ಎಡಿಟೋರಿಯಲ್

ಪ್ರಾಚೀನ ಪಶ್ಚಿಮ ಘಟ್ಟಗಳ ವಿನಾಶಕ್ಕೆ ಪಾಲುದಾರರಾರು?

ಉದ್ದೇಶಿತ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆಗೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು ಕೆಂಪು ನಿಶಾನೆ ತೋರಿಸಿದೆ! 

ಜೊಸೆಫ್ ಹೂವರ್

ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆ ಮೂಲಕ ೬೦೦ ಹೆಕ್ಟೇರ್‌ನಷ್ಟು ಪ್ರಾಚೀನ, ಪರಿಸರ ಸೂಕ್ಷ್ಮ ಅರಣ್ಯಗಳನ್ನು ಅತಿ ಶೀಘ್ರದಲ್ಲಿ ನಾಶಮಾಡಲು ಉತ್ಸಾಹದಿಂದ ತಯಾರಾಗಿದ್ದಾರೆ.

೨.೩೪ ಲಕ್ಷಕ್ಕೂ ಹೆಚ್ಚು ಅಜ್ಜಿ ಮರಗಳಿಗೆ ಕೊಡಲಿ ಹಾಕಲಾಗುವುದು. ಅದಲ್ಲದೆ, ೩೦ ಸೆಂಟಿಮೀಟರ್‌ಗಿಂತ ಕಡಿಮೆ ಸುತ್ತಳತೆ ಹೊಂದಿರುವ ೧೦ ಲಕ್ಷಕ್ಕೂ ಹೆಚ್ಚು ಮರಗಳನ್ನು ಸಹ ಕ್ರೋನಿ ಬಂಡವಾಳಶಾಹಿಯ ಹೊಟ್ಟೆಬಾಕತನದ ಆರ್ಥಿಕ ಹಸಿವನ್ನು ನೀಗಿಸಲು ‘ಬಲಿ’ ನೀಡಬೇಕಾಗಿದೆ. ನಮ್ಮ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಹುಬ್ಬಳ್ಳಿ-ಅಂಕೋಲಾ ರೈಲ್ವೇ ಯೋಜನೆಯನ್ನು ಜೈವಿಕ ವೈವಿಧ್ಯಮಯ ಶ್ರೀಮಂತ ಪಶ್ಚಿಮ ಘಟ್ಟಗಳ ಪರಿಸರಕ್ಕೆ ತೊಂದರೆಯಾಗದಂತೆ ಮುಂದುವರಿಸುವುದಾಗಿ ಹೇಳುತ್ತಾರೆ. ವಿವೇಕ ಇಲ್ಲದವರು ಮಾತ್ರ ಇಂತಹ ಕ್ಷುಲ್ಲಕ ಹೇಳಿಕೆ ನೀಡುತ್ತಾರೆ.

ರೈಲು ಮಾರ್ಗಗಳಲ್ಲಿ ವನ್ಯಜೀವಿಗಳು ಆಗಾಗ್ಗೆ ಸಾವನ್ನಪ್ಪುತ್ತಿದ್ದರೂ, ವನ್ಯಜೀವಿಗಳ ಆವಾಸಸ್ಥಾನಗಳ ಪ್ರಮುಖ ಪ್ರದೇಶಗಳಲ್ಲಿ ಹೊಸ ರೈಲು ಹಳಿಗಳನ್ನು ನಿರ್ಮಿಸಲು ಸರ್ಕಾರವು ಪಣ ತೊಟ್ಟಂತಿದೆ. ೨೦೧೦ ರಿಂದ ೨೦೦ ಕ್ಕೂ ಹೆಚ್ಚು ಆನೆಗಳು ರೈಲು ಮಾರ್ಗಗಳಲ್ಲಿ ಅಪಘಾತದಲ್ಲಿ ಸಾವನ್ನಪ್ಪಿವೆ. ನಾವು ಪ್ರತಿ ವರ್ಷ ಸರಾಸರಿ ೧೭ ಆನೆಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಆದರೆ ಆತ್ಮಹೀನ ಭಾರತ ಸರ್ಕಾರಕ್ಕೆ ಪದೇ ಪದೇ ಸಂಭವಿಸುವ ಈ ಸಾವುನೋವುಗಳಿಂದ ನಿರ್ಭಾದಿತವಾಗಿದೆ .

