ಎಡಿಟೋರಿಯಲ್

ವಿಕಲಚೇತರಿಗೆ ಅನುಕಂಪಕ್ಕಿಂತ ಬೇಕಿದೆ ಮನೋಬಲ

೧೯೯೨ ರಿಂದ ಅಂತಾರಾಷ್ಟ್ರೀಯ ವಿಕಲಚೇತನ ದಿನಾಚರಣೆಯನ್ನು ಆರಂಭಿಸಲಾಗಿತ್ತು. ಆದರೆ, ಇದಕ್ಕೂ ಮೊದಲೇ ಅಂದರೆ ೧೯೮೩ ರಿಂದ ೧೯೯೨ರ ಅವಧಿಯನ್ನು ವಿಶ್ವಸಂಸ್ಥೆಯು ವಿಕಲಚೇತನರ ದಶಕ ಎಂದು ಘೋಷಣೆ ಮಾಡಿತು. ಈ ಅವಧಿಯಲ್ಲಿ ವಿಕಲಚೇತನರಿಗಾಗಿ ವಿಶೇಷ ಯೋಜನೆಗಳನ್ನು ಜಾರಿಗೊಳಿಸುವುದು, ಕಾರ್ಯಯೋಜನೆಗಳನ್ನು ರೂಪಿಸುವ ಬಗ್ಗೆ ವಿಶ್ವದ ಎಲ್ಲ ಸರ್ಕಾರ ಹಾಗೂ ಖಾಸಗಿ ಸಂಸ್ಥೆಗಳಿಗೆ ಸೂಚಿಸಲಾಗಿತ್ತು.

ನಮಗೆ ಯಾರ ಅನುಕಂಪವೂ ಬೇಡ. ನಮ್ಮ ಹಕ್ಕುಗಳನ್ನು ನಮಗೆ ಜಾರಿ ಮಾಡಿದರೆ ಸಾಕು.. ಇದು ತಮ್ಮದಲ್ಲದ ತಪ್ಪಿನ ನಡುವೆ ವಿಕಲಚೇತನರಿಗೆ ಜನಿಸಿದ ಹಲವರ ಮಾತು. ಇದು ಸತ್ಯವೂ ಕೂಡ. ಏಕೆಂದರೆ ಅವಕಾಶಗಳನ್ನು ಕೊಟ್ಟರೆ ಎಲ್ಲರೂ ಅದನ್ನು ಸಾಧಿಸಬಲ್ಲರು ಎನ್ನುವುದಕ್ಕೆ ನಮ್ಮ ಮುಂದೆಯೇ ಹಲವಾರು ಉದಾಹರಣೆಗಳಿವೆ. ಕ್ರೀಡೆ, ಸಿನೆಮಾ, ಕಲೆ, ಶಿಕ್ಷಣ.. ಹೀಗೆ ಹಲವು ಕ್ಷೇತ್ರದಲ್ಲಿ ವಿಕಲಚೇತನರು ದೊಡ್ಡ ಸಾಧನೆಯೇ ಮಾಡಿದ್ದಾರೆ.

ಪ್ರತಿ ವರ್ಷ ಅಂತಾರಾಷ್ಟ್ರೀಯ ವಿಕಲಚೇತನ ದಿನಾಚರಣೆಯನ್ನು ಡಿಸೆಂಬರ್ ೩ರಂದು ಆಚರಿಸಲಾಗುತ್ತದೆ.ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ೧೯೮೧ರ ವರ್ಷವನ್ನು ವಿಕಲಚೇತನರ ವರ್ಷ ಎಂದು ಘೋಷಣೆಯನ್ನು ಹೊರಡಿಸಲಾಯಿತು. ಈ ಸಾಲಿನಲ್ಲಿ ವಿಕಲಚೇತನರ ಅನುಕೂಲಕ್ಕಾಗಿ ವಿಶೇಷ ಯೋಜನೆಗಳನ್ನು ಜಾರಿಗೊಳಿಸುವುದು, ಸಾರ್ವಜನಿಕ ಜೀವನದಲ್ಲಿ ಸಮಾನ ಅವಕಾಶ ಕಲ್ಪಿಸುವ ಬಗ್ಗೆ ವಿಶ್ವದ ಎಲ್ಲ ರಾಷ್ಟ್ರಗಳಿಗೆ ಸೂಚನೆ ನೀಡಲಾಯಿತು. ಆದರೆ ೧೯೯೨ರಂದು ವಿಶ್ವಸಂಸ್ಥೆಯಲ್ಲಿ ಅಂತಾರಾಷ್ಟ್ರೀಯ ವಿಕಲಚೇತನ ದಿನಾಚರಣೆಯನ್ನು ಆರಂಭಿಸಲಾಯಿತು. ಅಂದಿನಿಂದ ಇಂದಿನವರೆಗೂ ಡಿಸೆಂಬರ್‌೦೩ರನ್ನು ಅಂತಾರಾಷ್ಟ್ರೀಯ ವಿಕಲಚೇತನರ ದಿನಾಚರಣೆ ಎಂದು ಆಚರಿಸಲಾಗುತ್ತದೆ. ವಿಕಲಚೇತನರನ್ನು ಸಾಮಾನ್ಯರಂತೆ ಒಪ್ಪಿಕೊಳ್ಳುವುದು, ಸಹಾನುಭೂತಿ ತೋರುವುದು, ಬೆಂಬಲಿಸುವ ಮೂಲಕ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಬಗ್ಗೆ ಈ ದಿನ ಎಲ್ಲರಲ್ಲೂ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ.

