ಓದುಗರ ಪತ್ರ

ಓದುಗರ ಪತ್ರ: ನೋಂದಣಿ ಅಂಚೆಗೆ ವಿದಾಯ!

ಅಂಚೆ ಇಲಾಖೆಯ ವಿಶ್ವಾಸಾರ್ಹ ಸೇವೆಗಳಲ್ಲಿ ಒಂದಾಗಿದ್ದ ನೋಂದಣಿ ಅಂಚೆ ( Registered Post) ಸೇವೆಯನ್ನು ಆಗಸ್ಟ್ ತಿಂಗಳ ಒಂದನೇ ತಾರೀಖಿನಿಂದ ಹಿಂದಕ್ಕೆ ಪಡೆಯಲಾಗಿದ್ದು, ಇದರ ಬದಲು ಸ್ಪೀಡ್ ಪೋಸ್ಟ್ ಸೇವೆಯನ್ನು ಗ್ರಾಹಕರು ಉಪಯೋಗಿಸಿಕೊಳ್ಳಬಹುದಾಗಿದೆ.

ದೇಶದಲ್ಲಿ ಅಂಚೆ ಕಚೇರಿಗಳು ಪ್ರಾರಂಭಗೊಂಡ ದಿನದಿಂದಲೂ ತನ್ನ ವಿಶ್ವಾಸಾರ್ಹ ಸೇವೆಯಿಂದ ನೋಂದಣಿ ಅಂಚೆ ಜನಪ್ರಿಯವಾಗಿತ್ತು. ಸಾಮಾನ್ಯವಾಗಿ ವಕೀಲರು ನೋಂದಣಿ ಅಂಚೆ ಮೂಲಕ ಎದುರು ಪಾರ್ಟಿದಾರರಿಗೆ ನೋಟಿಸ್ ಇತ್ಯಾದಿಗಳನ್ನು ಕಳುಹಿಸುತ್ತಿದ್ದರು.

ಕಂಪೆನಿ ಗಳು, ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕ ವಲಯದ ಇತರರು ಕೂಡ ಕಾಗದ ಪತ್ರಗಳನ್ನು ರಿಜಿಸ್ಟರ‍್ಡ್ ಪೋಸ್ಟ್ ಮೂಲಕ ಕಳುಹಿಸುತ್ತಿದ್ದರು. ಅಂಚೆ ಇಲಾಖೆಯ ಪರಿಣಾಮಕಾರಿ ಸೇವೆ ಅನಿಸಿದ್ದ ನೋಂದಣಿ ಅಂಚೆ ಸೇವೆಯನ್ನು ನಿಲ್ಲಿಸು ತ್ತಿರುವುದು ಬೇಸರದ ಸಂಗತಿ.

ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಅತ್ಯಂತ ಜನಪ್ರಿಯವಾಗಿದ್ದ ಟೆಲಿಗ್ರಾಂ ಅಥವಾ ತಂತಿ ಸೇವೆಯನ್ನು ಬಹಳ ವರ್ಷಗಳ ಹಿಂದೆಯೇ ನಿಲ್ಲಿಸಲಾಯಿತು. ಆನಂತರ ಸರ್ಟಿಫಿಕೇಟ್ ಆಫ್ ಪೋಸ್ಟಿಂಗ್, ರೆಕಾರ್ಡೆಡ್ ಡೆಲಿವರಿ ಮುಂತಾದ ಸೇವೆಗಳನ್ನು ನಿಲ್ಲಿಸಲಾಯಿತು. ಇದೀಗ ನೋಂದಣಿ ಅಂಚೆ ಸೇವೆಯನ್ನೂ ಹಿಂದಕ್ಕೆ ಪಡೆಯುವುದರೊಂದಿಗೆ ಅಂಚೆ ಇಲಾಖೆಯ ಪ್ರಮುಖ ಸೇವೆಗಳು ಸ್ಥಗಿತಗೊಂಡಂತಾಗಿದೆ. ಸದ್ಯ ಅಂಚೆ ಕಚೇರಿಗಳಾದರೂ ಉಳಿದುಕೊಂಡಿವೆಯಲ್ಲ ಅದೇ ನಮ್ಮ ಪುಣ್ಯ.

