ಎಡಿಟೋರಿಯಲ್

ಹೆಣದ ಬಾಯಲ್ಲಿ ಬೆಣ್ಣೆ ತಿಂದ ಪೊಲೀಸರು !

  ಸಾಹೇಬರಿಗೆ ಅರ್ಜೆಂಟು ಫೋನ್ ಮಾಡಬೇಕಂತೆ

ಓಡಿಬಂದು ಫೋನ್ ಮಾಡಿದೆ. “ಮಂತ್ರಿಗಳು ಪುನಃ ಫೋನ್ ಮಾಡಿದ್ದರು ಕಂಡ್ರೀವಿಧಾನಸೌಧದಿಂದ ಅನೇಕ ಆಫೀಸರ್ಸ್ ಕಾಲ್ ಮಾಡಿ ತಲೆ ತಿಂತಿದ್ದಾರೆನಂ ಪೊಲೀಸ್ನೋರ ಪ್ರಾಬ್ಲಂ ಹೇಳಿದ್ರೆ ಅವರಿಗೆ ಅರ್ಥ ಆಗೋದಿಲ್ಲಾರೀಈಗ ನೀವು ಅದೇನು ಮಾಡ್ತೀರೋ ಗೊತ್ತಿಲ್ಲಆ ಹೆಣ ಇನ್ನೊಂದು ಗಂಟೆಯೊಳಗೆ ಮೈಸೂರನ್ನು ಬಿಡಲೇಬೇಕು” ಎಂದರು.

ವೈದ್ಯರ ಎದುರು ಏನೇನೋ ಕರುಣಾಜನಕ ಕತೆಕಟ್ಟಿಆ ಶವವನ್ನು ಪೋಸ್ಟ್ ಮಾರ್ಟಂ ಸಿಮೆಂಟ್ ಕಟ್ಟೆಗೆ ಹಾಕಿಸಿದೆ.

ಪೋಸ್ಟ್‌ಮಾರ್ಟಂ ನಡೆಯುತ್ತಿತ್ತುಕಂಟ್ರೋಲ್ ರೂಂ ಮತ್ತೆ ಅಬ್ಬರಿಸತೊಡಗಿತು.

ಅರ್ಜೆಂಟ್ ತಾವು ಮಹಿಳಾ ಠಾಣೆಗೆ ಹೋಗಬೇಕಂತೆಪ್ರಾಬ್ಲಂ ಆಗಿದೆacp ಸಾಹೇಬರೂ ಅಲ್ಲಿಗೆ ಹೋಗ್ತಿದ್ದಾರೆಕೂಡಲೇ ಸ್ಟೇಷನ್ನಿಗೆ ಹೋಗಿ

ಇದೇನಪ್ಪಾ ಹೊಸ ಸಮಸ್ಯೆ ಎಂದು ಜೀಪ್ ಹತ್ತಿದೆಆಗೆಲ್ಲಾ (1996ಫೋನ್ ಇಲ್ಲದ ಪರಿಣಾಮ ಅಲ್ಲಿಗೇ ಹೋಗಿ ಪ್ರತ್ಯಕ್ಷವಾಗಿ ಕಂಡಿದ್ದನ್ನು ಕೇಳಿದ್ದನ್ನು ಪ್ರಮಾಣಿಸಿ ನೋಡಬೇಕಿತ್ತುಕಂಟ್ರೋಲ್ ರೂಂಗೇ ವೈರ್‌ಲೆಸ್‌ನಲ್ಲಿ ನೇರ ಕೇಳೋಣವೆಂದರೆ ಊರೂರಿಗೇ ಕೇಳಿಸುತ್ತೆ.