ವಿಶ್ವಸಂಸ್ಥೆಯ ಸೂಚನೆ ನಂತರ ರಾಷ್ಟ್ರದ ಬಹುತೇಕ ಸರ್ಕಾರಗಳು ವಿಕಲಚೇತನರ ಅಭಿವೃದ್ಧಿಗೆ ಯೋಜನೆಗಳನ್ನು ಜಾರಿಗೊಳಿಸಿದವು. ಅದರಲ್ಲೂ ಇಂಗ್ಲೆಂಡ್ ನಲ್ಲಿ ಕಳೆದ ೨೦೧೨ ರಿಂದ ದೇಶದ ಎಲ್ಲ ವಿಕಲಚೇತನರಿಗೆ ಕಡ್ಡಾಯವಾಗಿ ಸರ್ಕಾರಿ ಉದ್ಯೋಗ ನೀಡುವುದಾಗಿ ಘೋಷಿಸಿತು. ಆ ಮೂಲಕ ಅವರ ಜೀವನಸ್ತರವನ್ನು ಅಭಿವೃದ್ಧಿಗೊಳಿಸಲಾಗುವುದು ಎಂದು ಹೇಳಿತು. ವಿಶ್ವಸಂಸ್ಥೆಯ ೨೭/೨ ಕಲಂನ ಪ್ರಕಾರ ಕಡ್ಡಾಯ ಸರ್ಕಾರಿ ಉದ್ಯೋಗವು ವಿಕಲಚೇತನರ ಮೂಲಭೂತ ಹಕ್ಕು ಎಂದು ಹೇಳುತ್ತದೆ.

