ಭಾರತ್ ಸಂಚಾರ ನಿಗಮ ನಿಯಮಿತ ೨೦೨೪-೨೫ನೇ ಸಾಲಿನ ೩ನೇ ತ್ರೈಮಾಸಿಕದಲ್ಲಿ ೨೬೨ ಕೋಟಿ ರೂ. ಲಾಭಗಳಿಸಿದೆ ಎಂಬುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಇದು ನಿಜಕ್ಕೂ ಸಾಧನೆಯೇ ಸರಿ.
ಬಿಎಸ್‌ಎನ್‌ಎಲ್ ೧೭ ವರ್ಷಗಳ ನಂತರ ಲಾಭ ಗಳಿಸುವತ್ತ ಮುಖ ಮಾಡಿರುವುದು ಸಂತೋಷದ ವಿಚಾರ. ಬಿಎಸ್‌ಎನ್‌ಎಲ್ ಸಾಕಷ್ಟು ಏಳುಬೀಳುಗಳನ್ನು ಕಂಡಿದೆ. ಖಾಸಗಿ ದೂರ ಸಂಪರ್ಕ ಸಂಸ್ಥೆಗಳೊಂದಿಗೆ ಪೈಪೋಟಿ ನೀಡಲಾಗದೆ ನಿರಂತರವಾಗಿ ನಷ್ಟವನ್ನೇ ಅನುಭವಿಸಿದ ಈ ಸಂಸ್ಥೆ ಮುಂದಿನ ದಿನಗಳಲ್ಲಿ ಮುಚ್ಚಿ ಹೋಗಬಹುದು, ನೌಕರರು ಕೆಲಸ ಕಳೆದುಕೊಳ್ಳಬಹುದು ಎಂಬ ಆತಂಕವಿತ್ತು. ಈ ಆತಂಕದಿಂದಲೇ ಸಾವಿರಾರು ನೌಕರರು ಸ್ವಯಂ ನಿವೃತ್ತಿಯನ್ನೂ ಪಡೆದುಕೊಂಡಿದ್ದರು. ಇಂತಹ ಸಂದರ್ಭದಲ್ಲಿ ಕೆಲ ದೇಶೀಯ ಹಾಗೂ ವಿದೇಶಿ ಟೆಲಿಕಾಂ ಕಂಪೆನಿಗಳು ಬಿಎಸ್‌ಎನ್‌ಎಲ್‌ನ ನೆರವಿಗೆ ಧಾವಿಸಿದ ಪರಿಣಾಮ ಹಾಗೂ ಕೇಂದ್ರ ಸರ್ಕಾರ ಸಾಕಷ್ಟು ಅನುದಾನವನ್ನು ನೀಡಿದ್ದರಿಂದ ಬಿಎಸ್‌ಎನ್‌ಎಲ್ ಮರುಹುಟ್ಟು ಪಡೆಯುವಂತಾಯಿತು. ಬಿಎಸ್‌ಎನ್‌ಎಲ್ ಈಗ ಲಾಭ ಗಳಿಸುವತ್ತ ಮುನ್ನುಗ್ಗುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಚಾರ. ಕಂಪೆನಿಯನ್ನು ಕಟ್ಟಿಬೆಳೆಸಿದ ಸಿಬ್ಬಂದಿಗಳಿಗೆ ಅಭಿನಂದನೆಗಳು. -ಕೆ. ವಿ. ವಾಸು, ವಕೀಲರು, ವಿವೇಕಾನಂದ ನಗರ, ಮೈಸೂರು
ಮಂಡ್ಯ : ಜಿಲ್ಲೆಯ ಯುವ ಜನತೆಗೆ ನಗರದ ಚಿತ್ರಣವನ್ನು ಪ್ರದರ್ಶಿಸುವ ನಿಟ್ಟಿನಲ್ಲಿ ಹೆಲಿಕಾಪ್ಟರ್ ಜಾಯ್ ರೈಡ್‌ಅನ್ನು ಆಯೋಜಿಸಲಗಿದ್ದು, ಮೂರು ದಿನಗಳ…
ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಚಿತ್ರದ ಟೀಸರ್ ಇಂದು(ಫೆ.20) ಬಿಡುಗಡೆಯಾಗಿದೆ. 2 ನಿಮಿಷಗಳ ಈ ಟೀಸರ್…
ಮಕ್ಕಳನ್ನು ಒಂದನೇ ತರಗತಿಗೆ ಪ್ರಸಕ್ತ ಸಾಲಿಗೆ ದಾಖಲಿಸುವ ವಯೋಮಿತಿಯನ್ನು ಆರು ವರ್ಷಗಳಿಗೆ ನಿಗದಿಗೊಳಿಸಿ ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.…
ಮೈಸೂರಿನಲ್ಲಿ ಸಮಾಜಘಾತುಕ ಶಕ್ತಿಗಳ ದುಷ್ಕೃತ್ಯ ಮತ್ತು ಡ್ರಗ್ಸ್ ಜಾಲ ಪ್ರಕರಣಗಳ ಪತ್ತೆಗೆ ಡ್ರೋನ್ ಕಾರ್ಯಾಚರಣೆ ನಡೆಸಲು ಮೈಸೂರು ನಗರ ಪೊಲೀಸರು…
ಗುಣಮಟ್ಟದ ಕನ್ನಡ ಮತ್ತು ಪ್ರಾದೇಶಿಕ ಭಾಷಾ ಚಿತ್ರಗಳಿಗೆ ಸರ್ಕಾರ ನೀಡುತ್ತಿರುವ ಸಹಾಯಧನವನ್ನು ೨೦೨೬ನೇ ಸಾಲಿನಿಂದ ರದ್ದುಪಡಿಸಲು ಸರ್ಕಾರ ನಿರ್ಧರಿಸಿದೆ ಎನ್ನುವುದು…
ಎಸ್.ಎ. ಹುಸೇನ್ ಶೀಘ್ರದಲ್ಲೇ ಹೊಸ ಪೈಪ್‌ಲೈನ್ ಮೂಲಕ ನೀರು ಸರಬರಾಜು ೪೭.೪೧ ಕೋಟಿ ರೂ. ವೆಚ್ಚದ ೨ ಹಂತಗಳ ಕಾಮಗಾರಿ…