ಸರ್ಕಾರವು ವನ್ಯಜೀವಿ ಭೂಪ್ರದೇಶ ಮತ್ತು ಕಾರಿಡಾರ್ ಗಳನ್ನು ವಿಭಜಿಸುವುದನ್ನು ಮುಂದುವರೆಸಿದೆ. ಕರ್ನಾಟಕ ರಾಜ್ಯಕ್ಕೆ ಸೇರಿದ ಪಶ್ಚಿಮ ಘಟ್ಟಗಳಲ್ಲಿ ಉದ್ದೇಶಿತ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆ (ಏಅ್ಕ) ಉದಾಹರಣೆಯನ್ನು ತೆಗೆದುಕೊಳ್ಳಿ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ಇದಕ್ಕೆ ಕೆಂಪು ಧ್ವಜ ತೋರಿಸಿದ್ದರೂ, ಕೆಲವು ದುರಾಸೆಪೂರಿತ ಸಂವೇದನೆ ಇಲ್ಲದ ರಾಜಕಾರಣಿಗಳು ಈ ರೈಲು ಹಳಿ ಯೋಜನೆ ಮೂಲಕ ೬೦೦ ಹೆಕ್ಟೇರ್‌ನಷ್ಟು ಪ್ರಾಚೀನ, ಪರಿಸರ ಸೂಕ್ಷ್ಮ ಅರಣ್ಯಗಳನ್ನು ಅತಿ ಶೀಘ್ರದಲ್ಲಿ ನಾಶಮಾಡಲು ಉತ್ಸಾಹದಿಂದ ತಯಾರಾಗಿದ್ದಾರೆ.

೨.೩೪ ಲಕ್ಷಕ್ಕೂ ಹೆಚ್ಚು (ಹೌದು ನೀವು ಓದಿದ್ದು ಸರಿ) ಅಜ್ಜಿ ಮರಗಳಿಗೆ ಕೊಡಲಿ ಹಾಕಲಾಗುವುದು. ಅದಲ್ಲದೆ, ೩೦ ಸೆಂಟಿಮೀಟರ್‌ಗಿಂತ ಕಡಿಮೆ ಸುತ್ತಳತೆ ಹೊಂದಿರುವ ೧೦ ಲಕ್ಷಕ್ಕೂ ಹೆಚ್ಚು ಮರಗಳನ್ನು ಸಹ ಕ್ರೋನಿ ಬಂಡವಾಳಶಾಹಿಯ ಹೊಟ್ಟೆಬಾಕತನದ ಆರ್ಥಿಕ ಹಸಿವನ್ನು ನೀಗಿಸಲು ‘ಬಲಿ’ ನೀಡಬೇಕಾಗಿದೆ.

ನಮ್ಮ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಹುಬ್ಬಳ್ಳಿ-ಅಂಕೋಲಾ ರೈಲ್ವೇ ಯೋಜನೆಯನ್ನು ಜೈವಿಕ ವೈವಿಧ್ಯಮಯ ಶ್ರೀಮಂತ ಪಶ್ಚಿಮ ಘಟ್ಟಗಳ ಪರಿಸರಕ್ಕೆ ತೊಂದರೆಯಾಗದಂತೆ ಮುಂದುವರಿಸುವುದಾಗಿ ಹೇಳುತ್ತಾರೆ. ವಿವೇಕ ಇಲ್ಲದವರು ಮಾತ್ರ ಇಂತಹ ಕ್ಷುಲ್ಲಕ ಹೇಳಿಕೆ ನೀಡುತ್ತಾರೆ.

