ಓದುಗರ ಪತ್ರ
ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಇತ್ತೀಚೆಗೆ ಮಂಡನೆ ಆಗಿರುವ ಸುಮಾರು ಹತ್ತು ವರ್ಷಗಳ ಹಿಂದೆ ನಡೆದಿದೆ ಎನ್ನಲಾದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಜಾತಿ ಜನಗಣತಿ ವರದಿ ಗೊಂದಲದ ಗೂಡಾಗಿದೆ.
ಶೇ. ೭೫ರಷ್ಟು ಜನರು ಈ ಸಮೀಕ್ಷೆಯೇ ನಡೆದಿಲ್ಲ ಎಂದು ಹೇಳುತ್ತಿದ್ದಾರೆ. ಉದಾಹರಣೆಗೆ ನಮ್ಮ ಬೀದಿಯಲ್ಲಾಗಲಿ, ನಮ್ಮ ಅಕ್ಕ- ಪಕ್ಕದ ಬಡಾವಣೆಯಲ್ಲಾಗಲಿ, ಈ ಜಾತಿ ಜನಗಣತಿ ನಡೆದಿಲ್ಲ, ಇದು ಯಾರನ್ನೋ ಮೆಚ್ಚಿಸಲು ಎ. ಸಿ. ರೂಂನಲ್ಲಿ ಕುಳಿತು ತಯಾರಿಸಿರುವ ವರದಿ ಎಂದು ಹೇಳಲಾಗುತ್ತಿದೆ.
ರಾಜ್ಯದಲ್ಲಿ ಈಗಾಗಲೇ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳು ಈ ಜಾತಿ ಗಣತಿ ವರದಿ ಅವೈಜ್ಞಾನಿಕವಾಗಿದ್ದು, ಇದನ್ನು ತಿರಸ್ಕರಿಸಿ, ಮತ್ತೊಮ್ಮೆ ನಿಖರವಾಗಿ ಮತ್ತು ಪಾರದರ್ಶಕವಾಗಿ ಜಾತಿ ಗಣತಿ ಮಾಡಬೇಕು ಎಂದು ಒತ್ತಾಯಿಸುತ್ತಿರುವುದು ಸಮಂಜಸವಾಗಿದೆ.
ಇಷ್ಟೆಲ್ಲಾ ವಿರೋಧದ ನಡುವೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ವರದಿಯನ್ನು ಅನುಷ್ಠಾನಕ್ಕೆ ತರಲು ಮುಂದಾಗಿರುವುದು ಅನೇಕ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಿ ಮತ್ತೊಮ್ಮೆ ನಿಖರವಾಗಿ ಮತ್ತು ಪಾರ ದರ್ಶಕವಾಗಿ ಜಾತಿ ಜನಗಣತಿ ನಡೆಸಬೇಕು, ಮತ್ತು ಎಲ್ಲ ವರ್ಗಗಳಿಗೂ ನ್ಯಾಯ ಸಿಗಬೇಕು. – ಬೂಕನಕೆರೆ ವಿಜೇಂದ್ರ, ಕುವೆಂಪುನಗರ, ಮೈಸೂರು
ಹುಣಸೂರು: ಚಾಲಕನ ನಿಯಂತ್ರಣ ತಪ್ಪಿ ಅಪೆ ಆಟೋವೊಂದು ಕೆರೆಗೆ ಉರುಳಿದ ಪರಿಣಾಮ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹುಣಸೂರು-ಮೈಸೂರು ಹೆದ್ದಾರಿಯಲ್ಲಿ…
ಎಚ್.ಡಿ.ಕೋಟೆ ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಸಾರ್ವಜನಿಕ ಶೌಚಾಲಯಗಳಿಲ್ಲದೆ ಸಾರ್ವಜನಿಕರು ರಸ್ತೆ ಬದಿಗಳಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಇದರಿಂದ ಅನೈರ್ಮಲ್ಯ ವಾತಾವರಣ…
ವಿಮಾ ವಲಯದಲ್ಲಿ ಶೇ. ೧೦೦ ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆ(ಎ-ಡಿಐ)ಯಿಂದ ವಿಮಾ ರಕ್ಷಣೆ ಪಡೆದ ಜೀವಗಳ ಮತ್ತು ಆಸ್ತಿಗಳ…
ರಾಜ್ಯದ ಅತ್ಯಂತ ಸಜ್ಜನ ರಾಜಕಾರಣಿಗಳಲ್ಲಿ ಒಬ್ಬರೆನಿಸಿದ್ದ ಹಿರಿಯ ರಾಜಕೀಯ ಮುತ್ಸದ್ದಿ ಶಾಮನೂರು ಶಿವಶಂಕರಪ್ಪನವರ ನಿಧನ ನಿಜಕ್ಕೂ ನೋವಿನ ಸಂಗತಿ. ದೇಶದ…
ಶತ್ರುಗಳಿಗೆ ಸೆರೆ ಸಿಕ್ಕು ಚಿತ್ರ ಹಿಂಸೆ ಅನುಭವಿಸಿದರೂ ಗುಟ್ಟು ಬಿಡದ ನೂರ್ ಇನಾಯತ್ ಖಾನ್ ನವೆಂಬರ್ ತಿಂಗಳಲ್ಲಿ ಫ್ರಾನ್ಸ್ ಸರ್ಕಾರ…
ಹೆಚ್ಚುತ್ತಿರುವ ಶೀತ ವಾತಾವರಣ; ಸದ್ಯಕ್ಕಿಲ್ಲ ಮಳೆಯ ಆತಂಕ ಮಡಿಕೇರಿ: ಮಂಜಿನ ನಗರಿ ಮಡಿಕೇರಿಯಲ್ಲಿ ದಿನದಿಂದ ದಿನಕ್ಕೆ ಚಳಿ ಹೆಚ್ಚಾಗುತ್ತಿದ್ದು, ಫೆಬ್ರವರಿವರೆಗೆ ಇದೇ…