ಎಡಿಟೋರಿಯಲ್

ಸಂಸತ್ತು ಜನತೆಗೆ ಸೇರಿದ್ದು; ಸಂಸದರ ಖಾಸಗಿ ಸ್ವತ್ತಲ್ಲ….

 

   ನತಂತ್ರದ ವ್ಯವಸ್ಥೆ ದಾಳಿಗೆ ಗುರಿಯಾಗಿದೆ ಎಂಬ ರಾಹುಲ್ ಗಾಂಧಿ ಹೇಳಿಕೆಯನ್ನು ದೇಶದ್ರೋಹದ ಟೀಕೆ ಎಂದು ಗದ್ದಲ ಎಬ್ಬಿಸಿದೆ ಬಿಜೆಪಿ.

ತಮ್ಮ ವಿದೇಶ ಪ್ರವಾಸದಲ್ಲಿ ರಾಹುಲ್ ಮಾಡಿರುವ ಈ ಆಪಾದನೆ ದೇಶದ ವರ್ಚಸ್ಸಿಗೆ ಧಕ್ಕೆ ತಂದಿದೆ ಎಂದು ಕ್ಷಮೆ ಕೇಳುವಂತೆ ಪಟ್ಟು ಹಿಡಿದಿದೆಕಳೆದ ಐದು ದಿನಗಳಿಂದ ಸಂಸತ್ತಿನ ಕಾರ್ಯಕಲಾಪ ನಡೆಯಲು ಬಿಡುತ್ತಿಲ್ಲ.

ಇಷ್ಟಕ್ಕೂ ರಾಹುಲ್ ಗಾಂಧಿ ಆಡಬಾರದ್ದೇನನ್ನೂ ಆಡಿಲ್ಲಭಾರತದಲ್ಲಿ ಜನತಂತ್ರವನ್ನು ದುರ್ಬಲಗೊಳಿಸಲಾಗುತ್ತಿದೆ ಎಂದಿದ್ದಾರೆಒಕ್ಕೂಟ ಸರ್ಕಾರದ ಕಳೆದ ಏಳೆಂಟು ವರ್ಷಗಳ ಕಾರ್ಯವೈಖರಿ ಜನತಂತ್ರವನ್ನು ದುರ್ಬಲಗೊಳಿಸಿದೆಯೇ ವಿನಾ ಮಜಬೂತು ಮಾಡಿಲ್ಲಈ ಮಾತಿಗೆ ಹತ್ತು ಹಲವು ಪುರಾವೆಗಳಿವೆಅಂತಾರಾಷ್ಟ್ರೀಯ ಚುನಾವಣಾ ಜನತಂತ್ರ ಸೂಚ್ಯಂಕದಲ್ಲಿ ಭಾರತ ಸತತವಾಗಿ ಕೆಳಕ್ಕೆ ಜಾರುತ್ತಿದೆತಾಂಜಾನಿಯಾಬೊಲಿವಿಯಾಸಿಂಗಪುರನೈಜೀರಿಯಾಕ್ಕಿಂತ ಅಧ್ವಾನ!

2015ರಲ್ಲಿ ನರೇಂದ್ರ ಮೋದಿ ಚೀನಾಕ್ಕೆ ಹೋಗಿದ್ದರುಅಲ್ಲಿ ಅವರು ಆಡಿ ಬಂದಿರುವ ಮಾತುಗಳನ್ನು ರಾಹುಲ್ ಮಾತುಗಳೊಂದಿಗೆ ಹೋಲಿಸಿ ನೋಡಬೇಕಿದೆ.

ಛೋಡೋ ಯಾರ್ದುಖ್ ಗಯೇಕುಚ್ ಹೋಗಾ ನಹೀಅರೇ ಭಗವಾನ್ ಬಚಾಯೇಪತಾ ನಹೀ ಪಿಛಲೇ ಜನಮ್ ಮೇಂ ಕ್ಯಾ ಪಾಪ್ ಕಿಯಾಹಮ್ ಹಿಂದುಸ್ತಾನ್ ಮೇಂ ಪೈದಾ ಹುಯೇ’ (ಬಿಟ್ ಬಿಡು ಮಾರಾಯಾಏನೂ ಸಾಧನೆ ಆಗಲ್ಲ ಇಲ್ಲಿದೇವರೇ ಕಾಪಾಡಬೇಕು ಹಿಂದಿನ ಜನ್ಮದಲ್ಲಿ ಅದ್ಯಾವ ಪಾಪ ಮಾಡಿದ್ದೆವೋ ಗೊತ್ತಿಲ್ಲನಾವು ಹಿಂದುಸ್ತಾನದಲ್ಲಿ ಹುಟ್ಟಿಬಿಟ್ಟೆವು). ಹಿಂದಿನ ಜನ್ಮದಲ್ಲಿ ಪಾಪ ಮಾಡಿದ್ದಕ್ಕೇ ಹಿಂದುಸ್ತಾನದಲ್ಲಿ ಹುಟ್ಟಿದೆವು ಎಂಬ ಮಾತು ಒಂದು ವೇಳೆ ರಾಹುಲ್ ಬಾಯಿಂದ ಉದುರಿದ್ದರೆ ಬಿಜೆಪಿ ಅದೆಂತಹ ಪ್ರಳಯ ಸೃಷ್ಟಿಸುತ್ತಿತ್ತೋ ಊಹಿಸಲೂ ಅಸಾಧ್ಯ.

