ಓದುಗರ ಪತ್ರ

ಓದುಗರ ಪತ್ರ| ನಾಮಫಲಕ ಸರಿಪಡಿಸಿ

ನಂಜನಗೂಡಿನ ಸುಜಾತಪುರಂ ರೈಲ್ವೆ ನಿಲ್ದಾಣದ ಸಮೀಪ ನಿರ್ಮಿಸಲಾಗಿರುವ ಮೇಲ್ಲೇತುವೆ ಬಳಿ ಅಳವಡಿಸಿರುವ ನಾಮಫಲಕದಲ್ಲಿ ಕನ್ನಡ ಅಪಭ್ರಂಶವಾಗಿದೆ.

ಗುಂಡ್ಲುಪೇಟೆ ಮತ್ತು ಚಾಮರಾಜನಗರ ನಡುವೆ ಸಂಪರ್ಕ ಕಲ್ಪಿಸುವ ಈ ಮಾರ್ಗದಲ್ಲಿ ಅಳವಡಿಸಿರುವ ನಾಮಫಲಕದಲ್ಲಿ ಗುಂಡ್ಲುಪೇಟೆ ಎಂಬುದರ ಬದಲಾಗಿ ‘ಗುಂಡ್ಲಪೇಟ್’ ಎಂತಲೂ ಚಾಮರಾಜನಗರ
ಎಂಬುದರ ಬದಲಾಗಿ “ಚಾಮಾರಾಜ ನಗರ’ ಎಂತಲೂ ತಪ್ಪಾಗಿ ಬರೆಯಲಾಗಿದೆ. ನಾಮಫಲಕ ಬರೆಯುವವರಿಗೆ ಸರಿಯಾಗಿ ಗೊತ್ತಿಲ್ಲ ಎಂದಾದರೆ ಸರಿಯಾಗಿ ತಿಳಿದುಕೊಂಡಿರುವವರಾದರೂ ಹೇಳಿ ಫಲಕದಲ್ಲಿ ಸರಿಯಾಗಿ ಬರೆಸಿ ಅಳವಡಿಸಬಹುದಿತ್ತಲ್ಲವೇ? ಹೆದ್ದಾರಿಯ ಫಲಕಗಳಲ್ಲಿಯೂ ಇಂತಹ ಲೋಪದೋಷಗಳು ಸಾಮಾನ್ಯವಾಗಿ ಹೋಗಿವೆ. ಇಂತಹ ಫಲಕಗಳನ್ನು ನೋಡನೋಡುತ್ತಲೇ ಓಡಾಡುವ ನಮಗೆ ಏನೂ ಅನ್ನಿಸುವುದೇ ಇಲ್ಲ. ಏಕೆಂದರೆ ನವೆಂಬರ್‌ಗೆ ಇನ್ನೂ ಮೂರ್ನಾಲ್ಕು ತಿಂಗಳಿದೆಯಲ್ಲ.

-ಮ.ಗು.ಬಸವಣ್ಣ, ಜೆಎಸ್ ಎಸ್ ಬಡಾವಣೆ, ಮೈಸೂರು.

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ಹೆಬ್ಜುಲ್ಲಾ ಭದ್ರಕೋಟೆ ಟಾರ್ಗೆಟ್‌ ಮಾಡಿ ಇಸ್ರೇಲ್‌ ದಾಳಿ: 11 ಮಂದಿ ಸಾವು

ಬೈರುತ್‌: ಅಮೇರಿಕಾ-ಇರಾನ್‌ ಮಾತುಕತೆ ವಿಫಲವಾದ ಕೆಲವೇ ಗಂಟೆಗಳ ನಂತರ ಹೆಬ್ಜುಲ್ಲಾ ಭದ್ರಕೋಟೆಯನ್ನು ಗುರಿಯಾಗಿಸಿಕೊಂಡು ಇಸ್ರೇಲ್‌ ನಡೆಸಿದ ದಾಳಿಯಲ್ಲಿ 11 ಮಂದಿ…

1 min ago

ಶಕ್ತಿ ಯೋಜನೆ ಟಿಕೆಟ್ ದುರ್ಬಳಕೆ : ಬಿಎಂಟಿಸಿ ಐವರು ಕಂಡಕ್ಟರ್‌ ಅಮಾನತು

ಬೆಂಗಳೂರು : ಶಕ್ತಿ ಯೋಜನೆಯ ಮಹಿಳಾ ಟಿಕೆಟ್‌ಗಳನ್ನು ಪುರುಷ ಪ್ರಯಾಣಿಕರಿಗೂ ನೀಡಿ ಹಣ ಸಂಗ್ರಹಿಸಿ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ…

53 mins ago

ಕೃಷಿ ಪದವಿ ಪಡೆಯಲು ಸುವರ್ಣ ಅವಕಾಶ : 50% ಮೀಸಲು, ಏಪ್ರಿಲ್ 29ಕ್ಕೆ ಪ್ರಾಯೋಗಿಕ ಪರೀಕ್ಷೆ

ಮೈಸೂರು : ರಾಜ್ಯದಲ್ಲಿ ಕೃಷಿ, ತೋಟಗಾರಿಕೆ, ಪಶುವೈದ್ಯಕೀಯ ಮತ್ತು ಅರಣ್ಯ ಶಾಸ್ತ್ರ ಪದವಿಗಳಿಗೆ ಕೃಷಿಕರ ಕೋಟಾದಡಿ (50%) ಅಡಿಯಲ್ಲಿ ವಿದ್ಯಾರ್ಥಿಗಳಿಗೆ…

1 hour ago

ಖ್ಯಾತ ಗಾಯಕಿ ಆಶಾ ಭೋಸ್ಲೆ ಇನ್ನಿಲ್ಲ

ಮುಂಬೈ : ಖ್ಯಾತ ಗಾಯಕಿ ಆಶಾ ಭೋಸ್ಲೆ (92) ಅವರು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಆಶಾ ಭೋಸ್ಲೆ ಅವರಿಗೆ…

2 hours ago

ಸಚಿವ ಸಂಪುಟ ಪುನರಾಚನೆಗೆ ಒತ್ತಡ ; ಕಾಂಗ್ರೆಸ್ ಶಾಸಕರು ಇಂದು ದೆಹಲಿಗೆ.

ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸಂಪುಟ ಪುನರಾಚನೆಗೆ ಒತ್ತಡ ಹೆಚ್ಚಾಗಿದ್ದು, 20ಕ್ಕೂ ಹೆಚ್ಚು ಶಾಸಕರು ಇಂದು (ಭಾನುವಾರ)…

2 hours ago

ಓದುಗರ ಪತ್ರ | ಕಿಕ್ಕೇರಿ ಕೆರೆಗೆ ಕೆಎಸ್‌ನ ಹೆಸರು ನಾಮಕರಣ ಶ್ಲಾಘನೀಯ

ಕನ್ನಡಕ್ಕೆ ಶ್ರೇಷ್ಠ ದಾಂಪತ್ಯ ಗೀತೆಗಳನ್ನು ನೀಡಿದ, ಪ್ರೇಮಕವಿಯೆಂದೇ ಹೆಸರಾದ ನಾಡಿನ ಹಿರಿಯ ಕವಿ ಕೆ.ಎಸ್.ನರಸಿಂಹಸ್ವಾಮಿ ಅವರ ಗೌರವಾರ್ಥವಾಗಿ ಹುಟ್ಟೂರಾದ ಕಿಕ್ಕೇರಿಯ…

3 hours ago