ಎಡಿಟೋರಿಯಲ್

ಪೂರ್ಣಸ್ವರಾಜ್ಯದ ಅಸ್ಮಿತೆಯೇ ಭರತ ಖಂಡದ ರಾಷ್ಟ್ರೀಯ ಕಾಂಗ್ರೆಸ್

ಡಾ.ಬಿ.ಜೆ.ವಿಜಯ್ ಕುಮಾರ್

ಒಂದು ಧ್ಯೇಯ ಮತ್ತು ಒಂದು ಉದ್ಅಡಿಯಲ್ಲಿ ಇಡೀ ದೇಶವನ್ನು ಒಗ್ಗೂಡಿಸುವುದು ಅಷ್ಟು ಸುಲಭದ ಮಾತಲ್ಲ. ಅದರಲ್ಲೂ ಪರಕೀಯರ ದಾಳಿಗೊಳಗಾಗಿ ಸ್ವಂತಿಕೆಯನ್ನೇ ಕಳೆದುಕೊಡಿದ್ದ ಭಾರತಕ್ಕೆ ಸ್ವಾತಂತ್ರ್ತ್ಯ್ಯ ಮತ್ತು ಪ್ರಜಾಪ್ರಭುತ್ವದ ಅಡಿಗಲ್ಲನ್ನು ರಾಷ್ಟ್ರ ಚಳವಳಿಗೆ ಹಾಕಿ, ರಾಜಕೀಯವಾಗಿ ಭಾರತೀಯರನ್ನು ಜಾಗೃತಗೊಳಿಸಿ ದೇಶದ ಭಾಷೆ, ನೆಲ, ಜಲದ ಪಾವಿತ್ರತೆಯನ್ನು ಜನರ ಮನಸ್ಸಿಗೆ ತುಂಬಿ, ರಾಷ್ಟ್ರ ಪ್ರೇಮದ ಕಿಚ್ಚನ್ನು ಪ್ರತಿಯೊಬ್ಬ ಭಾರತೀಯನ ಎದೆಯೊಳಗೆ ಹೊತ್ತಿಸಿ ದೇಶದ ಮೂಲೆ ಮೂಲೆಗೂ ತಲುಪಿಸಿದ ಹೋರಾಟದ ಮಿಂಚು ಭಾರತ ರಾಷ್ಟ್ರೀಯ ಕಾಂಗ್ರೆಸ್.