ಲಷ್ಕರ್ ಠಾಣೆಯ ಸುತ್ತ ಜನ ಸೇರಿ ಹೋಗಿದ್ದಾರೆಪತ್ರಕರ್ತರೂ ಅವರ ಕ್ಯಾಮೆರಾಗಳೂ ಹಾಸ್ಯಾಸ್ಪದವಾಗಿ ಅಲ್ಲಾಡುತ್ತಿವೆಮೃತ ಹುಡುಗಿಯ ಕಡೆಯವರು ದೊಡ್ಡ ರಾದ್ಧಾಂತ ಎಬ್ಬಿಸಿ ಕೂಗಾಡುತ್ತಿದ್ದಾರೆಮಹಿಳಾ ಪೊಲೀಸರಿಗೆ ಛೀಮಾರಿ ಹಾಕುತ್ತಿದ್ದಾರೆ.

ಮೃತ ಹುಡುಗಿಯ ರಕ್ತ ಸಂಬಂಧಿಗಳ ಹೇಳಿಕೆ ಪಡೆದುಕೊಳ್ಳಲೆಂದು ಮಹಿಳಾ ಠಾಣೆಗೆ ನಾನೇ ಕಳಿಸಿಕೊಟ್ಟಿದ್ದೆನಲ್ಲಾಹುಡುಗಿ ಸಾವಿನ ಬಗ್ಗೆಆಕೆಗೆ ಅತ್ತೆ ಮನೆಯಲ್ಲಾಗುತ್ತಿದ್ದ ನಿತ್ಯ ಕಿರುಕುಳದ ಬಗ್ಗೆಅವಳಿದ್ದ ದಾರುಣ ಪರಿಸ್ಥಿತಿಯ ಬಗ್ಗೆ ಅವರು ಹೇಳಿಕೆ ನೀಡಬೇಕಿತ್ತುಮಹಿಳಾ ಪೊಲೀಸರೂ ಶ್ರದ್ಧೆಯಿಂದ ಅವರ ಹೇಳಿಕೆಗಳನ್ನು ಕ್ರಮಾನುಗತವಾಗಿ ಬರೆದುಕೊಳ್ಳುತ್ತಿದ್ದುದನ್ನು ಎರಡು ಗಂಟೆಯ ಹಿಂದೆ ನಾನೇ ನೋಡಿದ್ದೆಅದೆಲ್ಲ ಸರಿಸಮಸ್ಯೆಯೇಕೆ ಉದ್ಭವಿಸಿತೋದಡಬಡಾ ಮಹಡಿ ಮೆಟ್ಟಿಲು ಹತ್ತಿ ಹೋದೆ.

ಒಬ್ಬೊಬ್ಬರ ಹೇಳಿಕೆಯನ್ನೂ ವಿಚಾರಿಸಿ ದಾಖಲಿಸಬೇಕೆಂದರೆ ಒಂದೂವರೆ ಗಂಟೆ ಹಿಡಿಯುತ್ತದೆಅವೆಲ್ಲವನ್ನೂ ಕೇಳಿಸಿಕೊಂಡು ಸರಿಯಾಗಿ ದಾಖಲಿಸಲು ಅಪಾರ ತಾಳ್ಮೆ ಬೇಕುಮೃತರ ಮನೆಯವರ ಬಳಿ ಸ್ವಲ್ಪ ಒರಟಾಗಿ ಗದರಿಸಿ ಮಾತಾಡಿದರೂ ವಿಷಯ ಎತ್ತೆತ್ತಲೋ ಹೋಗಿ ರಾದ್ಧಾಂತವಾಗಿ ಬಿಡುತ್ತದೆಅಲ್ಲಿದ್ದ ಮಹಿಳಾ ಪೊಲೀಸರೆಲ್ಲ ಭೂಮಿತೂಕದ ತಾಳ್ಮೆಯವರುಹೆದರಿಕೆ ಭಯ ಇಟ್ಟುಕೊಂಡು ಕೆಲಸ ಮಾಡುವವರುಆದರೂ ಹೀಗೇಕಾಯ್ತೋ?