ನಿರ್ಣಾಯಕ ಕಾರಿಡಾರ್ ಛಿದ್ರವಾಗುವುದರಿಂದ ಆನೆಗಳು ರೈಲುಗಳಿಗೆ ಸಿಕ್ಕಿ ಸಾಯುವ ಮತ್ತು ಅದರ ನೆಲೆಯಲ್ಲೇ ನಶಿಸಿಹೋಗುವ ಅಪಾಯವಿದೆ. ಸಾವಿರಾರು ಸ್ಥಳೀಯ ಸಸ್ಯ ಮತ್ತು ಪ್ರಾಣಿಗಳು ವರ್ಗಗಳೂ ಸಹ ನಾಶವಾಗುತ್ತವೆ.

ಹೌದು, ಈ ಪ್ರದೇಶದ ನಿರ್ಲಕ್ಷಿತ ಜನರಿಗೆ ಉತ್ತಮ ಸಾರ್ವಜನಿಕ ಸೌಕರ್ಯಗಳ ಅಗತ್ಯವಿದೆ. ರೂ. ೩೫೦೦ ಕೋಟಿಯನ್ನು ರೈಲು ಮಾರ್ಗದಲ್ಲಿ ವ್ಯರ್ಥ ಮಾಡುವ ಬದಲು, ಸರ್ಕಾರವು ಈ ಆದಾಯವನ್ನು ಆರೋಗ್ಯ ಕೇಂದ್ರಗಳು, ಶಾಲೆಗಳು, ಕಾಲೇಜುಗಳು, ಗ್ರಂಥಾಲಯಗಳು, ಸಾರಿಗೆ ಸೌಲಭ್ಯಗಳನ್ನು ಒದಗಿಸಲು ಮತ್ತು ಸಹಾಯಧನದೊಂದಿಗೆ ರೈತ ಸಮುದಾಯವನ್ನು ಬೆಂಬಲಿಸಲು ಬಳಸಬೇಕು.

ನಾವು ಹವಾಮಾನ ಬಿಕ್ಕಟ್ಟಿನ ಮಧ್ಯೆ ಇದ್ದೇವೆ ಎಂಬ ಸತ್ಯದ ಬಗ್ಗೆ ಈ ವಿನಾಶಕಾರಿ ಮೂರ್ಖರು ಇನ್ನೂ ಎಚ್ಚೆತ್ತುಕೊಂಡಿಲ್ಲ ಎಂಬುದು ದಿಗಿಲು ಹುಟ್ಟಿಸುವ ಸಂಗತಿ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜೀವವೈವಿಧ್ಯ ರಕ್ಷಣೆಯ ಬಗ್ಗೆ ಆಗಾಗ ಮಾತನಾಡುತ್ತಾರೆ. ಗ್ಲ್ಯಾಸ್ಗೋದಲ್ಲಿ ನಡೆದ ಇ೨೬ ಸಭೆಯಲ್ಲಿ, ಇಂಗಾಲದ ಹೊರಸೂಸುವಿಕೆಯನ್ನು ತಗ್ಗಿಸಲು ಕಲ್ಲಿದ್ದಲಿನ ಬಳಕೆಯನ್ನು ಹಂತಹಂತವಾಗಿ ತೆಗೆದುಹಾಕಲು ಅವರು ಬದ್ಧರಾಗಿದ್ದರು. ಆದರೆ ವಾಸ್ತವವಾಗಿ ಬಂದರುಗಳಿಂದ ಹೊಸಪೇಟೆ ಮತ್ತು ಬಳ್ಳಾರಿಯ ಫೌಂಡರಿಗಳಿಗೆ ಕಲ್ಲಿದ್ದಲು ಸಾಗಿಸಲು ಅನುಕೂಲವಾಗುವಂತೆ ಈ ರೈಲು ಮಾರ್ಗ ನಿರ್ಮಾಣವಾಗುತ್ತಿದೆ.

