ಎಡಿಟೋರಿಯಲ್

ಪಟಾಕಿ ಬಿಟ್ಟಾಕಿ ಮನೆ ಮನೆ ಮುಂದೆ ದೀಪಗಳ ಹಚ್ಚಿ !

ಪ್ರೊ.ಸಿ.ಸಿದ್ದರಾಜು ಆಲಕೆರೆ, ಮಂಡ್ಯ

ಭಾರತ ಕೃಷಿ ಪ್ರಧಾನವಾದ ದೇಶ. ಹಿಂದಿನ ಕಾಲದಲ್ಲಿ ಕೃಷಿಗೆ ಮಳೆಯೇ ಆಶ್ರಿತವಾಗಿತ್ತು. ಕೃಷಿಕರು ಗ್ರಾಮವಾಸಿಗಳಾಗಿದ್ದರು. ತಾವು ವಾಸವಾಗಿದ್ದ ಸುತ್ತಮುತ್ತಲಿನ ಭೂಮಿಯಲ್ಲೆ ವ್ಯವಸಾಯ ಮಾಡುತ್ತಿದ್ದರು
ವರ್ಷದಲ್ಲಿ ಜುಲೈ ತಿಂಗಳ ನಿಂದ ಅಕ್ಟೋಬರ್ ತಿಂಗಳ ವರಗೆ ಮಳೆಗಾಲ, ಮಳೆ ಬಂದಾಗ ಹಳ್ಳಿಯ ರೈತರು ಭೂಮಿಯನ್ನು ಉತ್ತು, ಹದಗೊಳಿಸಿ ರಾಗಿ, ಜೋಳ, ಅವರೆ, ಮುಂತಾದ ಹಲವು ಬೀಜಗಳನ್ನು ಬಿತ್ತು ಬೆಳೆ ಬೆಳೆಯುತ್ತಿದ್ದರು. ಈ ವೇಳೆಗಾಗಲೇ ( ಅಕ್ಟೋಬರ್-ನವೆಂಬರ್) ಸಮೃದ್ಧಿ ಬೆಳೆ ಬೆಳೆದು ಗ್ರಾಮದ ಸುತ್ತಮುತ್ತಲಿನ ಪ್ರದೇಶ ಅಚ್ಚಹಸಿರಿನಿಂದ ಕೂಡಿರುತ್ತಿತ್ತು. ಆಗ ಕಾಡಿಗೂ- ಊರಿಗೂ ವ್ಯತ್ಯಾಸವೆ ಇರುತ್ತಿರಲಿಲ್ಲ. ಕಾಡಿನ ಪ್ರಾಣಿಗಳು ಆಹಾರ ಹುಡಿಕಿಕ್ಕೊಂಡು ಗ್ರಾಮದತ್ತ ಬರುತ್ತಿದ್ದವು, ಪ್ರಾಣಿ- ಪಕ್ಷಿಗಳು ರೈತರು ಬೆಳೆದ ಬೆಳೆಯನ್ನು ತಿಂದು ನಾಶಮಾಡುತ್ತಿದ್ದವು.
ಪ್ರಾಣಿ-ಪಕ್ಷಿಗಳಿಗೆ, ಬೆಂಕಿ- ಶಬ್ದ ಕಂಡರೆ ಭಯ, ಅದನ್ನು ಅರಿತುಕೊಂಡಿದ್ದ ರೈತರು ಕಾಡಿನ ಪ್ರಾಣಿ- ಪಕ್ಷಿಗಳಿಂದ ತಮ್ಮ ಹಾಗೂ ತಾವು ಬೆಳೆದ ಬೆಳೆಯ ರಕ್ಷಣೆಗೆ ಬೆಂಕಿ ಹಾಗೂ ಶಬ್ದದ ಬಳಕೆಯ ಉಪಯೋಗ ಕಂಡುಕೊಂಡರು. ಅಂದಿನ ಕಾಲದಲ್ಲಿ ವಿದ್ಯುತ್ ಇರಲಿಲ್ಲ, ಹಳ್ಳಿಗಳಲ್ಲಿ ಬೀದಿ ದೀಪಗಳು ಇರಲಿಲ್ಲ.
