ಶಾಲಾ ಮಕ್ಕಳ ಹೆಸರು ಆಧಾರ್‌ಕಾರ್ಡ್ ಹಾಗೂ ಶಾಲಾ ಎಸ್‌ಟಿಎಸ್ ನಲ್ಲಿ (ಸ್ಪೂಡೆಂಟ್ ಟ್ಯಾಕಿಂಗ್ ಸಿಸ್ಟಮ್) ಬೇರೆ ಬೇರೆಯಾಗಿದ್ದು, ಅದನ್ನು ಸರಿಪಡಿಸುವ ಸಲುವಾಗಿ ಆಧಾರ್ ಕಾರ್ಡ್ ತಿದ್ದುಪಡಿಗೆ ಮಕ್ಕಳು ತಿಂಗಳುಗಟ್ಟಲೆ ಅಲೆದಾಡಬೇಕಾದ ಪರಿಸ್ಥಿತಿ ಎದುರಾಗಿದೆ.
ಶಾಲಾ ಮಕ್ಕಳ ಆಧಾರ್‌ಕಾರ್ಡ್ ತಿದ್ದು ಪಡಿಗೆಂದು ಸಂಬಂಧಪಟ್ಟ ಕಚೇರಿಗೆ ಹೋದರೆ ಅಲ್ಲಿನ ಸಿಬ್ಬಂದಿ ಇಲ್ಲ ಸಲ್ಲದ ದಾಖಲೆಗಳನ್ನು ಕೇಳುತ್ತಾ ಕಾಲಹರಣ ಮಾಡುತ್ತಿದ್ದಾರೆಯೇ ವಿನಾ ಆಧಾ
ಕಾರ್ಡ್ ತಿದ್ದುಪಡಿ ಮಾಡುತ್ತಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ತರಗತಿ ಗಳನ್ನು ಬಿಟ್ಟು ನಿತ್ಯ ಆಧಾರ್‌ಕಾರ್ಡ್ ತಿದ್ದುಪಡಿಗಾಗಿ ಪೋಷಕರೊಂದಿಗೆ ಅಲೆದಾಡಬೇಕಾಗಿದೆ. ಆಧಾರ್‌ಕಾರ್ಡ್‌ನಲ್ಲಿ ಆಗಿರುವ ಎಡವಟ್ಟಿನಿಂದಾಗಿ ವಿದ್ಯಾರ್ಥಿಗಳ ಹೆಸರು ಆಧಾರ್‌ಕಾರ್ಡ್ ಮತ್ತು ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನದ ತಂತ್ರಾಂಶ ಹಾಗೂ ಶಾಲಾ ಎಸ್‌ಟಿಎಸ್ ತಂತ್ರಾಂಶದಲ್ಲಿ ತಾಳೆಯಾಗದೆ ವಿದ್ಯಾರ್ಥಿ ವೇತನದಿಂದ ವಂಚಿತರಾಗು ವಂತಾಗಿದೆ. ಆದ್ದರಿಂದ ಸರ್ಕಾರ ವಿದ್ಯಾರ್ಥಿಗಳ ಆಧಾರ್‌ಕಾರ್ಡ್ ತಿದ್ದುಪಡಿ ಯನ್ನು ಶಾಲಾ ಹಂತದಲ್ಲಿ ಅಥವಾ ಕ್ಲಸ್ಟರ್‌ಮಟ್ಟದಲ್ಲಿಯೇ ಮಾಡುವ ಅವಕಾಶ ಕಲ್ಪಿಸಿದರೆ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಲಿದೆ. -ಕೆ.ಎಸ್.ಸುರೇಶ್, ಮುಖ್ಯ ಶಿಕ್ಷಕರು, ಸರಗೂರು,
ಮೈಸೂರು : ಮೈಸೂರು ಅರಮನೆ ಮುಂಭಾಗ ನಿನ್ನೆ ಸಂಜೆ ನಡೆದಿದ್ದ ಹೀಲಿಯಂ ಸ್ಫೋಟ ಪ್ರಕರಣದಲ್ಲಿ ಸಾವಿನ ಸಂಖ್ಯೆ ಇದೀಗ ಮೂರಕ್ಕೆ…
ಮೈಸೂರು : ಹುಬ್ಬಳ್ಳಿಯಲ್ಲಿ ನಡೆದ ಮರ್ಯಾದಗೇಡು ಹತ್ಯೆ ವಿರೋಧಿಸಿ ಮತ್ತು ಮರ್ಯಾದೆಗೇಡು ಹತ್ಯೆ ತಡೆಗೆ ಕಠಿಣ ಕಾಯಿದೆ ರೂಪಿಸಬೇಕು ಎಂದು…
ಮೈಸೂರು : ಇಲ್ಲಿನ ಕೆ.ಆರ್. ಆಸ್ಪತ್ರೆಯ ಶೆಡ್ ನಲ್ಲಿ ಬೆಂಕಿ ಕಾಣಿಸಿಕೊಂಡು ಆಸ್ಪತ್ರೆಯ ಹಾಸಿಗೆಗಳು ಬೆಂಕಿಗಾಹುತಿಯಾಗಿವೆ. ಆಸ್ಪತ್ರೆಯ ಚೆಲುವಾಂಬ ವಾರ್ಡ್…
ಬೆಂಗಳೂರು : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುರಿತಂತೆ ಪ್ರಶ್ನೆಗಳು ಉದ್ಭವಿಸಿರುವ ಸಂದರ್ಭದಲ್ಲಿ, ಹೊಸ ವರ್ಷಾಚರಣೆಯ ವೇಳೆ ಯಾವುದೇ ಅವಘಡ ನಡೆಯದಂತೆ…
ಮೈಸೂರು : ಮೈಸೂರಿನ ವಿಶ್ವ ವಿಖ್ಯಾತ ಅರಮನೆ ಸಮೀಪ ಸಂಭವಿಸಿದ್ದ ಹೀಲಿಯಂ ಗ್ಯಾಸ್ ಸಿಲೆಂಡರ್ ಸ್ಫೋಟ ದುರಂತದಲ್ಲಿ ಸಾವಿನ ಸಂಖ್ಯೆ…
ತಿರುವನಂತಪುರಂ : ಬಿಜೆಪಿಯಿಂದ ಮೊದಲ ಬಾರಿಗೆ ತಿರುವನಂತಪುರಂ ನಗರ ಮೇಯರ್ ಆಗಿ ಆಯ್ಕೆಯಾಗುವ ಮೂಲಕ ವಿ.ವಿ.ರಾಜೇಶ್ ಇತಿಹಾಸ ನಿರ್ಮಿಸಿದ್ದಾರೆ. 49…