ವಿಚಾರಿಸಿದಾಗ ದಿಗ್ಭ್ರಮೆಗೊಳ್ಳುವ ಸರದಿ ನನ್ನದಾಗಿತ್ತು.

ಊಟಕ್ಕಾಗಿ ಮನೆಗೆ ಹೋಗಿ ವಾಪಸ್ ಬಂದು ಹೇಳಿಕೆ ಪಡೆಯುವುದಾದರೇ ಇನ್ನೂ ಒಂದೂವರೆ ಗಂಟೆ ವಿಳಂಬವಾಗುತ್ತದೆಮಹಿಳಾ ಪೊಲೀಸರಿಗೆ ನಾಲ್ಕು ಮತ್ತು ಮೃತಳ ಸಂಬಂಧಿಕರೆಲ್ಲರಿಗೆ ಒಟ್ಟು ಹದಿಮೂರು ಊಟಗಳನ್ನು ಠಾಣೆಗೆ ತರಿಸಿ ಎಲ್ಲರೂ ಸಮಾಧಾನವಾಗಿ ಠಾಣೆಯಲ್ಲೇ ಊಟ ಮಾಡಿದ್ದಾರೆಊಟ ಮುಗಿದ ಮೇಲೆ ದೊಡ್ಡ ಗಂಟಲಿನ ಗಲಾಟೆ ಶುರುವಾಗಿದೆ.

ಊಟದ ಬಿಲ್ಲನ್ನು ದಫೇದಾರರು ಮೃತಳ ಕಡೆಯ ಮುಖ್ಯಸ್ಥನಿಗೆ ಕೊಟ್ಟಿದ್ದಾರೆಆ ಮನುಷ್ಯನಿಗೆ ಏನನ್ನಿಸಿತೋ?

ಸತ್ತವರ ಬಗ್ಗೆ ಸ್ಟೇಟ್‌ಮೆಂಟ್ ತಗೋತೀನಿ ಅಂತ ಸ್ವೀಟ್ ತರಿಸಿಕೊಂಡು ತಿಂತೀರಲ್ಲಾನಿಮಗೆ ನಾಚಿಕೆ ಇಲ್ಲವೇನ್ರೀನಮ್ಮನೆ ಹುಡುಗಿ ತೀರಿಕೊಂಡಳಲ್ಲಾ ಅಂತ ನಾವೆಲ್ಲಾ ದುಃಖದಲ್ಲಿದ್ದೇವೆಇಂಥಾ ಸಮಯದಲ್ಲಿ ಊಟದ ಜೊತೆಗೆ ಸ್ವೀಟ್ ಹೇಳ್ತೀರಲ್ಲಾನೀವೆಲ್ಲಾ ಮನುಷ್ಯರಾ?” ಎಂದೆಲ್ಲಾ ಕೂಗಾಡುತ್ತಿದ್ದರು.

ಆ ಮಾತನ್ನು ಕೇಳಿದರೆ ಯಾರಿಗೆ ತಾನೆ ಅಸಹ್ಯಜುಗುಪ್ಸೆಯಾಗುವುದಿಲ್ಲ?

ಪತ್ರಕರ್ತರಾದಿಯಾಗಿ ಎಲ್ಲರಲ್ಲೂ ತಿರಸ್ಕಾರ ಮಡುಗಟ್ಟಿತ್ತುಕ್ಯಾಮೆರಾ ಕ್ಲಿಕ್ಕೆಂದವುನನಗೇ ಮುಖ ಮುಚ್ಚಿಕೊಳ್ಳುವಂತಾಯಿತುಮಹಿಳಾ ಪೊಲೀಸರೂ ಅವಮಾನದಿಂದ ದಿಙ್ಮೂಢರಾಗಿ ನಿಂತಿದ್ದರು.