ಆ ಕಾಲದ ರಾತ್ರಿಯ ಸಮಯದಲ್ಲಿ ಗ್ರಾಮದೊಳಕ್ಕೆ ಪ್ರಾಣಿಗಳು, ವಿಷ ಜಂತುಗಳು ಬಾರದಿಲೆಂದು ಗ್ರಾಮದ ಮಹಿಳೆಯರು ಮನೆ ಮುಂದೆ ರಂಗೋಲಿ ಹಾಕಿ ದೀಪ ಹಚ್ಚಿಡುತ್ತಿದ್ದರು. ಸಾಮಾನ್ಯವಾಗಿ ಅಮಾವಾಸ್ಯೆ (ಅಕ್ಟೋಬರ್ ತಿಂಗಳ ಉತ್ತರಾರ್ಧ ಇಲ್ಲವೇ ನವಂಬರ್ ತಿಂಗಳ ಮೊದಲಾರ್ಧ ಒಳಗೆ ಬರುವ ಅಮಾವಾಸ್ಯೆ) ದಿನದಿಂದ ಮುಂಬರುವ ಹುಣ್ಣಿಮೆ ದಿನಗಳವರಗೆ ಇಲ್ಲವೆ ಒಂದು ತಿಂಗಳ ಕಾಲ ಮನೆ ಮುಂದೆ ದೀಪ ಹಚ್ಚಿ ಇಡುವ ಪದ್ದತಿ ರೂಢಿಸಿಕೊಂಡರು.
ಅದಕ್ಕೆ ಕಾರಣವಿದೆ. ಹಳ್ಳಿಗಳ ಸುತ್ತಮುತ್ತಲಿನ ಜಮೀನುಗಳಲ್ಲಿ ರೈತರು ಬಿತ್ತಿದ್ದ ಬೀಜ ಮೊಳಕೆಯೊಡೆದು ಸಮೃದ್ಧಿಯಾಗಿ ಬೆಳೆದಿರುತದೆ ಜೋಳವಂತು ಒಂದೂವರೆ ಆಳು ಎತ್ತರಕ್ಕೆ ಬೆಳೆದಿರುತ್ತಿತ್ತು. ಎತ್ತ ನೋಡಿದರೂ ಗ್ರಾಮಗಳನ ಸುತ್ತಮುತ್ತಲಿನ ಪ್ರದೇಶದಲ್ಲಿ ಹಸಿರು ಅವರಿಸಿಕೊಂಡಂತೆ ಕಾಣುತ್ತಿದ್ದವು. ಆ ಬೆಳೆಗಳ ನಡುವೆ ಉಪದ್ರವಕಾರಿ ಕೀಟಗಳು ಇರುತ್ತಿದ್ದವು. ಆ ಕೀಟಗಳು ದೀಪದ ಬೆಳಕಿಗೆ ಆಕರ್ಷಿತವಾಗಿ ಬಂದು ನಾಶವಾಗುತ್ತಿದ್ದವು. ಇದರಿಂದ ಕೀಟಗಳ ಸಂತಾನಾಭಿವೃದ್ಧಿ ಆಗದೆ ಬೆಳೆಗೆ ಹಾನಿಕಾರಕ ತಪ್ಪುತ್ತಿತ್ತು. ಆದರಿಂದಾಗಿ ಮನೆ ಮನೆ ಮುಂದೆ ಗೂಡುಗಳಲ್ಲಿ ದೀಪ ಬೆಳಗಿಸುತ್ತಿದ್ದರು. ಆದ್ದರಿಂದಲೆ ಈ ಕಾಲದಲ್ಲಿ ಬರುವ ಅಮಾವಾಸ್ಯೆಯಲ್ಲಿ ಕತ್ತಲೆ ಕಾರಣ ಬೆಂಕಿಯ ದೀಪ ನೋಡಿ ಪ್ರಾಣಿಗಳು, ವಿಷ-ಜಂತುಗಳು ಊರೊಳಗೆ, ಮನೆಗಳ ಮುಂದೆ ಬರಬಾರದು ಎಂದು ಮನೆ ಮನೆ ಮುಂದೆ ದೀಪ ಹಚ್ಚಿಡುವ ಸಂಪ್ರದಾಯ ರೂಢಿಗೆ ಬಂದಿತು.
ಈ ಸಮೃದ್ಧಿ ಕಾಲದಲ್ಲಿ ಬರುವ ಅಮಾವಾಸ್ಯೆ ಪೌರಾಣಿಕ ಧಾರ್ಮಿಕ ಮಹತ್ವ ಪಡೆದುಕೊಂಡಿತು. ರೈತರಲ್ಲಿ ಅಮಾವಾಸ್ಯೆ ಮುನ್ನಾ ಹಾಗೂ ಮಾರನೆಯ ದಿನಗಳಲ್ಲಿ ‘ನರಕ ಚಾಚುರ್ದಶಿ ‘ಹಾಗೂ’ ಬಲಿ ಪಾಡ್ಯಮಿ ‘ಹಬ್ಬಗಳನ್ನಾಗಿ ಆಚರಿಸುವ ಪದ್ದತಿ ಬಂದಿದೆ.
ದುಷ್ಟ ನಿಗ್ರಹ- ಶಿಷ್ಟ ಪರಿಪಾಲನೆ ನೀತಿಯ ಮೇಲೆ ರಚಿಸಲ್ಪಟ್ಟಿರುವ ಪುರಾಣಗಳಲ್ಲಿ ವಿಕ್ರಮ ಸಂವತ್ಸರ ಹಿಂದು ಕ್ಯಾಲೆಂಡರ್ ತಿಂಗಳ ಕೃಷ್ಣ ಪಕ್ಷದಲ್ಲಿ ಬರುವ ಚತುರ್ದಶಿಯಂದು ಶ್ರೀಕೃಷ್ಣನು ಪ್ರಜಾ ಕಂಟಕನಾಗಿದ್ದ ಅಸುರ(ರಾಕ್ಷಸ) ನರಕಾಸುರನನ್ನು ಕೊಂದ ದಿನವನ್ನಾಗಿ ಹಾಗೂ ಬಲಿ ಪಾಡ್ಯಮಿಯನ್ನು ದಶಾವತಾರದಲ್ಲಿ ವಿಷ್ಣು 5ನೇ ಅವತಾರದಲ್ಲಿ ಕುಬ್ಜ ವಾಮನನಾಗಿ ಬಲಿ ಚಕ್ರವರ್ತಿಯನ್ನು ಭೂಮಿಗೆ ತಳ್ಳಿದನೆಂದು, ವಿಷ್ಣು ಬಲಿ ಚಕ್ರವರ್ತಿಯ ಕೋರಿಕೆಯಂತೆ ವರ್ಷಕ್ಕೊಮ್ಮೆ ಈ ಕಾಲದ ತನ್ನ ಪ್ರಜೆಗಳ ಸಮೃದ್ಧಿಯನ್ನು ಬಂದು ನೋಡುವ ಭಾಗ್ಯದ ವರ ಪಡೆದನೆಂದು, ಅದರ ಸಂಕೇತವಾಗಿ ಹಾಗೂ ಈ ಅಮಾವಾಸ್ಯೆ ಯಂದು ಮನೆಗೆ ಲಕ್ಷ್ಮಿ ಬರುವಳೆಂದು ನಂಬಿಕೆ ಹಿನ್ನೆಲೆಯಲ್ಲಿ ಈ ಹಬ್ಬವನ್ನು ಆಚರಿಸುತ್ತಾರೆ.

