ಎಡಿಟೋರಿಯಲ್

ವಾರೆ ನೋಟ: ಪೆನ್ನು- ಗನ್ನು ಮತ್ತು ನಗ್ಸೋಲೈಟು!

ಲೋಕ ಕಲ್ಯಾಣ ಮಾರ್ಗದ ಏಳನೇ ನಂಬರ್ ಮನೆಯ ಮುಂದೆ ಪೆನ್ನು ಹೆಜ್ಜೆ ಹಾಕುವ ಹೊತ್ತಿಗೆ ಎದುರಿನಿಂದ ಗನ್ನು ಕೂಡಾ ಬರುವುದು ಕಂಡಿತು. ಪೆನ್ನಿಗೆ ಆಶ್ಚರ್ಯ. ಏಲಾ ಬಡ್ಡಿ ಮಗಾ ಗನ್ನೂ ಈ ಕಡೆ ಬಂದ್ನಾ? ಅಂತ ತಲೆಕೆಡಿಸಿಕೊಂಡ. ಒಳಗೊಳಗೆ ಅಸಮಾಧಾನ ಇದ್ದರೂ ಮೂವತ್ತೆರಡು ಹಲ್ಲು ಕಾಣುವಂತೆ ನಗೆ ಚೆಲ್ಲಿದ.