ಊಟಕ್ಕೆ ಹೇಳಿದ್ದ ದಫೇದಾರನನ್ನು ತರಾಟೆಗೆ ತೆಗೆದುಕೊಂಡು ಉಗಿದು ಉಪ್ಪು ಹಾಕಿದೆಆತ ಕುತಂತ್ರವಿಲ್ಲದ ಸಾಫ್ ಸೀದಾ ಮನುಷ್ಯಹಳ್ಳಿಯಿಂದ ಬಂದವನುಇನ್ನೂ ಗ್ರಾಮ್ಯಗುಣಗಳನ್ನು ಉಳಿಸಿಕೊಂಡಿದ್ದbut matter finish!

ಬೆಳಿಗ್ಗೆಯಿಂದ ಹೇಳಿಕೆ ತಗೋತ್ತಿದ್ದರಲ್ಲಾ ಸಾರ್ಊಟಕ್ಕೆ ಮನೆಗೋಗಿ ಬರೋದಿಕ್ಕೆ ಆಗೋದಿಲ್ಲ ಅಂತ ಇಲ್ಲಿಗೇ ಊಟ ತರೋದಿಕ್ಕೆ ಹೇಳಿದರುಈ ಕೇಸಿನ ಕಡೆಯವರಿಗೂ ಒಟ್ಟಿಗೆ ಊಟಕ್ಕೆ ಹೇಳಿದೆ ಸಾರ್ಸ್ವೀಟೂ ಪಾಟೂ ಆಗ ನುಣ್ಣಗೆ ತಿಂದು ಈಗ ಗಲಾಟೆ ಮಾಡ್ತಿದ್ದಾರೆ ಸಾರ್” ಎಂದ.

ಇಂಥಾ ಸಾವಿನ ಸಮಯದಲ್ಲಿ ಯಾರಾದ್ರೂ ಸ್ವೀಟ್ ಹೇಳ್ತಾರಾಅಷ್ಟು ಕಾಮನ್ ಸೆನ್ಸ್ ಬೇಡವಾ ನಿನಗೆ” ಗದರಿಸಿದೆ.

ಮಾಮೂಲಿನಂತೆ ಹದಿಮೂರು ಸ್ಪೆಷಲ್ ಊಟ ಹೇಳಿದೆ ಸಾರ್ಊಟದ ಜೊತೆ ಜಾಮೂನುಕೇಸರಿಬಾತ್ ಕೊಟ್ಟೇ ಕೊಡ್ತಾರಲ್ಲಾ ನಾನ್ಯಾಕೆ ಸಪರೇಟಾಗಿ ಸ್ವೀಟ್ ಹೇಳಲಿ?”.

acರಾಜೇಂದ್ರ ಕುಮಾರ್ ಅದಾಗಲೇ ಸತ್ತವರ ಕಡೆಯವರಿಗೆ ಸಮಾಧಾನ ಹೇಳಿದ್ದರುಅವರುಗಳೆದುರಿಗೇ ಮಹಿಳಾ ಸಿಬ್ಬಂದಿಯನ್ನೂ ತರಾಟೆಗೆ ತೆಗೆದುಕೊಂಡು “ಸತ್ತೋಗಿರೋರ ಮುಂದೆ ಸ್ವೀಟು ತಿನ್ನೋದಿಕ್ಕೆ ನೀವಷ್ಟು ಬರಗೆಟ್ಟಿದ್ದೀರಾ?” ಎಂದು ಕೂಗಾಡಿತಮ್ಮ ಛೇಂಬರಿಗೆ ಹೋಗಿದ್ದರು.

ಈಗ ಪುನಃ ಬಂದವರೇ, “ಸಪರೇಟಾಗಿ ಸ್ವೀಟ್ ಹೇಳಿದ್ದರೆ ತಪ್ಪು ಅನ್ನಬಹುದಿತ್ತುಹೋಟ್ಲಲ್ಲಿ ಊಟದ ಜೊತೆಗೆ ಸ್ವೀಟನ್ನು ಕೊಟ್ಟೇ ಕೊಡ್ತಾರೆಅದನ್ನೆಲ್ಲಾ ದೊಡ್ಡದು ಮಾಡ್ಬೇಡಿಮೊದಲು ಹೇಳಿಕೆಗಳು ಮುಗೀಲಿತುಂಬಾ ದುಃಖದಲ್ಲಿದ್ದಾಗಸುಸ್ತಾಗಿದ್ದಾಗ ಸ್ವೀಟು ತಿಂದರೆ ಒಳ್ಳೇದೇಬೇಜಾರು ಮಾಡಿಕೋಬೇಡಿ…” ಎಂದು ಸಮಾಧಾನ ಹೇಳಿದರು.

ಅಲ್ಲಿದ್ದ ಪತ್ರಕರ್ತರು ಬಿಟ್ಟಾರೆಯೇದಫೇದಾರನನ್ನು ಕಿಚಾಯಿಸಿದರುಜಾಣಪೆದ್ದ ದಫೇದಾರ ಬಾಯಿಬಿಟ್ಟ. “ಯೇನು ಯೇಳ್ತೀರಿ ಸಾರ್ಊಟಾ ಸ್ವೀಟು ಎಲ್ಲಾನು ಎಲ್ರೂ ಪಟ್ಟಾಗೇ ಸದ್ದಿಲ್ಲದೆ ಹೊಡೆದರುಆವಾಗ ಯಾರೊಬ್ಬರೂ ಯೇನೂ ಮಾತಾಡಲಿಲ್ಲಊಟದ ಬಿಲ್ಲನ್ನ ಕೈಗೆ ಕೊಟ್ನೋ ಆಗ ಶುರುವಾಯ್ತು ಈ ಕಿತಾಪತಿ” ಎಂದೇ ಬಿಟ್ಟ.

acp ರಾಜೇಂದ್ರ ಕುಮಾರ್ ಫಕ್ಕನೆ ಬಾಯಿ ಹಾಕಿದರು. “ತಕರಾರೆಲ್ಲಾ ಮುಗಿದ ಮೇಲೆ ಇನ್ಯಾಕ್ರೀ ಮಾತುಯೇ ರಂಗ್ಸಾಮೀ ನೀವು ಪೊಲೀಸ್ನೋರು ತಿಂದ ನಾಲ್ಕು ಊಟದ ಚಾರ್ಜು ಕೊಡ್ರೀಉಳಿದವರು ಯಾರ್ಯಾರು ಉಂಡಿದ್ದಾರೆಅವರು ಅದರ ಚಾರ್ಜು ಕೊಡಲಿಇದಕ್ಕೆಲ್ಲ ಗೌರ್ಮೆಂಟು ದುಡ್ಡು ಕೊಡಲ್ಲಯಾರಿಗೂ ಯಾವ ಮುಲಾಜು ಬೇಡ” ಎಂದು ಹೇಳಿ ತೆರೆ ಎಳೆದರು.

ದೊಡ್ಡ ಮನುಷ್ಯರ ಸಣ್ಣತನ ಜಾಹೀರಾಯಿತುಇವರಿಗೆ ಎಲ್ಲವೂ ಪುಕ್ಸಟ್ಟೆ ಆಗಬೇಕುಮಹಿಳಾ ಪೊಲೀಸರ ಕುತ್ತಿಗೆ ಮೇಲೆ ಕುಳಿತು ಅರ್ಜೆಂಟು ಎಂದು ಕೆಲಸ ಮಾಡಿಸುತ್ತಿರುವವರು ಇಪ್ಪತ್ತೇ ರೂಪಾಯಿಯ ನಾಲ್ಕು ಊಟ ಹೇಳಿದ್ದರೆ ಬಡವರಾಗುತ್ತಿರಲಿಲ್ಲಸಣ್ಣತನಕ್ಷುದ್ರತೆ ಎಲ್ಲವೂ ಅರ್ಥವಾದರೂ ನಾನು ಏನೂ ಮಾತಾಡಲಿಲ್ಲ.