ಕ್ರಮೇಣ ಆಧುನಿಕ ಕಾಲದಲ್ಲಿ ರೈತರು ತಾವು ಬೆಳೆದ ಬೆಳೆ ರಕ್ಷಣೆಗೆ ಬೆದರು ಬೊಂಬೆ, ಡಬ್ಬದ ಶಬ್ದ ಬದಲಿಗೆ ಮದ್ದಿನ ಪಟಾಕಿ, ಹೂಬತ್ತಿ ಮುಂತಾದ ಮದ್ದುಸುಡುವುದು ಬಂದಿದೆ.
ಹಿಂದೆ ಹಳ್ಳಿಗಳಲ್ಲಿ ಕಾಡು ಪ್ರಾಣಿಗಳು, ಪಕ್ಷಿಗಳನ್ನು ದೂರ ಮಾಡಲು ಡಬ್ಬದ ಶಬ್ಧ ಬದಲಿಗೆ ಪಟಾಕಿ ಹೊಡೆಯುವುದು ಬಂದಿತು, ಈಗ ಸಣ್ಣಪುಟ್ಟ ಪಟಾಕಿ ಬದಲಿಗೆ ಹೆಚ್ಚು ಹೊಗೆ ಬರುವ ಪಟಾಕಿ, ಬಾಣ ಬಿರುಸು, ಹೂಬತ್ತಿ ಮದ್ದು ಸುಡುವ ಪದ್ದತಿ ಬಂದಿವೆ. ಆದರೂ ನಗರಗಳಿಗೆ ಹೋಲಿಕೆ ಮಾಡಿದರೆ ಹಳ್ಳಿ, ಹಳ್ಳಿಗಳಲ್ಲಿ ಇವುಗಳ ಬಳಕೆ ಕಡಿಮೆ. ದೀಪ ಹಚ್ಚಿ ದೀಪಾವಳಿ ಹಬ್ಬ ಆಚರಿಸುವುದೆ ಹೆಚ್ಚು.
ಆದರೆ ನಗರ, ಪಟ್ಟಣಗಳಲ್ಲಿ ಅದರ ಅವಶ್ಯಕತೆ ಇಲ್ಲದಿದ್ದರು , ದೀಪಾವಳಿ ಹಬ್ಬದಲ್ಲಿ ದೀಪ ಹಚ್ಚುವುದಕ್ಕಿಂತ ಹೆಚ್ಚಾಗಿ ಮದ್ದು ಸುಡುವುದು ಶ್ರೀಮಂತಿಕೆಯ ತೋರಿಕೆಯಾಗುತ್ತಿದೆ. ಇದರಿಂದಾಗಿ ನಾಗರಿಕರ ಆರೋಗ್ಯಕ್ಕೆ ಮಾರಕವಾಗಿದೆ.
ಪಟಾಕಿ ಸಿಡಿಸುವುದರಿಂದ ಗಾಳಿಗೆ ವಿಷ ಅನಿಲ ಸೇರುವುದಲ್ಲದೆ,ವಾಯು ಮಾಲಿನ್ಯ, ಶಬ್ದಮಾಲಿನ್ಯ, ಪರಿಸರ ಮಾಲಿನ್ಯ ಉಂಟಾಗುತ್ತದೆ. ಇದರ ಜೊತೆಗೆ ಇತ್ತೀಚಿನ ದಿನಗಳಲ್ಲಿ ಮನೆ ಮನೆಗಳಲ್ಲಿ ಎರಡು ಮೂರು ವಾಹನಗಳನ್ನು ಇಟ್ಟುಕೊಂದಿರುವುದು ಸಾಮಾನ್ಯವಾಗಿದೆ.ರಸ್ತೆಯಲ್ಲಿ ಓಡಾಡುವ ನೂರಾರು, ಸಾವಿರಾರು ವಾಹನಗಳು ಹೊರ ಬಿಡುವ ಹೊಗೆಯಿಂದ ವಾಯು ಮಾಲಿನ್ಯ ಹೆಚ್ಚಾಗಿದೆ. ಇದನ್ನು ದೇಶದ ಮಹಾನಗರಗಳು, ನಗರ ಹಾಗೂ ಪಟ್ಟಣಗಳ ನಾಗರಿಕರು ಈ ಸಮಸ್ಯೆಯನ್ನು ಎದುರುಸುತ್ತಿದ್ದಾರೆ.ವಾಹನಗಳ ವಾಯು ಮಾಲಿನ್ಯ ಜೊತೆಗೆ ಈಗ ದೀಪಾವಳಿ ಹಬ್ಬದ ಪ್ರಯುಕ್ತ ಪಟಾಕಿ,ಹೂಬತ್ತಿ, ಬಾಣ ಬಿರುಸು ಮುಂತಾದವುಗಳನ್ನು ಸುಡುವುದರಿಂದ ಉಂಟಾಗುವ ವಾಯು ಮಾಲಿನ್ಯ ಮತ್ತು ಪರಿಸರ ಮಾಲಿನ್ಯ ಹೆಚ್ಚಾಗುತ್ತದೆ.

