‘ಬೆಳಗಾವಿಯಲ್ಲಿ ವಿಧಾನಮಂಡಲದ ಅಧಿವೇಶನ. ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಕುರಿತು ಆದ್ಯತೆಯ ಮೇರೆಗೆ ಚರ್ಚೆ’ ಎಂಬ ಮಾತನ್ನು ಉತ್ತರ ಕರ್ನಾಟಕದ ಮಂದಿ ದಶಕಗಳಿಂದಲೂ ಕೇಳುತ್ತಿದ್ದಾರೆಯೇ ವಿನಾ ಅವರ ಸಮಸ್ಯೆಗಳಿಗೆ ಪರಿಹಾರ ದೊರಕಿಲ್ಲ.
ಇಲ್ಲಿಯವರೆಗೂ ನಡೆದ ಎಲ್ಲ ಅಧಿವೇಶನಗಳಲ್ಲಿಯೂ ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ಚರ್ಚೆಗಳಾಗಿದೆ. ಆದರೆ ಅವುಗಳನ್ನು ಪರಿಹಾರಿಸುವ ನಿಟ್ಟಿನಲ್ಲಿ ಸರ್ಕಾರ ಶ್ರಮಿಸಿಲ್ಲ. ಪರಿಣಾಮ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳು ಕೇವಲ ಚರ್ಚೆಗಳಲ್ಲಿಯೇ ಉಳಿದಿವೆ.
ಇನ್ನು ಅಧಿವೇಶನಗಳು ನಡೆಯುವಾಗ ಉತ್ತರ ಕರ್ನಾಟಕ ಭಾಗದ ಎಷ್ಟು ಮಂದಿ ಶಾಸಕರು ಅಽವೇಶನದಲ್ಲಿ ಭಾಗಿಯಾಗಿದ್ದಾರೆ ಎಂಬುದನ್ನು ಗಮನಿಸಿದಾಗ ಬೇಸರವಾಗುತ್ತದೆ. ಮೊದಲು ಉತ್ತರ ಕರ್ನಾಟಕದ ಶಾಸಕ ರೆಲ್ಲರೂ ಅಽವೇಶನದಲ್ಲಿ ಭಾಗಿಯಾಗಬೇಕು. ಸಮಸ್ಯೆಗಳನ್ನು ಸರ್ಕಾರದ ಮುಂದಿಟ್ಟು ಪರಿಹಾರಕ್ಕಾಗಿ ಆಗ್ರಹಿಸಬೇಕು. ಆಗ ಮಾತ್ರ ಉತ್ತರ ಕರ್ನಾ ಟಕ ಭಾಗ ಅಭಿವೃದ್ಧಿಯಾಗಲು ಸಾಧ್ಯ. ಇನ್ನು ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಚರ್ಚೆ ಕೇವಲ ಬೆಳಗಾವಿ ಅಽವೇಶನಕ್ಕೆ ಸೀಮಿತವಾಗಿದ್ದು, ಈ ಚರ್ಚೆ ಬೆಂಗಳೂರಿನ ಅಧಿವೇಶನದಲ್ಲೂ ನಡೆಯಲಿ.
-ರಮಾನಂದ ಶರ್ಮಾ, ಜೆ. ಪಿ. ನಗರ, ಬೆಂಗಳೂರು
ಬೆಂಗಳೂರು: ಜಿ ರಾಮ್ ಜಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಬಗ್ಗೆ ರಾಜ್ಯ ಸರ್ಕಾರ ಸುಳ್ಳು ಅಂಶಗಳನ್ನು ಹೇಳುವ ಮೂಲಕ…
ಬೆಂಗಳೂರು: ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ-ನಿಮ್ಹಾನ್ಸ್ ಹಾಗೂ ಕಿದ್ವಾಯಿ ಸ್ಮಾರಕ ಆಂಕೊಲಾಜಿ ಸಂಸತೆಗಳಲ್ಲಿ ಆಘಾತಕಾರಿ…
ಮಹಾದೇಶ್ ಎಂ ಗೌಡ ಹನೂರು: ತಾಲ್ಲೂಕಿನ ಪಚ್ಚೆ ದೊಡ್ಡಿ ಗ್ರಾಮಕ್ಕೆ ಸಾರ್ವಜನಿಕ ಅರ್ಜಿ ಸಮಿತಿ ಸದಸ್ಯ ಹಾಗೂ ರಾಜಾಜಿನಗರ ಕ್ಷೇತ್ರದ…
ಸುಕ್ಮಾ/ಬಿಜಾಪುರ: ಛತ್ತಿಸ್ಗಢದ ಬಸ್ತಾರ್ ಪ್ರದೇಶದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಪ್ರತ್ಯೇಕ ಎನ್ಕೌಂಟರ್ಗಳಲಿ ಕುಖ್ಯಾತ ಮಾವೋವಾದಿ ಮಾಂಗ್ಟು (ಮತ್ತು ಹಂಗಾ ಮಡ್ಕಮ್…
ತುಮಕೂರು: ಬಳ್ಳಾರಿಯಲ್ಲಿ ನಡೆದಿದ್ದ ಫೈರಿಂಗ್ ಪ್ರಕರಣದಲ್ಲಿ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಸಸ್ಪೆಂಡ್ ಆಗಿದ್ದ ಎಸ್ಪಿ ಪವನ್ ನಜ್ಜೂರ್ ಆತ್ಮಹತ್ಯೆಗೆ ಯತ್ನಿಸಿರುವ…
ಬೆಂಗಳೂರು: ಕೇಂದ್ರದಲ್ಲಿರುವ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಹಳ್ಳಿ ಅಧಿಕಾರ ಕಸಿದುಕೊಂಡು, ಗ್ರಾಮೀಣ ಆರ್ಥಿಕತೆಯನ್ನು ನಾಶ ಪಡಿಸಲು ಮುಂದಾಗಿದೆ ಎಂದು…