ಓದುಗರ ಪತ್ರ
ಅಂಚೆ ಇಲಾಖೆಯ ವಿಶ್ವಾಸಾರ್ಹ ಸೇವೆಗಳಲ್ಲಿ ಒಂದಾಗಿದ್ದ ನೋಂದಣಿ ಅಂಚೆ ( Registered Post) ಸೇವೆಯನ್ನು ಆಗಸ್ಟ್ ತಿಂಗಳ ಒಂದನೇ ತಾರೀಖಿನಿಂದ ಹಿಂದಕ್ಕೆ ಪಡೆಯಲಾಗಿದ್ದು, ಇದರ ಬದಲು ಸ್ಪೀಡ್ ಪೋಸ್ಟ್ ಸೇವೆಯನ್ನು ಗ್ರಾಹಕರು ಉಪಯೋಗಿಸಿಕೊಳ್ಳಬಹುದಾಗಿದೆ.
ದೇಶದಲ್ಲಿ ಅಂಚೆ ಕಚೇರಿಗಳು ಪ್ರಾರಂಭಗೊಂಡ ದಿನದಿಂದಲೂ ತನ್ನ ವಿಶ್ವಾಸಾರ್ಹ ಸೇವೆಯಿಂದ ನೋಂದಣಿ ಅಂಚೆ ಜನಪ್ರಿಯವಾಗಿತ್ತು. ಸಾಮಾನ್ಯವಾಗಿ ವಕೀಲರು ನೋಂದಣಿ ಅಂಚೆ ಮೂಲಕ ಎದುರು ಪಾರ್ಟಿದಾರರಿಗೆ ನೋಟಿಸ್ ಇತ್ಯಾದಿಗಳನ್ನು ಕಳುಹಿಸುತ್ತಿದ್ದರು.
ಕಂಪೆನಿ ಗಳು, ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕ ವಲಯದ ಇತರರು ಕೂಡ ಕಾಗದ ಪತ್ರಗಳನ್ನು ರಿಜಿಸ್ಟರ‍್ಡ್ ಪೋಸ್ಟ್ ಮೂಲಕ ಕಳುಹಿಸುತ್ತಿದ್ದರು. ಅಂಚೆ ಇಲಾಖೆಯ ಪರಿಣಾಮಕಾರಿ ಸೇವೆ ಅನಿಸಿದ್ದ ನೋಂದಣಿ ಅಂಚೆ ಸೇವೆಯನ್ನು ನಿಲ್ಲಿಸು ತ್ತಿರುವುದು ಬೇಸರದ ಸಂಗತಿ.
ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಅತ್ಯಂತ ಜನಪ್ರಿಯವಾಗಿದ್ದ ಟೆಲಿಗ್ರಾಂ ಅಥವಾ ತಂತಿ ಸೇವೆಯನ್ನು ಬಹಳ ವರ್ಷಗಳ ಹಿಂದೆಯೇ ನಿಲ್ಲಿಸಲಾಯಿತು. ಆನಂತರ ಸರ್ಟಿಫಿಕೇಟ್ ಆಫ್ ಪೋಸ್ಟಿಂಗ್, ರೆಕಾರ್ಡೆಡ್ ಡೆಲಿವರಿ ಮುಂತಾದ ಸೇವೆಗಳನ್ನು ನಿಲ್ಲಿಸಲಾಯಿತು. ಇದೀಗ ನೋಂದಣಿ ಅಂಚೆ ಸೇವೆಯನ್ನೂ ಹಿಂದಕ್ಕೆ ಪಡೆಯುವುದರೊಂದಿಗೆ ಅಂಚೆ ಇಲಾಖೆಯ ಪ್ರಮುಖ ಸೇವೆಗಳು ಸ್ಥಗಿತಗೊಂಡಂತಾಗಿದೆ. ಸದ್ಯ ಅಂಚೆ ಕಚೇರಿಗಳಾದರೂ ಉಳಿದುಕೊಂಡಿವೆಯಲ್ಲ ಅದೇ ನಮ್ಮ ಪುಣ್ಯ.
– ಕೆ.ವಿ.ವಾಸು, ವಿವೇಕಾನಂದ ನಗರ, ಮೈಸೂರು
ಹೊಸದಿಲ್ಲಿ : ಗಣರಾಜ್ಯೋತ್ಸವಕ್ಕೂ ಮುನ್ನ ರಾಷ್ಟ್ರ ರಾಜಧಾನಿಯಲ್ಲಿ ಅಶಾಂತಿ ಸೃಷ್ಟಿಸುವುದಾಗಿ ಬೆದರಿಕೆ ಹಾಕಿದ್ದಕ್ಕಾಗಿ ಸಿಖ್ ಫಾರ್ ಜಸ್ಟೀಸ್ ನಿಯೋಜಿತ ಭಯೋತ್ಪಾದಕ…
ಭಾರತೀನಗರ : ಇಲ್ಲಿಗೆ ಸಮೀಪದ ಕೆ.ಪಿ.ದೊಡ್ಡಿ ಗ್ರಾಮದಲ್ಲಿ 5 ಕಾಡಾನೆಗಳ ಹಿಂಡು ಬೀಡುಬಿಟ್ಟು ಕಬ್ಬಿನ ಬೆಳೆ ಫಸಲನ್ನು ನಾಶಗೊಳಿಸಿರುವ ಘಟನೆ…
ಮಡಿಕೇರಿ : ಮೈಸೂರು-ಗೋಣಿಕೊಪ್ಪ ಹೆದ್ದಾರಿಯ ದಕ್ಷಿಣ ಕೊಡಗಿನ ತಿತಿಮತಿ ವ್ಯಾಪ್ತಿಯಲ್ಲಿ ಹುಲಿಯೊಂದು ಕಾಣಿಸಿಕೊಂಡು ಆತಂಕ ಸೃಷ್ಟಿಸಿದ್ದು, ಹುಲಿ ಸೆರೆಗೆ ಶಾಸಕ…
ನಂಜನಗೂಡು : ತಾಲ್ಲೂಕಿನ ಕಲ್ಲಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಖಾಸಗಿ ಶಾಲೆಗಳನ್ನು ಸಹ ನಾಚಿಸುವಂತಹ ಆಧುನಿಕ ಸೌಲಭ್ಯಗಳನ್ನು…
ಬೃಹತ್ ಕೈಗಾರಿಕೆ ಸಚಿವಾಲಯ ಅಧೀನದ ಎಆರ್‌ಎಐ ಘಟಕ ಸ್ಥಾಪನೆಗೆ ಪರಿಶೀಲನೆ ನಡೆಯುತ್ತಿದೆ : ಕುಮಾರಸ್ವಾಮಿ ಮಂಡ್ಯ : ಜಿಲ್ಲೆಯಲ್ಲಿ ಕೈಗಾರಿಕೆ…
ಮಂಡ್ಯ : ಕರ್ನಾಟಕ ರಾಜ್ಯವೇ ನನ್ನ ಪರಿಮಿತಿ. ಜನರು ಎಲ್ಲಿ ಅಪೇಕ್ಷೆ ಮಾಡುತ್ತಾರೆ ಅಲ್ಲಿಂದ ನನ್ನ ಸ್ಪರ್ಧೆ ಮಾಡುತ್ತೇನೆ ಎನ್ನುವ…