ಪರಿಸರ-ಸೂಕ್ಷ್ಮ ಪಶ್ಚಿಮ ಘಟ್ಟಗಳ ನಾಶವನ್ನು ಉಲ್ಲೇಖಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎರಡು ರೈಲು ಮಾರ್ಗಗಳ (ಕಾಞಂಗಾಡ್-ಕಾಣಿಯೂರು ಮತ್ತು ಮೈಸೂರು-ತಲ್ಲಸೇರಿ) ಕೇರಳದ ಪ್ರಸ್ತಾವನೆಗಳನ್ನು ತಿರಸ್ಕರಿಸಿದಾಗ ನಾವು ಉತ್ಸಾಹಭರಿತರಾಗಿದ್ದೆವು. ಕೇರಳದ ಪ್ರಸ್ತಾವಿತ ರೈಲ್ವೆ ಯೋಜನೆಗಳು ಪಶ್ಚಿಮ ಘಟ್ಟಗಳನ್ನು ಹಾಳುಗೆಡುವುತ್ತಾದರೆ, ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆಯೂ ಸಹ ಹಾಳಲ್ಲವೆ?

ಬೊಮ್ಮಾಯಿ ಅವರಿಗೆ ಏಅ್ಕ ಅನ್ನು ತಿರಸ್ಕರಿಸುವ ಸಾಮರ್ಥ್ಯವಿದೆಯೇ ಎಂದು ನೋಡಲು ಆಸಕ್ತಿದಾಯಕವಾಗಿದೆ.
ಮೋದಿ ಏನು ಮಾಡುತ್ತಾರೆ ಎಂಬುದು ಇನ್ನಷ್ಟು ಕುತೂಹಲಕಾರಿಯಾಗಿದೆ. ಅವರು ಪ್ರಾಮಾಣಿಕವಾಗಿ ಭವಿಷ್ಯದ ಪೀಳಿಗೆಗೆ ಜೀವವೈವಿಧ್ಯತೆಯನ್ನು ಉಳಿಸಲು ಬಯಸಿದರೆ, ಅವರು ಹುಬ್ಬಳ್ಳಿ- ಅಂಕೋಲಾ ರೈಲ್ವೆ ಯೋಜನೆಯನ್ನು ಕೈಬಿಡಲು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಸಲಹೆ ನೀಡಬೇಕು. ಅವರು ಹಾಗೆ ಮಾಡದಿದ್ದರೆ, ತಮ್ಮ ವಿಶ್ವಾಸಾರ್ಹತೆಯನ್ನು ಮತ್ತು ‘ಹಸಿರಿನ ಹೋರಾಟಗಾರ’ ಎಂಬ ಹೆಸರನ್ನು ಕಳೆದುಕೊಳ್ಳುತ್ತಾರೆ.

ಚಿರತೆಯ ಮರುಪರಿಚಯ ಯೋಜನೆಯು ಕೇವಲ ಮತ್ತೊಂದು ಪ್ರಚಾರ ಕಾರ್ಯವಾಗಿಬಿಡುತ್ತದೆ. ಮೋದಿ ಮತ್ತು ಬೊಮ್ಮಾಯಿ ಇಬ್ಬರಿಗೂ ಸಾಕಷ್ಟು ಅವಕಾಶವಿದೆ. ಅವರು ಮಾತಿನಂತೆ ನಡೆಯುತ್ತಾರೆಯೇ? ಪ್ರಾಚೀನ ಪಶ್ಚಿಮ ಘಟ್ಟಗಳ ವಿನಾಶಕ್ಕೆ ಅವರು ಪಾಲುದಾರರಾಗುತ್ತಾರೆಯೇ?