ವಶೀಲಿಬಾಜಿಯ ಈ ದೊಡ್ಡ ಮನುಷ್ಯರಿಗಾಗಿಉಳಿದ ಹೆಣಗಳ ಪೋಸ್ಟ್ ಮಾರ್ಟಂಗೆ ಅನ್ಯಾಯವಾಗಿ ತಡ ಮಾಡಿಸಿದ್ದೆಅವರಲ್ಲನೇಕರು ಹೆಣ ತೆಗೆದುಕೊಂಡು ದೂರದ ಹಳ್ಳಿಗಳಿಗೆ ಹೋಗಬೇಕಿತ್ತುಯಾವಾಗ್ಲೂ ಇಂಥ ಅಯೋಗ್ಯರಿಗೇ ಮಣೆ ಹಾಕಬೇಕಾಗುತ್ತಲ್ಲಾ ಎಂದುಕೊಂಡೇ ಎಲ್ಲಾ formalities ಗಳನ್ನೂ ಬೇಗ ಮುಗಿಸಿ ಕಳಿಸಿಕೊಟ್ಟೆ.

ಮಾರನೇ ದಿನದ ಪತ್ರಿಕೆಗಳಲ್ಲಿ ಸುದ್ದಿ ಢಾಳಾಗಿ ಬಂದಿತ್ತುಸಾವಿನ ಮನೆಯವರಿಂದ ಸ್ವೀಟ್ ಕಿತ್ತು ತಿಂದ ಪೊಲೀಸರುಮೃತಳಿಗೆ ನ್ಯಾಯ ಕೊಡಿಸಬೇಕಿದ್ದ ಮಹಿಳಾ ಪೊಲೀಸರಿಂದಲೇ ದೌರ್ಜನ್ಯಸತ್ತವರ ಮನೆಯಲ್ಲಿ ಸ್ವೀಟಿಗಾಗಿ ಪೀಡಿಸಿದ ಪೊಲೀಸರು ಎಂಬೆಲ್ಲ ವರದಿಗಳುಅದರಲ್ಲಿ ನನ್ನ ಹೆಸರೂ ಪ್ರಸ್ತಾಪವಾಗಿತ್ತುಸುಳ್ಳನ್ನು ಸುಳ್ಳಲ್ಲ ಎಂದು ಹೇಳಲು ಪೊಲೀಸರಿಗೆಲ್ಲಿದೆ ಅವಕಾಶಹೇಳಿದರೂ ನಂಬುವವರಾರು?

ಕಮೀಷನರ್ ಸಾಹೇಬರ ಬಳಿ ಹೋಗಿ ವಿನಂತಿಸಿದೆ. “ತಾವೊಂದು ಪ್ರತಿಕ್ರಿಯೆ ಕೊಟ್ಟರೆ ತುಂಬಾ ಅನುಕೂಲ ಸಾರ್ವೈಯಕ್ತಿಕವಾಗಿ ನನಗೆ ತುಂಬಾ ಅವಮಾನವಾಗಿದೆ“.

ಅಧಿಕಾರಿಗಳೊಂದಿಗೆ ಚರ್ಚಿಸಿದ ಅವರು, “ಬೇಡ್ರೀಒಂದು ಪ್ರತಿಕ್ರಿಯೆ ಕೊಟ್ಟರೆ ಇನ್ನೂ ಹಲವು ಹತ್ತು ಬಗೆಯ ಆಪಾದನೆ ಮಾಡುತ್ತಾರೆಮೌನೇನಂ ಕಲಹಂ ನಾಸ್ತಿಏನೂ ಪ್ರತಿಕ್ರಿಯೆ ಕೊಡದಿದ್ದರೆ ನಾಲ್ಕು ದಿನ ಕವ ಕವ ಅಂದು tb ಮುಚ್ಕೊಂಡು ತೆಪ್ಪಗಾಗುತ್ತಾರೆ” ಎಂದರು.

