ಓದುಗರ ಪತ್ರ

ಓದುಗರ ಪತ್ರ | ಇದು ಸೋಲಲ್ಲ, ಶರಣಾಗತಿ

ಯಾವುದೇ ಕ್ರೀಡೆಯಾದರೂ ಅಲ್ಲಿ ಸೋಲು-ಗೆಲುವು ಸಾಮಾನ್ಯ. ಗೆದ್ದಾಗ ಬೀಗಬಾರದು ಸೋತಾಗ ಕುಗ್ಗಬಾರದು. ಅದೇ ಕ್ರೀಡಾಸ್ಫೂರ್ತಿ. ಆದರೆ ಶ್ರೀಲಂಕಾ ವಿರುದ್ಧ ನಡೆದ ಏಕದಿನ ಕ್ರಿಕೆಟ್ ಸರಣಿಯಲ್ಲಿ ಭಾರತ ತಂಡದ ಸೋಲು ನಿಜಕ್ಕೂ ಒಪ್ಪಿಕೊಳ್ಳುವ ಸೋಲಲ್ಲ.

ಸೋಲು ಗೌರವಾನ್ವಿತವಾಗಿರಬೇಕೇ ವಿನಾ ಶರಣಾಗತಿಯಂತಿರಬಾರದು. ಆದರೆ ಶ್ರೀಲಂಕಾದ ಆತಿಥ್ಯದಲ್ಲಿ ನಡೆದಏಕದಿನ ಕ್ರಿಕೆಟ್ ಸರಣಿಯಲ್ಲಿ ಭಾರತ 3 ಪಂದ್ಯಗಳ ಪೈಕಿ ಎರಡನ್ನು ಹೀನಾಯವಾಗಿ ಸೋತಿದಲ್ಲದೇ ಒಂದು ಪಂದ್ಯವನ್ನು ಮಾಡಿಕೊಂಡಿದೆ. ಭಾರತೀಯ ತಂಡದಲ್ಲಿ ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್, ಶುಭನ್ ಗಿಲ್, ಶ್ರೇಯಸ್ ಅಯ್ಯ‌ರಂತಹ ಅನುಭವಿ ಆಟಗಾರರಿದ್ದರೂ ಭಾರತ 230-240 ರನ್‌ಗಳ ಮೊತ್ತವನ್ನೂ ಬೆನ್ನಟ್ಟಲು ಸಾಧ್ಯವಾಗಿಲ್ಲ ಎಂದರೆ ಇದನ್ನು ಸೋಲು ಎನ್ನುವುದಕ್ಕಿಂತಲೂ ಶರಣಾಗತಿ ಎಂದೇ ಹೇಳಬೇಕು. ಎನ್ನಬಹುದು. ಅಲ್ಲದೆ ನಡೆದ ಮೂರು ಪಂದ್ಯಗಳ ಪೈಕಿ ಮೊದಲ ಪಂದ್ಯದಲ್ಲಿ 231 ರನ್‌ಗಳನ್ನು ಗಳಿಸಲಾಗದೆ ಪಂದ್ಯವನ್ನು ಡ್ರಾ ಮಾಡಿಕೊಳ್ಳುವ ಜತೆಗೆ ಆಲ್‌ಔಟ್‌ ಆಗಿತ್ತು. ಉಳಿದ ಎರಡು ಪಂದ್ಯಗಳಲ್ಲಿಯೂ ಆಲೌಟ್ ಆಗಿರುವುದಲ್ಲದೆ 32 ಮತ್ತು 110 ರನ್‌ಗಳ ಭಾರಿ ಅಂತರದ ಸೋಲು ಅನುಭವಿಸಿದೆ. ಭಾರತೀಯ ಕ್ರಿಕೆಟ್ ತಂಡದ ಈ ಪ್ರದರ್ಶನ ಕ್ರಿಕೆಟ್ ಅಭಿಮಾನಿಗಳಿಗೆ ಬೇಸರ ತಂದಿದ್ದು, ಗೌತಮ್ ಗಂಭೀರ್ ತರಬೇತುದಾರರಾಗಿ ಆಯ್ಕೆಯಾದ ಮೊದಲ ಸರಣಿಯಲ್ಲಿಯೇ ಈ ರೀತಿಯ ಸೋಲು ನಿಜಕ್ಕೂ ಬೇಸರ.