ಏನೋ ಪೆನ್ನು? ಏನ್ ಸಮಾಚಾರ ಅಂತಾ ಗನ್ನು ಕೇಳಿದ. ಕೇಳೋದ್ರಲ್ಲೇ ಕೊಂಕು ಇತ್ತು. ಪೆನ್ನಿಗೆ ಸಖತ್ ಉರಿಯಿತು. ಆದರೂ ತೊರಗೊಡದೆ ನಗೆ ಬೀರೋ ಕಾರ್ಯಕ್ರಮ ಮುಂದುವರೆಸಿದ.
ಏನಾದ್ರೂ ಎಕ್ಸ್ ಕ್ಲೂಸಿವ್ ಇದೆಯಾ? ಇದ್ರೆ ಕೊಟ್ಟಿರು ನಿಂದು ಪ್ರಿಂಟಾಗೊಕ್ ಮುಂಚೆ ನಾನೂ ಬ್ರೇಕಿಂಗ್ ಚೆಚ್ ಬಿಡ್ತಿನಿ. ನೀನು ಮುಂಚೆನೇ ಫೈಲ್ ಮಾಡಿರೋದ್ರಿಂದ ನಿಂದೂ ಎಕ್ಸ್ ಕ್ಲೂಸಿವ್ ಆಗಿಯೇ ಇರುತ್ತೆ ಅಂತಾ ಗನ್ನು ಕೇಳಿದ.
ಅಯ್ಯೋ ಅಂತಾದ್ದೇನೂ ಇಲ್ಲಪಾ.. ಪ್ರಧಾನಿಗಳು ನಗ್ಸೋಲೈಟುಗಳ ಬಗ್ಗೆ ಹೇಳಿದ್ರಲ್ಲಾ ಅದುನ್ನಾ ಬೇರೇ ಥರಾನೇ ಇಂಟ್ರರ್ ಪ್ರಿಟ್ ಮಾಡಿ ಸ್ಟೋರಿ ಕೊಡು ಅಂತಾ ಎಡಿಟರ್ ಹೇಳಿದ್ದಾರೆ.. ಅದುಕ್ಕೆ ಒಂದು ರೌಂಡು ಪ್ರಧಾನಿಗಳನ್ನೇ ಕೇಳಿಬಿಡೋಣ ಅಂತಾ ಬಂದೆ ಅಂತಾ ಪೆನ್ನು ವಿವರಿಸಿದ.
ಹೌದೇನೋ? ನಮ್ಮೆಡಿಟರ್ ಕೂಡಾ ಬೇರೆ ಥರ ಸ್ಟೋರಿ ಕೊಡು ಅಂದಿದ್ದಾರೆ. ನಂಗೂ ಬೇರೆ ಥರಾ ಕೊಡೋಕೆ ಐಡಿಯಾ ಬರ್ಲಿಲ್ಲ. ನಮ್ಮ ಪ್ರಧಾನಿಗಳು ಎಂಥೆಂಥದೋ ಸ್ಲೋಗನ್ನುಗಳನ್ನು ಕಾಯಿನ್ ಮಾಡ್ತಾರೆ. ಅವರುನ್ನೇ ಕೇಳುದ್ರೆ ಐಡಿಯಾ ಕೊಡ್ತಾರೆ ಅಂತಾ ಬಂದೆ ಅಂತ ಗನ್ನು ಹೇಳಿದ.
ದ್ವಾರಪಾಲಕರು ಗನ್ನು ಪೆನ್ನು ಇಬ್ಬರನ್ನು ಒಳಗೆ ಬಿಟ್ಟರು. ಏನೆಲ್ಲ ಟೈಟ್ ಸೆಕ್ಯುರಿಟಿ ಇರುತ್ತೆ. ಯಾರನ್ನೂ ಒಳಗೆ ಬಿಡೋದೇ ಇಲ್ಲ ಅಂತಾ ಪ್ರೆಸ್ ಕ್ಲಬ್ಬಿನಲ್ಲಿ ಮಾತಾಡ್ತಾ ಇರ್ತಾರೆ. ಆದ್ರೂ ಇಷ್ಟು ಈಸಿಯಾಗಿ ಎಂಟ್ರಿ ಸಿಕ್ಕಿತಲ್ಲ ಅಂತಾ ಇಬ್ಬರಿಗೂ ಆಶ್ಚರ್ಯ.
ಪೆನ್ನು ಗನ್ನು ಇಬ್ಬರು ಒಳ ಆವರಣಕ್ಕೆ ಹೋದರು. ಏನಾಶ್ಚರ್ಯ? ಪ್ರಧಾನಿಗಳು ಯೋಗ ಮಾಡುತ್ತಿದ್ದರು. ಯೋಗ ಮುಗಿಸಿದ ಪ್ರಧಾನಿಗಳು ಪೆನ್ನು ಗನ್ನು ಇಬ್ಬರನ್ನು ನೋಡಿ ನಕ್ಕರು. ಎಷ್ಟೋ ವರ್ಷಗಳ ಪರಿಚಯ ಇರುವಂತೆ.
ಪೆನ್ನು ಗನ್ನು ಕಕ್ಕಾಬಿಕ್ಕಿಯಾದರು.