ಸಾಧಾರಣವಾಗಿ ಪ್ರತಿಪಕ್ಷಗಳು ಸದನವನ್ನು ಸ್ಥಗಿತಗೊಳಿಸುತ್ತವೆ ಮತ್ತು ಆಡಳಿತ ಪಕ್ಷ ಸಂಧಾನ ನಡೆಸಿ ಕಲಾಪಗಳು ಪುನಃ ನಡೆಯುವಂತೆ ಮಾಡುತ್ತದೆಆದರೆ ಈ ಬಾರಿ ಸಂಸತ್ತಿನ ಕಾರ್ಯಕಲಾಪಗಳಿಗೆ ಆಡಳಿತ ಪಕ್ಷವೇ ಅಡ್ಡಿ ಉಂಟು ಮಾಡಿದೆಸಂಸದೀಯ ವ್ಯವಸ್ಥೆಯ ವಿಡಂಬನೆಯಿದುಅದಾನಿ ಮತ್ತು ಮೋದಿಯವರ ಮೇಲಿನ ದಾಳಿಯನ್ನು ತಡೆಯಲು ಪೂರ್ವಯೋಜಿತ ಪ್ರತಿದಾಳಿದೇಶದ್ರೋಹದ ಆಪಾದನೆಯನ್ನು ಶುಕ್ರವಾರ ಮತ್ತೊಂದು ಹೆಜ್ಜೆ ಮುಂದೆ ಒಯ್ದಿದೆಭಾರತದ ಸಾರ್ವಭೌಮತೆಯ ಮೇಲೆ ನಡೆಸಿದ ದಾಳಿ ಎಂದು ಬಣ್ಣಿಸಿರುವುದೇ ಈ ಮಾತಿಗೆ ಸಾಕ್ಷಿ.

ಅದಾನಿ ಹಗರಣವನ್ನು ಸಂಸತ್ತಿನ ಜಂಟಿ ಸದನ ಸಮಿತಿಯ ತನಿಖೆಗೆ ಒಪ್ಪಿಸಬೇಕೆಂಬುದು ಪ್ರತಿಪಕ್ಷಗಳ ಆಗ್ರಹಪಟ್ಟು ಸಡಿಲಿಸುವ ಪ್ರಶ್ನೆಯೇ ಇಲ್ಲವೆಂದು ಸಾರಿವೆಈ ದಾಳಿಯನ್ನು ಹಿಮ್ಮೆಟ್ಟಿಸಲು ಬಿಜೆಪಿ ಹೂಡಿರುವ ಪ್ರತಿತಂತ್ರವೇ ರಾಹುಲ್ ಕ್ಷಮಾಯಾಚನೆ.

ರಾಹುಲ್ ಗಾಂಧಿ ಆಡುವ ಪ್ರತಿ ಮಾತನ್ನೂ ಪ್ರತಿಭಟಿಸಿ ಹುಸಿ ಅಲ್ಲೋಲ ಕಲ್ಲೋಲ ಎಬ್ಬಿಸುವುದು ಬಿಜೆಪಿಯ ರಣನೀತಿಕಾಂಗ್ರೆಸ್ ಪಕ್ಷದ ಈ ನಾಯಕನನ್ನು ‘ಪಪ್ಪೂ’ ಎಂದು ಕರೆದು ಬೆಪ್ಪು ತಕ್ಕಡಿಯಂತೆ ಬಿಂಬಿಸುವ ಯೋಜನಾಬದ್ಧ ಸಮರವನ್ನೇ ಸಾರಲಾಗಿತ್ತುಈ ಸಮರದಲ್ಲಿ ಸಾಕಷ್ಟು ಯಶಸ್ಸೂ ಸಿಕ್ಕಿತ್ತು ಬಿಜೆಪಿಗೆಆದರೆ ರಾಹುಲ್ ಬೆಪ್ಪು ತಕ್ಕಡಿ ಅಲ್ಲವೆಂದು ಜನಸಾಮಾನ್ಯರಿಗೆ ಮನವರಿಕೆ ಮಾಡಿಸಿತು ಭಾರತ್ ಜೋಡೊ ಯಾತ್ರಾ.