ಡಿಸೆಂಬರ್ ೨೮, ೧೮೮೫ರಲ್ಲಿ ಅಲ್ಲೆನ್ ಒಟೊಮನ್ ಹ್ಯೂಮ್ ಇದರ ಮೂಲ ಸಂಸ್ಥಾಪಕರಾದರೂ, ಸುರೇಂದ್ರನಾಥ್ ಬ್ಯಾನರ್ಜಿ ಮತ್ತು ಆನಂದ ಮೋಹನ್ ಬೋಸ್ ಇಬ್ಬರೂ ಸೇರಿ ಭಾರತ ರಾಷ್ಟ್ರೀಯ ಕಾಂಗ್ರೆಸ್‌ನ್ನು ವಿನ್ಯಾಸಗೊಳಿಸಿದರು. ಇವರಲ್ಲದೆ ಅನೇಕ ಸಕ್ರಿಯ ಸ್ವಾತಂತ್ರ್ಯ ಹೋರಾಟಗಾರರು ಸೇರಿ ದೇಶಾದ್ಯಂತ ಸ್ವಾತಂತ್ರ್ಯ ಹೋರಾಟವನ್ನು ಒಂದೇ ಸೂರಿನಡಿ ಒಗ್ಗೂಡಿಸಿ ತರಬೇಕೆಂಬ ಮಹಾ ಚಿಂತನೆಯಿಂದ ಜನ್ಮ ತಾಳಿದ ಭಾರತ ರಾಷ್ಟ್ರೀಯ ಕಾಂಗ್ರೆಸ್ ೧೮೮೫ರಲ್ಲಿ ಡಬ್ಲ್ಯುಸಿ ಬ್ಯಾನರ್ಜಿ ಅವರ ಅಧ್ಯಕ್ಷತೆಯಲ್ಲಿ ೭೫ ಗೌರವಾನ್ವಿತರನ್ನು ಒಳಗೊಂಡ ಮೊದಲ ಅಽವೇಶನ ಬಾಂಬೆಯಲ್ಲಿ ಜರುಗಿತು. ಇದರ ಮೂಲ ಧ್ಯೇಯೋದ್ದೇಶಗಳು ದೇಶದಲ್ಲಿ ಭ್ರಾತೃತ್ವ ಭಾವನೆಯನ್ನು ಬೆಳೆಸಿ ಪ್ರಜಾಸತ್ತಾತ್ಮಕ ಕ್ರಿಯೆಗಳ ಮೂಲಕ ದೇಶಾಭಿಮಾನವನ್ನು ತತ್ವ ಸಿದ್ಧಾಂತಗಳಲ್ಲಿ ಅಡಗಿಸಿ ಸ್ವಾತಂತ್ರ್ಯ ಚಳವಳಿಯನ್ನು ಜಾಗ್ರತಗೊಳಿಸಬೇಕೆಂಬ ಹೆಬ್ಬಯಕೆಯಿಂದ ಕೂಡಿತ್ತು. ಐಎನ್‌ಸಿ ೧೮೮೫ರಿಂದ ಪ್ರತಿವರ್ಷ ಡಿಸೆಂಬರ್ ತಿಂಗಳಲ್ಲಿ ಅಽವೇಶನಗಳನ್ನು ದೇಶದ ವಿವಿಧ ಭಾಗಗಳಲ್ಲಿ ಏರ್ಪಡಿಸಿ ಹೋರಾಟಗಾರರ ಅಭಿಪ್ರಾಯಗಳನ್ನು ಸಂಗ್ರಹಿಸಿ ಹೋರಾಟಗಾರರಿಗೆ ಬಲ ತುಂಬುವ ಕೆಲಸ ಮಾಡುತ್ತಿತ್ತು. ದೇಶದ ಎಲ್ಲಾ ವರ್ಗದ ಮತ್ತು ಎಲ್ಲಾ ಕ್ಷೇತ್ರದ ಜನರನ್ನು ಒಗ್ಗೂಡಿಸಿ ಸ್ವಾತಂತ್ರ್ಯ ಹೋರಾಟದ ಚಳವಳಿಗೆ ನಾಂದಿ ಹಾಡಿತು. ಪ್ರಮುಖವಾದ ವಿಚಾರವೆಂದರೆ ಕೊಲ್ಕತ್ತಾ ವಿಶ್ವವಿದ್ಯಾಲಯದ ಪ್ರಥಮ ಮಹಿಳಾ ಪದವೀಧರರಾದ ಕದಂಬಿನಿ ಗಂಗೂಲಿಯವರು ೧೮೯೦ರಲ್ಲಿ ನಡೆದ ಅಽವೇಶನವನ್ನು ಉದ್ದೇಶಿಸಿ ಮಾಡಿದ ಭಾಷಣದಿಂದ ಪ್ರೇರಣೆಗೊಂಡ ಸಾವಿರಾರು ಮಹಿಳೆಯರು ಸ್ವಾತಂತ್ರ್ಯ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲವನ್ನು ನೀಡಿದ್ದು ಐತಿಹಾಸಿಕ ದಾಖಲೆಯಾಗಿ ಉಳಿದಿದೆ.

ಭಾರತ ರಾಷ್ಟ್ರೀಯ ಕಾಂಗ್ರೆಸ್‌ನ್ನು ಮಹಾತ್ಮ ಗಾಂಽಜಿಯವರನ್ನು ಹೊರತುಪಡಿಸಿ ಕಲ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ೧೯೧೫ರಲ್ಲಿ ಭಾರತಕ್ಕೆ ಮರಳಿದ ಗಾಂಽಯವರು ದೇಶದ ಸ್ಥಿತಿಗತಿಗಳನ್ನು ಸೂಕ್ಷ್ಮವಾಗಿ ಗಮನಿಸಿ ಕಾಂಗ್ರೆಸ್ ಪಕ್ಷದೊಂದಿಗೆ ನಿಧಾನವಾಗಿ ಒಡನಾಟವನ್ನು ಬೆಳೆಸಿಕೊಂಡು ೧೯೨೪ರಲ್ಲಿ ಗೋಪಾಲ ಕೃಷ್ಣ ಗೋಖಲೆ ನೇತೃತ್ವದಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ ಅಽಕಾರ ವಹಿಸಿಕೊಳ್ಳುತ್ತಾರೆ.