ವಿಕಲಚೇತನರಲ್ಲಿ ಜೀವನೋತ್ಸಾಹವನ್ನು ಬೆಳಸಲು ಎಲ್ಲರೂ ಕೈ ಜೋಡಿಸಬೇಕಿದೆ. ಇದು ಕೇವಲ ಭಾರತವಷ್ಟೇ ಅಲ್ಲ. ಇಡೀ ವಿಶ್ವವೇ ವಿಕಲಚೇತರನ ಶ್ರೇಯೋಭಿವೃದ್ಧಿಗಾಗಿ ಹಲವು ಯೋಜನೆ, ಕಾನೂನುಗಳನ್ನು ಜಾರಿಗೊಳಿಸಿದೆ.ಭಾರತದಲ್ಲಿಯೇ ಸಮೀಕ್ಷೆ ಪ್ರಕಾರ ಶೇ.೨.೨೧ರಷ್ಟು ಜನಸಂಖ್ಯೆ ವಿಕಲಚೇತನರು ಇದ್ದಾರೆ. ಅಂದರೆ ೨.೬೮ ಕೋಟಿಯಷ್ಟು ವಿಕಚೇನತರಿದ್ದಾರೆ. ಇದರಲ್ಲಿ ಪುರುಷರ ಸಂಖ್ಯೆ ೧.೫ ಕೋಟಿಯಿದ್ದರೆ, ಮಹಿಳೆಯರ ಪ್ರಮಾಣ ೧.೧೮ ಕೋಟಿ. ಇದರಲ್ಲಿ ಗ್ರಾಮಾಂತರ ಪ್ರದೇಶದಲ್ಲಿಯೇ ಶೇ.೬೯ರಷ್ಟು ಮಂದಿ ಅಂದರೆ ೧.೮೬ ಕೋಟಿ ಹಾಗೂ ನಗರ ಪ್ರದೇಶದಲ್ಲಿ ಶೇ.೩೧ರಷ್ಟು ಮಂದಿ ಬದುಕು ಕಂಡುಕೊಂಡಿದ್ಧಾರೆ. ಇದರಲ್ಲಿ ದೃಷ್ಟಿ ವಿಕಲಚೇತನರ ಪ್ರಮಾಣ ಶೇ.೧೯ರಷ್ಟಿದ್ದರೆ, ಶ್ರವಣ ದೋಷವುಳ್ಳವರು ಕೂಡ ಶೇ.೧೯, ಮಾತಿನ ಸಮಸ್ಯೆ ಇರುವವರು ಶೇ.೭, ಮಂದ ಪ್ರಮಾಣದ ಮಾನಸಿಕ ಸಮಸ್ಯೆ ಇರುವವರು ಶೇ ೬, ತೀವ್ರ ಪ್ರಮಾಣದ ಮನೋ ಕಾಯಿಲೆಯಿಂದ ಬಳಲುತ್ತಿರುವವರು ಶೇ.೨. ಇತರೆ ವಿಕಲಚೇತನರ ಪ್ರಮಾಣ ಶೇ.೧೮ರಷ್ಟಿದ್ದರೆ, ಶೇ.೮ರಷ್ಟು ಮಂದಿ ಬಹು ವಿಧದ ವಿಕಲಚೇತನತೆಗೆ ಒಳಗಾಗಿದ್ಧಾರೆ.
೨೦೩೦ರ ವೇಳೆಗೆ ವಿಕಲಚೇತನರು ಎಲ್ಲ ಕ್ಷೇತ್ರಗಳಲ್ಲಿ ಸಹಭಾಗಿತ್ವಕ್ಕ ಅವಕಾಶ ಕಲ್ಪಿಸುವುದು. ೧೧ ವರ್ಷಗಳಲ್ಲಿ ವಿಕಲಚೇತನರ ಸಬಲೀಕರಣದ ಉದ್ದೇಶವನ್ನು ಹೊಂದಲಾಗಿದೆ. ಸುಸ್ಥಿರ ಅಭಿವೃದ್ಧಿ ಜೊತೆಗೆ ಸಮಾಜದಲ್ಲಿ ಸಮಾನತೆ ಹಾಗೂ ಸಹಭಾಗಿತ್ವಕ್ಕೆ ಆದ್ಯತೆ ನೀಡುವ ಉದ್ದೇಶವನ್ನುಹಾಕಿಕೊಳ್ಳಲಾಗಿದೆ. ತಮ್ಮದಲ್ಲದ ತಪ್ಪಿಗೆ ಬದುಕಿನುದ್ದಕ್ಕೂ ನೋವು, ಸಂಕಟ, ಹತಾಶೆ ಅನುಭವಿಸುತ್ತಿದ್ದ ಸಮೂಹವದು. ಎಲ್ಲರಂತೆ ಬದುಕು ಸಾಗಿಸಲು ಆಗುತ್ತಿಲ್ಲವಲ್ಲ ಎಂಬ ನೋವಿನಲ್ಲಿ ದಿನ ಕಳೆಯುವ ಆ ಮನಸ್ಥಿತಿಯನ್ನು ಬದಲಾಯಿಸಬೇಕಿದೆ. ನಿತ್ಯ ಕೊರಗುವ ಜನರಲ್ಲಿ ಆತ್ಮಸ್ಥೈರ್ಯ ತುಂಬಬೇಕಿದೆ. ಸಾರ್ವಜನಿಕ ಜೀವನದಲ್ಲಿ ಎಲ್ಲರಂತೆ ಇವರ ಜೀವನವನ್ನು ಕಟ್ಟಿಕೊಡಬೇಕಿದೆ. ಸಾಮಾನ್ಯ ಜನರಿಗಿಂತ ಇವರೇನೂ ಭಿನ್ನರಲ್ಲ. ಸಾಧನೆಯ ಹಾದಿಯಲ್ಲಿ ಇವರಿಗೆ ತಮ್ಮ ವೈಕಲ್ಯ ಎಂದಿಗೂ ಅಡ್ಡಿ ಆಗುವುದಿಲ್ಲ. ಆದರೆ, ಇವರಲ್ಲಿ ಮನೋಬಲವನ್ನು ಹೆಚ್ಚಿಸಬೇಕಿರುವುದು ಸಮಾಜದ ಜವಾಬ್ದಾರಿಯೂ ಹೌದು.