ಅದಾನಿ ಹಗರಣ ಕುರಿತು ರಾಹುಲ್ ಇತ್ತೀಚೆಗೆ ಲೋಕಸಭೆಯಲ್ಲಿ ಹತ್ತಾರು ಪ್ರಶ್ನೆಗಳನ್ನು ಎತ್ತಿದ್ದರುಮೋದಿಯವರು ೭೮ ನಿಮಿಷಗಳ ಕಾಲ ಸುದೀರ್ಘ ಉತ್ತರ ನೀಡಿದರುಅದಾನಿ ಕುರಿತ ಒಂದೇ ಪದವೂ ಅವರಿಂದ ಹೊರಬೀಳಲಿಲ್ಲಕೇವಲ ತಮ್ಮ ಸರ್ಕಾರದ ಸಾಧನೆಗಳ ಪಟ್ಟಿ ಮಾಡಿದರು ಮತ್ತು ಪ್ರತಿಪಕ್ಷಗಳಿಗೆ ಬುದ್ಧಿವಾದ ಹೇಳಿದರು.

ಸಂಸತ್ತು ಮತ್ತು ಶಾಸನಸಭೆಗಳ ಕೆಲಸಕಾರ್ಯಗಳನ್ನು ಸ್ಥಗಿತಗೊಳಿಸುವುದು ಜನತಂತ್ರವನ್ನು ಬುಡಮೇಲುಗೊಳಿಸುವ ಮತ್ತು ಜನದ್ರೋಹದ ಕೃತ್ಯ ಎಂಬ ಮಾತನ್ನು ಮೂರೂವರೆ ವರ್ಷಗಳ ಹಿಂದೆ ಆಡಿದ್ದವರು ಎಂ.ವೆಂಕಯ್ಯನಾಯ್ಡುಬಿಜೆಪಿಯ ಅಧ್ಯಕ್ಷರೂಉಪರಾಷ್ಟ್ರಪತಿರಾಜ್ಯಸಭೆಯ ಸಭಾಪತಿಯೂ ಆಗಿದ್ದವರು.

ಜನತೆಯನ್ನು ಬಾಧಿಸುವ ವಿಷಯಗಳ ಕುರಿತ ಚರ್ಚೆಗಳು ಸಲೀಸಾಗಿ ಸಾಗಲು ಸದನವನ್ನು ಸುಗಮವಾಗಿ ನಡೆಸುವ ಜವಾಬ್ದಾರಿ ಆಡಳಿತ ಪಕ್ಷದ್ದು.

ಸಂಸತ್ತು ಜನತೆಗೆ ಸೇರಿದ್ದೇ ವಿನಾ ಸಂಸದರ ಆಸ್ತಿಯಲ್ಲಸಂಸದರು ಜನತೆ ಮತ್ತು ಸದನಕ್ಕೆ ಜವಾಬ್ದಾರರಾಗಿರಬೇಕುಜನತೆ ಮತ್ತು ಸರ್ಕಾರದ ನಡುವಣ ಸಂಪರ್ಕ ಸೇತುವೆಯಾಗಿ ಕೆಲಸ ಮಾಡಬೇಕು ಸಂಸತ್ತುಹತ್ತು ವರ್ಷಗಳ ಹಿಂದೆ 2012ರಲ್ಲಿ ಹಾಕಿದ್ದ ಲೆಕ್ಕಾಚಾರವೊಂದರ ಪ್ರಕಾರ ಸಂಸತ್ತಿನ ಪ್ರತಿ ನಿಮಿಷದ ಕಲಾಪದ ವೆಚ್ಚ ಎರಡೂವರೆ ಲಕ್ಷ ರೂಪಾಯಿಸಂಸತ್ತು ವರ್ಷದಲ್ಲಿ ಎಂಬತ್ತು ದಿನಗಳ ಕಾಲ ನಡೆಯುತ್ತದೆಈ ದಿನಗಳಲ್ಲಿ ನಿತ್ಯ ಕನಿಷ್ಠ ಆರು ತಾಸುಗಳ ಕಾಲ ಉಭಯ ಸದನಗಳು ಕಲಾಪ ಜರುಗಿಸುತ್ತವೆಪಾರ್ಲಿಮೆಂಟಿನ ಮೇಲೆ ವರ್ಷವೊಂದಕ್ಕೆ ಮಾಡುವ ವೆಚ್ಚವನ್ನು ಲೆಕ್ಕ ಹಾಕಿದರೆ ಸದನದ ಪ್ರತಿನಿಮಿಷದ ಕಲಾಪಕ್ಕೆ ಎರಡೂವರೆ ಲಕ್ಷ ರೂಪಾಯಿ ವೆಚ್ಚವಾಗುತ್ತಿದೆ ಎಂದು ಅಂದಿನ ಸಂಸದೀಯ ವ್ಯವಹಾರಗಳ ಮಂತ್ರಿ ಹೇಳಿದ್ದುಂಟು.