ಇಷ್ಟು ವರ್ಷ ಸರ್ವೀಸ್ ಮಾಡಿ ವಿನಾಕಾರಣ ಅವಮಾನಿತನಾಗ ಬೇಕಲ್ಲಾ ಸಾರ್” “ಯಾರೇನೆ ಹೊಯ್ಕೊಳ್ಳಲಿ ಅದು ಖಾಕಿಗೆ ಅಂತ ಒರೆಸಿಕೊಂಡು ಸುಮ್ಮನಾಗಿನಿಮ್ಮ ಅಂತಃಸಾಕ್ಷಿ ಸರಿಯಾಗಿದೆ ಅಂತ ಗೊತ್ತಿದೆ ತಾನೇನಮ್ಮಗಳಿಗೂ ಸತ್ಯ ಗೊತ್ತಿದೆ ತಾನೇ?” ಎಂದರು.

ವಾರ ಕಳೆಯಿತು. dysp ಎಂ.ನಂಜೇಗೌಡರು ಎದುರು ಸಿಕ್ಕರುಅವರು ನನಗೆ ತರಬೇತಿ ಕೊಟ್ಟ ಗುರುಗಳುಡೋಂಟ್ ಕೇರ್ ಖಡಕ್ ಮನುಷ್ಯ. “ಥುತ್!” ಎಂದು ಕ್ಯಾಕರಿಸಿ ಉಗಿದು, “ನೀವೆಲ್ಲಾ ಮನುಷ್ಯರೇನಯ್ಯಾಹೆಣದ ಬಾಯಲ್ಲಿ ಹಣ ತಿನ್ನೋಕೆ ಹೋಗ್ತೀರಲ್ಲಾನಿಮ್ಮ ಹೆಂಡ್ರು ಮಕ್ಕಳಿಗೆ ಒಳ್ಳೆಯದಾಗುತ್ತಾನೀನೇನು ನನಗೆ ಶಿಷ್ಯನಾ?” ಎಂದು ಬಾಯಿಗೆ ಬಂದಂತೆ ಬೈದರು.

ಪೆದ್ದು ಪೆದ್ದಾಗಿ ವಿವರಿಸಲು ಯತ್ನಿಸಿದೆ. “ಬೇಕಾದ್ರೆ ರಾಜೇಂದ್ರ ಕುಮಾರ್ ಅವರನ್ನೂ ಕೇಳಿ ಸಾರ್

ಏ ಮುಖಾ ಮುಚ್ಚೋ ಮಾತಾಡಬೇಡನಾನೆಲ್ಲಾ ಕಂಡಿದ್ದೀನಿ” ಎನ್ನುತ್ತಾ ಹೊರಟೇಬಿಟ್ಟರುಅವರ ಮಾತು ಇಡೀ ಜನತೆಯ ಶಾಪದಂತೆ ಕೇಳಿಸಿತುಬಹುಶಃ ನಾಲ್ಕಾರು ತಿಂಗಳು ಬಿಡದೆ ಕಾಡಿತುಮುಂದೊಂದು ದಿನ ಅವರನ್ನು ಊಟಕ್ಕೆ ಕರೆದು ಸತ್ಯ ಸಂಗತಿ ವಿವರಿಸಿದೆಒಟ್ಟಿಗೆ ತಿಂದ ಊಟದ ಬಿಲ್ ಕೇಳಿದ್ದೇ ಈ ರಾದ್ಧಾಂತಕ್ಕೆ ಕಾರಣವೆಂದು ಹೇಳಿದೆ.