andolana

Recent Posts

ಉಪಟಳ ನೀಡುತ್ತಿದ್ದ ಚಿರತೆ ಸೆರೆ : ನಿಟ್ಟುಸಿರು ಬಿಟ್ಟ ಜನತೆ

ಕೆ.ಆರ್.ಪೇಟೆ : ತಾಲ್ಲೂಕಿನ ಬೂಕನಕೆರೆ ಹೋಬಳಿಯ ಮುದುಗೆರೆ ಗ್ರಾಮದ ಬಳಿ ರೈತರ ಸಾಕು ಪ್ರಾಣಿಗಳನ್ನು ತಿಂದು ಹಾಕುತ್ತಾ ರೈತರಿಗೆ ನಿತ್ಯ…

2 hours ago

ಮೃಗಾಲಯದ ಬೇಟೆ ಚೀತಾ ‘ಬ್ರೂಕ್’ ಇನ್ನಿಲ್ಲ

ಮೈಸೂರು : ವಿಶ್ವವಿಖ್ಯಾತ ಮೈಸೂರು ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಚುರುಕಿನ ಚಟುವಟಿಕೆಯಿಂದ ಸದಾ ಸಂದರ್ಶಕರ ಗಮನ ಸೆಳೆಯುತ್ತಿದ್ದ ಸುಮಾರು ಸುಮಾರು…

3 hours ago

ಸಿಲಿಂಡರ್‌ ಸ್ಫೋಟ ಪ್ರಕರಣ : ತನಿಖೆ ತೀವ್ರ ; ಮೈಸೂರಲ್ಲಿ ಖಾಕಿ ಕಟ್ಟೆಚ್ಚರ

ಮೈಸೂರು : ಗುರುವಾರ ಸಂಜೆ ಮೈಸೂರಿನ ಅಂಬಾವಿಲಾಸ ಅರಮನೆ ಮುಂಭಾಗ ಸಂಭವಿಸಿದ ಹಿಲೀಯಂ ಸಿಲಿಂಡರ್ ಸ್ಪೋಟ ಪ್ರಕರಣ ಸಂಬಂಧ ನಗರದ…

3 hours ago

ಎಚ್.ಡಿ.ಕೋಟೆ | ತಾಲ್ಲೂಕಿನ ಶೈಕ್ಷಣಿಕ ಪ್ರಗತಿಗೆ ಮಾದರಿ ಕಾರ್ಯಕ್ರಮ

ಎಚ್.ಡಿ.ಕೋಟೆ : ತಾಲ್ಲೂಕಿನಲ್ಲಿ ಶೈಕ್ಷಣಿಕ ಪ್ರಗತಿಗೆ ಅಗತ್ಯವಾದ ಮಾದರಿ ಕಾರ್ಯಕ್ರಮಗಳನ್ನು ಹಗಲಿರುಳು ಎನ್ನದೆ ಶಿಕ್ಷಣ ಇಲಾಖೆಯವರು ನಡೆಸುತ್ತಿದ್ದಾರೆ ಎಂದು ಶಾಸಕ…

3 hours ago

ಹೊಗೇನಕಲ್‌ ಜಲಪಾತಕ್ಕೆ ಪ್ರವಾಸಿಗರ ದಂಡು

ಹನೂರು : ಕರ್ನಾಟಕದ ನಯಾಗಾರ ಎಂದೇ ಪ್ರಖ್ಯಾತಿ ಪಡೆದಿರುವ ಹೊಗೇನಕಲ್ ಜಲಪಾತ ನೋಡಲು ತಮಿಳುನಾಡಿನ ಭಾಗದಿಂದ ಪ್ರವಾಸಿಗರ ದಂಡೇ ಹರಿದುಬರುತ್ತಿದ್ದು,…

3 hours ago

ಪುಷ್ಪ-2 ಕಾಲ್ತುಳಿತ ಪ್ರಕರಣ ; ವರ್ಷದ ಬಳಿಕ ಚಾರ್ಜ್‌ಶೀಟ್‌ ಸಲ್ಲಿಕೆ

ಹೈದರಾಬಾದ್‌ : ಪುಷ್ಪ-2 ಸಿನಿಮಾ ವಿಶೇಷ ಪ್ರದರ್ಶನದ ವೇಳೆ ಉಂಟಾದ ಕಾಲ್ತುಳಿತ ಪ್ರಕರಣದಲ್ಲಿ ವರ್ಷದ ಬಳಿಕ ಇದೀಗ ಪೊಲೀಸರು ಕೋರ್ಟ್ಗೆ…

3 hours ago