ಬನ್ನಿ ಫ್ರೆಂಡ್ಸ್ ಎಂದು ಪ್ರಧಾನಿಗಳು ಪೆನ್ನು ಮತ್ತು ಗನ್ನು ಇಬ್ಬರ ಹೆಗಲ ಮೇಲೂ ಕೈ ಹಾಕಿಕೊಂಡು ವೆರಾಂಡಾಕ್ಕೆ ಕರೆದೊಯ್ದು ಸೋಫಾ ಮೇಲೆ ಕೂರಿಸಿದರು.
ಗ್ರೀನ್ ಟೀ ತಗೋತೀರಾ ಗ್ರೀನ್ ಕಾಫಿ ತಗೋತೀರಾ? ಎಂದು ಪ್ರಧಾನಿಗಳೇ ಕೇಳಿ ಅಚ್ಚರಿ ಮೂಡಿಸಿದರು. ಯಾವುದು ಎಂದು ಹೇಳುವ ಮುನ್ನವೇ ಇಬ್ಬರಿಗೂ ಗ್ರೀನ್ ಟೀ ಸುರಿದುಕೊಟ್ಟರು.
ಗ್ರೀನ್ ಟೀ ಆರೋಗ್ಯಕ್ಕೆ ಒಳ್ಳೆಯದು… ನಿಮ್ಮಂತಹ ಯುವಕರು ಚನ್ನಾಗಿರಬೇಕು.. ಬ್ರೇಕಿಂಗ್ ನ್ಯೂಸು.. ಎಕ್ಸ್ ಕ್ಲೂಸಿವ್ ನ್ಯೂಸು ಅಂತಾ ಸಿಕ್ಕಾಪಟ್ಟೆ ಟೆನ್ಷನ್ ನಲ್ಲೇ ಇರ್ತೀರಿ ನೀವು.. ಅಂದು ಒಂದೊಂದೇ ಕ್ಯೂಬು ಸಕ್ಕರೆ ಹಾಕಿದರು.
ಟೀ ಕುಡಿಯುತ್ತಲೇ ಗನ್ನು ಪ್ರಧಾನಿಗಳೇ ನೀವು ಚಿಂತನ ಶಿಬಿರದಲ್ಲಿ ಪೆನ್ನು ಗನ್ನು ಅಂತಾ ಪನ್ ಮಾಡಿದ್ರಲ್ಲಾ.. ಅದುನ್ನಾ ಎಲ್ರೂ ಕನ್ಫೂಸ್ ಮಾಡಿಕೊಂಡಿದ್ದಾರೆ, ನಿಮಗೆ ಯಾಕೆ ಪೆನ್ನು ಮತ್ತು ಗನ್ನು ಎರಡೂ ಡೆಂಜರ್ ಅಂತಾ ಅನ್ನಿಸಿತು. ಏನಾದ್ರೂ ವಿಶೇಷ ಕಾರಣ ಇದೆಯೇ ಎಂದು ಕೇಳಿದ.
ಪೆನ್ನು ಕೂಡಾ, ಹೌದು ಪ್ರಧಾನಿಗಳೇ ನಂದೂ ಅದೇ ಪ್ರಶ್ನೆ ಅಂದ.
ಪ್ರಧಾನಿಗಳು ನಕ್ಕರು. ಮುಕ್ತವಾಗಿ ನಕ್ಕರು. ನೋಡಿ ಪೆನ್ನು ಗನ್ನು ಮೊದಲಿನಂತಿಲ್ಲ. ಮೊಣಚು ಕಳೆದುಕೊಂಡಿವೆ. ಕಾಮಿಡಿ ಪೀಸುಗಳಾಗಿ ಬಿಟ್ಟಿವೆ ಅಂತಾ ಮತ್ತೆ ನಕ್ಕರು.
ಪೆನ್ನು ಗನ್ನು ಇಬ್ಬರೂ ಒಟ್ಟಿಗೆ ಅದು ಹೇಗೆ ಪ್ರಧಾನಿಗಳೇ ಎಂದು ಕೇಳಿದರು.
ಅಲ್ಲಾ.. ಪೆನ್ನಾಗಲೀ ಗನ್ನಾಗಲಿ ನನ್ನ ಸಂದರ್ಶನ ಮಾಡುವಾಗ ಪ್ರಧಾನಿಗಳೇ ನೀವು ಇಷ್ಟು ಆರೋಗ್ಯವಾಗಿದ್ದೀರಿ ಅದರ ಗುಟ್ಟೇನು? ಪ್ರಧಾನಿಗಳೇ ದಿನದಲ್ಲಿ 18 ಗಂಟೆ ಕೆಲಸ ಹೇಗೆ ಮಾಡ್ತೀರಿ? ಪ್ರಧಾನಿಗಳೇ ನೀವು ಒಂದೇ ದಿನದಲ್ಲಿ ಎಷ್ಟು ದೇಶ ಸುತ್ತಿದ್ದೀರಿ? ಪ್ರಧಾನಿಗಳೇ ನಿಮಗೆ ಮಶ್ರೂಮೇ ಯಾಕೆ ಇಷ್ಟಾ? ಇಂತಹ ಪ್ರಶ್ನೆಗಳನ್ನಾ ಕೇಳ್ತಾರೆ.. ಇವೆಲ್ಲಾ ನನ್ನುನ್ನ ಪ್ಲೀಸ್ ಮಾಡೋಕೆ ಕೇಳೋ ಪ್ರಶ್ನೆಗಳು.. ಸ್ಟುಪಿಡ್ ಪ್ರಶ್ನೆಗಳು… ಅಂದರು ಪ್ರಧಾನಿ.