– ಕೆ.ವಿ.ವಾಸು, ವಿವೇಕಾನಂದ ನಗರ, ಮೈಸೂರು

ಆಂದೋಲನ ಡೆಸ್ಕ್

Recent Posts

ತಂತ್ರಜ್ಞಾನ ಶಸ್ತ್ರಾಸ್ತ್ರೀಕರಣದ ಬಗ್ಗೆ ಕಳವಳಗಳ ವ್ಯಕ್ತಪಡಿಸಿದ ಪ್ರಧಾನಿ ಮೋದಿ

ನವದೆಹಲಿ : ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಜಾಗತಿಕವಾಗಿ ಸಾಮಾನ್ಯ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಪ್ರಧಾನಿ…

7 hours ago

ಭಾನುವಾರದ ಹಾಡುಪಾಡು | ಹೊರಗೆ ನಗುವಿನ ಮೇಕಪ್‌, ಒಳಗೆ ಕುದಿಯುವ ಬೇಗುದಿ

ಮೇಘನ ಕೆ.ಆರ್‌ ಕೇರಳಿಗಳಾದ ನನಗೆ ವರ್ಷಕ್ಕೆರಡು ಹಬ್ಬ-ಓಣಂ, ವಿಶು ಮಾತ್ರ ತಿಳಿದಿತ್ತು. ದೀಪಾವಳಿಗೆ ದನಗಳಿಗೆ ಪೂಜೆ ಮಾಡಿ ಅಮ್ಮ ಕೆಲಸಕ್ಕೆ…

11 hours ago

ಭಾನುವಾರದ ಹಾಡುಪಾಡು | ಮಳೆ ತರುವ ತಾಯಯಿ ಈ ಪುಟ್ಟ ಗೌರಿ

ಡಾ. ಶಿಲಿನಾ ಕೋಟೆ ಎನ್.‌ ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಕೇವಲ ಧಾರ್ಮಿಕ ಆಚರಣೆ ಗಳಲ್ಲ; ಅವು ಪ್ರಕೃತಿ, ಕೃಷಿ, ಮಳೆ,…

11 hours ago

ಗೌರಮ್ಮ ಭೂಮಿಗೆ ಬರುವ ದಿನ

ಶುಭಮಂಗಳ ರಾಮಾಪುರ ಗೌರಿಹಬ್ಬವೆಂದ ಕೂಡಲೇ ಸಂಭ್ರಮದ ನೆನಪು ಒಂದೆಡೆಯಾದರೆ ಕೆಲಸದ ಹೊರೆ ಮತ್ತೊಂದೆಡೆ. ನನ್ನೂರಿನಲ್ಲಂತೂ ಗೌರಿಹಬ್ಬಕ್ಕೆ ಮಡಿ ಮಾಡುವುದೇ ದೊಡ್ಡ…

11 hours ago

ಮಗಳು ಗೌರಿ, ದೇವತೆಯೂ ಗೌರಿ, ಮಳೆಯು ಗೌರಿ, ಬೆಂಕಿಯೂ ಗೌರಿ

ನಾಳಿನ ಗೌರಿ ಗಣೇಶ ಸಂಭ್ರಮಕ್ಕೆ ಬರಹಗಳ ಬಾಗಿನ ಡಾ.ಶುಭಶ್ರೀ ಪ್ರಸಾದ್‌, ಮಂಡ್ಯ ‘ಮಗಳು’ಎಂದ ಕ್ಷಣ ಕಣ್ಮುಂದೆ ಬರುವುದು ಜರಿ ಲಂಗ,…

11 hours ago

ಗೌರಿ-ಗಣೇಶ ಹಬ್ಬಕ್ಕೆ ಸಕಲ ಸಿದ್ಧತೆ

ಅರಮನೆ ನಗರಿಯ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರು ಸೇವಂತಿಗೆ ಹೂವು, ಏಲಕ್ಕಿ ಬಾಳೆಹಣ್ಣು ಸೇರಿ ಇನ್ನಿತರೆ ಹಣ್ಣುಗಳ ಬೆಲೆ ಹೆಚ್ಚಳ…

11 hours ago