-ರಮಾನಂದ ಶರ್ಮಾ, ಜೆ.ಪಿ.ನಗರ, ಬೆಂಗಳೂರು,

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

30 ಹಾಡಿಗಳಿಗೂ ಅರಣ್ಯ ಹಕ್ಕು ಪತ್ರಗಳನ್ನು ನೀಡಲು ಆಗ್ರಹ

ಹುಣಸೂರು: ಹಾಡಿಗಳ ಅರಣ್ಯ ಹಕ್ಕು ಸಮಿತಿಗಳ ಪ್ರತಿನಿಧಿಗಳಿಂದ ಅರಣ್ಯ ಪ್ರವೇಶ ಅಭಿಯಾನ ಹುಣಸೂರು: ತಾಲ್ಲೂಕಿನ ಆದಿವಾಸಿಗಳು ೨೦೦೬ರ ಆರಣ್ಯ ಹಕ್ಕು…

1 hour ago

ದಶಕದಿಂದ ಕಾದಿದ್ದ ವಿದ್ಯಾರ್ಥಿಗಳ ವನವಾಸಕ್ಕೆ ಮುಕ್ತಿ!

ಕೆ.ಬಿ.ರಮೇಶ ನಾಯಕ ೨೦೧೩-೧೪, ೨೦೧೪-೧೫ನೇ ಸಾಲಿನಲ್ಲಿ ಪ್ರವೇಶ ಪಡೆದು ಉತ್ತೀರ್ಣರಾದವರಿಗೆ ಪದವಿ ಪ್ರಮಾಣಪತ್ರ ಮುಕ್ತ ವಿವಿಯ ಇನ್‌ಹೌಸ್‌ನಲ್ಲಿ ಪ್ರವೇಶ ಪಡೆದಿದ್ದವರಿಗೆ…

1 hour ago

ಎಚ್.ಡಿ.ಕೋಟೆ ಪೊಲೀಸ್ ಕ್ಯಾಂಟೀನ್ ಬಂದ್

ಕಡಿಮೆ ದರದಲ್ಲಿ ಊಟ, ತಿಂಡಿ ನೀಡುತ್ತಿದ್ದ ಕ್ಯಾಂಟೀನ್ ಮುಚ್ಚಿದ್ದರಿಂದ ಕೂಲಿ ಕಾರ್ಮಿಕರಿಗೆ, ಬಡವರಿಗೆ ತೊಂದರೆ  ಎಚ್.ಡಿ.ಕೋಟೆ: ಅನೇಕ ವಿದ್ಯಾರ್ಥಿಗಳಿಗೆ, ಕೂಲಿ…

1 hour ago

300 ಸಿಎ ನಿವೇಶನಗಳ ಹಂಚಿಕೆಗೆ ಎಂಡಿಎ ನಿರ್ಧಾರ

ನಾಲ್ವರು ನಿವೃತ್ತ ಪೊಲೀಸ್ ಅಧಿಕಾರಿಗಳ ನೇತೃತ್ವದ ಕ್ಷಿಪ್ರ ಕಾರ್ಯಪಡೆ ರಚನೆಗೆ ಒಪ್ಪಿಗೆ  ಮೈಸೂರು: ಶಿಕ್ಷಣ, ಸಾಮಾಜಿಕ, ಆರೋಗ್ಯ ಮತ್ತಿತರ ಸೇವಾ…

1 hour ago

ಸಂಸದ ಯದುವೀರ್‌ ಪ್ರಯತ್ನದ ಫಲಶ್ರುತಿ : ತಂಬಾಕು ಮಾರಾಟಕ್ಕೆ ಅನುಮತಿ

ಅಧಿಸೂಚನೆ ಹೊರಡಿಸಿದ ಕೇಂದ್ರ ಸರ್ಕಾರ ಮೈಸೂರು : ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ತಂಬಾಕು ಬೆಳೆಗಾರರ ಸಮಸ್ಯೆಗಳು ಹಾಗೂ ಮಾರಾಟ…

10 hours ago