ವಾಯುಮಾಲಿನ್ಯದಿಂದಾಗಿ ಅಸ್ತಮಾ,ಹೃದಯ ರೋಗಿ,ವಯೋವೃದ್ದರು ಸಮಸ್ಯೆ ಎದುರುಸುತ್ತಿದ್ದಾರೆ, ಕೆಲವೆ ಸಮಯದ ಸಂತೋಷಕ್ಕೆ ಪಟಾಕಿ ಸುಡುವುದನ್ನು ಸರಿಯೇ ಎಂದು ಯೋಚಿಸುವ ಕಾಲವಿದು. ವರ್ಷ ವರ್ಷ ಪಟಾಕಿ ಹೊಡೆಯಲು ಹೋಗಿ ಎಷ್ಟೊ ಮಕ್ಕಳು ದೊಡ್ಡವರು ಎನ್ನದೆ ಕಣ್ಣು ಕಳೆದು ಕೊಂಡಿದ್ದಾರೆ,ಕೈ ಸುಟ್ಟು ಕೊಂಡಿದ್ದಾರೆ.ಒಂದು ಕಡೆ ವಾಯು ಮಾಲಿನ್ಯಕ್ಕೆ ಹಾಗೂ ಅಂಗವಿಕಲತೆಗೆ ಕಾರಣವಾಗುವ ಪಟಾಕಿ ಮದ್ದು ಸುಡುವುದು ಸರಿಯೆ ಎನ್ನುವುದನ್ನು ಯೋಚಿಸುವ ಕಾಲವಿದು.ಇದನ್ನು ಬಿಟ್ಟು ಕಣ್ಣಿಗೆ ಹಬ್ಬ ನೀಡುವ ದೀಪ ಹಚ್ಚಿ ದೀಪಾವಳಿಯ ಆಚರಿಡುವುದು ಮೇಲು ಅನ್ನಿಸುತ್ತದೆ ಅಲ್ಲವೆ?
ಪಟಾಕಿ ಸಿಡಿಸಿ ಹಬ್ಬ ಆಚರಿಸ ಬೇಕೆಂದೇನೂ ಇಲ್ಲ, ಹೆಸರೆ ಹೇಳುವಂತೆ ದೀಪಾವಳಿ ಹಬ್ಬವನ್ನು ಮನೆ ಮನೆ ಮುಂದೆ ದೀಪ ಹಚ್ಚಿಸಿ ದೀಪಾವಳಿ ಹಬ್ಬ ಆಚರಣೆ ಸೂಕ್ತ.
ಎಲ್ಲಕ್ಕಿಂತ ಮುಖ್ಯವಾಗಿ ವಾಯು ಮಾಲಿನ್ಯ, ಶಬ್ಧ ಮಾಲಿನ್ಯ, ಪರಿಸರ ಮಾಲಿನ್ಯ ಎದುರಸುತ್ತಿರುವವರು ಪಟ್ಟಣ, ನಗರ,ನಾಗರಿಕರು.ಈಗಾಗಲೆ ವಾಯು ವೈಪರೀತ್ಯ ದಿಂದ ನಾವು ಅನುಭವಿಸುತ್ತಿರುವ ಅನಾನುಕೂಲತೆ ಕಣ್ಮುಂದೆ ಕಾಣುತ್ತಿದ್ದೇವೆ. ಇನ್ನುಮುಂದೆ ಜಾಗೃತಿಯ ಅವಶ್ಯಕತೆ ಇದೆ.
ಈಗಾಗಲೇ ವಾಯುವ್ಯ ಮಾಲಿನ್ಯದ ಪರಿಸ್ಥಿತಿ ಉಲ್ಬನ ಗೊಂಡಿದ್ದು ನಾಗರಿಕರು ಅನುಭವಿಸಿದ್ದಾರೆ,
ಅದರಿಂದಾಗಿ ಪಟಾಕಿ ಬಿಟ್ಟಾಕಿ, ಮನೆ ಮನೆ ಮುಂದೆ ದೀಪ ಹಚ್ಚಿ, ಹೆಸರೆ ಹೇಳುವಂತೆ ದೀಪಾವಳಿ ಹಬ್ಬ ಆಚರಿಸುವುದು ಸೂಕ್ತ ಅಲ್ಲವೆ?