ಹಾಗೆಯೇ ಕರ್ನಾಟಕದ ಒಂದು ಐತಿಹಾಸಿಕ ಸ್ವಾತಂತ್ರ್ಯದ ಮೈಲಿಗಲ್ಲು ಎಂದರೇ ಗಾಂಽಯವರು. ೧೯೨೪ ಡಿ.೨೬ ಮತ್ತು ೨೭ರಂದು ಕರ್ನಾ-ಟಕದ ಬೆಳಗಾವಿಯಲ್ಲಿ ನಡೆದ ಭಾರತ ರಾಷ್ಟ್ರೀಯ ಕಾಂಗ್ರೆಸ್ ಅಽವೇಶನದ ಅಧ್ಯಕ್ಷತೆ ಯನ್ನು ವಹಿಸಿಕೊಂಡಿದ್ದರು. ಇದೊಂದು ಅಪೂರ್ವ ವಿಚಾರ. ಇದು ಪ್ರಪಂಚದ ಎಲ್ಲಾ ಸತ್ ಶಕ್ತಿಗಳಿಗೆ ಪ್ರೇರಣೆ ಪಡೆಯುವ ಮಹತ್ವಪೂರ್ಣ ಘಟನೆ-ಯಾಗಿದೆ. ಗಾಂಽ ಐಎನ್‌ಸಿಗೆ ಬಂದ ನಂತರ ಹೊಸ ಆಲೋಚನೆಗಳ ದೂರದೃಷ್ಟಿಯ ಉಗಮವೇ ಸಮಾಜವಾದಿ ಮತ್ತು ಜಾತ್ಯತೀತ ನೀತಿಗಳ ಅಳವಡಿಕೆ.

ಆ ಹೊತ್ತಿಗಾಗಲೇ ಸ್ವಾತಂತ್ರ್ಯದ ಕಾಡ್ಗಿಚ್ಚು ಎಲ್ಲೆಡೆ ಹರಡಿ ಹಲವಾರು ಪ್ರತಿಭಟನೆಗಳು ಕಾಂಗ್ರೆಸ್ ನೇತೃತ್ವದಲ್ಲಿ ನಡೆದು ಬ್ರಿಟಿಷ್ ಸರ್ಕಾರಕ್ಕೆ ಸಿಂಹ ಸ್ವಪ್ನವಾಗಿ ಪರಿಣಮಿಸಿರುತ್ತದೆ. ೧೯೨೯ರ ಲಾಹೋರ್ ಅಽವೇಶನದಲ್ಲಿ ಜವಾಹರ್ ಲಾಲ್ ನೆಹರು ಅವರ ಅಧ್ಯಕ್ಷತೆಯಲ್ಲಿ ಪೂರ್ಣ ಸ್ವರಾಜ್ಯವೇ ನಮ್ಮ ಗುರಿ ಎಂಬ ಉದ್ಘೋಷಣೆಯನ್ನು ಹೊರಡಿಸಿ ಜನವರಿ ೨೬ರ ದಿನವನ್ನು ಪೂರ್ಣ ಸ್ವರಾಜ್ಯ ದಿನ ಎಂದು ಘೋಷಣೆ ಮಾಡುತ್ತಾರೆ. ಭಾರತ ಸ್ವಾತಂತ್ರ್ಯಗೊಳ್ಳುವ ಹೊತ್ತಿಗಾಗಲೇ ಪ್ರಬಲ ರಾಜಕೀಯ ಪಕ್ಷವಾಗಿ ಬೆಳೆದಿದ್ದ ಭಾರತ ರಾಷ್ಟ್ರೀಯ ಕಾಂಗ್ರೆಸ್ ೧೯೪೭ರ ನಂತರ ದೇಶದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿ ಮಾಡುತ್ತದೆ.