andolana

Recent Posts

ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಕುಡಿಯುವ ನೀರಿಗೆ ಅಭಾವ

ನಂಜನಗೂಡು: ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಕಪಿಲಾ ನದಿ ಪಕ್ಕದಲ್ಲೇ ಇದ್ದರೂ ಜನತೆಗೆ ಕುಡಿಯುವ ನೀರಿನ ಅಭಾವ ಎದುರಾಗಿದೆ. ಹಳ್ಳಿಗಳಿಗೆ ನದಿ…

45 mins ago

ರಾಜ್ಯದಲ್ಲಿ ಇನ್ನೂ ಒಂದು ವಾರಗಳ ಕಾಲ ಭಾರೀ ಮಳೆ

ಬೆಂಗಳೂರು: ರಾಜ್ಯದಲ್ಲಿ ಇನ್ನೂ ಒಂದು ವಾರಗಳ ಕಾಲ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪೂರ್ವವ ಮಧ್ಯ…

1 hour ago

ಓದುಗರ ಪತ್ರ: ಸರಗಳ್ಳತನಕ್ಕೆ ಕಡಿವಾಣ ಹಾಕಿ

ಇತ್ತೀಚೆಗೆ ಮೈಸೂರಿನಲ್ಲಿ ಸರಗಳ್ಳತನ ಪ್ರಕರಣಗಳು ವರದಿಯಾಗುತ್ತಿದ್ದು, ಮಹಿಳೆಯರು ಒಂಟಿಯಾಗಿ ರಸ್ತೆಯಲ್ಲಿ ಓಡಾಡಲು ಹೆದರುವಂತಾಗಿದೆ. ಎರಡು ದಿನಗಳ ಹಿಂದಷ್ಟೇ ನಮ್ಮ ಸಂಬಂಧಿಕರೊಬ್ಬರು…

1 hour ago

ಓದುಗರ ಪತ್ರ: ಬಿಗ್‌ಬಾಸ್ ಕಾರ್ಯಕ್ರಮ ನಿಲ್ಲಲಿ

ಕನ್ನಡದ ಖಾಸಗಿ ಚಾನೆಲ್‌ವೊಂದರಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್ ಸೀಸನ್-11 ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದು, ಸ್ಪರ್ಧಿಗಳು ನಿತ್ಯ ಜಗಳವಾಡುತ್ತಿರುವುದರಿಂದ ಕಾರ್ಯಕ್ರಮ ವೀಕ್ಷಿಸುವವರಿಗೆ ಕಿರಿಕಿರಿಯಾಗುತ್ತಿದೆ. ವಿವಿಧ…

1 hour ago

ಓದುಗರ ಪತ್ರ: ಪೊಲೀಸರಿಗೆ ಧನ್ಯವಾದಗಳು

ನಾಡಹಬ್ಬ ದಸರಾ ಮಹೋತ್ಸವದಲ್ಲಿ ಈ ಬಾರಿ ಜನ ಸಾಗರವೇ ಹರಿದು ಬಂದಿತ್ತು. ದಸರಾ ಅಂಗವಾಗಿ ಆಯೋಜಿಸಿದ್ದ ಯುವ ಸಂಭ್ರಮ, ಯುವ…

1 hour ago

ಓದುಗರ ಪತ್ರ: ಮುಷ್ಕರ ಮುಂದುವರಿದಿದೆ

ಸರ್ಕಾರವೇ ನಮ್ಮ ದೇವರಾಗಿದೆ ಮೇಲಾಧಿಕಾರಿಗಳ ಮೇಲೆ ಗೌರವವಿದೆ ಜನರ ಸಮಸ್ಯೆಗಳ ಅರಿವಿದೆ ಅವರಿಗಾದ ಅಡಚಣೆಗೆ ವಿಷಾದವಿದೆ ನಮಗೂ ಬದುಕಿದೆ. ನಮ್ಮದೂ…

1 hour ago