andolanait

Recent Posts

ಬಂಡೀಪುರ, ನಾಗರಹೊಳೆಯಲ್ಲಿ ಹಂತ ಹಂತವಾಗಿ ಸಫಾರಿ ಆರಂಭ : ಸಿಎಂ

ಬೆಂಗಳೂರು : ಬಂಡೀಪುರ ಮತ್ತು ನಾಗರಹೊಳೆಯಲ್ಲಿ ಹಂತ ಹಂತವಾಗಿ ಸಫಾರಿ ಆರಂಭಿಸಲು ಮತ್ತು ಧಾರಣಾ ಶಕ್ತಿ ಮತ್ತು ಹುಲಿಗಳು ನಾಡಿನತ್ತ…

50 mins ago

ಜ.5, 6ರಂದು ಸಿಎಂ ಸಿದ್ದರಾಮಯ್ಯ ಮೈಸೂರು ಪ್ರವಾಸ ; ತವರಲ್ಲಿ ಸಂಭ್ರಮ ಸಾಧ್ಯತೆ?

ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತವರು ಜಿಲ್ಲೆ ಮೈಸೂರಿನಲ್ಲಿ ಎರಡು ದಿನಗಳ ಕಾಲ ಪ್ರವಾಸ ಹಮ್ಮಿಕೊಂಡಿದ್ದಾರೆ. ಜ.5ರಂದು ಬೆಳಿಗ್ಗೆ…

1 hour ago

ಜ.4ರಂದು ʼಚಾ.ಬೆಟ್ಟಕ್ಕೆ ನಡಿಗೆʼ ಜಾಗೃತಿ ಜಾಥ ; ಬೆಂಬಲಿಸಲು ಮನವಿ

ಮೈಸೂರು : ಅರಮನೆ ನಗರಿ ಮೈಸೂರಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಚಾಮುಂಡಿಬೆಟ್ಟದ ಸಂರಕ್ಷಣೆ ಮತ್ತು ಉಳಿವಿಗಾಗಿ ಜ.4ರಂದು(ಭಾನುವಾರ) ಜಾಗೃತಿ ಆಂದೋಲನವನ್ನು…

1 hour ago

ದೇಶದ ಸ್ವಚ್ಛ ನಗರ ಇಂದೋರ್‌ನಲ್ಲಿ ಕಲುಷಿತ ನೀರು ಸೇವನೆಯಿಂದ 11 ಮಂದಿ ಸಾವು!

ಭೋಪಾಲ್ : ಇಂದೋರ್‌ನ ಭಗೀರಥಪುರದಲ್ಲಿ ಕಲುಷಿತ ಕುಡಿಯುವ ನೀರು ಸೇವನೆಯಿಂದ 11 ಜೀವಗಳು ಬಲಿಯಾಗಿವೆ. ಮತ್ತು 1400ಕ್ಕೂ ಹೆಚ್ಚು ನಿವಾಸಿಗಳ…

2 hours ago

ಬಳ್ಳಾರಿ ಘರ್ಷಣೆ | ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಯಲಿ ; ಬಿವೈವಿ ಆಗ್ರಹ

ಬೆಂಗಳೂರು : ಬ್ಯಾನರ್ ಕಟ್ಟುವ ವಿಷಯದಲ್ಲಿ ಕಳೆದ ರಾತ್ರಿ ಬಳ್ಳಾರಿ ನಗರದಲ್ಲಿ ನಡೆದ ಘಟನೆಯ ಕುರಿತು ಉಚ್ಚ ನ್ಯಾಯಾಲಯದ ಹಾಲಿ…

4 hours ago

ಬಳ್ಳಾರಿ ಘರ್ಷಣೆ | ಕೈ ಕಾರ್ಯಕರ್ತ ಸಾವು, ಘಟನೆ ಬಗ್ಗೆ ಸಿಎಂ ಹೇಳಿದ್ದೇನು?

ಬೆಂಗಳೂರು : ಬಳ್ಳಾರಿಯಲ್ಲಿ ಗುರುವಾರ ರಾತ್ರಿ ವಾಲ್ಮೀಕಿ  ಬ್ಯಾನರ್‌ ವಿಚಾರದಲ್ಲಿ ನಡೆದ ಎರಡು ಗುಂಪುಗಳ ಘರ್ಷಣೆ ವೇಳೆ ಫೈರಿಂಗ್‌ ಆಗಿ…

5 hours ago