ಈ ಹೊತ್ತಿನಲ್ಲಿ ಮಧ್ಯಂತರ ಸರ್ಕಾರವನ್ನು ರೂಪಿಸಿ ಪ್ರಪಂಚವೇ ನಿಬ್ಬೆರಗಾಗುವ ರೀತಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರವರ ನೇತೃತ್ವದಲ್ಲಿ ಸಂವಿಧಾನವನ್ನು ರಚಿಸಿ ೧೯೫೨ರ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಅಭೂತಪೂರ್ವ ಜಯ ಸಾಽಸುತ್ತದೆ. ಸ್ವಾತಂತ್ರ್ಯ ಭಾರತದ ಮೊದಲ ಪ್ರಧಾನ ಮಂತ್ರಿಯಾಗಿ ಅಽಕಾರ ವಹಿಸಿಕೊಳ್ಳುವ ಜವಾಹರ್ ಲಾಲ್ ನೆಹರು ಅವರು ಪಂಚವಾರ್ಷಿಕ ಯೋಜನೆಗಳನ್ನು ಜಾರಿಗೆ ತಂದು ಮಿಶ್ರ ಆರ್ಥಿಕ ನೀತಿಗೆ ಒತ್ತುಕೊಟ್ಟು, ಭಾರತಕ್ಕೆ ಬೇಕಾದ ಮೂಲ ಸೌಕರ್ಯಗಳು, ಕೃಷಿ ಉತ್ತೇಜಿತ ಯೋಜನೆಗಳು, ಸಣ್ಣ ಹಾಗೂ ಬೃಹತ್ ನೀರಾವರಿಗೆ ಒತ್ತು ಹಾಗೂ ಭಾರಿ ಕೈಗಾರಿಕೆಗಳ ಸ್ಥಾಪನೆಗೆ ಕಾರಣಕರ್ತರಾದರು. ೧೯೬೨ರ ಇಂಡೋ-ಚೀನಾ, ೧೯೬೫ರ ಇಂಡೋ-ಪಾಕ್ ಯುದ್ಧಗಳನ್ನು ಸಮರ್ಥವಾಗಿ ಎದುರಿಸಿದ ಕಾಂಗ್ರೆಸ್ ಪಕ್ಷ ದೇಶದ ಸರ್ವತೋಮುಖ ರಕ್ಷಣೆಗೆ ಟೊಂಕ ಕಟ್ಟಿ ನಿಂತಿದೆ.

೧೩೭ನೇ ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಸಂಸ್ಥಾಪನಾ ದಿನದ ಹೊಸ್ತಿಲಲ್ಲಿ ಭಾರತದ ರಾಜಕೀಯ ಸ್ಥಿತ್ಯಂತರಗಳ ಮೌಲ್ಯಯುತ ಅವಲೋಕನ ತುರ್ತು ಅನಿವಾರ್ಯತೆ ಇದೆ ಎಂಬುದು ಸಾರ್ವತ್ರಿಕವಾಗುತ್ತಿದೆ. ಕಾರಣ ರಾಜಕೀಯ ಕ್ಷೇತ್ರ ದಿನದಿಂದ ದಿನಕ್ಕೆ ತನ್ನ ಮೂಲ ಉದ್ದೇಶ ಮರೆಯುತ್ತಿದ್ದು, ಸತ್ಯ ಮತ್ತು ಸತ್ವದ ಒಳ ತಿರುಳಿಗೆ ರಾಜಕಾರಣ ಎಂದರೆ – ಸಂಪಾದನೆ ಎಂಬ ವಿಷದ ಬೆಂಕಿ ತಗುಲಿ ಅಪಾಯದಂಚಿನಲ್ಲಿದೆ.

