ್ತು ಪ್ರಾದೇಶಿಕ ಭಾಷಾ ಚಿತ್ರಗಳಿಗೆ ಸರ್ಕಾರ ನೀಡುತ್ತಿರುವ ಸಹಾಯಧನವನ್ನು ೨೦೨೬ನೇ ಸಾಲಿನಿಂದ ರದ್ದುಪಡಿಸಲು ಸರ್ಕಾರ ನಿರ್ಧರಿಸಿದೆ ಎನ್ನುವುದು…
ಎಸ್.ಎ. ಹುಸೇನ್ ಶೀಘ್ರದಲ್ಲೇ ಹೊಸ ಪೈಪ್‌ಲೈನ್ ಮೂಲಕ ನೀರು ಸರಬರಾಜು ೪೭.೪೧ ಕೋಟಿ ರೂ. ವೆಚ್ಚದ ೨ ಹಂತಗಳ ಕಾಮಗಾರಿ…
ಸಫಾರಿ ಪುನಾರಂಭಕ್ಕೆ ಸರ್ಕಾರದ ಆದೇಶ ಹೊರ ಬಿದ್ದ ಬಳಿಕ ರೈತ ಸಂಘಟನೆಗಳ ಆಕ್ರೋಶ ಭುಗಿಲೆದಿದ್ದೆ. ಅಧಿಕಾರಿಗಳು, ಸರ್ಕಾರದ ವಿರುದ್ಧ ರೈತ…
ಮಂಜು ಕೋಟೆ ಆದೇಶ ಬಂದ ತಕ್ಷಣ ಸಫಾರಿ ಪುನರ್ ಆರಂಭಿಸಲಾಗುವುದು: ಅರಣ್ಯಾಧಿಕಾರಿ ಎಚ್.ಡಿ.ಕೋಟೆ: ರಾಜ್ಯ ಸರ್ಕಾರವು ಸಫಾರಿ ಆರಂಭಕ್ಕೆ ಆದೇಶ…