ಅನೇಕ ಸಲ ಪ್ರತಿಪಕ್ಷಗಳ ಸದಸ್ಯರು ಮಾತನ್ನು ತಡೆಯಲು ಧ್ವನಿವರ್ಧಕವನ್ನು ಬಂದ್ ಮಾಡಲಾಗುತ್ತದೆ ಎಂಬ ಅಪಾದನೆಯನ್ನೂ ರಾಹುಲ್ ಗಾಂಧಿ ವಿದೇಶ ಪ್ರವಾಸದಲ್ಲಿ ಮಾಡಿದ್ದರುಶುಕ್ರವಾರ ಬೆಳಿಗ್ಗೆ ಲೋಕಸಭೆಯ ನೇರ ಪ್ರಸಾರದಲ್ಲಿ ಕಂಡದ್ದು– ರಾಹುಲ್ ಅವರಿಗೆ ಮಾತಾಡಲು ಅವಕಾಶ ಕೊಡಿಮಾತಾಡಲು ಅವಕಾಶ ಕೊಡಿ ಎಂಬ ಘೋಷಣೆಗಳನ್ನು ಕಾಂಗ್ರೆಸ್ ಕಡೆಯಿಂದ ಕೂಗಲಾಗುತ್ತಿತ್ತುಸಭಾಧ್ಯಕ್ಷ ಓಂ ಬಿರ್ಲಾ ಅವರು ನಸುನಗುತ್ತಿದ್ದರುತಕ್ಷಣವೇ ಇಡೀ ಸದನದ ಧ್ವನಿಯನ್ನೇ ಅದುಮಲಾಯಿತುಸಭಾಧ್ಯಕ್ಷರು ಪ್ರತಿಪಕ್ಷಗಳತ್ತ ತಿರುಗಿ ಏನನ್ನೋ ಹೇಳುತ್ತಿದ್ದರುಮೂಕಿ ಸಿನೆಮಾ ನೆನಪಾಯಿತು.

ಲೋಕತಂತ್ರದ ಮಂದಿರ ಎಂದು ಪ್ರಧಾನಿಯವರು ಸಂಸತ್ತನ್ನು ಕರೆದಿದ್ದರುಮೊದಲ ಸಲ ಪ್ರವೇಶಿಸುವಾಗ ಮೆಟ್ಟಿಲುಗಳಿಗೆ ಹಣೆಯೊತ್ತಿ ನಮಸ್ಕರಿಸಿದ್ದರುಇದೀಗ ಈ ಮಂದಿರದ ಕೊರಳನ್ನೇಕೆ ಅದುಮಲು ತೊಡಗಿದ್ದಾರೆಅಂತಹ ಯಾವ ಅನಿವಾರ್ಯ ಅಸಹಾಯಕತೆ ಸಂಕಟ ಸಂದಿಗ್ಧತೆ ಅವರಿಗೆ ಎದುರಾಗಿದೆ?

ಸದನದ ಕಾರ್ಯಕಲಾಪವನ್ನು ತಾನೇ ಸ್ಥಗಿತಗೊಳಿಸುವ ಮೂಲಕ ಭಾರತೀಯ ಜನತಾ ಪಕ್ಷ ರಾಹುಲ್ ಗಾಂಧಿ ಅವರ ಆಪಾದನೆಯನ್ನು ನಿಜವಾಗಿಸಿ ಜೀವಂತ ಪುರಾವೆ ಒದಗಿಸಿದಂತೆ ಆಗುವುದಿಲ್ಲವೇಸಂಸತ್ತಿನಲ್ಲಿ ಮಾತಾಡುವುದು ಸಂಸದರ ಹಕ್ಕುಭಾರತ ಸರ್ಕಾರದ ಅನೇಕ ಮಂತ್ರಿಗಳು ರಾಹುಲ್ ಗಾಂಧಿ ಮೇಲೆ ದೇಶದ್ರೋಹದ ಆಪಾದನೆ ಹೊರಿಸಿದ್ದಾರೆಸದನದ ವೇದಿಕೆಯಲ್ಲಿ ಅದಕ್ಕೆ ಉತ್ತರ ನೀಡಲು ಆತ ಅವಕಾಶ ಕೇಳುವುದರಲ್ಲಿ ತಪ್ಪೇನಿದೆ?

andolanait

Share
Published by
andolanait

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

7 hours ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

7 hours ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

8 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

8 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

10 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

10 hours ago