ಈ ವ್ಯವಸ್ಥೆಯನ್ನು ಸಂಪೂರ್ಣವಾಗಿ ಮನಗಂಡ ಹಿರಿಯ ರಾಜಕೀಯ ಮುತ್ಸದ್ದಿ ಹಾಗೂ ಅಂದಿನ ಪ್ರತಿಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯನವರು ಡಿ.೫, ೨೦೧೨ರ ಚಳಿಗಾಲದ ಅಽವೇಶನದಲ್ಲಿ ‘ಯಾವುದೇ ರಾಜಕೀಯ ಪಕ್ಷಗಳ ಇತಿಹಾಸದ ಬಗ್ಗೆ ನಿರಂತರ ಚರ್ಚೆ ಆಗಬೇಕು, ಚರ್ಚೆ ಮೂಲಕ ಯುವಕರು ಬದ್ಧತೆ ಬೆಳೆಸಿಕೊಳ್ಳಬೇಕು. ಇಲ್ಲವಾದಲ್ಲಿ ಪಕ್ಷ ಶಕ್ತಿಯುತವಾಗಿ ಬೆಳೆಯಲು ಕಷ್ಟ ಆಗುತ್ತದೆ. ಸಮಸ್ಯೆಗಳು ಬಗೆಹರಿಯುವ ನಿಟ್ಟಿನಲ್ಲಿ ಚರ್ಚೆಗಳು ಆಗುತ್ತಿಲ್ಲ. ಯುವಕರಿಗೆ ಅಽಕಾರ ಸಿಗಬೇಕು. ಆದರೆ ಅಽಕಾರವೇ ಗುರಿ ಆಗಬಾರದು ಎಂದು ವ್ಯಾಖ್ಯಾನಿಸಿರುವುದು ಕರ್ನಾಟಕ ವಿಧಾನಸಭೆಯ ನಡವಳಿಕೆಯಲ್ಲಿ ದಾಖಲಾಗಿದೆ.

andolanait

Recent Posts

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

1 hour ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

2 hours ago

ಮುಡಾ: ಇಡಿ ದಾಳಿಗೆ ರಾಜಕೀಯ ಕಾರಣವಲ್ಲ; ಅಶೋಕ್

ಜಾರಿ ನಿರ್ದೇಶನಾಲಯದ ದಾಳಿಗೆ ರಾಜಕೀಯ ಕಾರಣವಲ್ಲ, 3-4 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ ಎಂದು ಹೇಳಿದ್ದೇ ಕಾಂಗ್ರೆಸ್‌ನವರು: ಪ್ರತಿಪಕ್ಷ…

2 hours ago

BJP ಟಿಕೆಟ್‌ ವಂಚನೆ: ಆರೋಪ ತಳ್ಳಿ ಹಾಕಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ನವದೆಹಲಿ: ನನಗೆ ಸಹೋದರಿಯೇ ಇಲ್ಲ ಮತ್ತು ಗೋಪಾಲ್ ಜೋಶಿ ಮೇಲಿನ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಸಚಿವ…

3 hours ago

ಮಂಡ್ಯ ಟೂ ಇಂಡಿಯಾ: ಬೃಹತ್‌ ಉದ್ಯೋಗ ಮೇಳಕ್ಕೆ ಮೊದಲ ದಿನ ಅಭೂತಪೂರ್ವ ಸ್ಪಂದನೆ

ಮಂಡ್ಯ ಟೂ ಇಂಡಿಯಾ; ಸಕ್ಕರೆ ನಾಡಿನಲ್ಲಿ 2 ದಿನಗಳ ಬೃಹತ್ ಉದ್ಯೋಗ ಮೇಳ 150ಕ್ಕೂ ಹೆಚ್ಚು ಕಂಪನಿಗಳ ಭಾಗಿ, ಸಾವಿರಾರು…

3 hours ago

ಮುಡಾ ಮೇಲೆ ಇಡಿ ದಾಳಿ: ಸಿಬಿಐ ತನಿಖೆ ನಡೆಸುವರೆಗೂ ಹೋರಾಟ ಮುಂದುವರಿಕೆ: ಸ್ನೇಹಮಯಿ ಕೃಷ್ಣ

ಮೈಸೂರು: ಮುಡಾ ಮೇಲಿನ ಇಡಿ ಕಾರ್ಯಾಚರಣೆ ಕೇವಲ ಸಿಎಂ ಸಿದ್ದರಾಮಯ್ಯ ಅವರ ಕುಟುಂಬದವರ ಪ್ರಕರಣವಲ್ಲ. ಸಂಪೂರ್ಣ ಮುಡಾ ಅಕ್ರಮದ ಬಗ್ಗೆ…

3 hours ago