ಅಲ್ಲಾ ಇವತ್ತುಂದಿನಾ ನಾನು ಡಿಮಾನಿಟೈಷೆಷನ್ ಮಾಡಿದ್ದೀನಿ.. ಜಿಎಸ್ಟಿ ಜಾರಿಗೆ ತಂದಿದ್ದೀನಿ.. ಒಂದೇ ದೇಶ ಒಂದೇ ರೆಷನ್ ಕಾರ್ಡು ಮಾಡಿದ್ದೀನಿ.. ಟ್ಯಾಕ್ಸ್ ಕಲೆಕ್ಷನ್ ಹೆಚ್ಚಿಸಿದ್ದೀನಿ. ನಾನು ಬಂದ ಮೇಲೇನೆ ನಮ್ ದೇಶದ ಜನರು ಶ್ರೀಮಂತರ ಪಟ್ಟಿಯಲ್ಲಿ ಹೆಚ್ಚಾಗಿರೋದು.. ಏನೋ ಬೆಲೆ ಏರಿಕೆ ಅಂತಾ ಜನ ಖರೀದಿ ಮಾಡೋದ್ ಬಿಟ್ಟಿದ್ದಾರೆ, ಬಡ್ಡಿ ರೇಟ್ ಜಾಸ್ತಿ ಆಗಿದೆ… ಈ ವಿಷಯಗಳ ಬಗ್ಗೆ ಪ್ರಶ್ನೇನೇ ಕೇಳೋಲ್ಲ… ಎಂದು ಪ್ರಧಾನಿ ನಕ್ಕರು.
ಪೆನ್ನು- ಗನ್ನು ಪೆಕ್ರಗಳಂತೆ ಕೂತಿದ್ದರು.
ತುಂಬಾ ಜನ ನಾನು ಹೇಳಿದ್ದು ಪೆನ್- ಗನ್ ನಕ್ಸಲೈಟ್ ಅಂತಾಅನ್ಕೊಂಡಿದ್ದಾರೆ. ಆಕ್ಚುಯಲಿ ನಾನು ಹೇಳಿದ್ದು, ಪೆನ್ನು- ಗನ್ನು- ನಕ್ಸೋಲೈಟು ಬಗ್ಗೆ ಅಂತಾ ಪ್ರಧಾನಿಗಳೇ ವಿವರ ನೀಡಿದ್ರು.
ಹಂಗಾದ್ರೆ ನಾವು ಜರ್ನಲಿಸ್ಟ್ ಗಳಲ್ವೇ? ಇಬ್ಬರೂ ಒಟ್ಟಿಗೆ ಕೇಳಿದರು.
ಇಲ್ಲಪಾ.. ಇಲ್ಲಾ… ನೀವು ನಗ್ಸೋಲೈಟುಗಳು. ನಿಮ್ಮಿಂದ ದೇಶಕ್ಕೆ ಅಪಾಯ ಇದೆ. ಅಲ್ಲಾ ನಿಮ್ಮ ರಿಪೋರ್ಟಿಂಗ್ ನಲ್ಲಿ ಎಷ್ಟೆಲ್ಲಾ ಕಾಮಿಡಿ ಇರುತ್ತೆ ಅಂದ್ರೆ.. ನೋಡೋರೆಲ್ಲ ಬಿದ್ದು ಬಿದ್ದು ನಕ್ಕಿದ್ದಾರೆ. ನಕ್ಕಿ ನಕ್ಕಿ ಹೊಟ್ಟೆ ಹುಣ್ಣು ಮಾಡಿಕೊಂಡಿದ್ದಾರೆ. ನಿಮ್ಮಿಂದಾಗಿ ನಮ್ ದೇಶದಲ್ಲಿ ಅಲ್ಸರ್ ಹೆಚ್ಚಾಗ್ತಾ ಇದೆ… ಅದುಕ್ಕಾಗಿ ನಾನು ಹೇಳಿದ್ದು. ಪೆನ್ ಅಥವಾ ಗನ್ ಹಿಡಿದಿರೋ ನಗ್ಸೋಲೈಟು ದೇಶಕ್ಕೆ ಅಪಾಯ ಅಂತಾ. ಎಂದು ಪ್ರಧಾನಿ ವಿವರಣೆ ಕೊಟ್ರು.
ಪೆನ್ನು ಅಂದರೆ ಪ್ರಿಂಟ್ ಜರ್ನಲಿಸ್ಟು- ಗನ್ ಎಂದರೆ ಗನ್ ನಂತಿರುವ ಮೈಕ್ ಹಿಡಿಯುವ ಟಿವಿ ಜರ್ನಲಿಸ್ಟ್ ಇಬ್ಬರೂ ತಾವು ಪ್ರಧಾನಿಗಳ ಎದುರು ಇರುವುದನ್ನು ಮರೆತು ಬಿದ್ದು ಬಿದ್ದು ನಕ್ಕರು. ನಕ್ಕಿ ನಕ್ಕಿ ಹೊಟ್ಟೆ ಹುಣ್ಣು ಮಾಡಿಕೊಂಡರು!
-‘ಅಷ್ಟಾವಕ್ರಾ’