(ಮುಗಿಯಿತು)

 

andolanait

Share
Published by
andolanait

Recent Posts

ಕೃಷಿ ಜತೆಗೆ ಬೃಹತ್ ಕೈಗಾರಿಕಾ ಬೆಳವಣಿಗೆ ಅಗತ್ಯ; ಜಯಕುಮಾರ್

ಮಂಡ್ಯ: ರಾಷ್ಟ್ರದ ಜಿಡಿಪಿಯಲ್ಲಿ ಕೃಷಿ ಪಾಲು ಶೇ.೨೦ ರಷ್ಟು ಇದ್ದು, ಶೇ.೬೦ ರಷ್ಟು ಜನರು ಕೃಷಿ ಅವಲಂಭಿಸಿದ್ದಾರೆ. ಆದ್ದರಿಂದ ರಾಷ್ರ್ಟದ…

14 mins ago

ಕುವೈತ್‌ ಭೇಟಿ: ಅರೇಬಿಯನ್‌ ಗಲ್ಫ್‌ ಕಪ್‌ ಉದ್ಘಾಟನೆಯಲ್ಲಿ ಭಾಗಿಯಾದ ಪ್ರಧಾನಿ ಮೋದಿ

ಕುವೈತ್‌/ನವದೆಹಲಿ: 26ನೇ ಅರೇಬಿಯನ್‌ ಗಲ್ಫ್‌ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದು, ಕುವೈತ್‌ ದೊರೆ ಶೇಖ್‌ ಮಿಶಾಲ್‌…

20 mins ago

ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ: ಸಿಎಂ ಸಿದ್ದರಾಮಯ್ಯ

371 J ಕೊಡುಗೆಯಾಗಿ 371 ಬೆಡ್ ಗಳ ಆಸ್ಪತ್ರೆ: ಸಿಎಂ ಕಲಬುರಗಿ: ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ ರಚಿಸುವ ಉದ್ದೇಶ…

21 mins ago

ಬಿಜೆಪಿಗೆ ಆತಂಕ ತಂದ ಶಾ ಅಂತರಾಳದ ಮಾತು

‘ಅಂಬೇಡ್ಕರ್ ಅಂಬೇಡ್ಕರ್ ಎನ್ನುವುದು ಈಗ ಒಂದು ಫ್ಯಾಶನ್ ಆಗಿಬಿಟ್ಟಿದೆ. ಹೀಗೆ ಹೇಳುವವರು ಭಗವಂತನ ಹೆಸರನ್ನಾದರೂ ಇಷ್ಟು ಬಾರಿ ಸ್ಮರಿಸಿದ್ದರೆ ಅವರಿಗೆ…

32 mins ago

ವೈಜ್ಞಾನಿಕ ಕಸ ವಿಲೇವಾರಿಗೆ ಜಾಗದ ಸಮಸ್ಯೆ

ರಸ್ತೆ ಬದಿಯೇ ಕಸದ ವಾಹನ ನಿಲುಗಡೆಗೊಳಿಸಬೇಕಾದ ಪರಿಸ್ಥಿತಿ; ದುರ್ವಾಸನೆಯಿಂದ ಸಾರ್ವಜನಿಕರಿಕೆ ಕಿರಿಕಿರಿ ಕೃಷ್ಣ ಸಿದ್ದಾಪುರ ಸಿದ್ದಾಪುರ: ಪಟ್ಟಣದಲ್ಲಿ ಕಸ ವಿಲೇವಾರಿ…

43 mins ago

ಹೈಟೆಕ್‌ ಬಸ್‌ ನಿಲ್ದಾಣದಲ್ಲಿ ಹಲವು ಸಮಸ್ಯೆಗಳು

ಭೇರ್ಯ: ಸಂಜೆ ನಂತರ ನಿಲ್ದಾಣದೊಳಗೆ ಬಾರದ ಬಸ್‌ಗಳು; ಕುಡಿಯುವ ನೀರು, ಪಾರ್ಕಿಂಗ್ ವ್ಯವಸ್ಥೆ ಇಲ್ಲ ಭೇರ್ಯ ಮಹೇಶ್ ಭೇರ್ಯ: ಗ್ರಾಮದ…

1 hour ago