andolanait

Recent Posts

ಮುಡಾ ಕಚೇರಿ ಮೇಲೆ ಇ.ಡಿ.ದಾಳಿ: ಸಿಎಂ ಸಿದ್ದರಾಮಯ್ಯ ಫಸ್ಟ್‌ ರಿಯಾಕ್ಷನ್‌

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಮೇಲೆ ಶುಕ್ರವಾರ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದು, ಈ ಬಗ್ಗೆ…

8 mins ago

ಮುಡಾ ಪ್ರಕರಣ: ಮುಡಾ ಕಚೇರಿಗಿಂತ ಸಚಿವ ಭೈರತಿ ಸುರೇಶ್‌ ಮನೆಯಲ್ಲೇ ಅಧಿಕ ಫೈಲ್‌: ಶ್ರೀವತ್ಸ

ಮೈಸೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಫೈಲ್‌ಗಳು ಮುಡಾ ಕಚೇರಿಯಲ್ಲಿರುವುದಕ್ಕಿಂತ ಸಚಿವ ಭೈರತಿ ಸುರೇಶ್‌ ಮನೆಯಲ್ಲೇ ಅಧಿಕವಾಗಿವೆ ಎಂದು ಶಾಸಕ ಟಿ.ಎಸ್‌.ಶ್ರೀವತ್ಸ…

2 hours ago

ಮುಡಾ ಕಚೇರಿ ಮೇಲೆ ಇಡಿ ದಾಳಿ: ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ

ಮಂಡ್ಯ: ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಸರ್ಕಾರಿ ಭೂಮಿಯನ್ನು ಲಪಾಟಾಯಿಸಿದ್ದಾರೆ, ಅದಕ್ಕೆ ಆ ನಿವೇಶನಗಳನ್ನು ವಾಪಾಸ್ಸು ಮಾಡಿದ್ದಾರೆ ಎಂದು ಕೇಂದ್ರ…

3 hours ago

ಮುಡಾ ಕಚೇರಿಯ ಮೇಲೆ ಇಡಿ ದಾಳಿ ದುರುದ್ದೇಶಪೂರ್ವಕ: ಮಾಜಿ ಸಂಸದ ಡಿ.ಕೆ.ಸುರೇಶ್‌

ಬೆಂಗಳೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಇಂದು (ಅಕ್ಟೋಬರ್‌.18) ಮೂರು ಕಡೆಗಳಲ್ಲಿ ದಾಳಿ ನಡೆಸಿದ್ದು, ಈ ದಾಳಿಯು ಸಂಪೂರ್ಣವಾಗಿ…

4 hours ago

ಮುಡಾ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು: ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ಮುಡಾ ಕೇಸ್‌ ಮುಚ್ಚಿ ಹಾಕುವಲ್ಲಿ ಸರ್ಕಾರಕ್ಕೆ ಲೋಕಾಯುಕ್ತ ಸಹಾಯ ಮಾಡುತ್ತದೆ ಎಂಬ ಶಂಕೆ ಇದೆ. ಹೀಗಾಗಿ ಮುಡಾ ಪ್ರಕರಣವನ್ನು…

4 hours ago

ಭವಾನಿ ರೇವಣ್ಣಗೆ ಬಿಗ್‌ ರಿಲೀಫ್:‌ ಹೈಕೋರ್ಟ್‌ ಆದೇಶ ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌

ಹೊಸದಿಲ್ಲಿ: ಆತ್ಯಾಚಾರ ಸಂತ್ರಸ್ತೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಭವಾನಿ ರೇವಣ್ಣಗೆ ಹೈಕೋರ್ಟ್‌ನಿಂದ ಜಾಮೀನು ಮಂಜೂರು ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಎಸ್‌ಐಟಿ…

4 hours ago